ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಮಲೇಷಿಯಾದಲ್ಲಿ ಜರುಗಿದ 32ನೇ ಮಲೇಷಿಯನ್ ಅಂತರಾಷ್ಟ್ರೀಯ ಒಪನ್ ಮಾಸ್ಟರ‍್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳ್ಳೆ ಸರಕಾರಿ ಹೌಸ್ಕೂಲಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿರುವ, ಬೈಂದೂರು ಮಯ್ಯಾಡಿಯ ಶಾಂತಾ ಕುಮಾರಿ ಜಿ. ಅವರು ಪ್ರತ್ಯೇಕ ವಿಭಾಗಗಳನ್ನು 2 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದಿದ್ದಾರೆ.
ಶಾಂತಾಕುಮಾರಿ ಅವರು ಅಥ್ಲೆಟಿಕ್ಸ್‌ನ ಹೈಜಂಪ್ ಹಾಗೂ ತ್ರಿಬಲ್ ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರೆ, ಲಾಂಗ್ ಜಂಪ್ ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಸ್ವರ್ಧೆಯಲ್ಲಿ ಭಾಗವಹಿಸಿದ ಶಾಂತಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದಾರೆ.
2013ರಿಂದಲೂ ಇಂಡಿಯನ್ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಶಾಂತಾ ಕುಮಾರಿ ಅವರು ಪ್ರತಿ ವರ್ಷವೂ ವಿವಿಧ ವಿಭಾಗಳಲ್ಲಿ ಪದಕ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಲು ಅರ್ಹತೆ ಪಡೆಯುತ್ತಲೇ ಬಂದಿದ್ದಾರೆ. ಪ್ರಸಕ್ತ ವರ್ಷ ಮಂಗಳೂರಿನಲ್ಲಿ ನಡೆದ ನ್ಯಾಶನಲ್ ಅಥ್ಲೆಟ್ಸ್‌ನಲ್ಲಿ 1 ಚಿನ್ನ, 2 ಬೆಳ್ಳಿಯ ಪದಕವನ್ನು ಗೆದ್ದಿದ್ದು ಮೊದಲ ಭಾರಿಗೆ ಅಂತರಾಷ್ಟ್ರೀಯ ಒಪನ್ ಮಾಸ್ಟರ‍್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಾಂತಾ ಕುಮಾರಿ ಅವರು ಅಂತರಾಷ್ಟೀಯ ಸ್ವರ್ಧೆಯಲ್ಲಿ ಭಾಗವಹಿಸುವ ಪೂರ್ವಭಾವಿಯಾಗಿ ಸುದ್ದಿಮನೆ ಹಾಗೂ ಕುಂದಾಪ್ರ ಡಾಟ್ ಕಾಂ ನಲ್ಲಿ ಅವರ ಸಾಧನೆಯ ಕುರಿತು ವಿಸ್ತೃತ ವರದಿ ಮಾಡಲಾಗಿತ್ತು. ವರದಿಗೆ ಸ್ವಂದಿಸಿದ್ದ ಹಲವರು ಶಾಂತಾ ಕುಮಾರಿ ಅವರು ರೂ.1,20,000 ಮೊತ್ತವನ್ನುಅವರ ಖಾತೆಗೆ ಜಮಾ ಮಾಡಿ ಅಂತರಾಷ್ಟ್ರೀಯ ಸ್ವರ್ಧೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದ್ದರು. ಈದೀಗ ಎಲ್ಲರ ಹಾರೈಕೆಯಂತೆಯೇ ಶಾಂತಾ ಅವರು ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದು ಭರವಸೆ ಮೂಡಿಸಿದ್ದಾರೆ.
ಮೊದಲ ಭಾರಿಗೆ ಅಂತರಾಷ್ಟ್ರೀಯ ಛಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದು ಖುಷಿ ತಂದಿತ್ತು. ಭಾಗವಹಿಸಿದ ಮೇಲೆ ಗೆಲುವು ಸಾಧಿಸಿ ಭಾರತಕ್ಕೆ ಹಿಂತಿರುಗಬೇಕೆಂಬ ಆಕಾಂಕ್ಷೆ ಇತ್ತು. ಅದರಂತೆ ಮೂರು ಪದಕ ಗೆದ್ದುಕೊಂಡಿದ್ದೇನೆ. ಅಂತರಾಷ್ಟ್ರೀಯ ಮಟ್ಟದ ತನಕ ಭಾಗವಹಿಸಲು ನನ್ನ ಸ್ನೇಹಿತರು, ಕುಟುಂಬಿಕರು ಹಾಗೂ ಹಲವು ಕ್ರೀಡಾ ಪ್ರೋತ್ಸಾಹಕರು ನನ್ನ ನೆರವಿಗೆ ಬಂದಿದ್ದಾರೆ. ಅವರೆಲ್ಲರ ನಿರೀಕ್ಷೆಯನ್ನು ಜಯಿಸಿದ್ದೇನೆ ಎಂದು ಭಾವಿಸುತ್ತೇನೆ. ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದು ಹೆಮ್ಮೆ ತಂದಿದೆ – ಶಾಂತಾ ಕುಮಾರಿ, ಅಥ್ಲೆಟಿ
ಓದಿ ► ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ಅಣಿಯಾಗುತ್ತಿದ್ದಾರೆ ಬೈಂದೂರಿನ ಶಾಂತಾಕುಮಾರಿ – https://kundapraa.com/?p=29710 .