ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜನತಾ ಪಾರ್ಟಿ ವಂಡ್ಸೆ ಮಹಾಶಕ್ತಿ ಕೇಂದ್ರದ ಮಹಿಳಾ ಮೋರ್ಚಾ ಸಭೆ ಚಿತ್ತೂರಿನ ಮೂಕಾಂಬಿಕಾ ಸಭಾಗೃಹದಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಅದ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯ್ಷಕ್ಷೆ ವೀಣಾ ಎಸ್. ಶೆಟ್ಟಿ, ಮಹಿಳೆಯರು ಸಂಘಟಿತರಾದಲ್ಲಿ ಮಾತ್ರ ಸಬಲೀಕರಣ ಸಾಧ್ಯ. ಆದ್ದರಿಂದ ಮಹಿಳೆಯರು ಪಕ್ಷ ಸಂಘಟನೆಗೆ ಹೆಚ್ಚು ಗಮನ ಕೊಡಬೇಕು ಎಂದು ಹೇಳಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಮಾಹಿತಿ ನೀಡಿದರು. ಮಹಿಳಾ ಮೋರ್ಚಾ ಮಹಾಶಕ್ತಿ ಕೇಂದ್ರ ನೂತನ ಅಧ್ಯಕ್ಷರು ಹಾಗೂ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರನ್ನು ಬಿಜೆಪಿ ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಘೋಷಿಸಿದರು. ಭಾರತೀಯ ಜನತಾ ಪಾರ್ಟಿ ಬೆಂಬಲಿತವಾಗಿ ಸ್ಪರ್ಧಿಸಿದ ವಂಡ್ಸೆ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಎಲ್ಲಾ ಮಹಿಳಾ ಸದಸ್ಯರನ್ನು ಅಭಿನಂದಿಸಲಾಯಿತು. ಬಿಜೆಪಿ ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಮಾಲತಿ ನಾಯ್ಕ್, ಕುಂದಾಪುರ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಇಂದಿರಾ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶೀ ತಳಿ ಗೋಮೂತ್ರ ಪೌಡರ್ ಕ್ಯಾಪ್ಸೂಲ್ಸ್ ‘ಸುರಭಿ ಸಾರ’ ಉತ್ಪನ್ನಕ್ಕೆ 2021ನೇ ಸಾಲಿನ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ ದೊರೆತಿದೆ. ಗಜಾನನ ಅಗ್ರೊ ಫುಡ್ ಇಂಡಸ್ಟ್ರೀಸ್ ಸಂಸ್ಥೆಯ ಉತ್ಪನ್ನವಾದ ‘ಸುರಭಿ ಸಾರ’ಕ್ಕೆ ಎಕ್ಸಲೆಂಟ್ ಹೆಲ್ತ್ ಸಪ್ಲಿಮೆಂಟ್ – ಕನ್ಸೂಮರ್ ಚಾಯ್ಸ್ ಅವಾರ್ಡ್ ವಿಭಾಗದಲ್ಲಿ ಈ ಗೌರವ ದೊರೆತಿದೆ. ಮಂಗಳೂರಿನ ಹೋಟೆಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ದಿ ಟೈಮ್ಸ್ ಗ್ರೂಪ್ ಸಂಸ್ಥೆಯ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಸುರಭಿಸಾರ ಉತ್ಪನ್ನದ ತಯಾರಕರಾದ ಬಿ. ರಾಘವೇಂದ್ರ ಹೆಮ್ಮಣ್ಣ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿ ದೊರೆತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹೆಮ್ಮಣ್ಣ ದಂಪತಿಗಳು, “ಮಾನವ ಕುಲಕ್ಕೆ ವರದಾನವಾದ ಈ ಉತ್ಪನ್ನದ ಆವಿಷ್ಕಾರಕ್ಕೆ ಕಾರಣಿಕರ್ತರಾಗಿರುವ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಗೆ ಈ ಗೌರವವನ್ನು ಸಮರ್ಪಿಸುತ್ತಿದ್ದೇವೆ. ನಮ್ಮೆಲ್ಲಾ ಗ್ರಾಹಕರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪಟ್ಟಣ ಪಂಚಾಯತ್ ವ್ಯಾಪ್ತಿಯ ಖಾಸಗಿ ನಳಗಳ ನೀರಿನ ಬಳಕೆದಾರರು/ ನೀರಿನ ಕಂದಾಯ/ ನೀರಿನ ಸಂಪರ್ಕ ಶುಲ್ಕ / ಜಾಹೀರಾತುದಾರರು / ಉದ್ದಿಮೆ ಪರವಾನಿಗೆದಾರರು / ಕಟ್ಟಡ ನಿರ್ಮಾಣ ಮತ್ತು ದುರಸ್ಥಿ ನವೀಕರಣದಾರರು/ ಘನತ್ಯಾಜ್ಯ ವಸ್ತು ನಿರ್ವಹಣೆಯ ಬಳಕೆದಾರರು ಹಾಗೂ ಇತರೆ ಶುಲ್ಕದ ದರಗಳ ಉಪವಿಧಿಯನ್ನು ಸಿದ್ಧಪಡಿಸಿದ್ದು, ಪಟ್ಟಣ ಪಂಚಾಯತಿಯ ಆರ್ಥಿಕ ಹಿತದೃಷ್ಟಿಯಿಂದ ಹಾಗೂ ಸರ್ಕಾರದ ಸುತ್ತೋಲೆಯನ್ವಯ, ಪಟ್ಟಣ ಪಂಚಾಯತ್ ಆಡಳಿತಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ನಿರ್ಣಯದಂತೆ ದರ ಪರಿಷ್ಕರಿಸಿ ಪಟ್ಟಣ ಪಂಚಾಯತ್ ಕಚೇರಿಯ ಸೂಚನಾಫಲಕದಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆ ಪ್ರಕಟಗೊಂಡ 15 ದಿನಗಳ ಒಳಗೆ ಸೂಕ್ತ ಕಾರಣಗಳೊಂದಿಗೆ ಲಿಖಿತ ರೂಪದಲ್ಲಿ ಆಕ್ಷೇಪಣೆಗಳನ್ನು ಕಚೇರಿಗೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ಯಾವುದೇ ಆಕ್ಷೇಪಣೆ ಇಲ್ಲವೆಂದು ಪರಿಗಣಿಸಿ ನಿಯಮಾನುಸಾರ ಪರಿಷ್ಕೃತ ದರವನ್ನು ಜಾರಿಗೆ ತರಲು ಕ್ರಮವಹಿಸಲಾಗುವುದು ಎಂದು ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ನಿವೃತ್ತ ಸೈನಿಕ, ಲೇಖಕ ಚಂದ್ರಶೇಖರ ನಾವಡ ಅವರು ಇತ್ತಿಚೆಗೆ ತಮ್ಮ ಎಲ್ಲ ಅನುಭವದ ಸಾರವನ್ನು ಒಟ್ಟುಗೂಡಿಸಿ ‘ಸೇನಾನುಭವ’ ಎನ್ನುವ ಪುಸ್ತಕವನ್ನು ಹೊರ ತಂದಿದ್ದಾರೆ. ಸರಳ ಭಾಷೆಯಲ್ಲಿ ಬರೆದಿರುವ ಈ ಪುಸ್ತಕ ಎಂತವರನ್ನು ಸುಲಭವಾಗಿ ಆಕರ್ಷಿಸಿ ಓದಿಸಿಕೊಂಡು ಹೋಗುತ್ತದೆ. ‘ಕಠಿಣ ಪಥದ ರೋಮಾಂಚಕಾರಿ ಪಯಣ’ ಎಂದು ಪುಸ್ತಕದ ಟೈಟಲ್’ನಲ್ಲಿ ನಮೂದಿಸಿದಂತೆ ನಾವಡರು ತಮ್ಮ ಸೇನಾ ದಿನಗಳ ಶಿಸ್ತು, ಕಠಿಣ ಪರಿಶ್ರಮವನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರಿನ ರಾಮ ನಾವಡ ಮತ್ತು ಗೋದಾವರಿ ದಂಪತಿಗಳ ಪುತ್ರನಾಗಿ ಜನಿಸಿದ(1965) ಚಂದ್ರಶೇಖರ ನಾವಡರು ಬಿಎ ಪದವೀಧರರು. ಇವರು ಭಾರತೀಯ ಸೇನೆಯ ಶಿಕ್ಷಣ ವಿಭಾಗದಲ್ಲಿ ಸೇರ್ಪಡೆಗೊಂಡು ಸೇನೆಯ ವಿವಿಧ ಪಡೆಗಳಲ್ಲಿ ಸೇವೆಯನ್ನು ನಿರ್ವಹಿಸಿದ್ದಾರೆ. 2010ರಲ್ಲಿ ಜಮ್ಮು ಕಾಶ್ಮೀರ ಲೈಟ್ ಇನ್ಫಟ್ರಿ ಬಟಾಲಿಯನ್ನೊಂದಿಗೆ ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಆಪ್ರಿಕಾದ ಕಾಂಗೊ ಗಣರಾಜ್ಯದಲ್ಲಿ ಸೇವೆ ಸಲ್ಲಿಸಿದ ಹಿರಿಮೆ ಇವರದ್ದು. 2012ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು ಪ್ರಸ್ತುತ ಯೂನಿಯನ್ ಬ್ಯಾಂಕ್ನದಲ್ಲಿ ಸೇವೆ ಸಲ್ಲಿಸುತ್ತಿದ್ದು ಪತ್ರಿಕೆಗಳಲ್ಲಿ ಅಂಕಣ ಬರಹಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಕರಣಗಳನ್ನು ಸಮರ್ಪಕವಾಗಿ ನಿಭಾಯಿಸಲು ವೈದ್ಯಕೀಯ ಸೇವೆಯನ್ನು ಒದಗಿಸಲು ಅಗತ್ಯವಿರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಆರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 7 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನರ ಕೊಠಡಿಯಲ್ಲಿ ನೇರ ಸಂದರ್ಶನ ನಡೆಯಲಿದ್ದು, ವೈದ್ಯರು/ ತಜ್ಞರ-10 ಹುದ್ದೆಗೆ (ವೇತನ-75000) ವಿದ್ಯಾರ್ಹತೆ- ಎಂ.ಬಿ.ಬಿ.ಎಸ್/ ತಜ್ಞತೆ (ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದಪದವಿ ಆಗಿರಬೇಕು) ಮತ್ತು ಶುಶ್ರೂಷಕರ -20 ಹುದ್ದೆಗೆ (ವೇತನ -25000) ವಿದ್ಯಾರ್ಹತೆ- ಕರ್ನಾಟಕ ಸರ್ಕಾರದ ನೊಂದಾಯಿತ ಸಂಸ್ಥೆಯಿಂದ ಜಿ.ಎನ್.ಎಂ/ ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿರಬೇಕು. ಮೇಲ್ಕಂಡ ಹುದ್ದೆಗಳ ವಿದ್ಯಾರ್ಹತೆಗೆ ಸಂಬಧಿಸಿದ ಎಲ್ಲಾ ಅಂಕಪಟ್ಟಿಗಳ ಮೂಲ ಪ್ರತಿಗಳನ್ನು ನೇರ ಸಂದರ್ಶನಕ್ಕೆ ಹಾಜರಾಗುವಾಗ ತರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸರ್ಜನ್, ಮೊ.ನಂ: 9449843181 ಅಥವಾ 0820-2530333 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಆಸ್ಪತ್ರೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ನಮ್ಮದಲ್ಲದ ವ್ಯಕ್ತಿತ್ವವನ್ನು ಅಭಿನಯಿಸುವ ಮೂಲಕ ರಂಗಭೂಮಿಯಲ್ಲಿ ಸರಿ ತಪ್ಪುಗಳನ್ನು ವಿಮರ್ಷಿಸುವ ಕಾರ್ಯವಾಗುತ್ತದೆ. ಇದರಿಂದಲೇ ಬದುಕು ಹಾಗೂ ಮನುಷ್ಯತ್ವವನ್ನು ಕಟ್ಟಿಕೊಳ್ಳಲು, ಮನುಷ್ಯ ಸಂಬಂಧ ಗಟ್ಟಿಗೊಳಿಸಿಕೊಳ್ಳಲು ಸಾಧ್ಯವಿದೆ ಎಂದು ರಂಗಭೂಮಿ ಹಾಗೂ ಕಿರುತೆರೆ ನಟ ಪ್ರದೀಪಚಂದ್ರ ಕುತ್ಪಾಡಿ ಹೇಳಿದರು. ಅವರು ಭಾನುವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ರಂಗಸುರಭಿ 2021 ಮೂರು ದಿನಗಳ ನಾಟಕೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ದಿನದ ಗೌರವ ಸ್ವೀಕರಿಸಿ ಮಾತನಾಡಿ ಕನ್ನಡದ ಮೇರು ಕೃತಿಗಳನ್ನು ರಂಗಕ್ಕೆ ತರುವ ಮೂಲಕ ಸುರಭಿ ಸಂಸ್ಥೆಯು ಹೊಸ ಪ್ರಯತ್ನಗಳಿಗೆ ತೆರೆದುಕೊಳ್ಳುತ್ತಲೇ ಬಂದಿರುವುದು ಶ್ಲಾಘನಾರ್ಹ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಮಾಲಿನಿ ಕೆ., ಲೇಖಕ ಹಾಗೂ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ, ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಶೆಟ್ಟಿ, ಶಿರೂರು ಜೆಸಿಐ ಸ್ಥಾಪಕಾಧ್ಯಕ್ಷ ಮೋಹನ್ ರೇವಣ್ಕರ್, ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೋಹನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ನೂತನ ತಹಶೀಲ್ದಾರರಾಗಿ ಅಶೋಕ್ ಎನ್. ಭಟ್ ಅವರನ್ನು ನಿಯುಕ್ತಿಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಕುಮಟಾ ತಹಶೀಲ್ದಾರರ ಕಛೇರಿಯಲ್ಲಿ ಶಿರಸ್ತೇದಾರರಾಗಿದ್ದ ಅವರಿಗೆ ತಹಶೀಲ್ದಾರ್ ಗ್ರೇಡ್-2 ಭಡ್ತಿ ನೀಡಿ ಬೈಂದೂರು ತಾಲೂಕು ಕಛೇರಿಗೆ ವರ್ಗಾವಣೆ ಮಾಡಲಾಗಿದೆ. ಎ.ಎನ್. ಭಟ್ ಅವರು ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ಆಪ್ತ ಸಹಾಯಕರಾಗಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರಿ ಅವರು ವರ್ಗಾವಣೆಯ ಬಳಿಕ ಬ್ರಹ್ಮಾವರದ ತಹಶೀಲ್ದಾರ್ ಕಿರಣ ಗೌರಯ್ಯ ಅವರು ಬೈಂದೂರಿನ ಪ್ರಭಾರ ತಹಶೀಲ್ದಾರರರಾಗಿ ಸೇವೆ ಸಲ್ಲಿಸುತ್ತಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರವಾಸೋದ್ಯಮ ಮತ್ತು ಆಹಾರೋದ್ಯಮದಲ್ಲಿ ಅಂತರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡಿರುವ ಕೋಟೇಶ್ವರದ ಯುವ ಮೆರಿಡಿಯನ್ ಗ್ರೂಪ್ಸ್ 2021ನೇ ಸಾಲಿನ ಟೈಮ್ಸ್ ಬಿಸಿನೆಸ್ ಅವಾರ್ಡ್ 2021ಕ್ಕೆ ಪಾತ್ರವಾಗಿದೆ. ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಯುವ ಮೆರೀಡಿಯನ್ ಪಾಲುದಾರರರಾದ ಬೈಲೂರು ಉದಯಕುಮಾರ್ ಶೆಟ್ಟಿ ಮತ್ತು ವಿನಯ ಕುಮಾರ್ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಅಂತರಾಷ್ಟ್ರೀಯ ಗುಣಮಟ್ಟದ ವೈಭವದ ಹಾಗೂ ಆರಾಮದಾಯಕ ಹೋಟೆಲ್ ಕೆಟಗೆರಿಯಲ್ಲಿ ಯುವ ಮೆರಿಡಿಯನ್ ಗ್ರೂಪ್ಸ್ಗೆ ಪ್ರಶಸ್ತಿ ಲಭ್ಯವಾಗಿದೆ. ಯುವ ಮೆರಿಡಿಯನ್ ಕನ್ವೆನ್ಯನ್ ಹಾಲ್, ಯುವ ಮೆರಿಡಿಯನ್ ಬೇ ರೆಸಾರ್ಟ್ ಆ್ಯಂಡ್ ಸ್ಪಾ ಮೂಲಕ ಗಮನ ಸೆಳೆದಿರುವ ಸಂಸ್ಥೆಯು 2017-18ರಲ್ಲಿ ಕನ್ವೆನ್ಯನ್ಗಾಗಿ ಹಾಗೂ 2018-19ರಲ್ಲಿ ಪ್ರವಾಸೋದ್ಯಮ ಆತಿಥ್ಯಕ್ಕಾಗಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಭಾಜನವಾಗಿತ್ತು. ಇದೀಗ ಟೈಮ್ಸ್ ಪ್ರಶಸ್ತಿಗೆ ಪಾತ್ರವಾಗಿದೆ. ಕೋಟೇಶ್ವರ-ಹಾಲಾಡಿ ರಸ್ತೆಯ ಪಾಶ್ರ್ವದಲ್ಲಿ 2012ರಲ್ಲಿ ಸುಸಜ್ಜಿತ ವ್ಯವಸ್ಥೆಗಳುಳ್ಳ ಯುವ ಮೆರಿಡಿಯನ್ ಆರಂಭಗೊಂಡಿತ್ತು. 1,200 ಮಂದಿ ಕುಳಿತುಕೊಳ್ಳಬಹುದಾದ ಸಭಾಭವನ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಮಾಜವನ್ನು ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಸಣ್ಣ ಸಣ್ಣ ಗುಂಪುಗಳಾಗಿ ಒಡೆಯುವ ಕೆಲಸವನ್ನು ಪ್ರಭುತ್ವ ಮಾಡುತ್ತಿರುವ ಹೊತ್ತಿನಲ್ಲಿ ರಂಗಭೂಮಿಯ ಬೆಸೆಯುವ ಗುಣವನ್ನು ಇನ್ನಷ್ಟು ಜಾಗೃತಗೊಳ್ಳಬೇಕಿದೆ ಎಂದು ಸಮುದಾಯ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ವಿಠ್ಠಲ ಭಂಡಾರಿ ಕೆರೆಕೋಣ ಹೇಳಿದರು. ಅವರು ಇಲ್ಲಿನ ಶಾರದಾ ವೇದಿಕೆಯಲ್ಲಿ ಶನಿವಾರ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ರಂಗಸುರಭಿ 2021 ಮೂರು ದಿನಗಳ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ನಾಟಕಗಳು ಚರಿತ್ರೆಯ ಭಾಗವಾಗುವ ಬದಲು ಜನರ ಮನಸ್ಸಿನಲ್ಲಿ ಸ್ಥಾನ ಪಡೆಯುವಂತಾಗಬೇಕು. ಪ್ರಭುತ್ವವನ್ನು ಪ್ರಶ್ನಿಸಿದಾಗಲೇ ಅದು ಸಾಧ್ಯವಾಗುತ್ತದೆ. ಮನುಷ್ಯ ಮನುಷ್ಯರ ನಡುವಿನ ಕಂದಕವನ್ನು ಮುಚ್ಚುವ ಅರ್ಥಪೂರ್ಣ ಕೆಲಸವನ್ನು ರಂಗಭೂಮಿ ಮಾಡಬೇಕಿದೆ ಎಂದರು. ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ನ ಅಧ್ಯಕ್ಷರಾದ ಬಿ. ರಾಮಕೃಷ್ಣ ಶೇರುಗಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಲಾ ಪ್ರಕಾರಗಳು ಮನುಷ್ಯ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಯಾವುದೇ ಪ್ರಕಾರವಾದರೂ ಅದನ್ನು ಆಸ್ಪಾದಿಸುವ ವರ್ಗವಿದೆ. ಕಲೆಯನ್ನು ಸವಿಯುವುದರೊಂದಿಗೆ ಪ್ರೋತ್ಸಾಹಿಸುವ ಕೆಲಸವೂ ಕಲಾಭಿಮಾನಿಗಳಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗುಲ್ವಾಡಿ ಗ್ರಾಮದ ಮೆಹರಾಜ್ ಜುಮ್ಮ ಮಸೀದಿಯ ನೂತನ ನವೀಕೃತ ಕಟ್ಟಡದ ಉದ್ಘಾಟನೆ ಇದೆ ಎ.8 ರಂದು ನಡೆಯಲಿದೆ. 1965 ರಲ್ಲಿ ನಿರ್ಮಾಣಗೊಂಡ ಹಳೆಯ ಮಸೀದಿಯನ್ನ 2001 ರಲ್ಲಿ ಪುನರ್ನಿರ್ಮಿಸಲಾಗಿದ್ದು . ಪ್ರಸ್ತುತ ಪ್ರಾರ್ಥನೆಗೆ ಸ್ಥಳಾವಕಾಶ ಕಡಿಮೆ ಆದ್ದರಿಂದ ಸ್ಥಳೀಯ ಉದಯ ನಗರ,ಬೊಳ್ ಕಟ್ಟೆ, ಶೆಟ್ರ ಕಟ್ಟೆ, ಕಲ್ಲು ಕಂಬ, ಕರ್ಕಿ, ಪಾರ್ತಿಕಟ್ಟೆ ಸೇರಿದಂತೆ ಸುಮಾರು ಇನ್ನೂರ ಐವತ್ತು ಮನೆಯವರ ಮತ್ತು ಹೊರಗಿನವರ ಸಹಕಾರದಿಂದ ಸುಮಾರು ಎಪ್ಪತ್ತು ಲಕ್ಷ ಅಂದಾಜಿನಲ್ಲಿ ಸ್ಥಳೀಯ ಮುಸ್ಲಿಮರ ಧಾರ್ಮಿಕ ಅನುಕೂಲಕ್ಕಾಗಿ ಈ ಭವ್ಯ ಮೊದಲ ಮಹಡಿಯ ಕಟ್ಟಡ ನಿರ್ಮಾಣ ಗೊಂಡು ಇದೀಗ ಉದ್ಘಾಟನೆಗೆ ಸಜ್ಜು ಗೊಂಡಿದೆ. 55 ವರ್ಷಗಳ ಹಿಂದೆ ಮಸೀದಿಯ ನಿರ್ಮಾಣಕ್ಕೆ ಮರ್ಹೂಮ್ ಸೈಯದ್ ಇಸ್ಮಾಯಿಲ್ ತಂಙಳ್ ಅವರು ಅಡಿಪಾಯ ಹಾಕಿದ್ದು ನಂತರದ ದಿನಗಳಲ್ಲಿ ಮರ್ಹೂಮ್ ಫಕೀರ್ ಬ್ಯಾರಿ, ಕಲಂದರ್ ಬ್ಯಾರಿ, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಹಾಜಿ ಇಬ್ರಾಹಿಂ ಸಾಹೇಬ್, ಜಿ.ಕೆ ಮುಸ್ಲಿಯಾರ್, ಮಹಮದ್ ಅಬ್ಬಾ ಸಾಹೇಬ್ ಜೊತೆಗೆ…
