Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಲ್ಲವರ ವಿರುದ್ಧ ನೇರವಾಗಿ ಕೀಳು ಮಟ್ಟದ ಪದ ಪ್ರಯೋಗಿಸಿ ವ್ಯಂಗ್ಯವಾಡಿರುವ ನೆರಂಬಳ್ಳಿ ರಾಘವೇಂದ್ರ ರಾವ್ ಅವರು ಒಂದು ವಾರದ ಒಳಗೆ ಬಹಿರಂಗವಾಗಿ ಕ್ಷೇಮ ಕೇಳಬೇಕು ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಠ ಮೊಕದ್ದಮೆ ಹೂಡುವುದಲ್ಲದೇ ಪ್ರತಿಭಟನೆ ನಡೆಸುವುದಾಗಿ ಕರ್ಕಿಯ ಪ್ರಶಾಂತ ಪೂಜಾರಿ ತಿಳಿಸಿದ್ದಾರೆ. ಅವರು ಕುಂದಾಪುರದಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಇತ್ತಿಚಿಗೆ ಬ್ರಾಹ್ಮಣ ಮಹಾಸಭಾದ ಪತ್ರಿಕಾಗೋಷ್ಠಿಯಲ್ಲಿ ಹೋಟೆಲ್ ಉದ್ಯಮಿ ನೆರಂಬಳ್ಳಿ ರಾಘವೇಂದ್ರ ರಾವ್ ಅವರು ಬಿಲ್ಲವ ಸಮಾಜವನ್ನು ಅವಹೇಳನ ಮಾಡಿ ಮಾತನಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಈ ಬಗ್ಗೆ ಈಗಾಗಲೇ ಕಿರಣ್ ಎನ್ನುವವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಬಿಲ್ಲವ ಸಮಾಜಕ್ಕಾದ ಅವಮಾನವನ್ನು ಕುಂದಾಪುರ ಬಿಲ್ಲವ ಸಂಘಟನೆ ಖಂಡಿಸದೇ, ಬೇರೆವುದೋ ಸಮಾವೇಶದ ಬಗ್ಗೆ ಖಂಡನೆ ವ್ಯಕ್ತಪಡಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ನೆರಂಬಳ್ಳಿ ರಾಘವೇಂದ್ರ ರಾವ್ ಅವರು ಒಂದು ವಾರದೊಳಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಜ.8: ಹೃದಯಾಘಾತದಿಂದ ನಿಧನರಾದ ಪತ್ರಕರ್ತ ರವಿರಾಜ್ ಒಳಲಂಬೆ ಅವರಿಗೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ನುಡಿನಮನ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಮತ್ತು ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ ರವಿರಾಜ್ ಅವರ ಕುರಿತು ಮಾತನಾಡಿದರು. ಸದಸ್ಯರು ಒಂದು ನಿಮಿಷ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದ ಯುವಜನತೆ ಉದ್ಯೋಗ ಕೇಳುತ್ತಿದ್ದಾರೆ, ಚಾಲಕರು ಪೆಟ್ರೋಲ್, ಡೀಸೆಲ್ ದರ ಹೆಚ್ಚಿರುವ ಬಗ್ಗೆ ಪ್ರಶ್ನಿಸುತ್ತಿದ್ದಾರೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕೆಲಸದ ಭದ್ರತೆ ನೀಡಿ ಎನ್ನುತ್ತಿದ್ದಾರೆ. ಜನಸಾಮಾನ್ಯರು ದಿನನಿತ್ಯದ ವಸ್ತುಗಳು, ಇನ್ಸೂರೆನ್ಸ್ ಪ್ರೀಮಿಯಂ ದರ, ಟ್ಯಾಕ್ಸ್ ದುಪ್ಪಟ್ಟು ಮಾಡಿದ್ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಆದರೆ ದೇಶದಲ್ಲಿ ಎನ್‌ಆರ್‌ಸಿ, ಸಿಎಬಿ ಜಾರಿಯಾಗಬೇಕೆಂದು ಎಲ್ಲಾದರೂ ಪ್ರತಿಭಟನೆ ನಡೆದಿತ್ತೆ ಯಾರಿಂದಲೂ ಬೇಡಿಕೆ ಇತ್ತೆ ಎಂದು ಹೋರಾಟಗಾರ, ವಾಗ್ಮಿ ಸುಧೀರ್ ಕುಮಾರ್ ಮುರೋಳಿ ಪ್ರಶ್ನಿಸಿದರು. ಅವರು ಸೋಮವಾರ ಸಂಜೆ ಕುಂದಾಪುರದ ಶಾಸ್ತ್ರಿಸರ್ಕಲ್ ಸಮೀಪ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ಆಯೋಜಿಸಲಾದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು. ಜನರ ಬದುಕು ಕಟ್ಟಿಕೊಡುವ ಬದಲು ಉದ್ದೇಶಪೂರ್ವಕವಾಗಿ ಈ ಕಾಯಿದೆಗಳನ್ನು ಜಾರಿಗೆ ತರುವುದರ ಹಿಂದೆ ಕೇಂದ್ರ ಸರಕಾರದ ವೈಫಲ್ಯಗಳನ್ನು ಮರೆಮಾಚುವ ತಂತ್ರ ಅಡಗಿದೆ. ಬ್ರೀಟಿಷರ ಪಳೆಯುಳಿಕೆಯಂತೆ ಅವರು ಬಿಟ್ಟು ಹೋದ ಹಿಂದೂ-ಮುಸ್ಲಿಂಮರನ್ನು ಒಡೆದು ಆಳುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಅವಧೂತ ಶ್ರೀ ವಿನಯ ಗುರೂಜಿ ಭೇಟಿ ನೀಡಿ, ನೆರೆದಿದ್ದವರನ್ನು ಆಶೀರ್ವದಿಸಿದರು. ಈ ಸಂದರ್ಭ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಯಡ್ತರೆ ಬಿಲ್ಲವ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶ್ರೀ ವಿನಯ ಗುರೂಜಿ ಅವರನ್ನು ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ, ಉಪಾಧ್ಯಕ್ಷರಾದ ವೆಂಕಟ ಪೂಜಾರಿ, ಅರ್ಚಕ ಕುಟುಂಬದ ಮಂಜುನಾಥ ಮೇಲಿತ್ಲು, ಕಾರ್ಯದರ್ಶಿ ಶಿವರಾಮ ಪೂಜಾರಿ ಮೊದಲಾದವರು ಬರಮಾಡಿಕೊಂಡರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು,ಜ.5: ಮರಳು ತುಂಬಿಸಿಕೊಂಡು ಸಾಗುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಬೈಂದೂರು ರಾಷ್ಟ್ರೀಯ ಹೆದ್ದಾರಿ ಬದಿಯ ಡಾಬಾ/ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಬೈಂದೂರು ಹೊಸ ಬಸ್ ನಿಲ್ದಾಣದ ಎದುರು ಇರುವ ಅಂಗಡಿಗಳು ಜಖಂ ಆಗಿದ್ದು, ಅಲ್ಲಿದ್ದ ಜನರು ಪ್ರಾಣಾಪಾಯಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗದಿಂದ ಭಟ್ಕಳ ಕಡೆಗೆ ಸಾಗುತ್ತಿದ್ದ ಲಾರಿಗೆ ಬೈಂದೂರು ರೈಲ್ವೆ ನಿಲ್ದಾಣ ರಸ್ತೆಯಿಂದ ಟಿಪ್ಪರ್ ಒಂದು ಎದುರು ಬಂದಿದ್ದರಿಂದ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡು ಎಡಭಾಗಕ್ಕೆ ಲಾರಿಯನ್ನು ನುಗ್ಗಿಸಿದ್ದಾನೆ. ಲಾರಿ ಹಾದಿ ತಪ್ಪಿರುವುದನ್ನು ಗಮನಿಸಿದ ಡಾಬಾ ಎದುರು ನಿಂತಿದ್ದ ಜನರು ತಪ್ಪಿಸಿಕೊಂಡಿದ್ದರಿಂದ ಲಾರಿ ಸೀದಾ ಡಾಬಾ ಒಳಕ್ಕೆ ನುಗ್ಗಿ ನಿಂತಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಕುಂದಾಪ್ರ ಡಾಟ್ ಕಾಂ ಸುದ್ದಿ. ಸ್ಥಳೀಯರು ಲಾರಿಯನ್ನು ಪರೀಕ್ಷಿಸಿದಾಗ ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲೇ ಒಂದೇ ಲಾರಿಯಲ್ಲಿ ಮೂರು ನಂಬರ್ ಪ್ಲೇಟ್ ಇರುವುದು ಅಕ್ರಮ ಸಾಗಾಟವನ್ನು ದೃಢಪಡಿಸುವಂತಿದೆ. ಟೋಲ್‌ಗೇಟ್, ಚೆಕ್‌ಪೋಸ್ಟ್‌ಗಳಿರುವುದು ತಿಳಿದು ರಾಜಾರೋಷವಾಗಿ ಹಗಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಚಿಂತನೆ ಹಾಗೂ ವಿವೇಚನೆ ಇಲ್ಲದೇ ಉಪದೇಶಗಳನ್ನು ಅನುಸರಿಸಿ ನಡೆಯುವ ಮಕ್ಕಳು ಸಮಾಜ ಘಾತುಕ ಶಕ್ತಿಗಳಾಗಿ ಬೆಳೆಯುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ಅಂಕ ಗಳಿಕೆಯ ಮೆಷಿನ್‌ಗಳನ್ನಾಗಿ ನೋಡುವ ಪ್ರವೃತ್ತಿ ಹೆಚ್ಚುತ್ತಿದ್ದು, ಬದುಕನ್ನು ಎದುರಿಸಲಾಗದ ಹೇಡಿಗಳನ್ನಾಗಿ ರೂಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಕಳವಳ ವ್ಯಕ್ತಪಡಿಸಿದರು. ಅವರು ಶನಿವಾರ ಬೈಂದೂರು ರತ್ತೂಬಾಯಿ ಜನತಾ ಪ್ರೌಢಶಾಲೆಯ ಸುವರ್ಣ ಸಂಭ್ರಮ ಕಾರ್ಯಕ್ರಮದ ಸಮಾರೋಪದಲ್ಲಿ ಪ್ರಧಾನ ಭಾಷಣ ಮಾಡಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಹಂತದಲ್ಲಿಯೇ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮಾಡಿಕೊಡಬೇಕು. ಮೊಬೈಲ್ ಆಪರೇಟ್ ಮಾಡುವ ಮಗುವು ಅದರಲ್ಲಿ ಏನು ನೋಡುತ್ತಿದೆ ಎಂಬುದರ ಅರಿವು, ತಮ್ಮ ಮಗುವಿನ ವಿಕಾಸಕ್ಕೆ ಪೂರಕವಾದ ವಾತಾರವಣ ನಿರ್ಮಿಸುವ ಜವಾಬ್ದಾರಿ ಎರಡೂ ಪೋಷಕರ ಮೇಲಿದೆ. ಮೊಬೈಲ್ ಹಾಗೂ ಟಿ.ವಿ ಧಾರಾವಾಹಿಗಳ ಅಡಿಕ್ಷನ್‌ಗಳಿಂದ ಅಂತರ ಕಾಯ್ದುಕೊಂಡರೆ ಬಹುಪಾಲು ಸುಧಾರಣೆ ಸಾಧ್ಯವಾಗುತ್ತದೆ ಎಂದರು. ರತ್ತೂಬಾಯಿ ಜನತಾ ಪ್ರೌಢಶಾಲೆಯ ಇತಿಹಾಸವನ್ನು ಅವಲೋಕಿಸಿದಾಗ ಆರಂಭದಲ್ಲಿ ಮಹಿಳೆ ಸಶಕ್ತೀಕರಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ಬಂಟರ ಭವನದಲ್ಲಿ ಜೆಸಿಐ ಬೈಂದೂರು ಸಿಟಿಯ ಪದಪ್ರಧಾನ ಸಮಾರಂಭ ಜರುಗಿತು. ಬೈಂದೂರು ಸಿಟಿ ಜೆಸಿ ಅಧ್ಯಕ್ಷರಾದ ಮಣಿಕಂಠ ಎಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ೨೦೨೦ರ ಜೆಸಿಐ ಬೈಂದೂರು ಸಿಟಿಯ ಅಧ್ಯಕ್ಷರಾಗಿ ಜೆಸಿ ಪ್ರಿಯದರ್ಶಿನಿ ಬೆಸ್ಕೂರ್ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಜೆಸಿ ಶ್ರೀಧರ ಆಚಾರ್ಯ, ಜೆಸಿರೆಟ್ ಆಗಿ ಭಾನುಮತಿ ಬಿ.ಕೆ, ಜೆಜೆಸಿ ಆಗಿ ಪೂರ್ಣಿಮಾ, ಅಧಿಕಾರ ಸ್ವೀಕರಿಸಿದರು, 12 ನೂತನ ಸದಸ್ಯರು ಜೆಸಿಐ ಬೈಂದೂರು ಘಟಕಕ್ಕೆ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಜೆಸಿಐ ವಲಯ 15ರ ಅಧ್ಯಕ್ಷರಾದ ಜೆಸಿ ಕಾರ್ತಿಕೆಯ ಮಧ್ಯಸ್ಥ, ಜೆಸಿ ರೋಹನ್ ಅಲನ್ ವಾಸ್, ವಲಯ ಉಪಾಧ್ಯಕ್ಷೆ ಆಶಾ ಆಲನ್, ಅಂತರಾಷ್ಟ್ರೀಯ ನೃತ್ಯಪಟು ಭಾವನಾ ಆರ್. ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಧರ್ಮದ ತಿರುಳನ್ನು ತಿಳಿಸುವ ಕೆಲಸವಾಗಬೇಕು. ಅದು ನಡೆಯದಿರುವುದರಿಂದಲೇ ಯುವಜನರು ಯಾರಿಂದಲೋ ಪ್ರೇರಿತರಾಗಿ ಮತ್ತೊಂದು ಧರ್ಮವನ್ನು ದೂಷಿಸುವ ಕಾರ್ಯದಲ್ಲಿ ತೊಡಗುತ್ತಾರೆ ಎಂದು ಗೌರಿಗದ್ದೆ ದತ್ತಾಶ್ರಮದ ಶ್ರೀ ವಿನಯ ಗುರೂಜಿ ಹೇಳಿದರು. ಅವರು ಶುಕ್ರವಾರ ಬೈಂದೂರು ರತ್ತುಬಾಯಿ ಜನತಾ ಪ್ರೌಢಶಾಲೆಯ ಸುವರ್ಣ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿದ ಬಳಿಕ ಆಶೀರ್ವಚನ ನೀಡಿ ಕೈಯಲ್ಲಿ ಬಗೆ ಬಗೆಯ ಉಂಗುರು ಧರಿಸುವುದರಿಂದ ಅದೃಷ್ಟ ಕುಲಾಯಿಸುವುದಿಲ್ಲ. ಇಂತಹ ಅಂಧ ವಿಶ್ವಾಸವನ್ನು ಬಿಟ್ಟು ಜ್ಞಾನದ ಕಡೆ ನಡೆಯಿರಿ. ಬದುಕಿನಲ್ಲಿ ಅದೃಷ್ಟ ಎನ್ನುವ ಶಬ್ದವೇ ಇಲ್ಲ. ಕೆಲಸ ಮಾಡಿದವರಿಗೆ ಪ್ರತಿಫಲ ಸಿಕ್ಕೆ ಸಿಗುತ್ತದೆ. ಶಾಸ್ತ್ರವನ್ನು ಸತ್ಯದ ಆಧಾರದ ಮೇಲೆ ಅರಿತು ನಡೆದರೆ, ಶ್ರಮವಹಿಸಿ ದುಡಿದರೆ ಎಲ್ಲವೂ ಸಿದ್ಧಿಸುತ್ತದೆ ಎಂದರು. Video ದೊಡ್ಡ ದೇವಸ್ಥಾನ, ಉತ್ಸವಗಳನ್ನು ಮಾಡುವ ಜೊತೆಗೆ ಊರಿನ ಅಭಿವೃದ್ಧಿಯ ಬಗೆಗೂ ಗಮನ ಹರಿಸಿ. ಎಲ್ಲವನ್ನೂ ಸರಕಾರದಿಂದ ನಿರೀಕ್ಷಿಸುವ ಮೊದಲು ನಮ್ಮ ಊರಿಗೆ ನಾವೇನು ಮಾಡಬಹುದೆಂಬುದನ್ನು ಯೋಚಿಸಬೇಕಿದೆ. ಶಿಕ್ಷಣ ಮತ್ತು ಆರೋಗ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ನಿವಾಸಕ್ಕೆ ಅವಧೂತ ಶ್ರೀ ವಿನಯ ಗುರೂಜಿ ಭೇಟಿ ನೀಡಿ ಆಶೀರ್ವದಿಸಿದರು. ಈ ಸಂದರ್ಭ ಕೆ. ಗೋಪಾಲ ಪೂಜಾರಿ ಹಾಗೂ ಪತ್ನಿ ಮಮತಾ ಜಿ. ಪೂಜಾರಿ ಅವರು ಗುರೂಜಿ ಅವರ ಪಾದ ಪೂಜೆ ನೆರವೇರಿಸಿದರು. ಈ ವೇಳೆ ಅವರು ಸಮೀಪದ ಭದ್ರಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ನಿವಾಸದಲ್ಲಿ ನೆರೆದಿದ್ದವರನ್ನು ಆಶೀರ್ವದಿಸಿದರು. ಈ ಸಂದರ್ಭ ಕೆ. ಗೋಪಾಲ ಪೂಜಾರಿ ಅವರ ಕುಟುಂಬಿಕರು ಹಾಗೂ ಹಿತೈಶಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಜನವರಿ 2 ರಿಂದ 6ರವರೆಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ನಡೆಯಲಿರುವ ೮೦ನೇ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಫ್‌ಗೆ ಚಾಲನೆ ನೀಡಲಾಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿದ ಭಾರತ ಸರ್ಕಾರದ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಮಾತನಾಡಿ, ಕ್ರೀಡೆಯು ಕೇವಲ ಪಠ್ಯೇತರ ಚಟುವಟಿಕೆಯಲ್ಲ ಬದಲಾಗಿ ಶಿಕ್ಷಣದ ಒಂದು ಭಾಗ. ಕ್ರೀಡೆಯನ್ನು ಪ್ರೋತ್ಸಾಹಿಸುವ ಮೂಲಕ ಸಂಸ್ಕೃತಿಯಾಗಿ ಬೆಳೆಸಬೇಕು. ಮುಂಬರುವ ದಿನಗಳಲ್ಲಿ ಸೀಮಿತ ಅವಧಿ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು, ಭಾರತೀಯ ಕ್ರೀಡಾಪಟುಗಳನ್ನು ಸಧೃಢವಾಗಿ ಬೆಳೆಸಬೇಕು. 2024ರ ಒಲಿಪಿಂಕ್ಸ್ನಲ್ಲಿ ಇತರ ದೇಶಗಳಿಗೆ ಸಮವಾದ ಕಠಿಣ ಸ್ಪರ್ಧೆ ನೀಡುವಂತೆ ಭಾರತೀಯ ಕ್ರೀಡಾಪಟುಗಳನ್ನು ತಯಾರು ಮಾಡುವುದು ಭಾರತಕ್ಕಿರುವ ಸವಾಲು ಎಂದರು. ನ್ಯೂ ಇಂಡಿಯಾ ನಿರ್ಮಾಣದೊಂದಿಗೆ ಫಿಟ್ ಇಂಡಿಯಾ ಎಂಬ ಹೊಸ ಆಂದೋಲನವು ಭಾರತೀಯರಲ್ಲಿ ಆರೋಗ್ಯದ ಅರಿವನ್ನು ಇನ್ನಷ್ಟು ಹೆಚ್ಚಿಸಲಿದೆ. ಕೇವಲ ಕ್ರೀಡೆಗಾಗಿ ಮಾತ್ರವಲ್ಲದೇ…

Read More