Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಜ.9: ಇತ್ತಿಚಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ಪರಿಸರದಲ್ಲಿ ಮಂಗನ ಕಾಯಿಲೆ ಹಬ್ಬಿರುವ ಬೆನ್ನಲ್ಲೇ ಇದೀಗ ಕುಂದಾಪುರ ತಾಲೂಕಿಗೂ ಖಾಯಿಲೆ ವ್ಯಾಪಿಸುವ ಭೀತಿ ಎದುರಾಗಿದೆ. ತಾಲೂಕಿನ ಸಿದ್ಧಾಪುರ, ಹಳ್ಳಿಹೊಳೆ ಹಾಗೂ ಹೊಸಂಗಡಿ ಪರಿಸರದಲ್ಲಿ ಒಟ್ಟು ನಾಲ್ಕು ಮಂಗಗಳ ಶವ ಪತ್ತೆಯಾಗಿದೆ. ಈ ಮಂಗಗಳ ಸ್ಯಾಂಪಲ್‌ಗಳನ್ನು ಶಿವಮೊಗ್ಗದಲ್ಲಿರುವ ವೈರಸ್ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಸ್ಪಷ್ಟ ಕಾರಣ ತಿಳಿಯಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಸಿದ್ಧಾಪುರ ಗ್ರಾಮದ ಶಂಕರ ಯಡಿಯಾಳ ಎಂಬವರ ಮನೆಯ ಸಮೀಪ ನಿನ್ನೆ ಒಂದು ಮಂಗನ ಶವ ಪತ್ತೆಯಾಗಿದ್ದರೆ, ಇಂದು ಸಿದ್ಧಾಪುರ, ಹಳ್ಳಿಹೊಳೆ ಹಾಗೂ ಹೊಸಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ತಲಾ ಒಂದೊಂದು ಮಂಗಗಳ ಶವ ಪತ್ತೆಯಾಗಿದೆ ಎಂದು ಅವರು ವಿವರಿಸಿದರು. ಶಿವಮೊಗ್ಗದಲ್ಲಿರುವ ವಿಡಿಎಲ್ (ವೈರಸ್ ಪರೀಕ್ಷಾ ಪ್ರಯೋಗಾಲಯ)ನಿಂದ ವರದಿ ಬಂದ ಬಳಿಕ ಅವುಗಳ ಸಾವಿನ ನಿಜವಾದ ಕಾರಣಗಳನ್ನು ತಿಳಿಯಬಹುದಾಗಿದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರಿನ ಸಾಂಸ್ಕ್ರತಿಕ ಸೇವಾ ಪ್ರತಿಷ್ಠಾನ, ಸುರಭಿ ರಿ. ಬೈಂದೂರು ಇದರ ೨೦೧೯-೨೨ನೇ ಸಾಲಿನ ಅಧ್ಯಕ್ಷರಾಗಿ ನೀನಾಸಂ ಪದವೀಧರ ಶಿಕ್ಷಕ ಸತ್ಯನಾ ಕೊಡೇರಿ ಹಾಗೂ ಕಾರ್ಯದರ್ಶಿಯಾಗಿ ಶಿಕ್ಷಕ ರಾಮಕೃಷ್ಣ ಉಪ್ಪುಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷರಾಗಿ ಆನಂದ ಮದ್ದೋಡಿ, ಜತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರವೂಫ್, ರಾಘವೇಂದ್ರ ಕೆ. ಸಂಘಟನಾ ಕಾರ್ಯದರ್ಶಿಯಾಗಿ ವೈ ಲಕ್ಷ್ಮಣ ಕೊರಗ, ಖಜಾಂಚಿಯಾಗಿ ನಾಗರಾಜ ಪಿ. ಯಡ್ತರೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ರಾಘವೇಂದ್ರ ಕಾಲ್ತೋಡು, ವಾಸುದೇವ ಪಡುವರಿ, ಸುನಿಲ್ ಹೆಚ್. ಜಿ. ಬೈಂದೂರು, ಗಣೇಶ ಟೈಲರ್, ಭಾಸ್ಕರ ಬಾಡ, ಗಣೇಶ ವತ್ತಿನಕಟ್ಟೆ. ನಾಗರಾಜ ಬಾಡ, ಚಂದ್ರಶೇಖರ ಶೆಟ್ಟಿ, ನಿಶ್ಚಿತಾ ಪಡುವರಿ, ವ್ಯವಸ್ಥಾಪಕರಾಗಿ ಕೃಷ್ಣಮೂರ್ತಿ ಉಡುಪ ಕಬ್ಸೆ ನಿರ್ದೇಶಕರುಗಳಾಗಿ ಸುಧಾಕರ ಪಿ. ಬೈಂದೂರು, ಗಣಪತಿ ಹೋಬಳಿದಾರ್. ಸಲಹೆಗಾರರು ಬಿ. ಜಗನ್ನಾಥ ಶೆಟ್ಟಿ ಯಡ್ತರೆ, ಜಿ. ತಿಮ್ಮಪ್ಪಯ್ಯ ಮಯ್ಯಾಡಿ, ಪ್ರಶಾಂತ ಮಯ್ಯ ದಾರಿಮಕ್ಕಿ, ಸತೀಶ್ ಹೆಮ್ಮಾಡಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಜ. 8 ಮತ್ತು 9ರಂದು ಭಾರತ ಬಂದ್‌ಗೆ ಕರೆ ನೀಡಲಾಗಿದ್ದು ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಶಾಲಾ ಕಾಲೇಜಿಗೆ ರಜೆ: ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾಹಿತಿ ನೀಡಿದ್ದಾರೆ. ಒಂದೊಮ್ಮೆ ಬಂದ್ ಆದಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳ ಮಕ್ಕಳಿಗೆ ತೊಂದರೆಯಾಗಬಹುದೆನ್ನುವ ನಿಟ್ಟಿನಲ್ಲಿ ರಜೆ ಘೋಷಿಸಲಾಗಿದೆ. ಕರಾವಳಿಯಲ್ಲಿ ಎಂದಿನಂತೆ ಬಸ್ ಸಂಚಾರ: ಜಿಲ್ಲೆಯಲ್ಲಿ ಎಂದಿನಂತೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಇರಲಿದ್ದು, ಎಲ್ಲಾದರೂ ನಾಳೆ ಬೆಳಿಗ್ಗೆ ಅಹಿತಕರ ಘಟನೆ ನಡೆದು, ಬಸ್ಸಿಗೆ ಹಾನಿಯಾಗುವ ಸಂದರ್ಭ ಇದ್ದರೆ ಕೂಡಲೇ ನಾವು ಬಸ್ಸು ಸಂಚಾರ ಸ್ಥಗಿತಗೊಳಿಸುತ್ತೇವೆ. ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಬಸ್ ಗಳನ್ನು ಓಡಿಸಬೇಕೇ ಅಥವಾ ನಿಲ್ಲಿಸಬೇಕೇ ಎಂಬುವುದಾಗಿ ನಿರ್ಧರಿಸಲಿದ್ದೇವೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಮುಷ್ಕರಕ್ಕೆ ಈ ಹಿಂದೆಯೇ ದ.ಕ ಜಿಲ್ಲೆಯಲ್ಲಿ ರಿಕ್ಷಾ ಚಾಲಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರಾವಳಿ ವಾಯ್ಸ್ ಆಫ್ ಬೈಂದೂರು ಆಶ್ರಯದಲ್ಲಿ ದ್ವಿತೀಯ ಸುತ್ತಿನ ಆಡಿಷನ್ ಬೈಂದೂರು ಅಂಬಿಕಾ ಇಂಟರ್ ನ್ಯಾಷನಲ್‌ನಲ್ಲಿ ಜರುಗಿತು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಎಸ್. ರಾಜು ಪೂಜಾರಿ ಉದ್ಘಾಟಿಸಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ, ಶಿಸ್ತು ಬದ್ಧ ಜೀವನಗಳನ್ನು ರೂಡಿಸಿಕೊಳ್ಳಬೇಕು. ಸಂಗೀತಕ್ಕೆ ಅತಿಯಾದ ಶಕ್ತಿಯಿದ್ದು, ಉತ್ತಮ ಮಾನಸಿಕ ಆರೋಗ್ಯಕ್ಕೆ ಸಂಗೀತ ಹಾಡುವ ಅಥವಾ ಕೇಳುವ ಆಸಕ್ತಿಯಲ್ಲಿ ಬೆಳೆಸಿಕೊಳ್ಳಬೇಕು. ಗ್ರಾಮೀಣ ಭಾಗದಯುವ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದರು. ಬೈಂದೂರು ಬಿಜೆಪಿ ಮಹಿಳಾ ಮೋರ್ಚಾದಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರುಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಗ್ರಾ.ಪಂ ಸದಸ್ಯ ನಾಗರಾಜ್ ಗಾಣಿಗ, ಶಿರೂರು ಉದ್ಯಮಿಗಳಾದ ರಘುರಾಮ್ ಮೇಸ್ತ, ಪ್ರಸಾದ ಪ್ರಭು ಶಿರೂರು, ವಿನೋದ್ ಮೇಸ್ತ ಶಿರೂರು, ಹೆಮ್ಮಾಡಿ ವಿವಿ ಮಂಡಳಿಯ ನಿರ್ದೇಶಕ ರಘುರಾಮ್ ಪೂಜಾರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯಾಧ್ಯಕ್ಷ ಕೃಷ್ಣ ಪೂಜಾರಿ, ದ್ವಿತೀಯ ಸುತ್ತಿನ ಆಡಿಷನ್‌ನ ತೀರ್ಮಾನಕಾಗಿ ಯದುರಾಜ್ ಮಲ್ಪೆ, ಉತ್ತಮ್ ಸಾರಂಗ ಕುಂದಾಪುರ,…

Read More

ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿಸುವಂತೆ ಆಗ್ರಹ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರ ಪರ ಟ್ವೀಟರನಲ್ಲಿ ಬಿಜೆಪಿ ಕಾರ್ಯಕರ್ತರು ಧ್ವನಿಯೆತ್ತಿದ್ದು, ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೇಟ್ ನೀಡಿ ಎಂಬ ಆಗ್ರಹವನ್ನು ಪ್ರಕಟಿಸಿದ್ದಾರೆ. ಇದು ಜ.5ರಂದು ಟ್ವಿಟರಿನಲ್ಲಿ ಟ್ರೆಂಡ್ ಆಗಿತ್ತು. ಜಯಪ್ರಕಾಶ್ ಹೆಗ್ಡೆ ಅವರಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿ ಟಿಕೇಟ್ ನೀಡಬೇಕು ಎಂಬ ಬೇಡಿಕೆಯನ್ನು ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರಿಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಜೆಪಿ ಹೆಗ್ಡೆಯವರಿಗೆ ಟಿಕೇಟು ನೀಡಬೇಕು ಮೋದಿಜಿ ಆಡಳಿತದಲ್ಲಿ ಜೆಪಿ ಹೆಗ್ಡೆಯವರಂತಹ ಸಮರ್ಥ ದಕ್ಷ ಆಡಳಿತ ಚತುರರು ಸಂಸದರಾಗಬೇಕು ಹಾಗಾದಾಗ ಮಾತ್ರ ಸಮಗ್ರ ಕ್ಷೇತ್ರದ ಅಭಿವೃದ್ದಿ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಯಪ್ರಕಾಶ್ ಹೆಗ್ಡೆಯವರು ಸಂಸದರಾಗಿ ಸಚಿವರಾಗಿ ಶಾಸಕರಾಗಿ ಹಿರಿಯ ರಾಜಕೀಯ ಅನುಭವಿಗಳು ಹಾಗೂ ಕ್ಷೇತ್ರದ ಬಗ್ಗೆ ಸಮಗ್ರ ಪರಿಚಯ ಹೊಂದಿರುತ್ತಾರೆ, ತಳಮಟ್ಟದ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿರುವ ಅವರ ಆಡಳಿತವನ್ನು ಹಿಂದೊಮ್ಮೆ ಜನತೆ ನೋಡಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜನರು ಉದ್ಯೋಗ ನಿಮಿತ್ತ ಎಲ್ಲಿಗೇ ಹೋದರೂ ಹುಟ್ಟೂರನ್ನು ಮರೆಯಬಾರದು. ಅದರೊಂದಿಗೆ ಅಲ್ಲಿನ ಕೊರತೆಗಳನ್ನು ನೀಗಲು ಸಾಧ್ಯವಾದಷ್ಟು ನೆರವಾಗುವ ಮೂಲಕ ಅದರ ಋಣ ತೀರಿಸಬೇಕು ಎಂದು ಉಪ್ಪುಂದದ ಕುಂದ ಅಧ್ಯಯನ ಕೇಂದ್ರದ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಹೇಳಿದರು. ಶುಕ್ರವಾರ ಆರಂಭವಾದ ಕಿರಿಮಂಜೇಶ್ವರ ಶುಭದಾ ಶಾಲೆಗಳ ವಾರ್ಷಿಕೋತ್ಸವ ಮತ್ತು ರಜತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ನಡೆಸುವುದು ಸವಾಲಿನ ಕೆಲಸ. ಮುಂಬೈಯಲ್ಲಿ ಉದ್ಯಮಿಯಾಗಿರುವ ಎನ್. ಕೆ. ಬಿಲ್ಲವ-ಶುಭದಾ ಬಿಲ್ಲವ ದಂಪತಿ ಹುಟ್ಟೂರಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ೨೫ ವರ್ಷಗಳ ಹಿಂದೆ ಸ್ಥಾಪಿಸಿದ ಶಾಲೆ ಈಗ ಸುಸಜ್ಜಿತವಾಗಿ ಬೆಳೆದು ಅವರ ಆಶಯವನ್ನು ಈಡೇರಿಸುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಪಠ್ಯ ಮತ್ತು ಸಹಪಠ್ಯ ವಿಷಯಗಳಲ್ಲಿ ವಿಶೇಷ ಸಾಧನೆ ಮಾಡುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿ’ ಎಂದು ಅವರು ಹಾರೈಸಿದರು. ಶುಭದಾ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷೆ ಶುಭದಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಿಲ್ಲಾಡಳಿತ ಉಡುಪಿ, ನಾಡದೋಣಿ ಮೀನುಗಾರರ ಸಂಘಅಳ್ವೆಗದ್ದೆ, ಅಲ್ಪಸಂಖ್ಯಾತರ ನಾಡದೋಣಿ ಮೀನುಗಾರರ ಸಂಘ ಕಳಿಹಿತ್ಲು, ಬೆಸುಗೆ ಫೌಂಡೇಶನ್ ಬೈಂದೂರು, ಜೆ.ಸಿ.ಐ ಶಿರೂರು ಇದರ ಆಶ್ರಯದಲ್ಲಿ ಸಾಂಪ್ರದಾಯಿಕ ದೋಣಿಗಳ ಸ್ವರ್ಧೆ, ಬೀಚ್ ಉತ್ಸವ, ಮರ್ಗಿ ಸ್ಪರ್ಧೆ ಕಳಿಹಿತ್ಲು ಕಡಲ ಕಿನಾರೆಯಲ್ಲಿ ನಡೆಯಿತು. ಉದ್ಯಮಿ ಮಣೆಗಾರ್ ಜಿಪ್ರಿ ಸಾಹೇಬ್ ಹಾಗೂ ಗ್ರಾ.ಪಂ ಉಪಾಧ್ಯಕ್ಷ ನಾಗೇಶ್ ಅಳ್ವೆಗದ್ದೆ ಮರಳು ಶಿಲ್ಪ ಮತ್ತು ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಕಳಿಹಿತ್ಲು ಕಡಲ ಕಿನಾರೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ. ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ರಮಗಳು ನಡೆದಾಗ ಊರಿನ ಅಭಿವ್ರದ್ದಿ ಸಾಧ್ಯ ಎಂದರು. ಬೀಚ್ ಉತ್ಸವಕ್ಕೆ ಹರಿದು ಬಂದ ಜನಸಾಗರ: ಈ ಬಾರಿಯ ಕಳಿಹಿತ್ಲು ಬೀಚ್ ಉತ್ಸವಕ್ಕೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸಾವಿರಾರು ಜನರು ಆಗಮಿಸಿದ್ದರು. ೧೪ಕ್ಕೂ ಅಧಿಕ ಹಗ್ಗ ಜಗ್ಗಾಟ ತಂಡ, ಮಹಿಳೆಯರ ಹಗ್ಗ ಜಗ್ಗಾಟ ತಂಡ, ೧೭ಕ್ಕೂ ಅಧಿಕ ಮರ್ಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹುಟ್ಟು, ಬದುಕು ಹಾಗೂ ಸಾವಿನ ನಡುವಿನ ಜೀವನ ಆಟದಲ್ಲಿ ಜತೆಯಾಗಿದ್ದಷ್ಟು ಕಾಲ ಪರಸ್ಪರ ಸಹಕಾರದ ಮೂಲಕ ಪ್ರೀತಿಯ ಬೀಜವನ್ನು ಭಿತ್ತಿ ಪ್ರತಿಯೊಬ್ಬರ ಮೊಗದಲ್ಲೂ ನಗುವನ್ನು ಕಾಣುವುದರಲ್ಲಿ ಬದುಕಿನ ಸಾರ್ಥಕತೆ ಅಡಗಿದೆ ಎಂದು ಫಾ. ಜೋಸೆಫ್ ರೋಡ್ರಿಗಸ್ ಹೇಳಿದರು. ಶನಿವಾರ ದುರ್ಮಿ ಗದ್ದೆಹಿತ್ಲು ವಠಾರದಲ್ಲಿ ಜರುಗಿದ ತಿರಂಗ ಫ್ರೆಂಡ್ಸ್ ದುರ್ಮಿ ಪಡುವರಿ ಇದರ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಧೈರ್ಯ, ಶಾಂತಿ ಹಾಗೂ ಸಂಮೃದ್ಧತೆಯನ್ನು ಸಾರುವ ಭಾರತದ ಧ್ವಜದ ಬಣ್ಣಗಳಂತೆ ತಿರಂಗ ಫ್ರೆಂಡ್ಸ್‌ನ ಯುವ ಪಡೆ ಏಕತೆಯನ್ನು ಸಾರುತ್ತಾ ಬಂದಿದೆ. ಈ ಭಾಗದಲ್ಲಿ ಭಿನ್ನ ಸಮುದಾಯದವರು ನೆಲೆಸಿದ್ದರೂ ಪರಸ್ಪರ ಒಬ್ಬರನ್ನೊಬ್ಬರು ಅರಿತು ಬಾಳುವ, ಧರ್ಮ ಸಂಪ್ರದಾಯವನ್ನು ಗೌರವಿಸುವ ಗುಣ ಹೊಂದಿದ್ದು, ಸಾಮರಸ್ಯದ ಬದುಕು ಕಂಡುಕೊಂಡಿದ್ದಾರೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆ, ಕೋಸ್ಟಲ್ ಗಾರ್ಡ್ ಸಿಬ್ಬಂದಿ ನಡೆಸಿರುವ ಕಾರ್ಯಾಚರಣೆ ಮಾಹಿತಿಯನ್ನು ಗೃಹ ಸಚಿವ ಎಂ.ಬಿ.ಪಾಟೀಲ್ ಅಧಿಕಾರಿಗಳಿಂದ ಪಡೆದುಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವರು, ಕಾರ್ಯಾಚರಣೆಯ ಪ್ರತಿಯೊಂದು ಹಂತದ ಮಾಹಿತಿ ಪಡೆದರು. ಬಳಿಕ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು, ಮೀನುಗಾರಿಕಾ ಮುಖಂಡರ ಜತೆ ಕಾರ್ಯಾಚರಣೆಯ ವಿವರವನ್ನು ತಿಳಿಸಿದರು. ಬೋಟ್ ನಾಪತ್ತೆಯಾದ ಬಳಿಕ ಡಿ.23ರಿಂದ ಪ್ರತಿದಿನ ಹೆಲಿಕಾಪ್ಟರ್ ಹಾಗೂ ಹಡಗುಗಳನ್ನು ಬಳಸಿಕೊಂಡು ಶೋಧ ನಡೆಸಲಾಗಿದೆ. ಕೋಸ್ಟಲ್ ಗಾರ್ಡ್ ಸಿಬ್ಬಂದಿ ತಂತ್ರಜ್ಞಾನದ ನೆರವಿನಿಂದ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೀನುಗಾರರ ಜೀವದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ಶೋಧ ನಡೆಸುತ್ತಿದೆ ಎಂದರು. ಈ ಸಂದರ್ಭ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮೀನುಗಾರರು ಆತಂಕದಲ್ಲಿದ್ದು, ಧೈರ್ಯ ತುಂಬುವ ಕೆಲಸ ಮಾಡಬೇಕಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳ ನಡುವಿನ ಹಣಾಹಣಿಯಲ್ಲಿ ಅಂತಿಮವಾಗಿ ಬಿಜೆಪಿ ಅಧಿಕಾರ ಹಿಡಿಯಲು ಯಶಸ್ವಿಯಾಗಿದೆ. ಒಟ್ಟು 33 ಸ್ಥಾನಗಳ ಪೈಕಿ ಬಿಜೆಪಿ 23, ಕಾಂಗ್ರೆಸ್ 6 ಹಾಗೂ ಎಸ್‌ಡಿಪಿಐ 4 ಸ್ಥಾನಗಳನ್ನು ಪಡೆದುಕೊಂಡಿದೆ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ 19 ಕಾಂಗ್ರೆಸ್ 14 ಸ್ಥಾನ ಪಡೆದಿತ್ತು. ಕುಂದಾಪುರ ಮಿನಿ ವಿಧಾನಸೌಧದಲ್ಲಿ ಕುಂದಾಪುರ ತಹಶೀಲ್ದಾರರ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ಸಸೂತ್ರವಾಗಿ ನಡೆಯಿತು. ವಿಜಯೋತ್ಸವದಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ► ಪಂಚಾಯತ್ ಚುನಾವಣೆ: ಯಡ್ತರೆ ಕಾಂಗ್ರೆಸ್‌ಗೆ, ಬೈಂದೂರು ಬಿಜೆಪಿ ತೆಕ್ಕೆಗೆ – https://kundapraa.com/?p=30722 .

Read More