ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘ ರಿ. ಮರವಂತೆ ವತಿಯಿಂದ ವಿಶ್ವಕರ್ಮ ಮಹೋತ್ಸವದ ಅಂಗವಾಗಿ “ವಿಶ್ವಕರ್ಮ” ಕುರಿತಾಗಿ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಕೋಮಲ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಿಶ್ವಕರ್ಮ ಸಮಾಜ ಸೇವಾ ಸಂಘ ರಿ. ಮರವಂತೆ ಗೌರವ ಸಲಹೆಗಾರ ಹಾಗೂ ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಮಾಗಣಿ ಮೊಕ್ತೇಸರ ಕೃಷ್ಣಯ್ಯ ಆಚಾರ್ಯ ಮರವಂತೆ ಮಾತನಾಡಿ, ಪ್ರಬಂಧ ಸ್ಪರ್ಧೆ ಎಂದರೆ ಕೇವಲ ಬಹುಮಾನ ಗೆಲ್ಲುವ ಸ್ಪರ್ಧೆಯಲ್ಲ. ಅದು ನಮ್ಮ ಚಿಂತನೆ, ಜ್ಞಾನ, ಸೃಜನಶೀಲತೆ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸುವ ಒಂದು ಉತ್ತಮ ವೇದಿಕೆ. ವಿಶ್ವಕರ್ಮ ಸಮುದಾಯದ ಇತಿಹಾಸ, ಪರಂಪರೆ, ಕಲೆ, ಕೌಶಲ್ಯ ಮತ್ತು ಸಾಧನೆಗಳ ಕುರಿತು ವಿದ್ಯಾರ್ಥಿಗಳು ತಿಳಿದುಕೊಂಡು ತಮ್ಮ ವಿಚಾರಗಳನ್ನು ಬರಹದ ಮೂಲಕ ವ್ಯಕ್ತಪಡಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಮೂರನೇ ಮೊಕ್ತೇಸರ ಶ್ರೀಧರ ಆಚಾರ್ಯ ಮರವಂತೆ, ಪತ್ರಕರ್ತ ಹಾಗೂ ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಕ ಸಂಘ ಉಡುಪಿ ಜಿಲ್ಲಾಧ್ಯಕ್ಷ ಎಚ್. ಸುಶಾಂತ್ ಆಚಾರ್ ಬೈಂದೂರು, ನೆಕ್ಸಸ್ ಎಲೆಕ್ಟ್ರಿಕಲ್ & ಸೆಲ್ಯೂಷನ್ ಭಟ್ಕಳ್ ಪ್ರವರ್ತಕ ಮನೋಜ್ ಆಚಾರ್ ಭಟ್ಕಳ್, ಶಾಲೆಯ ಮುಖ್ಯಶಿಕ್ಷಕಿ ನಯನಾ ನಾಯಕ್, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ದಿನೇಶ್ ಆಚಾರ್ಯ ಉಪಸ್ಥಿತಿರಿದ್ದರು.
ವಿಶ್ವಕರ್ಮ ಸಮಾಜ ಸೇವಾ ಸಂಘ ರಿ ಮರವಂತೆ ಕಾರ್ಯದರ್ಶಿ ಭಾಸ್ಕರ್ ಆಚಾರ್ಯ ಮರವಂತೆ ಸ್ವಾಗತಿಸಿದರು. ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ ಮರವಂತೆ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ಗಹನಾ ಡಿ ಆಚಾರ್ಯ ನಿರೂಪಿಸಿದರು. ಕೃಷ್ಣಯ್ಯ ಆಚಾರ್ಯ ಮರವಂತೆ ವಂದಿಸಿದರು.
ಪ್ರಬಂಧ ಸ್ಪರ್ಧೆಯ ವಿಜೇತರ ಪಟ್ಟಿ:
ಪ್ರಥಮ ಬಹುಮಾನ – ಪೌರ್ಣಮಿ ದೇವರಾಜ ಆಚಾರ್ಯ, ದ್ವಿತೀಯ ಬಹುಮಾನ – ಸೃಷ್ಟಿ ಭಟ್, ತೃತೀಯ ಬಹುಮಾನ – ಗೌತಮಿ ಪೂಜಾರಿ, ಹಾಗೂ 10 ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
















