Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಕೆ.ಎಮ್.ಅಬ್ದುಲ್ ರೆಹಮಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಮೀರ್, ಬ್ಯಾರೀಸ್ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾದ ಸಿದ್ಧಪ್ಪ ಕೆ.ಎಸ್. ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಸರವನ್ನು ಸ್ವಚ್ಛ ಮಾಡುವುದರ ಮೂಲಕ ರಾಷ್ಟ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಗ್ಗುಂಜೆ ಜಗನ್ನಾಥ್ ಶೆಟ್ಟಿ (88) ಇಂದು ನಿಧನರಾಗಿದ್ದಾರೆ. ಮೂಲತಃ ಪ್ರಗತಿಪರ ಕೃಷಿಕರಾಗಿದ್ದು ಕೃಷಿಯಲ್ಲಿ ಅಪಾರ ಜ್ಞಾನವನ್ನು ಹೊಂದಿದವರಾಗಿದ್ದು ಕೃಷಿಯಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಮ್ರತರು ಮೂವರು ಪುತ್ರರು, ಓರ್ವ ಪುತ್ರಿಯನ್ನು ಆಗಲಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯವರು ನೀಡಿದ ನಾಲ್ಕು ಬ್ಯಾರಿಕೇಡ್‌ಗಳನ್ನು ಜೇಸಿಐ ಅಧ್ಯಕ್ಷ ನಾಗೇಶ್ ನಾವಡ ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಹಾಗೂ ಕುಂದಾಪುರ ಆರಕ್ಷಕ ಠಾಣೆಯ ಎಎಸ್‌ಐ ತಾರನಾಥ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಜೇಸಿಐ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೈನ್ ಹೈಕಾಡಿ, ಪೂರ್ವಾಧ್ಯಕ್ಷ ರಾಘವೇಂದ್ರ ಚರಣ್ ನಾವಡ, ಕಾಲೇಜಿನ ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶಿವರಾಜ್ ಸಿ. ನಾವುಂದ ಹಾಗೂ ಕಾಲೇಜಿನ ಬೋಧಕ – ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕಿ ಪ್ರಥ್ವಿಶ್ರೀ ಜಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯಾದ್ಯಂತ ಸ್ವರ್ಣವಲ್ಲಿ ಸಂಸ್ಥಾನದಿಂದ ಏರ್ಪಡಿಸಿರುವ ಭಗವದ್ಗೀತಾ ಅಭಿಯಾನದ ದಶಮಾನೋತ್ಸವ ಕಾರ್ಯಕ್ರಮ ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯಿತು. ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರು ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿ, ಜೀವನದಲ್ಲಿ ಯಶಸ್ಸು-ಶ್ರೇಯಸ್ಸು ಸಾಧಿಸಲು ಶಿಸ್ತು ಮತ್ತು ಧ್ಯೇಯ ಪೂರ್ಣ ಸಾಧನೆ ಅಗತ್ಯ. ಭಗವದ್ಗೀತಾ ಪಠಣ ನಿತ್ಯ ಮಾಡುವುದರಿಂದ ಅಂತ:ಕರಣ ಶುದ್ಧಿಯಾಗುತ್ತದೆ. ಅರ್ಥಕ್ಕಿಂತ ಶ್ರದ್ಧೆ ಪರಿಣಾಮಕಾರಿಯಾದುದು ಎಂದು ಗೀತಾ ಸಂದೇಶವನ್ನು ಮನೆಮನೆಗೆ ತಲುಪಿಸುವಲ್ಲಿ ರಾಮಕ್ಷತ್ರಿಯ ಸಮಾಜದ ಮಾತೃಮಂಡಳಿಯವರು ಸ್ಥಳೀಯ ವಿದ್ಯಾಸಂಸ್ಥೆಗಳು ತೊಡಗಿಸಿಕೊಂಡಿದ್ದರಿಂದ ಪಠಣ, ಮಾರ್ಗದರ್ಶನ ಮತ್ತು ಸ್ಪರ್ಧೆ ನಿರ್ವಹಣೆ ಯಶಸ್ವಿಯಾಗಿದೆ ಎಂದರು. ಸ್ವರ್ಣವಲ್ಲಿ ಸಂಸ್ಥಾನದ ಟ್ರಸ್ಟೀ, ಅಭಿಯಾನದ ಅಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೂಜ್ಯ ಶ್ರೀಗಳ ಸಾಮಾಜಿಕ ಕಾಳಜಿ ತಪೋನುಷ್ಠಾನಗಳು ಸಮಾಜದ ಏಳ್ಗೆಗೆ ಪೂರಕವಾಗಿವೆ ಎಂದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಸ್ಪರ್ಧಾ ವಿವರಗಳನ್ನು ವಿವರಿಸಿ ಆನ್‌ಲೈನ್ ನಲ್ಲಿ ಭಾಗವಹಿಸಿದ ಶಾಲಾ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ ಅಧ್ಯಾಪಕರನ್ನು ಅಭಿನಂದಿಸಿ ಪ್ರತಿ ಶಿಕ್ಷಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾಹಿತ್ಯಕ್ಕೆ ಸಮೃದ್ಧ ಕೊಡುಗೆ ನೀಡಿದ ಅನನ್ಯ ಬರಹಗಾರ. ಅವರು ಬರೆದಂತೆ ಬದುಕಿದ ಲೇಖಕ’ ಎಂದು ಪುತ್ತೂರು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಹೇಳಿದರು. ಇಲ್ಲಿನ ಸುರಭಿ ಸಾಂಸ್ಕೃತಿಕ, ಸಾಹಿತ್ಯ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ರೋಟರಿ ಸಮುದಾಯ ಭವನದಲ್ಲಿ ನಡೆದ ಪೂರ್ಣಚಂದ್ರ ತೇಜಸ್ವಿ-ಮಂಥನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಸರದಿಂದ ಪಡೆದ ಅನುಭೂತಿಯೇ ತೇಜಸ್ವಿ ಅವರ ಬರಹಗಳ ಕೇಂದ್ರ ವಸ್ತು. ಕುವೆಂಪು ಅವರಿಗೆ ಪರಿಸರ ಅಧ್ಯಾತ್ಮದ ದಾರಿಯಾದರೆ, ಕಾರಂತರಿಗೆ ಪರಿಸರ ವಿಜ್ಞಾನದ ಮಾರ್ಗ. ಆದರೆ, ತೇಜಸ್ವಿ ಅವರಿಗೆ ಅದು ಬೆರಗುಗೊಳಿಸುವ ವಿಸ್ಮಯ‘ ಎಂದು ವಿವರಿಸಿದರು. ನಾವು ಹವ್ಯಾಸ ಎಂದು ಭಾವಿಸುವ ಛಾಯಾಗ್ರಹಣ, ಭೇಟೆ ಮತ್ತು ಮೀನು ಹಿಡಿಯುವಿಕೆ, ತೇಜಸ್ವಿಗೆ ನಿಸರ್ಗದ ಚೋದ್ಯಗಳ ಅಧ್ಯಯನದ ಮಾರ್ಗ. ಅವರು ತಮ್ಮ ಕಥನಗಳಲ್ಲಿ ಪರಿಸರಾವಲಂಬಿ ಮಾನವ, ಆಧುನಿಕತೆಯ ಪ್ರವಾಹದಲ್ಲಿ ಅವನತಿಯತ್ತ ಸಾಗುವ ಚಿತ್ರಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬೈಂದೂರು 2019-20ನೇ ಸಾಲಿನಲ್ಲಿ 16.41 ಲಕ್ಷ ರೂ. ಲಾಭಗಳಿಸಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದೆ. ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಭಾನುವಾರ ಬೈಂದೂರಿನ ಸಂಘದ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಹಕಾರಿಯು 2019-20ನೇ ಸಾಲಿನಲ್ಲಿ ರೂ. 18.60 ಕೋಟಿ ಠೇವಣಿ ಹೊಂದಿದ್ದು 18.55 ಕೋಟಿ ಸಾಲ ನೀಡಿದೆ. ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಪ್ರಗತಿ ಸಾಧಿಸಿದೆ. ಆಡಿಟ್ ವರ್ಗೀಕರಣದಲ್ಲಿ ಸಂಸ್ಥೆ ’ಎ’ ತರಗತಿಯನ್ನು ಹೊಂದಿದೆ ಎಂದರು. ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ ಹಿಂದೆ ಗ್ರಾಹಕರ ಸಹಕಾರ ಹಾಗೂ ನೌಕರರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸಮೀಪದ ಬಸ್ರೂರು ಸಂತ ಫಿಲಿಪ್ ನೇರಿ ಚರ್ಚ್ ಸಭಾ ಭವನದಲ್ಲಿ ಕುಂದಾಪುರ ವಲಯ ಸಮಿತಿ ಹಾಗೂ ಶೆವೊಟ್ ಪ್ರತಿಷ್ಠಾನದ ವತಿಯಿಂದ ಸೌಹಾರ್ದ ಕ್ರಿಸ್ಮಸ್ ಆಚರಣೆ ನಡೆಯಿತು. ಉಡುಪಿ ಧರ್ಮಪ್ರಾಂತ್ಯದ ಲ್ಯಾಟಿನ್ ಕೆಥೊಲಿಕ್, ಸೀರೊ ಮಲಬಾರ್ ಕೆಥೊಲಿಕ್, ಸಿಎಸ್ಐ, ಅರ್ಥೊಡೆಕ್ಸ್, ಸೀರಿಯನ್ ಸಮಾಜ ಬಾಂಧವರು ಭಾಗವಹಿಸಿದ್ದರು. ಬಸ್ರೂರು ಸಂತ ಫಿಲಿಪ್ ನೇರಿ ಚರ್ಚಿನ ಧರ್ಮಗುರು ಚಾರ್ಲ್ಸ್ ನೊರೋನ್ಹಾ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಸಿಎಸ್ಐ ಸಭೆಯ ಮಾಜಿ ವಲಯಾಧ್ಯಕ್ಷ ಸ್ಟೀವನ್ ಸರ್ವೋತ್ತಮ, ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಜಯಪ್ರಕಾಶ್ ಶೆಟ್ಟಿ, ಬಸ್ರೂರು ಸರ್ಕಾರಿ ಉರ್ದು ಶಾಲೆಯ ಅಧ್ಯಕ್ಷ ಅಬ್ದುಲ್ ಅಜೀಜ್ ಕ್ರಿಸ್ಮಸ್ ಸಂದೇಶ ನೀಡಿದರು. ಕುಂದಾಪುರ ವಲಯ ವ್ಯಾಪ್ತಿಯ 7 ಕುಟುಂಬಗಳಿಗೆ ವೈದ್ಯಕೀಯ ಹಾಗೂ ಮನೆ ಕಟ್ಟಲು ನೆರವನ್ನು ಹಸ್ತಾಂತರಿಸಲಾಯಿತು ಕುಂದಾಪುರ ಕೆಥೊಲಿಕ್ ಸಭಾ ವಲಯ ಅಧ್ಯಕ್ಷೆ ಮೇಬಲ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಕೃಪಾ ಚರ್ಚ್ ನ ಉಸ್ತುವಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪ್ರ ಕನ್ನಡದ ಪ್ರಥಮ ನಿಘಂಟು ಎಂದೆನಿಸಿಕೊಂಡಿರುವ ಪಂಜು ಗಂಗೊಳ್ಳಿ ಅವರು ಸಂಪಾದಿಸಿರುವ ಕುಂದಾಪ್ರ ಕನ್ನಡ ನಿಘಂಟು ಈಗ ಪ್ರಕಟಣಾಪೂರವ ಖರೀದಿಗೆ ಲಭ್ಯವಿದೆ. 700ಕ್ಕೂ ಮಿಕ್ಕಿ ಪುಟಗಳ, 10,000ಕ್ಕೂ ಮಿಕ್ಕಿ ಶಬ್ದಗಳು ಹಾಗೂ 1700ಕ್ಕೂ ಮಿಕ್ಕಿ ನುಡಿಗಟ್ಟುಗಳನ್ನು ಹೊಂದಿರುವ ಈ ನಿಘಂಟನ್ನು ಮಾರುಕಟ್ಟೆ ಬೆಲೆಗಿಂತ ರೂ. 200 ರಿಯಾಯಿತಿಯಲ್ಲಿ ಅಂಚೆ ವೆಚ್ಚ ಸಹಿತ ರೂ.400 ಪಾವತಿಸಿ ನಿಘಂಟು ಖರೀದಿಸಬಹುದಾಗಿದೆ. ಪ್ರೊಡಿಜಿ ಪ್ರಿಂಟಿಂಗ್ ಪ್ರಕಟಿಸುತ್ತಿರುವ ಪುಸ್ತಕದ ಪ್ರಕಟಣಾಪೂರ್ವ ಮಾರಾಟವನ್ನು ಎಕ್ಸ್ಕ್ಲೂಸಿವ್ ಆಗಿ “ಬುಕ್ ಬ್ರಹ್ಮ”ತಂಡ ನಿಭಾಯಿಸಲಿದ್ದು, ಅದು ಪ್ರಕಟಣಾಪೂರ್ವ ಖರೀದಿಗೆ ಸಿಂಗಲ್ ಪಾಯಿಂಟ್ ವಿಂಡೊ ಆಗಿ ಕಾರ್ಯ ನಿರ್ವಹಿಸಲಿದೆ. ಪುಸ್ತಕ ಖರೀದಿಸಲು ಆಸಕ್ತರು ಅವರ ದೂರವಾಣಿ ಸಂಖ್ಯೆ: 8495024253 ಗೆ ಪೇಟಿಎಂ/ಗೂಗಲ್ ಪೇ/ಫೋನ್ ಪೇ ಮೂಲಕ ಪಾವತಿ ಮಾಡಿ, ಪಾವತಿ ಮಾಡಿದ ವಿವರ ಮತ್ತು ವಿಳಾಸವನ್ನು ಕಳುಹಿಸಿಕೊಟ್ಟರೆ, ಅವರು ಜನವರಿ 26ಕ್ಕೆ ಪುಸ್ತಕ ಬಿಡುಗಡೆಯ ದಿನದಂದೇ ಪುಸ್ತಕವನ್ನು ನಿಮಗೆ ತಲುಪಿಸಲು ವ್ಯವಸ್ಥೆ ಮಾಡುತ್ತಾರೆ. ಇದನ್ನೂ ಓದಿ: ►…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಪಂಚಗಂಗಾವಳಿ ನದಿ ತೀರದ ಪಂಜರ ಮೀನು ಕೃಷಿ ಪ್ರದೇಶಕ್ಕೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು ಹಾಗೂ ಜಲ ತಜ್ಞರ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಕಳೆದ ಕೆಲವು ದಿನಗಳಿಂದ ಕುಂದಾಪುರದ ಪಂಚಗಂಗಾವಳಿ ನದಿ ಪ್ರದೇಶದಲ್ಲಿ ನಿಗೂಢವಾಗಿ ಸಾಯುತ್ತಿರುವ ಪಂಜರ ಕೃಷಿಯಲ್ಲಿನ ಮೀನುಗಳ ಕುರಿತು ತಜ್ಞರು ಅಧ್ಯಯನ ನಡೆಸಿ ವರದಿ ನೀಡಲಿದ್ದಾರೆ. ವರದಿ ಬಂದ ಬಳಿಕ ನಿಯಮಾವಳಿಗಳ ಅಡಿಯಲ್ಲಿ ಪರಿಹಾರ ನೀಡಲು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಈ ಭಾಗದಲ್ಲಿ ಅಂದಾಜು 115 ಪಂಜರಗಳಲ್ಲಿ ಮೀನು ಕೃಷಿ ನಡೆಯುತ್ತಿದೆ. ಇಲ್ಲಿನ ಮೀನುಗಳು ಸಾವನ್ನಪ್ಪುತ್ತಿರುವುದರಿಂದ ಕೃಷಿಕರು ಅಪಾರ ಪ್ರಮಾಣದ ನಷ್ಟವನ್ನು ಅನುಭವಿಸುತ್ತಿದ್ದಾರೆ. ನಿರ್ದಿಷ್ಟ ಕಾರಣ ಪತ್ತೆಯಾಗಿಲ್ಲ. ನೀರಿನಲ್ಲಿನ ಲವಣಾಂಶಗಳ ಏರುಪೇರು. ಪಂಜರದೊಳಗೆ ಉಸಿರಾಟ ಸಮಸ್ಯೆ. ನೀರನ್ನು ಕಲುಷಿತಗೊಳಿಸುತ್ತಿರುವ ಕೊಳಚೆ ನೀರು ಹಾಗೂ ಕಳೆದ ಕೆಲವು ದಿನಗಳಿಂದ ಸಮುದ್ರ ನೀರಿನಲ್ಲಿ…

Read More

ಕುಂದಾಪ್ರ ಡಾಟ್ ಸುದ್ದಿ. ಬೈಂದೂರು: ಶ್ರೀ ಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಾವುಂದ ಇದರ ಎಂಟನೇ ವಾರ್ಷಿಕ ಮಹಾಸಭೆಯು ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿತು. ಸಹಕಾರಿಯ ಅಧ್ಯಕ್ಷ ಡಾ. ಎನ್. ಕೆ ಬಿಲ್ಲವ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್-19 ಕಾರಣದಿಂದಾಗಿ ಸಾಲ ವಸೂಲಾತಿಯಲ್ಲಿ ಗುರಿ ಸಾಧನೆಯಾಗದಿದ್ದರೂ ಸದಸ್ಯರ ಹೊರಬಾಕಿ ಸಾಲ ಮತ್ತು ಠೇವಣಿ ಸಂಗ್ರಹಣೆ ಹೆಚ್ಚಳವಾಗಿದ್ದು 2019-20ರ ಲೆಕ್ಕಪರಿಶೋಧನಾ ವರದಿಯಲ್ಲಿ ಎ ಶ್ರೇಣಿಯ ಗೌರವವನ್ನು ಪಡೆದಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಸಾಲಗಾರ ಸದಸ್ಯರು ವಾಯ್ದೆಗೆ ಸರಿಯಾಗಿ ಸಾಲ ಮರುಪಾವತಿ ಮಾಡಿ ಸಹಕಾರಿಯ ಏಳಿಗೆಗೆ ಸಹಕರಿಸಬೇಕೆಂದು ಹಾಗೂ ಸಂಘದ ಏಳಿಗೆಗಾಗಿ ಪ್ರತಿಯೊಬ್ಬ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದರು. ಸಹಕಾರಿಯ ಕಾರ್ಯದರ್ಶಿ ಪೂಜಾ ಟಿ ವಾರ್ಷಿಕ ವರದಿ ಓದಿದರು, ನಂತರ 2020-21ನೇ ಸಾಲಿನ ಅಂದಾಜು ಆಯ – ವ್ಯಯ, ಅನುಪಾಲನಾ ವರದಿಗೆ ಅನುಮೋದನೆ ಸಭೆಯಲ್ಲಿ ಪಡೆಯಲಾಯಿತು. ಸಹಕಾರಿಯ ಲಾಭಾಂಶಗಳನ್ನು ಉಪವಿಧಿಗನುಸಾರವಾಗಿ ವಿಂಗಡಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಶೇಖರ ಎಮ್ ಪೂಜಾರಿ,…

Read More