Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇತ್ತೀಚೆಗೆ ನಿಧನರಾದ ಡಾ.ಹೆಚ್.ವಿ ನರಸಿಂಹ ಮೂರ್ತಿಯವರು ಪ್ರಕಟಿಸಿದ  ಬರಹಗಳ ಪುಸ್ತಕ ಪ್ರದರ್ಶನ ಮತ್ತು ಅವರಿಗೆ ಶೃದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಗ್ರಂಥಾಲಯದ ಗ್ರಂಥಪಾಲಕರಾದ ಆನಂದ ಅವರು ಮಾತನಾಡಿ ನರಸಿಂಹಮೂರ್ತಿಗಳು ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದರು. ಆದರೆ ಇದಕ್ಕಿಂತ ಹೆಚ್ಚಾಗಿ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಕವಾಗಿ ಕಾಲೇಜು ಗುರುತಿಸಿಕೊಳ್ಳುವಲ್ಲಿ ಅವರ ಸೇವೆ ಅಪಾರ ,ಅನನ್ಯ ಮತ್ತು ಅಜರಾಮರವಾದುದು. ಅವರು ಸಂಪಾದಕರಾಗಿದ್ದ ದರ್ಶನ ವಾರ್ಷಿಕ ಸಂಚಿಕೆ, ಆಧ್ಯಾತ್ಮಿ ಶಿಬಿರ, ಅಧ್ಯಾಪಕರ ಸಂಘ ಎನ್.ಎಸ್.ಎಸ್. ಹೀಗೆ ಹತ್ತು ಹಲವು ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಎಂದು ಹೇಳಿದರು. ಕುಂದಾಪುರದ ಕುಂದೇಶ್ವರ ದೇವಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು. ದೇವಾಲಯವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸಿದವರು. ಅವರ ಸುಮಾರು 88 ಕೃತಿಗಳನ್ನು ಪ್ರದರ್ಶಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರ ಅಭಿಮಾನಿ ಬಳಗ ಮತ್ತು ಬಿಜೆಪಿಯ ಪ್ರಮುಖ ಕಾರ್ಯಕರ್ತರು ಕೋಟ ರಾಷ್ಟ್ರೀಯ ಹೆದ್ದಾರಿ ಅಮೃತೇಶ್ವರಿ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಗೋಪಾಲ ಬಂಗೇರ ಎಂ.ಸುಬ್ರಾಯ ಆಚಾರ್ಯ,ಉಮೇಶ್ ಪೂಜಾರಿ ಕಲ್ಮಾಡಿ,ಸಂಜೀವ ಪೂಜಾರಿ ,ಶ್ರೀಧರ ಗಾಣಿಗ ಕಲ್ಮಾಡಿ,ಅನಂತ ಪ್ರಭು,ಅಭಿಮಾನಿ ಬಳಗದ ಪ್ರಸಾದ್ ಬಿಲ್ಲವ,ಸುರೇಶ್ ಗಿಳಿಯಾರು ಮಂಜುನಾಥ ಗಿಳಿಯಾರು, ರಾಘವೇಂದ್ರ ಶೆಟ್ಟಿ ಗಿಳಿಯಾರು, ಶಿವರಾಜ್ ಪೂಜಾರಿ ,ಅವಿನಾಶ್ ಶೆಟ್ಟಿ,ಭರತ್ ಶ್ರೀಯಾನ್ ಕಲ್ಮಾಡಿ,ರಘು,ಪೂಜಾರಿ,ರಾಜು ಕೆ.ಎಸ್,ಉದಯ ತಿಂಗಳಾಯ,ಪ್ರಶಾಂತ್ ಸೂರ್ಯ,ನವೀನ್ ಮಣೂರು ಮುಂತಾದವರು ಉಪಸ್ಥಿತರಿದ್ದರು. ಕೋಟ ಶ್ರೀನಿವಾಸ ಪೂಜಾರಿಯವರ ಅಭಿಮಾನಿಗಳು ಪಟಾಕಿ ಸಿಡಿಸಿದ ನಂತರ ಆ ಸ್ಥಳವನ್ನು ಸ್ವಚ್ಚಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪ್ರಾತ್ರರಾದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ರಾಧೇಯ ಎಂ. ಕಾಮತ್ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಮಟ್ಟದಲ್ಲಿ 76ನೇ ರ‍್ಯಾಂಕ್ ಪಡೆದುಕೊಂಡಿರುತ್ತಾನೆ. ಈತ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಮೋಹನ ಕಾಮತ್ ಹಾಗೂ ಗಿರೀಜಾ ಎಂ. ಕಾಮತ್‌ರವರ ಸುಪುತ್ರ. ಇವರ ಸಾಧನೆಗೆ ಕಾಲೇಜಿನ ಅಧ್ಯಕ್ಷರು, ಶಾಸಕರೂ ಆಗಿರುವ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ವೀರ ವಿಠಲ ಭಜನಾ ಮಂಡಳಿಯ ಸದಸ್ಯರು ಗಂಗೊಳ್ಳಿ ನಿನಾದ ಸಂಸ್ಥೆಯ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಪಂಡರಪುರದ ಶ್ರೀ ವಿಠಲ ರಕುಮಾಯಿ ದೇವಸ್ಥಾನದಲ್ಲಿ ಭಜನಾ ಸೇವೆ ಸಮರ್ಪಿಸಿದರು. ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ ನೇತೃತ್ವದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಭಜನೆ ನಡೆಸಿದ ಭಜನಾ ಮಂಡಳಿಯ ಸದಸ್ಯರು ಕೆಲ ಕಾಲ ಭಕ್ತರು ಭಾವಪರವಶರನ್ನಾಗಿ ಮಾಡಿದರು. ದೇವಸ್ಥಾನದ ಒಳಗೆ ಭಜನೆ ಮಾಡುವ ಅವಕಾಶ ದೊರೆತಿರುವುದು ಅವಿಸ್ಮರಣೀಯ. ದೇವಸ್ಥಾನದಲ್ಲಿ ಭಜನೆ ನಡೆಸಿದ ಒಂದೊಂದು ಕ್ಷಣ ಕೂಡ ವಿಶಿಷ್ಟ ರೋಮಾಂಚನ ನೀಡಿತ್ತು ಎಂದು ಭಜನಾ ಸೇವೆ ಅರ್ಪಿಸಿದ ಸದಸ್ಯರು ಧನ್ಯತೆಯಿಂದ ನುಡಿದಿದ್ದಾರೆ. ಇಂತಹ ಅದ್ಭುತ ಅವಕಾಶ ಕಲ್ಪಿಸಿದ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯ ಕಿಂಡರ್ ಗಾರ್ಟನ್ ವಿಭಾಗದಲ್ಲಿ ಬಣ್ಣಗಳಲ್ಲಿ ರಂಗಾದ ಕೆಂಪು ಬಣ್ಣದ ದಿನವನ್ನು ಪುಟಾಣಿಗಳು ವಿಶೇಷವಾಗಿ ಆಚರಿಸಿದರು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಪುಟಾಣಿಗಳಿಗೆ ಬಣ್ಣವನ್ನು ಪರಿಚಯಿಸುವುದು. ಸಾಮಾನ್ಯವಾಗಿ ಮಕ್ಕಳು ಆಕರ್ಷಿತರಾಗುವುದು ಬಣ್ಣದಿಂದ ಹಾಗಾಗೀ ಪುಟಾಣಿಗಳಿಗೆ ಮೊದಲು ಬಣ್ಣಗಳನ್ನು ಪರಿಚಯಿಸಿ ನಂತರ ಇತರ ವಿಷಯಗಳನ್ನು ತಿಳಿಸುವುದು ಉತ್ತಮ ಕಲಿಕೆ ಎಂಬುದು ನಮ್ಮ ಅನಿಸಿಕೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪುಟಾಣಿಗಳೆಲ್ಲರೂ ಕೆಂಪು ಬಣ್ಣದ ಉಡುಗೆ ತೊಟ್ಟು ಶಾಲೆಗೆ ಹಾಜರಾದರು ಜೊತೆಗೆ ಪ್ರತಿ ತರಗತಿ ಕೋಣೆಯಲ್ಲಿ ಕೂಡ ಕೆಂಪು ಬಣ್ಣದ ವಿವಿಧ ಅಲಂಕಾರಿಕ ವಸ್ತುಗಳು ಬಲೂನ್, ಆಟಿಕೆಗಳು, ಹಣ್ಣುಗಳ ಹಾಗೂ ವಿವಿಧ ರೀತಿಯ ನಕ್ಷೆಗಳು ತರಗತಿ ಕೋಣೆಯಲ್ಲಿ ರಾರಾಜಿಸುತ್ತಿದ್ದವು ಮತ್ತು ಶಿಕ್ಷಕಿಯರು ಕೆಂಪು ಬಣ್ಣದ ಸೀರೆ ಉಟ್ಟು ಪುಟಾಣಿಗಳ ಜೊತೆ ಸೇರಿ ವೃತ್ತದ ಸಮಯದಲ್ಲಿ ಹಲವಾರು ಚಟುವಟಿಕೆಗಳನ್ನು ಮಾಡಿ ಹಾಡಿ ಕುಣಿದರು. ಪುಟಾಣಿಗಳು ವಿವಿಧ ಚಿತ್ರಗಳಿಗೆ ಕೆಂಪು ಬಣ್ಣವನ್ನು ತುಂಬಿ ಆನಂದಿಸಿದರು. ಶಿಕ್ಷಕಿಯರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಗೋಳಿಹೊಳೆ ಶ್ರೀ ಮೂಕಾಂಬಿಕಾ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ಚುನಾವಣೆಯ ಕುರಿತು ಜ್ಞಾನಾನುಭವ ನೀಡುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಯಿತು. ಶಾಲೆಯ ವಿದ್ಯಾರ್ಥಿ ನಾಯಕ ಹಾಗೂ ಉಪನಾಯಕನ ಆಯ್ಕೆಯನ್ನು ವಿಧಾನಸಭಾ ಚುನಾವಣಾ ಮಾದರಿಯಂತೆ ನಡೆಸಲಾಯಿತು. ಎಂಟು ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಎರಡು ದಿನ ಶಾಲೆಯಲ್ಲಿ ಪ್ರಚಾರವನ್ನು ಕೈಗೊಂಡರು. ಎರಡು ಮತಕೇಂದ್ರಗಳಲ್ಲಿ ಶಾಲಾ ಗುರುತಿನ ಚೀಟಿಯೊಂದಿಗೆ ಬಂದು ತಮ್ಮ ಆಯ್ಕೆಯ ನಾಯಕ, ಉಪನಾಯಕನಿಗೆ ಮತನೀಡಿದರು. ನಂತರ ನಡೆದ ಮತ ಎಣಿಕೆಯಲ್ಲಿ ನಾಯಕನಾಗಿ ಸುಚಿ ಶೆಟ್ಟಿ, ಉಪನಾಯಕನಾಗಿ ಅಭೀಷ್ ಮೊಗವೀರ ಆಯ್ಕೆಯಾದರು. ಪ್ರಾಂಶುಪಾಲ ಚೇತನ್ ಕೆ. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಶಿಕ್ಷಕರು ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ್ ಭಾರತ್ ಅಭಿಯಾನಕ್ಕೆ ಸ್ವಚ್ಛ್ ಭಾರತ್ ಸಮ್ಮರ್ ಇಂಟರ್ನ್‌ಶಿಪ್ ಪ್ರೋಗ್ರಾಂ ಯೋಜನೆಯಲ್ಲಿ ತಮ್ಮದೇ ಆಗಿರುವ ಕೊಡುಗೆ ನೀಡಲು ಕೊಲ್ಲೂರು ಮಹಿಳಾ ಮಂಡಲದ ಆಸಕ್ತ ಮಹಿಳಾ ಸದಸ್ಯರು ಮುಂದೆ ಬಂದಿದ್ದಾರೆ. ಪ್ರತಿದಿನ4-5 ಗಂಟೆ ಸ್ವಚ್ಛತಾ ಅಭಿಯಾನಕ್ಕಾಗಿ ಮೀಸಲಿಟ್ಟಿರುವ ಮಹಿಳೆಯರು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಹಾಗೂ ಮೈದಾನವನ್ನು ಸ್ವಚ್ಛಗೊಳಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ನಿಗದಿತ ಸಮಯದಲ್ಲಿ ಸ್ವಚ್ಛ್ ಭಾರತ್ ಸಮ್ಮರ್ ಇಂಟರ್ನ್‌ಶಿಪ್ ಪ್ರೋಗ್ರಾಂನಡಿ ಕೇಂದ್ರ ಸರ್ಕಾರ ನೀಡುವ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಬೇಕೆಂಬ ನೆಲೆಯಲ್ಲಿ ನಾವೆಲ್ಲರೂ ಒಂದಾಗಿ ಪ್ರಯತ್ನಿಸಲಿದ್ದೇವೆ. ನಮ್ಮ ಮನೆಕೆಲಸಗಳನ್ನು ತ್ವರಿತವಾಗಿ ಮುಗಿಸಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಒಂದಿಷ್ಟು ಸಮಯವನ್ನು ಇದಕ್ಕಾಗಿ ಮೀಸಲಿರಿಸಿದ್ದು, ಜುಲೈ31ರ ಒಳಗೆ ನೂರು ಗಂಟೆ ಕೆಲಸ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಸಂಘದ ಅಧ್ಯಕ್ಷೆ ಪ್ರಸನ್ನಾ ಶರ್ಮ ಹಾಗೂ ಕಾರ್ಯದರ್ಶಿ ಲತಾ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಶಾಲೆಯ ಸುತ್ತಲೂ ನೀರು ತುಂಬಿಕೊಂಡಿರುವುದರಿಂದ ಮಕ್ಕಳು ಶಾಲೆಗೆ ಬರಲು ತೊಂದರೆಯಾಗುತ್ತಿದೆ. ಶಾಲಾ ವಠಾರ ತಗ್ಗು ಪ್ರದೇಶವಾಗಿರುವುದರಿಂದ ಮಳೆ ನೀರು ಈ ಪರಿಸರದಲ್ಲಿ ಸಂಗ್ರಹಗೊಳ್ಳುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಖಾರ್ವಿಕೇರಿ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದ್ದು, ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡದಿರುವುದರಿಂದ ಮಳೆ ನೀರು ನಿಂತುಕೊಳ್ಳಲಾರಂಭಿಸದೆ. ಶಾಲಾ ವಠಾರದಲ್ಲಿ ಮಳೆ ನೀರು ನಿಂತು ಮಕ್ಕಳಿಗೆ ತೊಂದರೆಯಾಗುತ್ತಿದ್ದರೂ ಸ್ಥಳೀಯಾಡಳಿತ ಈವರೆಗೆ ಯಾವುದೇ ಕ್ರಮಕೈಗೊಳ್ಳದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಆದಷ್ಟು ಶೀಘ್ರ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡುವಂತೆ ಪೋಷಕರು ಆಗ್ರಹಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರು ಗ್ರಾಮದ ಕಾಕ್ತೋಟ ಎಂಬಲ್ಲಿ ಶುಕ್ರವಾರ ದೈವಸ್ಥಾನದ ಆವರಣ ಗೋಡೆ ಕುಸಿದು ಸ್ನಾತಕೊತ್ತರ ಪದವಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸೇನಾಪುರಮನೆ ಚಂದ್ರಶೇಖರ ಶೆಟ್ಟಿ-ಹೇಮಾ ದಂಪತಿಯ ಮಗಳು ಧನ್ಯಾ ಕೆ.(22) ಮೃತ ದುರ್ದೈವಿ. ಘಟನೆಯ ವಿವರ: ಧನ್ಯಾ ಮನೆಯಿಂದ 100 ಮೀಟರು ಅಂತರದಲ್ಲಿದ್ದ ಜಟ್ಟಿಗೇಶ್ವರ ದೈವಸ್ಥಾನಕ್ಕೆ ಹೋಗುತ್ತಿದ್ದಾಗ ಅದರ ಪೂರ್ವ ಪಾರ್ಶ್ವದ ಆವರಣ ಕುಸಿದು ಅವಳ ಮೇಲೆ ಬಿದ್ದಿದೆ. ಅದೇ ವೇಳೆಗೆ ಬಿರುಸಾದ ಮಳೆ ಬೀಳುತ್ತಿತ್ತು. ಆವರಣದ ಕಲ್ಲುಗಳ ಅಡಿ ಸಿಲುಕಿದ್ದ ಅವಳ ಮೇಲೆ ನೀರು ಹರಿದ ಕಾರಣ ಉಸಿರುಕಟ್ಟಿ ಮೃತಳಾದಳೆಂದು ಶಂಕಿಸಲಾಗಿದೆ. ಆ ದಾರಿಯಾಗಿ ಕಿರಿಮಂಜೇಶ್ವರ ಸರ್ಕಾರಿ ಪ್ರೌಢಶಾಲೆಗೆ ಹೋಗುತ್ತಿದ್ದ ೧೦ನೇ ತರಗತಿ ವಿದ್ಯಾರ್ಥಿ ಕೃತನ್ ಶೆಟ್ಟಿ ಕಲ್ಲುಗಳ ಅಡಿ ಕೊಡೆ, ತಲೆ ಕೂದಲು ನೋಡಿ ಆಕೆಯ ಮನೆಗೆ ಓಡಿಹೋಗಿ ವಿಷಯ ತಿಳಿಸಿದ್ದಾನೆ. ನೆರೆಕೆರೆಯವರು ಬಂದು ಕಲ್ಲುಗಳನ್ನು ಸರಿಸಿ ಅವಳನ್ನು ಮೇಲೆತ್ತುವುದರೊಳಗೆ ಅವಳು ಇಹಲೋಕದ ಯಾತ್ರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾಗಿದ್ದಾರೆ. 2015ರಲ್ಲಿ ವಿಧಾನ ಪರಿಷತ್ ಪಂಚಾಯತ್ ಪ್ರತಿನಿಧಿಯಾಗಿ ಬಿಜೆಪಿ ಪಕ್ಷದಿಂದ ಸ್ವರ್ಧಿಸಿ ಆಯ್ಕೆಯಾಗಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆ ಹಾಗೂ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಶ್ವರಪ್ಪ ಅವರು ಶಾಸಕರಾಗಿ ಆಯ್ಕೆಯಾದ ಬಳಿಕ ತೆರವಾದ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಶ್ರೀನಿವಾಸ  ಪೂಜಾರಿ ಅವರನ್ನು ಆಯ್ಕೆಮಾಡಲಾಗಿದೆ. ರಾಜಕಾರಣದಲ್ಲಿ ಸರಳ, ಸಜ್ಜನಿಕೆಗೆ ಅನ್ವರ್ಥ ಎಂಬಂತೆ ತನ್ನನ್ನು ತೊಡಗಿಕೊಂಡು ಎಲ್ಲರೊಂದಿಗೂ ಬೆರತು ವಿಶ್ವಾಸ ಹಾಗೂ ಘನತೆಯನ್ನು ಉಳಿಸಿಕೊಂಡ ಅಪರೂಪದ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ. ಒಬ್ಬ ಸಾಮಾನ್ಯ ಛಾಯಾಗ್ರಾಹಕನಾಗಿದ್ದ ವ್ಯಕ್ತಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಪರಿಷತ್‌ಗೆ ಆಯ್ಕೆಯಾಗಿ, ಮುಜರಾಯಿ ಮಂತ್ರಿಯೂ ಆದ ಪರಿ ಅಚ್ಚರಿ ಮೂಡಿಸುವಂತದ್ದು. ತನ್ನ ಸ್ಪಷ್ಟವಾದ ಮಾತು, ಒಲವು ನಿಲುವುಗಳಿಂದಲೇ…

Read More