Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ರಾಜ್ಯ ಸರಕಾರದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಪ್ರಸ್ತಾಪಿತ ಬಂದೂರು ಹೊಸ ಬಸ್ ನಿಲ್ದಾಣದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ನಿಲ್ದಾಣದ ರೂಪುರೇಷಗಳನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಹಲವಾರು ಗುಣಾತ್ಮಕ ಬದಲಾವಣೆಗಳನ್ನು ತರಲಾಗಿದ್ದು, ರೈತರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲವು ಮಾರ್ಪಾಡುಗಳ ಮೂಲಕ ಸಾರ್ವಜನಿಕರಿಗೆ ತಕ್ಕಂತೆ ಬಸ್ ನಿಲ್ದಾಣ ರೂಪಿಸಲಾಗುವುದು. ತಾಲೂಕು ಕೇಂದ್ರವಾದ ಕಾರಣ ಹಾಗೂ ಗ್ರಾಮೀಣ ಭಾಗಗಳು ಹೆಚ್ಚಿರುವುದರಿಂದ ಬಸ್ ನಿಲ್ದಾಣವನ್ನು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ನಿರ್ಮಿಸುವ ಕುರಿತು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದ ಅವರು, ಸಂಸ್ಥೆಯಲ್ಲಿ ಅನಗತ್ಯ ವೆಚ್ಚ ಕಡಿತಗೊಳಿಸಿ ಸೋರುವಿಕೆಯನ್ನು ತಡೆಗಟ್ಟಿ ಆದಾಯ ಹೆಚ್ಚಿಸುವ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ ಎಂದರು. ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್, ವಿಭಾಗೀಯ ಸಂಚಲನ ಅಧಿಕಾರಿ ಜಯಶಾಂತ ಕುಮಾರ್, ವಿಭಾಗೀಯ ತಾಂತ್ರಿಕ ಶಿಲ್ಪಿ ವಿಲ್ಸ್‌ನ್ ಲೋಬೋ, ಇಂಜಿನೀಯರ್ ರಾಜಶೇಖರ್ ಗುಡಿಗಾರ್, ಸಿವಿಲ್ ಇಂಜಿನೀಯರ್ ಜಗದೀಶ್‌ಚಂದ್ರ, ಮುಖಂಡರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆಧ್ಯಾತ್ಮಿಕತೆಯಿಂದ ಜೀವನದಲ್ಲಿ ಮಾನಸಿಕ ನೆಮ್ಮದಿ, ಭಗವಂತನ ಅನುಗ್ರಹ ದೊರೆತು ಜೀವನ ಪಾವನವಾಗುತ್ತದೆ. ಭಕ್ತಿ, ಶ್ರದ್ಧೆಯಿಂದ ಧಾರ್ಮಿಕ ಆಚರಣೆಗಳನ್ನು ಆಚರಿಸಿದರೆ ದೇವರು ನಮ್ಮ ಮನಸ್ಸಿನ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದು ಗುರುಪ್ರಸಾದ ಭಟ್ ಕೊರಾಡಿ ಹೇಳಿದರು. ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂದೂರು ವಲಯ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪಡುವರಿ ಎ ಮತ್ತು ಬಿ ಒಕ್ಕೂಟ ಇದರ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ದೇವರ ಅನುಗ್ರಹ ಮತ್ತು ಪ್ರಾಮಾಣಿಕ ಪ್ರಯತ್ನ ಎರಡೂ ಇರಬೇಕು. ಪರಮಾತ್ಮನ ಕೃಪಾಶೀರ್ವಾದ ದೊರೆಯಬೇಕಾದರೆ ದೇವರ ಉಪಾಸನೆ, ಕರ್ತವ್ಯ ಹಾಗೂ ಧರ್ಮವನ್ನು ಸದಾ ಮಾಡುತ್ತಿರಬೇಕು. ನಾವು ಮಾಡುವ ಒಳ್ಳೆಯ ಕಾರ್ಯಗಳು ಭಗವಂತನಿಗೆ ಸದಾ ಪ್ರೀತಿದಾಯಕವಾಗಿರುತ್ತದೆ. ಧರ್ಮದ ದಾರಿಯಲ್ಲಿ ಬದುಕಿದಾಗ ಸ್ವರ್ಗ ಪ್ರಾಪ್ತಿಯಾಗುತ್ತದೆ. ದೇವರ ಬಗೆಗಿನ ಶಕ್ತಿ ಆಂತರಿಕ ಶಾಂತಿ…

Read More

ಯಜಾಸ್ ದುದ್ದಿಯಂಡ | ಕುಂದಾಪ್ರ ಡಾಟ್ ಕಾಂ ಆಳ್ವಾಸ್ ನುಡಿಸಿರಿ ಎಂದರೆ ಸಂಭ್ರಮ, ಸಡಗರ ಅದೊಂದು ಕನ್ನಡ ನಾಡುನುಡಿ ಸಂಸ್ಕೃತಿಯ ವೈಭವದ ಹಬ್ಬ. ವಿದ್ಯಾರ್ಥಿ ಶಕ್ತಿ, ಜಾನಪದದ ತಾಕತ್ತು ಮತ್ತು ಕೃಷಿಯ ಸಮೃದ್ಧಿಯ ಕನಸು ಮೇಳೈಸಿರುವ ಈ ಹಬ್ಬ ಹತ್ತು ಹಲವು ವಿಶೇಷತೆಗಳನ್ನು ಹೊಂದಿದೆ. ನುಡಿಹಬ್ಬದ ಪ್ರಮುಖ ಆಕರ್ಷಣೆ ಎಂದರೆ ವಿದ್ಯುತ್ ದೀಪ ಅಲಂಕಾರ.ಈ ಕನ್ನಡ ನಾಡುನುಡಿಯ ಹಬ್ಬಕ್ಕೆ ಆಳ್ವಾಸ್ ಕಾಲೇಜಿನ ಅವರಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಕಾಲೇಜಿನ ಪ್ರತಿ ಕಟ್ಟಡದ ಗೋಡೆಗಳು ಝಗಮಗಿಸುವ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಈ ಬಣ್ಣದ ದೀಪಗಳು ನುಡಿಸಿರಿಯ ಮೆರಗನ್ನು ಮತಷ್ಟು ಹೆಚ್ಚಿಸಿವೆ. ನಾನಾ ಬಗೆಯ ಬೆಳಕನ್ನು ಸೂಸುವ ಬಗೆಬಗೆಯ ವಿನ್ಯಾಸದ ಮನಮೋಹಕ ಬೆಳಕಿನ ವೈಭವ ನೋಡುಗರಲ್ಲಿ ಹಬ್ಬದ ಸಡಗರವನ್ನು ಹುಟ್ಟಿಸಿವೆ. ಇಡೀ ಆಳ್ವಾಸ್ ಆವರಣ ಕಣ್ಣು ಕೋರೈಸುವ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡು ಜನರನ್ನು ಆಕರ್ಷಿಸುತ್ತಿದೆ. ಕಣ್ಣು ಹಾಯಿಸಿದಷ್ಟು ಝಗಮಗಿಸುವ ದೀಪಗಳಿಂದ ಹೂಸ ಬೆಳಕಿನ ಲೋಕದಂತೆ ಅಲಂಕಾರಗೊಂಡಿದೆ. ಲಕ್ಷಾಂತರ ವಿವಿಧ ಬಣ್ಣದ ಸಣ್ಣ ಬಲ್ಬ್, ಟ್ಯೂಬ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ನುಡಿಸಿರಿಯು ಹಲವಾರು ರೀತಿಯ ಸಿರಿಗಳಿಂದ ಒಳಗೊಂಡು ಸಾಂಸ್ಕೃತಿ ಸಾಹಿತ್ಯದ ಹಬ್ಬವಾಗಿ ರೂಪುಗೊಂಡಿದೆ ಆದರೆ ಬಹುಕಲೆಯ ಸಿರಿಯಲ್ಲಿ ಚಲನಚಿತ್ರದ ಕೊರತೆ ಇದ್ದು ಅದನ್ನು ನೀಗಿಸಲು ಚಲನಚಿತ್ರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಕಲಾತ್ಮಕ ಸಿನಿಮಾಗಳಿಗೆ ಮಾರುಕಟ್ಟೆಯಲ್ಲಿ ಸ್ಥಾನವಿಲ್ಲದ ಕಾರಣ, ಸಿನೆಮಾ ನೋಡುಗರ ಸಂಖ್ಯೆ ಕಡಿಮೆಯಾಗಿದೆ. ಇಂದಿನ ಯುವಜನತೆ ಹೊಂದಿಕೊಂಡಿರುವ ಸಾಮಾಜಿಕ ಜಾಲತಾಣವನ್ನು, ಸಾಂಸ್ಕೃತಿಕ ಜಾಲತಾಣವನ್ನಾಗಿ ಪರಿವರ್ತಿಸುವ ಕಾರ್ಯ ನಡೆಯಬೇಕಾಗಿದೆ ಆ ನಿಟ್ಟಿನಲ್ಲಿ ಕಲಾತ್ಮಕ ಸಿನಿಮಾಗಳಿಗೆ ಯಾವುದೇ ರೀತಿಯ ಮೋಸವಾಗಬಾರದು ಎಂದು ಈ ರೀತಿ ಸಿನಿಮಾ ಉತ್ಸವವನ್ನು ನಡೆಸಬೇಕು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಬೆಂಗಳೂರು ವತಿಯಿಂದ ಹಾಗೂ ಆಳ್ವಾಸ್ ನುಡಿಸಿರಿಯ ಅಂಗವಾಗಿ ನಡೆಯುವ ಸಿನಿಸಿರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ನಾ. ದಾಮೋದರ ಶೆಟ್ಟಿ ಮುಖ್ಯಅತಿಥಿಯಾಗಿ ಮಾತನಾಡಿ, ಆಧುನಿಕಯುಗದಲ್ಲಿಜನರ ಸದಾಭಿರುಚಿ ತಕ್ಕಂತೆ ಮಕ್ಕಳ ಆಸಕ್ತಿಗೆ ಯೋಗ್ಯವಾದ ಸಿನಿಮಾಗಳ ಪ್ರದರ್ಶನ ಈ…

Read More

ಕುಂದಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ನಾಗರೀಕತೆಯ ಬೆಳವಣಿಗೆಗೆ ಕರುಣ ರಸ ಅತ್ಯಗತ್ಯ. ರಸಗಳಲ್ಲಿ ಕರುಣ ರಸವು ಪ್ರಮುಖವಾದುದು, ಉಳಿದವುಗಳು ಅದರ ಪ್ರಬೇಧಗಳು. ರಾಮಾಯಣವು ಕರುಣರಸ ಪ್ರಯೋಗದಿಂದಲೇ ಆರಂಭವಾಯಿತು. ಒಬ್ಬ ಸಾಹಿತಿಗಳಿಗೆ ತನ್ನ ಸಾಹಿತ್ಯದಲ್ಲಿ ಯಾವ ರಸವನ್ನು ಪ್ರಮುಖವಾಗಿ ಉಪಯೋಗಿಸಬೇಕು ಎಂಬುದರ ಅರಿವನ್ನು ಹೊಂದಿರಬೇಕು ಎಂದು ಚಿಂತಕ ಲಕ್ಷ್ಮೀಶ್ ತೋಳ್ಪಾಡಿ ಹೇಳಿದರು. ಆಳ್ವಾಸ್ ನುಡಿಸಿರಿಯ `ಕರ್ನಾಟಕ ದರ್ಶನ: ಸಾಹಿತ್ಯ’ ವಿಚಾರಗೋಷ್ಠಿಯಲ್ಲಿ `ರಾಮಾಯಣ: ಸಮಕಾಲೀನ ನೆಲೆಗಳು’ ಎಂಬ ವಿಷಯದ ಕುರಿತು ಮಾತನಾಡಿದರು. ಕಾವ್ಯಕ್ಕಿರುವ ಮುಖ್ಯ ದಾರಿ ಕರುಣ ರಸ. ಈ ಭಾವನೆಯೇ ರಾಮಾಯಣ ಬೆಳೆಯಲು ಪ್ರಮುಖ ಕಾರಣವಾಯಿತು. ಏಕೆಂದರೆ ವಾಲ್ಮೀಕಿ ರಾಮಾಯಣದ ಆರಂಭದಲ್ಲಿ ಯಾವುದೇ ಪ್ರಶ್ನೆಯನ್ನೂ ಕೇಳದೆ ಕೈಕೇಯಿಯ ಆದೇಶದನುಸಾರವಾಗಿ ರಾಮನು ಕಾಡಿಗೆ ಹೋಗುತ್ತಾನೆ. ಆ ಸಂದರ್ಭವು ಕಾರುಣ್ಯತ್ತ್ವವನ್ನು ಹುಟ್ಟುಹಾಕುವುದರಿಂದ ಮಹಾಕಾವ್ಯಕ್ಕೆ ಕರುಣ ರಸವು ಪ್ರಮುಖವಾಯಿತು. ಈ ಭಾವವು ಓದುಗರನ್ನು ಸಾಹಿತ್ಯದ ಕಡೆಗೆ ಸೆಳೆಯುತ್ತದೆ. ಕರುಣ ರಸವೆಂಬುದು ಒಂದು ಕಲೆ. ರಾಮಾಯಣದಲ್ಲಿ ಕಾಮರೂಪಿ ಮಾರೀಚ ಕಲಾಕಾರ ಏಕೆಂದರೆ ಅವನು ತನ್ನದಲ್ಲದ ಅನೇಕ ರೂಪಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಭಾಷೆಯನ್ನು ಬಳಸದೇ ಇದ್ದರೆ ಭಾಷೆ ಬೆಳೆಯಲು ಸಾಧ್ಯವಿಲ್ಲ. ಶಿಷ್ಠ ಜ್ಞಾನರಿಗೆ ಭಾಷೆಯ ಬಳಕೆಯೂ ಇಲ್ಲ, ಭಾಷಾಜ್ಞಾನದ ಬಗ್ಗೆ ಅರಿವು ತುಂಬಾ ಕಡಿಮೆ. ಇವರಿಗಿಂತ ಹೆಚ್ಚು ಗ್ರಾಮೀಣ ಪ್ರದೇಶದ ಜನರು ಪದಗಳನ್ನು ಮಾತಿನ ಮೂಲಕವೇ ಸೃಷ್ಠಿಸುತ್ತಾರೆ. ಈ ಜನರ ಭಾಷೆಗಳಲ್ಲಿ ಭಾವನೆಗಳಿರುತ್ತವೆ. ಆದ್ದರಿಂದ ಇವರು ಸೃಷ್ಟಿಸುವ ಪದಗಳು ವೇಗವಾಗಿ ವಿಸ್ತರವಾಗುತ್ತದೆ ಎಂದು ಸಾಹಿತಿ ಪ್ರೊ.ಎಂ. ಕೃಷ್ಣೇ ಗೌಡ ಹೇಳಿದರು. ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡ ಪದಸೃಷ್ಟಿ- ಸ್ವೀಕರಣ ಮತ್ತು ಬಳಕೆ ಎಂಬ ವಿಷಯದ ಕುರಿತು ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ವಿಶೇಷೋಪನ್ಯಾಸ ಕಾರ್‍ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಭಾಷೆಯೂ ಅನುಭವದಿಂದ ತನ್ನದೇ ಸ್ವರೂಪ ಪಡೆದಿದೆ. ಆದ್ದರಿಂದ ಈ ಭಾಷೆಯನ್ನು ಅರಗಿಸಿಕೊಳ್ಳುವುದು ಸುಲಭ. ಪದಗಳ ಸೃಷ್ಠಿಗೆ ಅಗತ್ಯವಾದದ್ದು ಸಹಜವಾದ ಮಾತುಗಳು. ಎಲ್ಲರೊಂದಿಗೆ ಬೆರೆತು ಮಾತನಾಡಿದಾಗಲೇ ಪದ ಸೃಷ್ಠಿಯಾಗುವುದು. ಮಕ್ಕಳೊಂದಿಗೆ ಮಾತನಾಡುವಾಗ ಶಿಶುವಿನ ಕೆಲವು ಪದಗಳನ್ನು ಬಳಸುತ್ತೇವೆ. ಅದು ಮಕ್ಕಳಿಗಾಗಿಯೇ ಜನಿಸಿದ ಪದಗಳು. ಕನ್ನಡ ಭಾಷೆಯ ಒಂದು ಪದದಿಂದ ಅನೇಕ ಪದಗಳು ಹುಟ್ಟುತ್ತವೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದ್ರೆ: ನಮ್ಮ ನಾಡಿನ ಪರಂಪರೆ ಮತ್ತು ಇತಿಹಾಸವು ಎಲ್ಲರ ಒಳಿತನ್ನು ಬಯಸುವ ಬಹುತ್ವದ ನೆಲೆಯಲ್ಲಿದ್ದು, ನಮ್ಮಲ್ಲಿರುವ ಸಣ್ಣತನಗಳನ್ನು ಮೀರಿ ಪ್ರತಿಯೊಬ್ಬರೂ ಬಹುತ್ವದ ನೆಲೆಗೆ ಏರುವ ಕನಸನ್ನು ಕಾಣಬೇಕು ಎಂದು ಪ್ರೊ. ಸತ್ಯಮಂಗಲ ಮಹಾದೇವ ಹೇಳಿದರು. `ಆಳ್ವಾಸ್ ನುಡಿಸಿರಿ’ ರ ಅಂಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ `ಕವಿಸಮಯ-ಕವಿನಮನ’ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಾಗತೀಕರಣದಿಂದಾಗಿ ಮನುಷ್ಯರನ್ನು ಯಂತ್ರಗಳಂತೆ, ಯಂತ್ರಗಳನ್ನು ಮನುಷ್ಯರಂತೆ ಕಾಣುವ ಪರಿಸ್ಥಿತಿ ಎದುರಾಗಿದ್ದು, ಜಾತಿ, ಮತ, ಧರ್ಮ, ಸಂಪ್ರದಾಯದೊಳಗೆ ರಾಜಕಾರಣ ತುಂಬಿಕೊಂಡು ಮನುಷ್ಯತ್ವ ಮರೆಯಾಗಿದೆ. ಸಮಾಜವನ್ನು ಪೂರ್ಣದೃಷ್ಠಿಯಿಂದ ನೋಡಿದಾಗ ಸಮಾಜವು ಆರೋಗ್ಯದಾಯಕವಾಗಿರುತ್ತದೆ ಆದರೆ ಇಂದಿನ ಅಕ್ಷರಸ್ಥ ಯುವಜನಾಂಗವು ಪೂರ್ಣ ದೃಷ್ಠಿ ಅಥವಾ ಪೂರ್ಣ ಯೋಗದ ಕಡೆಯಾಗಲೀ ನೋಡದೇ ಆತುರಾತುರವಾಗಿ ನೋಡುತ್ತಿದ್ದಾರೆ. ಇದರಿಂದ ಧರ್ಮ, ಜಾತಿ, ಸಂಪ್ರದಾಯಗಳಲ್ಲಿ ಶೋಷಣೆಗಳು ಕಾಲಕಾಲದಿಂದ ಹೆಚ್ಚಾಗಿ ನಡೆಯುತ್ತದೆ ಎಂದು ಹೇಳಿದರು. ಪ್ರತಿಯೊಬ್ಬ ಮನುಷ್ಯನು ಸ್ವಾರ್ಥ ಭಾವನೆಯಿಂದ ತನ್ನ ಬಗ್ಗೆ ಮಾತ್ರ ಚಿಂತಿಸುವನೇ ಹೊರತು ಯಾವುದೇ ಗಿಡ, ಮರ , ಪ್ರಾಣಿ ಪಕ್ಷಿಯಂತಹ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: “ಮಾನವ ಧರ್ಮ ಶ್ರೇಷ್ಠ ಧರ್ಮ ಎಂಬ ಪರಿಕಲ್ಪನೆಯ ಮೂಲಕ ಧರ್ಮಗಳ ನಡುವೆ ಸಂಸ್ಕೃತಿಯ ಸಮಾನತೆಯನ್ನು ಪ್ರತಿಪಾದಿಸಿದ `ಗೋವಿಂದ ಭಟ್ಟ- ಶಿಶುನಾಳ ಶರೀಫ’ ಎಂಬ ಗುರುಶಿಷ್ಯರು ವಿಶ್ವಕ್ಕೇ ಮಾದರಿಯುತ ಜೀವನವನ್ನು ತೋರಿಸಿಕೊಟ್ಟರು”ಎಂದು ನಾಡೋಜ ಡಾ.ಮಹೇಶ್ ಜೋಶಿ ಹೇಳಿದರು. ಆಳ್ವಾಸ್ ನುಡಿಸಿರಿಯ ಭಾಗವಾಗಿ ರತ್ನಾಕರವರ್ಣಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ `ಸಂತ ಶಿಶುನಾಳ ಶರೀಫ- ದ್ವಿಶತಮಾನದ ನಮನ’ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಈಶ್ವರ ಅಲ್ಲಾ ನೀನೇ ಎಲ್ಲಾ’ ಎನ್ನುವಂತ ತತ್ವನುಡಿಗಳ ಮೂಲಕ ಜನಸಾಮಾನ್ಯರಿಗೆ ಲಾವಣಿ ಹಾಕಿ ನೀತಿ ಬೋಧಿಸಿದ ಶರೀಫರು ತನ್ನ ಗುರುಗಳಾದ ಗೋವಿಂದ ಭಟ್ಟರಲ್ಲಿ ದೇವರನ್ನು ಕಂಡರು. ಅವರಿಬ್ಬರ ಅವಿನಾಭಾವ ಸಂಬಂಧವು ಜಾತಿ,ಧರ್ಮಗಳ ನಡುವಿನ ಸಮೈಕ್ಯತೆಯನ್ನು ಸಾರುವಂತದ್ದು ಎಂದರು. ಗುರುಗಳಾದ ಕಳಸ ಗೊವಿಂದ ಭಟ್ಟರು ಅವರ ಜೀವನದ ಮೇಲೆ ಅದೆಷ್ಟು ಪ್ರಭಾವ ಬೀರಿದ್ದರು ಎನ್ನುವುದಕ್ಕೆ “ಕುರಾನ್ ಮತ್ತು ಪುರಾಣವನ್ನು ನನ್ನ ಹೆಗಲಮೇಲಿಟ್ಟರೆ ಶರಣ ಸಂಸ್ಕೃತಿಯನ್ನು ತಲೆ ಮೇಲೆ ಹೊರುವೆ”ನೆಂದ ಶರೀಫರ ಮಾತುಗಳೇ ಸಾಕ್ಷಿಯಾಗಿವೆ ಎಂದರು. ವೇದಿಕೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಆಳ್ವಾಸ್ ನುಡಿಸಿರಿ ೨೦೧೮ರ ಉದ್ಘಾಟನಾ ಸಮಾರಂಭದಲ್ಲಿ ಆಳ್ವಾಸ್ ನುಡಿಸಿರಿ ೨೦೧೭ರ ನೆನಪಿನ ಸಂಚಿಕೆ ‘ಕರ್ನಾಟಕ: ಬಹುತ್ಮದ ನೆಲೆಗಳು’ ಸರ್ವಾಧ್ಯಕ್ಷರಾದ ಡಾ. ಮಲ್ಲಿಕಾ ಎಸ್. ಘಂಟಿ ಅನಾವರಣಗೊಳಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಬಹುರೂಪಿಗೆ ಇರುವ ಅಂತಃಶಕ್ತಿ ಏಕರೂಪತ್ವಕ್ಕೆ ಇರಲು ಸಾಧ್ಯವಿಲ್ಲ. ಆದರೆ ಇಂದು ಏಕರೂಪಿ ಸಂಸ್ಕೃತಿ ಭಾಷೆಯೆಡೆಗೆ ನಮ್ಮನ್ನು ಕೊಂಡೊಯ್ಯುಲಾಗುತ್ತದೆ. ಇದೊಂದು ಅನಾರೋಗ್ಯಕರ ಬೆಳವಣಿಗೆಯಾಗಿದೆ. ಈ ದೃಷ್ಠಿಯಿಂದ ನುಡಿಸಿರಿ ಯೋಚಿಸಿದ ಪರಿಕಲ್ಪನೆಗಳು ಪ್ರಸ್ತುತ ಬಿಕ್ಕಟ್ಟುಗಳಿಗೆ ಉತ್ತರ ರೂಪದಲ್ಲಿವೆ ಎಂದು ೧೫ನೆ ಆಳ್ವಾಸ್ ನುಡಿಸಿರಿ ೨೦೧೮ರ ಸರ್ವಾಧ್ಯಕ್ಷೆ ಡಾ. ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು. ಅವರು ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ೨೦೧೮ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ಬುದ್ಧ ಹೇಳುವಂತೆ ಜಗತ್ತಿನಲ್ಲಿ ಸ್ಥೂಲ- ಸೂಕ್ಷ್ಮ ವಸ್ತುಗಳನ್ನೊಳಗೊಂಂಡತೆ ಎಲ್ಲವೂ ನಾಶವಾಗುತ್ತದೆ. ಹೀಗಾಗಿ ಇಲ್ಲಿ ಯಾವುದೂ ಶಾಶ್ವತವಲ್ಲ. ಕ್ಷಣಕ್ಷಣಕ್ಕೂ ಪ್ರತಿಯೊಂದು ಕಣಕಣವೂ ಅಮೂಲಾಗ್ರವಾದ ಬದಲಾವಣೆಗಳನ್ನು ಹೊಂದುತ್ತಲೇ ಇರುತ್ತದೆ. ಬೆಳಕನ್ನು ಕುರಿತು ಚರ್ಚೆ ಮಾಡುವುದರ ಬದಲು ಬೆಳಕನ್ನು ಕಾಪಾಡಿಕೊಳ್ಳುವುದು ಮುಖ್ಯ ಈ ದಾರಿಯಲ್ಲಿಯೇ ನಾವು ಭಾರತವನ್ನು, ಕರ್ನಾಟಕವನ್ನು ದರ್ಶಿಸಬೇಕಾಗಿದೆ ಎಂದರು. ದರ್ಶನ ಎನುವುದು ಸಿದ್ದ ಮಾದರಿಯದ್ದಲ್ಲ ಅದನ್ನು ಪ್ರಯತ್ನದ ಮೂಲಕವೇ ದರ್ಶಿಸಬೇಕಾಗಿದೆ. ಆ ಪ್ರಯತ್ನದ ಹಿಂದೆ ಇರುವ ಕನಸೇ ಸಮಾನತೆ.…

Read More