Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘ ಇದರ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರ ಪರಿ ನಿಬ್ಬಣ ದಿನವನ್ನು ಇಲ್ಲಿನ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುಶೀಲಾ ಅವರು ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ  ವಿ.ವಿ. ಮಂಡಳಿ ಹೆಮ್ಮಾಡಿ ಇದರ ನಿರ್ದೇಶಕರಾದ ರಘುರಾಮ್ ಪೂಜಾರಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮೊಹಮ್ಮದ್ ತಶೀರ್ ನಾಗೂರು, ಸೂರ್ಯಕಾಂತಿ, ಲಕ್ಷ್ಮಣ್ ಕೊರಗ, ಮಂಜುನಾಥ್ ನಾಗೂರು, ಭಾಸ್ಕರ್ ಕೆರ್ಗಾಲು, ಸುರೇಶ್ ಬಾರ್ಕೂರು, ಶಿವರಾಜ್ ಬೈಂದೂರು, ವಿನಯ, ಗೀತಾ ಸುರೇಶ್, ಇಂದಿರಾ ಉಪಸ್ಥಿತರಿದ್ದರು. ಶಾಲೆಯಲ್ಲಿ ಮತ್ತು ಹಾಸ್ಟೆಲಿರುವ 300 ವಿದ್ಯಾರ್ಥಿಗಳಿಗೆ ಹಣ್ಣು- ಹಂಪಲನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ರಾಜೇಶ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರೇಣುಕ ಕಾರ್ಯಕ್ರಮ ನಿರ್ವಹಿಸಿದರು. ಶಕೀಲಾ ವಂದಿಸಿದರು .

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಶಿಶುವಿಹಾರ (ಕಿಂಡರ್‌ಗಾರ್ಟನ್) ವಿಭಾಗದಲ್ಲಿ  ಪತ್ರ ಬರವಣಿಗೆ ದಿನವನ್ನು ಬಹಳ ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಪುಟ್ಟ ಮಕ್ಕಳು ಈ ಚಟುವಟಿಕೆಯಲ್ಲಿ ಅಪಾರ ಉತ್ಸಾಹ ಮತ್ತು ಪ್ರೀತಿಯಿಂದ ಪಾಲ್ಗೊಂಡರು. ಈ ವಿಶೇಷ ದಿನದಂದು ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು ಉಪಸ್ಥಿತರಿದ್ದು, ಈ ತಂತ್ರಜ್ಞಾನ ಯುಗದಲ್ಲಿ ಪತ್ರ ಬರವಣಿಗೆ ಮಹತ್ವ ತಿಳಿಸುವ ಕಾರ್ಯವನ್ನು ಪ್ರಶಂಸಿಸಿದರು. ಆಡಳಿತಾಧಿಕಾರಿ ಚೈತ್ರ ಯಡಿಯಾಳ ಅವರ‌ ಉಪಸ್ಥಿತಿಯಲ್ಲಿ ಕಿಂಡರ್ಗಾರ್ಟನ್ ವಿಭಾಗದ ಶಿಕ್ಷಕಿಯರಾದ ಶೋಭಾ ಮತ್ತು ಶ್ವೇತಾ ಶೇಟ್ ಅವರು ಪುಟಾಣಿಗಳಿಗೆ ಪತ್ರದ ಮಹತ್ವ ಮತ್ತು ಬರೆಯುವ ವಿಧಾನದ ಬಗ್ಗೆ ಸರಳವಾಗಿ ತಿಳಿಸಿಕೊಟ್ಟರು. ನಂತರ, ಮಕ್ಕಳು ತಮ್ಮ ಪಾಲಕರಿಗೆ (ಅಪ್ಪ-ಅಮ್ಮನಿಗೆ) ತಮ್ಮ ಮನಸ್ಸಿನ ಭಾವನೆಗಳನ್ನು, ಪ್ರೀತಿಯ ಮಾತುಗಳನ್ನು ಅಂಚೆ ಕಾರ್ಡ್ ಮೇಲೆ  ಬರೆಯಲು ಪ್ರಯತ್ನಿಸಿದರು‌ ಮತ್ತು ಚಿತ್ರ ಬಿಡಿಸಿದರು.  ಪ್ರತಿ ಮಗುವಿನ ಮುಖದಲ್ಲೂ ತಮ್ಮ ಪಾಲಕರಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಡಿ ಕನ್ಯಾನ ಶ್ರೀ ಶನೀಶ್ವರ ದೇವಸ್ಥಾನ ವಠಾರದಲ್ಲಿ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ಉಂಜಲೋತ್ಸವ ಸಹಿತ ಪುಷ್ಪಯಾಗ ಮಹೋತ್ಸವ ಡಿ.21ರಂದು ನಡೆಯಲಿದ್ದು ಈ ಪ್ರಯುಕ್ತ ಚಪ್ಪರ ಮುಹೂರ್ತ ಡಿ.6 ರಂದು ಕೋಡಿಯಲ್ಲಿ ನೆರವೇರಿತು. ಸ್ಥಳೀಯ ಗಣ್ಯರಾದ ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಉದ್ಯಮಿ ಶಿವ ಎಸ್. ಕರ್ಕೇರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಆನಂದ ಸಿ. ಕುಂದರ್ ಮಾತನಾಡಿ, ತಿರುಮಲ ತಿರುಪತಿ ದೇವಸ್ಥಾನಗಳ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಕಾಠ್ಯಕ್ರಮದಲ್ಲಿ ಟಿಟಿಡಿ ದೇವಸ್ಥಾನದ ವಿಶೇಷ ಅಧಿಕಾರಿ ವಿದ್ವಾನ್ ಆನಂದ ತೀರ್ಥಚಾರ್ ಪಗಾಡಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು ಹೆಮ್ಮೆಯ ವಿಚಾರವಾಗಿದೆ. ಕಾರ್ಯಕ್ರಮಕ್ಕೆ ಎಲ್ಲರ ಸಹಕಾರವಿರಲಿ ಎಂದರು. ಸ್ಥಳೀಯ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಜೀವನವೆಂದರೆ ಕಡು ಕಷ್ಟ ಎಂದು ಗೋಚರಿಸಬಹುದು. ಆದರೆ ಇಲ್ಲಿ ಯಾವಾಗಲೂ ನೀವು ಗೆಲ್ಲುವ ಅವಕಾಶ ಇದ್ದೇ ಇರುತ್ತದೆ. ನಿಮ್ಮ ಶಕ್ತಿ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ಅದುವೇ ನಿಮ್ಮ ನಗು ಮುಖದ ಯಶಸ್ಸಿನ ಮಾನದಂಡವಾಗುತ್ತದೆ. ಸ್ಪರ್ಧಾ ಮನೋಭಾವದಿಂದ ಪೂರ್ಣ ಸಾಮರ್ಥ್ಯದೊಂದಿಗೆ ಮುನ್ನುಗಿದರೆ ಗೆಲುವು ಸಾಧ್ಯವೆಂದು ಅರಣ್ಯ ಗುತ್ತಿಗೆದಾರರಾದ ಜೆ.ಪಿ. ಶೆಟ್ಟಿ ಕಟ್ಕೆರೆ ಅವರು ನುಡಿದರು. ಅವರು ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ, ನಿವೃತ್ತ ದೈಹಿಕ ಶಿಕ್ಷಕ ನಾರಾಯಣ ಶೆಟ್ಟಿ ಮಾತನಾಡಿ, ಸರಿಯಾದ ಯೋಚನೆ ಮತ್ತು ಯೋಜನೆಯಿಂದ ಮುನ್ನಡೆಯಿರಿ ಎಂದು ಶುಭ ಕೋರಿದರು. ವಿದ್ಯಾರ್ಥಿಗಳ ಕ್ರೀಡಾ ಸ್ಪೂರ್ತಿ ನೋಡಿ ಮೆಚ್ಚಿ ಚಾಂಪಿಯನ್ ಆದವರಿಗೆ ಟ್ರೋಫಿ ಮತ್ತು ನಗದು ಬಹುಮಾನ ಘೋಷಿಸಿ ಪ್ರೋತ್ಸಾಹಿಸಿದರು. ಹಾನ್‌ಗಲ್ ಪದವಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಟೀಮ್ ಊರ್ಮನಿ ಮಕ್ಕಳ್ ತಂಡದ ಸತತ 6ನೇ ವರ್ಷದ ಸಹಾಯ ಹಸ್ತ-2025 ಕಾರ್ಯದ ಅಂಗವಾಗಿ ಈ ಬಾರಿ brain haemorrhage ಉಂಟಾಗಿ AVM rapture ನಿಂದ ಬಳಲುತ್ತಿದ್ದ ತಾಲೂಕಿನ ಸಿದ್ದಾಪುರದ ಶಿಕ್ಷಕಿ ಶಶಿಕಲಾ ಶೆಟ್ಟಿ ಅವರ ಶಸ್ತ್ರಚಿಕಿತ್ಸೆಗೆ 55,100 ರೂಪಾಯಿಯನ್ನು  ಸಹಾಯಧನದ ರೂಪದಲ್ಲಿ ಅವರ ಮನೆಗೆ ನೀಡಲಾಯಿತು. ಈ ಸಮಯದಲ್ಲಿ ಟೀಮ್ ಊರ್ಮನಿ ಮಕ್ಕಳ್ ತಂಡದ ಕೃಷ್ಣ ಕೊರ್ಗಿ, ನಾಗೇಶ್ ಗಾವಳಿ, ಸಂತೋಷ ಕೊರ್ಗಿ, ಚಂದ್ರ ಕೊರ್ಗಿ, ಉಷಾ ಅಮವಾಸೆಬೈಲ್, ಕಾರ್ತಿಕ ಜನ್ನಾಡಿ, ದೀಪಾ ಜನ್ನಾಡಿ, ಚಂದ್ರ ಉಳ್ಳೂರು-74, ಜೋಗು ಕಾಸನಕಟ್ಟೆ ಶಶಿಕಲಾ ಶೆಟ್ಟಿ ಅವರ ಪತಿ ಪ್ರದೀಪ್ ಶೆಟ್ಟಿ ಅವರು ಭಾಗಿಯಾಗಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಶಂಕರನಾರಾಯಣ: ಗುರು ಅಬಾಕಸ್ ಮತ್ತು ವೇದಿಕ್ ಮಾಥ್ಸ್ ಸೆಂಟರ್ ಪುಣೆ, ಮಹಾರಾಷ್ಟ್ರ ಇದರ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ಅಂತರಾಷ್ಟ್ರೀಯ ಮಟ್ಟದ ವೇದಿಕ್ ಮಾಥ್ಸ್ ಸ್ಪರ್ಧೆಯಲ್ಲಿ ಮದರ್ ತೆರೇಸಾ ಶಾಲೆಯ 6 ಮಂದಿ ವಿದ್ಯಾರ್ಥಿಗಳು ಚಾಂಪಿಯನ್‌ಶಿಪ್ ಪಡೆದಿದ್ದಾರೆ . ವಿದ್ಯಾರ್ಥಿಗಳಾದ ಶ್ರೀದೇವಿ ಶೆಟ್ಟಿ 7ನೇ ತರಗತಿ, ಆರಾಧ್ಯ ಎಮ್. 7ನೇ ತರಗತಿ, ಆಶ್ರಿತ್ ಕುಲಾಲ್ 7ನೇ ತರಗತಿ, ವಿಘ್ನೇಶ್ ನಾಯ್ಕ್ 6ನೇ ತರಗತಿ, ಪವನ್ ಉಡುಪ 6ನೇ ತರಗತಿ, ಹನಿ 6ನೇ ತರಗತಿ, ಮನ್ವಿತ್ ಜಿ. 6ನೇ ತರಗತಿ. ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಕೀರ್ತಿ ಹೆಚ್ಚಿಸಿರುವ ಈ ಹೆಮ್ಮೆಯ ವಿದ್ಯಾರ್ಥಿಗಳ ಸಾಧನೆಗೆ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ,ಶಾಲಾ ಮುಖ್ಯೋಪಾಧ್ಯಾಯಿನಿ , ಉಪ ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಫಲಪ್ರದ ಭವಿಷ್ಯ ಹಾರೈಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡಾಪಟು ಸಮಯ ನಿರ್ವಹಣೆ, ಶಿಸ್ತು ಮತ್ತು ತಾಳ್ಮೆಯನ್ನು ಮೈಗೂಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದು ಜನತಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಕೃಷ್ಣ ಮೊಗವೀರ ಹೇಳಿದರು. ಅವರು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ ಟಿ.ಎನ್. ಉಪಸ್ಥಿತರಿದ್ದರು. ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪೂಜಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಶೆಟ್ಟಿ ಹೆಸ್ಕತ್ತೂರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರಥಮ ಬಿ.ಕಾಂ. (ಬಿ) ವಿಭಾಗದ ಪ್ರತೀಕ್ಷಾ ಶೆಟ್ಟಿ, ದ್ವಿತೀಯ ಬಿಸಿಎ ವಿಭಾಗದ ರೋಹನ್ ಆರ್. ನಾಯ್ಕ್ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ. ಸಮಗ್ರ ವಿಭಾಗದಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ರಾಜಸ್ಥಾನದಲ್ಲಿ ನವೆಂಬರ್ 24 ರಿಂದ ಡಿಸೆಂಬರ್ 05 ರವರೆಗೆ ನಡೆದ ಖೇಲೋ ಇಂಡಿಯಾ ಅಂತರ್ ವಿಶ್ವ ವಿದ್ಯಾಲಯ  ಗೇಮ್ಸ್ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಸಿದ ಆಳ್ವಾಸ್ ಕಾಲೇಜಿನ ಪುರುಷರ ತಂಡ ಮೂರನೇ ಬಾರಿಗೆ ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಈ ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದ ಪುರುಷರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಮೂರು ಚಿನ್ನ, ಒಂದು ಕಂಚಿನ ಪದಕ ಪಡೆದು ಈ ಸಾಧನೆ ಮೆರೆದರು.ಆಳ್ವಾಸ್‌ನ ನಾಗೇಂದ್ರ ಡಿಸ್ಕಸ್ ಥ್ರೋನಲ್ಲಿ ಚಿನ್ನ, ಅಮನ್ ಪೋಲ್ ವಾಲ್ಟ್ನಲ್ಲಿ ಚಿನ್ನ,, ಚಮನ್ ದೇಕಾಥಲೋನ್‌ನಲ್ಲಿ ಚಿನ್ನ, ಟ್ರಿಪ್ಪ್ಲೆ ಜಂಪ್‌ನಲ್ಲಿ ಪ್ರದೀಪ್ ಕುಮಾರ್ ಕಂಚಿನ ಪದಕ ಪಡೆಯುದರೊಂದಿಗೆ ಸಮಗ್ರ ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಿತು. ಇದೇ ಪಂದ್ಯಾಟದ ಮಹಿಳಾ ವಿಭಾಗದಲ್ಲಿ ಒಂದು ಚಿನ್ನ,  ಎರಡು ಬೆಳ್ಳಿಯ ಪದಕದೊಂದಿಗೆ ಆಳ್ವಾಸ್ ನಾಲ್ಕನೇ ಸ್ಥಾನ ಪಡೆಯಿತು. ಪುರುಷರ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಒಟ್ಟು 4 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಮಂಗಳೂರು ವಿವಿ 7…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಐ.ಐ.ಟಿ, ಐ.ಐ.ಐ.ಟಿ, ಎನ್.ಐ.ಟಿ, ಐ.ಐ.ಎಮ್, ಐ.ಐ.ಎಸ್.ಇ.ಆರ್, ಎ.ಐ.ಐ.ಎಂ.ಎಸ್, ಎನ್.ಎಲ್.ಯು, ಐ.ಎನ್.ಐ ಮತ್ತು ಐ.ಯು.ಎಸ್.ಎಲ್.ಎ ಇತ್ಯಾದಿ ಸರ್ಕಾರದಿಂದ ಶಾಸನಬದ್ಧ ಅನುಮತಿ ಪಡೆದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ರಾಜ್ಯದ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ ಹಾಗೂ ಸಿಖ್ ಸಮುದಾಯದ ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನ ಸೌಲಭ್ಯ ಪಡೆಯಲು ವೆಬ್‌ಸೈಟ್ https://sevasindhu.karnataka.gov.in/sevasindhu/DepartmentService ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು 2026 ರ ಜನವರಿ 31 ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: 8277799990 ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಅಲೆವೂರು ರಸ್ತೆ, ಮಣಿಪಾಲ ದೂ.ಸಂಖ್ಯೆ: 0820-2573596, ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ನೆಲ ಮಹಡಿ, ಮೌಲಾನಾ ಅಜಾದ್ ಭವನ, ಅಲೆವೂರು ರಸ್ತೆ, ಶಿವಳ್ಳಿ ಗ್ರಾಮ, ಮಣಿಪಾಲ, ದೂರವಾಣಿ ಸಂಖ್ಯೆ: 0820-2574596 ಅಥವಾ ಕಾರ್ಕಳ ದೂರವಾಣಿ ಸಂಖ್ಯೆ:…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಗುರಿ ಇರಬೇಕು. ಸ್ಪಷ್ಟತೆ ಇದ್ದಾಗ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಹೇಳಿದರು. ಅವರು ಶುಕ್ರವಾರ ಇಲ್ಲಿನ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿ ಪೂರ್ವ ಕಾಲೇಜಿನ ʼಕಂಪ್ಯೂಟರ್ ಲ್ಯಾಬ್ʼ ಉದ್ಘಾಟಿಸಿ ಮಾತನಾಡಿದರು. ಅತ್ಯುತ್ತಮ ವಿದ್ಯಾರ್ಥಿಯಾಗಬೇಕು ಎಂಬ ಛಲ ಇಟ್ಟುಕೊಳ್ಳಿ; ನಿಮ್ಮ ತಂದೆ-ತಾಯಿಗೆ ಒಳ್ಳೆಯ ಮಕ್ಕಳಾಗಿ; ಶಾಲೆಗೆ ಕೀರ್ತಿ ತರುವಂಥ ವಿದ್ಯಾರ್ಥಿಗಳಾಗಿ; ಹಾಗೆಯೇ  ದೇಶದ ಉತ್ತಮ ಪ್ರಜೆಗಳಾಗಿ ಎಂದು ಕಿವಿಮಾತು ನುಡಿದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡಿ, “ವಿದ್ಯಾರ್ಥಿಗಳು ಈ ಕಂಪ್ಯೂಟರ್ ಲ್ಯಾಬ್‌ನ ಸದುಪಯೋಗಪಡಿಸಿಕೊಂಡು ಉತ್ತಮವಾದ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಆಶಿಸಿದರು. ವೇದಿಕೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ , ಟಿ.ಎ.ಪಿ.ಎಂ.ಎಸ್ ನ ಉಪಾಧ್ಯಕ್ಷ ಶರತ್ ಶೆಟ್ಟಿ, ಅಂಪಾರು ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಪ್ರದೀಪ್ ಶೆಟ್ಟಿ, ನಿರಮಯಾ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಉದಯ್ ಕುಮಾರ್…

Read More