ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಿಲ್ಲಾಡಳಿತ ಉಡುಪಿ, ನಾಡದೋಣಿ ಮೀನುಗಾರರ ಸಂಘಅಳ್ವೆಗದ್ದೆ, ಅಲ್ಪಸಂಖ್ಯಾತರ ನಾಡದೋಣಿ ಮೀನುಗಾರರ ಸಂಘ ಕಳಿಹಿತ್ಲು, ಬೆಸುಗೆ ಫೌಂಡೇಶನ್ ಬೈಂದೂರು, ಜೆ.ಸಿ.ಐ ಶಿರೂರು ಇದರ ಆಶ್ರಯದಲ್ಲಿ ಸಾಂಪ್ರದಾಯಿಕ ದೋಣಿಗಳ ಸ್ವರ್ಧೆ, ಬೀಚ್ ಉತ್ಸವ, ಮರ್ಗಿ ಸ್ಪರ್ಧೆ ಕಳಿಹಿತ್ಲು ಕಡಲ ಕಿನಾರೆಯಲ್ಲಿ ನಡೆಯಿತು. ಉದ್ಯಮಿ ಮಣೆಗಾರ್ ಜಿಪ್ರಿ ಸಾಹೇಬ್ ಹಾಗೂ ಗ್ರಾ.ಪಂ ಉಪಾಧ್ಯಕ್ಷ ನಾಗೇಶ್ ಅಳ್ವೆಗದ್ದೆ ಮರಳು ಶಿಲ್ಪ ಮತ್ತು ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಕಳಿಹಿತ್ಲು ಕಡಲ ಕಿನಾರೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ. ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ರಮಗಳು ನಡೆದಾಗ ಊರಿನ ಅಭಿವ್ರದ್ದಿ ಸಾಧ್ಯ ಎಂದರು.
ಬೀಚ್ ಉತ್ಸವಕ್ಕೆ ಹರಿದು ಬಂದ ಜನಸಾಗರ:
ಈ ಬಾರಿಯ ಕಳಿಹಿತ್ಲು ಬೀಚ್ ಉತ್ಸವಕ್ಕೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸಾವಿರಾರು ಜನರು ಆಗಮಿಸಿದ್ದರು. ೧೪ಕ್ಕೂ ಅಧಿಕ ಹಗ್ಗ ಜಗ್ಗಾಟ ತಂಡ, ಮಹಿಳೆಯರ ಹಗ್ಗ ಜಗ್ಗಾಟ ತಂಡ, ೧೭ಕ್ಕೂ ಅಧಿಕ ಮರ್ಗಿ ಸ್ವರ್ಧೆಗಳು, ಯುವಕರಿಗೆ ಈಜು ಸ್ಪರ್ಧೆಗಳು, ಬೋಟಿಂಗ್, ಬಿರಿಯಾನಿ ಕೌಂಟರ್ ಜನಾಕರ್ಷಣೆಗೊಂಡಿತ್ತು. ರಾತ್ರಿ ೧೦ ಗಂಟೆಯವರೆಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ವಿಶೇಷ ಬೆಳಕಿನ ವಿನ್ಯಾಸ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿತ್ತು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಪುಷ್ಪರಾಜ್ ಶೆಟ್ಟಿ, ಉದ್ಯಮಿ ರಾಮ ಮೇಸ್ತ, ಗೌಷಿಯ ಹೆಲ್ತ ಫಂಡ್ ಅಧ್ಯಕ್ಷ ಖೋಕಾ ಶಾಹುಲ್, ಅಂಜುಮಾನ್ ಸಮಿತಿ ಅಧ್ಯಕ್ಷ ಖೋಕಾ ಮುನೀರ್, ಉದ್ಯಮಿ ಮಣೆಗಾರ್ ಇಕ್ಬಾಲ್ ಖಾಜಿ, ಗ್ರಾ.ಪಂ ಸದಸ್ಯರಾದ ರಘುರಾಮ ಕೆ. ಪೂಜಾರಿ, ಮೊಮೀನ್ ಮುಕ್ತಿಯಾರ್, ಮಂಜುನಾಥ ಪೂಜಾರಿ, ಮುಕ್ರಿ ಅಲ್ತಾಪ್, ಶಕೀಲ್ ಅಹ್ಮದ್, ಅಮೀನ್ ಕಳಿಹಿತ್ಲು, ಲಿಂಗಪ್ಪ ಮೇಸ್ತ, ಪರಮೇಶ್ವರ ಪೂಜಾರಿ, ನಿವೃತ್ತ ಮುಖ್ಯ ಶಿಕ್ಷಕ ಮಮ್ದು ಇಬ್ರಾಹಿಂ, ಎಸ್. ಎಮ್. ಅಲಿ ಕಳಿಹಿತ್ಲು, ವಕೀಲ ಶೇಖ್ಜಿ ರಕೀಬ್, ನಿವೃತ್ತ ಮುಖ್ಯ ಶಿಕ್ಷಕ ಗೌಸ್ ಮಾಸ್ಟರ್, ನಿರ್ಣಾಯಕರಾದ ನಾಗಪ್ಪ ಎಸ್.ದೊಂಬೆ, ಗುರುರಾಜ್ ಎಸ್, ಶಿಕ್ಷಕ ಸಿ.ಎನ್. ಬಿಲ್ಲವ ಮೊದಲಾದವರು ಹಾಜರಿದ್ದರು.
ಪತ್ರಕರ್ತ ಅರುಣ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು. ಶಿರೂರು ಡಾಟ್ ಕಾಮ್ ವರದಿಗಾರ ಗಿರಿ ಶಿರೂರು ವಂದಿಸಿದರು.