Author: ನ್ಯೂಸ್ ಬ್ಯೂರೋ

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕಾಲೇಜು ದಿನಗಳಲ್ಲಿ ಕಿವಿಗೆ ಬಿದ್ದ ಚಪ್ಪಾಳೆಯ ಸದ್ದು ಬಣ್ಣದ ಲೋಕದ ಕಡೆಗೆ ತಿರುಗುವಂತೆ ಮಾಡಿತು. ಬಣ್ಣದ ಲೋಕದಲ್ಲಿಯೇ ಏನಾದರೂ ಸಾಧಿಸಬೇಕು ಎಂಬ ಛಲ ಸಿನೆಮಾದ ನಾಯಕನನ್ನಾಗಿಸಿತು. ಹೌದು ಕ್ಷೇತ್ರ ಯಾವುದೇ ಇರಲಿ ಆಸಕ್ತಿ ಹಾಗೂ ಛಲವೊಂದಿದ್ದರೆ ಕಂಡ ಕನಸನ್ನು ನನಸಾಗಿಸಿಕೊಳ್ಳುವುದು ಕಷ್ಟವೇನಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕುಂದಾಪುರದ ಹುಡುಗ, ಸಮಯದ ಹಿಂದೆ ಸವಾರಿ ಚಿತ್ರದ ನಾಯಕ ನಟ ರಾಹುಲ್ ಹೆಗ್ಡೆ. ಪತ್ರಕರ್ತ ಲೇಖಕ ಜೋಗಿ ಅವರ ‘ನದಿಯ ನೆನಪಿನ ಹಂಗು’ ಕಾದಂಬರಿಯ ಎಳೆಯನ್ನಿಟ್ಟುಕೊಂಡು, ಹೆಸರಾಂತ ಸಂಗೀತಕಾರ, ರಂಗಕರ್ಮಿ ರಾಜ್‌ಗುರು ಹೊಸಕೋಟಿ ಅವರ ನಿರ್ದೇಶನದಲ್ಲಿ ಮೂಡಿಬಂದ ಸಿನೆಮಾ ’ಸಮಯದ ಹಿಂದೆ ಸವಾರಿ. ವಿಭಿನ್ನ ಕಥಾವಸ್ತುವಿನೊಂದಿಗೆ ಪ್ರೇಕ್ಷಕರನ್ನು ಎದಿರುಗೊಳ್ಳಬೇಕು ಎಂಬ ಸಿನೆಮಾ ತಂಡದ ಇಂಗಿತದಂತೆ ಪತ್ತೆದಾರಿ ಎಳೆಯನ್ನು ಹೊಂದಿದೆ. ಕುಂದಾಪುರದ ಹುಡುಗ ರಾಹುಲ್ ನಾಯಕ ನಟನಾಗಿ ಮೊದಲ ಭಾರಿಗೆ ತೆರೆಯ ಮೇಲೆ ರಘುನಂದನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಿನೆಮಾದಲ್ಲಿ ಸ್ನೇಹಿತನ ಸಾವಿನ ಬಳಿಕ ನಡೆಯುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಪದವೀಧರರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯೊಂದಿಗೆ ಉದ್ಯೋಗಮೇಳವನ್ನು ಹಮ್ಮಿಕೊಂಡಾಗ ಅದು ಫಲಪ್ರಧವಾಗುತ್ತದೆ ಎಂದು ಜೆ.ಪಿ.ಶೆಟ್ಟಿ ಕಟ್ಕೆರೆ ಹೇಳಿದರು. ಅವರು ಉಡುಪಿ ಉದ್ಯೋಗ ವಿನಿಮಯ ಕಛೇರಿ ಮತ್ತು ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರ, ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಮ್.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉದ್ಯಮಶೀಲಾತಾ ಕೌಶಲ್ಯ ತರಬೇತಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಉದ್ಯೋಗಾಂಕಾಕ್ಷಿಗಳನ್ನು ಉದ್ದೇಶಿಸಿ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅನುಭವದ ಅವಶ್ಯಕತೆಯನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ್, ಉದ್ಯೋಗಾಂಕಾಕ್ಷಿಗಳಿಗೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು. ಉದ್ಯೋಗ ಮಾರ್ಗದರ್ಶನ ಮತ್ತು ಸ್ಥಾನೀಕರಣ ಘಟಕದ ಸಂಚಾಲಕ ಡಾ.ಸುಬ್ರಹ್ಮಣ್ಯ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಉದ್ಯೋಗ ವಿನಿಮಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಧಿಕಾರಿಗಳು ಸರಕಾರ ಹೇಳಿದಷ್ಟನ್ನು ಅಚ್ಚುಕಟ್ಟಾಗಿ ಮಾಡಿದರೂ ಸಾಕು. ಒಂದು ಹಂತದ ಪ್ರಗತಿ ಸಾಧ್ಯವಿದೆ. ಅದರ ಜೊತೆಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ನಿರ್ದಿಷ್ಟ ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ನಿರ್ದಿಷ್ಟ ಅವಧಿಯೊಳಗೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. Watch Video  ಅವರು ಬೈಂದೂರು ನಿರೀಕ್ಷಣಾ ಮಂದಿರದಲ್ಲಿ ಜರುಗಿದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ ದೊಡ್ಡ ದೊಡ್ಡ ಯೋಜನೆಗಳ ಅನುಷ್ಠಾನವನ್ನು ಯಶಸ್ವಿಯಾಗಿ ಮಾಡುವುದರ ಜೊತೆಗೆ ಸಣ್ಣ ಯೋಜನೆಗಳ ಬಗೆಗೂ ವಿಶೇಷ ಮುತುವರ್ಜಿ ವಹಿಸುವುದು ಅಗತ್ಯ. ಸರಕಾರ ಅಧಿಕಾರಿಗಳಗೆ ಎಲ್ಲಾ ರೀತಿಯ ಸವಲತ್ತು ಮಾಡಿಕೊಟ್ಟಿದೆ. ಅದಕ್ಕೆ ಸರಿಯಾಗಿ ಸರಕಾರಿ ಕೆಲಸಕ್ಕಾಗಿ ಬರುವ ಜನರನ್ನು ಹೆಚ್ಚು ಸತಾಯಿಸದೇ ಪ್ರತಿಯೊಬ್ಬ ಫಲಾನುಭವಿಗೂ ಯೋಜನೆ ಯಶಸ್ವಿಯಾಗಿ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಿ. ದೇವರು ನಮಗೆ ಒಳ್ಳೆಯನ್ನೇ ಮಾಡಿದ್ದಾನೆ. ಭ್ರಷ್ಟಾಚಾರ ರಹಿತವಾದ ಆಡಳಿತಕ್ಕೆ ಕಡಿವಾಣ ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದರು. ಕುಂದಾಪ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಪಘಾತದಿಂದ ಅರೆಕೋಮಾವಸ್ಥೆಯಲ್ಲಿರುವ ಉಪ್ರಳ್ಳಿ ಮೂಡುಮಠ ನಿವಾಸಿ ಸುರೇಶ್ ಪೂಜಾರಿ ಎಂಬುವವರ ವೈದ್ಯಕೀಯ ವೆಚ್ಚಕ್ಕಾಗಿ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನಿಂದ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರು 15ಸಾವಿರ ರೂ. ಸಹಾಯಧನದ ಚೆಕ್ಕನ್ನು ಅವರನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಜಿಪಂ ಸದಸ್ಯೆ ಗೌರಿ ದೇವಾಡಿಗ, ಟ್ರಸ್ಟ್ ಸದಸ್ಯರಾದ ಅನಂತಪದ್ಮನಾಭ ನಾಯರಿ, ರಾಘವೇಂದ್ರ ಪೂಜಾರಿ, ಗಣೇಶ್ ಮೊದಲಾದವರು ಇದ್ದರು. ಇದನ್ನೂ ಓದಿ: ► ಅಪಘಾತದಿಂದ ಅರೆಕೋಮಾವಸ್ಥೆಯಲ್ಲಿರುವ ಸುರೇಶ್ ಪೂಜಾರಿಗೆ ಬೇಕಿದೆ ನೆರವು – https://kundapraa.com/?p=32409 .

Read More

ಕುಂದಾಪುರ ತಾಪಂ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಮಾರ್ದನಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತ್ರಾಸಿ-ಮರವಂತೆ ಬೀಚ್‌ನಲ್ಲಿ ತಡೆಗೋಡೆ ರಚನೆ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿಗೆ ಬರುವ ಪ್ರವಾಸಿದರ ಇದರ ಮೇಲೆಯೇ ನಡೆಯುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿಯೇ ಪ್ರವಾಸಿಗರ ವಾಹನ ಹಾಗೂ ಇತರ ವಾಹನಗಳು ಸರತಿ ಸಾಲಿನಲ್ಲಿ ನಿಂತು ಅಪಾಯಕ್ಕೆ ದಾರಿ ಪಡೆಕೊಟ್ಟಿದೆ. ಇಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ನಾಮಫಲಕವನ್ನೂ ಅಳವಡಿಸಿಲ್ಲ. ಈ ಬಗ್ಗೆ ಗಮನ ಹರಿಸುವುದು ಯಾರು. ಅಪಘಾತವಾದಗಲೇ ಎಚ್ಚರವಹಿಸಬೇಕೆ. ಮುಂಜಾಗೃತಾ ಕ್ರಮ ಕೈಗೊಳ್ಳಲು ಪೊಲೀಸ್ ಹಾಗೂ ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ ಸದಸ್ಯ ಪ್ರವೀಣಕುಮಾರ್ ಶೆಟ್ಟಿ ಆಗ್ರಹಿಸಿದರು. ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜರುಗಿದ 16ನೇ ತಾಪಂ. ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ತಾಪಂ ಸದಸ್ಯ ಮಹೇಂದ್ರ ಪೂಜಾರಿ ಮಾತನಾಡಿ ಬೈಂದೂರಿನಿಂದ ಕುಂದಾಪುರದ ತನಕದ ಚತುಷ್ಪಥ ಹೆದ್ದಾರಿ ಅಪಘಾತಕ್ಕೆ ಎಡೆಮಾಡಿಕೊಟ್ಟಿದೆ. ಅವೈಜ್ಞಾನಿಕ ತಿರುವು, ಪ್ರಮುಖ ವೃತ್ತಗಳಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸದಿರುವುದು ನಾಗರಿಕರ ಪ್ರಾಣಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಎರಡು ದಿನಗಳು ನಡೆದ 11ನೇ ವರ್ಷದ ಆಳ್ವಾಸ್ ಪ್ರಗತಿ 2019 ಶನಿವಾರ ಸಂಪನ್ನಗೊಂಡಿದ್ದು, ಉದ್ಯೋಗ ಮೇಳದಲ್ಲಿ ಒಟ್ಟು 1712 ಉದ್ಯೋಗಾಕಾಂಕ್ಷಿಗಳು ಸ್ಪಾಟ್ ಆಫರ್ಸ್ ಪಡೆದರೆ, ಒಟ್ಟು 3697 ಅಭ್ಯರ್ಥಿಗಳು ಮುಂದಿನ ಹಂತದ ಆಯ್ಕೆ ಪ್ರಕ್ರಿಯೆಗೆ ಆಯ್ಕೆಗೊಂಡಿದ್ದಾರೆ. ಒಟ್ಟು ಎರಡು ದಿನದ ಉದ್ಯೋಗ ಮೇಳದಲ್ಲಿ ಆಗಮಿಸಿದ್ದ 208 ಕಂಪೆನಿಗಳಲ್ಲಿ 163 ಕಂಪೆನಿಗಳು ತಮ್ಮ ಸ್ಪಾಟ್ ಆಫರ್ಸ್ ಹಾಗೂ ಮುಂದಿನ ಹಂತಕ್ಕೆ ಆಯ್ಕೆಯಾದ ಅಭ್ಯರ್ಥಿಗಳನ್ನು ಬಿಡುಗಡೆಗೊಳಿಸಿತ್ತು. ಒಟ್ಟು ಎರಡು ದಿನದ ಉದ್ಯೋಗ ಮೇಳದಲ್ಲಿ 8,453 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ಕೋಡಿಕಲ್‍ನ ಪ್ರಜ್ಚಾಲ್ ಡಿ’ಕುನ್ಹಾ, ದೇರೆಬೈಲ್‍ನ್ ರಾಘವೇಂದ್ರ ಭಟ್ ಹಾಗೂ ಡೈನಿಟಾ ಪಿಂಟೋ ಅಂತರಾಷ್ಟ್ರೀಯ ಕಂಪೆನಿಯಾದ ರಿಫಿನಿಟಿವ್ ಕಂಪೆನಿಯಲ್ಲಿ ವಾರ್ಷಿಕ ರೂ 5.5 ಲಕ್ಷದ ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಈ ಸಂಧರ್ಭದಲ್ಲಿ ತನ್ನ ಸಂತೋಷವನ್ನು ವ್ಯಕ್ತಪಡಿಸಿ ಮಾತನಾಡಿದ ಡೈನಿಟಾ ಪಿಂಟೋ, ಪ್ರಗತಿಯ ಮೊದಲ ದಿನ ತನ್ನ ಗೆಳತಿ ಇದೇ ಕಂಪೆನಿಯಲ್ಲಿ ಆಯ್ಕೆಯಾದ್ದರಿಂದ, ಅವಳ ಮಾಹಿತಿಯ ಮೇರೆಗೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆಲ ತಿಂಗಳುಗಳ ಹಿಂದೆ ನಾಗೂರು ಬಸ್ ನಿಲ್ದಾಣದ ಬಳಿ ಘಟಿಸಿದ ರಸ್ತೆ ಅಪಘಾತದಿಂದಾಗಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿ ತಲುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೈಂದೂರು ತಾಲೂಕಿನ ಉಪ್ರಳ್ಳಿ ಮೂಡುಮಠ ನಿವಾಸಿ ಸುರೇಶ್ ಪೂಜಾರಿ ಅವರ ಚಿಕಿತ್ಸೆಗೆ ಸಹೃದಯಿಗಳ ಮಾನವೀಯ ನೆರವಿನ ಅಗತ್ಯವಿದೆ. ಗಾರೆ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಸುರೇಶ್ ಪೂಜಾರಿ ಅವರು ಕೆಲವು ತಿಂಗಳುಗಳ ಹಿಂದೆ ನಾಗೂರು ಬಸ್ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭ ಲಾರಿಯೊಂದು ಅವರ ಮೇಲೆ ಹಾದು ಹೋಗಿದ್ದರಿಂದ ತಲೆಗೆ ಗಂಭೀರ ಗಾಯವಾಗಿ ಅರೆಕೋಮಾವಸ್ಥೆ ತಲುಪಿದ್ದರು. ಕೂಡಲೇ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತಾದರೂ ಅವರು ಗುಣಮುಖರಾಗಿರಲಿಲ್ಲ. ಬಳಿಕ ಕುಂದಾಪುರದ ಮಾತಾ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಹಾಗೂ ಕಳೆದ ಮೂರು ತಿಂಗಳಿಂದ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೊಳಪಡಿಸಿರುವ ವೈದ್ಯರು ಅವರು ಗುಣಮುಖರಾಗುವ ಬಗ್ಗೆ ಭರವಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 10…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿಗೆ ಸಮೀಪದ ಕೂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಿದ್ಯಾರ್ಥಿ ಪೋಷಕರ ಸಭೆಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬ್ಯಾಗ್ ಹಾಗೂ ಕೊಡೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರು ಬ್ಯಾಗ್ ಹಾಗೂ ಕೊಡೆ ವಿತರಿಸಿ ಮಾತನಾಡಿ ಕೆಲವು ವರ್ಷಗಳ ಹಿಂದೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದು ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದುವುದು ಒಂದು ಸವಾಲಾಗಿತ್ತು. ಆದರೆ ಇಂದು ಶಿಕ್ಷಣದ ಗುಣಮಟ್ಟ ಸುಧಾರಿಸಿದ್ದು ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯ ಒದಗಿಸಿಕೊಡುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಟ್ರಸ್ಟ್‌ನ ವತಿಯಿಂದ ಅರ್ಹ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಕೊಡೆಯನ್ನು ವಿತರಿಸಲಾಗುತ್ತಿದೆ. ಕಲಿಕೆಯಲ್ಲಿ ಉತ್ತಮವಿರುವ ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್‌ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಇಲ್ಲಿನ ದೇವಾಡಿಗ ನವೋದಯ ಸಂಘದ ವಾರ್ಷಿಕ ಮಹಾಸಭೆಯು ಇತ್ತಿಚಿಗೆ ಪದ್ಮನಾಭ ನಗರದ ಗ್ರೀನ್ ಗಾರ್ಡೇನಿಯಾದಲ್ಲಿ ನಡೆಯಿತು. ಸಂಘದ ಸದಸ್ಯೆ ದಾಮಿನಿ ಕರುಣಾಕರ್ ಅವರ ಪ್ರಾರ್ಥನೆಯೊಂದಿಗೆ ಸಭಾP ರ್ಯಕ್ರಮವು ಆರಂಭಗೊಂಡಿತು. ಚರಣ್ ಬೈಂದೂರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಬಳಿಕ ಸಂಘದ ಸದಸ್ಯರಾದ ಗುರು ದೇವಾಡಿಗ ನಿರ್ಮಿಸಿದ, ದೇವಾಡಿಗ ನವೋದಯ ಸಂಘದ ಎರಡು ವರ್ಷಗಳ ಕಾರ್ಯ ಚಟುವಟಿಕೆಗಳ ಛಾಯಚಿತ್ರದ ವೀಡಿಯೋವನ್ನು ಪ್ರೊಜೆಕ್ಟರ್ ಪರದೆಯ ಮೂಲಕ ಸಭೆಯಲ್ಲಿದ ಸದಸ್ಯರಿಗೆ ತೋರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಚರಣ್ ರವರು ಸಂಘದ 2017-19ರ ಸಾಲಿನ ಕಾರ್ಯಕ್ರಮಗಳ ವರದಿಯನ್ನು ಪ್ರಕಟಿಸಿದರು. ಖಜಾಂಚಿ ರಾಜೇಶ್ವರಿ ದೇವಾಡಿಗ ಮತ್ತು ದಿವ್ಯ ಸುಧೀರ್ ಸಂಘದ ಹಿಂದಿನ ಎರಡು ವರ್ಷಗಳ ಖರ್ಚು ವೆಚ್ಚ, ಆಯವ್ಯಯಗಳ ವರದಿ ಸಲ್ಲಿಸಿದರು. ಸಂಘದ ಅಧ್ಯಕ್ಷರಾದ ಹರಿ ಟಿ. ದೇವಾಡಿಗರವರು ಅಧ್ಯಕ್ಷ ಭಾಷಣದಲ್ಲಿ ಸಂಘದ ಸದಸ್ಯರು ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸಿದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾವು ಅಧ್ಯಕ್ಷರಾಗಿದ್ದ ಸಮಯದಲ್ಲಿ ನೀಡಿದ ಬೆಂಬಲ ಮುಂದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ನಮ್ಮ ಕುಂದಾಪ್ರ ಕನ್ನಡ ಗಲ್ಫ್ ಇದರ ಎರಡನೇ ವಾರ್ಷಿಕೋತ್ಸವ ಮತ್ತು ಕುಟುಂಬ ಮಿಲನ ಕಾರ್ಯಕ್ರಮ ದುಬಾಯಿ ಅಜಮನ್‌ನ ಹ್ಯಾಬಿಟೆಟ್ ಸ್ಕೂಲ್‌ನ ಸಭಾಂಗಣದಲ್ಲಿ ಸಂಭ್ರಮದಿಂದ ಜರುಗಿತು. ಫಾರ್ಚೂನ್ ಗ್ರೂಫ್ ಆಫ್ ಹೋಟೆಲ್ಸ್‌ನ ಮುಖ್ಯಸ್ಥ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾಗತಿಕ ಮಟ್ಟದಲ್ಲಿ ಕುಂದಾಪುರ ತಾಲೂಕಿನವರ ಸಾಧನೆ ಅಪಾರ. ದೇಶ ವಿದೇಶಗಳಲ್ಲೂ ನಮ್ಮ ಸಂಸ್ಕ್ರತಿ, ಸಂಪ್ರದಾಯ, ಧಾರ್ಮಿಕ ಆಚರಣೆಗಳು ಇಂದಿಗೂ ಕೂಡ ವಿಶೇಷ ಗೌರವವನ್ನು ಉಳಿಸಿಕೊಂಡಿದೆ. ಗಲ್ಫ್ ರಾಷ್ಟ್ರದಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿರುವ ನಮ್ಮವರಿಗೆ ಇಂತಹ ಕಾರ್ಯಕ್ರಮಗಳು ಪರಸ್ಪರ ಭಾಂದವ್ಯವನ್ನು ಬೆಳೆಸುತ್ತದೆ. ಮಾತ್ರವಲ್ಲದೆ ಉದ್ಯೋಗಕ್ಕಾಗಿ ದುಬನಲ್ಲಿ ಹಲವು ಸಮಸ್ಯೆಗಳಲ್ಲಿದ್ದವರಿಗೆ ಸಕಾಲದಲ್ಲಿ ಸ್ಪಂದನೆ, ಶೈಕ್ಷಣಿಕ ನೆರವು, ಆರೋಗ್ಯ ಕಾಳಜಿ ಮುಂತಾದ ಕಾರ್ಯಕ್ರಮಗಳನ್ನು ನಮ್ಮ ಕುಂದಾಪ್ರ ಕನ್ನಡ ದುಬ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು. ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾಧನದಾಸ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಮ್ಮ ಕುಂದಾಪ್ರ ಕನ್ನಡದ ದುಬ ಇದರ ಗೌರವಾಧ್ಯಕ್ಷ…

Read More