ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಡುಪಿ ಜಿಲ್ಲೆಯ ಹಿಂದಿ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ಹಿಂದಿ ಶಿಕ್ಷಕ ರವೀಂದ್ರ ಪಿ. ಬೈಂದೂರು ಆಯ್ಕೆಯಾಗಿದ್ದಾರೆ.
ರವೀಂದ್ರ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಐದು ವ್ಯಾಕರಣ ಸಂಬಂಧಿ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಅವರು ಈವರೆಗೆ ಭಕ್ತಿಗೀತೆ, ಭಾವಗೀತೆ, ಪರಿಸರ ಸಂಬಂಧಿತ ಗೀತೆಗಳನ್ನು ರಚಿಸಿ ಧ್ವನಿ ಸುರುಳಿಗಳನ್ನು ಬಿಡುಗಡೆ ಮಾಡಿದ್ದಾರೆ.