ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಕೊಡೇರಿ ಎಂಬಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ‘ಶ್ರೀ ವರಲಕ್ಷ್ಮೀ ನಿಲಯ’ ನೂತನ ಗೃಹದ ಹಸ್ತಾಂತರ ಸಮಾರಂಭ ಶುಕ್ರವಾರ ಜರುಗಿತು. ಉದ್ಯಮಿ ಹಾಗೂ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರ ತಂದೆ ತಾಯಿ ಬಾಬು ಪೂಜಾರಿ ಹಾಗೂ ಮಂಜಮ್ಮ ದಂಪತಿಗಳು ನೂತನ ಗೃಹವನ್ನು ಉದ್ಘಾಟಿಸಿದರು. ಗೋವಿಂದ ಪೂಜಾರಿ ಅವರ ಮಗ ಪ್ರಜ್ವಲ್ ಜಿ. ಪೂಜಾರಿ ಅವರ ಜನ್ಮದಿನದಂದು ಕೊಡೇರಿಯ ರವಳು ನಾಗಮ್ಮ ಅವರಿಗೆ ಬೀಗದ ಕೈ ಹಸ್ತಾಂತರಿಸಲಾಯಿತು. ಶ್ರೀ ವರಲಕ್ಷ್ಮೀ ಈ ಸಂದರ್ಭ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ ಟ್ರಸ್ಟೀ ಮೂಲಕ ನಿರ್ಮಿಸಲಾಗಿರುವ ಮೂರನೇ ಮನೆ ಇದಾಗಿದ್ದು, ಇನ್ನು ಒಂದು ಮನೆಗಳು ನಿರ್ಮಾಣ ಹಂತದಲ್ಲಿದೆ. ಆರೋಗ್ಯ ಸೇವೆ, ಅಗತ್ಯವುಳ್ಳವರಿಗೆ ನೆರವು, ಪುಡ್ ಕಿಟ್ ವಿತರಣೆ ಸೇರಿದಂತೆ ಹತ್ತಾರು ಸಾಮಾಜಿಕ ಕಾರ್ಯಗಳನ್ನು ಟ್ರಸ್ಟ್ ಮೂಲಕ ಮಾಡಲಾಗುತ್ತಿದೆ ಎಂದರು. ಈ ಸಂದರ್ಭ ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಯಿತು. ಕೋವಿಡ್-19 ಹಿನ್ನಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಯವರ ಸೂಚನೆಯಂತೆ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿ ಹಾಗೂ ಶೌಚಾಲಯವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಯಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ. ಪೂಜಾರಿ, ಸದಸ್ಯ ಬಿ. ರಾಘವೇಂದ್ರ ಪೈ, ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಉಮೇಶ ಕರ್ಣಿಕ್, ಸಿಬ್ಬಂದಿ ಶ್ರೀಧರ ಗಾಣಿಗ, ಪ್ರಭಾಕರ ಶೇರುಗಾರ್, ಗ್ರಾಪಂ ಸಿಬ್ಬಂದಿಗಳಾದ ನಾರಾಯಣ ಶ್ಯಾನುಭಾಗ್, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಭಾರತೀಯ ಅಂಚೆ ಇಲಾಖೆಯ ವತಿಯಿಂದ ನಗರದ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮಾ ಏಜೆಂಟ್ ಆಗಿ ಕಾರ್ಯ ನಿರ್ವಹಿಸಲು 18 ರಿಂದ 50 ವರ್ಷದೊಳಗಿನ, ಕನಿಷ್ಟ ಎಸ್.ಎಸ್.ಎಲ್.ಸಿ ಪಾಸಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆಧಾರ್ ಕಾರ್ಡ್, ಪಾನ್ಕಾರ್ಡ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮೂಲ ಪ್ರತಿ ಹಾಗೂ ಝೆರಾಕ್ಸ್ ಪ್ರತಿ ಮತ್ತು ಎರಡು ಪಾಸ್ಪೋರ್ಟ್ ಸೈಜಿನ ಭಾವಚಿತ್ರದೊಂದಿಗೆ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಜುಲೈ 30ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಂದರ್ಶನದಲ್ಲಿ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2520471 ಅಥವಾ ಮೊ.ನಂ: 9448291071 ಅನ್ನು ಸಂಪರ್ಕಿಸುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳಕ್ಕೆ ಕೇರಳದ ವಿರೋಧ ಪಕ್ಷ ನಾಯಕರಾದ ಸತೀಶನ್ ಅವರು ಇಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭ ದೇವಸ್ಥಾನದ ಪರವಾಗಿ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಜಯನಂದ ಹೋಬಳಿದಾರ್ ಅವರು ಶಾಲು ಹಾಗೂ ದೇವಿಯ ಪ್ರಸಾದ ನೀಡಿ ಗೌರವಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಭಾಗವಾಗಿ ‘ಆಳ್ವಾಸ್ ನಿರಾಮಯ ‘ ಮಲ್ಟಿಸ್ಪೆಷಾಲಿಟಿ ಆಯುಷ್ ಆಸ್ಪತ್ರೆಯ ಹೊರರೋಗಿ ಹಾಗೂ ಒಳರೋಗಿ ವಿಭಾಗವನ್ನು ವಿದ್ಯಾಗಿರಿಯಲ್ಲಿ ಇಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಉದ್ಘಾಟಿಸಿದರು. ಆಳ್ವಾಸ್ ನಿರಾಮಯ ಮಲ್ಟಿಸ್ಪೆಷಾಲಿಟಿ ಆಯುಷ್ ಆಸ್ಪತ್ರೆಯು ಸುಸಜ್ಜಿತವಾದ ಹೊರರೋಗಿ ಹಾಗೂ ಒಳರೋಗಿ ವಿಭಾಗವನ್ನು ಹೊಂದಿದ್ದು, ಒಳರೋಗಿಗಳಿಗೆ ಸಕಲ ಸೌಲಭ್ಯಗಳಿರುವ ಸ್ಪೆಷಲ್, ಡಿಲಕ್ಸ್ ಹಾಗೂ ಸೂಟ್ ರೂಮ್ ಲಭ್ಯವಿರುತ್ತದೆ. ರೋಗಿಗಳಿಗೆ ಆಯುರ್ವೇದ, ನ್ಯಾಚುರೋಪತಿ ಹಾಗೂ ಫಿಸಿಯೋತೆರಪಿ ಸೇವೆಗಳು ಆರಂಭಗೊಂಡಿದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಡಾ. ಹನಾ ಶೆಟ್ಟಿ, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಜಿತ್ ಎಂ, ‘ಆಳ್ವಾಸ್ ನಿರಾಮಯ’ ಮಲ್ಟಿಸ್ಪೆಷಾಲಿಟಿ ಆಯುಷ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿರುವ ಡಾ. ಸುರೇಖಾ ಪೈ, ವೈದ್ಯಾಧಿಕಾರಿ ಡಾ. ಪ್ರಜ್ಞಾ ಉಪಸ್ಥಿತರಿದ್ದರು. ಆಳ್ವಾಸ್ ಹೆಲ್ತ್ ಸೆಂಟರ್ನ ಜನರಲ್ ಸರ್ಜನ್ ಡಾ ಡಾ ಹರೀಶ ನಾಯಕ್, ಆಳ್ವಾಸ್ ಕಾಲೇಜಿನ ಪ್ರಾಚಾರ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೋವಿಡ್ ಮಹಾಮಾರಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಸಂಘಟನೆಯ ಎಲ್ಲಾ ಮಾಲಕರು ಹಾಗೂ ಕಾರ್ಮಿಕರು ಉದ್ಯೋಗವಿಲ್ಲದೇ ಇವರ ಆಶ್ರಿತ ಕುಟುಂಬಗಳು ವಿವಿಧ ರೀತಿಯ ಕಷ್ಟ-ನಷ್ಟಗಳಿಗೆ ಸಿಲುಕಿದ್ದು, ನಮ್ಮ ನೆರವಿಗೆ ಯಾರೂ ಬಾರದ ಹಿನ್ನೆಲೆಯಲ್ಲಿ ನಮಗೆ ನಾವೇ ಸಾಂತ್ವಾನ ಹೇಳಿಕೊಂಡು ಮುಂದೆ ಸಾಗಬೇಕಿದೆ ಎಂದು ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ಜಿಲ್ಲಾಧ್ಯಕ್ಷ ಕಾಪು ಶಿವರಾಜ್ ಮಲ್ಲಾರ್ ಹೇಳಿದರು. ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆದ ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಹತ್ತನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ನಮ್ಮ ವೃತ್ತಿ ಬಾಂಧವರು (ಸೌಂಡ್ ಪಾರ್ಟಿ) ಲಕ್ಷಾಧೀಶ್ವರರು. ಇವರಿಗೆ ಹಣದ ಅವಶ್ಯಕತೆ ಇರುವುದಿಲ್ಲ ಎಂಬ ತಪ್ಪು ಭಾವನೆಯಿಂದ ಕೊರೊನಾ ಸಂಕಷ್ಟದಲ್ಲಿ ಸರ್ಕಾರ, ಜನಪ್ರತಿನಿಧಿಗಳು ನಮ್ಮ ಹತ್ತಿರ ಸುಳಿಯಲಿಲ್ಲ. ಆದರೆ ನಾವು ಲಕ್ಷಗಟ್ಟಲೆ ಸಾಲ ಮಾಡಿ ಉದ್ಯಮದಲ್ಲಿ ತೊಡಗಿಸಿ ನಷ್ಟದ ದಾರಿಯಲ್ಲಿ ಸಾಗುತ್ತಿರುವ ಸತ್ಯ ಇವರ್ಯಾರಿಗೂ ತಿಳಿಯದಿರುವುದು ಮಾತ್ರ ದುರಂತ. ಪ್ರತಿಯೊಂದು ಸಭೆ-ಸಮಾರಂಭಗಳಿಗೆ ನಾವು ಬೇಕು, ಆದರೆ ಕಷ್ಟದ ದಿನಗಳಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನಾದ್ಯಂತ ಕಳೆದ ಮೂರು ದಿನದಿಂದ ಸುರಿಯತ್ತಿದ್ದ ಮಳೆಗೆ ತಾಲೂಕಿನ ನದಿಗಳ ನೀರು ಏರುತ್ತಿದ್ದು, ಅಲ್ಲಲ್ಲಿ ಮನೆ, ದೇವಸ್ಥಾನಗಳ ಮೇಲೆ ಮರಬಿದ್ದು ನಷ್ಟ ಸಂಭವಿಸಿದೆ. ಬಸ್ರೂರಿನ ಮಂಕಿ ಗಣಪಯ್ಯ ಗಾಣಿಗ ಎಂಬುವರ ಮನೆ ಮೇಲೆ ಮರ ಉರುಳಿ ಸಾವಿರ ನಷ್ಟ ಸಂಭವಿಸಿದ್ದು, ಮನೆಯಲಿದ್ದ ಗಣಪಯ್ಯ ಗಾಣಿಗ, ವಾರಿಜಾ ಎಂಬವರಿಗೆ ತಲೆಗೆ ಗಂಭೀರ ಗಾಯಗೊಂಡಿದ್ದು ಇಬ್ಬರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೆಕ್ಕಟ್ಟೆ ಗ್ರಾಮದಲ್ಲಿ ಇರುವ ದೇವಸ್ಥಾನದ ವಿಶ್ರಾಂತಿ ಕೊಠಡಿ ಮೇಲ್ಮಾಡು ಹಾರಿ ಹೋಗಿದ್ದು, ಘಟ್ಟದಲ್ಲಿ ಮಳೆ ಹೆಚ್ಚಿದ್ದು, ತಾಲೂಕಿನಲ್ಲಿ ಹರಿವ ಸೌಪರ್ಣಿಕಾ, ಚಕ್ರಾ, ವರಾಹಿ, ಕುಬ್ಜ, ಖೇಟಕಿ ನದಿಗಳ ನೀರಿನ ಹರವು ಕೂಡಾ ಹೆಚ್ಚಿದೆ. ನದಿಯಲ್ಲಿ ನೀರು ಹೆಚ್ಚಿದ್ದರಿಂದ ಸಾಲ್ಬುಡ, ಹಡವು, ಬಡಾಕೆರೆ, ಕಟ್ಟು, ಉಪ್ಪಿನಕುದ್ರು ತಗ್ಗು ಪ್ರದೇಶದಕ್ಕೆ ನೆರೆ ಭೀತಿ ಎದುರಾಗಿದೆ. ಮಳೆ ಚುರುಕುಗೊಂಡಿದ್ದರಿಂದ ಯಾಡಾಡಿ ಮತ್ಯಾಡಿ ಗ್ರಾಮದ ಗುಡ್ಡೆಯಂಗಡಿ ಮರ ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ವಿದ್ಯುತ್ ಸಂಪರ್ಕ ವ್ಯತ್ಯಯವಾಯಿತು. ಸ್ಥಳೀಯರು ಮರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಖಾರ್ವಿ ಸಮಾಜದಲ್ಲಿ ಯಾವುದೇ ಸಂಘರ್ಷ ನಡೆದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಸಮಾಜದ ಜನರ ನಡುವೆ ಯಾವುದೇ ಗೊಂದಲಗಳಿಲ್ಲ. ವೈಯಕ್ತಿಕ ಸಮಸ್ಯೆ ಹಿನ್ನೆಲೆಯಲ್ಲಿ ಇಡೀ ಸಮಾಜದ ದೂಷಣೆ ಮಾಡುವುದು ಸರಿಯಲ್ಲ ಎಂದು ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಯಾನಂದ ಖಾರ್ವಿ ಹಾಗೂ ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ಅರುಣ್ ಖಾರ್ವಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕುಂದಾಪುರ ವಿದ್ಯಾರಂಗ ಮಿತ್ರ ಮಂಡಳಿಯಲ್ಲಿ ಆಯೋಜಿಸಿದ್ದ ಸಮಾಜದ ಮುಖಂಡರ ಸಭೆ ಬಳಿಕ ನಂತರ ಮಾತನಾಡಿ, ಸತೀಶ್ ಖಾರ್ವಿ ಕಜಕಿಸ್ಥಾನದಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಗೆ ಹಣಕಾಸಿನ ನೆರವು ಕೇಳಿದ್ದರು. ಆ ಸಂದರ್ಭದಲ್ಲಿ ವಿದ್ಯಾರಂಗ ಮಿತ್ರಮಂಡಳಿಯ ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣಕ್ಕಾಗಿ ಮುಂದಾಗಿದ್ದೆವು. ಅಲ್ಲದೆ ದಾನಿಗಳಿಂದ ವಂತಿಗೆ ಮಾಡುತ್ತಿದ್ದು ಹಣಕಾಸಿನ ಅಡಚಣೆ ಇದ್ದಿದ್ದರಿಂದ ಸತೀಶ್ ಅವರಿಗೆ ನೆರವು ನೀಡಲಾಗಲಿಲ್ಲ. ಕಜಕಿಸ್ಥಾನದಲ್ಲಿ ಗೆದ್ದು ಬಂದಾಗ ಅವರನ್ನು ಕುಂದಾಪುರದಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಂಡಿದ್ದಲ್ಲದೆ ವಿದ್ಯಾರಂಗದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿತ್ತು ಎಂದರು. ಸನ್ಮಾನ ಸ್ವೀಕರಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಪ್ರಾಯೋಜಿತ ಸ್ವಸಹಾಯ ಸಂಘಗಳ ವಲಯ ಮಟ್ಟದ ಲಾಭಾಂಶ ವಿತರಣೆ ಕಾರ್ಯಕ್ರಮ ಶಿರೂರಿನಲ್ಲಿ ನಡೆಯಿತು. ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷರಾದ ರಘುರಾಮ ಕೆ. ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಯೋಜನಾಧಿಕಾರಿಗಳಾದ ಶಶಿರೇಖಾ ಪಿ. ಸಂಘಕ್ಕೆ ಲಾಭಾಂಶದ ಚೆಕ್ ವಿತರಣೆ ಮಾಡಿ, ಯೋಜನೆಯು ನೀಡಿದ ಲಾಭಾಂಶ ನಿಮ್ಮ ಕಷ್ಟಕ್ಕೆ ಬಳಸಿಕೊಳ್ಳಿ ಸಂಘದ ವ್ಯವಹಾರಗಳು ಉತ್ತಮ ರೀತಿಯಲ್ಲಿ ನಡೆಸಿ ಲಾಭ ಪಡೆಯುವಂತೆ ಸಲಹೆ ನೀಡಿದರು. ಸ್ವಸಹಾಯ ಸಂಘದ ಸದಸ್ಯರಿಗೆ ರಾಜ್ಯದಲ್ಲಿ ಒಟ್ಟು 620 ಕೋಟಿ ರೂ. ಲಾಭಾಂಶ ವಿತರಿಸುತ್ತಿದ್ದು ಉಡುಪಿ ಜಿಲ್ಲೆಯಲ್ಲಿ 44 ಕೋಟಿ, ಬೈಂದೂರು ತಾಲೂಕಿನಲ್ಲಿ 8.67 ಕೋಟಿ, ಬೈಂದೂರು ವಲಯದಲ್ಲಿ 60 ಲಕ್ಷ ವಿತರಣೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭ ಜನಜಾಗೃತಿ ಸದಸ್ಯರಾದ ವಾಸು ಮೇಸ್ತ, ಶಿರೂರು ಒಕ್ಕೂಟದ ಜೊತೆ ಕಾರ್ಯದರ್ಶಿ ಗೋವಿಂದ ಪೂಜಾರಿ , ವಲಯದ ಮೇಲ್ವಿಚಾರಕರಾದ ರಾಮಚಂದ್ರ ಎಸ್, ಸೇವಾ ಪ್ರತಿನಿಧಿಗಳಾದ ರೇವತಿ ,…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ:ತನ್ನ ಮಗಳ 6ನೇ ವರ್ಷದ ಹುಟ್ಟುಹಬ್ಬದಂದು ಸಂಭ್ರಮಿಸಬೇಕೆಂಬ ತವಕದಲ್ಲಿದ್ದ ತಾಯಿ ಶವವಾಗಿ ಮಗಳ ಹುಟ್ಟಿದ ದಿನವೇ ಚಿತೆಯಲ್ಲಿ ಭಸ್ಮವಾಗಿ ಹೋಗಿದ್ದಾರೆ. ಬ್ರಹ್ಮಾವರ ಸಮೀಪದ ಕುಮ್ರಗೋಡುವಿನ ವಿಲನ್ ರೆಸಿಡೆಸ್ಸಿಯಲ್ಲಿ ಸೋಮವಾರ ವಿಶಾಲ ಗಾಣಿಗ (35) ಎಂಬವರ ಕೊಲೆಯಾಗಿದ್ದು ಬುಧವಾರ ಉಪ್ಪುಂದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಹಗಲಲ್ಲೇ ನಡೆದ ಈ ಕೊಲೆಯ ಬಗ್ಗೆ ಬ್ರಹ್ಮಾವರ ಪೋಲೀಸರು 3 ದಿನಗಳಿಂದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು, ಪ್ರಕರಣದ ಜಾಡು ಹಿಡಿದು ಹೊರಟವರಿಗೆ ಈತನಕ ನಿಖರ ಸುಳಿವು ದೊರೆಯದಿರುವುದು ಪ್ರಕರಣವನ್ನು ಕಗ್ಗಂಟಾಗಿಸಿದೆ. ವಿಶಾಲ ಗಾಣಿಗ ಕುಮ್ರಗೋಡು ಸಮೀಪದ ವಿಲನ್ ರೆಸಿಡೆಸ್ಸಿಯ 3ನೇ ಮಹಡಿಯ 21ನೇ ಸಂಖ್ಯೆಯ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು. ಸೋಮವಾರ ತನ್ನ ತಂದೆ ತಾಯಿ 6 ವರ್ಷದ ಮಗುವಿನೊಂದಿಗೆ ಆಟೋವೊಂದರಲ್ಲಿ ಗಂಗೊಳ್ಳಿ ಸಮೀಪದ ನಾಯಕವಾಡಿಯ ಮನೆಗೆ ತೆರಳಿದ್ದು ಅಲ್ಲಿ ತಂದೆ, ಮಗುವನ್ನು ಬಿಟ್ಟು ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಅದೇ ಆಟೋದಲ್ಲಿ ಹಿಂದಕ್ಕೆ ಬಂದಿದ್ದಳು. ಸಾಲಿಗ್ರಾಮ ಸಮೀಪ ಬರುವಾಗ ಗಂಡನಿಗೆ ಮೆಸೇಜ್ ಮಾಡಿ…
