ಉಡುಪಿ ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಅಸ್ತಿತ್ವಕ್ಕೆ. ಉಡುಪಿ ಜಿಲ್ಲಾಧ್ಯಕ್ಷರಾಗಿ ಕೆ. ಶಶಿಧರ್ ಹೆಮ್ಮಣ್ಣ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಇಂಡಿಯನ್ ಫೆಡೆರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಸಂಸ್ಥೆ ನವದೆಹಲಿ ಇವರ ಸಂಯೋಜಿತ ಸಂಸ್ಥೆಯಾದ, ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಅಧಿಕೃತ ಮಾನ್ಯತೆ ಹೊಂದಿದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಉಡುಪಿ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದೆ.

Call us

Click Here

ನೂತನ ಉಡುಪಿ ಜಿಲ್ಲಾ ಪತ್ರಕರ್ತರ ಯೂನಿಯನ್ ಗೆ ಅಧ್ಯಕ್ಷ ರಾಗಿ ಕೆ.ಶಶಿಧರ್ ಹೆಮ್ಮಣ್ಣ ( ದೂರದರ್ಶನ ಉಡುಪಿ ಜಿಲ್ಲಾ ಪ್ರತಿನಿಧಿ) ಕಾರ್ಯದರ್ಶಿಯಾಗಿ ಶಿಜಿತ್ ಕುಮಾರ್ ( ಫೋಕಸ್ ಟಿವಿ) ಸಂಚಾಲಕರಾಗಿ ಆಸ್ಟ್ರೋ ಮೋಹನ್ (ಉದಯವಾಣಿ), ಜನಾರ್ಧನ್ ಕೊಡವೂರು (ವಿಜಯವಾಣಿ) ಹಾಗು ಗೌರವ ಅಧ್ಯಕ್ಷರಾಗಿ ಯು.ಎಸ್ ಶೆಣೈ (ಕುಂದಪ್ರಭ) ಆಯ್ಕೆಯಾಗಿದ್ದಾರೆ.

ಯೂನಿಯನ್ ಗೆ ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಏರ್ಮಾಳ್ , ಸತೀಶ್ ಕುಮಾರ್. ಉಪಾಧ್ಯಕ್ಷರುಗಳಾಗಿ ಡಾ.ಸುಧಾಕರ ನಂಬಿಯಾರ್ , ಡಾ. ಆಕಾಶ್ ರಾಜ್, ಖಜಾಂಚಿ ಶ್ರೇಯಸ್.ಕೆ, ರಾಜ್ಯ ಸಂಘದ ಪ್ರತಿನಿಧಿಯಾಗಿ ರೂಪೇಶ್ ಕಲ್ಮಾಡಿ ಕಾನೂನು ಸಲಹೆಗಾರರಾಗಿ ರವಿಕಿರಣ್ ಮುರ್ಡೇಶ್ವರ, ಶಾಂತರಾಮ್ ಶೆಟ್ಟಿ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸುಕುಮಾರ್ ಮುನಿಯಾಲ್ , ಯಶೋದ, ಶ್ರೀಧತ್ತ ಶೆಟ್ಟಿ, ಸುರೇಶ್ ಶೆಟ್ಟಿ, ಬಿಂಬ ವಸಂತ ಕುಮಾರ್ ನಿಯುಕ್ತಿ ಗೊಂಡಿದ್ದಾರೆ.

 

Leave a Reply