Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ಶ್ರಮಜೀವಿಗಳ ಲೋಕ. ವೇದನೆಯನ್ನು ಹಾಡಾಗಿಸಿ, ಸಮುದಾಯವನ್ನು ತಲುಪುವ ಪ್ರಕ್ರಿಯೆಯಲ್ಲಿ ಅದು ನಿರತವಾಗಿದೆ. ಸುಖ:-ದುಖ:ವನ್ನು ಚಂದವಾಗಿ ಅಭಿವ್ಯಕ್ತಿಗೊಳಿಸಲು ರಂಗಭೂಮಿಯಿಂದ ಸಾಧ್ಯ ಎಂದು ಕುಂದಾಪುರ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ವಸಂತ ಬನ್ನಾಡಿ ಹೇಳಿದರು. ಅವರು ಬೈಂದೂರು ಶಾರದಾ ವೇದಿಕೆಯಲ್ಲಿ ಶುಕ್ರವಾರ ಲಾವಣ್ಯ ರಿ. ಬೈಂದೂರು ಇದರ ೪೨ನೇ ವಾರ್ಷಿಕೋತ್ಸವ ಹಾಗೂ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸಂಸ್ಮರಣೆಯ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಲಾವಣ್ಯ ಒಳ ಹೊರಗೆ ತನ್ನದೇ ಆದ ಉತ್ಸಾಹಿ ಸಮುದಾಯವನ್ನು ಕಟ್ಟಿಕೊಂಡಿದೆ. ಚಲನಶೀಲತೆಯನ್ನು ಅಳವಡಿಸಿಕೊಂಡಿದ್ದರಿಂದಲೇ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆ ಎಂದರು. ಲಾವಣ್ಯದ ಸದಸ್ಯ ಹಾಗೂ ಮಹಾಪೋಷಕ ವಿ. ಆರ್. ಬಾಲಚಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಾವಣ್ಯ ಅಧ್ಯಕ್ಷ ಎಚ್. ಉದಯ ಆಚಾರ್ಯ ಅದ್ಯಕ್ಷತೆ ವಹಿಸಿದ್ದರು. ಸಂಗೀತ ಕಲಾವಿದ ಜಗದೀಶ ಆಚಾರ್ ಬೈಂದೂರು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮೂಡುಗೋಪಾಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರಿನ ಕಲಾ ಸಂಸ್ಥೆ ಲಾವಣ್ಯ ರಿ. ಬೈಂದೂರು ಇದರ ೪೨ನೇ ವಾರ್ಷಿಕೋತ್ಸವ ಹಾಗೂ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸಂಸ್ಮರಣೆಯ ನಾಟಕೋತ್ಸವ ಫೆ.22ರಿಂದ 24ರ ತನಕ ಪ್ರತಿದಿನ ಸಂಜೆ 6:30ಗಂಟೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ. ಫೆ.22ರಂದು ಪಿ. ಲಂಕೇಶ್ ರಚನೆಯ, ವಸಂತ ಬನ್ನಾಡಿ ನಿರ್ದೇಶನದ, ಲಾವಣ್ಯ ಬೈಂದೂರು ಪ್ರಸ್ತುತಿಯ ’ಸಂಕ್ರಾಂತಿ’ ನಾಟಕ ಪ್ರದರ್ಶನಗೊಳ್ಳಲಿದೆ. ಅಂದಿನ ಸಭಾ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಸಂಗೀತ ಕಲಾವಿದ ಜಗದೀಶ ಆಚಾರ್ ಅವರಿಗೆ ಸನ್ಮಾನ ಇರಲಿದೆ. ಫೆ. 23ರ ಶನಿವಾರ ರಾಜೇಂದ್ರ ಕಾರಂತ್ ನಿರ್ದೇಶಿಸಿದ ಚಿತ್ತಾರ ಬೆಂಗಳೂರು ಪ್ರಸ್ತುತಿಯ ’ಬಲು ಅಪರೂಪ ನಮ್ ಜೋಡಿ’ ನಾಟಕ ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ರಾಜೇಂದ್ರ ಕಾರಂತರ ನಾಟಕ ಕೃತಿ ಬಿಡುಗಡೆ, ರಂಗಕಲಾವಿದ ಕೃಷ್ಣಮೂರ್ತಿ ಉಡುಪ ಕಬ್ಸೆ ಅವರಿಗೆ ಸನ್ಮಾನ ಇರಲಿದೆ. ಫೆ.24ರ ಆದಿತ್ಯವಾರ ಶಶಿರಾಜ್ ಕಾವೂರು ರಚಿಸಿ, ಮೋಹನ್ ಚಂದ್ರ ಯು ನಿರ್ದೇಶನ, ರಂಗ ಸಂಗಾತಿ ರಿ. ಮಂಗಳೂರು ಪ್ರಸ್ತುತಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಫೆ.21: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಶೌಚಾಲಯಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಉದಯಪುರ ಬಳಿ ನಡೆದಿದೆ. ಮೃತರನ್ನು ಕುಂದಾಪುರ ತಾಲೂಕಿನ ಗುಜ್ಜಾಡಿ ಸಮೀಪದ ನಾಯಕವಾಡಿ ಮೂಲದ ವಿವೇಕ್ ನಾಯಕ್(40), ರೇಷ್ಮಾ ನಾಯಕ್(30) ಮಗಳು ಆವಂತಿನಾಯಕ್(8)ಮತ್ತು ಮಗ ಸೇವಂತ್(6) ಎಂದು ಗುರುತಿಸಲಾಗಿದೆ. ಬೆಳಗಿನ ಜಾವ 8 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬೆಂಗಳೂರಿನ ಚಿಕ್ಕಬಾಣಾವರದ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಮೃತ ವಿವೇಕ್ ನಾಯಕ್ ಸ್ಪೈಕಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇಂದು ಬೆಂಗಳೂರಿನಿಂದ ತಮ್ಮ ಕುಂದಾಪುರಕ್ಕೆ ಹೊರಟಿದ್ದರು. ಬೆಳಗಿನ ಜಾವ 5.30 ಕ್ಕೆ ಬೆಂಗಳೂರಿನಿಂದ ತೆರಳಿದ್ದರು. ಆದರೆ ಮಾರ್ಗಮಧ್ಯೆ ಕಾರು ನಿಯಂತ್ರಣ ಕಳೆದುಕೊಂಡು ಶೌಚಾಲಯಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಖಡಕ್ ಎಸ್.ಪಿ. ಲಕ್ಷ್ಮಣ ನಿಂಬರ್ಗಿ ಅವರು ಉಡುಪಿ ಜಿಲ್ಲೆಯಿಂದ ವರ್ಗಾವಣೆಗೊಂಡಿದ್ದಾರೆ. ಇನ್ನು ನಿಂಬರ್ಗಿ ಅವರು ಬೆಂಗಳೂರಿನ ಪೊಲೀಸ್ ವಯರ್ ಲೆಸ್ ಎಸ್.ಪಿ.ಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಶ್ರೀಮತಿ ನಿಶಾ ಜೇಮ್ಸ್ ಅವರು ಉಡುಪಿ ಜಿಲ್ಲೆಯ ನೂತನ ಎಸ್.ಪಿ.ಯಾಗಿ ನೇಮಕಗೊಂಡಿದ್ದಾರೆ. 2013ನೇ ಸಾಲಿನ ಐ.ಪಿ.ಎಸ್. ಅಧಿಕಾರಿಯಾಗಿರುವ ನಿಶಾ ಜೇಮ್ಸ್ ಅವರು ಬೆಂಗಳೂರಿನಲ್ಲಿ ಕೆ.ಎಸ್.ಆರ್.ಪಿ.ಯ ನಾಲ್ಕನೇ ಬೆಟಾಲಿಯನ್ ನ ಕಮಾಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ದೋಹಾ, ಕತಾರ್: ಫೆ.18ರ ಸಂಜೆ 7 ಘಂಟೆಗೆ ಟಿ.ಸಿ.ಎ (ಸೃಜನ ಕಲೆ) ಆವರಣದಲ್ಲಿ ಸುಮಾರು ೫೦ ಜನರು ಸೇರಿ, ಭಾರತದಲ್ಲಿ ನಡೆದ ಘೋರ ಕೃತ್ಯದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ದಾಂಜಲಿ ಸಮರ್ಪಿಸಿದರು. ೪೦ ಸಿ.ಆರ್.ಪಿ.ಎಫ಼್ ಸೈನಿಕರ ಭಾವಚಿತ್ರದ ಎದುರು ನೆರೆದವರೆಲ್ಲರೂ ಒಬ್ಬೊಬ್ಬರಾಗಿ ಬಂದು ದೀಪ ಹತ್ತಿಸಿ, ವೀರ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಈ ಕಾರ್ಯಕ್ರಮವನ್ನು ’ಗಂಧದ ಗುಡಿ’ ಎಂಬುವ ಕನ್ನಡಿಗರ ಬಳಬಳಗ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ಅಯೋಜಿಸಿತ್ತು. ನೆರೆದವರಲ್ಲಿ ಕೆಲವರು ನಡೆದ ಘಟನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಸೂರ್ಯದೇವರಿಂದ ಕರ್ಣನಿಗೆ ದೊರೆತ ಕವಚದಂತೆ ಸೈನಿಕರು ನಮ್ಮ ಭಾರತ ದೇಶ ಕವಚವಿದ್ದಂತೆ, ಉಗ್ರಗಾಮಿಗಳ ಇಂತಹ ದುಷ್ಕೃತ್ಯ ದೇಶದ ಕವಚಕ್ಕೆ ಆಘಾತವಾದಂತೆ. ಸೈನಿಕರು ನಮ್ಮ ದೇಶವನ್ನು ಕಾಪಾಡುತ್ತಿರುವರು ಎಂಬ ನಂಬಿಕೆಯಿಂದ ಎಲ್ಲರೂ ಸಕುಟುಂಬ ಸಮೇತ ಶಾಂತಿ-ನೆಮ್ಮದಿಯಿಂದ ಮಲಗಲು ಸಾಧ್ಯ. ಇಂತಹ ಭೀಕರ ಅಮಾನವೀಯ ಘಟನೆಗಳು ನಮ್ಮ ಜೀವನದಲ್ಲೆ ಮರೆಯಲಾಗದ ಗಾಯವನ್ನುಂಟು ಮಾಡುತ್ತದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಂಬದಕೋಣೆಯ ಸಂವೇದನಾ ಪದವಿ ಕಾಲೇಜಿನಲ್ಲಿ ಮಾ ೨ರಂದು ನಡೆಯುವ ಬೈಂದೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಅವರನ್ನು ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮಂಗಳವಾರ ಅವರ ಮನೆಗೆ ತೆರಳಿ ಸಮ್ಮೇಳನಕ್ಕೆ ಆಮಂತ್ರಿಸಿದರು. ಆ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಾಹಿತ್ಯವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಹಿರಿಯರಾದ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅದರಿಂದ ಹೊಸ ತಾಲ್ಲೂಕಿನ ಪ್ರಥಮ ಸಮ್ಮೇಳನಕ್ಕೆ ವಿಶೇಷ ಅರ್ಥ ಬರುತ್ತದೆ. ಸಮ್ಮೇಳನದ ಸಿದ್ಧತೆಗಳು ನಡೆಯುತ್ತಿದ್ದು ತಾಲ್ಲೂಕಿನ ಪದಾಧಿಕಾರಿಗಳು, ಸ್ಥಳೀಯ ಸಂಘಟನೆಗಳು ಸೇರಿ ಅದನ್ನು ಯಶಸ್ವಿಯಾಗಿ ನಡೆಸಲು ಮುಂದಾಗಿದ್ದಾರೆ ಎಂದರು. ತಾಲ್ಲೂಕು ಪರಿಷತ್ತಿನ ಅಧ್ಯಕ್ಷ ಎಚ್, ರವೀಂದ್ರ, ಜಿಲ್ಲಾ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್, ತಾಲ್ಲೂಕು ಗೌರವ ಕಾರ್ಯದರ್ಶಿಗಳಾದ ಪ್ರಕಾಶ ಹೆಬ್ಬಾರ್, ಗಣಪತಿ ಹೋಬಳಿದಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪುಂಡಲೀಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಅರಾಟೆ ಸೇತುವೆ ರಾ.ಹೆ-66ರಲ್ಲಿ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದು ಎಳೆದೊಯ್ದ ಪರಿಣಾಮ ಬೈಕ್ ಸವಾರ ಚಿಂದಿಯಾಗಿ ಸಾವನ್ನಪ್ಪಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಸಾವನ್ನಪ್ಪಿದ ಬೈಕ್ ಸವಾರನನ್ನು ಗಂಗೊಳ್ಳಿ ಸಮೀಪದ ಬಾವಿಕಟ್ಟೆ ನಿವಾಸಿ ಗಣೇಶ್ ಎಂಬವರ ಪುತ್ರ ವಿಖ್ಯಾತ್ (24) ಎಂದು ಗುರುತಿಸಲಾಗಿದೆ. ತಡ ರಾತ್ರಿ ಹೈವೇ ಪೆಟ್ರೋಲ್ ವಾಹನ ಸಂಚಾರದ ಸಂದರ್ಭ ಅನಾಥವಾಗಿ ಚಿಂದಿಯಾದ ಸ್ಥಿತಿಯಲ್ಲಿ ವಿಖ್ಯಾತ್ ದೇಹ ಹಾಗೂ ಬೈಕ್ ಬಿದ್ದಿರುವುದು ಪತ್ತೆಯಾಗಿದ್ದು, ಛಿದ್ರಗೊಂಡಿದ್ದ ಮೃತದೇಹವನ್ನು ಕುಂದಾಫುರ ಸರ್ಕಾರೀ ಆಸ್ಪತ್ರೆಗೆ ಸಾಗಿಸಲಾಯಿತು.  ಕುಂದಾಪುರದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಖ್ಯಾತ್ ಸೋಮವಾರ ರಾತ್ರಿ ಕೆಲಸ ಮುಗಿಸಿ ತನ್ನ ಹೀರೋ ಬೈಕಿನಲ್ಲಿ ಮನೆ ಕಡೆಗೆ ಪ್ರಯಾಣಿಸುತ್ತಿದ್ದರು. ರಾತ್ರಿ ರಾ. ಹೆ-66ರಲ್ಲಿ ಅರಾಟೆ ಸೇತುವೆ ಮೇಲೆ ಬರುತ್ತಿದ್ದಾಗ ಭಟ್ಕಳ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಅಪರಿಚಿತ ಘನ ವಾಹನವೊಂದು ವಿಖ್ಯಾತ್ ಬೈಕಿಗೆ ಡಿಕ್ಕಿ ಹೊಡೆದಿದ್ದು, ವಿಖ್ಯಾತ್ ಧರಿಸಿದ್ದ ಹೆಲ್ಮೆಟ್ ಸೇತುವೆ ಮೇಲೆ ಬಿದ್ದಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರಾವಳಿ ವಾಯ್ಸ್ ಆಫ್ ಬೈಂದೂರು ಇವರ ಆಶ್ರಯದಲ್ಲಿ ಕರಾವಳಿ ವಾಯ್ಸ್ ಆಫ್ ಬೈಂದೂರು ಇದರ ಫಿನಾಲೆ ಸ್ಪರ್ಧೆ -2019 ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು. ಹೋಟೆಲ್ ಅಂಬಿಕಾ ಇಂಟರ್ ನ್ಯಾಷನಲ್ ಆಡಳಿತ ನಿರ್ದೇಶಕ ಜಯಾನಂದ ಹೋಬಳಿದಾರ್ ಡ್ರಮ್ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಭಾವಂತರಿಗೆ ಸೂಕ್ತ ವೇದಿಕೆ ದೊರೆತಾಗ ಉತ್ತಮ ಸಾಧನೆ ಮಾಡಲು ಸಾಧ್ಯ. ಪಟ್ಟಣ ಪ್ರದೇಶಗಳಲ್ಲಿ ಹಲವು ಅವಕಾಶಗಳಿರುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮ ಆಯೋಜಿಸುವುದು ಕ್ಲಿಷ್ಟಕರವಾದ ಕೆಲಸ. ಪ್ರಪ್ರಥಮ ಬಾರಿಗೆ ಬಂದೂರಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಪ್ರತಿಭಾವಂತರು ರಾಜ್ಯಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದರು. ಮುಖ್ಯ ಅತಿಥಿಗಳಾಗಿ ಹಿನ್ನೆಲೆ ಗಾಯಕಿ ಅನನ್ಯ ಭಟ್, ಚಲನಚಿತ್ರ ನಿರ್ದೇಶಕ ಡಾ| ಸುರೇಶ್ ಚಿತ್ರಾಪು, ಬಹುಭಾಷ ಚಿತ್ರನಟ ಓಂಗುರು ಬಸ್ರೂರು, ಸಂಗೀತ ನಿರ್ದೇಶಕ ಉತ್ತಮ ಸಾರಂಗ್, ಉದ್ಯಮಿ ರಾಮ ಮೇಸ್ತ, ಶಿರೂರು ಗ್ರಾ.ಪಂ ಸದಸ್ಯರಾದ ರಘುರಾಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬಂದೂರು; ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಕರಾವಳಿ ವಾಯ್ಸ್ ಆಫ್ ಬಂದೂರು ಇದರ ಫಿನಾಲೆ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಲಿಷಾ ಕೊಕ್ಕರ್ಣೆ ಪ್ರಥಮ, ಗ್ರೀಷ್ಮಾ ಕಟೀಲು ದ್ವಿತೀಯ, ಧಾರಿಣಿ ಕೆ. ಎಸ್ ಕುಂದಾಪುರ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿನ್ನೆಲೆ ಗಾಯಕಿ ಅನನ್ಯ ಭಟ್, ಚಲನಚಿತ್ರ ನಿರ್ದೇಶಕ ಡಾ| ಸುರೇಶ್ ಚಿತ್ರಾಪು, ಬಹುಭಾಷ ಚಿತ್ರನಟ ಓಂಗುರು ಬಸ್ರೂರು, ಸಂಗೀತ ನಿರ್ದೇಶಕ ಉತ್ತಮ ಸಾರಂಗ್, ನಿರೂಪಕ ನಾಗರಾಜ ಭಟ್ಕಳ, ಸಾತ್ವಿಕ್ ಮೇಸ್ತ ದೊಂಬೆ ಮೊದಲಾದವರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಮರವಂತೆಯ ಉಷಾ ಪೂಜಾರಿ ಅವರನ್ನು ಬೈಂದೂರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಪ್ರಧಾನ ಕಛೇರಿಯಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಕಾರಂತ್ ಉಪ್ಪಿನಕುದ್ರು, ಸಹಕಾರ ಅಭಿವೃದ್ಧಿ ಅಧಿಕಾರಿ ಅರುಣಕುಮಾರ್ ಎಸ್.ವಿ., ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವಿನಾಯಕ ರಾವ್, ನಿರ್ದೇಶಕ ಶಿವರಾಮ ಪೂಜಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಿ. ಯಡ್ತರೆ ಮೊದಲಾದವರು ಇದ್ದರು.

Read More