ಕುಂದಾಪ್ರ ಡಾಟ್ ಕಾಂ ಸುದ್ದಿ.
ಕರಾವಳಿಯ ಅದ್ಭುತವಾದ ಕಲೆ ಯಕ್ಷಗಾನ. ಯಕ್ಷಗಾನ ಕರಾವಳಿ ಜನರ ಭಕ್ತಿ ಭಾವನೆಯ ಜೊತೆಗಿನ ಸಂಬಂಧ ಅದರ ಜೊತೆಗೆ ಯಕ್ಷ ಕಲಾವಿದರ ನಂಬಿಕೆಯ ಅನ್ನದ ಬುತ್ತಿ ಅಂದರು ತಪ್ಪಿಲ್ಲ. ಯಾಕೆಂದರೆ ಕರಾವಳಿಯ ಜನರು ಸಿನಿಮಾ ಸ್ಟಾರ್ ಗಳಿಗಿಂತ ಹೆಚ್ಚು ಪ್ರೀತಿಸುವುದು ಅಂದರೆ ಅದು ಯಕ್ಷಗಾನ ಕಲಾವಿದರನ್ನು.
ಇವತ್ತಿನ ಯಕ್ಷಗಾನದ ಕಲಾವಿದರಿಗೆ ಮತ್ತು ಕಲಾಪ್ರೇಕ್ಷಕರ ನಡುವೆ ಸೇತುವೆಯ ಹಾಗೆ ನಿಂತು, ಯಕ್ಷಗಾನ ಪ್ರೇಕ್ಷಕರನ್ನು ಸಂಘಟಿಸಿ, ಸಂಚಾಲಕರಾಗಿ ಕಲಾಪ್ರೇಕ್ಷಕರನ್ನು ಒಗ್ಗುಗೂಡಿಸಿ, ಕಲೆಯ ಬೆಳವಣಿಗೆ ಮುಖ್ಯ ಪಾತ್ರಧಾರಿಗಳಾದ ಸಂಘಟಕರು ಇಲ್ಲಿ ಅಷ್ಟೇ ಮುಖ್ಯವಾಗುತ್ತಾರೆ.
ಇಂದು ಒಂದು ಅದ್ಭುತವಾದ ಪ್ರಯೋಗಕ್ಕೆ ಕೈ ಹಾಕಿದ್ದು ಯುವ ಉತ್ಸಾಹಿ ಯಕ್ಷಕಲೆ ಆರಾಧಕ ನಾಗರಾಜ ನೈಕಂಬ್ಳಿ. ಇತ್ತೀಚಿನ ದಿನಗಳನಲ್ಲಿ ಆಟಕ್ಕೆ ಪ್ರೇಕ್ಷಕರಿಲ್ಲ. ಆಟ ಆಡಿಸುವ ಸಂಘಟಕರು ಭಯದ ನೆರಳಿನಲ್ಲಿ ಆಟವಾಡಿಸುತ್ತಾರೆ. ಅಷ್ಟಕ್ಕೂ ಈ ಆಟ ಆಡಿಸುವ ಸಂಘಟಕರು ಲಕ್ಷಾನುಗಟ್ಟಲೇ ಹಣದ ಹೊರೆಯನ್ನು ಹೊತ್ತು ದೂರದ ಬೆಂಗಳೂರಿಗೆ ಕಲಾವಿದರ ತಂಡವನ್ನು ಕರೆಸುತ್ತಾರೆ. ಅದರಲ್ಲಿ ಪ್ರೇಕ್ಷಕರು ಕೈ ಕೊಟ್ಟರೆ ಆ ಸಂಘಟಕನಿಗೆ ಸಾಲ ತಿರಿಸಲು ಒಂದು ವರ್ಷ ಬೇಕು. ತಾನು ಕಲೆಯನ್ನು ಬೆಳೆಸಬೇಕು ಅಂದುಕೊಂಡ ಒಬ್ಬ ಕಲಾ ಸಂಘಟಕ ನೆಲಕ್ಕೆ ಬಿದ್ದರೆ ಎತ್ತುವರು ಯಾರು ಇಲ್ಲ.
ಹಾಗಾಗಿ ಇತ್ತೀಚಿನ ದಿನಗಳಲ್ಲಿ ಯಕ್ಷಸಂಘಟಕರ ಸಂಖ್ಯೆ ಕಮ್ಮಿಯಾಗುತ್ತಿದೆ. ಯಾಕೆಂದರೆ ಇದು ಹರಿತವಾದ ಕತ್ತಿಯ ಮೇಲೆ ನಡೆದಂತೆ. ಅಂತಹ ವಿಭಿನ್ನ ಸಾಹಸಕ್ಕೆ ಕೈ ಹಾಕಿದ ನಾಗರಾಜ್ ನಾನು 6 to 6 ಆಟ ಮಾಡಲು ಹೊರಟಿದ್ದೇನೆ. ನಿಮ್ಮನ್ನು ನಂಬಿದ್ದೇನೆ ಮತ್ತು ಯಕ್ಷ ಸಂಕ್ರಾಂತಿಯೇ ಒಂದು ಕನಸು. ಹಾಗಂತ ಯಕ್ಷಗಾನ ಸಂಘಟಕನಾಗಿ ಇಷ್ಟೊಂದು ಯಕ್ಷಾಭಿಮಾನಿಗಳ ಪ್ರೀತಿ ಸಲ್ಲುವುದು ಎಂಬುದು ಕನಸಲ್ಲೂ ಎಣಿಸಿರಲಿಲ್ಲ. ನಾನು ಒಟ್ಟು ಒಂಭತ್ತು ಸಂಕ್ರಾಂತಿಗಳನ್ನು ಯಶಸ್ವಿಯಾಗಿ ಮಾಡಲು ನಿಮ್ಮ ಸಹಕಾರ ಇತ್ತು. ಈಗ ಭಿನ್ನವಾದ ಹತ್ತನೇ ಯಕ್ಷಸಂಕ್ರಾತಿಗೆ ಅಡಿಪಾಯ ಹಾಕಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ಹಲವು ತಿಂಗಳುಗಳಿಂದ ರಾತ್ರಿ ಹಗಲೂ ನಿದ್ರೆ ಬಿಟ್ಟು ತಯಾರಿ ನಡೆಸಿದ್ದೇನೆ. ರಾಜಧಾನಿಯಲ್ಲಿ ಲಕ್ಷಾಂತರ ಯಕ್ಷಾಭಿಮಾನಿಗಳಿದ್ದಾರೆ. ಅವರೆಲ್ಲನ್ನೂ ಯಕ್ಷ ಸಂಕ್ರಾತಿಯಲ್ಲಿ ಭಾಗಿಯಾಗಬೇಕು ಮತ್ತು ನನ್ನನ್ನು ಹರಸಿ ಎಂದು ಹೇಳಿದ್ದಾರೆ.
ಇನ್ನೊಂದು ವಿಶೇಷವೆಂದರೆ ಮೊತ್ತ ಮೊದಲ ಬಾರಿಗೆ ಆನ್ ಲೈನ್ ಟಿಕೆಟ್ ಬುಕಿಂಗ್ ಪ್ರಾರಂಭ ಮಾಡಿದ್ದಾರೆ. ಇದರಲ್ಲೂ ಇವರು ವಿಶೇಷವೆಂಬಂತೆ ಮಾಡಿದ್ದಾರೆ. ಯಕ್ಷ ಸಂಕ್ರಾಂತಿ ಸೆಪ್ಟೆಂಬರ್ 21 ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ಆರರಿಂದ ಬೆಳ್ಳಿಗ್ಗೆ ಆರು ಘಂಟೆಗಳ ಕಾಲ ನಡೆಯಲಿದೆ. ನಿಮಗೆ ಇಷ್ಟವಾದ ಪ್ರಸಂಗವನ್ನು ನೋಡಿಕೊಂಡು ಹೋಗಬಹುದು. ಅಂತಹ ಕಾರ್ಯಕ್ರಮವನ್ನು ಯಕ್ಷಪ್ರೇಮಿಗಳಿಗೆ ನೀಡಲು ಮುಂದಾಗಿದ್ದಾರೆ ನಾಗರಾಜ್ ಶ್ರೀ ಸಾಲಿಗ್ರಾಮ ಮೇಳ ಮತ್ತು ತೆಂಕು ಬಡಗಿನ ಹದಿನೆಂಟು ವಿಶೇಷ ಆಹ್ವಾನಿತರ ಸಮಾಗಮದಲ್ಲಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯಲ್ಲಿ ಯಕ್ಷ ಸಂಕ್ರಾಂತಿ ನಡೆಯಲಿದೆ ಮತ್ತು ಭೀಷ್ಮ ವಿಜಯ, ಕರ್ಣ ಪರ್ವ, ಉತ್ತರನ ಪೌರುಷ, ಜಾಂಬವ, ಅಗ್ರಪೂಜೆ ಪ್ರಸಂಗಳಿದ್ದು, ಶ್ರೀ ಸುರೇಶ ಶೆಟ್ಟಿ ,ಪ್ರಸಾದ್ ಕುಮಾರ್ ಮೊಗೆಬೆಟ್ಟು ದ್ವಂದ್ವ ಭಾಗವತಿಕೆಯಲ್ಲಿ ಭೀಷ್ಮ ವಿಜಯ ಪ್ರಸಂಗದಲ್ಲಿ ತಮ್ಮ ಅಮೋಘ ಪ್ರದರ್ಶನ ನೀಡುತ್ತಾರೆ.
ಅದರಲ್ಲಿ ಭೀಷ್ಮನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾಡಿದರೆ, ಭೀಷ್ಮ 2 – ಐರಬೈಲ್ ಆನಂದ ಶೆಟ್ಟಿ ಭರ್ಜರಿ ಎಂಟ್ರಿ ನೀಡಲ್ಲಿದ್ದಾರೆ. ಅಂಬೆ 1 – ಗೋವಿಂದ ವಂಡಾರು ಅಭಿನಯಿಸಿದರೆ, ಅಂಬೆ 2 – ಶಶಿಕಾಂತ ಶೆಟ್ಟಿ ಕಾರ್ಕಳ ರಂಜಿಸಲ್ಲಿದ್ದಾರೆ ಹಾಗೂ ಸಾಲ್ವ ನಾಗಿ ನಿಲ್ಕೋಡು ಶಂಕರ ಹೆಗಡೆ ತಮ್ಮ ಅದ್ಭುತವಾದ ಅಭಿನಯ ಮಾಡಲು ರಂಗಕ್ಕೆ ಧುಮುಕಿದರೆ, ಪರಶುರಾಮನಾಗಿ ನವೀನ್ ಶೆಟ್ಟಿ ಐರಬೈಲ್ ಮತ್ತು ಬ್ರಾಹ್ಮಣನಾಗಿ ಕ್ಯಾದಗಿ ಮಹಾಬಲೇಶ್ವರ ಭಟ್ ಅಭಿನಯಿಸಲಿದ್ದಾರೆ.
ಶ್ರೀ ಪಟ್ಲ ಸತೀಶ ಶೆಟ್ಟಿ ರಾಮಕೃಷ್ಣ ಹೆಗಡೆ ಹಿಲ್ಲೂರು ದ್ವಂದ್ವ ಭಾಗವತಿಕೆಯಲ್ಲಿ ಕರ್ಣಪರ್ವ ಮಿಂಚಲ್ಲಿದ್ದು ಕರ್ಣನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಕೃಷ್ಣನಾಗಿ ಡಾ.ಪ್ರದೀಪ ಸಾಮಗ, ಶಲ್ಯ ನಾಗಿ ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಅರ್ಜುನನಾಗಿ ಮಂಕಿ ಈಶ್ವರ ನಾಯ್ಕ್, ಸರ್ಪಾಸ್ತ್ರನಾಗಿ ಪ್ರಜ್ವಲ್ ಕುಮಾರ್, ಬ್ರಾಹ್ಮಣನಾಗಿ ಅರುಣ್ ಕುಮಾರ್ ಜಾರ್ಕಳ ಮತ್ತು ಹೊಸಂಗಡಿ ರವೀಂದ್ರ ಶೆಟ್ಟಿ ಗಾನ ಸಾರಥ್ಯದಲ್ಲಿ ಉತ್ತರನ ಪೌರುಷ ಪ್ರಸಂಗವಿದ್ದು, ಅದರಲ್ಲಿ ಉತ್ತರ ಭೂಪನಾಗಿ ಸೀತಾರಾಮ್ ಕುಮಾರ್ ಕಟೀಲು ಹಾಗೂ ಗೋಪಾಲಕರು ಕ್ಯಾದಗಿ ಮತ್ತು ಜಾರ್ಕಳ ಹಾಸ್ಯದ ಕಚಗುಳಿ ನೀಡಲಿದ್ದು, ಬೃಹನ್ನಳೆಯಾಗಿ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅಭಿನಯಿಸಲ್ಲಿದ್ದಾರೆ. ಶ್ರೀ ಚಂದ್ರಕಾಂತ್ ರಾವ್ ಮೂಡುಬೆಳ್ಳೆ ಗಾನಸಾರಥ್ಯದಲ್ಲಿ ಜಾಂಬವ ಪ್ರಸಂಗದ ಎಂಟ್ರಿಯಾದರೆ, ಜಾಂಬವನಾಗಿ ಕೃಷ್ಣಯಾಜಿ ಬಳ್ಕೂರು, ಕೃಷ್ಣನಾಗಿ ತೀರ್ಥಹಳ್ಳಿ ಗೋಪಾಲ್ ಆಚಾರ್, ಬಲರಾಮನಾಗಿ ಪ್ರಸನ್ನ ಶೆಟ್ಟಿಗಾರ್ ಕಾಣಿಸಿಕೊಳ್ಳಲಿದ್ದಾರೆ.
ಹೊಸಂಗಡಿ ರವಿಶೆಟ್ಟಿ ಗಾನ ಸಾರಥ್ಯದಲ್ಲಿ ಅಗ್ರಪೂಜೆ ರಂಗವನ್ನು ರಂಜಿಸಲ್ಲಿದ್ದು ಶಿಶುಪಾಲನಾಗಿ ರಾಜೇಶ ಭಂಡಾರಿ, ದಂತವಕ್ರನಾಗಿ ಚಂದ್ರಹಾಸ ಗೌಡ ಹೊಸಪಟ್ಣ ಮತ್ತು ಸೋಮದತ್ತನಾಗಿ ಹರೀಶ್ ಜಪ್ತಿ, ಭಗದತ್ತನಾಗಿ ದಿನೇಶ್ ಕನ್ನಾರು, ಕೃಷ್ಣನಾಗಿ ವಿನಯ್ ಬೇರೊಳ್ಳಿ ಕಾಣಿಸಿಕೊಳ್ಳಲಿದ್ದಾರೆ .
– ಯಕ್ಷಸಂಕ್ರಾಂತಿ
– ಸೆಪ್ಟೆಂಬರ್ 21 ಶನಿವಾರ
– ಸಂಜೆ 6ರಿಂದ ಬೆಳಿಗ್ಗೆ 6 ತನಕ
– ರವೀಂದ್ರ ಕಲಾಕ್ಷೇತ್ರ
– ಸಾಲಿಗ್ರಾಮ ಮೇಳ ಮತ್ತು ಹದಿನೆಂಟು ವಿಶೇಷ ಆಹ್ವಾನಿತರು
– ಸಂಪರ್ಕ ನಾಗರಾಜ್ ಶೆಟ್ಟಿ ನೈಕಂಬ್ಳಿ 9741474255