ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹುಟ್ಟು, ಬದುಕು ಹಾಗೂ ಸಾವಿನ ನಡುವಿನ ಜೀವನ ಆಟದಲ್ಲಿ ಜತೆಯಾಗಿದ್ದಷ್ಟು ಕಾಲ ಪರಸ್ಪರ ಸಹಕಾರದ ಮೂಲಕ ಪ್ರೀತಿಯ ಬೀಜವನ್ನು ಭಿತ್ತಿ ಪ್ರತಿಯೊಬ್ಬರ ಮೊಗದಲ್ಲೂ ನಗುವನ್ನು ಕಾಣುವುದರಲ್ಲಿ ಬದುಕಿನ ಸಾರ್ಥಕತೆ ಅಡಗಿದೆ ಎಂದು ಫಾ. ಜೋಸೆಫ್ ರೋಡ್ರಿಗಸ್ ಹೇಳಿದರು. ಶನಿವಾರ ದುರ್ಮಿ ಗದ್ದೆಹಿತ್ಲು ವಠಾರದಲ್ಲಿ ಜರುಗಿದ ತಿರಂಗ ಫ್ರೆಂಡ್ಸ್ ದುರ್ಮಿ ಪಡುವರಿ ಇದರ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಧೈರ್ಯ, ಶಾಂತಿ ಹಾಗೂ ಸಂಮೃದ್ಧತೆಯನ್ನು ಸಾರುವ ಭಾರತದ ಧ್ವಜದ ಬಣ್ಣಗಳಂತೆ ತಿರಂಗ ಫ್ರೆಂಡ್ಸ್‌ನ ಯುವ ಪಡೆ ಏಕತೆಯನ್ನು ಸಾರುತ್ತಾ ಬಂದಿದೆ. ಈ ಭಾಗದಲ್ಲಿ ಭಿನ್ನ ಸಮುದಾಯದವರು ನೆಲೆಸಿದ್ದರೂ ಪರಸ್ಪರ ಒಬ್ಬರನ್ನೊಬ್ಬರು ಅರಿತು ಬಾಳುವ, ಧರ್ಮ ಸಂಪ್ರದಾಯವನ್ನು ಗೌರವಿಸುವ ಗುಣ ಹೊಂದಿದ್ದು, ಸಾಮರಸ್ಯದ ಬದುಕು ಕಂಡುಕೊಂಡಿದ್ದಾರೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆ, ಕೋಸ್ಟಲ್ ಗಾರ್ಡ್ ಸಿಬ್ಬಂದಿ ನಡೆಸಿರುವ ಕಾರ್ಯಾಚರಣೆ ಮಾಹಿತಿಯನ್ನು ಗೃಹ ಸಚಿವ ಎಂ.ಬಿ.ಪಾಟೀಲ್ ಅಧಿಕಾರಿಗಳಿಂದ ಪಡೆದುಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವರು, ಕಾರ್ಯಾಚರಣೆಯ ಪ್ರತಿಯೊಂದು ಹಂತದ ಮಾಹಿತಿ ಪಡೆದರು. ಬಳಿಕ ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು, ಮೀನುಗಾರಿಕಾ ಮುಖಂಡರ ಜತೆ ಕಾರ್ಯಾಚರಣೆಯ ವಿವರವನ್ನು ತಿಳಿಸಿದರು. ಬೋಟ್ ನಾಪತ್ತೆಯಾದ ಬಳಿಕ ಡಿ.23ರಿಂದ ಪ್ರತಿದಿನ ಹೆಲಿಕಾಪ್ಟರ್ ಹಾಗೂ ಹಡಗುಗಳನ್ನು ಬಳಸಿಕೊಂಡು ಶೋಧ ನಡೆಸಲಾಗಿದೆ. ಕೋಸ್ಟಲ್ ಗಾರ್ಡ್ ಸಿಬ್ಬಂದಿ ತಂತ್ರಜ್ಞಾನದ ನೆರವಿನಿಂದ ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೀನುಗಾರರ ಜೀವದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ಶೋಧ ನಡೆಸುತ್ತಿದೆ ಎಂದರು. ಈ ಸಂದರ್ಭ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮೀನುಗಾರರು ಆತಂಕದಲ್ಲಿದ್ದು, ಧೈರ್ಯ ತುಂಬುವ ಕೆಲಸ ಮಾಡಬೇಕಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳ ನಡುವಿನ ಹಣಾಹಣಿಯಲ್ಲಿ ಅಂತಿಮವಾಗಿ ಬಿಜೆಪಿ ಅಧಿಕಾರ ಹಿಡಿಯಲು ಯಶಸ್ವಿಯಾಗಿದೆ. ಒಟ್ಟು 33 ಸ್ಥಾನಗಳ ಪೈಕಿ ಬಿಜೆಪಿ 23, ಕಾಂಗ್ರೆಸ್ 6 ಹಾಗೂ ಎಸ್‌ಡಿಪಿಐ 4 ಸ್ಥಾನಗಳನ್ನು ಪಡೆದುಕೊಂಡಿದೆ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ 19 ಕಾಂಗ್ರೆಸ್ 14 ಸ್ಥಾನ ಪಡೆದಿತ್ತು. ಕುಂದಾಪುರ ಮಿನಿ ವಿಧಾನಸೌಧದಲ್ಲಿ ಕುಂದಾಪುರ ತಹಶೀಲ್ದಾರರ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ಸಸೂತ್ರವಾಗಿ ನಡೆಯಿತು. ವಿಜಯೋತ್ಸವದಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ► ಪಂಚಾಯತ್ ಚುನಾವಣೆ: ಯಡ್ತರೆ ಕಾಂಗ್ರೆಸ್‌ಗೆ, ಬೈಂದೂರು ಬಿಜೆಪಿ ತೆಕ್ಕೆಗೆ – https://kundapraa.com/?p=30722 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ನಡುವಿನ ಜಿದ್ದಾ ಜಿದ್ದಿನ ಕಣವಾಗಿದ್ದ ಯಡ್ತರೆ ಹಾಗೂ ಬೈಂದೂರು ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಯಡ್ತರೆ ಪಂಚಾಯತ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ದೊರೆತಿದ್ದು ನಿರಾಯಸವಾಗಿ ಅಧಿಕಾರ ಹಿಡಿದರೆ, ಬೈಂದೂರು ಪಂಚಾಯತ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದು ಅಧಿಕಾರ ಹಿಡಿಯಲಿದ್ದಾರೆ. ಯಡ್ತರೆ ಪಂಚಾಯತ್‌ನ ಯಡ್ತರೆ ಗ್ರಾ.ಪಂನ 8 ಕ್ಷೇತ್ರಗಳ ಒಟ್ಟು 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 19 ಸ್ಥಾನಗಳನ್ನು ಪಡೆದು ವಿಜಯದ ನಗೆ ಬೀರಿದ್ದರೆ, ಬಿಜೆಪಿ 5, ಹಾಗೂ ಓರ್ವ ಪಕ್ಷೇತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಿಂದಿನ ಅವಧಿಯಲ್ಲಿಯೂ ಕಾಂಗ್ರೆಸ್ 19, ಬಿಜೆಪಿ 6 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು ಪಂಚಾಯತ್‌ನಲ್ಲಿ 21 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 17 ಸ್ಥಾನಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 4…
ಕುಂದಾಪ್ರ ಡಾಟ್ ಕಾಂ’ ಸುದ್ದಿ ರೋಟರಿ ಜಿಲ್ಲಾ ಕಾನ್ಪರೆನ್ಸ್ ಕಮಿಟಿ ಹಾಗೂ ರೋಟರಿ ಜಿಲ್ಲೆ 3182 ಸಾರಥ್ಯದಲ್ಲಿ ಅಭಿಯಾನ ರೋಟರಿ ಜಿಲ್ಲಾ ಸಮ್ಮೇಳನ ಜನವರಿ 4, 5, ಹಾಗೂ 6ರಂದು ಕೋಟೇಶ್ವರದ ಯುವ ಮೆರೀಡಿಯನ್ ಕನ್ವೆನ್‌ಕ್ಷನ್ ಸೆಂಟರ್‌ನಲ್ಲಿ ಜರುಗಲಿದೆ ಎಂದು ರೋಟರಿ 3182 ಜಿಲ್ಲಾ ಗವರ್ನರ್ ಅಭಿನಂದನ್ ಎ. ಶೆಟ್ಟಿ ತಿಳಿಸಿದ್ದಾರೆ. ಅವರು ಕುಂದಾಪುರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರೋಟರಿ ಸಂಸ್ಥೆಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪೋಲಿಯೋ ಸೇರಿದಂತೆ ಸಾಮಾಜಿಕ ಬದ್ಧತೆಯೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪ್ರಸ್ತುತ ವರ್ಷದಲ್ಲಿ 3182ರೋಟರಿ ಜಿಲ್ಲೆಯಲ್ಲಿ ಮೇಕ್ ರೋಡ್ ಸೇಫ್ ಅಭಿಯಾನವನ್ನು ಹಮ್ಮಿಕೊಂಡು ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಸಾಗರ ಹಾಗೂ ತೀರ್ಥಹಳ್ಳಿಯಲ್ಲಿ ರೋಟರಿ ಬ್ಲಡ್ ಬ್ಯಾಂಕ್ ಸ್ಥಾಪನೆ, ಹ್ಯಾಪಿ ಸ್ಕೂಲ್ ಯೋಜನೆಯಡಿಯಲ್ಲಿ 60 ಶಾಲೆಗಳನ್ನು ದತ್ತು ಪಡೆದು ಈ ಲರ್ನಿಂಗ್ ಕಿಟ್, ವಾಶಿಂಗ್ ಬೇಸಿನ್ ಒದಗಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮವನ್ನು ಸ್ವಹಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ನಾವುಂದ ಗ್ರಾಮದ ಕುದ್ರುಕೋಡು ಎಂಬಲ್ಲಿನ ಹೆದ್ದಾರಿ ವಿಸ್ತರಣೆ ಗುತ್ತಿಗೆದಾರ ಸಂಸ್ಥೆ ಐಆರ್‌ಬಿಯ ಚಾಲಕ ರಹಿತ ಲಾರಿ ಚಲಿಸಿದ ಪರಿಣಾಮ ಮನೆಯ ಆವರಣ ಧ್ವಂಸವಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಇಲ್ಲಿ ಸಂಸ್ಥೆಯ ಬೃಹತ್ ಜಲ್ಲಿ-ಟಾರು ಮಿಶ್ರಣ ಘಟಕ ಇದೆ. ಒಂದು ಲಾರಿಯ ಚಾಲಕ ಎಂದಿನಂತೆ ಮಿಶ್ರಣ ತುಂಬಿಸಿಕೊಂಡು ಬಂದು ಲಾರಿಯನ್ನು ವೇಬ್ರಿಜ್ ಮೇಲೆ ನಿಲ್ಲಿಸಿ ಇಳಿದುಹೋಗಿದ್ದ. ಲಾರಿ ತಂತಾನೆ ಚಲಿಸಿ, ಅಡ್ಡ ಇರುವ ರಸ್ತೆ ದಾಟಿ ಮೂಕಾಂಬಿಕಾ ದೇವಾಡಿಗ ಎಂಬವರ ನಿವೇಶನದ ಕಲ್ಲಿನ ಆವರಣಕ್ಕೆ ಬಡಿದಿದೆ. ಅದರಿಂದಾಗಿ ಆವರಣ ಕುಸಿದು ಬಿದ್ದಿದೆ. ಈ ಅಪಘಾತ ನಡೆದ ಸ್ಥಳದ ಪಕ್ಕದಲ್ಲಿ ಒಂದು ಅಂಗಡಿ ಇದೆ. ಲಾರಿ ಚಲಿಸಿದ ವೇಳೆ ಅದರಲ್ಲಿ ಹತ್ತಾರು ಜನರಿದ್ದರು. ಅದಕ್ಕಿಂತ ಸ್ವಲ್ಪ ಸಮಯದ ಮೊದಲು ಶಾಲಾ ವಾಹನವೊಂದು ಆ ದಾರಿಯಾಗಿ ಹೋಗಿತ್ತು. ಲಾರಿ ಆ ವೇಳೆ ಚಲಿಸಿದ್ದರೆ ಅಥವಾ ಆವರಣದ ಬದಲು ಅಂಗಡಿಗೆ ನುಗ್ಗಿದ್ದರೆ ಭೀಕರ ಅಪಘಾತ ಸಂಭವಿಸುತ್ತಿತ್ತು ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೆಲವು ಸಂಘಟನೆಗಳು ಹಿಂದುಳಿದ ಸಮುದಾಯದ ಯುವಕರ ದಿಕ್ಕು ತಪ್ಪಿಸಿ ತಮ್ಮ ಹೋರಾಟಗಳಲ್ಲಿ ಬಳಸಿಕೊಳ್ಳುತ್ತಿವೆ. ಮುಂದಾಗುವುದರ ಕುರಿತು ವಿವೇಚಿಸದೆ ಮುನ್ನುಗ್ಗುವ ಆ ಯುವಕರು ಬಂಧನ, ಜೈಲುವಾಸ ಅನುಭವಿಸಬೇಕಾಗುತ್ತದೆ. ಸಮುದಾಯ ಸಂಘಟನೆಗಳು ತಮ್ಮ ಯುವಕರನ್ನು ಎಚ್ಚರಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಮರವಂತೆಯ ಸಾಧನಾ ಮಂಟಪದಲ್ಲಿ ಡಿ.28ರಂದು ನಡೆದ ಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು. ’ಸಮುದಾಯದ ದುರ್ಬಲ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ಸಂಘಟನೆ ಆದ್ಯತೆ ನೀಡಬೇಕು. ಅಂತವರಿಗೆ ಆರ್ಥಿಕ ನೆರವು ನೀಡಬೇಕು. ಬಿಲ್ಲವರ ಮಾತೃ ಸಂಘ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಅದರ ಮತ್ತು ಸ್ಥಳೀಯ ದಾನಿಗಳ ನೆರವು ಪಡೆಯಬೇಕು. ಯಾವುದೇ ಬಿಲ್ಲವ ಸಂಘ ತನ್ನ ಸ್ವಂತ ನೆಲೆ ನಿರ್ಮಿಸಿಕೊಳ್ಳಲು ಮುಂದಾದರೆ ಅದಕ್ಕೆ ಸರ್ಕಾರದ ನೆರವು ದೊರಕಿಸಿಕೊಡಲಾಗುವುದು’ ಎಂದು ಭರವಸೆಯಿತ್ತರು. ಸಂಘದ ಅಧ್ಯಕ್ಷ ಎಂ. ಅಣ್ಣಪ್ಪ ಬಿಲ್ಲವ ಸ್ವಾಗತಿಸಿ ೨೦ ವರ್ಷಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದಲೇ ರಾಜ್ಯದಲ್ಲಿ ಹೆಸರು ಮಾಡಿದ್ದ ಐಪಿಎಸ್ ಅಧಿಕಾರಿ, ವಡ್ಡರ್ಸೆ ಮೂಲದ ಮಧುಕರ ಶೆಟ್ಟಿ (೪೯) ಡಿ.೨೮ರ ರಾತ್ರಿ ಹೈದರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಹೃದಯ ಸಂಬಂಧಿ ಖಾಯಿಲೆಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದದರು ಮೂಲಗಳ ಮಾಹಿತಿ ಪ್ರಕಾರ ಮಧುಕರ್ ಶೆಟ್ಟಿ ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತುರ್ತು ಚಿಕಿತ್ಸೆಯಲ್ಲಿದ್ದ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳದೇ ಕೊನೆಯುಸಿರೆಳೆದಿದ್ದಾರೆ. ಮಧುಕರ ಶೆಟ್ಟಿ ಅವರ ಚಿಕಿತ್ಸೆಯ ಬಗ್ಗೆ ಖುದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್, ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕದ ಹಲವು ಐಪಿಎಸ್ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳುತ್ತಲೇ ಇದ್ದರು. ಕರ್ನಾಟಕ ಸರ್ಕಾರ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿಯವರನ್ನು ಚಿಕಿತ್ಸೆ ಮೇಲ್ವಿಚಾರಣೆಗೆ ನೇಮಿಸಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕರ್ನಾಟಕ ರಾಜ್ಯದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರವನ್ನು ಮತ್ತು ಭ್ರಷ್ಟರನ್ನು ಬೇಟೆ ಮಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ…
ಕುಂದಾಪ್ರ ಡಾಟ್ ಕಾಂ’ ಸುದ್ದಿ ರತ್ನಾಕರ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ). ಬಸ್ರೂರು ಕುಂದಾಪುರ ತಾಲೂಕಿನ ಸಾಧಕರಿಗೆ ನೀಡಲಾಗುತ್ತಿರುವ 2018-19ನೇ ಸಾಲಿನ ಕೊಳ್ಕೇರಿ ರತ್ನಾಕರ ಶೆಟ್ಟಿ ಸಾಧಕ ಪ್ರಶಸ್ತಿಗೆ ಕಂದಾವರ ಸತೀಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಂದಾವರ ಸತೀಶ ಶೆಟ್ಟಿಯವರ ವಿಭಿನ್ನವಾದ ಸಾಧನೆಗಾಗಿ ಯುಎಇ ಸರಕಾರದ 2017ರ ಎನೋಕ್ ಎನರ್ಜಿ ಅವಾರ್ಡನ್ನು ಕೊಟ್ಟು ಗೌರವಿಸಿದೆ. ಯುಎಇ ಫ್ಯುಯಲ್ ಸ್ಟೇಷನ್ನ ಡಿಸೈನ್ ಮತ್ತು ಇಂಜಿನಿಯರಿಂಗ್ ಎನರ್ಜಿ ಸ್ಟ್ಯಾಂಡರ್ಡ್ ತಯಾರಿ ಮಾಡಿದ್ದಕ್ಕಾಗಿ ದುಬೈ ರೋಟನನಲ್ಲಿ ನಡೆದ ಎಕ್ಸ್‌ಕ್ಲೂಸಿವ್ ಸಭೆಯಲ್ಲಿ ಅವರನ್ನು ಗೌರವಿಸಲಾಗಿದೆ. ಮದ್ಯಪ್ರಾಚ್ಯದ ಕೈಗಾರಿಕಾ ಕಂಪನಿಗಳಲ್ಲಿ ಪ್ರತಿಷ್ಟಿತವಾಗಿರುವ ಕ್ಲೈಮೇಟ್ ಕಂಟ್ರೋಲ್ ಅವಾರ್ಡ್ ೨೦೧೭ರ ಆಯ್ಕೆ ಸಮಿತಿಯ ಸದಸ್ಯರಾಗಿ ಯುಎಇ ಸರಕಾರದಿಂದ ನಾಮ ನಿರ್ದೇಶನ ಹೊಂದಿದ್ದಾರೆ. ಸತೀಶ್ ಶೆಟ್ಟಿ ಅವರ ಈ ಸಾಧನೆಯನ್ನು ಪರಿಗಣಿಸಿ ಕೊಳ್ಕೇರಿ ರತ್ನಾಕರ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ.) ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಪ್ರಶಸ್ತಿ ನೀಡುತ್ತಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೀದರ್ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ ೫೩ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಉತ್ತರಪ್ರದೇಶದ ಮಥುರಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ೯ ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಬಾಲಕಿಯರ ೧೬ ವಯೋಮಿತಿಯಲ್ಲಿ ದೀಪಾಶ್ರೀ ೩ನೇ ಸ್ಥಾನ, ೧೮ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಮಾಲಾಶ್ರೀ ೪ನೇ ಸ್ಥಾನ, ಚೈತ್ರಾ ಪಿ. ೫ನೇ ಸ್ಥಾನ, ಸಂಧ್ಯಾ ೭ನೇ ಸ್ಥಾನ, ರಕ್ಷಿತಾ ೧೦ನೇ ಸ್ಥಾನ, ೧೮ ವಯೋಮಿತಿ ಬಾಲಕರ ವಿಭಾಗದಲ್ಲಿ ಅಸ್ಲಾಮ್ ಮುಲ್ತಾನಿ ೨ನೇ ಸ್ಥಾನ, ಸತೀಶ್ ೭ನೇ ಸ್ಥಾನ. ೨೦ ವಯೋಮಿತಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಚೈತ್ರಾ ಡಿ. ಪ್ರಥಮ ಸ್ಥಾನ, ಪ್ರಿಯಾ ಎಲ್.ಡಿ ೩ನೇ ಸ್ಥಾನ, ಜಯಲಕ್ಷ್ಮೀ ೯ನೇ ಸ್ಥಾನ, ರೇಷ್ಮಾ ೧೦ನೇ ಸ್ಥಾನ, ಪುರುಷರ ವಿಭಾಗದಲ್ಲಿ ರಂಜಿತ್ ಸಿಂಗ್ ಪ್ರಥಮ ಸ್ಥಾನ, ಅನಿಲ್ ೯ನೇ ಸ್ಥಾನ, ಪ್ರವೀಣ್…
