ಕೋಟ ಶ್ರೀನಿವಾಸ ಪೂಜಾರಿ | ಕುಂದಾಪ್ರ ಡಾಟ್ ಕಾಂ ಲೇಖನ. ಕಡಲ ತಡಿಯ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ವಿಜೇತ ನಮ್ಮೂರ ಶಿವರಾಮ ಕಾರಂತ ಬಹುಮುಖಿ ವ್ಯಕ್ತಿತ್ವದ ಒಂದು ವಿಸ್ಮಯ ವ್ಯಕ್ತಿ ಅಲ್ಲ, ವಿಸ್ಮಯ ಶಕ್ತಿಯಾಗಿದ್ದವರು. ಸಾಹಿತ್ಯ, ಕಲೆ, ಸಂಸ್ಕೃತಿ ರಚನಾತ್ಮಕ ಕಾರ್ಯಕ್ರಮಕ್ಕಾಗಿ ಅಹರ್ನಿಶಿ ದುಡಿ, ಸಮಾಜದಲ್ಲಿ ಅನ್ಯಾಯ, ಅಕ್ರಮ, ಅಸ್ಪ್ರಶ್ಯತೆ, ಭ್ರಷ್ಟಾಚಾರ ಇವುಗಳೆಲ್ಲ ನಡೆದಾಗ ಕಾರಂತರು ಸಡ್ಡು ಹೊಡೆದು ಪ್ರತಿರೋಧ ಮಾಡಿದ್ದರು. ಕಾರಂತರ ಬದುಕಿನ ದಿನಗಳಲ್ಲಿ ಕೋರ್ಟು, ಕಛೇರಿ, ನ್ಯಾಯಾಲಯಗಳೆಲ್ಲ ನ್ಯಾಯ ನಿರಾಕರಣೆ ಮಾಡಿದರೆ, ಸಮನಾಂತರ ಸರಕಾರದಂತಿದ್ದ ಕಾರಂತರು ನೊಂದವರ ಧನಿಯಾಗಿ ಆರ್ಭಟಿಸಿ ನ್ಯಾಯ ಕೊಡುತ್ತಿದ್ದರು. ಕಾರಂತರ ಅಪಾರ ಜ್ಞಾನವನ್ನು ಅರ್ಥಮಾಡಿಕೊಂಡವರು ಶಿವರಾಮ ಕಾರಂತರೇ ಒಂದು ವಿಶ್ವವಿದ್ಯಾಲಯ ಎನ್ನುತ್ತಿದ್ದರು. ಕಾರಂತರ ಆತ್ಮಚರಿತ್ರೆ, ಹುಚ್ಚು ಮನಸ್ಸಿನ ಹತ್ತುಮುಖಗಳನ್ನು ಓದಿದವರಷ್ಟೇ ಅವರ ಆಸಕ್ತ ಕ್ಷೇತ್ರದ ಸರ್ವವ್ಯಾಪಿ, ಸರ್ವಸ್ಪರ್ಶಿ ಅನುಭವ ಅರ್ಥಮಾಡಿಕೊಳ್ಳಬಲ್ಲರು. ಕಾರಂತರ ವ್ಯಕ್ತಿತ್ವವೇ ವಿಮರ್ಶಾತೀತ. ತನ್ನೆಳೆಯ ದಿನಗಳಲ್ಲಿಯೇ ಮಡಿವಂತಿಕೆ ಮೀರಿ ಅಂತರ್ಜಾತಿ ವಿವಾಹವಾದರು. ಅಸ್ಪ್ರಶ್ಯತೆಯನ್ನು ಸೆಟೆದು ವಿರೋಧಿಸಿದರು. ಕೈಗಾ ಅಣು ಸ್ಥಾವರದ ವಿವಾದ ಭುಗಿಲೆದ್ದಾಗ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಹಾಲಯ ಅಮಾವಾಸ್ಯೆಯಂದು ಸಮುದ್ರ ಸ್ನಾನಕ್ಕೆಂದು ತೆರಳಿದ್ದ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಸಮುದ್ರದಲೆಯ ಹೊಡೆತಕ್ಕೆ ಸಿಲುಕಿ ಅಲ್ಲಿಯೇ ಬಿದ್ದ ಘಟನೆ ವರದಿಯಾಗಿದೆ. ಬೆಂಬಲಿಗರೊಂದಿಗೆ ಸಮುದ್ರ ಸ್ನಾನಕ್ಕೆ ತೆರಳಿದ್ದ ಶಾಸಕರು, ಸಮುದ್ರದಲ್ಲಿ ಮುಂದೆ ಹೋಗಬೇಡಿ ಎಂದರೂ ಕೇಳಿಸಿಕೊಳ್ಳದೇ, ಸಮುದ್ರದಲ್ಲಿ ಮುಂದೆ ಸಾಗಿದ್ದರು. ಒಮ್ಮೆ ಮುಳುಗೆದ್ದು ಮತ್ತೆ ಮುಳುಗಬೇಕು ಎಂಬಷ್ಟರಲ್ಲಿ ಬಂದ ಬೃಹತ್ ಅಲೆಯಿಂದಾಗಿ ಅವರು ಆಯತಪ್ಪಿ ಅಲ್ಲಿಯೇ ಬಿದ್ದರು. ಅವರು ಜೊತೆಗಿದ್ದ ಬೆಂಬಲಿಗರು ಅವರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದರಾದರೂ ಕ್ಷಣಕಾಲ ಬೃಹತ್ ಅಲೆಯಿಂದಾಗಿ ಎತ್ತಲಾಗಲಿಲ್ಲ. ಬಳಿಕ ಎತ್ತಲೂ ಸೇರಿ ಶಾಸಕರನ್ನು ಮೇಲಕ್ಕೆತ್ತಿದರು. ಶಾಸಕರು ಸಮುದ್ರ ಸ್ನಾನಕ್ಕೆ ತೆರಳುವ ವೀಡಿಯೋ ಮಾಡಲು ಹೊರಟಿದ್ದ ಅವರ ಬೆಂಬಲಿಗನೊಬ್ಬ ಅವರು ಸಮುದ್ರದಲ್ಲಿ ಬಿದ್ದು ಹೊರಳಾಡಿದ ವೀಡಿಯೋವನ್ನೂ ಚಿತ್ರೀಕರಿಸಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Watch Video
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉತ್ಕೃಷ್ಟ ಸೇವೆಯ ಮೂಲಕ ಕುಂದಾಪುರದಲ್ಲಿ ಯಶಸ್ವೀ 6ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಇಲ್ಲಿನ ಪ್ರಸಿದ್ಧ ಮೊಬೈಲ್ ಮಾರಾಟ ಮಳಿಗೆ ’ಮೊಬೈಲ್ ಎಕ್ಸ್’ ಕುಂದಾಪುರದ ಮುಖ್ಯರಸ್ತೆಯ ರಾಮಕೃಷ್ಣ ಕಾಂಪ್ಲೆಕ್ಸ್ನಲ್ಲಿ ಇನ್ನೊಂದು ಮಳಿಗೆ ’ಮೊಬೈಲ್ ಎಕ್ಸ್‌ಪ್ರೆಸ್’ ಆರಂಭಿಸಿದ್ದು, ಇಂದು ಕೋಣಿ ಮಾನಸಜ್ಯೋತಿ ವಿಶೇಷ ಮಕ್ಕಳು ನೂತನ ಮಳಿಗೆಯನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಒಪ್ಪೊ ಡಿಸ್ಟ್ರಿಬ್ಯೂಟರ್ ಕೆ.ಪಿ ಕಾಮತ್, ಸ್ಯಾಮಸಂಗ್ ಡಿಸ್ಟ್ರಿಬ್ಯೂಟರ್ ಶ್ರೀಕಾಂತ್, ವಿವೋ ಜನರಲ್ ಮ್ಯಾನೆಜರ್ ಪೃಥ್ವಿ, ಕಟ್ಟಡದ ಮಾಲಿಕ ರಾಜೇಶ್ ಶೇಟ್ ಮಾನಸ ಜ್ಯೋತಿ ಟ್ರಸ್ಟಿನ ಶೋಭಾ, ಅಕಿಲೇಶ್ ಮೊದಲಾದವರು ಇದ್ದರು. ಮೊಬೈಲ್ ಎಕ್ಸ್ ಸಮೂಹ ಸಂಸ್ಥೆಗಳ ಪ್ರವರ್ತಕ ಮುಸ್ತಾಫಾ ಅತಿಥಿಗಳನ್ನು ಸ್ವಾಗತಿಸಿದರು. ಕೋಣಿ ಮಾನಸಜ್ಯೋತಿ ವಿಶೇಷ ಮಕ್ಕಳ ಶಾಲೆಗೆ ದೇಣಿಗೆ ನೀಡಲಾಯಿತು. ಮೊಬೈಲ್ ಎಕ್ಸ್ಪ್ರೆಸ್ನಲ್ಲಿ ಹೋಲ್ ಸೆಲ್ ಹಾಗು ರಿಟೇಲ್ ಕಂಪ್ಯೂಟರ್ ಅಕ್ಸೆಸರೀಸ್, ಮೊಬೈಲ್ಸ್ ಸೇಲ್ ಹಾಗು ಸರ್ವಿಸ್ ಲಭ್ಯವಿರಲಿದೆ. ನೂತನ ಮಳಿಗೆಯ ಆರಂಭದ ಕೊಡುಗೆಯಾಗಿ ಅರ್ಧ ದರದಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್ ಅಕ್ಸೆಸರೀಸ್ಗಳನ್ನು ಮಾರಾಟಮಾಡಲಾಗುತ್ತಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಕ್ಷಗಾನ ಕಲಾಕ್ಷೇತ್ರದಲ್ಲಿ ತಮ್ಮದೇ ಪರಂಪರೆಯನ್ನು ಹುಟ್ಟುಹಾಕಿ ಇತಿಹಾಸ ನಿರ್ಮಿಸಿದ ಕಲಾವಿದರ ಕುರಿತಾದ ಸಾಮಗ್ರಿ ಸಿಗುತ್ತಿಲ್ಲ. ಅದರಿಂದಾಗಿ ಅವರ ಬಗೆಗೆ ಪುಸ್ತಕ ಪ್ರಕಟಿಸುವುದು ಕಷ್ಟವಾಗಿದೆ’ ಎಂದು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಹೇಳಿದರು. ಕಿರಿಮಂಜೇಶ್ವರದ ಧಾರೇಶ್ವರ ಯಕ್ಷ ಬಳಗ ಚಾರಿಟಬಲ್ ಟ್ರಸ್ಟ್ ನಾಗೂರಿನ ಕುಂಜಾಲು ಶ್ರೀ ಶೇಷಗಿರಿ ಕಿಣಿ ಭಾಗವತ ಸ್ಮರಣ ವೇದಿಕೆಯಲ್ಲಿ ಪ್ರಸ್ತುತ ಪಡಿಸುತ್ತಿರುವ ೬ನೆ ವರ್ಷದ ಯಕ್ಷಗಾನ ಜ್ಞಾನಯಜ್ಞ ತಾಳಮದ್ದಲೆ ಸಪ್ತಾಹವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ’ಕುಂಜಾಲು ಶೇಷಗಿರಿ ಕಿಣಿ, ತೆಕ್ಕಟ್ಟೆ ಆನಂದ ಮಾಸ್ತರ್ ಅವರು ಅಂತಹ ಪರಂಪರೆ ಸೃಷ್ಟಿಸಿದವರು. ಅವರ ಬಳಿಕದ ತಲೆಮಾರಿನ ಜನ ಅವರು ಶ್ರೇಷ್ಠ ಕಲಾವಿದರಾಗಿದ್ದರು ಎಂದಷ್ಟೆ ಹೇಳುತ್ತಾರೆ. ಅದಕ್ಕಿಂತ ಹೆಚ್ಚಿನ ವಿವರ ಅವರಿಗೆ ತಿಳಿದಿಲ್ಲ. ಹಾಗಿದ್ದರೂ ಯಾರಾದರೂ ಅಂತಹ ಕಲಾವಿದರ ಕುರಿತು ಸಂಶೋಧನೆ ನಡೆಸಿ ಪುಸ್ತಕ ಪ್ರಕಟಿಸುವುದಾದರೆ ಅಕಾಡೆಮಿ ಅವರಿಗೆ ನೆರವು ನೀಡಲಿದೆ’ ಎಂದು ಹೆಗಡೆ ಹೇಳಿದರು. ಟ್ರಸ್ಟ್ ಪ್ರವರ್ತಕ ಭಾಗವತ ಸುಬ್ರಹ್ಮಣ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉತ್ಕೃಷ್ಟ ಸೇವೆಯ ಮೂಲಕ ಕುಂದಾಪುರದಲ್ಲಿ ಯಶಸ್ವೀ 6ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಇಲ್ಲಿನ ಪ್ರಸಿದ್ಧ ಮೊಬೈಲ್ ಮಾರಾಟ ಮಳಿಗೆ ’ಮೊಬೈಲ್ ಎಕ್ಸ್’ ಕುಂದಾಪುರದ ಮುಖ್ಯರಸ್ತೆಯಲ್ಲಿ ಇನ್ನೊಂದು ಮಳಿಗೆ ’ಮೊಬೈಲ್ ಎಕ್ಸ್‌ಪ್ರೆಸ್’ ಆರಂಬಿಸುತ್ತಿದೆ. ಅಕ್ಟೋಬರ್ 7ರ ಭಾನುವಾರ ಮಾನಸಜ್ಯೋತಿ ವಿಶೇಷ ಮಕ್ಕಳು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಮೊಬೈಲ್ ಎಕ್ಸ್ಪ್ರೆಸ್ನಲ್ಲಿ ಹೋಲ್ ಸೆಲ್ ಹಾಗು ರಿಟೇಲ್ ಕಂಪ್ಯೂಟರ್ ಅಕ್ಸೆಸರೀಸ್, ಮೊಬೈಲ್ಸ್ ಸೇಲ್ ಹಾಗು ಸರ್ವಿಸ್ ಲಭ್ಯವಿರಲಿದೆ. ನೂತನ ಮಳಿಗೆಯ ಆರಂಭದ ಕೊಡುಗೆಯಾಗಿ ಅರ್ಧ ದರದಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್ ಅಕ್ಸೆಸರೀಸ್ಗಳನ್ನು ಮಾರಾಟಮಾಡಲಾಗುತ್ತಿದೆ. ಜೊತೆಗೆ 13ರಂದು ಲಕ್ಕಿ ಗ್ರಾಹಕರನ್ನು ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಕ್ಕಿ ಗ್ರಾಹಕರಿಗೆ ಪ್ರಥಮ ಬಹುಮಾನವಾಗಿ ಎಲ್ ಈ ಡಿ ಟಿವಿ, ಎರಡನೇ ಬಹುಮಾನವಾಗಿ ’ಟವರ್ ಸಬ್‌ವೂಫರ್’, ಮೂರನೇ ಬಹುಮಾನವಾಗಿ ’ಸ್ಮಾರ್ಟ್ ಪೋನ್’ ಲಭ್ಯವಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಮುಸ್ತಫಾ ಅವರು ತಿಳಿಸಿದ್ದಾರೆ. ಸ್ಥಳ: ರಾಮಕೃಷ್ಣ ಕಾಂಪ್ಲೆಕ್ಸ್ ಸಾಯಿ ಸೆಂಟರ್ ಎದುರು ಮುಖ್ಯರಸ್ತೆ ಕುಂದಾಪುರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರು ನೀಡಿದ ನಾಲ್ಕು ನಿಮಿಷಗಳ ಉಪನ್ಯಾಸದಿಂದಾಗಿ ವಿಶ್ವಕ್ಕೆ ಭಾರತದ ಬಗೆಗಿನ ಅಭಿಪ್ರಾಯ ಹಾಗೂ ದೃಷ್ಟಿಕೋನ ಬದಲಾಗುವಂತಾಯಿತು. ಭಾರತದ ಪ್ರತಿ ಯುವಕನಲ್ಲಿಯೂ ಆತ್ಮವಿಶ್ವಾಸ ವೃದ್ಧಿಯಾಯಿತು. ಇದು ಸ್ವಾತಂತ್ರ್ಯ ಚಳುವಳಿಗೂ ಪ್ರೇರಣೆಯಾಗಿತ್ತು. ತನ್ನ ಮಾತಿನ ಮೂಲಕ ಅಂತಹ ಪ್ರಭಾವವನ್ನು ಬೀರಿದ್ದ ಸ್ವಾಮಿ ವಿವೇಕಾನಂದರ ಭಾಷಣವನ್ನು ಮತ್ತೊಮ್ಮೆ ಸ್ಮರಿಸುವ ಮೂಲಕ ಯುವಕರನ್ನು ಜಾಗೃತಿಗೊಳಿಸುವ ಕೆಲಸವಾಗುತ್ತಿದೆ ಎಂದು ಮಂಂಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಧರ್ಮವೃತ್ತಾನಂದ ಸ್ವಾಮೀಜಿ ಹೇಳಿದರು. ಬೈಂದೂರು ಶಾರದಾ ವೇದಿಕೆಯಲ್ಲಿ ಯುವ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಯುವ ಬ್ರಿಗೇಡ್ ಬೈಂದೂರು ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ ೧೨೫ವರ್ಷ ಸಂದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿವೇಕಾನಂದರು ಒಂದು ಧರ್ಮ, ದೇಶಕ್ಕೆ ಸೀಮಿತವಾದವರಲ್ಲ. ಅವರು ವಿಶ್ವ ಮಾನವರಾಗಿದ್ದವರು. ವಿವೇಕಾನಂದರ ಭಾಷಣದಿಂದಾಗಿ ವಿವಿಧ ಧರ್ಮಶಾಸ್ತ್ರಜ್ಞರಲ್ಲಿ ಹಿಂದೂ ಧರ್ಮ ಶ್ರೇಷ್ಠ ಧರ್ಮ ಎಂಬ ಭಾವನೆ ಮೊಳಕೆಯೊಡೆಯುವಂತಾಯಿತು. ಸ್ವಾಮೀಜಿಯವರ ಜೀವನತತ್ವವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತನ್ನ ಮನೆಯೆದುರು ನಡೆಯುತ್ತಿದ್ದ ಮೀನುಗಾರಿಕೆಯನ್ನು ನೋಡುಲು ಸಮುದ್ರ ತೀರಕ್ಕೆ ತೆರಳಿದ್ದ ಮನೋಜ್ ಎಂಬ ಯುವಕನೋರ್ವ ಸಮುದ್ರದ ಅಲೆಯಲ್ಲಿ ಸಿಲುಕಿ ಮೃತಪಟ್ಟ ಘಟನೆ ವರದಿಯಾಗಿದೆ. ತಾಲೂಕಿನ ಕೋಡಿಯ ನಿವಾಸಿ ಮನೋಜ ಪೂಜಾರಿ (18) ಮೃತ ದುರ್ದೈವಿ. ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಮನೋಜ್ ಪೂಜಾರಿ ಕಾಲೇಜಿಗೆ ರಜೆ ಇದ್ದುದರಿಂದ ಸ್ನೇಹಿತರೊಂದಿಗೆ ತಮ್ಮ ಮನೆಯೆದುರೇ ಇದ್ದ ಸಮುದ್ರ ತೀರಕ್ಕೆ ತೆರಳಿದ್ದ. ಈ ಸಂದರ್ಭ ಸಮುದ್ರದ ರಕ್ಕಸದ ಅಲೆಯೊಂದಕ್ಕೆ ಸಿಲುಕಿ ಆತ ನಾಪತ್ತೆಯಾಗಿದ್ದ. ಕೂಡಲೇ ಅಲ್ಲಿದ್ದ ಮೀನುಗಾರರು ರಕ್ಷಿಸುವ ಪ್ರಯತ್ನ ನಡೆಸಿದರಾದರೂ ಅಷ್ಟರಲ್ಲಾಗಲೇ ಆತ ಕೊಚ್ಚಿಹೋಗಿದ್ದ. ಭಾನುವಾರ ಸಂಜೆಯ ತನಕವೂ ಹುಡುಕಾಡ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಹಾಗೂ ಕುಂದಾಪುರ ಪೊಲೀಸರು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಿನಿಯರ್ ಸಿಟಿಸನ್ ಡೇ ಅಂಗವಾಗಿ ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ಸಾರಥ್ಯದಲ್ಲಿ ಉಡುಪಿ ಅಜ್ಜರಕಾಡುವಿನಲ್ಲಿ ಆಯೋಜಿಸಲಾದ ಸ್ವರ್ಧೆಯಲ್ಲಿ ಬೈಂದೂರು ಹಿರಿಯ ನಾಗರಿಕರ ವೇದಿಕೆ ಸದಸ್ಯ ಮಯ್ಯಾಡಿಯ ನಿವೃತ್ತ ಮುಖ್ಯೋಪಧ್ಯಾಯ ತಿಮ್ಮಪ್ಪಯ್ಯ ಜಿ. ಅವರು ಏಕಪಾತ್ರಾಭಿನಯದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಒತ್ತಿನಣೆ ಗುರು ರಾಘವೇಂದ್ರ ಮಠದಲ್ಲಿ ಬೈಂದೂರಿನ ಸಚಿನ್ ಬಿ. ಶೇರುಗಾರ್ ನಿರ್ದೇಶನದಲ್ಲಿ, ಕಿಶನ್ ಖಾರ್ವಿ ಛಾಯಾಗ್ರಹಣದಲ್ಲಿ ತಯಾರಾಗುತ್ತಿರುವ ‘ಜೊತೆ ಜೊತೆಯಲಿ’ ಕಿರುಚಿತ್ರದ ಮುಹೂರ್ತ ನಡೆಯಿತು. ಕಲಾವಿದರಾದ ರವಿ, ಕೃಷ್ಣ, ಅಕ್ಷಯ, ಕಿರಣ,ಶ್ರೀನಿವಾಸ, ಕಾರ್ತಿಕೇಯ, ವಿಕ್ರಮ್, ರೋಹಿತ್, ಸಹ ಛಾಯಾಗ್ರಹಕ ಸಂಕೇತ್ ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಎಂ.ಬಿ. ಎಜುಕೇಷನ್ ಟ್ರಸ್ಟ್ ಮತ್ತು ಕ್ಯಾಡಮ್ಯಾಕ್ಷ ಸಂಸ್ಥೆ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಬೈಂದೂರು ಮತ್ತು ಉಪ್ಪುಂದದಲ್ಲಿ ನಡೆಯುತ್ತಿರುವ ಕೇಂದ್ರ ಸರಕಾರದ ದಿನ್ ದಯಾಳ ಕೌಶಲ್ಯಾಭಿವೃದ್ದಿ ಕೇಂದ್ರದಲ್ಲಿ ಅಂತ್ಯೋದಯ ದಿನಾಚರಣೆ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಮಾಹದೇವ ಬಿಲ್ಲವ ಅವರು ಮಾತನಾಡಿ ಈ ಯೋಜನೆ ಗ್ರಾಮೀಣ ಭಾಗದ ನಿರುದ್ಯೋಗವನ್ನು ಹೋಗಲಾಡಿಸಲು ಸಹಾಕಾರಿಯಾಗಿದೆ ಎಂದರು. ಯಡ್ತರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರುಕ್ಕಣ್ಣ ಗೌಡ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷರಾದ ಮಣಿಕಂಠ ಸ್ವಾಗತಿಸಿದರು. ಹಾಗೂ ಭಾಸ್ಕರ ಬಿಲ್ಲವ ವಂದಿಸಿದರು.
