ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಪಿ.ಯು. ಕಾಲೇಜಿನಲ್ಲಿ “ಅಭ್ಯುದಯ – 2025” ವಾರ್ಷಿಕ ಮಹೋತ್ಸವವು ಸಂತೋಷ ಮತ್ತು ಸಡಗರದಿಂದ ಇತ್ತೀಚಿಗೆ ನಡೆಯಿತು.
ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ತಂದರು. ಅತಿಥಿಗಳನ್ನು ಚೆಂಡೆಯ ನಾದ ಮತ್ತು ಮಾಲಾರ್ಪಣೆ ಮೂಲಕ ಹಾರ್ದಿಕವಾಗಿ ಬರಮಾಡಿಕೊಳ್ಳಲಾಯಿತು.

ಸಂಸ್ಥೆಯ ಸಂಸ್ಥಾಪಕರಾದ ಶಮಿತಾ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಜೈಸನ್ ಲೂಯಿಸ್, ಉಪಪ್ರಾಂಶುಪಾಲರಾದ ಗೀತಾ, ಕಾಲೇಜು ನಾಯಕಿ ವರ್ಷಿಣಿ ಹಾಗೂ ನಾಯಕ ಪವನ್ ವೇದಿಕೆಯಲ್ಲಿ ಇದ್ದರು. ವಿದ್ಯಾರ್ಥಿಗಳ ಪ್ರಾರ್ಥನೆ ಮತ್ತು ಸ್ವಾಗತ ನೃತ್ಯದಿಂದ ಕಾರ್ಯಕ್ರಮಕ್ಕೆ ಶುಭಾರಂಭವಾಯಿತು. ನಂತರ ದೀಪಪ್ರಜ್ವಲನ ನಡೆಯಿತು.


ವಿದ್ಯಾರ್ಥಿ ಪರಿಷತ್ ಸದಸ್ಯರು ಸಾಂಸ್ಕೃತಿಕ ಮತ್ತು ಕ್ರೀಡಾ ವರದಿಯನ್ನು ನೀಡಿದರು. ಪ್ರಾಂಶುಪಾಲರು ಕಾಲೇಜಿನ ವಾರ್ಷಿಕ ವರದಿಯನ್ನು ಸರಳವಾಗಿ ಮಂಡಿಸಿದರು. ಈ ವರ್ಷ ಕ್ರೀಡೆ, ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. 2025ರ ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕೂಡ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಂಶುಪಾಲರು ಸ್ಥಾಪಿಸಿದ ದತ್ತಿ ಪ್ರಶಸ್ತಿಯನ್ನು ಘೋಷಿಸಿ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ಕುಮಾರಿ ನಿಶಾ ನಾರಾಯಣ ತೋಳಾರ್ ಮತ್ತು ಕುಮಾರಿ ಅಕ್ಷಿತಾ ಇವರಿಗೆ ಪ್ರಶಸ್ತಿ ನೀಡಲಾಯಿತು.
ಮುಖ್ಯ ಅತಿಥಿಗಳಾದ ಮಾರುತಿ ಅವರು ಸಂಸ್ಥೆಯ ಪ್ರಗತಿಶೀಲ ಹಾದಿಯನ್ನು ಮೆಚ್ಚಿ ಶಿಕ್ಷಣದ ಮಹತ್ವ ಶಿಸ್ತು ಹಾಗೂ ದೊಡ್ಡ ಕನಸುಗಳನ್ನು ಬೆಳೆಸುವ ಅಗತ್ಯತೆಯ ಬಗ್ಗೆ ಪ್ರೇರಣೆದಾಯಕ ಸಂದೇಶ ನೀಡಿದರು. ಪೋಷಕರಿಗೆ ಮಕ್ಕಳ ವಿದ್ಯಾಭ್ಯಾಸ ಮತ್ತು ವ್ಯಕ್ತಿತ್ವ ನಿರ್ಮಾಣದಲ್ಲಿ ನೀಡಬೇಕಾದ ಬೆಂಬಲದ ಕುರಿತು ಉಪಯುಕ್ತ ಸಲಹೆಗಳನ್ನು ಹಂಚಿಕೊಂಡರು ಮತ್ತುಅಧ್ಯಕ್ಷರಾದ ಸಂಸ್ಥಾಪಕರು ಕಾಲೇಜಿನ ಬೆಳವಣಿಗೆ ಮತ್ತು ವಿದ್ಯಾರ್ಥಿಗಳ ಸಾಧನೆಗಳನ್ನು ಶ್ಲಾಘಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆಯಿದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಮನಸೆಳೆದವು. ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ. “ಅಭ್ಯುದಯ – 2025” ಮಹೋತ್ಸವವು ಯಶಸ್ವಿಯಾಗಿ ನೆರವೇರಿತು.















