ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಸಂಜನಾ ಉಡುಪ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 620 ಅಂಕ ಪಡೆದ ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣಳಾಗಿದ್ದಾಳೆ. ಈಕೆ ಕೋಟ ವಿವೇಕ ಕಾಲೇಜು ಪ್ರಾಂಶುಪಾಲರಾದ ಜಗದೀಶ್ ನಾವಡ ಹಾಗೂ ಸುವರ್ಣ ದಂಪತಿಗಳ ಪುತ್ರಿಯಾಗಿದ್ದು ಪಿಯುಸಿಯಲ್ಲಿ ಸೈನ್ಸ್ ವ್ಯಾಸಂಗ ಮಾಡಿ ಮುಂದೆ ವೈದ್ಯಕೀಯ ಪದವಿ ಪಡೆಯುವ ಹಂಬಲದಲ್ಲಿದ್ದಾಳೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿನ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿ ಅನಘ ಉಡುಪ 625ರಲ್ಲಿ 623 ಅಂಕ ಪಡೆದು ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಈಕೆ ಕೋಟ ಮಣೂರು ವಿನಯಾ ನಾಗೇಶ್ ಉಡುಪ ದಂಪತಿಗಳ ಪುತ್ರಿಯಾಗಿದ್ದು, ಮುಂದೆ ಏರೋಸ್ಪೆಸ್ ಇಂಜಿನಿಯರ್ ಆಗುವ ಬಯಕೆ ಹೊಂದಿದ್ದಾಳೆ. .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ತುತಿ ತೋಳಾರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ರಲ್ಲಿ 619 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣಳಾಗಿದ್ದಾಳೆ. ಈಕೆ ತಾಲೂಕಿನ ಕನ್ಯಾನ ಗ್ರಾಮದ ಕಬ್ಬೈಲು ನಿವಾಸಿ ಸುರೇಶ್ ತೋಳಾರ್ ಹಾಗೂ ಜ್ಯೋತಿ ಎಸ್. ತೋಳಾರ್ ದಂಪತಿಗಳ ಪುತ್ರಿಯಾಗಿದ್ದಾಳೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: 29ರಿಂದ ನಾಲ್ಕು ದಿನ ನಡೆಯಲಿರುವ ಬೈಂದೂರು ತಾಲ್ಲೂಕು ಉಳ್ಳೂರಿನ ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶೋತ್ಸವಕ್ಕೆ ಎಲ್ಲ ಸಿದ್ಧತೆಗಳು ಮುಗಿದಿದ್ದು, ಸೋಮವಾರ ಆರಂಭಿಕ ವಿಧಿಗಳನ್ನು ನಡೆಸಲಾಗಿದೆ. 1ರಂದು ಪುನರಷ್ಟಬಂಧ, 2ರಂದು ಬ್ರಹ್ಮಕಲಶೋತ್ಸವ ನಡೆಯುವುದು ಎಂದು ದೇವಸ್ಥಾನದ ಆಡಳಿತ ಧರ್ಮದರ್ಶಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ದೇವಾಲಯ ಇರುವ ಸ್ಥಳವನ್ನು ಮುನಿಕಟ್ಟೆ ಎಂದು ಕರೆಯಲಾಗುತ್ತಿತ್ತು. ಮುನಿ ತಪಸ್ಸು ಆಚರಿಸಿ, ದುರ್ಗಾಪರಮೇಶ್ವರಿಯನ್ನು ಒಲಿಸಿಕೊಂಡು ಅವಳು ಇಲ್ಲಿ ನೆಲೆ ನಿಲ್ಲುವಂತೆ ಮಾಡಿದರು ಎಂಬ ಹಿನ್ನೆಲೆಯ ಈ ಕ್ಷೇತ್ರವನ್ನು ಪರಿಸರದ ಜನರು ನೂರಾರು ವರ್ಷಗಳಿಂದ ಆರಾಧಿಸಿಕೊಂಡು ಬಂದಿರುವರು. ಕೆಂಪು ಕಲ್ಲಿನ ಗುಹೆಯಂತಹ ಈ ಶ್ರದ್ಧಾಕೇಂದ್ರವನ್ನು ವೈ. ಚಂದ್ರಶೇಖರ ಶೆಟ್ಟಿ ಅವರ ನೇತೃತ್ವದಲ್ಲಿ ೧೨ ವರ್ಷಗಳ ಹಿಂದೆ ಶಿಲಾಮಯ ದೇಗುಲವಾಗಿ ರೂಪಿಸಲಾಯಿತು. ಆ ಹಿನ್ನೆಲೆಯಲ್ಲಿ ಈಗ ಪುನರಷ್ಟಬಂಧ, ಬ್ರಹ್ಮಕಲಶೋತ್ಸವದ ಜತೆಗೆ ಶ್ರೀ ಗಣಪತಿ, ಶಾಸ್ತಾ, ನಾಗದೇವರ ಪ್ರತಿಷ್ಠೆ, ಸುತ್ತು ಪೌಳಿ,…
ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ತಾಲೂಕಿನ ಕಂಬದಕೋಣೆ ಗೋವಿಂದ ದೇವಸ್ಥಾನದ ಬಳಿ ಶನಿವಾರ ತಡರಾತ್ರಿ ಬೆಂಕಿಗೆ ತುತ್ತಾಗಿದ್ದ ಮಂಗಳಾ ಎಕ್ಸ್‌ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ, ದೊಡ್ಡ ಬೆಂಕಿ ಅವಘಡವನ್ನು ತಪ್ಪಿಸುವಲ್ಲಿ ಸ್ಥಳೀಯ ಯುವಕರ ಸಮಯ ಪ್ರಜ್ಞೆ ಮತ್ತು ಕಾರ್ಯತತ್ಪರತೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದೆ. ಕೊಂಕಣ್ ರೈಲ್ವೆ ವಿಭಾಗದಲ್ಲಿ ಮೊದಲ ಭಾರಿಗೆ ಆದ ರೈಲು ಬೆಂಕಿ ಅವಘಡದ ಬಗ್ಗೆ ತಡರಾತ್ರಿಯಲ್ಲಿ ಹರಸಾಹಸಪಟ್ಟು ಬೆಂಕಿ ನಂದಿಸಲು ಶ್ರಮಿಸಿದ್ದ ಯುವಕರ ತಂಡವನ್ನು ಕುಂದಾಪ್ರ ಡಾಟ್ ಕಾಂ ಸಂಪಾದಕರು ಸಂದರ್ಶಿಸಿದ್ದು, ಅವರು ತಡರಾತ್ರಿ ಘಟನೆಯ ವೇಳೆ ಬೆಂಕಿ ನಂದಿಸಿದ ಬಗೆಯನ್ನು ನಿಧಾನವಾಗಿ ಬಿಚ್ಚಿಟ್ಟರು. ಘಟನೆಯ ಬಗ್ಗೆ ಯುವಕರು ವಿವರಿಸಿದ್ದು ಹೀಗೆ: ರಾತ್ರಿ 1:15ರ ಹೊತ್ತಿಗೆ ಒಮ್ಮೆಲೇ ಜನರ ಕೂಗಾಟ ಕೇಳಿಸಿತು. ಅದರ ಬೆನ್ನಲ್ಲೇ ಮನೆಗಳ ದನಕರುಗಳು ಕೂಗಿಕೊಂಡುವು. ಎಚ್ಚರಗೊಂಡ ನಿವಾಸಿಗಳಿಗೆ ರೈಲಿನ ಒಂದು ಬೋಗಿಯ ಭಾಗ ಹೊತ್ತಿ ಉರಿಯುತ್ತಿರುವುದು ಗೋಚರಿಸಿತು. ಇಕ್ಕಡೆಯ ಎರಡೂ ಬಾಗಿಲುಗಳಿಂದ ಬೆಂಕಿ ಹೊರಸೂಸುತ್ತಿತ್ತು. ಸುತ್ತಲಿನ ಹದಿನೈದೂ ಮನೆಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಿದ ಪುಣ್ಯ ದೊರಕುತ್ತದೆ. ಸ್ವಯಂಪ್ರೇರಿತ ರಕ್ತದಾನ ಮಾಡುವುದರಿಂದ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಬಾರದಂತೆ ಮಾಡಬಹುದು ಎಂದು ಕುಂದಾಪುರದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಚೇರ್‌ಮೆನ್ ಎಸ್. ಜಯಕರ ಶೆಟ್ಟಿ ಹೇಳಿದರು. ಶ್ರೀ ಇಂದುಧರ ಯುವಕ ಮಂಡಲ ಗಂಗೊಳ್ಳಿ, ಯಕ್ಷಾಭಿಮಾನಿ ಬಳಗ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಕ್ತನಿಧಿ ಕೇಂದ್ರ ಕುಂದಾಪುರ ಇವರ ಸಹಯೋಗದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಜರಗಿದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಗಂಗೊಳ್ಳಿಯ ಮತ್ಸ್ಯೋದ್ಯಮಿ ಮಂಜುನಾಥ ಜಿ.ಟಿ. ಶಿಬಿರ ಉದ್ಘಾಟಿಸಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯ ಗಣೇಶ ಆಚಾರ್ಯ, ಗಂಗೊಳ್ಳಿ ಗ್ರಾಪಂ ಸದಸ್ಯರಾದ ಬಿ.ಗಣೇಶ ಶೆಣೈ, ಮಹಮ್ಮದ್ ತಬ್ರೇಜ್, ರಕ್ತದಾನಿ ಗುರುಚರಣ್ ಖಾರ್ವಿ, ಗಂಗೊಳ್ಳಿ ಶಾಹಿ ಮಸೀದಿ ಅಧ್ಯಕ್ಷ ಮಹಮ್ಮದ್ ಅಫ್ಜಲ್, ಯಕ್ಷಾಭಿಮಾನಿ ಬಳಗದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆಧುನಿಕ ಯುಗದಲ್ಲಿ ಎಲ್ಲರೂ ಧಾವಂತದಲ್ಲಿದ್ದಾರೆ. ಪರಿಶ್ರಮದಿಂದ ಕೆಲಸ ಮಾಡುವ ಮನೋಭಾವ ಕಡಿಮೆ ಆಗುತ್ತಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ವಹಿಸಿದರೆ ಬದುಕಿನಲ್ಲಿ ಯಶಸ್ಸು ಅರಸಿಕೊಂಡು ಬರುತ್ತದೆ ಎಂದು ನಟ, ನಿರ್ದೇಶಕ ರಘು ಪಾಂಡೇಶ್ವರ ಹೇಳಿದರು. ಅವರು ಭಾನುವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ನಡೆದ ಡಾ| ಬಿ. ಆರ್. ಅಂಬೇಡ್ಕರ್ ಸಂಘದ ಬೆಳ್ಳಿಹಬ್ಬ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ ಎಲ್ಲರ ಬದುಕಿನಲ್ಲಿಯೂ ಉತ್ತಮ ಸಮಯ, ಅವಕಾಶಗಳು ಬಂದೆ ಬರುತ್ತದೆ. ಆದರೆ ಅದನ್ನು ಉಪಯೋಗಿಸಿಕೊಳ್ಳುವಲ್ಲಿ ವಿಫಲರಾದರೆ ಮತ್ತೆ ಅದು ಸಿಗಲಾರದು. ಅವಕಾಶದೊಂದಿಗೆ ಪರಿಶ್ರಮವಿದ್ದರೆ ಗೆಲುವಿನ ದಾರಿ ಸುಲಭವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ ಬೈಂದೂರು ಚಂದ್ರಶೇಖರ ನಾವಡ ಮಾತನಾಡಿ ಉತ್ತಮ ಶಿಕ್ಷಣ, ಪರಿಶ್ರಮದ ಜೊತೆಗೆ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದಲಿತ ಸಮುದಾಯ ಆತ್ಮವಿಶ್ವಾಸದಿಂದ ಸಮಾಜದ ಮುಖ್ಯವಾಹಿನಿಯೊಂದಿಗೆ ಬೆರೆಯಬಹುದು. ಈ ನಿಟ್ಟಿನಲ್ಲಿ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಶಿಸ್ತುಬದ್ಧ ಜೀವನ ಕ್ರಮ ಅಳವಡಿಸಿಕೊಳ್ಳಲು ಮಾರ್ಗದರ್ಶನ ಮಾಡಬೇಕಿದೆ ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಾಂಡ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಆಯೋಜಿಸಿರುವ ರಜಾ ಮಜಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ವಿಶೇಷವಾಗಿ ಆಚರಿಸಲಾಯಿತು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಮಾತನಾಡಿ ಮಗುವಿನ ಶಿಕ್ಷಣಕ್ಕೆ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ ಅದು ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿಲ್ಲ ಆ ನಿಟ್ಟಿನಲ್ಲಿ ಶಿಕ್ಷಕರ ಮತ್ತು ಪೋಷಕರಿಬ್ಬರ ಜವಾಬ್ದಾರಿ ದೊಡ್ಡದು ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಉದಯ ಗಾಂವ್ಕರ್ ಮಾತನಾಡಿ ಸರಕಾರಿ ಶಾಲೆ ಬಾಗಿಲು ಹಾಕಿತು ಎಂದರೆ ಹಲವಾರು ಸಂಬಂಧಗಳು ಕಡಿದು ಹೋಗುತ್ತದೆ. ಹಾಗಾಗಿ ಒಂದು ಊರಿನಲ್ಲಿ ಯಾವುದೇ ಸರ್ಕಾರಿ ಕಛೇರಿಗಳು ನಶಿಸಿ ಹೋಗಬಾರದು. ಪ್ರತಿ ಮಗುವು ಒಂದು ಊರಿಗೆ ರೇವಣಿ ಇದ್ದ ಹಾಗೆ ಪ್ರತಿ ಮಗುವಿನಲ್ಲಿ ಕೂಡ ವಿಭಿನ್ನವಾದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಪ್ರಯತ್ನ ಶಿಕ್ಷಕರಿಂದ ಆಗಬೇಕು ಎಂದು ತಿಳಿಸಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕೆ. ಸುಬ್ಬಣ್ಣ ಶೆಟ್ಟೆ ಬಾಂಡ್ಯರವರು ವಹಿಸಿದ್ದರು. ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಕಳವಾಡಿ ಶ್ರೀ ಮಾರಿಕಾಂಬಾ ಯೂತ್ ಕ್ಲಬ್‌ನ 14ನೇ ವರ್ಷದ ವಾರ್ಷಿಕೋತ್ಸವವನ್ನು ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಉದ್ಘಾಟಿಸಿದರು. ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿ ಮಕ್ಕಳಿಲ್ಲದ ನಾವು ಗಿಡಗಳನ್ನು ನೆಟ್ಟು ಅವುಗಳನ್ನು ಕಷ್ಟಪಟ್ಟು ಮಕ್ಕಳಂತೆ ತಬ್ಬಿಕೊಂಡು ಮುತ್ತಿಕ್ಕಿ ಸಾಕಿ ಸಲಹಿದ್ದರಿಂದ ಇಂದು ನಾನು ಸಾವಿರ ಮಕ್ಕಳ ತಾಯಿಯಾಗಿದ್ದೇನೆ ಎಂದು ಹೇಳಿದರು. ಮಕ್ಕಳಿಲ್ಲದ ಕೊರಗನ್ನು ನೀಗಿಸಿಕೊಳ್ಳುವ ಉದ್ದೇಶದಿಂದ ಅವಿದ್ಯಾವಂತರೂ ಆಗಿದ್ದ ನಾನು ಮತ್ತು ನನ್ನ ಪತಿ ಅತ್ಯಂತ ಕಷ್ಟದಲ್ಲಿ ವರ್ಷಕ್ಕೆ ಹತ್ತು ಗಿಡಗಳಂತೆ ಹತ್ತು ವರ್ಷಗಳಲ್ಲಿ ಸುಮಾರು ನಾಲ್ಕು ಕಿಮಿ ಉದ್ದಕ್ಕೂ ಮರಗಳನ್ನು ಬೆಳೆಸಿದ್ದರಿಂದ ಇಂದು ಪಕ್ಷಿಗಳಿಗೆ ಆಶ್ರಯ ಹಾಗೂ ದಾರಿಹೋಕರಿಗೆ ನೆರಳು ನೀಡುವಂತಾಗಿದೆ. ಈ ನೆಲೆಯಲ್ಲಿ ಇಂದಿನ ಪೀಳಿಗೆಯವರೂ ಕೂಡಾ ಪ್ರಕೃತಿಯನ್ನು ಪ್ರೀತಿಸುವದ ಮೂಲಕ ತಮ್ಮ ಪರಿಸರದಲ್ಲಿ ಗಿಡಗಳನ್ನು ಬೆಳೆಸಿದಲ್ಲಿ ಭೂಮಿ ಹಸಿರಾಗಿ ಸಂಪತ್ಭರಿತವಾಗುತ್ತದೆ ಎಂದರು.ಯೂತ್ ಕ್ಲಬ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐಎಫ್‌ಎಸ್ ಅಧಿಕಾರಿ ಬಿ. ಜಗನ್ನಾಥ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮುಂಬಯಿನಿಂದ ಏರ್ನಾಕುಲಂಗೆ ತೆರಳುತ್ತಿದ್ದ ಮಂಗಳ ಎಕ್ಸ್‌ಪ್ರೆಸ್‌ನಲ್ಲಿ ರೈಲಿನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಚಿದಾಗಿ ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಬೈಂದೂರು ತಾಲೂಕಿನ ಕಂಬದಕೋಣೆ ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಮುಂಬಯಿನಿಂದ ಎರ್ನಾಕುಲಂಕ್ಕೆ ತೆರಳುತ್ತಿರುವ ಮಂಗಳ ಎಕ್ಸ್‌ಪ್ರೆಸ್ (೧೨೬೧೮) ರೈಲಿನ ಬಿ-೪ ಎಸಿ ಬೋಗಿಯಲ್ಲಿ, ಎಸಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ, ಅದನ್ನು ದುರಸ್ತಿಪಡಿಸುವಂತೆ ಪ್ರಯಾಣಿಕರೊಬ್ಬರು ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ತಕ್ಷಣ ಆಗಮಿಸಿದ ತಂತ್ರಜ್ಞರು ಅದನ್ನು ದುರಸ್ತಿ ಮಾಡಿ ತೆರಳಿದ್ದರು ಎನ್ನಲಾಗಿದೆ. ತಡರಾತ್ರಿ ೧.೨೦ರ ಸುಮಾರಿಗೆ ರೈಲು ಬಿಜೂರು ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಕಂಬದಕೋಣೆಯಲ್ಲಿ ತೆರಳುತ್ತಿದ್ದಾಗ ಬೋಗಿಯ ಎಸಿಯ ಫ್ಯಾನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ತಕ್ಷಣ ರೈಲನ್ನು ನಿಲ್ಲಿಸಲಾಗಿದ್ದು ಅಲ್ಲಿನ ಸ್ಥಳೀಯರು ತಮ್ಮ ಪಂಪ್‌ಸೆಟ್‌ನಿಂದ ನೀರನ್ನು ಹಾಕಿ ಬೆಂಕಿಯನ್ನು ಹತೋಟಿಗೆ ತರುವ ಕೆಲಸ ಮಾಡಿದ್ದರು. ಬೋಗಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕುಂದಾಪುರದಲ್ಲಿ ಇಳಿಯಬೇಕಾಗಿದ್ದ ಮಹಿಳೆಯೊಬ್ಬರು ಅದನ್ನು ಗಮನಿಸಿ, ತಕ್ಷಣ ಇತರ ಪ್ರಯಾಣಿಕರನ್ನು ಎಚ್ಚರಿಸಿ, ರೈಲ್ವೆ…
