ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ಸ್ಪಂದನ ಉಡುಪಿ ಹಾಗೂ ಚ್ಯಾಲೆಂಜರ್ಸ ಕುಂದಾಪುರ ಇದರ ಜಂಟಿ ಆಶ್ರಯದಲ್ಲಿ ಭ್ರಷ್ಟಾಚಾರ ನಿನಿರ್ಮೂಲನಾ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಭ್ರಷ್ಟಾಚಾರ ನಿಗ್ರಹದಳ ಉಡುಪಿ ಉಪ ಅಧೀಕ್ಷಕರಾದ ಬಿ. ಎಸ್. ಸತೀಶ್ ಮಾತನಾಡಿ, ಆಚಾರವೇ ಶಿಷ್ಟಾಚಾರ ಆಚಾರವನ್ನು ಅತಿ ಕೃಮಿಸುವುದೇ ಭ್ರಷ್ಟಾಚಾರ, ಯುವಶಕ್ತಿ ಭ್ರಷ್ಟಾಚಾರಕ್ಕೆ ಬದುಕಿನಲ್ಲಿ ಆಸ್ಪದ ಕೊಡದೇ ಭ್ರಷ್ಟಾಚಾರದ ನಿರ್ಮೂಲನೆಗೆ ಕಾರಣೀಕರ್ತರಾಗಬೇಕು ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಮ್. ಅಬ್ದುಲ್ ರೆಹಮಾನ ವಹಿಸಿದ್ದರು. ಚಾಲೆಂಜರ್ಸ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ ಶ್ರೀಯಾನ್, ಉಡುಪಿ ಯುವ ಸ್ಪಂದನ ಕೇಂದ್ರ ಯುವ ಪ್ರವರ್ತಕ ನರಸಿಂಹ, ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಮೀರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಸಂದೀಪ ಕುಮಾರ ಶೆಟ್ಟಿ, ಘಟಕದ ವಿದ್ಯಾರ್ಥಿ ಮುಖಂಡ ಮೊಹಮ್ಮದ ಅಯಾನ್ ವೇದಿಕೆಯಲ್ಲಿ ಉಪಸ್ಥಿತರಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಸಂದೀಪ ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ನುಡಿದರು. ವಿದ್ಯಾರ್ಥಿನಿ ಕಾವ್ಯಾ ಸ್ವಾಗತಿಸಿ, ನರಸಿಂಹ ವಂದಿಸಿದರು. ವಿದ್ಯಾರ್ಥಿ ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿದರು.