Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ದೇವಲ್ಕುಂದ ಗ್ರಾಮದ ಎನ್.ಟಿ.ಎಸ್. ಸಾಗರ ಪ್ಯಾಲೇಸ್‌ನಲ್ಲಿ ಭಾನುವಾರ ನಡೆದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಪದಪ್ರದಾನ ಮತ್ತು ಕಾರ್ಯಕರ್ತರ ಸಮಾವೇಶವನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡುರಾವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಐದು ವರ್ಷ ಪೂರೈಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ನೀಡಿದ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಚುನಾವಣೆ ಬಂದೊಡನೆ ಹಿಂದುತ್ವ ಮತ್ತು ರಾಮಮಂದಿರ ನಿರ್ಮಾಣದ ವಿಚಾರವನ್ನು ಎತ್ತಿಕೊಂಡು ಜನರ ಭಾವನೆಗಳನ್ನು ಕೆರಳಿಸಿ ಇನ್ನೊಮ್ಮೆ ಅಧಿಕಾರ ಹಿಡಿಯುವ ಹುನ್ನಾರ ನಡೆಸಿದೆ. ದೇಶದ ಮತದಾರರನ್ನು ಅವರು ಸೃಷ್ಟಿಸಿರುವ ಭ್ರಮಾಲೋಕದಿಂದ ಹೊರತರು ಸವಾಲು ಕಾಂಗ್ರೆಸ್ ಪಕ್ಷದ ಮುಂದಿದೆ ಎಂದು ಹೇಳಿದರು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ಹಲವು ಪ್ರಗತಿಪರ ಮತ್ತು ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ನೀಡಿತ್ತು. ಹಗರಣಮುಕ್ತ ಆಡಳಿತ ನೀಡಿತ್ತು. ಉಡುಪಿ ಜಿಲ್ಲೆಯ ಪಕ್ಷದ ಎಲ್ಲ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭೂತಪೂರ್ವ ಅಭಿವೃದ್ಧಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿಭೆಯನ್ನು ಹೊರ ತೆಗೆಯುವುದೇ ವಿದ್ಯಾಭ್ಯಾಸ. ಅಕ್ಷರ ಜ್ಞಾನ ಓದುವುದಕ್ಕೋ ಬರೆಯುವುದಕ್ಕೋ ತಿಳುವಳಿಕೆಯೇ ಹೊರತು ಅದು ಜಗತ್ತಿನ ಅರಿವಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಜೀವ ಯೋಗ್ಯತೆಗಳಿರುತ್ತದೆ. ತನ್ನ ಅರಿವೇ ತನಗೆ ಗುರು ಎಂದು ಅರಿತಾಗ ಮಾತ್ರ ಪ್ರಪಂಚದಲ್ಲಿ ಭೃಷ್ಟಾಚಾರ, ಅತ್ಯಾಚಾರ, ಗಲಭೆ ಇರುವುದಿಲ್ಲ. ಅವಾಗಲೇ ವಿಶ್ವಶಾಂತಿ ಸಾಧ್ಯ ಎಂದು ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಹೇಳಿದರು. ವತ್ತಿನೆಣೆ ಕ್ಷಿತಿಜ ನೇಸರಧಾಮದಲ್ಲಿ ಶನಿವಾರ ಬೈಂದೂರು ರೋಟರಿ ಕ್ಲಬ್ ವತಿಯಿಂದ ನಡೆದ ವಿಶ್ವ ಅರಿವು ಮತ್ತು ಶಾಂತಿ ದಿನಾಚರಣೆಯಲ್ಲಿ ಪ್ರಧಾನ ಭಾಷಣಕಾರರಾಗಿ ಉಪನ್ಯಾಸ ನೀಡಿದರು. ಇಂದಿನ ಕಾಲಘಟ್ಟದಲ್ಲಿ ಜಗತ್ತು ಅಂಗೈಯಲ್ಲಿದ್ದರೆ ಬೆರಳು ಅದರ ನಿಯಂತ್ರಣ ಮಾಡುತ್ತದೆ. ಕಳೆದ ೧೫೦ ವರ್ಷಕ್ಕೂ ಹೆಚ್ಚು ಅಮೇರಿಕಾದ ಚಿಕಾಗೋನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಸನ್ಯಾಸಿ ಸ್ವಾಮಿ ವಿವೇಕಾನಂದರ ಭಾಷಣದಿಂದ ಸಾಹೋದರ್ಯ ಹುಟ್ಟಿಕೊಂಡಿತು. ಹಾಗೆಯೇ ರೋಟರಿ ಕೂಡಾ ಚಿಕಾಗೋನಲ್ಲಿ ಹುಟ್ಟಿದ ಸಂಸ್ಥೆಯಾದರೂ ವಿಶ್ವ ಭಾತೃತ್ವವನ್ನು ಸಾರುತ್ತಿದೆ. ಇದು ಒಂದು ರೀತಿಯಲ್ಲಿ ಕೊಟ್ಟು ಪಡೆಯುವ ವಿಧಾನವಾಗಿದ್ದರೂ…

Read More

ಕುಂದಾಪ್ರ ಡಾಟ್ ಕಂ ಸುದ್ದಿ. ಕುಂದಾಪುರ: ಮುಂದಿನ ಹತ್ತು ದಿನಗಳೊಳಗೆ ಭಾರತೀಯ ಜನತಾ ಪಕ್ಷದ ಚುನಾವಣಾ ಪೂರ್ವ ಸಿದ್ಧತೆಯಾಗಿ ಹಮ್ಮಿಕೊಳ್ಳಲಾಗುತ್ತಿರುವ ನಾಲ್ಕೈದು ಕಾರ್ಯಕ್ರಮಗಳನ್ನು ನಡೆಸಬೇಕಾಗಿದ್ದು ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಸಕ್ರಿಯರಾಗಬೇಕು ಆ ಮೂಲಕ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆಕೊಟ್ಟರು. ಭಾರತೀಯ ಜನತಾ ಪಕ್ಷದ ಮಹಾ ಸಂಪರ್ಕ ಅಭಿಯಾನವನ್ನು ಕುಂದಾಪುರದಲ್ಲಿ ಭಾನುವಾರ ಬೆಳಿಗ್ಗೆ ಪಕ್ಷದ ಕಚೇರಿಯಲ್ಲಿ ಚಾಲನೆಗೊಳಿಸಿ ಬಳಿಕ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷವು ದೇಶಾದ್ಯಂತ ನಿಗಧಿತ ಸಮಯದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಏಕಕಾಲದಲ್ಲಿ ನಡೆಯುವಂತೆ ಸೂಚಿಸಲಾಗಿದೆ. ಅದರಂತೆ ಫೆಬ್ರವರಿ ೨೬ರಂದು ಸಂಜೆ ಪ್ರತಿಯೊಂದು ಬೂತ್ ಮಟ್ಟದಲ್ಲಿಯೂ ’ಕಮಲಜ್ಯೋತಿ’ಯನ್ನು ಬೆಳಗಿಸಬೇಕು ಮತ್ತು ಅದರ ಫೋಟೋ ತೆಗೆದು ಪಕ್ಷದ ಕಚೇರಿಗೆ ಕಳುಹಿಸಬೇಕು. ಫೆಬ್ರುವರಿ ೨೮ರಂದು ನರೇಂದ್ರ ಮೋದಿಯವರು ವಿಡಿಯೋ ಮೂಲಕ ಮನ್ ಕೀ ಬಾತ್ ಕಾರ್ಯಕ್ರಮ ನಡೆಸಿಕೊಡಲಿದ್ದು, ಅವರನ್ನು ನೋಡುವ ಅವಕಾಶವನ್ನು ಮತದಾರರು ಬಳಸಿಕೊಳ್ಳಲು ಕ್ರಮ, ಮಾರ್ಚ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ವರ್ಷದೊಳಗೆ ಕ್ಷೇತ್ರ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ಕಾರ್ಯಗಳಿಗಾಗಿ ನಾನಾ ಇಲಾಖೆಯಿಂದ ಸುಮಾರು ೧೪೭ ಕೋಟಿ ರೂ. ಅನುದಾನ ಮಂಜೂರಾತಿ ದೊರೆತಿದೆ ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ತಿಳಿಸಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೨ ಸಾವಿರ ಹೆಕ್ಟೇರ್ ಭೂಪ್ರದೇಶದಕ್ಕೆ ನೀರುಣಿಸುವ ಬಹುಬೇಡಿಕೆಯ ಸಿದ್ದಾಪುರ-ಸೌಕೂರು ಏತ ನೀರಾವರಿ ಯೋಜನೆಗೆ ಪ್ರಥಮ ಹಂತದಲ್ಲಿ ೫೦ ಕೋಟಿ ರೂ. ಬಜೆಟ್‌ನಲ್ಲಿ ಅನುಮೋದನೆ ದೊರೆತಿದೆ, ಲೋಕೊಪಯೋಗಿ ಇಲಾಖೆಯಿಂದ ಹೆಮ್ಮಾಡಿ-ನೆಂಪು ರಸ್ತೆ ದ್ವಿಪಥ ಕಾಮಗಾರಿಗೆ ೧೦ ಕೋಟಿ, ಅಂಪಾರು, ಶಂಕರನಾರಾಯಣ, ಈಡೂರು, ಹಾಲ್ಕಲ್ ರಸ್ತೆ ಅಗಲೀಕರಣ ಹಾಗೂ ವೃತ್ತ ರಚನೆಗೆ ೧೨ ಕೋಟಿ, ಕ್ಷೇತ್ರ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಚಿಕ್ಕ ಹಳ್ಳ ದಾಟಲು ೭೯ ಕಾಲು ಸಂಕ ರಚನೆಗೆ ೪ ಕೋಟಿ, ಮೇಕೋಡು-ಚಾಟಕುಳಿ, ನಾಗೂರು-ಹಳಗೇರಿ ರಸ್ತೆ, ಕೆಪ್ಪೆಕೆರೆ-ಹೊರ್ಲಿಮಕ್ಕು-ಹೊಸಾಡು, ಬಂಡಾರಕೇರಿ, ಹೇರಂಜಾಲು- ದಾರಿಮಕ್ಕಿ, ವಸ್ರೆ-ಹುಲ್ಕಡ್ಕಿ, ಗೋಳಿಬೇರು-ಅತ್ಯಾಡಿ, ನಾಯ್ಕನಕಟ್ಟೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ಷೇತ್ರದ ಜನರ ನೀರಾವರಿ ಸೌಕರ್ಯವನ್ನು ಒದಗಿಸಲುವ ನಿಟ್ಟಿನಲ್ಲಿ ರಾಜ್ಯದ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವ ನೇತೃತ್ವದಲ್ಲಿ ರಾಜ್ಯದ ನೀರಾವರಿ ಸಚಿವರನ್ನು ಭೇಟಿಯಾಗಿ ಶಿವಮೊಗ್ಗ ಕ್ಷೇತ್ರಕ್ಕೆ ನಾಲ್ಕು ನೀರಾವರಿ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಅವರು ಬೈಂದೂರು ಪ್ರವಾಸಿ ಮಂದಿರದಲ್ಲಿ ಆದಿತ್ಯವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನೀರಾವರಿ ಯೋಜನೆಯ ಪೈಕಿ ಸುಮಾರು ೧೨೦ ಕೋಟಿ ರೂ. ವೆಚ್ಚದ ಸಿದ್ಧಾಪುರ ಸೌಕೂರು ನೀರಾವರಿ ಯೋಜನೆಗೆ ಈಗಾಗಲೇ ಜೆಟ್‌ನಲ್ಲಿ ಐವತ್ತು ಕೋಟಿ ರೂ. ಮೀಸಲಿರಿಸಲಾಗಿದ್ದು ಆರಂಭಿಕ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬೈಂದೂರು ಕ್ಷೇತ್ರದ ಉಪ್ಪುಂದ-ಮಡಿಕಲ್ ಬಂದರು ಅಭಿವೃದ್ಧಿಗೆ ೧೨೦ ಕೋಟಿ, ಮರವಂತೆ ಬಂದರು ೨ನೇ ಹಂತದ ಕಾಮಗಾರಿಗೆ ೩೮ ಕೋಟಿ, ಶಿರೂರು ಅಳ್ವೆಗದ್ದೆ ಬಂದರು ಎರಡನೇ ಹಂತದ ಕಾಮಗಾರಿಗೆ ೯೮ ಕೋಟಿ ಅಗತ್ಯವಿದ್ದು ಕೇಂದ್ರ ಕೃಷಿ ಮಂತ್ರಿಯನ್ನು ಶಾಸಕರೊಂದಿಗೆ ಭೇಟಿಯಾಗಿ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದು,…

Read More

ಸುಬ್ರಹ್ಮಣ್ಯ ಹೆಬ್ಬಾಗಿಲು, ದೋಹಾ – ಕುಂದಾಪ್ರ ಡಾಟ್ ಕಾಂ ಪದ್ಮಶ್ರೀ ವಿಜೇತೆ, ಸುಪ್ರಸಿದ್ಧ ಚಲನಚಿತ್ರ ತಾರೆ, ಕರ್ನಾಟಕದ ತುಳುನಾಡಿನ ಅಪ್ಸರೆ, ಶ್ರೀಮತಿ ಐಶ್ವರ್ಯ ರೈ ಬಚ್ಚನ್ ಅವರು, ದೋಹಾದಲ್ಲಿ ಏರ್ಪಡಿಸಿದ್ದ 2019ನೇ ಸಾಲಿನ ’ಆಭರಣ ಮತ್ತು ಹಡಿಯಾರಗಳ ಪ್ರದರ್ಶನ’ವನ್ನು ಉದ್ಘಾಟಿಸಲು ಆಗಮಿಸಿದ್ದರು. ಕನ್ನಡಿಗರ ಪ್ರತಿನಿಧಿಯಾಗಿ ಹಾಗೂ ಭಾರತೀಯ ಸಮುದಾಯದ ಹಿತನಿಧಿ ಸಂಘದ ಸಹ-ಕಾರ್ಯದರ್ಶಿಯಾಗಿ ನಾನು ಶ್ರೀಮತಿ ರೈ ಇವರನ್ನು ಭೇಟಿಯಾಗಿ ಹರ್ಷದಿಂದ ಶುಭಾಶಯ ಕೋರಿದೆ. ಮೂಲತಃ ತುಳು ಕುಟುಂಬದವರಾದ ರೈ ಅವರು ಜನಿಸಿದ್ದು ಮಂಗಳೂರಿನಲ್ಲಿ, ನನ್ನ ಜನ್ಮಸ್ಥಳವಾದ ಕುಂದಾಪುರದಿಂದ ಸಮೀಪ. ಅವರು ಗಿರಿಶಿಖರದಷ್ಟು ಎತ್ತರಕ್ಕೆ ತಮ್ಮ ಜೀವನದಲ್ಲಿ ಏರಿರುವರು, ನಟನೆಯಲ್ಲಿ, ಹೆಸರು ಗಳಿಸುವಲ್ಲಿ ಹಾಗು ಯಶಸ್ಸಿನಲ್ಲಿ. ಅವರಷ್ಟಲ್ಲದಿದ್ದರೂ, ಅಳಿಲು ಸೇವಕನಂತೆ ಕತಾರಿನ ಅನಿವಾಸಿ ಭಾರತೀಯ ಸಮಾಜಕ್ಕೆ ನನ್ನ ಕೈಲಾದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಅವರಿಗೆ ಹೇಳಿದಾಗ, ಅವರು ಸಂತಸಗೊಂಡು ನನಗೆ ಅಭಿನಂದಿಸಿದರು. ಇಂತಹ ವ್ಯಕ್ತಿತ್ವವನ್ನು ಭೇಟಿ ನೀಡಿದುದೆ ನನ್ನ ಸೌಭಾಗ್ಯವೆಂದು ಪರಿಗಣಿಸುತ್ತೇನೆ. ಐಶ್ವರ್ಯ ರೈ ಬಚ್ಚನ್ ಅವರು 1992ನೇ ಸಾಲಿನಲ್ಲಿ ಚಲನಚಿತ್ರ ರಂಗಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಇಂಡಿಯನ್ ಫೆಡೆರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಸಂಸ್ಥೆ ನವದೆಹಲಿ ಇವರ ಸಂಯೋಜಿತ ಸಂಸ್ಥೆಯಾದ, ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಅಧಿಕೃತ ಮಾನ್ಯತೆ ಹೊಂದಿದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಉಡುಪಿ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದೆ. ನೂತನ ಉಡುಪಿ ಜಿಲ್ಲಾ ಪತ್ರಕರ್ತರ ಯೂನಿಯನ್ ಗೆ ಅಧ್ಯಕ್ಷ ರಾಗಿ ಕೆ.ಶಶಿಧರ್ ಹೆಮ್ಮಣ್ಣ ( ದೂರದರ್ಶನ ಉಡುಪಿ ಜಿಲ್ಲಾ ಪ್ರತಿನಿಧಿ) ಕಾರ್ಯದರ್ಶಿಯಾಗಿ ಶಿಜಿತ್ ಕುಮಾರ್ ( ಫೋಕಸ್ ಟಿವಿ) ಸಂಚಾಲಕರಾಗಿ ಆಸ್ಟ್ರೋ ಮೋಹನ್ (ಉದಯವಾಣಿ), ಜನಾರ್ಧನ್ ಕೊಡವೂರು (ವಿಜಯವಾಣಿ) ಹಾಗು ಗೌರವ ಅಧ್ಯಕ್ಷರಾಗಿ ಯು.ಎಸ್ ಶೆಣೈ (ಕುಂದಪ್ರಭ) ಆಯ್ಕೆಯಾಗಿದ್ದಾರೆ. ಯೂನಿಯನ್ ಗೆ ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಏರ್ಮಾಳ್ , ಸತೀಶ್ ಕುಮಾರ್. ಉಪಾಧ್ಯಕ್ಷರುಗಳಾಗಿ ಡಾ.ಸುಧಾಕರ ನಂಬಿಯಾರ್ , ಡಾ. ಆಕಾಶ್ ರಾಜ್, ಖಜಾಂಚಿ ಶ್ರೇಯಸ್.ಕೆ, ರಾಜ್ಯ ಸಂಘದ ಪ್ರತಿನಿಧಿಯಾಗಿ ರೂಪೇಶ್ ಕಲ್ಮಾಡಿ ಕಾನೂನು ಸಲಹೆಗಾರರಾಗಿ ರವಿಕಿರಣ್ ಮುರ್ಡೇಶ್ವರ, ಶಾಂತರಾಮ್ ಶೆಟ್ಟಿ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸುಕುಮಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ದೇವಾಡಿಗ ಸಂಘ ಪೂಜೆ ವತಿಯಿಂದ ಆಯ್ಕೆ ಮಾಡಲಾದ ದೇವಾಡಿಗ ಯಶಸ್ವಿ ಮಹಿಳೆ ಪುರಸ್ಕಾರಕ್ಕೆ ಉಡುಪಿ ಜಿಲ್ಲಾ ಪಂಚಾಯತಿ ಸದಸ್ಯೆ ಗೌರಿ ದೇವಾಡಿಗ ಆಯ್ಕೆಯಾಗಿದ್ದಾರೆ. ದೇವಾಡಿಗ ಸಂಘ ಪುಣೆ ವಾರ್ಷಿಕೋತ್ಸವ ಸಮಾರಂಭ ಫೆ. 24ರಂದು ನಡೆಯಲಿದ್ದು ಪ್ರಶಸ್ತಿ ಪ್ರದಾನಿಸಲಾಗುತ್ತದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಉಡುಪಿ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಅವರು ನಿರ್ಗಮನ ಎಸ್‌ಪಿ ಲಕ್ಷಣ ನಿಂಬರ್ಗಿ ಅವರಿಂದ ಅಧಿಕಾರ ಸ್ವೀಕರಿಸಿದರು. ನಿಶಾ ಜೇಮ್ಸ್ ೨೦೧೨ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು ಈ ತನಕ ಬೆಂಗಳೂರಿನಲ್ಲಿ ಕರ್ನಾಟಕ ಮೀಸಲು ಪೊಲೀಸ್ ಪಡೆಯ ೪ನೆಯ ಬೆಟಾಲಿಯನ್ ಕಮಾಂಡರ್ ಆಗಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನಿಶಾ ಜೇಮ್ಸ್ ಕಾನೂನು ಸುವ್ಯವಸ್ಥೆ ಕಾಪಾಡುವುದು ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲರ‍್ಸ್ ಕನ್ನಡದ ಮಜಾ ಭಾರತ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಆಯ್ಕೆಯಾದ ಮರವಂತೆಯ ಧನ್ಯಾ ಪೂಜಾರಿ ಅವರನ್ನು ಬೈಂದೂರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಪ್ರಧಾನ ಕಛೇರಿಯಲ್ಲಿ ಇತ್ತಿಚಿಗೆ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಕಾರಂತ್ ಉಪ್ಪಿನಕುದ್ರು, ಸಹಕಾರ ಅಭಿವೃದ್ಧಿ ಅಧಿಕಾರಿ ಅರುಣಕುಮಾರ್ ಎಸ್.ವಿ., ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವಿನಾಯಕ ರಾವ್, ನಿರ್ದೇಶಕ ಶಿವರಾಮ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಿ. ಯಡ್ತರೆ ಮೊದಲಾದವರು ಇದ್ದರು.

Read More