Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಂಪಿಗ್ ಯಾರ್ಡ್‌ನಂತೆ ಭಾಸವಾಗುತ್ತಿದ್ದ ಕೋಟೇಶ್ವರದ ಸರ್ವಿಸ್ ರಸ್ತೆಯ ಅಂಚಿನಲ್ಲಿಗ ಬಣ್ಣ ಬಣ್ಣದ ಗಿಡಗಳು ಕಂಗೊಳಿಸುತ್ತಿವೆ. ಅನಗತ್ಯವಾಗಿ ಕಸ ಎಸೆಯುದನ್ನು ತಡೆಯಲು ಅದೇ ಪ್ರದೇಶದಲ್ಲಿ ಸುಂದರ ಗಾರ್ಡನ್ ನಿರ್ಮಿಸಲಾಗಿದೆ. ಬೆಳೆಯುತ್ತಿರುವ ಪ್ರಮುಖ ಪಟ್ಟಣ ಪ್ರದೇಶ ಕೋಟೇಶ್ವರಕ್ಕೆ ಕಸ ವಿಲೇವಾರಿ ಬಹುದೊಡ್ಡ ತಲೆನೋವು. ಕೋಟೇಶ್ವರ ಹೆದ್ದಾರಿ, ಸರ್ವಿಸ್ ರಸ್ತೆ ಬದಿ ಕೊಳಚೆ ಗುಂಡಿಗಳಾಗಿ ಗೋಚರಿಸುತ್ತಿವೆ. ಕೋಟೇಶ್ವರದ ಎಂಬ್ಯಾಕ್‌ಮೆಂಟ್ ಸಂಧಿಸುವ ಸರ್ವಿಸ್ ರಸ್ತೆಯ ಅಂಚು ಇತ್ತೀಚಿನ ವರ್ಷಗಳಲ್ಲಿ ತ್ಯಾಜ್ಯ ಗುಂಡಿಯಾಗಿ ಮಾರ್ಪಟ್ಟಿತ್ತು. ರಸ್ತೆಯಂಚಿನ ಖಾಲಿ ನಿವೇಶನ ಡಂಪಿಂಗ್ ಯಾರ್ಡ್ ಆಗಿದ್ದವು. ದಾರಿಹೋಕರು ಎಸೆದು ಹೋಗುವ ತ್ಯಾಜ್ಯಗಳನ್ನು ಸುಟ್ಟು ಹಾಕುವುದು, ತೆರವುಗೊಳಿಸುವುದು ಪಂಚಾಯಿತಿಗೆ ಪ್ರತ್ಯೇಕ ಹೊರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡರೂ ಸಾರ್ವಜನಿಕರು ಸ್ಪಂದಿಸಿರಲಿಲ್ಲ ಇದೆಲ್ಲದಕ್ಕೂ ಈಗ ಬ್ರೇಕ್ ಹಾಕಲು ಸ್ಥಳೀಯಾಡಳಿತ ಕ್ರಮ ಕೈಗೊಂಡಿದೆ. ಕಸದ ಗುಂಡಿಯಲ್ಲಿ ಹೂತೋಟ:ಪ್ಲಾಸ್ಟಿಕ್, ಮಾಂಸ ಸಹಿತ ತ್ಯಾಜ್ಯ ಬೀಳುತ್ತಿದ್ದ ಸ್ಥಳದಲ್ಲೀಗ ಹೂಬನ ಕಂಗೊಳಿಸುತ್ತಿದೆ. ಅಲಂಕಾರಿಕ ಗಿಡಗಳು, ಗಾರ್ಡನ್ ಸೊಬಗು ಹೆಚ್ಚಿಸುವ ಆಕೃತಿಗಳು ಗಮನ ಸೆಳೆಯುತ್ತಿವೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತವು ಅ.6ರಂದು 20 ವರ್ಷ ಪೂರೈಸಲಿದ್ದು, ಇದರ ಅಂಗವಾಗಿ ಯುವಮೋರ್ಚಾ ಉಡುಪಿ ಜಿಲ್ಲೆ ಹಾಗೂ ಯುವಮೋರ್ಚಾ ಬೈಂದೂರು ಇವರ ಸಹಭಾಗಿತ್ವದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸ್ನಾನ ಘಟ್ಟದ ನದಿಯ ತಟವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಇಂಧನ ಸಚಿವರಾದ ವಿ. ಸುನೀಲ್ ಕುಮಾರ್, ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಜಯಾನಂದ ಹೋಬಳಿದಾರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ವಿಕ್ಯಾತ್ ಶೆಟ್ಟಿ, ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಭಿರಾಜ್ ಸುವರ್ಣ, ಅಕ್ಷಿತ್ ಶೆಟ್ಟಿ ಹೆರ್ಗ, ಮಂಡಲ ಬಿಜೆಪಿ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಮಂಡಲ ಯು.ಮೋ ಪ್ರಧಾನ ಕಾರ್ಯದರ್ಶಿ ಆಕಾಶ್ ಪೂಜಾರಿ, ಕೊಲ್ಲೂರು ಪಂಚಾಯತ್ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ, ಸಂದೀಪ್ ಕೊಲ್ಲೂರು, ಉಮೇಶ್ ಶೆಟ್ಟಿ ಕಲ್ಗದ್ದೆ, ಅನುರ್ ಮೆಂಡನ್ ಪಕ್ಷದ ಕಾರ್ಯಕರ್ತರು ಈ ವೇಳೆ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲಾ ವ್ಯಾಪ್ತಿಯೊಳಗಿನ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಸಮೀಕ್ಷೆ ಮೂಲಕ ಗುರುತಿಸಲು ಅರ್ಹ ಸರ್ಕಾರೇತರ ಸಂಘ ಸಂಸ್ಥೆಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಸಂಸ್ಥೆಯು ಸಕ್ಷಮ ನೋಂದಾಣಾಧಿಕಾರಿಗಳಲ್ಲಿ ನೋಂದಣಿ ಹೊಂದಿರಬೇಕು ಮತ್ತು ಕನಿಷ್ಟ 3ವರ್ಷಗಳ ಅವಧಿಯಾಗಿರಬೇಕು. ಕಾಲಕಾಲಕ್ಕೆ ನವೀಕರಿಸಿದ ಪ್ರಮಾಣ ಪತ್ರ ಹೊಂದಿರಬೇಕು ಹಾಗೂ ಈ ಹಿಂದೆ ಇಂತಹ ಯಾವುದಾದರೂ ಸಮೀಕ್ಷೆ ನಡೆಸಿದ ಅನುಭವ ಹೊಂದಿದ್ದು, ಅನುಭವ ಪ್ರಮಾಣ ಪತ್ರ ಲಗತ್ತಿಸಿರಬೇಕು. ಸಲ್ಲಿಸಲು ಅಕ್ಟೋಬರ್ 8 ಕೊನೆಯ ದಿನ, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಅಧಿಕಾರಿಗಳ ಕಛೇರಿ ಹಾಗೂ ದೂ ಸಂ: 0820-2574977 ಅಥವಾ 8553141512ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Read More

ಪರಿಸರ ಸಂರಕ್ಷಣೆ ನಾಗರಿಕರ ಪ್ರಮುಖ ಹೊಣೆ: ಶಾಸಕ ಡಾ. ಭರತ್ ಶೆಟ್ಟಿ ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ವಿದ್ಯಾರ್ಥಿಗಳ ಯೋಚನೆಗಳು ಪರಿಸರ ಸಂರಕ್ಷಣೆಯತ್ತ ಇರಲಿ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು. ಕರ್ನಾಟಕ ಅರಣ್ಯ ಇಲಾಖೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಂ ಸ್ಪೀಕರ್ಸ್ ಕ್ಲಬ್ ಹಾಗೂ ಕುದೆರಮುಖ ವನ್ಯಜೀವಿ ಘಟಕದ ಸಹಯೋಗದಲ್ಲಿ ವಿದ್ಯಾಗಿರಿಯ ವಿ.ಎಸ್ ಆಚಾರ್ಯ ವೇದಿಕೆಯಲ್ಲಿ ನಡೆದ ‘ಗ್ರೀನ್ ಪಾರ್ಲಿಮೆಂಟ್ -2021’ ಅಣಕು ಸಂಸತ್ತಿನ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶೈಕ್ಷಣಿಕ ವಿಚಾರಗಳಿಗೆ ಒತ್ತು ನೀಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಕಡಿಮೆಯಾಗಿದೆ. ಜನರ ದುರಾಸೆಯ ಸ್ವಭಾವದಿಂದ ಹೆಕ್ಟೇರ್ ಗಟ್ಟಲೆ ಅರಣ್ಯ ಪ್ರದೇಶ ಶೋಷಣೆಗೊಳಗಾಗಿದೆ. ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ನೀತಿಗಳ ತಿಳುವಳಿಕೆ ವಿದ್ಯಾರ್ಥಿಗಳಲ್ಲಿ ಮೂಡಿಸಲು ಗ್ರೀನ್ ಪಾರ್ಲಿಮೆಂಟ್ ಕಾರ್ಯಕ್ರಮ ಬಹಳ ಅಗತ್ಯ ಎಂದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪ್ರಕಾಶ್ ನೆತಾಲ್ಕರ್ ಮಾತನಾಡಿ, ಅರಣ್ಯ ನೀತಿ ಹಾಗೂ ಪರಿಸರ ಸೂಕ್ಶ್ಮ ಪ್ರದೇಶಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಾರಂತರು ಅತ್ಯಂತ ವಿರಳವಾಗಿ ಕಾಣಸಿಗುವ ಶ್ರೇಷ್ಠ ಮತೀಯ ವ್ಯಕ್ತಿ, ಸಾಹಿತಿಯಾಗಿ ಚಿಂತಕರಾಗಿ ಕನ್ನಡ ಸಾಹಿತ್ಯದ ಹರಿವಿನ ವಿನ್ಯಾಸವನ್ನು ಬದಲಾಯಿಸಿದವರು. ಕನ್ನಡದ ಪ್ರಜ್ಞೆಯನ್ನು ಅಸಾಧರಣವಾಗಿ ವಿಸ್ತರಿಸಿದವರು. ಮುಖ್ಯವಾಗಿ ಕಾದಂಬರಿ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡುತ್ತಾ ಬದುಕನ್ನು ಬೇರೆ ಬೇರೆ ಆಯಾಮಗಳಿಂದ ಬಗೆಯುವ ಆಲೋಚಿಸುವ ಮತ್ತು ಕಲಾತ್ಮಕವಾಗಿ ನಿರೂಪಿಸುವ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಮಾಡಿಕೊಂಡು ಬಂದಿರುವ ಕಾರಂತರು ವ್ಯಕ್ತಿಯಲ್ಲ ಒಂದು ವಿದ್ಯಾಮಾನ ಎಂದು ಖ್ಯಾತ ವಾಗ್ಮಿ, ಚಿಂತಕರು ಕೃಷ್ಣೆಗೌಡ ಮೈಸೂರು ಅವರು ಹೇಳಿದರು. ಅವರು ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ ಸಹಯೋಗದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಹಾಗೂ ಹುಟ್ಟೂರ ಪ್ರಶಸ್ತಿಗೆ 17ನೇ ವರುಷದ ಸಂಭ್ರಮದ ಸಾಹ್ಯಿತ್ಯಿಕ -ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿತ-2021(ಎಣೆಯಿಲ್ಲದ ಚಕಿತ) ಕಾರ್ಯಕ್ರಮದ ಐದನೇ ದಿನದ ನುಡಿ ಚೇತನದಲ್ಲಿ ಮಾತನಾಡಿದರು. ಭಾಷೆ ಎನ್ನುವುದು ಕೇವಲ ತಮಗೆ ಅನ್ನಿಸುವುದನ್ನು ಹೇಳುವ ವಸ್ತುವಾಗಿರದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಅಂಪಾರು ಸಮೀಪದ ಮೂಡುಬಗೆ ಎಂಬಲ್ಲಿ ಮಂಗಳವಾರ ಸಂಜೆ ಕಾಣಿಸಿಕೊಂಡ ಬಿರುಗಾಳಿ ಅಬ್ಬರಕ್ಕೆ ಅಪಾರ ಮರಮಟ್ಟುಗಳು ಧರಾಶಾಹಿಗೊಂಡಿದ್ದು ಮನೆ, ದನದ ಕೊಟ್ಟಿಗೆ, ವಿದ್ಯುತ್ ಕಂಬ, ಕೃಷಿತೋಟ ಹಾನಿಗೊಂಡಿದೆ. ಕುಂದಾಪುರ ಸಿದ್ದಾಪುರ ರಾಜ್ಯ ಹೆದ್ದಾರಿ ಹೋಗುವ ಇಲ್ಲಿ ಮರಗಳು ಹೆದ್ದಾರಿಗೆ ಒರಗಿದ ಪರಿಣಾಮ ಎರಡುವರೆ ತಾಸು ಹೆದ್ದಾರಿ ಬಂದ್ ಆಗಿದ್ದು, ಮೆಸ್ಕಾಂ, ಅರಣ್ಯ ಇಲಾಖೆ, ಪೋಲಿಸರು ಹಾಗೂ ಸ್ಥಳೀಯರು ಹೆದ್ದಾರಿಯಲ್ಲಿನ ಮರಗಳ ತೆರವಿಗೆ ಶ್ರಮಿಸಿದರು. ಅಡಿಕೆ, ತೆಂಗು, ಮನೆಗಳಿಗೆ ಹಾನಿ:ಸಿದ್ದಾಪುರ: ಗ್ರಾಮೀಣ ಭಾಗದ ಶಂಕರನಾರಾಯಣ, ಅಂಪಾರು, ಕೊಂಡಳ್ಳಿ, ಶಾನ್ಕಟ್ಟು, ಮೂಡುಬಗೆ, ಗೊರಟೆ, ಕನ್ನಾಲಿ, ಕುಳ್ಳುಂಜೆ ಮುಂತಾದ ಕಡೆ ಮಂಗಳವಾರ ಮಧ್ಯಾಹ್ನ ಸಮಯದಲ್ಲಿ ಬೀಸಿದ ಸುಂಟರಗಾಳಿ ಅಬ್ಬರಕ್ಕೆ ಮನೆ, ಅಡಿಕೆ, ತೆಂಗು, ವಿದ್ಯುತ್ ಕಂಬ ಇತ್ಯಾದಿ ಭಾರಿ ಗಾತ್ರದ ಮರಗಳು ಧರೆಗುರುಳಿವೆ. ಹಠಾತ್ತನೆ ಬೀಸಿದ ಗಾಳಿಗೆ ಸಾವಿರಾರು ಅಡಿಕೆ ತೆಂಗಿನ ಮರಗಳು ಹಾಗೂ ಅಂದಾಜು ೩೦ಕ್ಕೂ ಮಿಕ್ಕಿ ಮನೆಗಳು ಗಾಳಿಯ ಅಬ್ಬರಕ್ಕೆ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಡವೆಯನ್ನು ಕೊಂದು ಮಾಂಸ ಮಾಡಿ ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ತಾಲೂಕು ಯಡ್ತರೆ ಗ್ರಾಮದ ಮುದ್ದೋಡಿ ಸಮೀಪದ ಕುಂಜಳ್ಳಿ ಮಾರ್ಗದಲ್ಲಿ ನಡೆದಿದೆ. ಕಡವೆ ಮಾಂಸ, 2 ದ್ವಿಚಕ್ರ ವಾಹನ ಸಹಿತ ಯಡ್ತರೆ ನಿವಾಸಿಗಳಾದ ಮಮ್ಮಿಶಾಹ್ ಫೈಜಲ್, ಖರುರಿ ನಿಜಾಮುದ್ದೀನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದಾರೆನ್ನಾದ ಹೆರಿಯಣ್ಣ ಶೆಟ್ಟಿ, ಪ್ರವೀಣ್ ಶೆಟ್ಟಿ ಹಾಗೂ ಇತರರು ಪರಾರಿಯಾಗಿದ್ದಾರೆ. ಬೈಂದೂರಿನಿಂದ ಕುಂಜಳ್ಳಿಗೆ ಹೋಗುವ ರಸ್ತೆಯ ಮಾರ್ಗ ಮದ್ಯೆ ಕಡವೆಯೊಂದನ್ನು ಹೊಡೆದು ಕೊಂದು ಮಾಂಸ ಮಾಡಿ ಸಾಗಾಟ ಮಾಡುತ್ತಿದ್ದಾಗ ಮಾಹಿತಿ ಪಡೆದ ಬೈಂದೂರು ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು ನೇತೃತ್ವದ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಆರೋಪಿಗಳ ವಿರುದ್ಧ 1972 ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಜಿ. ಮಾರ್ಗದರ್ಶನದಲ್ಲಿ ಬೈಂದೂರು ವಲಯಾರಣ್ಯಾಧಿಕಾರಿ ಟಿ. ಕಿರಣ್ ಬಾಬು, ಉಪ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಅ.05: ಪ್ರತಿಯೊಬ್ಬ ನಾಗರಿಕನೂ ಸಾಮಾನ್ಯ ಕಾನೂನಿನ ಅರಿವು ಹೊಂದಿದಾಗ ಮಾತ್ರ ಉತ್ತಮ ಸಾಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್ ಹೇಳಿದರು. ಅವರು ಇಂದು ನಗರದ ಮಣಿಪಾಲ್ನ ಮಾಧವಕೃಪ ಶಾಲೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಕೀಲರ ಸಂಘ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಹಾಗೂ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 75 ನೇ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೋವಿಡ್-19 ಜಾಗೃತಿ ಮತ್ತು ಲಸಿಕಾ ಅಭಿಯಾನ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಮಾರ್ಗಸೂಚಿ ನಾಮಫಲಕವನ್ನು ಕೊಡುಗೆಯಾಗಿ ನೀಡಲಾಯಿತು. ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ., ರಾಷ್ಟೀಯ ಹೆದ್ದಾರಿಯ ಬದಿಯಲ್ಲೇ ಆಸ್ಪತ್ರೆ ಇದ್ದು ವೇಗದಲ್ಲಿ ವಾಹನಗಳು ಸಂಚರಿಸುತ್ತಿರುವುದರಿಂದ ಪಕ್ಕನೆ ಆಸ್ಪತ್ರೆಯ ಇರುವಿಕೆ ಗೋಚರಿಸುವುದಿಲ್ಲ. ಹೊಸಬರಿಗೆ, ಇಲಾಖಾ ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಉಪಯುಕ್ತವಾಗಲಿ ಎನ್ನುವ ಉದ್ದೇಶದಿಂದ ಈ ಕೊಡುಗೆಯನ್ನು ರೋಟರಿ ಸಂಸ್ಥೆ ವತಿಯಿಂದ ನೀಡುತ್ತಿರುವುದಾಗಿ ಅವರು ಹೇಳಿದರು. ನಾಮಫಲಕವನ್ನು ಕೊಡುಗೆಯಾಗಿ ನೀಡಿದ ಗಂಗೊಳ್ಳಿ ರೋಟರಿ ಸದಸ್ಯ ಬೋರ್ಡಿನ ಲಿಫ್ಟನ್ ಒಲಿವೇರಾ ಅವರನ್ನು ಗೌರವಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಲಯ ಸೇನಾನಿ ಕೆ.ರಾಮನಾಥ್ಧ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ತಮ್ಮ ಸಾರ್ಥಕ ಸೇವೆಯನ್ನು ಪೂರೈಸಿ ನಿವೃತ್ತಿ ಹೊಂದಿದ ಹಿಂದಿ ಶಿಕ್ಷಕಿ ಫೆಲ್ಸಿಯಾನ ಡಿ’ಸೋಜರವರನ್ನು ಸನ್ಮಾನಿಸಲಾಯಿತು. ಹಾಗೇಯೆ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸಿ ಸಾಧನೆ ಮಾಡಿದ ಶ್ರೇಯಾ ಮೇಸ್ತ, ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಒಟ್ಟು 9 ವಿದ್ಯಾರ್ಥಿಗಳಾದ ಅನನ್ಯ ಬಿ, ಶಶಿಕಾಂತ, ಅಮಿಷ, ಸಂಜಯ್, ಸ್ವಾತಿ,ಸಿಂಚನ ಬಿ , ಸುಶಾಂತ್, ಆದಿತ್ಯ, ಸ್ವಪ್ನ ಇವರೊಂದಿಗೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಗೌರವ ಪಡೆದ ಒಟ್ಟು 7 ವಿದ್ಯಾರ್ಥಿಗಳಾದ ಪ್ರೀತಿ, ರಶ್ಮಿತಾ, ಅನನ್ಯ, ಸ್ವಪ್ನ, ಅನ್ಸಿಟಾ, ರಶ್ಮಿತಾ, ರೂಪ ಎಲ್ಲ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಭ. ವೈಲೆಟ್ ಮಾತನಾಡಿ ಹಿಂದಿ ಶಿಕ್ಷಕಿಯವರ ಅಮೂಲ್ಯ ಸೇವೆಯನ್ನು ಕೊಂಡಾಡಿದರು. ಈ ಸಂದರ್ಭ ಧರ್ಮಗುರುಗಳು ಆಶೀರ್ವಚನ ನುಡಿದರು. ಭ. ಡೋರಿನ್, ಜಾನ್ ಡಿ’ಸೋಜಾ, ಉಮೇಶ್ ಕರ್ಣಿಕ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ್, ಶಿಕ್ಷಕ…

Read More