ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನೃತ್ಯವನ್ನು ಹೇಗೆ ಮಾಡುವುದು ಎಂಬುದನ್ನು ಎಂಬುದನ್ನು ಕಲಿಯುತ್ತಾರೆ. ಆದರೆ ಯಾಕೆ ಮಾಡಬೇಕೆನ್ನುವುದನ್ನು ತಿಳಿದುಕೊಳ್ಳುವುದಿಲ್ಲ. ಅದೊಂದು ತಾತ್ವಿಕ ಪ್ರಶ್ನೆಯಾಗಿದೆ. ನೃತ್ಯ ಯಾಕೆ ಮಾಡಬೇಕು ಎಂಬುದು ಅರ್ಥವಾದರೆ ಮಾತ್ರ ಅದರೊಂದಿಗೆ ಜೀವಿಸಲು ಸಾಧ್ಯವಿದೆ ಎಂದು ರಂಗ ನಿರ್ದೇಶಕ ಡಾ. ಶ್ರೀಪಾದ್ ಭಟ್ ಹೇಳಿದರು. ಅವರು ಇಲ್ಲಿನ ರೋಟರಿ ಭವನದಲ್ಲಿ ಗುರುವಾರ ಸುರಭಿ ರಿ. ಬೈಂದೂರು ಹಾಗೂ ರೋಟರಿ ಕ್ಲಬ್ ಬೈಂದೂರು ಆಶ್ರಯದಲ್ಲಿ ಆಶ್ರಯದಲ್ಲಿ ಸುರಭಿ ವಿಶಂತಿ ಸಂಭ್ರಮದ ಭಾಗವಾಗಿ ಆಯೋಜಿಸಲಾಗಿದ್ದ ಏಕವ್ಯಕ್ತಿ ರಂಗ ಪ್ರದರ್ಶನ ’ನೃತ್ಯಗಾಥಾ’ದ ಪೂರ್ವದಲ್ಲಿ ಮಾತನಾಡಿ ಜಗತ್ತಿನ ರೋದನವನ್ನು ತನ್ನದೆನ್ನುವ ಶಿವ ಕಲಾವಿದರ ಆರಾಧ್ಯ ದೈವ. ಹಾಗಾಗಿಯೇ ಜಗತ್ತಿನ ಸಂಕಟಗಳು ಕಲಾವಿದರ ಸಂಕಟವೂ ಆಗಿದೆ. ಜಗತ್ತಿನ ಪ್ರತಿ ಜೀವಿಯೂ ಕಲಾವಿದರಿಗೆ ಬಂಧುವಾಗುತ್ತದೆ ಎಂದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಯು. ಪ್ರಕಾಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೆನಡಾ ಸಂಶೋಧಕ ಗ್ರಾಂಟ್ ಡೆಂಪ್ಸೆ, ರಂಗಕರ್ಮಿ ಶೀತಲ್ ಭಟ್, ರೋಟರಿ ಕ್ಲಬ್ ಬೈಂದೂರು ಕಾರ್ಯದರ್ಶಿ ಮಂಜುನಾಥ ಮಹಲೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್ಡಿಆರ್ಎಫ್) ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಆಸಕ್ತ ಯುವಕರುಗಳಿಗೆ ವಿಪತ್ತು ನಿರ್ವಹಣೆಯ ತರಬೇತಿಯನ್ನು ಆಯೋಜಿಸಿದ್ದು, ಪ್ರತಿ ತಾಲೂಕು ಹಂತದಲ್ಲಿ ಸ್ವಯಂ ಸೇವಕರುಗಳನ್ನೊಳಗೊಂಡ ವಿಪತ್ತು ನಿರ್ವಹಣಾ ತಂಡವನ್ನು ರಚಿಸಲು ನಿರ್ಧರಿಸಲಾಗಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಸೆಪ್ಟೆಂಬರ್ ಮೊದಲ ವಾರದಿಂದ ಆಯ್ಕೆಯಾಗುವ ಪ್ರತಿ ತಂಡಕ್ಕೆ 6 ದಿನಗಳ ತರಬೇತಿ ನಡೆಯಲಿದ್ದು, ಉಡುಪಿ ಜಿಲ್ಲೆಯಿಂದ ತರಬೇತಿಗೆ ಆಯ್ಕೆಯಾಗುವ ಸ್ವಯಂ ಸೇವಾ ಯುವಕರುಗಳ ಪ್ರಯಾಣ ಭತ್ಯೆ, ಊಟ ಹಾಗೂ ವಸತಿ ವೆಚ್ವವನ್ನು ನೆಹರು ಯುವಕೇಂದ್ರದಿಂದಲೇ ಭರಿಸಲಾಗುತ್ತದೆ. ಜಿಲ್ಲೆಯ ಪ್ರತಿ ತಾಲೂಕುಗಳಿಂದ ಸ್ವಯಂ ಸೇವಾ ಮನೋಭಾವವುಳ್ಳ ಯುವಕರುಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಉಡುಪಿ ರಜತಾದ್ರಿಯಲ್ಲಿರುವ ನೆಹರು ಯುವ ಕೇಂದ್ರದಿಂದ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ತರಬೇತಿಯಲ್ಲಿ ಭಾಗವಹಿಸುವವರು 22 ರಿಂದ 29 ವರ್ಷ ವಯಸ್ಸಿನ ಸೇವಾ ಮನೋಭಾವದ ಯುವಕರಾಗಿದ್ದು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ತರಬೇತಿಯಲ್ಲಿ ಭಾಗವಹಿಸುವ ಯುವಕರು ದೈಹಿಕವಾಗಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕು ಆಡಳಿತದ ವತಿಯಿಂದ ಬೈಂದೂರು ಗಾಂಧಿ ಮೈದಾನದಲ್ಲಿ ಮೊದಲ ಭಾರಿಗೆ ಸ್ವಾತಂತ್ರ್ಯ ದಿನಾಚರಣೆ ಜರುಗಿತು. ಬೈಂದೂರು ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್ ಧ್ವಜಾರೋಹಣ ನೇರವೇರಿಸಿ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿದ ಧೀರರನ್ನು, ಅಸಂಖ್ಯಾತ ಹೋರಾಟಗಾರರನ್ನು ಅಗತ್ಯವಾಗಿ ಸ್ಮರಿಸಿಕೊಳ್ಳಬೇಕಿದೆ. ಎಲ್ಲರ ತ್ಯಾಗವನ್ನು ಮರೆಯದೇ, ನಾವುಗಳು ಭವ್ಯ ರಾಷ್ಟ್ರ ನಿರ್ಮಾಣದಲ್ಲಿ ತೊಡಿಸಿಕೊಳ್ಳಬೇಕಿದೆ. ಕರ್ತವ್ಯದ ಪ್ರಾಮಾಣಿಕ ನಿರ್ವಹಣೆ ಹಾಗೂ ಜವಾಬ್ದಾರಿಯನ್ನು ಅರಿತು ಮುನ್ನಡೆಯಬೇಕಾದ ಸಂದರ್ಭವಿದು. ಯುವ ಜನತೆ ಎಲ್ಲಾ ಕ್ಷೇತ್ರದಲ್ಲಿಯೂ ಅರ್ಪಣಾ ಭಾವದಿಂದ ತೊಡಗಿಸಿಕೊಳ್ಳಬೇಕು. ಸಹಬಾಳ್ವೆ ಸಾಮರಸ್ಯವೇ ನಮ್ಮ ಜೀವನದ ಗುರಿಯಾಗಬೇಕು ಎಂದವರು. ಸಂದೇಶವಿತ್ತರು. ಈ ಸಂದರ್ಭ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಕುಂದರ್, ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಪೊಲೀಸ್ ವೃತ್ತನಿರೀಕ್ಷಕ ಪರಮೇಶ್ವರ ಗುನಗ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶಂಕರ ಪೂಜಾರಿ, ಗೌರಿ ದೇವಾಡಿಗ, ಸುರೇಶ ಬಟವಾಡಿ, ತಾಲೂಕು ಪಂಚಾಯತ್ ಸದಸ್ಯರುಗಳಾದ ಸುಜಾತ ದೇವಾಡಿಗ, ಮಾಲಿನಿ ಕೆ, ಜಗದೀಶ ದೇವಾಡಿಗ, ಪುಪ್ಪರಾಜ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯೋಗೀಂದ್ರ ಮರವಂತೆ ಒಬ್ಬ ಸಂವೇದನಾಶೀಲ ಬರಹಗಾರ. ’ಲಂಡನ್ ಡೈರಿ-ಅನಿವಾಸಿಯ ಪುಟಗಳು’ ಹೆಸರಿನ ಅವರ ಲೇಖನಗಳ ಸಂಗ್ರಹದಲ್ಲಿ ಇಂಗ್ಲಂಡ್ನ ಜನರ ಬದುಕು ಮತ್ತು ಸನ್ನಿವೇಶಗಳೆಡೆಗಿನ ಒಳನೋಟಗಳಿಂದ ಕೂಡಿದ ಮನಸ್ಸಿಗೆ ಮುದ ನೀಡುವ ಲಲಿತ ಪ್ರಬಂzsಗಳಿವೆ ಎಂದು ಹಿರಿಯ ಲೇಖಕ ಡಾ. ಬಿ. ಜನಾರ್ದನ ಭಟ್ ಹೇಳಿದರು. ಕುಂದಾಪುರದ ಹೋಟೆಲ್ ಹರಿಪ್ರಸಾದದಲ್ಲಿಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಹೊಸಪೇಟೆಯ ಯಾಜಿ ಪ್ರಕಾಶನ ಹೊರತಂದಿರುವ ಯೋಗೀಂದ್ರ ಅವರ ಬಿಡಿಲೇಖನಗಳ ಸಂಗ್ರಹ ’ಲಂಡನ್ ಡೈರಿ’ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಭಾರತೀಯ ಬದುಕಿನ ಹಿನ್ನೆಲೆಯಿಂದ ಇಂಗ್ಲಂಡ್ ಜನಜೀವನದೊಂದಿಗೆ ಮುಖಾಮುಖಿ ಆಗುವಾಗ ಹುಟ್ಟುವ ದ್ವಂದ್ವದ ವೇಳೆ ಅವರು ತೀರ ಸೂಕ್ಷ್ಮಗ್ರಾಹಿಗಳಾಗಿ ಅದ್ಭುತ ಚಿತ್ರಗಳನ್ನು ಕಟ್ಟಿಕೊಡುತ್ತಾರೆ. ಅವುಗಳಲ್ಲಿ ವಿಷಯದ ಮೂಲಕ್ಕೆ ಹೋಗುವ ಗುಣ, ಪತ್ರಕರ್ತನ ಶೋಧಕ ದೃಷ್ಟಿ ಇರುತ್ತದೆ. ಇವು ಒಬ್ಬ ಪ್ರಬುದ್ಧ ಬರಹಗಾರನಲ್ಲಿ ಮಾತ್ರಕಾಣಬಹುದಾದ ಕೌಶಲ. ಅವರು ತಮ್ಮ ಬರಹಕ್ಕೆ ತಾವು ಪಳಗಿಸಿಕೊಂಡ ಚೇತೋಹಾರಿಯಾದ ಭಾಷೆಯನ್ನು ಬಳಸುತ್ತಾರೆ. ಅದಕ್ಕೆ ಓದುಗನನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು, ಅ.14:ಕಳೆದು ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಕೊಲ್ಲೂರು ದೇವಸ್ಥಾನದ ಹೆಣ್ಣಾನೆ ಇಂದಿರಾ ಮಂಗಳವಾರ ರಾತ್ರಿ ಅಸುನೀಗಿದ್ದು, ಬುಧವಾರ ಸಂಜೆ ಇಲ್ಲಿನ ಕಲ್ಯಾಣಗುಡ್ಡೆಯಲ್ಲಿರುವ ಆನೆಯ ಶಡ್ ಬಳಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕಳೆದ 22 ವರ್ಷಗಳ ಹಿಂದೆ ಕೊಲ್ಲೂರು ದೇವಳಕ್ಕೆ ದಾನವಾಗಿ ಬಂದಿದ್ದ ಹೆಣ್ಣಾನೆ ದೇವಳದ ಭಕ್ತರ ಪ್ರೀತಿಗೆ ಪಾತ್ರವಾಗಿತ್ತು. ಆನೆ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಭಕ್ತರು ಹಾಗೂ ಸಾರ್ವಜನಿಕರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಕೊಲ್ಲೂರು ಪೇಟೆಯಲ್ಲಿ ರಿಕ್ಷಾ ಜೀಪುಗಳನ್ನು ಸ್ಥಗಿತಗೊಳಿಸಿ, ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು. ಬಾಳೆಹೊನ್ನೂರಿನ ಮಧು ಎನ್ನುವವರು ದಾನ ನೀಡಿದ್ದ ಆನೆಗೆ ಐಯಣ್ಣ ಮಾವುತರಾಗಿದ್ದರು. ದೇವಸ್ಥಾನದ ಅಂದಿನ ಮೊಕ್ತೆಸರರಾಗಿದ್ದ ಬಿ. ಅಪ್ಪಣ್ಣ ಹೆಗ್ಡೆ ಅವರ ಅವಧಿಯಲ್ಲಿ ಇಂದಿರಾ ಎಂಬ ನಾಮಕರಣ ಮಾಡಲಾಗಿತ್ತು. ಪ್ರತಿದಿನ ಬೆಳಿಗ್ಗೆ ದೇವಸ್ಥಾನದ ಮುಖ್ಯ ದ್ವಾರದ ಮೂಲಕ ಪ್ರವೇಶಿಸಿ ದೇವಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಧ್ವಜಕ್ಕೆ ವಂದಿಸಿ, ಅಧಿಕಾರಿಗಳು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವವಾಹಿನಿ ರಿ. ಮಂಗಳೂರು ಇದರ ಪುತ್ತೂರು ಘಟಕದ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎದುರು ಭಾನುವಾರ ಜರುಗಿದ 32ನೇ ವಾರ್ಷಿಕ ಸಮಾವೇಶದಲ್ಲಿ ಯಶಸ್ವಿ ಉದ್ಯಮಿ ಹಾಗೂ ಸಾಧಕ ಗೋವಿಂದ ಬಾಬು ಪೂಜಾರಿ ಅವರಿಗೆ ‘ಯುವ ಸಾಧನಾ’ ಪುರಸ್ಕಾರ ಪ್ರದಾನ ಮಾಡಲಾಯಿತು. ಪುತ್ತೂರು ಉಪವಿಭಾಗ ಸಹಾಯಕ ಕಮಿಷನರ್ ಹೆಚ್. ಕೆ. ಕೃಷ್ಣಮೂರ್ತಿ, ರಾಜ್ಯದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ, ಆರ್ಥಿಕ ಹಾಗೂ ಶಿಕ್ಷಣ ತಜ್ಞ ಸಿ. ಕೆ. ಅಂಚನ್, ಚಲನಚಿತ್ರ ನಿರ್ಮಾಪಕ, ನಟ ಡಾ. ರಾಜಶೇಖರ್ ಕೋಟ್ಯಾನ್, ನಟಿ ನವ್ಯ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ರಿ. ಮಂಗಳೂರು ಇದರ ಅಧ್ಯಕ್ಷ ಜಯಂತ ನಡುಬೈಲು, ಪ್ರಧಾನ ಕಾರ್ಯದರ್ಶಿ ಸುನಿಲ್ ಅಂಚನ್, ೩೨ನೇ ವಾರ್ಷಿಕ ಸಮಾವೇಶದ ಸಂಚಾಲಕ ನಾರಾಯಣ ಪೂಜಾರಿ ಕುರಿಕ್ಕಾರು, ಯುವವಾಹಿನಿಯ ವಿವಿಧ ಘಟಕಗಳು ಪದಾಧಿಕಾರಿಗಳು ಸೇರಿದಂತೆ ಇತರರು ವೇದಿಕೆಯಲ್ಲಿದ್ದರು. ಮಣಿಪಾಲದ ಉದಯ ಸಮೂಹ ಸಂಸ್ಥೆಗಳ ಪ್ರವರ್ತಕ ರಮೇಶ್ ಎ. ಬಂಗೇರ ಅವರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಶಿಧರ ಹೆಮ್ಮಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ರಾಯಪ್ಪನಮಠ ಪುನರಾಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರುಗಳಾಗಿ ಎಸ್. ಎಂ. ಮಝರ್, ಸಂತೋಷ ಕುಂದೇಶ್ವರ, ಕೋಶಾಧಿಕಾರಿಯಾಗಿ ಸತೀಶ ಆಚಾರ್ ಉಳ್ಳೂರು, ಜತೆ ಕಾರ್ಯದರ್ಶಿಯಾಗಿ ರಾಘವೇಂದ್ರ ಬಳ್ಕೂರು, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ರಾಘವೇಂದ್ರ ಪೈ, ಉದಯ ಕುಮಾರ ತಲ್ಲೂರು, ವಿನಯ ಪಾಯಸ್, ಜಿ. ಎಂ. ಶೆಣೈ, ಬರ್ನಾಡ್ ಡಿಕೋಸ್ಟ್, ಜಯಶೇಖರ ಮಡಪ್ಪಾಡಿ, ಚಂದ್ರಮ ತಲ್ಲೂರು, ಭಾಸ್ಕರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರೂರು ಅಳ್ವೆಗದ್ದೆ ಬಂದರಿನ ಸಂಪರ್ಕ ರಸ್ತೆ ದುರಸ್ತಿಗಾಗಿ ೮೦ ಲಕ್ಷ ರೂ ಮಂಜೂರಾಗಿದ್ದು, ಕಾಮಗಾರಿಗೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. ತಾ. ಪಂ ಸದಸ್ಯ ಪುಪ್ಪರಾಜ ಶೆಟ್ಟಿ, ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೀಪಕಕುಮಾರ ಶೆಟ್ಟಿ, ಶಿರೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ರಾಮ ಎಂ. ಮೊಗೇರ್, ಇಂಜಿನೀಯರ್ ವಿಜಯ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಬೈಂದೂರು ಯುವ ಕಾಂಗ್ರೆಸ್ ಕಾರ್ಯಕರ್ತರ ತಂಡ ಭಾನುವಾರ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಸೂಚನೆ ಮೇರೆಗೆ ಬೈಂದೂರು ಪೇಟೆಯಲ್ಲಿ ಪರಿಹಾರ ಸಾಮಾಗ್ರಿ ಸಂಗ್ರಹಣೆ ಕಾರ್ಯ ನಡೆಸಿತು. ಈ ಸಂದರ್ಭ ಬ್ಲಾಕ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಮುಖಂಡರುಗಳಾದ ಎಸ್. ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ಮೋಹನ್ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶೇಖರ್ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಜಗದೀಶ್ ದೇವಾಡಿಗ, ಯಡ್ತರೆ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ, ಸದಸ್ಯ ಉಮೆಶ್ ದೇವಾಡಿಗ, ವಾಸು ಪೂಜಾರಿ, ದೀಪಕ್ ನಾವುಂದ, ಸನತ್ ಬಳೆಗಾರ್ ಕೊಲ್ಲೂರು, ಪ್ರಶಾಂತ್ ಪೂಜಾರಿ ಕರ್ಕಿ, ವಿಜಯ್ ನಾಗೂರು, ಜಯಂತ್ ಬಡಾಕೆರೆ, ಹರೀಶ್ ಮರವಂತೆ, ವಿನಾಯಕ್ ಕೊಲ್ಲೂರು, ಸೋಮಶೇಖರ್ ಮೊದಲಾದವರು ಪಾಲ್ಗೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಿನ್ನೆ ಸುರಿದ ಬಾರಿ ಮಳೆಗೆ ತಾಲೂಕಿನ ಕೆರ್ಗಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದನವನ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದು ಅಪಾರ ಹಾನಿ ಸಂಭವಿಸಿದೆ. ಶಾಲೆಯ ಮಧ್ಯಭಾಗದ ಕಟ್ಟಡದ ಗೋಡೆ ಕುಸಿದಿದ್ದು, ಛಾವಣಿ ಹಾರಿ ಹೋಗಿ ಸಂಪೂರ್ಣ ನೆಲಸಮವಾಗಿದೆ. ಇನ್ನೊಂದು ಭಾಗದ ಗೋಡೆಯೂ ಶಿಥಿಲಗೊಂಡಿದ್ದು ಉರುಳುವ ಭೀತಿ ಇದೆ. ಕಳೆದೊಂದು ವಾರದಿಂದ ನಿರಂತರವಾಗಿ ಗಾಳಿಮಳೆ ಸುರಿಯುತ್ತಿದ್ದ ಪರಿಣಾಮ ಶಾಲಾ ಕಟ್ಟಡ ಕುಸಿದಿತ್ತು. ಶಾಲೆಯಲ್ಲಿ 1 ರಿಂದ 5 ತನಕ ಒಟ್ಟು 15 ಮಕ್ಕಳಿದ್ದಾರೆ. ರಾತ್ರಿ ವೇಳೆಯಾದ್ದರಿಂದ ಮತ್ತು ಕಳೆದ ಮೂರು ದಿನದಿಂದ ಶಾಲೆಗೆ ರಜೆ ಇದ್ದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ಶಾಲಾಗೆ 100 ವರ್ಷದ ಇತಿಹಾಸವಿದ್ದು, ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ,
