ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದ ಗ್ರಾಮದ ಅರೆಹೊಳೆಯಲ್ಲಿ ಅರೆಹೊಳೆ ಫ್ರೆಂಡ್ಸ್ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಕುಂದಾಪುರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಫೆ.೨ರ ಶನಿವಾರ ಸಂಜೆ ಏಳು ಗಂಟೆಗೆ ಚಾಲನೆ ದೊರೆಯಲಿದೆ. ಅರೆಹೊಳೆಯಲ್ಲಿ ವಾಲಿಬಾಲ್ ಪಂದ್ಯಾಟ ಅದ್ದೂರಿಯಾಗಿ ನಡೆಯಲಿದೆ, ಉದ್ಘಾಟನಾ ಸಮಾರಂಭ ನಂತರ ಪಂದ್ಯಾಟ ಜರುಗಲಿದೆ. ಅರೆಹೊಳೆ ಫ್ರೆಂಡ್ಸ್ ಪಂದ್ಯಾಟದಲ್ಲಿ ಉಳಿತಾಯವಾದ ಹಣವನ್ನು ಅರೆಹೊಳೆ ದೇವಸ್ಥಾನಕ್ಕೆ ನೀಡಲಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಡು ರಸ್ತೆಯಲ್ಲಿ ಹಾಡಹಗಲೇ ರಾಜಾರೋಷವಾಗಿ ಹೊಡೆದಾಟಕ್ಕೆ ನಿಂತ ವಿದ್ಯಾರ್ಥಿಗಳ ದಂಡು, ಇಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಹಲ್ಲೆಗೊಳಗಾದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಂಡಾರ್ಕಾರ್ಸ್ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಗಣೇಶ್ ಹಾಗೂ ಬೇರೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಅಂತಿಮ ಬಿಕಾಂ ವಿದ್ಯಾರ್ಥಿ ಮಿಥುನ್ ಹಾಗೂ ದ್ವಿತೀಯ ಬಿಬಿಎಂ ವಿದ್ಯಾರ್ಥಿ ಅಕ್ಷಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದು, ಇಬ್ಬರು ಗಂಭೀರ ಗಾಯಗೊಂಡು, ಹೊಡೆದಾಟ ತಪ್ಪಿಸಲು ಹೋದ ಕೆಲವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ವಿದ್ಯಾರ್ಥಿಗಳು ನೋಡನೋಡುತ್ತಿದ್ದಂತೆಯೇ ಸಿನಿಮೀಯ ಮಾದರಿಯಲ್ಲಿ ಗಂಭೀರ ಹಲ್ಲೆ ನಡೆಸಿದ್ದು, ಸಿಕ್ಕಸಿಕ್ಕ ಕಡೆ ಹೊಡೆದಿದ್ದಾರೆ. ಇದೇ ಸಂದರ್ಭ ಸ್ಥಳಕ್ಕೆ ಬಂದ ಕುಂದಾಪುರ ಪುರಸಭೆಯ ಸದಸ್ಯ ಗಿರೀಶ್ ಜಿ.ಕೆ ಅವರು ಹೊಡೆದಾಟ ಬಿಡಿಸಲು ಹೋದಾಗ ಅವರಿಗೂ ಹಲ್ಲೆಗೆ ಮುಂದಾದ ತಂಡ ಅವರ ಕಾರಿನ ಕೀ ಕಿತ್ತುಕೊಂಡಿದ್ದಾರೆ. ಆದರೆ ಸ್ಥಳೀಯರು ಒಟ್ಟಾಗುತ್ತಿದ್ದಂತೆ ದುಷ್ಕರ್ಮಿ ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮಿಥುನ್ ಅವರ ತಲೆ, ಕಾಲು ಹಾಗೂ ಮುಖಕ್ಕೆ ಗಂಭೀರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಭರತ್ ಹಾಗೂ ಯತೀಶ್ ಕಾಂಚನ್ ಆಪ್ತ ಸ್ನೇಹಿತರಾಗಿದ್ದರು. ವಿದ್ಯಾರ್ಥಿ ಜೀವನದಲ್ಲಿ ಇಬ್ಬರೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಭರತ್ ಕಳೆದ ಎರಡು ವರ್ಷದಿಂದ ಆಟೋರಿಕ್ಷಾ ಓಡಿಸಿ ಜೀವನ ನಡೆಸುತ್ತಿದ್ದರೆ, ಯತೀಶ್ ಕಳೆದ ಬಾರಿ ಕುಂದಾಪುರದಿಂದ ವಿಧಾನ ಸಭೆಗೆ ಸ್ಪರ್ಧಿಸಿದ ರಾಜೇಶ್ ಮಲ್ಲಿ ಸಹಾಕಯರಾಗಿ ಕೆಲಸ ಮಾಡುತ್ತಿದ್ದು, ಚುನಾವಣೆ ನಂತರ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಬ್ಯಾಂಕ್ ಒಂದರ ಉದ್ಯೋಗಿ ಆಗಿದ್ದರು ಎನ್ನಲಾಗಿದೆ. ಯತೀಶ್ಗೆ ತಂದೆ ತಾಯಿಯಿಲ್ಲದೆ ದೊಡ್ಡಮ್ಮನ ಮನೆಯಲ್ಲಿ ಬೆಳೆದಿದ್ದು, ಬಿಕಾಂ ಪದವೀಧರ. ಭರತ್ ಬಿಬಿಎಂ ಪದವಿಧರಾಗಿದ್ದು, ತಂದೆ ರಾಮಣ್ದ ತಾಯಿ ಪಾರ್ವತಿ ಕೂಲಿ ಕಾರ್ಮಿಕರು. ಭರತ್ ಸ್ಥಳೀಯ ಸಂಘದ ಅಧ್ಯಕ್ಷರಾಗಿದ್ದು, ಓರ್ವ ತಮ್ಮ ೭ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಯತೀಶ್ ಇನ್ನೆರೆಡು ದಿನದಲ್ಲಿ ಬೆಂಗಳೂರಿಗೆ ಮರಳುವವರಿದ್ದರು. ಲೋಹಿತ್ ಪೂಜಾರಿ ಪೋನ್ ಮಾಡಿ ಕರೆಯದಿದ್ದರೆ ಸ್ಥಳಕ್ಕೆ ಬರುತ್ತಿರಲಿಲ್ಲ. ಯಾರಿಗೋ ಹಾಕಿದ ಸ್ಕೆಚ್ ಇಬ್ಬರು ಪ್ರಾಣ ಸ್ನೇಹಿತರು ಪ್ರಾಣಕ್ಕೆ ಎರವಾಗಿದ್ದು ಮಾತ್ರ ವಿಪರ್ಯಾಸ. ಮರಣೋತ್ತರ ಪರೀಕ್ಷೆ ನಂತರ ಶವ ವಾರೀಸುದಾರರಿಗೆ ಬಿಟ್ಟುಕೊಟ್ಟಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ನಿನ್ನೆ ರಾತ್ರಿ ಕೋಟದಲ್ಲಿ ನಡೆದಿರುವ ಸ್ನೇಹಿತರಿಬ್ಬರ ಕೊಲೆಗೆ ಇಡೀ ಕೋಟ ಪರಿಸರ ಮೊಮ್ಮಲ ಮರುಗಿದೆ. ಮರಣೋತ್ತರ ಪರೀಕ್ಷೆ ನಂತರ ಶವ ವಾರೀಸುದಾರರಿಗೆ ಬಿಟ್ಟುಕೊಟ್ಟಿದ್ದು, ಸಂಬಂಧಿಕರು ಸಾರ್ವಜನಿಕರು ಅರ್ಧಗಂಟೆಗೂ ಮಿಕ್ಕ ಶವ ರಸ್ತೆಯಲ್ಲಿ ಇಟ್ಟು ಪ್ರತಿಭಟಿಸಿ, ರಸ್ತೆ ತಡೆ ನಡೆಸಿದರು. ಸಂಬಂಧಿಕರ ಪೋಷಕರ ಕಣ್ಣಿರು ಕಲ್ಲುಮನಸ್ಸನ್ನೂ ಕರಗಿಸುವಂತೆ ಇತ್ತು. ಆರೋಪಿಗಳ ಶೀಘ್ರ ಬಂದಿಸುವಂತೆ ಒತ್ತಾಯಿಸಿದ ಪ್ರತಿಭಟನಾನಿರತರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನುಕ ಕ್ರಮ ಕೈಗೊಂಡು ಶಿಕ್ಷೆ ವಿಧಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ನಂತರ ಹೆದ್ದಾರಿ ತೆರವು ಮಾಡಿದ ಪ್ರತಿಭಟನಾಕಾರರು ಶ್ರೀ ಅಮೃತೇಶ್ವರಿ ದೇವಸ್ಥಾನ ಬಳಿ ವೃತ್ತದಲ್ಲಿ ಮತ್ತೆ ಶವವಿಟ್ಟು ಪ್ರತಿಭಟನೆ ನಡೆಸಿ, ಸ್ಥಳಕ್ಕೆ ಎಸ್ಪಿ ಬರುವಂತೆ ಆಗ್ರಹಿಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರ್ಗಿ ಭೇಟಿ ನೀಡಿ, ಪ್ರತಿಭಟನೆ ನಡೆಸುವವರ ಮನ ಒಲಿಸಿದ ನಂತರ ರಸ್ತೆ ಬಂದ್ ತೆರವು ಮಾಡಲಾಯಿತು. ಸಾವಿರಾರು ಜನರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಯಿತು. Also read: ► ಕೋಟದಲ್ಲಿ ಯುವಕರಿಬ್ಬರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಕೆಗೆ ಒತ್ತುಕೊಡುವುದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಿದೆ. ಹಳೆ ವಿದ್ಯಾರ್ಥಿ ಸಂಘಗಳು ನುರಿತ ಆಂಗ್ಲ ಭಾಷಾ ಶಿಕ್ಷಕರನ್ನು ನೇಮಿಸುವ ಹಂತದಲ್ಲಿ ಹಾಗೂ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಶಾಲಾ ಶಿಕ್ಷಕರಿಗೆ ನೆರವಾದರೆ ಮಕ್ಕಳ ದಾಖಲಾತಿಯೂ ಹೆಚ್ಚಲಿದೆ ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡ್ತರೆ ಇದರ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಮತ್ತು ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಯಡ್ತರೆ, ಬೈಂದೂರು, ಪಡುವರಿ ಭಾಗದಲ್ಲಿ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಿದ್ದು ಅದನ್ನು ಬಗೆಹರಿಸುವುದೇ ಒಂದು ಸವಾಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಲಾಗಿದ್ದು ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲಾಗುತ್ತದೆ. ಜತೆಗೆ ಜಲಧಾರೆ ಕುಡಿಯುವ ನೀರಿನ ಯೋಜನೆಗೆ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಶಾಲೆಯ ಹಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಜಾಗದ ವ್ಯಾಜ್ಯ ಇತ್ಯರ್ಥಕ್ಕೆ ಮುಂದಾಗಿದ್ದ ಇಬ್ಬರು ಯುವಕರು ಬರ್ಬರವಾಗಿ ಕೊಲೆಯಾಗಿರುವ ಘಟನೆ ಕೋಟ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೋಟದ ನಿವಾಸಿಗಳಾದ ಯತೀಶ್ ಕಾಂಚನ್ ಹಾಗೂ ಭರತ್ ಪೂಜಾರಿ ಕೊಲೆಯಾದ ದುರ್ದೈವಿಗಳು. ಕೋಟದ ಲೋಹಿತ್ ಎಂಬುವವರ ಮನೆಯ ಬಾವಿಯ ಪಕ್ಕದಲ್ಲಿ ಶೌಚಾಲಯ ಹೊಂಡ ತೆರೆಯಹೊರಟಿದ್ದ ಪಕ್ಕದ ಜಾಗದವರ ವ್ಯಾಜ್ಯ ಇತ್ಯರ್ಥಕ್ಕೆ ಭರತ್ ಮತ್ತು ಯತೀಶ್ ಸಹಕಾರ ಮಾಡಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ಶನಿವಾರ ರಾತ್ರಿ ಲೋಹಿತ್ ಮತ್ತು ಅವರ ಸಹೋದರ ಮೆಹೆಂದಿ ಕಾರ್ಯಕ್ರಮ ಮುಗಿಸಿ ಮನೆಗೆ ಬರಳುತ್ತಿರುವಾಗಿ ದುಷ್ಕರ್ಮಿಗಳು ಇವರ ಫಾಲೋಮಾಡಿದ್ದಾರೆ. ಲೋಹಿತ್ ಪೂಜಾರಿ ಮನೆ ಸೇರಿ ಒಳಗೆ ಸೇರಿ ಭದ್ರ ಪಡಸಿಕೊಂಡಿದ್ದರು. ಆದರೂ ದುಷ್ಕರ್ಮಿಗಳು ಬಾಗಿಲು ತೆಗೆಯುವಂತೆ ಆವಾಜ್ ಹಾಕಿದ್ದಾರೆ. ಮನೆ ಬಾಗಿಲು ಬಡಿದಿದ್ದು, ಬೈಕ್ ಎಕ್ಸಿಲೇಟರ್ ರೈಸ್ ಮಾಡಿದ್ದಾರೆ. ಲೋಹಿತ್ ಪೂಜಾರಿ ಭರತ್ ಹಾಗೂ ಯತೀಶ್ಗೆ ಪೋನ್ ಮಾಡಿ ಸಹಾಯ ಕೇಳಿದ್ದಾರೆ. ಭರತ್ ಆಟೋರಿಕ್ಷದಲ್ಲಿ ಇಬ್ಬರೂ ಲೋಹಿತ್ ಮನೆಗೆ ಬಂದು ಬಾಗಿಲು ತೆಗೆಸಿದ್ದಾರೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದು ಮನುಷ್ಯನಲ್ಲಿ ಸ್ವಾರ್ಥ ಹೆಚ್ಚುತ್ತಿದೆ ಎಂದು ಒಮ್ಮೊಮ್ಮೆ ಭಾಸವಾಗುತ್ತದೆ. ಆದರೆ ನಾವು ಆಡುವ ಮಾತು ಹಾಗೂ ಮಾಡುವ ಕೆಲಸ ಎರಡೂ ಒಂದೇ ಆಗಿದ್ದರೇ ಪ್ರೀತಿ ವಿಶ್ವಾಸದ ಸಮಾಜ ನಿರ್ಮಾಣವಾಗುತ್ತದೆ. ಕಲಾ ಚಟುವಟಿಕೆಗಳು ಅದಕ್ಕೆ ಪೂರಕ ವಾತಾವರಣವನ್ನು ನಿರ್ಮಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ತಗ್ಗರ್ಸೆ ಬಾಬು ಶೆಟ್ಟಿ ಹೇಳಿದರು. ಅವರು ಶುಕ್ರವಾರ ಬೈಂದೂರಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಹಮ್ಮಿಕೊಂಡ ’ಸುರಭಿ ಜೈಸಿರಿ’ ಸಮಾರಂಭದ ಅಧ್ಯಕ್ಷತೆ ವಹಿಸಿ ಸಮಾರೋಪ ನುಡಿಗಳನ್ನಾಡಿದರು. ಹಿರಿಯ ಯಕ್ಷಗಾನ ಕಲಾವಿದ ಹೇರಂಜಾಲು ಸುಬ್ಬಣ್ಣ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ಗುರುಗಳಾದ ಪ್ರಶಾಂತ ಮಯ್ಯ ದಾರಿಮಕ್ಕಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಸುರಭಿಯ ಚಂಡೆ ವಿಭಾಗದ ಕಲಾವಿದರಾದ ಶಾಂತಾ, ಭಾಗೀರತಿ ಹಾಗೂ ಲಲಿತಾ ಮರಾಠಿ ಅವರನ್ನು ಗೌರವಿಸಲಾಯಿತು. ಬೈಂದೂರು ರೋಟರಿ ಅಧ್ಯಕ್ಷ ಐ. ನಾರಾಯಣ, ಶ್ರೀ ಸೇನೇಶ್ವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಬಡತನ ಸಿರಿತನದಿಂದ ಯಾರೂ ಕೆಟ್ಟವರಾಗೋದಿಲ್ಲ ಕೆಟ್ಟವರಾಗೋದು ತಮ್ಮೊಳಗಿನ ದುರಾಸೆಯಿಂದ ಮಾತ್ರ. ಈ ದುರಾಸೆ ಹುಟ್ಟೋದು ಬುದ್ಧಿಯಿಂದಲೇ ಹೊರತು ಹೃದಯಭಾವದಿಂದಲ್ಲ. ಈ ಬದುಕೆಂಬ ಮಾಯಾಲೋಕದಲ್ಲಿ ಹೃದಯವಂತಿಕೆಯ ಬದುಕು ಹೆಚ್ಚು ನೆಮ್ಮದಿ ಹಾಗೂ ಆರೋಗ್ಯವನ್ನು ಕರುಣಿಸುತ್ತದೆ. ಶುದ್ಧ ಅಂತಃಕರಣ ಎಲ್ಲಕ್ಕೂ ಮಿಗಿಲಾದ ಸಂಪತ್ತು ಅದನ್ನು ನಮ್ಮದಾಗಿಸಿಕೊಳ್ಳೋಣ ಎಂದು ಸಾಹಿತಿ, ಜಾದೂಗಾರ ಓಂಗಣೇಶ್ ಉಪ್ಪುಂದ ಹೇಳಿದರು. ರೋಟರಿ ಕುಂದಾಪುರ ಏರ್ಪಡಿಸಿದ ಮಾಸಿಕ ಕುಟುಂಬೋತ್ಸವದಲ್ಲಿ ’ಬದುಕು ಮಾಯಾಲೋಕ’ ಎಂಬ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದ ಇವರು ಇನ್ನೊಬ್ಬರೊಂದಿಗೆ ಹೋಲಿಕೆ ಹಾಗೂ ನಿರೀಕ್ಷೆಗಳು ನಮ್ಮೊಳಗೆ ಗೊಂದಲ ತರುತ್ತವೆ. ದೇಹ ಶುದ್ಧಿ ರಕ್ತ ಶುದ್ಧಿಯಂತೆ ಇಂದಿನ ವೇಗದ ಬದುಕಲ್ಲಿ ಗೊಂದಲದ ಮನಶುದ್ಧಿಗೂ ಹೆಚ್ಚು ಪ್ರಾಮುಖ್ಯತೆ ನೀಡುವ ಅಗತ್ಯ ಇದೆ. ಮನಸ್ಸು ನಿರಾಳ ಹೊಂದಿದಷ್ಟು ಜೀವನೋತ್ಸಾಹ ಹೆಚ್ಚುತ್ತದೆ. ಅದಕ್ಕಾಗಿ ನಮ್ಮ ಹಿರಿಯರು ಧಾರ್ಮಿಕ ಸಾಂಸ್ಕೃತಿಕ ಆಚರಣೆಯನ್ನು ನೆಚ್ಚಿಕೊಂಡಿದ್ದರು. ನಾವೂ ಅದನ್ನು ಹೆಚ್ಚೆಚ್ಚು ಅನುಸರಿಸ ಬೇಕಿದೆ ಎಂದರು. ರೋಟರಿ ಅಸಿಸ್ಟಂಟ್ ಗವರ್ನರ್ ಕೊಡ್ಲಾಡಿ ಸುಭಾಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗೀಳಿದ್ದವನಿಗೆ ಗೋಳಿಲ್ಲ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲಿಯೇ ಮುಂದುವರಿಯಲು ಪೋಷಕರು ಅವಕಾಶ ಮಾಡಿಕೊಡಬೇಕು. ಗೀಳು ಎಲ್ಲರನ್ನು ಸೆಳೆಯೊಲ್ಲ. ಅದರೆಡೆಗೆ ಸಾಗಿದವರು ಮುಂದೊಂದು ದಿನ ದೊಡ್ಡ ವ್ಯಕ್ತಿಗಳೇ ಆಗುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಮಗುವಿಗೆ ಕಲೆಯ ಗೀಳನ್ನು ಅಂಟಿಸುವ ಪ್ರಯತ್ನ ಮಾಡುತ್ತಿರುವ ಸುರಭಿಯಂತಹ ಸಂಸ್ಥೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಪ್ರಸಿದ್ಧ ರಂಗನಟ ಹಾಗೂ ಚಲನಚಿತ್ರ ನಟ ರಮೇಶ್ ಭಟ್ ಹೇಳಿದರು. ಅವರು ಗುರುವಾರ ಬೈಂದೂರು ಶಾರದಾ ವೇದಿಕೆಯಲ್ಲಿ 19ನೇ ವರ್ಷದ ಸಂಭ್ರಮದಲ್ಲಿರುವ ಸುರಭಿ ರಿ. ಬೈಂದೂರು ಸಂಸ್ಥೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿರುವ ’ಸುರಭಿ ಜೈಸಿರಿ’ ಕಾರ್ಯಕ್ರಮದಲ್ಲಿ ’ಬಿಂದುಶ್ರೀ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಜನ್ಮ ಕೊಟ್ಟ ಭೂಮಿ, ಹೆತ್ತ ತಾಯಿ ಎರಡೂ ಅಮೂಲ್ಯ ರತ್ನಗಳು. ಆದರೆ ನನ್ನ ಪಾಲಿಗೆ ಈಗ ಮತ್ತೊಂದು ರತ್ನ ಒದಗಿ ಬಂದಿದೆ, ಅದು ಬಿಂದುಶ್ರೀ ಪ್ರಶಸ್ತಿ. ತಾನು ಸಿನೆಮಾ ರಂಗಕ್ಕೆ ಬಂದು ನಲವತ್ತೈದು ವರ್ಷ ಕಳೆದಿದ್ದೇನೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಹುಪಾಲು ಕುಂದಾಪುರ ಮೂಲದ ಪ್ರತಿಭೆಗಳೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ ‘ಸಹನಾ’ ಮ್ಯೂಸಿಕ್ ವಿಡಿಯೋ ಜ.25ರಂದು ಬಿಡುಗಡೆಗೊಳ್ಳುತ್ತಿದ್ದು, ತಂಡದ ಪ್ರಯತ್ನದ ಬಗೆಗಿರುವ ನಿರೀಕ್ಷೆ ಸಣ್ಣ ಕುತೂಹಲವನ್ನು ಹುಟ್ಟುಹಾಕಿದೆ. ರಿಷಬ್ ಶೆಟ್ಟಿ ಫಿಲ್ಮ್ಸ್ ನಿರ್ಮಿಸಿರುವ ಈ ಮ್ಯೂಸಿಕ್ ವಿಡಿಯೋವನ್ನು ಸಂತೋಷ್ ಬಳ್ಕೂರು ನಿರ್ದೇಶಿಸಿದ್ದು, ಡೆನಿಲ್ ಸುಹಿತ್ ಸಂಗೀತವಿದೆ. ಯತಿಶ್ ರೈ ಛಾಯಾಗ್ರಹಣ ಮಾಡಿದ್ದರೇ, ಅರುಣಜ ಎನ್. ಅವರು ಕಂಡಸಿರಿಯಲ್ಲಿ ಹಾಡು ಮೂಡಿಬಂದಿದೆ. ಕುಂದಾಪುರದ ರಕ್ಷಿತ್ ಶೆಟ್ಟಿ ಸೇರಿದಂತೆ ಇತರರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಸಹನಾ ಅನುಭವಿಸಿದ ಅತೀವ ನೋವುಗಳ ಜೊತೆ ಜೊತೆಗೆ ಅವಳ ಅಂತರಾತ್ಮವೂ ಮರೆಯಾಗಿ ಹೋದ ಬಗೆಯನ್ನು ತೆರೆದಿಡುತ್ತದೆ. ನಾವು ದಿನನಿತ್ಯ ಕಂಡೂ ಕಡೆಗಣಿಸುವ ಸಮಾಜದ ರಾಕ್ಷಸರಿಂದ ನಿರ್ದಯವಾಗಿ ಬರ್ಬರ ಲೈಂಗಿಕ ಹಲ್ಲೆಗೊಳಗಾದ ಹೆಣ್ಣೊಬ್ಬಳ ಕಥೆ. ವಿಷಮಯ ಕೊಳದಲ್ಲಿನ ಕಮಲವೊಂದು ಆ ಹೆಣ್ಣಿನ ರೂಪಕವಾಗಿ ಹೆಣೆದಿರುವ ಕಥೆಯಿದು.
