ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ/ಕತಾರ್: ಎಲ್ಲಾದರೂ ಇರು. ಎಂತಾದರೂ ಇರು. ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಉದ್ಯೋಗಕ್ಕಾಗಿ ತಾನು ನೆಲೆನಿಂತ ದೇಶದಲ್ಲಿಯೇ ಕನ್ನಡದ ಕಂಪನ್ನ ಪಸರಿಸುತ್ತಾ, ಹೊರದೇಶದ ಕನ್ನಡಿಗರಲ್ಲಿನ ಭಾಷಾಭಿಮಾನವನ್ನು ಹುರಿದುಂಬಿಸುತ್ತಾ ಕನ್ನಡದ ಕಟ್ಟಾಳುವಾಗಿ ಬೆಳೆದಿದ್ದಾರೆ ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು. ಕಳೆದ 13 ವರ್ಷಗಳಿಂದ ಇಂಜಿನಿಯರ್ ಆಗಿ ಕತಾರಿನಲ್ಲಿ ನೆಲೆಸಿರುವ ಅವರು ಪ್ರಸ್ತುತ ಇಂಡಿಯನ್ ಕಮ್ಯುನಿಟಿಬೆ ನ್ವೆಲೆಂಟ್ (ಐ.ಸಿ.ಬಿ.ಎಫ್) ಫೋರಂ ಜಾಯಿಂಟ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಾದ್ದಾರೆ. ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಬೈಂದೂರು ತಗ್ಗರ್ಸೆಯ ಗುರುದತ್ತ ಶೇರುಗಾರ್ ಹಾಗೂ ಮೂಕಾಂಬು ದಂಪತಿ ಪುತ್ರರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಮಯ್ಯಾಡಿಯ ಧ.ಮ.ಹಿ.ಪ್ರಾ ಶಾಲೆಯಲ್ಲಿಯೂ, ಪ್ರೌಢ ಶಿಕ್ಷಣವನ್ನು ದಾವಣಗೆರೆ ಬಾಪೂಜಿ ಫ್ರೌಢಶಾಲೆಯಲ್ಲಿಯೂ ಬಳಿಕ ದಾವಣಗೆರೆಯಲ್ಲಿಯೇ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು ರಾಷ್ಟ್ರೀಯ ಹೆದ್ದಾರಿ-8ರಲ್ಲಿ ಮೇಲುಸ್ತುವಾರಿ ಅಭಿಯಂತರಾಗಿ ಸೇವೆಸಲ್ಲಿಸಿ ಬಳಿಕ ಪ್ರಸ್ತುತ ಕತಾರ್ ನ ಗಲ್ಪಾರ್ಆಲ್ಮಿಸ್ನಾದ್ ಕಂಪನಿಯಲ್ಲಿಅಭಿಯಂತರಾಗಿ ಸೇವೆಸಲ್ಲಿಸುತ್ತಿದ್ದಾರೆ. ಕತಾರಿನಲ್ಲಿ ಕನ್ನಡ ಸಿನೆಮಾ ಪ್ರದರ್ಶಕ: ಕನ್ನಡದ ಸಿನಿಮಾಗಳಾದ ‘ಒಂದು ಮೊಟ್ಟೆಯ ಕಥೆ, ‘ಕಾಫಿತೋಟ’, ಕೋಟಿಗೊಬ್ಬ-2, ‘ಹೆಬ್ಬುಲಿ’,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ – 66ರಲ್ಲಿ ಬಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪಕ್ಕದಲ್ಲಿ ನ್ಯೂ ತ್ರಿಲೋಕ್ ಫ್ಯಾಮಿಲಿ ರೆಸ್ಟೋರೆಂಟ್ ಗಣಹೋಮದೊಂದಿಗೆ ಶುಕ್ರವಾರ ಶುಭಾರಂಭಗೊಂಡಿತು. ನೂತನ ಆಡಳಿತದೊಂದಿಗೆ ಆರಂಭಗೊಂಡಿರುವ ವೆಜ್ ಹಾಗೂ ನಾನ್ ವೆಚ್ ಹೋಟೆಲ್ ಹೋಟೆಲ್‌ನಲ್ಲಿ ವಿವಿಧ ಬಗೆಗೆ ಖಾದ್ಯಗಳು ಲಭ್ಯವಿರಲಿದೆ, ನುರಿತ ಅಡುಗೆ ತಯಾರಕರು, ಶೀಘ್ರ ಸೇವೆ, ಫ್ಯಾಮೀಲಿ, ಫ್ರೆಂಡ್ಸ್‌ಗೆ ಅನುಕೂಲವಾಗುವಂತೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಇರಲಿದೆ. ಹೋಟೆಲ್‌ಗೆ ಬರುವ ಗ್ರಾಹಕರಿಗೆ ವಿಶಾಲ ಪಾರ್ಕಿಂಗ್ ಸೌಲಭ್ಯವಿದ್ದು ಶುಚಿ ರುಚಿಯಾದ ಭೋಜನ ಸವಿಯಬಹುದಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ನವಶಕ್ತಿ ಮಹಿಳಾ ವೇದಿಕೆ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಹಿ.ಪ್ರಾ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಗೌರವಿಸಲಾಯಿತು. ತಾಲೂಕು ಪಂಚಾಯತ್ ಸದಸ್ಯೆ ಹಾಗೂ ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ ಭಿಡೆ ಅವರು ಪ್ರಾಸ್ತಾವಿಕ ಮಾತನಾಡಿ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನವನ್ನು ನಾವು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವೆ. ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ ಗುರು ಅಷ್ಟೇ ಮುಖ್ಯ ಒಂದು ದೇಶ ಅಭಿವೃದ್ಧಿ ಹೊಂದಲು ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿರುತ್ತದೆ. ಎಂದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಹಿರಿಯ ಶಿಕ್ಷಕಿ ಶ್ರೀಮತಿ ಯಶೋದ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ವಾಸು ಮತ್ತು ನಿರ್ಮಲ ರಾಜೇಶ್ವರಿ ಉಷಾ ವೀಣಾ ಗೀತಾ ಉಪಸ್ಥಿತರಿದ್ದರು. ನವಶಕ್ತಿ ಮಹಿಳಾ ವೇದಿಕೆಯ ಕಾರ್ಯದರ್ಶಿ ಸುಜಾತ ಅವರು ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ನವಶಕ್ತಿ ಮಹಿಳಾ ವೇದಿಕೆಯ ಸದಸ್ಯೆ ಜಯಲಕ್ಷ್ಮೀ ಸ್ವಾಗತಿಸಿ ಸುಷ್ಮಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಗೊಂಡ ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕ ಎಸ್. ರಾಜು ಪೂಜಾರಿ ಅವರನ್ನು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಶುಕ್ರವಾರ ಸಂಘದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಗೌರವಿಸಿದರು. ಈ ಸಂದರ್ಭ ಸಂಘದ ನಿರ್ದೇಶಕರುಗಳಾದ ಕೆ. ಮೋಹನ ಪೂಜಾರಿ, ಈಶ್ವರ ಹಕ್ಲತೋಡು, ಗುರುರಾಜ ಹೆಬ್ಬಾರ್, ಕೊರಗ ದೇವಾಡಿಗ, ಸುರೇಶ್ ಶ್ಯಾನುಭಾಗ್, ದಿನಿತಾ ಶೆಟ್ಟಿ, ಸಿದ್ದು ದೇವಾಡಿಗ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೈ, ವ್ಯವಸ್ಥಾಪಕ ಚಂದಯ್ಯ ಶೆಟ್ಟಿ ಮೊದಲಾದವರು ಇದ್ದರು. ho
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿ. ಸಿ. ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಕುಂದಗನ್ನಡದ ಚಲನಚಿತ್ರ ಪ್ರೊಡಕ್ಷನ್ ನಂ. 01 ಮುಹೂರ್ತ ಗುರುವಾರ ಬಸ್ರೂರಿನ ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು. ಚೊಚ್ಚಲ ಚಿತ್ರದ ಮುಹೂರ್ತವನ್ನು ಬಸ್ರೂರು ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಅವರು ನೆರವೇರಿಸಿದರು. ಈ ಸಂದರ್ಭ ಕುಂದಾಪುರ ಗ್ರಾಮಾಂತರ ಪೋಲಿಸ್ ಠಾಣೆಯ ಎಸ್‌ಐ ಶ್ರೀಧರ್ ನಾಯಕ್, ಮಹಾದೇವ ಕನ್ಸಕ್ಷನ್ ಮಂಗಳೂರು ಇದರ ಪ್ರವೀಣ್ ಕಮಾರ್, ಸುರೇಶ್ ನಾಯಕ್, ಸದಾಚಂದ್ರ ಬಸ್ರೂರು, ಗೋಪಾಲ್ ಪೂಜಾರಿ ಗರಡಿಮನೆ, ಶಾಶ್ವತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕರಾವಳಿಯ ವಜ್ರಮುನಿ ಖ್ಯಾತಿಯ ಓಂ ಗುರು ಬಸ್ರೂರು ಮೊದಲ ಬಾರಿಗೆ ನಿರ್ದೇಶನವನ್ನು ಕೈಗೆತ್ತಿಕೊಂಡಿದ್ದಾರೆ. ಕರಾವಳಿ ಸುಧೀರ್ ಖ್ಯಾತಿಯ ಚಂದ್ರಶೇಖರ್ ಬಸ್ರೂರು ಓಂಗುರು ಅವರಿಗೆ ಸಾಥ್ ನೀಡಿದ್ದಾರೆ. ಚಿತ್ರದ ನಾಯಕ ನಟನಾಗಿ ಕರುಣಾಕರ್, ನಾಯಕ ನಟಿಯಾಗಿ ಕವನಾ ಜಗ್ವಾರ್ ಮತ್ತು ಹರ್ಷಿತಾ ಕಾಣಿಸಿಕೊಳ್ಳಲಿದ್ದು, ಮುಖ್ಯ ಭೂಮಿಕೆಯಲ್ಲಿ ಸಂದೇಶ್ ಶೆಟ್ಟಿ ಆಜ್ರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೂತನ ಡಿವೈಎಸ್ಪಿ ಆಗಿ 2012 ಬ್ಯಾಚಿನ ಐಪಿಎಸ್ ಅಧಿಕಾರಿ ಹರಿರಾಂ ಶಂಕರ್ ಗುರುವಾರ ಅಧಿಕಾರ ಸ್ವೀಕರಿಸಿದ್ದು, ಇಲ್ಲಿನ ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ನಿರ್ಗಮಿತ ಡಿವೈಎಸ್ಪಿ ಬಿ. ಪಿ. ದಿನೇಶ್ ಕುಮಾರ್ ಅಧಿಕಾರ ಹಸ್ತಾಂತರ ಮಾಡಿದರು. ಕೇರಳದ ತ್ರಿಶೂರ್ ಮೂಲದ ಹರಿರಾಂ ಶಂಕರ್ 2012 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದು ಟ್ರೈನಿಂಗ್ ಮುಗಿಸಿ ಬೆಳಗಾಂನ ಅಥಣಿಯಲ್ಲಿ ಪ್ರೊಬೇಶನರಿ ಎಎಸ್ಪಿಯಾಗಿದ್ದು ಬಳಿಕ ಎರಡು ತಿಂಗಳು ಹೈದರಬಾದಿನಲ್ಲಿ ಎರಡನೇ ಹಂತದ ತರಬೇತಿ ಮುಗಿಸಿ ಕುಂದಾಪುರ ಎಎಸ್ಪಿ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಕ್ಯಾಲಿಕಟ್ ಎನ್.ಐ.ಟಿ.ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ವ್ಯಾಸಂಗ ಮಾಡಿ ಸಿವಿಲ್ ಸರ್ವೀಸ್ ಪರೀಕ್ಷೆ ಬರೆದಿದ್ದರು. ಹಲವು ವರ್ಷಗಳ ಬಳಿಕ ಕುಂದಾಪುರಕ್ಕೆ ಐಪಿಎಸ್ ದರ್ಜೆ ಅಧಿಕಾರಿ ನೇಮಿಸಿದ್ದು ನಾಗರಿಕರಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಮೂಡಿಸಿದೆ. ಈ ಸಂದರ್ಭ ಕುಂದಾಪುರ ಸಿಪಿಐ ಮಂಜಪ್ಪ, ಬೈಂದೂರು ಸಿಪಿಐ ಪರಮೇಶ್ವರ್ ಗುನಗ, ಕುಂದಾಪುರ ಎಸ್ಸೈ ಹರೀಶ್ ಆರ್. ನಾಯಕ್ ವಿವಿಧ ಠಾಣೆ ಪಿಎಸ್‌ಐ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಕಾರಣರಾಗುವ, ದೇಶ ಕಟ್ಟುವ ಶಕ್ತಿ ಇರುವ ಅಧ್ಯಾಪನವೇ ಶ್ರೇಷ್ಠ ವೃತ್ತಿ. ದೇವರಿಗೂ ಗುರುವಿಗೂ ಸಮಾನ ಸ್ಥಾನ ನೀಡುವುದರ ಹಿಂದೆ ಆ ವೃತ್ತಿಯ ಘನತೆ ಅಡಗಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು, ಕ್ಷೇತ್ರ ಸಂಪನ್ಮೂಲ ಕಛೇರಿ ಸಂಯುಕ್ತಾಶ್ರಯದಲ್ಲಿ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಾಥಮಿಕ ಹಂತದಲ್ಲಿ ಗುರು ಶಿಷ್ಯರ ಸಂಬಂಧ ಗಾಡವಾಗಿರುತ್ತದೆ. ಶಿಕ್ಷಕರ ಮಾತೇ ಮಕ್ಕಳಿಗೆ ವೇದವಾಕ್ಯದಂತಿರುತ್ತದೆ. ವ್ಯಕ್ತಿ ಎಷ್ಟೇ ದೊಡ್ಡವನಾದರೂ ತನ್ನ ಬಾಲ್ಯದಲ್ಲಿ ಕಲಿಸಿದ ಶಿಕ್ಷಕರನ್ನು ಮರೆಯಲಾರ ಎಂದ ಅವರು ಸಮಾಜ ಕಟ್ಟ ಕಡೆಯ ಮಗುವಿಗೂ ಶಿಕ್ಷಣ ದೊರೆಯುವಂತಾದರೆ ದೇಶ ಉನ್ನತಿಯನ್ನು ಸಾಧಿಸಲು ಸಾಧ್ಯ ಎಂದರು. ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಬಾಬು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ೨೬ ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಸಿಬ್ಬಂದಿ ರಮೇಶ್ ಅಡಿಗ ಅವರಿಗೆ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಿ ಮಾತನಾಡಿ ಯಾವುದೇ ಸಂಸ್ಥೆಯಲ್ಲಿ ಸೇವಾ ಮನೋಭಾವದ ಆಡಳಿತ ಮಂಡಳಿಯ ಜೊತೆಗೆ ಉತ್ತಮ ಸಿಬ್ಬಂದಿ ಇದ್ದರೆ ಅದರ ಯಶಸ್ಸು ಕಾಣಲು ಸಾಧ್ಯವಿದೆ. ರಮೇಶ್ ಅಡಿಗ ಅವರು ಶಿಸ್ತು ಹಾಗೂ ಸಂಸ್ಥೆಯ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಿ ಸಂಸ್ಥೆಯ ಏಳ್ಗೆಯಲ್ಲಿ ಶ್ರಮಿಸಿದ್ದಾರೆ ಎಂದರು. ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದರು. ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಎಂ. ಚಂದ್ರಶೀಲ ಶೆಟ್ಟಿ, ನಿರ್ದೇಶಕರಾದ ಭೋಜ ನಾಯ್ಕ್, ಜಗದೀಶ್ ಪಿ. ಪೂಜಾರಿ, ರಾಮಕೃಷ್ಣ ಖಾರ್ವಿ, ಪ್ರಕಾಶ ದೇವಾಡಿಗ, ನಾಗಮ್ಮ, ಮಂಜು ಪೂಜಾರಿ, ವಿಠಲ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಮಡಿವಾಳ ಇದ್ದರು. ನಿರ್ದೇಶಕ ಎಂ. ವಿನಾಯಕ ರಾವ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಕ್ಷಕರು ಇತಿಹಾಸ ಗುರುತಿಸುವ ಗುರು ಆಗಬೇಕೇ ವಿನಃ ಯಾವತ್ತು ಲಘು ಆಗಬಾರದು. ಶಿಕ್ಷಕ ದಾಖಲೆಯಲ್ಲಿ ನಿವೃತ್ತರಾದರೂ ಅವರು ಹವ್ಯಾಸಿಯಾಗಿ ಶಿಕ್ಷಕನಾಗಿಯೇ ಉಳಿದು ಸಮಾಜ ತಿದ್ದುವ ಕೆಲಸ ಮಾಡಬೇಕು. ಕನ್ನಡ, ಸಂಸ್ಕೃತಿ, ಭಾಷೆ ಹೇಳಿಕೊಡುವ ಜೊತೆ ಪ್ರಜ್ಞಾವಂತ ನಾಗರಿಕರ ಸೃಷ್ಟಿಸುವ ಕೆಲಸ ಶಿಕ್ಷಕರಿಂದ ಆಗುತ್ತಿದೆ ಎಂದು ಜಾನಪದ ವಿದ್ವಾಂಸ ಎ. ವಿ. ನಾವಡ ಹೇಳಿದರು. ಉಡುಪಿ ಜಿಲ್ಲಾ ಪಂಚಾಯಿತಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ತಾಲೂಕು ಸಂಪನ್ಮೂಲ ಕೇಂದ್ರ ಆಶ್ರಯದಲ್ಲಿ ಕುಂದಾಪುರ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಗುರುವಾರ ನಡೆದ ಶಿಕ್ಷಕ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತೆರೆಯುವ ಮೂಲಕ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ. ಇಂಗ್ಲಿಷ್ ಭಾಷೆಯಾಗಿ ಒಂದನೇ ತಗತಿಯಿಂದ ಕಲಿಸಿ, ಇಂಗ್ಲೀಷ್ ಜೊತೆ ಕನ್ನಡ ಕಲಿಸುವದಲ್ಲದೆ, ನಮ್ಮ ಮಣ್ಣಿನ ಭಾಷೆ ಮೂಲಕ ಕನ್ನಡಕ್ಕೆ ಕೀರ್ತಿ ತಂದ ಕವಿ ಸಾಹಿತಿಗಳ ಪರಿಚಯಿಸುವ ಕೆಲಸ ಮಾಡಬೇಕಿತ್ತು. ಕನ್ನಡ ಕೇವಲ ಭಾಷೆಯಲ್ಲ ನಮ್ಮ ಸಂಸ್ಕೃತಿಯ ಪ್ರತೀಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2019-20ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಪ್ರೌಢಶಾಲಾ ಶಿಕ್ಷಕರು: ರಾಜಶೇಖರ ಎಂ. ತಾಳಿಕೋಟೆ ಚಿತ್ರಕಲಾ ಶಿಕ್ಷಕರು ಸರಕಾರಿ ಪ್ರೌಢಶಾಲೆ ಆಲೂರು( ಬೈಂದೂರು ವಲಯ), ಶ್ರೀಕಾಂತ್ ವಿ. ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ ಬಸ್ರೂರು (ಕುಂದಾಪುರ ವಲಯ), ಕೆ.ದಿನಮಣಿ ಶಾಸ್ತ್ರೀ ಚಿತ್ರಕಲಾ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಬ್ರಹ್ಮಾವರ( ಬ್ರಹ್ಮಾವರ ವಲಯ), ವೆಂಕಟರಮಣ ಉಪಾಧ್ಯಾಯ ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ ವಳಕಾಡು( ಉಡುಪಿ ವಲಯ), ದಿನೇಶ್ ಶೆಟ್ಟಿಗಾರ್ ಸಹ ಶಿಕ್ಷಕರು ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ( ಕಾರ್ಕಳ ವಲಯ). ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು: ಶೇಖರ ಯು ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮಾಸೆಬೈಲು (ಕುಂದಾಪುರ ವಲಯ), ಆನಂದ ಶೆಟ್ಟಿ ಮುಖ್ಯ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ತೂರು (ಬೈಂದೂರು ವಲಯ), ಶೋಭ…
