ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸಾಗರ್ ಕ್ರೆಡಿಟ್ ಕೋಪರೇಟಿವ್ ಸೊಸೈಟಿಯು ಕಳೆದ ವರ್ಷ ರೂ 154 ಕೋಟಿ ವ್ಯವಹಾರ ನಡೆಸಿ ರೂ 79.5 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ 13 ಲಾಭಾಂಶ ನೀಡಲಾಗುವುದು ಎಂದು ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು. ಬುಧವಾರ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು 17 ವರ್ಷ ಪೂರೈಸಿದೆ. ಐದು ಕಡೆ ಶಾಖೆಗಳನ್ನು ಹೊಂದಿದೆ. ಶಿರೂರು, ಗುಲ್ವಾಡಿ, ತೆಕ್ಕಟ್ಟೆಯಲ್ಲಿ ನೂತನ ಶಾಖೆಗಳನ್ನು ತೆರೆಯಲಿದೆ. ಕುಂದಾಪುರ ಶಾಖೆ ಸ್ವಂತ ನಿವೇಶನ, ಕಟ್ಟಡ ಹೊಂದಿದೆ. ಬೈಂದೂರಿನ ಪ್ರಧಾನ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ. ಸದ್ಯ ರೂ 36.4 ಕೋಟಿ ಠೇವಣಿ ಸಂಗ್ರಹ ಹೊಂದಿದ್ದು, ಮುಂದಿನ ವರ್ಷ ಅದಕ್ಕೆ ರೂ 10 ಕೋಟಿ ಸೇರಿಸಲು ನಿರ್ಧರಿಸಲಾಗಿದೆ. ಆಡಳಿತ ಮಂಡಳಿ, ಸಿಬ್ಬಂದಿ ಸಹಕಾರದಿಂದ ಸೊಸೈಟಿ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದರು. ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿದರು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದಿನ ಕಾಲಘಟ್ಟದಲ್ಲಿ ಕೇವಲ ಬುದ್ದಿವಂತನಾದರೆ ಮಾತ್ರ ಸಾಲದು ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡಾ ವಿದ್ಯಾವಂತನಾಗಬೇಕು. ಪ್ರತಿಯೊಬ್ಬರಲ್ಲಿಯೂ ಸಾಮಾಜಿಕ ಪ್ರಜ್ಞೆ, ಪ್ರಾಮಾಣಿಕತೆಯಿದ್ದರೆ ಮಾತ್ರ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಉಳ್ಳೂರು ಗ್ರಾಮದ ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬೈಂದೂರು ತಾಲೂಕು ಆಡಳಿತ ಮತ್ತು ವಿಶ್ವಕರ್ಮ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವಕರ್ಮ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವಕರ್ಮ ಸಮುದಾಯವು ಕಲೆ ಮತ್ತು ನಿರ್ಮಾಣ ಕೌಶಲ್ಯವನ್ನು ಪರಂಪರಾನುಗತವಾಗಿ ರೂಢಿಸಿಕೊಂಡು ಬಂದಿದೆ. ಎಲ್ಲ ವರ್ಗದ ಜನರಿಗೂ ಅನಿವಾರ್ಯವೆನಿಸಿದ ಕಾರಣದಿಂದ ಸಮಾಜದ ಪ್ರಧಾನ ಅಂಗಗಳಲ್ಲಿ ಒಂದಾಗಿರುವ ವಿಶ್ವಕರ್ಮ ಸಮುದಾಯ ಇನ್ನಷ್ಟು ಸಂಘಟಿತವಾಗಿ, ಅಭಿವೃದ್ಧಿ ಸಾಧಿಸಿ, ತನ್ನ ಹಿರಿಮೆ ಮೆರೆಯಬೇಕು ಎಂದ ಶಾಸಕರು, ವಿಶ್ವಕರ್ಮರು ತಮ್ಮ ಕುಲಕಸುಬನ್ನು ಅನುಸರಿಸುತ್ತಿರುವುದು ಒಳ್ಳೆಯದೆ. ಆದರೆ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯವಾಗುವುದರಿಂದ ಮಕ್ಕಳ ಶಿಕ್ಷಣವನ್ನು ಕಡೆಗಣಿಸದೆ ಸಮುದಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಮ್ಮ ಸಂಸ್ಕೃತಿ ಹಾಗೂ ಕಲೆಯನ್ನು ಬೆಳೆಸುವಲ್ಲಿ ಸಂಘ-ಸಂಸ್ಥೆಗಳ ಪಾತ್ರ ಅತೀ ಮಹತ್ವದಾಗಿದ್ದು, ಸಮಾಜಮುಖಿ ಚಿಂತನೆಯೊಂದಿಗೆ ಹುಟ್ಟಿಕೊಂಡ ಜೇಸಿ ಸಂಸ್ಥೆ ವ್ಯಕ್ತಿತ್ವವನ್ನು ಬೆಳೆಸುವುದರ ಮೂಲಕ ಸಮಾಜದ ಪರಿವರ್ತನೆಗೆ ಸಹಕಾರಿಯಾಗಿದೆ ಎಂದು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಸ್ಥಳೀಯ ಜೇಸಿಐ ಘಟಕದ ೧೫ನೇ ಜೇಸಿ ಸಪ್ತಾಹ ’ಸಮರ್ಜಿತ್ ಸಾಂಸ್ಕೃತಿಕ ಚಿಲುಮೆ’ ಉದ್ಘಾಟಿಸಿ ಮಾತನಾಡಿದರು. ಬದುಕಿನಲ್ಲಿ ಅವಕಾಶ ದೊರೆಯುವುದು ವಿರಳ. ಆದರೆ ದೊರೆತ ಅವಕಾಶಗಳನ್ನು ಸಾರ್ಥಕ ಸದುಪಯೋಗ ಪಡಿಸಿಕೊಳ್ಳಬೇಕಾಗಿರುವುದು ಯುವಜನತೆಯ ಜವಬ್ದಾರಿಯಾಗಿದೆ. ಈ ನೆಲೆಯಲ್ಲಿ ಜೇಸಿ ಸಂಸ್ಥೆಯ ಯುವ ಸಮುದಾಯದ ಸಂಘಟನಾ ಪ್ರಯತ್ನ ಶ್ಲಾಘನೀಯ. ಈ ಸಪ್ತಾಹದಲ್ಲಿ ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳು ಉತ್ತಮವಾಗಿದೆ. ಪ್ರೇಕ್ಷಕರಲ್ಲಿ ಹೊಸ ಅಭಿರುಚಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಹೆಚ್ಚುಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದರು. ಜೇಸಿಐ ಅಧ್ಯಕ್ಷ ಪುರಂದರ ಖಾರ್ವಿ ಅಧ್ಯಕ್ಷತೆವಹಿಸಿದ್ದರು. ಬೆಂಗಳೂರು ಉದ್ಯಮಿ ಗೋವಿಂದ ಬಾಬು ಪೂಜಾರಿ ಇವರಿಗೆ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಬ್ರಹ್ಮಾವರ: ವಿದ್ಯಾರ್ಥಿಗಳು ಎನ್.ಎಸ್.ಎಸ್ (ರಾಷ್ಟ್ರೀಯ ಸೇವಾ ಯೋಜನೆ)ಗೆ ಸೇರಿ ಶಿಸ್ತು, ಸಮಯ ಪಾಲನೆ, ವ್ಯಕ್ತಿತ್ವ ವಿಕಸನ ನಾಯಕತ್ವ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ ಹೇಳಿದರು. ಅವರು ಇಲ್ಲಿನ ವಿದ್ಯಾಲಕ್ಷ್ಮೀ ಗ್ರೂಪ್ ಆಪ್ ಇನ್‌ಸ್ಟಿಟ್ಯೂಷನ್ ಆಡಿಯೋ ವಿಜ್ಯುವಲ್ ಹಾಲ್‌ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಬ್ರಮಣ್ಯರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಸಂಸ್ಥೆಯ ನಿರ್ದೇಶಕರಾದ ಮಮತರವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು. ಉಪ ಪ್ರಾಂಶುಪಾಲರಾದ ಮೋಹನ್ ದಾಸ್ ಎನ್.ಎಸ್.ಎಸ್‌ನ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ದೀಪಿಕಾ ಅತಿಥಿಗಳನ್ನು ಸ್ವಾಗತಿಸಿ, ಉಪನ್ಯಾಸಕಿ ವಾಣಿಶ್ರೀ, ಕಾರ್ಯಕ್ರಮವನ್ನು ನಿರೂಪಿಸಿ, ಗ್ರಂಥಪಾಲಕರಾದ ಉಷಾಲತಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವಕರು ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ವಿಪುಲ ಅವಕಾಶಗಳಿರುತ್ತದೆ. ಆ ನಿಟ್ಟಿನಲ್ಲಿ ಉತ್ತಮ ನಾಯಕತ್ವದ ಗುಣಗಳನ್ನು ತಮ್ಮಲ್ಲಿ ಮೈಗೂಡಿಸಿಕೊಳ್ಳುವುದರ ಜೊತೆಗೆ ಕಾಲೇಜಿನಲ್ಲಿ ಲಭ್ಯವಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ವೃತ್ತಿ ಕೌಶಲ್ಯ ಹಾಗೂ ಉತ್ತಮ ನಾಯಕತ್ವದ ಸೂಕ್ಷ್ಮತೆಗಳನ್ನು ವಿದ್ಯಾರ್ಥಿಗಳು ಅರಿತಿರಬೇಕು ಎಂದು ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಹೇಳಿದರು. ಅವರು ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ಘಟಕ ಹಾಗೂ ಜೇಸಿಐ ಕುಂದಾಪುರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ’ನಾಯಕತ್ವ ತರಬೇತಿ ಶಿಬಿರ’ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡಿದರು. ಪ್ರಾಂಶುಪಾಲರಾದ ಪ್ರೊ. ಉಮೇಶ್ ಶೆಟ್ಟಿ ಕೊತ್ತಾಡಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಜೇಸಿಐ ಸಪ್ತಾಹ ಸಭಾಪತಿ ಶ್ರೀಧರ್ ಸುವರ್ಣಾ, ಕುಂದಾಪುರದ ವಕೀಲ ಜಯಚಂದ್ರ ಶೆಟ್ಟಿ, ಜೇಸಿಐ ಕಾರ್ಯದರ್ಶಿ ಮಹೇಶ್ ಶೇಟ್, ಜೇಸಿಐ ಸದಸ್ಯ ಕಾರ್ತಿಕೇಯ ಮಧ್ಯಸ್ಥ, ವೃತ್ತಿ ಮಾರ್ಗದರ್ಶನ ಅಧಿಕಾರಿ ಮಹೇಶ್ ಬಾಬು ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉದ್ಯಮ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ ಬಿಜೂರಿನ ಗೋವಿಂದ ಬಾಬು ಪೂಜಾರಿ ಅವರಿಗೆ ಜೆಸಿಐ ಉಪ್ಪುಂದ ಇಲ್ಲಿನ ಮಾತೃಶ್ರೀ ಸಭಾಭವನದಲ್ಲಿ ಆಯೋಜಿಸಿದ 15ನೇ ಜೇಸಿ ಸಪ್ತಾಹದಲ್ಲಿ ಸಾಧನಾಶ್ರೀ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. ಪರಿಶ್ರಮದಿಂದಲೇ ಬದುಕು ಕಟ್ಟಿಕೊಂಡ ಗೋವಿಂದ ಬಾಬು ಪೂಜಾರಿ ಅವರು ಹಂತ ಹಂತವಾಗಿ ಸಾಧನೆಯ ಶಿಖರವೇರಿದವರು. ಶೆಫ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಗೋವಿಂದ ಪೂಜಾರಿ ಅವರು ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಹುಟ್ಟೂರಿನಲ್ಲಿ ಶ್ರೀ ವರಲಕ್ಷ್ಮಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಹಾಗೂ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಹತ್ತಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕರಾವಳಿಯ ಅದ್ಭುತವಾದ ಕಲೆ ಯಕ್ಷಗಾನ. ಯಕ್ಷಗಾನ ಕರಾವಳಿ ಜನರ ಭಕ್ತಿ ಭಾವನೆಯ ಜೊತೆಗಿನ ಸಂಬಂಧ ಅದರ ಜೊತೆಗೆ ಯಕ್ಷ ಕಲಾವಿದರ ನಂಬಿಕೆಯ ಅನ್ನದ ಬುತ್ತಿ ಅಂದರು ತಪ್ಪಿಲ್ಲ. ಯಾಕೆಂದರೆ ಕರಾವಳಿಯ ಜನರು ಸಿನಿಮಾ ಸ್ಟಾರ್ ಗಳಿಗಿಂತ ಹೆಚ್ಚು ಪ್ರೀತಿಸುವುದು ಅಂದರೆ ಅದು ಯಕ್ಷಗಾನ ಕಲಾವಿದರನ್ನು. ಇವತ್ತಿನ ಯಕ್ಷಗಾನದ ಕಲಾವಿದರಿಗೆ ಮತ್ತು ಕಲಾಪ್ರೇಕ್ಷಕರ ನಡುವೆ ಸೇತುವೆಯ ಹಾಗೆ ನಿಂತು, ಯಕ್ಷಗಾನ ಪ್ರೇಕ್ಷಕರನ್ನು ಸಂಘಟಿಸಿ, ಸಂಚಾಲಕರಾಗಿ ಕಲಾಪ್ರೇಕ್ಷಕರನ್ನು ಒಗ್ಗುಗೂಡಿಸಿ, ಕಲೆಯ ಬೆಳವಣಿಗೆ ಮುಖ್ಯ ಪಾತ್ರಧಾರಿಗಳಾದ ಸಂಘಟಕರು ಇಲ್ಲಿ ಅಷ್ಟೇ ಮುಖ್ಯವಾಗುತ್ತಾರೆ. ಇಂದು ಒಂದು ಅದ್ಭುತವಾದ ಪ್ರಯೋಗಕ್ಕೆ ಕೈ ಹಾಕಿದ್ದು ಯುವ ಉತ್ಸಾಹಿ ಯಕ್ಷಕಲೆ ಆರಾಧಕ ನಾಗರಾಜ ನೈಕಂಬ್ಳಿ. ಇತ್ತೀಚಿನ ದಿನಗಳನಲ್ಲಿ ಆಟಕ್ಕೆ ಪ್ರೇಕ್ಷಕರಿಲ್ಲ. ಆಟ ಆಡಿಸುವ ಸಂಘಟಕರು ಭಯದ ನೆರಳಿನಲ್ಲಿ ಆಟವಾಡಿಸುತ್ತಾರೆ. ಅಷ್ಟಕ್ಕೂ ಈ ಆಟ ಆಡಿಸುವ ಸಂಘಟಕರು ಲಕ್ಷಾನುಗಟ್ಟಲೇ ಹಣದ ಹೊರೆಯನ್ನು ಹೊತ್ತು ದೂರದ ಬೆಂಗಳೂರಿಗೆ ಕಲಾವಿದರ ತಂಡವನ್ನು ಕರೆಸುತ್ತಾರೆ. ಅದರಲ್ಲಿ ಪ್ರೇಕ್ಷಕರು ಕೈ ಕೊಟ್ಟರೆ ಆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶತಮಾನದ ಹೊಸ್ತಿಲಿನಲ್ಲಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು 2018-19ನೇ ಸಾಲಿನಲ್ಲಿ 1.24ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 17 ಪಾಲು ಮುನಾಫೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಚ್. ಗಣೇಶ್ ಕಾಮತ್ ಹೇಳಿದರು. ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಆದಿತ್ಯವಾರ ಜರಗಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ತಂತ್ರಜ್ಞಾನಕ್ಕೆ ಹೊಂದಿಕೊಂಡು ಸಹಕಾರಿಯ ಎಲ್ಲಾ ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸದಸ್ಯರ ಅನುಕೂಲಕ್ಕಾಗಿ ಮೊಬೈಲ್ ಆಪ್ ವ್ಯವಸ್ಥೆ ಕಲ್ಪಿಸಲಾಗುವುದು. ಸದಸ್ಯರಿಗೆ ನಗದು ರಹಿತ ವ್ಯವಹಾರ ನಡೆಸಲು ಪ್ರೇರಣೆ ನೀಡುವ ಉದ್ದೇಶದಿಂದ ಸದಸ್ಯರೊಂದಿಗಿನ Uರಿಷ್ಠ ವ್ಯವಹಾರವನ್ನು ನೆಟ್ ಬ್ಯಾಂಕಿಂಗ್ ಮೂಲಕ ನಡೆಸಲು ವ್ಯವಸ್ಥೆ ಮಾಡಲಾಗುವುದು. ಸದಸ್ಯರಿಗಾಗಿ ಸ್ವಸಹಾಯ ಗುಂಪುಗಳ ರಚನೆ ಮತ್ತು ಅವುಗಳಿಗೆ ಆರ್ಥಿಕ ಸಹಾಯ ನೀಡುವುದು ಹಾಗೂ ಗುಂಪುಗಳಿಂದ ತಯಾರಾದ ಉತ್ಪನ್ನಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸರಕಾರದ ಉಚಿತ ಸೈಕಲ್ ನೀಡುವ ಯೋಜನೆಯಿಂದ ಮಕ್ಕಳಿಗೆ ಶೈಕ್ಷಣಿಕ ಪ್ರೇರಣೆ ದೊರೆತಿದ್ದು, ಶಾಲೆ ತೊರೆಯುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಸರಕಾರದ ವತಿಯಿಂದ ಉಚಿತವಾಗಿ ನೀಡಿರುವ ಸೈಕಲ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ ಹೇಳಿದರು. ಅವರು ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದಿಂದ ಉಚಿತವಾಗಿ ವಿತರಿಸಲಾಗುವ ಸೈಕಲ್‌ಗಳನ್ನು ಶನಿವಾರ ವಿತರಿಸಿ ಮಾತನಾಡಿದರು. ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷೆ ಶಾರದಾ ಆರ್.ಪೂಜಾರಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಸದಸ್ಯೆ ಸಕು ಉದಯ ಜಿ., ನಾಗರಾಜ ಖಾರ್ವಿ, ಎಸ್‌ಡಿಎಂಸಿ ಸದಸ್ಯರಾದ ಅಶೋಕ ಪೂಜಾರಿ, ರವಿಶಂಕರ ಖಾರ್ವಿ, ಸುಧಾಕರ ಖಾರ್ವಿ, ರಾಘವೇಂದ್ರ ಪೂಜಾರಿ, ರೇಣುಕಾ ಮೊಗವೀರ, ದೇವಕಿ ಮೊಗವೀರ, ಇಂದಿರಾ ಖಾರ್ವಿ, ಗೋಪಾಲ ಖಾರ್ವಿ, ಸಹಶಿಕ್ಷಕರು, ಪೋಷಕರು ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸುಜಾತಾ ಕೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ರಹ್ಮಾವರ : ವಿದ್ಯಾಲಕ್ಷ್ಮೀ ಗ್ರೂಪ್ ಆಪ್ ಇನ್‌ಸ್ಟಿಟ್ಯೂಷನ್ ಬ್ರಹ್ಮಾವರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ ಇದರ ಸಹಯೋಗದೋಂದಿಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಹದಿಹರೆಯದ ಸಮಸ್ಯೆಗಳು ಹಾಗೂ ಸಾಂಕ್ರಾಮಿಕ ರೋಗದ ಮಾಹಿತಿ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ ಇದರ ವೈಧ್ಯಾಧಿಕಾರಿಗಳಾದ ಡಾ.ದೀಕ್ಷಿತಾ ಉದ್ಘಾಟಿಸಿ, ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದರ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಮಂಜುನಾಥರವರು ಸಾಂಕ್ರಾಮಿಕ ರೋಗಗಳ ಹರಡುವಿಕೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಬ್ರಮಣ್ಯರವರು ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಿದ್ದು, ಕಾಲೇಜಿನ ನಿರ್ದೇಶಕರಾದ ಮಮತ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ರವಿಚಂದ್ರರವರು ಅತಿಥಿಗಳನ್ನು ಸ್ವಾಗತಿಸಿದರು. ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ ಇದರ ಸಿಬ್ಬಂದಿಗಳಾದ ಶ್ರೀಮತಿ ಅನುಷಾ, ಪ್ರಸಾದ, ಭಾರತಿ, ಸ್ನೇಹಲತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರ ವೈದಕೀಯ ತಪಾಸಣೆ ನಡೆಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಪ್ರೋ.…
