ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಲ್ಲಿ ರಂಗಸ್ಥಳದಲ್ಲಿ ಯಕ್ಷಗಾನ ಸಾಂಗವಾಗಿ ನಡೆಯುತ್ತಿದ್ದರೇ, ಎದುರಿನಲ್ಲಿ ಕುಳಿತು ನೋಡುತ್ತಿದ್ದ ಪುಟ್ಟ ಪೋರನೋರ್ವ ವೇಷಧಾರಿಯ ಹೆಜ್ಜೆ ಹಾಗೂ ಅಭಿಯನವನ್ನು ತಾನೂ ಅನುಕರಿಸಲು ಆರಂಭಿಸಿದ್ದಲ್ಲದೇ, ಸುತ್ತಮುತ್ತಲಿನ ಪರಿವೇ ಇಲ್ಲದೇ ಅಭಿನಯದಲ್ಲಿ ಮುಳುಗಿಹೋಗಿದ್ದ. Video ಹೌದು. ಜನ್ನಾಲಿಯಲ್ಲಿ ನಡೆಯುತ್ತಿದ್ದ ಮಾರಣಕಟ್ಟೆ ಮೇಳದ ಯಕ್ಷಗಾನದಲ್ಲಿ ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ್ದು ನಂದ್ರೋಳ್ಳಿ ಗುಣಕರ ಶೆಟ್ಟಿ ಹಾಗೂ ಪ್ರಿಯಾಂಕ ಗುಣಕರ ಶೆಟ್ಟಿ ಅವರು ಎರಡೂವರೆ ವರ್ಷ ಪುತ್ರ ದ್ರಿತಿಲ್ ಶೆಟ್ಟಿ. ಯಾವುದೇ ಕಲಿಕೆ ಇಲ್ಲದೇ, ಆಸಕ್ತಿಯಿಂದಷ್ಟೇ ಮುದ್ದಾಗಿ ಕುಣಿಯುತಿದ್ದ ದ್ರಿತಿಲ್ ಶೆಟ್ಟಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಂದಾಪುರ ತಾಲೂಕಿನ ನಂದ್ರೋಳ್ಳಿಯವರಾದ ಗುಣಕರ ಶೆಟ್ಟಿ ಅವರು ಬೆಳಗಾವಿ ಲೋಕಾಪುರದಲ್ಲಿ ಶಾಂತಿಪ್ರಿಯ ಹೋಟೆಲ್ ನಡೆಸುತ್ತಿದ್ದಾರೆ. ಗುಣಕರ ಶೆಟ್ಟಿ ಹಾಗೂ ಪ್ರಿಯಾಂಕ ಶೆಟ್ಟಿ ದಂಪತಿಗಳೀರ್ವರೂ ಕಲಾಸಕ್ತರಾಗಿದ್ದು, ಮಗ ದ್ರಿತಿಲ್‌ನಲ್ಲಿಯೂ ಸುಪ್ತವಾಗಿ ಮೂಡಿಬರುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸನಾತನ ಹಿಂದೂ ಧರ್ಮದ ಪ್ರತಿಯೊಂದು ಧಾರ್ಮಿಕ ಆಚರಣೆಗಳು ವೈಜ್ಞಾನಿಕವಾಗಿಯೂ ಸಂಬಂಧ ಹೊಂದಿದೆ. ಭಜನೆಯಲ್ಲಿ ಮೂಲಾಧಾರಚಕ್ರ, ಸ್ವಾಧಿಷ್ಠಾನಚಕ್ರ ಮಣಿಪುರಚಕ್ರ ಹಾಗೂ ಸಹಸ್ರಾಳಚಕ್ರ ಎಂಬ ವಿಧಗಳಿವೆ. ಹೀಗಾಗಿ ನಾವು ಮಾಡುವ ಪ್ರತಿಯೊಂದು ಧಾರ್ಮಿಕ ಪದ್ದತಿಗಳು ಗಣಪತಿ ಸ್ತುತಿಯೊಂದಿಗೆ ಆರಂಭಗೊಳ್ಳಲಿದ್ದು, ಇದು ಶಾಸ್ತ್ರದ ನಿಯಮವಾಗಿದೆ ಎಂದು ವೇ. ಮೂ. ಹಳಗೇರಿ ವಾಸುದೇವ ಕಾರಂತ ಹೇಳಿದರು. ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ಭಜನಾ ಮಂಡಳಿಯ ವತಿಯಿಂದ ನಡೆದ ಮಹಾಶಿವರಾತ್ರಿ ಅಖಂಡ ಭಜನಾ ಸಪ್ತಾಹದ ಮಂಗಲೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಧ್ಯಾನಮಾರ್ಗ, ಭಕ್ತಿಮಾರ್ಗ ಮತ್ತು ಕರ್ಮಮಾರ್ಗಗಳಿಂದ ಮಾತ್ರ ನಮ್ಮ ಆಂತರಿಕ ಕೊಳೆಯನ್ನು ತೊಳೆದುಕೊಳ್ಳಬಹುದು. ಭಕ್ತಿ ಮಾರ್ಗ ಅಂದರೆ ಭಜನೆಯ ಮೂಲಕ ಶೀಘ್ರ ಭಗವಂತನ ಒಲುಮೆ ಸಾಧ್ಯವಾಗುತ್ತದೆ. ಬ್ರಾಹ್ಮಿ ಹಾಗೂ ಗೋದೂಳಿ ಸಮಯದಲ್ಲಿ ದೇವರ ಸ್ಮರಣೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಇದಕ್ಕೆ ಮೂಲವಾಗಿರುವ ವಿಧಾನವೇ ಭಜನೆ. ಇದು ತಪಸ್ಸಿಗೆ ಸಮನಾಗಿರುವುದಲ್ಲದೇ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಶೀಘ್ರವಾಗಿ ಆತನನ್ನು ಒಲಿಸಿಕೊಳ್ಳುವ ಸುಲಭದ ದಾರಿಯಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಹಾಗೂ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನೀಕೆಷನ್ ಇಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್‌ಬಿಎ) ಮಾನ್ಯತೆ ಲಭಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶೈಕ್ಷಣಿಕ ಸಂಸ್ಥೆಯು ನಿರ್ದಿಷ್ಟಗುಣ ಮಟ್ಟವನ್ನು ಹೊಂದಿದೆಯೇ ಅಥವಾ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತದೆಯೇ ಎನ್ನುವುದನ್ನು ವೃತ್ತಿಪರ ಪರಿಶೀಲನೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ದೃಢೀಕರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಮಾನ್ಯತೆಯ ಪರಿಣಾಮವಾಗಿ ಸಂಸ್ಥೆಗಳಿಂದ ಗುಣಮಟ್ಟದ ಸುಧಾರಣೆಗಳ ಉಪಕ್ರಮಗಳನ್ನು ಉತ್ತೇಜಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಪದವೀಧದರಿಗೆ ಉದ್ಯೋಗಾವಕಾಶವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ೨೦೦೮ ರಲ್ಲಿ ಆರಂಭಗೊಂಡ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ದೇಶದಲ್ಲಿನ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಪದವೀಧರರ ಹಾಗೂ ಸ್ನಾತಕೋತ್ತರ ಪದವಿಯ ಸಮಗ್ರ ಅಭಿವೃದ್ಧಿಗೆ ನವೀನ ಬೋಧನಾ-ಕಲಿಕಾ ಪ್ರಕ್ರಿಯೆಯ ಮೂಲಕ ಗುಣಮಟ್ಟ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿ ಜಿಲ್ಲೆಯ ಹಿಂದಿ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ಹಿಂದಿ ಶಿಕ್ಷಕ ರವೀಂದ್ರ ಪಿ. ಬೈಂದೂರು ಆಯ್ಕೆಯಾಗಿದ್ದಾರೆ. ರವೀಂದ್ರ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಐದು ವ್ಯಾಕರಣ ಸಂಬಂಧಿ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಅವರು ಈವರೆಗೆ ಭಕ್ತಿಗೀತೆ, ಭಾವಗೀತೆ, ಪರಿಸರ ಸಂಬಂಧಿತ ಗೀತೆಗಳನ್ನು ರಚಿಸಿ ಧ್ವನಿ ಸುರುಳಿಗಳನ್ನು ಬಿಡುಗಡೆ ಮಾಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಭಾಷೆ ಮನುಷ್ಯನ ವಿಚಾರ ವಿನಿಮಯ ಮತ್ತು ಭಾವನೆಯನ್ನು ವ್ಯಕ್ತಪಡಿಸುವ ಸಾಧನ. ಸಂಪರ್ಕ ಭಾಷೆಯು ಜನ ಭಾಷೆಯಾಗಿದೆ. ಭಾಷೆಯು ಸಾಹಿತ್ಯ ರೂಪ ಮತ್ತು ರಾಜನೀತಿಕ ರೂಪವನ್ನು ಕಲ್ಪಿಸುತ್ತದೆ. ಭಾರತ ದೇಶದಲ್ಲಿ ವಿಭಿನ್ನ ವರ್ಗದವರು ವಿಭಿನ್ನ ಭಾಷೆಯಲ್ಲಿ ಸಂಪರ್ಕ ಭಾಷೆಯ ರೂಪದಲ್ಲಿ ಮಾತನಾಡುತ್ತಾರೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ಸಂಪರ್ಕ ಭಾಷೆಯ ಉದ್ದೇಶ ಎಂದು ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ| ಮಾಧವಿ ಎಸ್. ಭಂಡಾರಿ ಹೇಳಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ ನಡೆದ ಸಂಪರ್ಕ್ ಭಾಷಾ ಮೇ ಹಿಂದಿ ಕಾ ಮಹತ್ವ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ| ದೀಪಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ತನ್‌ಸಿಲಾ ಪ್ರಾರ್ಥಿಸಿ, ರಾನಿಯಾ ಸುಲ್ತಾನ ಅತಿಥಿಗಳನ್ನು ಪರಿಚಯಿಸಿ, ಸೋನಾಲ್ ಪ್ರತಿಷ್ಠಾ ವಂದಿಸಿ, ಹೆಗ್ಡೆ ಸುಭೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಖ್ಯಾತ ಕೊಂಕಣಿ-ಕನ್ನಡ ಸಾಹಿತಿ, ನಾಟಕ ರಚನೆಗಾರ, ಪತ್ರಕರ್ತ ಕುಂದಾಪುರದ ಬರ್ನಾರ್ಡ್ ಜೆ. ಕೊಸ್ತಾರವರಿಗೆ ಬೈಂದೂರು ಚರ್ಚಿನ ಕಲಾವಿದರ ಸಂಸ್ಥೆಯಾದ ’ಕ್ರಿಸ್ತಿ ಕಲಾಂಗಣ್” ಸಂಸ್ಥೆಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಚರ್ಚಿನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಕುವೆಲ್ಲೊ, ಬೆಳ್ವೆ ಚರ್ಚಿನ ಧರ್ಮಗುರುಗಳಾದ ರೆ.ಫಾ. ಡೆನ್ನಿಸ್, ಚರ್ಚ್ ಮಂಡಳಿಯ ಉಪಾಧ್ಯಕ್ಷರಾದ ಸ್ಟ್ಯಾನಿ ಡಾಯಸ್, ಕ್ರಿಸ್ತಿ ಕಲಾಂಗಣ್ ಸಂಸ್ಥೆಯ ಸಂಯೋಜಕ ಇಗ್ನೇಶಿಯಸ್ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು ನಂತರ್ ಬರ್ನಾರ್ಡ್ ಜೆ. ಕೊಸ್ತಾರವರು ರಚಿಸಿದ “ಮಹಾ ಪಿಟ್ಟಾಷಿ” ಕೊಂಕಣಿ ಹಾಸ್ಯ ನಾಟಕವನ್ನು ಕ್ರಿಸ್ತಿ ಕಲಾಂಗಣ್ ಸದಸ್ಯರು ಪ್ರದರ್ಶಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ಉತ್ಸವ ತೆರಾಲಿ ಹಬ್ಬವು ಸಡಗರ, ಸಂಭ್ರಮದಿಂದ ಜರುಗಿತು. ಬಲಿಪೂಜೆಯಲ್ಲಿ ಬೈಂದೂರು ಚರ್ಚಿನಲ್ಲಿ ಈ ಹಿಂದೆ ಗುರುಗಳಾಗಿ ಸೆವೆ ಸಲ್ಲಿಸಿದ ಹಾಗೂ ಪ್ರಸ್ತುತ ಶಂಕರಪುರ ಪಾಂಗ್ಳಾ ಚರ್ಚಿನ ಧರ್ಮಗುರುಗಳಾದ ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ ಬಲಿಪೂಜೆಯ ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ ನಾವುಗಳು ನಿರ್ಗತಿಕರಿಗೆ, ಅಸಹಾಯಕರಿಗೆ ಸಹಾಯ ಮಾಡಿದಲ್ಲಿ ದೇವರು ನಮಗೆ ನಮ್ಮ ಜೀವನದ ಕಷ್ಟ-ಸಂಕಷ್ಟಗಳಿಗೆ ಸದಾ ರಕ್ಷಾ-ಕವಚನಾಗಿರುತ್ತಾನೆ ಎಂದು ಸಂದೇಶವನ್ನು ನೀಡಿದರು. ಇದೇ ಸಂದರ್ಭದಲ್ಲಿ ದಾನಿಗಳಿಗೆ ಹಾಗೂ ಸೆವಾಕರ್ತರಿಗೆ ಗೌರವಾರ್ಥಕವಾಗಿ ಮೇಣದ ಬತ್ತಿ ನೀಡಿ ಗೌರವಿಸಲಾಯಿತು. ಎರಡನೇ ದಿನದ ಹಬ್ಬದ ಆಚರಣೆಯಲ್ಲಿ ಉಡುಪಿಯ ರೆ. ಫಾ. ಚೇತನ್ ಲೋಬೊ, ಕಾರ್ಕಳ ಆತ್ತೂರು ಬಸಿಲಕಾದ ನಿರ್ದೇಶಕ ರೆ. ಫಾ. ಜಾರ್ಜ್ ಡಿ’ಸೋಜಾ, ಕುಂದಾಪುರದ ಮುಖ್ಯ ಧರ್ಮಗುರುಗಳಾದ ರೆ.ಫಾ. ಸ್ಟ್ಯಾನಿ ತಾವ್ರೊ, ಉಡುಪಿ ಧರ್ಮಪ್ರಾಂತ್ಯದ ಸಹಸ್ರಾರು ಧರ್ಮಗುರುಗಳು, ಚರ್ಚಿನ ಪಾಲನ ಮಂಡಳಿಯ ಉಪಾಧಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬದುಕಿನಲ್ಲಿ ಅನುಮಾನ, ಅವಮಾನ ಎದುರಿಸಿದರೆ ಒಂದಲ್ಲಾ ಒಂದು ದಿನ ಸನ್ಮಾನ ದೊರೆಯುತ್ತದೆ. ಜೀವನದಲ್ಲಿ ಮೆಟ್ಟಿಲನ್ನು ಹಂತ ಹಂತವಾಗಿ ಏರಿದರೆ ಯಶಸ್ಸು ದೊರೆಯುತ್ತದೆ ಎಂದು ಬಿಗ್‌ಬಾಸ್ ಸೀಸನ್ 7 ವಿಜೇತ ಶೈನ್ ಶೆಟ್ಟಿ ಹೇಳಿದರು. ತಾಲೂಕಿನ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸಭಾಭವನದಲ್ಲಿ ಟೀಮ್ ಪಾವನಿ ಸಂಘಟನೆಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಾರಣಕಟ್ಟೆ ಅನುವಂಶೀಯ ಆಡಳಿತ ಮುಕ್ತೇಸರರಾದ ಸದಾಶಿವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಐ.ಟಿ. ಮಣಿಪಾಲ ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಡಾ. ಅತುಲ್ ಕುಮಾರ್ ಶೆಟ್ಟಿ, ಕೊಲ್ಲೂರು ಉಪ ವಲಯ ಅರಣ್ಯಾಧಿಕಾರಿ ರೂಪೇಶ್ ಚೌವಾಣ್, ಕಮಲಶಿಲೆ ಯಕ್ಷಗಾನ ಮೇಳ ಸಂಸ್ಥಾಪಕ ಹಾಗೂ ಯಕ್ಷ ಸಂಚಲನ ಟ್ರಸ್ಟ್ ಅಧ್ಯಕ್ಷ ಕೃಷ್ಣ ಕನ್ನಂತ್ ಕುಡೇರಿ, ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ ಚಿತ್ತೂರು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರವಿರಾಜ್ ಶೆಟ್ಟಿ, ಪಾವನ ಟ್ರಸ್ಟ್ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮಾರಣಕಟ್ಟೆ: ಇಲ್ಲಿನ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸಭಾಭವನದಲ್ಲಿ ಟೀಮ್ ಪಾವನಿ ಸಂಸ್ಥೆಯ ಉದ್ಘಾಟನೆ ಹಾಗೂ ಚಿತ್ತೂರಿನಿಂದ ಮಾರಣಕಟ್ಟೆಯ ತನಕ ಸ್ವಚ್ಚತಾ ಜಾಗೃತಿ-ಜಾಥಾ ಜರುಗಿತು. ಈ ಸಂದರ್ಭ ಬಿಗ್‌ಬಾಸ್ ಸೀಸನ್ 7 ವಿಜೇತ ಶೈನ್ ಶೆಟ್ಟಿ ಟೀಮ್ ಪಾವನಿ ಸಂಘಟನೆಯನ್ನು ಅಡಿಕೆ ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿ ನಾಯಕತ್ವವನ್ನು ಮೈಗೂಡಿಸಿಕೊಂಡು ಸಮಾಜದ ಒಳಿತಿಗಾಗಿ ಸಂಘಟನೆಯನ್ನು ಕಟ್ಟಿಕೊಂಡು ಸಮಾಜದಲ್ಲಿ ಇಂತಹ ಉತ್ತಮ ಕಾರ್ಯಗಳನ್ನು ಮಾಡಬೇಕು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಸಮಾಜಕ್ಕೆ ಕಿಂಚಿತ್ತು ಗೌರವವನ್ನು ನೀಡುವ ಕೆಲಸ ಮಾಡಬೇಕು ಎಂದರು. ಮಾರಣಕಟ್ಟೆ ಅನುವಂಶೀಯ ಆಡಳಿತ ಮುಕ್ತೇಸರರಾದ ಸದಾಶಿವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಐ.ಟಿ. ಮಣಿಪಾಲ ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಡಾ. ಅತುಲ್ ಕುಮಾರ್ ಶೆಟ್ಟಿ, ಕೊಲ್ಲೂರು ಉಪ ವಲಯ ಅರಣ್ಯಾಧಿಕಾರಿ ರೂಪೇಶ್ ಚೌವಾಣ್, ಕಮಲಶಿಲೆ ಯಕ್ಷಗಾನ ಮೇಳ ಸಂಸ್ಥಾಪಕ ಹಾಗೂ ಯಕ್ಷ ಸಂಚಲನ ಟ್ರಸ್ಟ್ ಅಧ್ಯಕ್ಷ ಕೃಷ್ಣ ಕನ್ನಂತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮ ಪಂಚಾಯಿತಿ ಪಕ್ಷಾತೀತ ವ್ಯವಸ್ಥೆ. ಹಾಗಿದ್ದರೂ ಅದರ ಚುನಾವಣೆಯಲ್ಲಿ ರಾಜಕೀಯ ಕೆಲಸ ಮಾಡುತ್ತದೆ. ಆಯ್ಕೆಯಾದ ಸದಸ್ಯರು ಪಕ್ಷಬೇಧ ಮರೆತು ಒಂದಾಗಿ ಕೆಲಸ ಮಾಡಿದರೆ ಗ್ರಾಮದ ಅಭಿವೃದ್ಧಿ ಸಾಧಿಸಬಹುದು ಎನ್ನುವುದಕ್ಕೆ ನಾವುಂದ ಗ್ರಾಮ ಪಂಚಾಯಿತಿ ಉದಾಹರಣೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ನಾವುಂದ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡ ಮತ್ತು ಸಮುದಾಯ ಭವನವನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಾವುಂದ ಗ್ರಾಮದ ಅಭಿವೃದ್ಧಿಗೆ ಅಗತ್ಯ ಹಣ ನೀಡಲಾಗುವುದು. ಈಗ ಬೇಡಿಕೆ ಇರುವ ಬಾಂಗ್ ರಸ್ತೆ ದುರಸ್ತಿ ಮತ್ತು ಸಾಲುಬುಡ ವೆಂಟೆಡ್ ಡ್ಯಾಮ್ ನಿರ್ಮಾಣಕ್ಕೆ ಶೀಘ್ರ ಅನುದಾನ ಒದಗಿಸಲಾಗುವುದು. ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಬಂದಾಗ ತೊಂದರೆಗೊಳಗಾಗುವ ಜನ ಮತ್ತು ಜಾನುವಾರು ಉಳಿದುಕೊಳ್ಳಲು ಸೂಕ್ತ ಆಶ್ರಯ ನಿರ್ಮಿಸಲಾಗುವುದು ಎಂದರು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಯಾವುದೇ ಕಚೇರಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕಾದರೆ ಸುಸಜ್ಜಿತ ಕಟ್ಟಡ ಅಗತ್ಯ. ಆಗ…
