Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಂಟ್ಸ್ ಕತಾರ್ ಸಂಸ್ಥೆಯ 2018-20ನೇ ಸಾಲಿನ ಅಧ್ಯಕ್ಷರಾಗಿ ದೀಪಕ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷರಾಗಿ ರಾಮಣ್ಣ ಎಸ್. ಹೆಗ್ಡೆ, ಕಾರ್ಯದರ್ಶಿಯಾಗಿ ಅಶ್ವಿನಿ ಶೆಟ್ಟಿ, ಖಜಾಂಚಿಯಾಗಿ ನರೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಡಾ. ಪದ್ಮಶ್ರೀ ಶೆಟ್ಟಿ, ಪ್ರಮುಖ ಕಾರ್ಯಕ್ರಮಗಳ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ, ಸದಸ್ಯತ್ವ ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಅಕ್ಷಿನಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಸ್ವರೂಪ್ ಶೆಟ್ಟಿ, ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಪ್ರೀಯಾ ಶೆಟ್ಟಿ, ಕಾರ್ಯಕ್ರಮಗಳ ಕಾರ್ಯದರ್ಶಿಯಾಗಿ ನಿತೀನ್ ಶೆಟ್ಟಿ, ಸಲಹಾ ಸಮಿತಿ ಮುಖ್ಯಸ್ಥರಾಗಿ ನವನೀತ್ ಶೆಟ್ಟಿ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವದಲ್ಲಿ ಹೈದರಬಾದಿನ ಭರತನಾಟ್ಯ ಕಲಾವಿದೆ ಮಾರಣಕಟ್ಟೆ ಅಮೂಲ್ಯ ಮಂಜ ಅವರ ಭರತನಾಟ್ಯ ಪ್ರದರ್ಶನ ನಡೆಯಿತು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹೈದರಬಾದ್‌ನ ಹೋಟೆಲ್ ಉದ್ಯಮಿ, ಸಮಾಜ ಸೇವಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಹಾಗೂ ಶಾಂತಿ ಕೆ. ಮಂಜ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ ಚಿತ್ತೂರು, ರಮೆಶ್ ಗಾಣಿಗ ಕೊಲ್ಲೂರು, ರಾಜೇಶ್ ಕಾರಂತ ಉಪ್ಪಿನಕುದ್ರು, ಕೆ.ವಿ. ಶ್ರಿಧರ ಅಡಿಗ ಕೊಲ್ಲೂರು, ಅಂಬಿಕಾ ದೇವಾಡಿಗ, ನರಸಿಂಹ ಹಳಗೇರಿ, ಜಯಂತಿ ವಿಜಯಕೃಷ್ಣ, ಕ್ಷೇತ್ರ ಸಿಬ್ಬಂದಿ ವರ್ಗ ಹಾಗೂ ಅರ್ಚಕ ವೃಂದದವರು ಉಪಸ್ಥಿತರಿದ್ದರು. ಅಮೂಲ್ಯ ಅವರು ಗಜವದನ, ಪುಷ್ಪಾಂಜಲಿ, ತ್ರಿಶಕ್ತಿ ದರ್ಶನ, ಭೋಷಂಬೋ, ಶ್ರೀ ಮೂಕಾಂಬಿಕಾ ಸ್ತೋತ್ರ’ದ ಭರತನಾಟ್ಯ ಪ್ರದರ್ಶನವನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ದೇವಸ್ಥಾನದ ಅರ್ಚಕ ನರಸಿಂಹ ಅಡಿಗ ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಮಲೇಷಿಯಾದಲ್ಲಿ ಜರುಗಿದ 32ನೇ ಮಲೇಷಿಯನ್ ಅಂತರಾಷ್ಟ್ರೀಯ ಒಪನ್ ಮಾಸ್ಟರ‍್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳ್ಳೆ ಸರಕಾರಿ ಹೌಸ್ಕೂಲಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿರುವ, ಬೈಂದೂರು ಮಯ್ಯಾಡಿಯ ಶಾಂತಾ ಕುಮಾರಿ ಜಿ. ಅವರು ಪ್ರತ್ಯೇಕ ವಿಭಾಗಗಳನ್ನು 2 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದಿದ್ದಾರೆ. ಶಾಂತಾಕುಮಾರಿ ಅವರು ಅಥ್ಲೆಟಿಕ್ಸ್‌ನ ಹೈಜಂಪ್ ಹಾಗೂ ತ್ರಿಬಲ್ ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರೆ, ಲಾಂಗ್ ಜಂಪ್ ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಸ್ವರ್ಧೆಯಲ್ಲಿ ಭಾಗವಹಿಸಿದ ಶಾಂತಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದಾರೆ. 2013ರಿಂದಲೂ ಇಂಡಿಯನ್ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಶಾಂತಾ ಕುಮಾರಿ ಅವರು ಪ್ರತಿ ವರ್ಷವೂ ವಿವಿಧ ವಿಭಾಗಳಲ್ಲಿ ಪದಕ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಲು ಅರ್ಹತೆ ಪಡೆಯುತ್ತಲೇ ಬಂದಿದ್ದಾರೆ. ಪ್ರಸಕ್ತ ವರ್ಷ ಮಂಗಳೂರಿನಲ್ಲಿ ನಡೆದ ನ್ಯಾಶನಲ್ ಅಥ್ಲೆಟ್ಸ್‌ನಲ್ಲಿ 1 ಚಿನ್ನ, 2 ಬೆಳ್ಳಿಯ ಪದಕವನ್ನು ಗೆದ್ದಿದ್ದು ಮೊದಲ ಭಾರಿಗೆ ಅಂತರಾಷ್ಟ್ರೀಯ ಒಪನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇರಾನಿನಲ್ಲಿ ಬಂಧಿತರಾಗಿರುವ ಭಟ್ಕಳ್ ಪ್ರದೇಶದ 23 ಮಂದಿಯನ್ನು ಬಿಡುಗಡೆಗೊಳ್ಳಿಸುವ ಪ್ರಯತ್ನಕ್ಕಾಗಿ ಕೆ.ಏನ್.ಆರ್ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ ನೇತೃತ್ವದ ತಂಡ ಇಂದು ದುಬೈಯಲ್ಲಿರುವ ಭಾರತದ ಉಪ ರಾಯಬಾರಿ ಕಚೇರಿಗೆ ಭೇಟಿ ನೀಡಿ ಉಪ ರಾಯಬಾರಿಗಳಾದ ವಿಪುಲ್ ಅವರೊಂದಿಗೆ ಚರ್ಚೆ ನಡೆಸಿದರು. ಶೀಘ್ರ ಈ ಬಗ್ಗೆ ಇರಾನಲ್ಲಿರುವ ಭಾರತ ರಾಯಬಾರಿಯವರೊಂದಿಗೆ ಚರ್ಚೆ ನಡಿಸಿ ಬಿಡುಗಡೆಗೆ ಬೇಕಾದ ವ್ಯವಸ್ಥೆ ಮಾಡುವುದಾಗಿ ವಿಪುಲ್ ಅವರು ಭರವಸೆ ನೀಡಿದ್ದಾರೆ. ಭಟ್ಕಳ್ ಸಂಘಟನೆಯ ಮುಖ್ಯಸ್ಥರಾದ ಸಯೀದ್ ಖಲೀಲ್ ಹಾಗು ಕೆ ಏನ್ ಆರ್ ಐ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮೊಹಮ್ಮದ್ ಚರ್ಚೆಯಲ್ಲಿ ಭಾಗವಹಿಸಿದರು. ಪ್ರದಾನ ಕಾರ್ಯದರ್ಶಿ ಪ್ರಭಾಕರ್ ಅಂಬಲತೆರೆ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜರ್ಮನಿಯ ಇಂಟರ್ ನ್ಯಾಶನಲ್ ಓಪನ್ ಯೂವರ್‌ಸಿಟಿ ವತಿಯಿಂದ ಕಾರ್ಮಿಕ ಮುಖಂಡ ಹಾಗೂ ಕಾರ್ಮಿಕ ವೇದಿಕೆಯ ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷ, ಜೆಡಿಎಸ್‌ನ ಯುವ ನಾಯಕ ರವಿ ಶೆಟ್ಟಿ ಬೈಂದೂರು ಇವರಿಗೆ ಇತ್ತೀಚೆಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಈ ಹಿನ್ನೆಲೆಯಲ್ಲಿ ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಾ ಭವನದಲ್ಲಿ ಬೈಂದೂರು ಬ್ಲಾಕ್ ಜೆಡಿಎಸ್ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು. ಬೈಂದೂರು ಬ್ಲಾಕ್ ಜೆಡಿಎಸ್ ಅಧ್ಯಕ್ಷ ಯು. ಸಂದೇಶ ಭಟ್ ರವರು ರವಿ ಶೆಟ್ಟಿ ಇವರಿಗೆ ಶುಭ ಹಾರೈಸಿ ಅಭಿನಂದಿಸಿ ಮಾತನಾಡುತ್ತಾ ರವಿ ಶೆಟ್ಟಿ ಅವರು ಕಾರ್ಮಿಕರು ಹಾಗೂ ಷೋಷಿತರು, ರೈತ ಪರ, ಹಲವಾರು ಹೋರಾಟ ನಡೆಸಿ ಕಾರ್ಮಿಕ ಸಂಘಟನೆ ಮುನ್ನೆಡೆಸಿರುತ್ತಾರೆ ಮತ್ತು ಜೆಡಿಎಸ್ ವತಿಯಿಂದ ಜನಪಯೋಗಿ ಕೆಲಸಗಳನ್ನು ಮಾಡಿರುವುದರಿಂದ ಸಂಧಿರುವ ಗೌರವ ಡಾಕ್ಟರೇಟ್ ಸಾಮಾಜಿಕ ಮತ್ತು ಷೋಷಿತರ ಪರವಾಗಿ ದುಡಿಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿದೆ ಹಾಗೂ ಯುವ ಸಮುದಾಯಕ್ಕೆ ಸ್ಪೂರ್ತಿಯಾಗಲಿ ಎಂದು ಹೇಳಿದರು. ಪಕ್ಷದ ಹಿರಿಯ ನಾಯಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ತೆಕ್ಕಟ್ಟೆ ಕುವೆಂಪು ಮಾದರಿ ಶಾಲೆಯಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಅತಿಥೇಯ ಕುವೆಂಪು ಶತಮಾನೋತ್ಸವ ಮಾದರಿ ಶಾಲೆ, ತೆಕ್ಕಟ್ಟೆ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನಗಳಿಸಿದೆ. ಶಾಲೆಯ ವಿದ್ಯಾರ್ಥಿಗಳಾದ ಪ್ರಶಾಂತ, ಆದಿತ್ಯ, ಅಂಜನ್, ಪ್ರೀತಮ್ ಮತ್ತು ಸನ್ನಿಧಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಲ್ಯಾಡಿ ಸದಾರಾಮ ಶೆಟ್ಟಿ ತರಬೇತಿ ನೀಡಿದ್ದಾರೆ. ಚಿತ್ರದಲ್ಲಿ ಮುಖ್ಯೋಪಾಧ್ಯಾಯಿನಿ ಲಲಿತಾ ಸಖಾರಾಮ್, ಶಿಕ್ಷಕರಾದ ವೇಣುಗೋಪಾಲ ಹೆಗ್ಡೆ, ಸದಾನಂದ ಶೆಟ್ಟಿ, ಸೀತಾಲಕ್ಷ್ಮಿ, ಪಾರ್ವತಿ ಮುದ್ದೋಡಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸದಾರಾಮ ಶೆಟ್ಟಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಕಾರ್ತ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರ್ ಗೇಮ್ಸ್‌ನಲ್ಲಿ ಕುಂದಾಪುರ ಗಂಗೊಳ್ಳಿಯ ಚೆಸ್ ತಾರೆ ಕಿಶನ್ ಗಂಗೊಳ್ಳಿ ಅವರು ಪುರುಷರ ವಿಭಾಗದ ಚೆಸ್ ಬಿ೨/ಬಿ೩ ವೈಯಕ್ತಿಕ ರ‍್ಯಾಪಿಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಮೂಲತಃ ಗಂಗೊಳ್ಳಿಯವರಾದ, ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿರುವ ಗೀತಾ ಗಂಗೊಳ್ಳಿ ಅವರ ಪುತ್ರರಾದ ಕಿಶನ್ ಗಂಗೊಳ್ಳಿ ತಮ್ಮ ಅಂಧತ್ವವನ್ನು ಮೆಟ್ಟಿ ನಿಂತು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ್ದಾರೆ. 2012ರಲ್ಲಿ ಚೆನ್ನೈನಲ್ಲಿ ನಡೆದ ಅಂಧರ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಕಿಶನ್ ಅವರು ೨೦೧೩ರಿಂದ ೨೦೧೭ರ ತನಕ ಸತತ ನಾಲ್ಕು ಬಾರಿ ಅಂಧರ ರಾಷ್ಟ್ರೀಯ ಚೆಸ್ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದರು. ಈಗ ಮತ್ತೊಂದು ಸಾಧನೆ ಮುಡಿಗೇರಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಜೆ.ಎಲ್.ಬಿ ರಸ್ತೆ, ಭಂಡಾರ್‌ಕಾರ‍್ಸ್ ಕಾಲೇಜ್ ಹತ್ತಿರ ಸದ್ಗುರು ಟವರ‍್ಸ್‌ನಲ್ಲಿ ಕಾರ‍್ಯ ನಿರ್ವಹಿಸುತ್ತಿರುವ ಸಪ್ತಗಿರಿ ಸೂಪರ್ ಮಾರ್ಕೆಟ್ ವರ್ಷಾಚರಣೆ ನಿಮಿತ್ತ ಗ್ರಾಹಕರಿಗೆ ಲಕ್ಕಿ ಕೂಪನ್ ಯೋಜನೆಗೆ ಬುಧವಾರ ವಿದ್ಯುಕ್ತ ಚಾಲನೆ ನೀಡಲಾಯಿತು. ಕಳೆದ ಒಂದು ವರ್ಷದಿಂದ ಪರಿಸರದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದ ಸೂಪರ್ ಮಾರ್ಕೆಟ್ ಗುಣಮಟ್ಟದ ಆಹಾರ ಪದಾರ್ಥ, ಕಾಸ್ಮಟಿಕ್, ಗೃಹಪಯೋಗಿ ವಸ್ತುಗಳ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ನೀಡುತ್ತಾ ಬಂದಿದೆ. ಸಾರ್ವಜನಿಕರ ಸಹಕಾರದಿಂದ ಉತ್ತೇಜಿತರಾದ ಮಾರ್ಕೆಟಿಂಗ್ ಪಾಲುದಾರ ಚಂದ್ರಶೇಖರ ಇವರಿಗೆ ಗ್ರಾಹಕರಿಗೆ ಏನಾದರೂ ಹೊಸತನ್ನು ಕೊಡಬೇಕು ಎಂಬ ಚಿಂಥನೆಯೇ ಲಕ್ಕಿಕೂಪನ್ ಯೋಜನೆ. ಮಾರ್ಕೆಟ್‌ನಲ್ಲಿ ೨ ಸಾವಿರ ರೂ. ಸಾಮಗ್ರಿ ವಿಕ್ರಯಿಸಿದವರಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ. ಈ ವ್ಯವಸ್ಥೆ ಗಣರಾಜ್ಯೋತ್ಸವ ತನಕ ಇದ್ದು, ಗಣರಾಜ್ಯೊತ್ಸ್ಸವದಂದೇ ಲಕ್ಕಿ ಕೂಪನ್ ಡ್ರಾ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ವಿಜೇತರ ಹೆಸರನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ. ಸೂಪರ್ ಬಂಪರ್ ಬಹುಮಾನ ಸ್ಕೂಟರ್, ಪ್ರಥಮ ೩೨ ಇಂಚು ಟಿವಿ, ದ್ವಿತೀಯ ಪ್ರಿಜ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ನೂತನ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮದ ಶುಕ್ರವಾರ ದೇವಳದ ವಠಾರದಲ್ಲಿ ಜರುಗಿತು. ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ದೇವಳದ ವೆಬ್‌ಸೈಟ್ www.vatthinakattemahasathi.com ಲೊಕಾರ್ಪಣೆಗೊಳಿಸಿ ಮಾತನಾಡಿ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನವು ಕಾರಣಿಕ ಸ್ಥಳವಾಗಿದ್ದು, ಸಾವಿರಾರು ಭಕ್ತರು ನಂಬಿ ಬಂದಿದ್ದಾರೆ. ದೇವಸ್ಥಾನದ ಐತಿಹ್ಯ, ಕಾರ್ಯಕ್ರಮಗಳ ಮಾಹಿತಿಗಳನ್ನೊಳಗೊಂಡ ವೆಬ್‌ಸೈಟ್ ಆರಂಭಿಸಿರುವುದು ಭಕ್ತರಿಗೆ ಅನುಕೂಲವಾಗಿದೆ ಎಂದರು. ಈ ಸಂದರ್ಭ ದೇವಸ್ಥಾನದ ವತಿಯಿಂದ ಶಾಸಕರನ್ನು ಗೌರವಿಸಲಾಯಿತು. ಈ ಸಂದರ್ಭ ಬಿ. ಮಾಧವ ರಾವ್, ನಾರಾಯಣ ದೇವಾಡಿಗ, ಶ್ರೀನಿವಾಸ್, ರವೀಂದ್ರ ಶಾನುಭೋಗ್, ದೀಪಕ್‌ಕುಮಾರ್ ಶೆಟ್ಟಿ, ಸೇವಾ ಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಅರ್ಚಕ ಬಿ. ಕೃಷ್ಣಮೂರ್ತಿ ನಾವಡ, ಸದಸ್ಯರಾದ ಶಂಕರ ಮೊಗವೀರ, ಸತ್ಯಪ್ರಸನ್ನ, ವೆಬ್‌ಸೈಟ್ ರೂಪಿಸಿದ ಸಮಷ್ಠಿ ಮೀಡಿಯಾ ವೆಂಚರ‍್ಸ್ ಸಂಸ್ಥೆಯ ಸುನಿಲ್ ಹೆಚ್. ಜಿ. ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮೂಕಾಂಬಿಕಾ ರೈಲ್ವೆ ನಿಲ್ದಾಣದ ಎದುರಿನ ಪ್ರಸಿದ್ಧ ಹೋಟೆಲ್ ಅಂಬಿಕಾ ಇಂಟರ್‌ನ್ಯಾಷನಲ್‌ನಲ್ಲಿ ನೂತನವಾಗಿ ಆರಂಭಗೊಂಡ ನಿತ್ಯ ಸಾಗರ ವೆಜ್ ರೆಸ್ಟೊರೆಂಟ್ ಹಾಗೂ ಕೋಸ್ಟಲ್ ಕರಿ ನಾನ್ ವೆಜ್ ಬಾರ್ ಮತ್ತು ರೆಸ್ಟೊರೆಂಟ್‌ಗಳಿಗೆ ಶುಕ್ರವಾರ ವಿವಿಧ ದೇವತಾ ಕಾರ್ಯದ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭ ಹೋಟೆಲ್ ಅಂಬಿಕಾ ಇಂಟರ್‌ನ್ಯಾಷನಲ್‌ನ ಆಡಳಿತ ನಿರ್ದೇಶಕ ಜಯಾನಂದ ಹೋಬಳಿದಾರ್, ಮೂಕಾಂಬಿಕಾ ಜಯಾನಂದ ಹೋಬಳಿದಾರ್, ನಿತ್ಯಾ ಫುಡ್ ಮ್ಯಾನೆಜ್‌ಮೆಂಟ್ ಸರ್ವಿಸನ್ ಸಂಸ್ಥೆಯ ನಿತೀಶ್ ಶೆಟ್ಟಿ, ರವಿ ಅಂಚನ್, ನಾಗರಾಜ ಶೆಟ್ಟಿ, ಸುರೇಂದ್ರ ಶೆಟ್ಟಿ, ಟೆಂಪೋ, ರಿಕ್ಷಾ, ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ಬಟವಾಡಿ, ಸದಸ್ಯರಾದ ಅಣ್ಣಪ್ಪ ಪೂಜಾರಿ, ರಾಮ ದೇವಾಡಿಗ, ವಿಹಿಂಪ ಉಪ್ಪಂದ ಘಟಕದ ಅಧ್ಯಕ್ಷ ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. Also Read: ಸರ್ವ ಸುಸಜ್ಜಿತ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್

Read More