ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ವರ್ಷದೊಳಗೆ ಕ್ಷೇತ್ರ ವ್ಯಾಪ್ತಿಯ ಸಮಗ್ರ ಅಭಿವೃದ್ಧಿ ಕಾರ್ಯಗಳಿಗಾಗಿ ನಾನಾ ಇಲಾಖೆಯಿಂದ ಸುಮಾರು ೧೪೭ ಕೋಟಿ ರೂ. ಅನುದಾನ ಮಂಜೂರಾತಿ ದೊರೆತಿದೆ ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ತಿಳಿಸಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೨ ಸಾವಿರ ಹೆಕ್ಟೇರ್ ಭೂಪ್ರದೇಶದಕ್ಕೆ ನೀರುಣಿಸುವ ಬಹುಬೇಡಿಕೆಯ ಸಿದ್ದಾಪುರ-ಸೌಕೂರು ಏತ ನೀರಾವರಿ ಯೋಜನೆಗೆ ಪ್ರಥಮ ಹಂತದಲ್ಲಿ ೫೦ ಕೋಟಿ ರೂ. ಬಜೆಟ್‌ನಲ್ಲಿ ಅನುಮೋದನೆ ದೊರೆತಿದೆ, ಲೋಕೊಪಯೋಗಿ ಇಲಾಖೆಯಿಂದ ಹೆಮ್ಮಾಡಿ-ನೆಂಪು ರಸ್ತೆ ದ್ವಿಪಥ ಕಾಮಗಾರಿಗೆ ೧೦ ಕೋಟಿ, ಅಂಪಾರು, ಶಂಕರನಾರಾಯಣ, ಈಡೂರು, ಹಾಲ್ಕಲ್ ರಸ್ತೆ ಅಗಲೀಕರಣ ಹಾಗೂ ವೃತ್ತ ರಚನೆಗೆ ೧೨ ಕೋಟಿ, ಕ್ಷೇತ್ರ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಚಿಕ್ಕ ಹಳ್ಳ ದಾಟಲು ೭೯ ಕಾಲು ಸಂಕ ರಚನೆಗೆ ೪ ಕೋಟಿ, ಮೇಕೋಡು-ಚಾಟಕುಳಿ, ನಾಗೂರು-ಹಳಗೇರಿ ರಸ್ತೆ, ಕೆಪ್ಪೆಕೆರೆ-ಹೊರ್ಲಿಮಕ್ಕು-ಹೊಸಾಡು, ಬಂಡಾರಕೇರಿ, ಹೇರಂಜಾಲು- ದಾರಿಮಕ್ಕಿ, ವಸ್ರೆ-ಹುಲ್ಕಡ್ಕಿ, ಗೋಳಿಬೇರು-ಅತ್ಯಾಡಿ, ನಾಯ್ಕನಕಟ್ಟೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ಷೇತ್ರದ ಜನರ ನೀರಾವರಿ ಸೌಕರ್ಯವನ್ನು ಒದಗಿಸಲುವ ನಿಟ್ಟಿನಲ್ಲಿ ರಾಜ್ಯದ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವ ನೇತೃತ್ವದಲ್ಲಿ ರಾಜ್ಯದ ನೀರಾವರಿ ಸಚಿವರನ್ನು ಭೇಟಿಯಾಗಿ ಶಿವಮೊಗ್ಗ ಕ್ಷೇತ್ರಕ್ಕೆ ನಾಲ್ಕು ನೀರಾವರಿ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಅವರು ಬೈಂದೂರು ಪ್ರವಾಸಿ ಮಂದಿರದಲ್ಲಿ ಆದಿತ್ಯವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನೀರಾವರಿ ಯೋಜನೆಯ ಪೈಕಿ ಸುಮಾರು ೧೨೦ ಕೋಟಿ ರೂ. ವೆಚ್ಚದ ಸಿದ್ಧಾಪುರ ಸೌಕೂರು ನೀರಾವರಿ ಯೋಜನೆಗೆ ಈಗಾಗಲೇ ಜೆಟ್‌ನಲ್ಲಿ ಐವತ್ತು ಕೋಟಿ ರೂ. ಮೀಸಲಿರಿಸಲಾಗಿದ್ದು ಆರಂಭಿಕ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬೈಂದೂರು ಕ್ಷೇತ್ರದ ಉಪ್ಪುಂದ-ಮಡಿಕಲ್ ಬಂದರು ಅಭಿವೃದ್ಧಿಗೆ ೧೨೦ ಕೋಟಿ, ಮರವಂತೆ ಬಂದರು ೨ನೇ ಹಂತದ ಕಾಮಗಾರಿಗೆ ೩೮ ಕೋಟಿ, ಶಿರೂರು ಅಳ್ವೆಗದ್ದೆ ಬಂದರು ಎರಡನೇ ಹಂತದ ಕಾಮಗಾರಿಗೆ ೯೮ ಕೋಟಿ ಅಗತ್ಯವಿದ್ದು ಕೇಂದ್ರ ಕೃಷಿ ಮಂತ್ರಿಯನ್ನು ಶಾಸಕರೊಂದಿಗೆ ಭೇಟಿಯಾಗಿ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದು,…
ಸುಬ್ರಹ್ಮಣ್ಯ ಹೆಬ್ಬಾಗಿಲು, ದೋಹಾ – ಕುಂದಾಪ್ರ ಡಾಟ್ ಕಾಂ ಪದ್ಮಶ್ರೀ ವಿಜೇತೆ, ಸುಪ್ರಸಿದ್ಧ ಚಲನಚಿತ್ರ ತಾರೆ, ಕರ್ನಾಟಕದ ತುಳುನಾಡಿನ ಅಪ್ಸರೆ, ಶ್ರೀಮತಿ ಐಶ್ವರ್ಯ ರೈ ಬಚ್ಚನ್ ಅವರು, ದೋಹಾದಲ್ಲಿ ಏರ್ಪಡಿಸಿದ್ದ 2019ನೇ ಸಾಲಿನ ’ಆಭರಣ ಮತ್ತು ಹಡಿಯಾರಗಳ ಪ್ರದರ್ಶನ’ವನ್ನು ಉದ್ಘಾಟಿಸಲು ಆಗಮಿಸಿದ್ದರು. ಕನ್ನಡಿಗರ ಪ್ರತಿನಿಧಿಯಾಗಿ ಹಾಗೂ ಭಾರತೀಯ ಸಮುದಾಯದ ಹಿತನಿಧಿ ಸಂಘದ ಸಹ-ಕಾರ್ಯದರ್ಶಿಯಾಗಿ ನಾನು ಶ್ರೀಮತಿ ರೈ ಇವರನ್ನು ಭೇಟಿಯಾಗಿ ಹರ್ಷದಿಂದ ಶುಭಾಶಯ ಕೋರಿದೆ. ಮೂಲತಃ ತುಳು ಕುಟುಂಬದವರಾದ ರೈ ಅವರು ಜನಿಸಿದ್ದು ಮಂಗಳೂರಿನಲ್ಲಿ, ನನ್ನ ಜನ್ಮಸ್ಥಳವಾದ ಕುಂದಾಪುರದಿಂದ ಸಮೀಪ. ಅವರು ಗಿರಿಶಿಖರದಷ್ಟು ಎತ್ತರಕ್ಕೆ ತಮ್ಮ ಜೀವನದಲ್ಲಿ ಏರಿರುವರು, ನಟನೆಯಲ್ಲಿ, ಹೆಸರು ಗಳಿಸುವಲ್ಲಿ ಹಾಗು ಯಶಸ್ಸಿನಲ್ಲಿ. ಅವರಷ್ಟಲ್ಲದಿದ್ದರೂ, ಅಳಿಲು ಸೇವಕನಂತೆ ಕತಾರಿನ ಅನಿವಾಸಿ ಭಾರತೀಯ ಸಮಾಜಕ್ಕೆ ನನ್ನ ಕೈಲಾದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಅವರಿಗೆ ಹೇಳಿದಾಗ, ಅವರು ಸಂತಸಗೊಂಡು ನನಗೆ ಅಭಿನಂದಿಸಿದರು. ಇಂತಹ ವ್ಯಕ್ತಿತ್ವವನ್ನು ಭೇಟಿ ನೀಡಿದುದೆ ನನ್ನ ಸೌಭಾಗ್ಯವೆಂದು ಪರಿಗಣಿಸುತ್ತೇನೆ. ಐಶ್ವರ್ಯ ರೈ ಬಚ್ಚನ್ ಅವರು 1992ನೇ ಸಾಲಿನಲ್ಲಿ ಚಲನಚಿತ್ರ ರಂಗಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಉಡುಪಿ: ಇಂಡಿಯನ್ ಫೆಡೆರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಸಂಸ್ಥೆ ನವದೆಹಲಿ ಇವರ ಸಂಯೋಜಿತ ಸಂಸ್ಥೆಯಾದ, ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಅಧಿಕೃತ ಮಾನ್ಯತೆ ಹೊಂದಿದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಉಡುಪಿ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬಂದಿದೆ. ನೂತನ ಉಡುಪಿ ಜಿಲ್ಲಾ ಪತ್ರಕರ್ತರ ಯೂನಿಯನ್ ಗೆ ಅಧ್ಯಕ್ಷ ರಾಗಿ ಕೆ.ಶಶಿಧರ್ ಹೆಮ್ಮಣ್ಣ ( ದೂರದರ್ಶನ ಉಡುಪಿ ಜಿಲ್ಲಾ ಪ್ರತಿನಿಧಿ) ಕಾರ್ಯದರ್ಶಿಯಾಗಿ ಶಿಜಿತ್ ಕುಮಾರ್ ( ಫೋಕಸ್ ಟಿವಿ) ಸಂಚಾಲಕರಾಗಿ ಆಸ್ಟ್ರೋ ಮೋಹನ್ (ಉದಯವಾಣಿ), ಜನಾರ್ಧನ್ ಕೊಡವೂರು (ವಿಜಯವಾಣಿ) ಹಾಗು ಗೌರವ ಅಧ್ಯಕ್ಷರಾಗಿ ಯು.ಎಸ್ ಶೆಣೈ (ಕುಂದಪ್ರಭ) ಆಯ್ಕೆಯಾಗಿದ್ದಾರೆ. ಯೂನಿಯನ್ ಗೆ ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಏರ್ಮಾಳ್ , ಸತೀಶ್ ಕುಮಾರ್. ಉಪಾಧ್ಯಕ್ಷರುಗಳಾಗಿ ಡಾ.ಸುಧಾಕರ ನಂಬಿಯಾರ್ , ಡಾ. ಆಕಾಶ್ ರಾಜ್, ಖಜಾಂಚಿ ಶ್ರೇಯಸ್.ಕೆ, ರಾಜ್ಯ ಸಂಘದ ಪ್ರತಿನಿಧಿಯಾಗಿ ರೂಪೇಶ್ ಕಲ್ಮಾಡಿ ಕಾನೂನು ಸಲಹೆಗಾರರಾಗಿ ರವಿಕಿರಣ್ ಮುರ್ಡೇಶ್ವರ, ಶಾಂತರಾಮ್ ಶೆಟ್ಟಿ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸುಕುಮಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ದೇವಾಡಿಗ ಸಂಘ ಪೂಜೆ ವತಿಯಿಂದ ಆಯ್ಕೆ ಮಾಡಲಾದ ದೇವಾಡಿಗ ಯಶಸ್ವಿ ಮಹಿಳೆ ಪುರಸ್ಕಾರಕ್ಕೆ ಉಡುಪಿ ಜಿಲ್ಲಾ ಪಂಚಾಯತಿ ಸದಸ್ಯೆ ಗೌರಿ ದೇವಾಡಿಗ ಆಯ್ಕೆಯಾಗಿದ್ದಾರೆ. ದೇವಾಡಿಗ ಸಂಘ ಪುಣೆ ವಾರ್ಷಿಕೋತ್ಸವ ಸಮಾರಂಭ ಫೆ. 24ರಂದು ನಡೆಯಲಿದ್ದು ಪ್ರಶಸ್ತಿ ಪ್ರದಾನಿಸಲಾಗುತ್ತದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಉಡುಪಿ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಅವರು ನಿರ್ಗಮನ ಎಸ್‌ಪಿ ಲಕ್ಷಣ ನಿಂಬರ್ಗಿ ಅವರಿಂದ ಅಧಿಕಾರ ಸ್ವೀಕರಿಸಿದರು. ನಿಶಾ ಜೇಮ್ಸ್ ೨೦೧೨ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು ಈ ತನಕ ಬೆಂಗಳೂರಿನಲ್ಲಿ ಕರ್ನಾಟಕ ಮೀಸಲು ಪೊಲೀಸ್ ಪಡೆಯ ೪ನೆಯ ಬೆಟಾಲಿಯನ್ ಕಮಾಂಡರ್ ಆಗಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನಿಶಾ ಜೇಮ್ಸ್ ಕಾನೂನು ಸುವ್ಯವಸ್ಥೆ ಕಾಪಾಡುವುದು ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲರ‍್ಸ್ ಕನ್ನಡದ ಮಜಾ ಭಾರತ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಆಯ್ಕೆಯಾದ ಮರವಂತೆಯ ಧನ್ಯಾ ಪೂಜಾರಿ ಅವರನ್ನು ಬೈಂದೂರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಪ್ರಧಾನ ಕಛೇರಿಯಲ್ಲಿ ಇತ್ತಿಚಿಗೆ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಕಾರಂತ್ ಉಪ್ಪಿನಕುದ್ರು, ಸಹಕಾರ ಅಭಿವೃದ್ಧಿ ಅಧಿಕಾರಿ ಅರುಣಕುಮಾರ್ ಎಸ್.ವಿ., ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ, ಉಪಾಧ್ಯಕ್ಷ ವಿನಾಯಕ ರಾವ್, ನಿರ್ದೇಶಕ ಶಿವರಾಮ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಿ. ಯಡ್ತರೆ ಮೊದಲಾದವರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ಶ್ರಮಜೀವಿಗಳ ಲೋಕ. ವೇದನೆಯನ್ನು ಹಾಡಾಗಿಸಿ, ಸಮುದಾಯವನ್ನು ತಲುಪುವ ಪ್ರಕ್ರಿಯೆಯಲ್ಲಿ ಅದು ನಿರತವಾಗಿದೆ. ಸುಖ:-ದುಖ:ವನ್ನು ಚಂದವಾಗಿ ಅಭಿವ್ಯಕ್ತಿಗೊಳಿಸಲು ರಂಗಭೂಮಿಯಿಂದ ಸಾಧ್ಯ ಎಂದು ಕುಂದಾಪುರ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ವಸಂತ ಬನ್ನಾಡಿ ಹೇಳಿದರು. ಅವರು ಬೈಂದೂರು ಶಾರದಾ ವೇದಿಕೆಯಲ್ಲಿ ಶುಕ್ರವಾರ ಲಾವಣ್ಯ ರಿ. ಬೈಂದೂರು ಇದರ ೪೨ನೇ ವಾರ್ಷಿಕೋತ್ಸವ ಹಾಗೂ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸಂಸ್ಮರಣೆಯ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಲಾವಣ್ಯ ಒಳ ಹೊರಗೆ ತನ್ನದೇ ಆದ ಉತ್ಸಾಹಿ ಸಮುದಾಯವನ್ನು ಕಟ್ಟಿಕೊಂಡಿದೆ. ಚಲನಶೀಲತೆಯನ್ನು ಅಳವಡಿಸಿಕೊಂಡಿದ್ದರಿಂದಲೇ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆ ಎಂದರು. ಲಾವಣ್ಯದ ಸದಸ್ಯ ಹಾಗೂ ಮಹಾಪೋಷಕ ವಿ. ಆರ್. ಬಾಲಚಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಾವಣ್ಯ ಅಧ್ಯಕ್ಷ ಎಚ್. ಉದಯ ಆಚಾರ್ಯ ಅದ್ಯಕ್ಷತೆ ವಹಿಸಿದ್ದರು. ಸಂಗೀತ ಕಲಾವಿದ ಜಗದೀಶ ಆಚಾರ್ ಬೈಂದೂರು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮೂಡುಗೋಪಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರಿನ ಕಲಾ ಸಂಸ್ಥೆ ಲಾವಣ್ಯ ರಿ. ಬೈಂದೂರು ಇದರ ೪೨ನೇ ವಾರ್ಷಿಕೋತ್ಸವ ಹಾಗೂ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸಂಸ್ಮರಣೆಯ ನಾಟಕೋತ್ಸವ ಫೆ.22ರಿಂದ 24ರ ತನಕ ಪ್ರತಿದಿನ ಸಂಜೆ 6:30ಗಂಟೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ. ಫೆ.22ರಂದು ಪಿ. ಲಂಕೇಶ್ ರಚನೆಯ, ವಸಂತ ಬನ್ನಾಡಿ ನಿರ್ದೇಶನದ, ಲಾವಣ್ಯ ಬೈಂದೂರು ಪ್ರಸ್ತುತಿಯ ’ಸಂಕ್ರಾಂತಿ’ ನಾಟಕ ಪ್ರದರ್ಶನಗೊಳ್ಳಲಿದೆ. ಅಂದಿನ ಸಭಾ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ, ಸಂಗೀತ ಕಲಾವಿದ ಜಗದೀಶ ಆಚಾರ್ ಅವರಿಗೆ ಸನ್ಮಾನ ಇರಲಿದೆ. ಫೆ. 23ರ ಶನಿವಾರ ರಾಜೇಂದ್ರ ಕಾರಂತ್ ನಿರ್ದೇಶಿಸಿದ ಚಿತ್ತಾರ ಬೆಂಗಳೂರು ಪ್ರಸ್ತುತಿಯ ’ಬಲು ಅಪರೂಪ ನಮ್ ಜೋಡಿ’ ನಾಟಕ ಪ್ರದರ್ಶನಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ರಾಜೇಂದ್ರ ಕಾರಂತರ ನಾಟಕ ಕೃತಿ ಬಿಡುಗಡೆ, ರಂಗಕಲಾವಿದ ಕೃಷ್ಣಮೂರ್ತಿ ಉಡುಪ ಕಬ್ಸೆ ಅವರಿಗೆ ಸನ್ಮಾನ ಇರಲಿದೆ. ಫೆ.24ರ ಆದಿತ್ಯವಾರ ಶಶಿರಾಜ್ ಕಾವೂರು ರಚಿಸಿ, ಮೋಹನ್ ಚಂದ್ರ ಯು ನಿರ್ದೇಶನ, ರಂಗ ಸಂಗಾತಿ ರಿ. ಮಂಗಳೂರು ಪ್ರಸ್ತುತಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಫೆ.21: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಶೌಚಾಲಯಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಉದಯಪುರ ಬಳಿ ನಡೆದಿದೆ. ಮೃತರನ್ನು ಕುಂದಾಪುರ ತಾಲೂಕಿನ ಗುಜ್ಜಾಡಿ ಸಮೀಪದ ನಾಯಕವಾಡಿ ಮೂಲದ ವಿವೇಕ್ ನಾಯಕ್(40), ರೇಷ್ಮಾ ನಾಯಕ್(30) ಮಗಳು ಆವಂತಿನಾಯಕ್(8)ಮತ್ತು ಮಗ ಸೇವಂತ್(6) ಎಂದು ಗುರುತಿಸಲಾಗಿದೆ. ಬೆಳಗಿನ ಜಾವ 8 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬೆಂಗಳೂರಿನ ಚಿಕ್ಕಬಾಣಾವರದ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಮೃತ ವಿವೇಕ್ ನಾಯಕ್ ಸ್ಪೈಕಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇಂದು ಬೆಂಗಳೂರಿನಿಂದ ತಮ್ಮ ಕುಂದಾಪುರಕ್ಕೆ ಹೊರಟಿದ್ದರು. ಬೆಳಗಿನ ಜಾವ 5.30 ಕ್ಕೆ ಬೆಂಗಳೂರಿನಿಂದ ತೆರಳಿದ್ದರು. ಆದರೆ ಮಾರ್ಗಮಧ್ಯೆ ಕಾರು ನಿಯಂತ್ರಣ ಕಳೆದುಕೊಂಡು ಶೌಚಾಲಯಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ…
