ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್ಡೌನ್ ಆದೇಶ ಉಲ್ಲಂಘನೆ ಮಾಡುವವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯದ ಮುಖ್ಯಮಂತ್ರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ನೀಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದರೆ ಲಾಠಿಚಾರ್ಜ್ ಅಷ್ಟೇ ಅಲ್ಲ ಒಳಗಡೆ ಇಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಕುಂದಾಪುರಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕುಂದಾಪುರ ಎಸಿ, ಎಎಸ್ಪಿ ಸಾಕಷ್ಟು ಮುನ್ನೆಚ್ಚರಿಕೆ ಹಾಗೂ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ಆದಾಗ್ಯ ಕೆಲವರು ಅನವಶ್ಯಕವಾಗಿ ಹೊರಕ್ಕೆ ಬರುತ್ತಿದ್ದಾರೆ. ತುರ್ತು ಅಗತ್ಯವಿದ್ದರೆ ಮಾತ್ರ ಬನ್ನಿ. ಅದನ್ನು ಬಿಟ್ಟು ದಿನ ಮೀನು, ತರಕಾರಿ ಅಂತೆಲ್ಲಾ ಬಾರದೆ, ಒಂದು ವಾರಕ್ಕಾಗುವಷ್ಟು ಒಂದೇ ಭಾರಿ ತೆಗೆದುಕೊಂಡು ಹೋಗಿ ಎಂದಿರುವ ಅವರು ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ. ಇದನ್ನ ಉಲ್ಲಂಗಿಸಿದರೆ ಅಂಗಡಿ ಮುಚ್ಚಿಸುತ್ತೇವೆ. ದಿನಸಿ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ವ್ಯಾಪಾರ ಮಾಡಿದರೆ, ಅಂಗಡಿ ಪರವಾನಿಗೆ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ದಿನಬಳಕೆ ವಸ್ತುಗಳ ಅಭಾವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಲಾಕ್ಡೌನ್ ಜಾರಿಯಲ್ಲಿದ್ದು, ಈ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯ ತನಕ ಅಂಗಡಿಗಳು ತೆರೆದಿರುತ್ತವೆ. ಸಾರ್ವಜನಿಕರು ಗೊಂದಲಕ್ಕೆ ಒಳಗಾಗದೇ ಸಾಮಾಜಿಕ ಅಂತರ ಪಾಲಿಸಿ, ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ ಎಂದು ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಜನಸಾಮಾನ್ಯರ ಅಗತ್ಯತೆಯನ್ನು ಮನಗಂಡು ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಹಾಗೂ ಹಾಗೂ ಎಎಸ್ಪಿ ಹರಿರಾಂ ಶಂಕರ್ ಜಂಟಿಯಾಗಿ ಈ ತೀರ್ಮಾನಕ್ಕೆ ಬಂದಿದ್ದು ಮಾಚ್.27ರಿಂದ ಬೆಳಿಗ್ಗೆ 9ರಿಂದ ಸಂಜೆ 6ಗಂಟೆಯ ತನಕ ಅಗತ್ಯ ವಸ್ತುಗಳಾದ ತರಕಾರಿ, ದಿನಸಿ, ಮೀನು, ಮಾಂಸ, ಹಣ್ಣು ಹಂಪಲು, ಮೆಡಿಕಲ್ ಶಾಪ್, ಹಾಲಿನ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಹಾಲು ಮತ್ತು ತರಕಾರಿ ಅಂಗಡಿ ಬೆಳಿಗ್ಗೆ 9ಗಂಟೆಗೆ ಮುಂಚಿತವಾಗಿ ಮತ್ತು ಮೆಡಿಕಲ್ ಶಾಪ್ಗಳು ಸಂಜೆ 6ಗಂಟೆಯ ನಂತರವೂ ತೆರೆಯಲು ಅವಕಾಶವಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ: ಅಂಗಡಿಗಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲೆಡೆ ಕರೋನಾ ವೈರಸ್ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಬೈಂದೂರು ತಾಲೂಕು ಹಕ್ಲಾಡಿ ಗ್ರಾಮದ ಬಗ್ವಾಡಿ ನಾಗರಿಕರು ಬೇರೆ ಬೇರೆ ಕಡೆಯಿಂದ ಬರುವವರಿಗೆ ತಾತ್ಕಾಲಿಕ ನಿಷೇಧ ಎಂಬ ಬೋರ್ಡು ಹಾಕಿದ್ದಾರೆ. ವಿದೇಶದಿಂದ ಮಾತ್ರ ಕರೋನಾ ಬರುತ್ತಿಲ್ಲ. ನೀವು ಬರುತ್ತಿರುವ ಪ್ರದೇಶದಲ್ಲೂ ಕರೋನಾ ಇದೆ. ಈ ಹಿನ್ನೆಲೆಯಲ್ಲಿ ಯಾರೂ ಊರು ಪ್ರವೇಶ ಮಾಡಿ ನಮ್ಮೂರ ನೆಮ್ಮದಿ ಹಾಳು ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು, ಬಾಂಬೆ, ಗೋವಾ, ಬಾಗಿಲುಕೋಟೆ ಮುಂತಾದ ಕಡೆಯಿಂದ ಬಂದು ಊರಲ್ಲಿ ಸುಖಾಸುಮ್ಮನೆ ಅಲೆಯದೆ ಮನೆಯಲ್ಲೇ ಇರುವಂತೆಯೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್ಡೌನ್ ಮೂರನೇ ದಿನವಾದರೂ ಅನಾವಶ್ಯಕ ಪೇಟೆ ಸುತ್ತುತ್ತಿದ್ದ ಕೆಲವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರೆ, ಇನ್ನು ಕೆಲವರಿಗೆ ಬಸ್ಕಿ ಶಿಕ್ಷೆ ಕೂಡಾ ನೀಡಲಾಯಿತು. ನಿಷೇದಾಜ್ಞೆ ಹೇರಿದ್ದಾಗಿಯೂ ಕುಂದಾಪುರದಲ್ಲಿ ವಾಹನ ಸವಾರರು ಬೇಕಾಬಿಟ್ಟಿ ಬಂದು ನಮಗೂ ನಿಷೇದಾಜ್ಞೆಗೂ ಸಂಬಂಧವೇ ಇಲ್ಲದಂತೆ ವರ್ತಿಸಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶಾದ್ಯಂತ ವಿಧಿಸಲಾಗಿರುವ ಲಾಕ್ಡೌನ್ನ ಮೂರನೇ ದಿನವಾದ ಗುರುವಾರ ಕುಂದಾಪುರ ಪೇಟೆಯಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಕುಂದಾಪುರದ ಸಹಾಯಕ ಕಮೀಷನರ್(ಎಸಿ) ಕೂಡ ಇದಕ್ಕೆ ಸಾಥ್ ನೀಡಿದರು. ಕುಂದಾಪುರ ಎಸಿ ಕೆ. ರಾಜು ಅವರು ಒಂದೆಡೆ ರಸ್ತೆಯಲ್ಲಿ ಅಲೆಯುತ್ತಿದ್ದ ಯುವಕರಿಗೆ ಲಾಠಿ ರುಚಿ ತೋರಿಸಿದರೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಅಂಗಡಿಗಳಿಗೆ ತೆರಳಿ ಹೆಚ್ಚಿನ ದರ ವಿಧಿಸದಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ನಿಯಮ ಪಾಲಿಸದಿದ ಬಗ್ಗೆ ದೂರು ಬಂದರೆ ಅಂಗಡಿ ಮುಚ್ಚಿಸುವ ಜೊತೆ ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಸಿದರು. ಮೆಡಿಕಲ್ ಸ್ಟೋರ್, ಜನ ಔಷಧಿ ಕೇಂದ್ರಗಳಿಗೆ ತೆರಳಿ ಸರಿತಿಯಲ್ಲಿ ನಿಲ್ಲುವಂತೆ ಸೂಚಿಸಿ ಒಬ್ಬರಿಂದ ಒಬ್ಬರಿಗೆ ಅಂತರ ಕಾಪಾಡುವಂತೆ ಸೂಚಿಸಿ, ರಸ್ತೆ ಬದಿಯಲ್ಲಿ ಅನಾವಶ್ಯಕ ನಿಂತ ವಾನಗಳ ತೆರವು ಮಾಡಿದರು. ನಂತರ ಶಾಸ್ತ್ರಿ ವೃತ್ತದಲ್ಲಿ ಅರ್ಧಗಂಟೆಗೂ ಅಧಿಕ ಕಾಲ ನಿಲ್ಲುವ ಮೂಲಕ ಅನಾವಶ್ಯಕವಾಗಿ ಬರುವ ವಾನಗಳ ಚಾಲಕರಿಗೆ ಯಾಕೆ ಸುಖಾಸುಮ್ಮನೆ ಬರುತ್ತೀರಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಹರಡುವುದನ್ನು ತಡೆಯಲು ಈಗಾಗಲೇ ನಾಗರೀಕರ ಸಂಚಾರ ನಿರ್ಭಂದಿಸಿ ಸಿ.ಆರ್.ಪಿ.ಸಿ ಸೆಕ್ಷನ್ 144 (3) ರಲ್ಲಿ ಆದೇಶ ಹೊರಡಿಸಿದೆ ಅಲ್ಲದೇ ಇತರೇ ನಿರ್ದೇಶನಗಳನ್ನು ಹೊರಡಿಸಲಾಗಿದೆ. ಆದರೆ ಜಿಲ್ಲೆಯ ನಾಗರೀಕರು ಈ ಆದೇಶಗಳನ್ನು ಉಲ್ಲಂಘನೆ ಮಾಡುತ್ತಿರುವುದು ವರದಿಯಾಗುತ್ತಿದ್ದು, ಇಂತಹ ಪ್ರಕರಣಗಳನ್ನು ನಿಯಂತ್ರ್ರಿಸುವ ಅವಶ್ಯಕತೆಯಿರುವುದರಿಂದ, ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆಯಿದ್ದು, ಸಿ.ಆರ್.ಪಿ.ಸಿ ಆದೇಶ ಮತ್ತು ಕೋವಿಡ್ ರೋಗವನ್ನು ನಿಯಂತ್ರಿಸಲು ಹೊರಡಿಸಲಾಗಿರುವ ಇತರೇ ನಿರ್ದೇಶನಗಳನ್ನು ಪಾಲಿಸದೇ ಇದ್ದವರ ಮೇಲೆ, ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಅಧಿಕಾರವನ್ನು, ಕುಂದಾಪುರ ಉಪವಿಭಾಗಾಧಿಕಾರಿಗಳು, ಉಡುಪಿ, ಕಾಪು, ಬ್ರಹ್ಮಾವರ, ಕುಂದಾಪುರ, ಕಾರ್ಕಳ, ಬೈಂದೂರು, ಹೆಬ್ರಿ ತಹಸೀಲ್ದಾರ್ಗಳಿಗೆ ಪ್ರತ್ಯಾಯೋಜಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ತರಕಾರಿ, ದಿನಸಿ, ಮೀನು, ಮಾಂಸ, ಹಣ್ಣು ಹಂಪಲು, ಮೆಡಿಕಲ್ ಶಾಪ್, ಹಾಲು ಮುಂತಾದವುಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕರು ತಮ್ಮ ಅಂಗಡಿ ಎದುರಿನಲ್ಲಿ ಕನಿಷ್ಠ 6 ಅಡಿಗಳ ಅಂತರದಲ್ಲಿ ಕಡ್ಡಾಯವಾಗಿ ಪೇಂಟ್ ಅಥವಾ ಇನ್ನಿತರ ಬಣ್ಣದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ನಾಕಟ್ಟೆ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಯ ನವೀಕೃತ ಗರ್ಭಗುಡಿ ಸಮರ್ಪಣೆ ಹಾಗೂ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಕಾರ್ಯಕ್ರಮವು ಎಪ್ರಿಲ್ 05ರಿಂದ ನಡೆಯಬೇಕಿದ್ದು, ಈ ನಡುವೆ ಸರಕಾರ ಲಾಕ್ಡೌನ್ ಆದೇಶ ನೀಡಿರುವುದರಿಂದ ಗರಡಿಯ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಕಾರ್ಯಕ್ರಮದ ಮುಂದಿನ ದಿನಾಂಕವನ್ನು ತಂತ್ರಿಗಳು, ಊರ ಗ್ರಾಮಸ್ಥರು ಸೇರಿ ನಿರ್ಣಯಿಸಿ ಭಕ್ತರಿಗೆ ತಿಳಿಸಲಾಗುವುದು ಎಂದು ಗರಡಿಯ ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮೊದಲ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಮಾಚ್.18ರಂದು ದುಬೈನಿಂದ ಬಂದಿದ್ದ 34 ವರ್ಷ ವಯಸ್ಸಿನ ವ್ಯಕ್ತಿಯೋರ್ವರು ಜ್ವರದ ಕಾರಣ ಮಾರ್ಚ್ 23ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಪ್ರಾಥಮಿಕ ವರದಿಯಲ್ಲಿ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಇಂದಿನಿಂದ ದೇಶಾದ್ಯಂತ ವಿಧಿಸಲಾಗಿರುವ 21 ದಿನಗಳ ಲಾಕ್ಡೌನ್ ಸಂದರ್ಭ ಭಾರತದ ಗೃಹ ಇಲಾಖೆ ಬಿಡುಗಡೆ ಮಾಡಿರುವ ಲಭ್ಯವಿರುವ ಮತ್ತು ಲಭ್ಯವಿರದ ಸೇವೆಗಳ ಪಟ್ಟಿ: ಲಭ್ಯವಿರುವ ಸೇವೆಗಳು: ► ಆಸ್ಪತ್ರೆಗಳು, ಆರೋಗ್ಯ ಸಂಬಂಧಿತ ಎಲ್ಲಾ ವಿಭಾಗಗಳು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ಖಾಸಗಿ ಹಾಗೂ ಸಾರ್ವಜನಿಕ ಕಂಪನಿಗಳು, ಉದ್ದಿಮೆಗಳು, ಘಟಕಗಳು ಅಂದರೆ, ಮೆಡಿಕಲ್ ಸಾಧನಗಳನ್ನು ತಯಾರಿಸುವ ಕಂಪನಿಗಳು, ಔಷಧಿ ತಯಾರಕಾ ಹಾಗೂ ವಿತರಕರು, ವೈದ್ಯಕೀಯ ಸಿಬ್ಬಂದಿ, ನರ್ಸ್ಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಮತ್ತು ಆಸ್ಪತ್ರೆಗಳಿಗೆ ಸಂಬಧಿತ ವಾಹನ ಪ್ರಯಾಣಕ್ಕೆ ಅವಕಾಶ. ► ದಿನಸಿ ಅಂಗಡಿಗಳು, ತರಕಾರಿ, ಹಣ್ಣು ಅಂಗಡಿಗಳು, ಹಾಲಿನ ಡೈರಿಗಳು, ಮೀನು ಮಾಂಸ, ಪ್ರಾಣಿಗಳ ಮೇವು ಅಂಗಡಿಗಳು ► ಬ್ಯಾಂಕುಗಳು, ವಿಮಾ ಕಂಪನಿಗಳು, ಎಟಿಎಮ್ ► ಪ್ರಿಂಟ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು. /ಕುಂದಾಪ್ರ ಡಾಟ್ ಕಾಂ ಸುದ್ದಿ/ ► ದೂರಸಂಪರ್ಕ, ಇಂಟರ್ನೆಟ್, ಪ್ರಸಾರ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಕೋವಿಡ್-19 (ಕೊರೋನಾ ವೈರಸ್) ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಎಸಿ ರಾಜು ಕೆ., ತಾಲೂಕು ಆರೋಗ್ಯಾಧಿಕಾರಿ ನಾಗಭೂಷಣ್ ಅವರು ನೇತೃತ್ವದಲ್ಲಿ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ಕುಂದಾಪುರ ರ್ಯಾಪಿಡ್ ಆಕ್ಷನ್ ತಂಡದ ಸಭೆ ನಡೆ ನಡೆಸಲಾಯಿತು. ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಹೋಮ್ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳ ಮನೆಗೆ ಆರೋಗ್ಯ ತಪಾಸಣಾ ತಂಡದೊಂದಿಗೆ ಪೊಲೀಸ್ ಸಿಬ್ಬಂಧಿಗಳು ತೆರಳುವುದು. ಹೋಮ್ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳ ಮನೆಯ ಎದುರು ಮುದ್ರಿತ ಭಿತ್ತಿಪತ್ರವನ್ನು ಅಂಟಿಸುವುದು. ಕೊರೋನಾ ವೈರಸ್ ಶಂಕಿತ ವ್ಯಕ್ತಿಗಳ ಮನೆಗಳಿಗೆ ತೆರಳಿದ ಸಮಯದಲ್ಲಿ ಅವರು ಮನೆಯಲ್ಲಿ ಇಲ್ಲದಿರುವುದು ಕಂಡುಬಂದರೆ ಅಂತವರ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸುವುದು. ಯಾವುದಾದರೂ ವ್ಯಕ್ತಿಗಳ ಬಗ್ಗೆ ಕರೋನಾ ಸೊಂಕಿನ ಬಗ್ಗೆ ಸಂಶಯವಿದ್ದಲ್ಲಿ ತಾಲೂಕು ಆರೋಗ್ಯ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸುವುದು. ಸೇವೆಯಲ್ಲಿರುವ ಅಧಿಕಾರಿ, ಸಿಬ್ಬಂಧಿ ಹೊರತುಪಡಿಸಿ ಬೇರೆ ವ್ಯಕ್ತಿಗಳು ಓಡಾಟ ನಡೆಸದಂತೆ…
