ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಜಾತ್ರೆ, ಗದ್ದಲ, ಜನಜಂಗುಳಿ ಇವೆಲ್ಲದರ ನಡುವೆ ಕಿವಿಗೆ ಇಂಪಾದ ಮತ್ತು ಹುಮ್ಮಸ್ಸು ತುಂಬುವ ರಂಗಗೀತೆಗಳನ್ನು ಕೇಳುವ ಅವಕಾಶ ಶುಕ್ರವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಳ್ವಾಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಕಲಾಪ್ರೇಕ್ಷಕರಿಗೆ ಲಭಿಸಿತ್ತು. ಮೂಡಬಿದರೆಯ ಆಳ್ವಾಸ್ ಆವರಣದ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ’ರಂಗಗೀತೆಗಳು’ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಹೆಗ್ಗೊಟ್ಟಾರ್ ಮತ್ತು ಬಳಗದ ಪ್ರದರ್ಶನ ನೆರೆದಿದ್ದವರನ್ನು ರಂಜಿಸಿತು. ಮೊದಲಿಗೆ ಹಯವದನ ನಾಟಕದ ಬಿ.ವಿ ಕಾರಂತರ ಸಂಯೋಜನೆಯ ’ಗಜವದನ ಹೇ ರಂಭಾ’ ಹಾಡಿನ ಮೂಲಕ ’ಪ್ರೇಕ್ಷಕರೇ ನಾಟಕದ ಮಾಲೀಕ’ ಎಂಬ ಸಂದೇಶವನ್ನು ಗೀತೆಯ ಮೂಲಕ ಜನರ ಮನಮುಟ್ಟಿಸಿದರು. ಹಾರ್ಮೋನಿಯಂ, ಖಂಜೀರಾ, ತಬಲ, ಡೋಲಕ್, ಗೆಜ್ಜೆ, ತಾಳ ಹೀಗೆ ಹಲವಾರು ವಾದನಗಳ ಮಿಳಿತ ನೆರೆದಿದ್ದ ಪ್ರೇಕ್ಷಕರ ಗಮನವನ್ನು ವೇದಿಕೆಯ ಮೇಲಿರುವವರ ಮೇಲೆ ಸೆಳೆಯುವಂತೆ ಮಾಡಿದರು. ಜಾನಪದ ಗೀತೆಗಳಿಗೆ ಭದ್ರ ಬುನಾದಿಯಾಗಿರುವ ರಂಗಭೂಮಿಯಲ್ಲಿ ಇನ್ನೂ ಹಲವಾರು ಜಾನಪದ ಗೀತೆಗಳು ಅನುರಣಿಸುತ್ತಿದೆ, ಅಂತಹದ್ದೇ ಒಂದು ರಂಗಗೀತೆಯಾದ ’ಗೋವಿಂದ ಮುರಹರ ಗೋವಿಂದ’ ಗೀತೆ ಪ್ರೇಕ್ಷಕರನ್ನು ಭಕ್ತಿವರವಶರನ್ನಾಗಿಸಿತು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ವಿಜ್ಞಾನವೆಂಬುದು ಹಲವು ಕೌತುಕಗಳ ಆಗರ. ಭಾರತ ಸರ್ಕಾರದ ರಾಷ್ಟೀಯ ವಿಜ್ಞಾನ ವಸ್ತು ಸಂಗ್ರಾಹಾಲಯಗಳ ಪರಿಷತ್ತು ಮತ್ತು ಸಂಸ್ಕೃತಿ ಸಚಿವಾಲಯದ ಅಂಗ ಸಂಸ್ಥೆಯಾದ ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯವು ವಿಜ್ಞಾನದ ಹಲವು ಪ್ರಯೋಗಗಳ ಮತ್ತು ಕೆಲವು ಪ್ರಸಿದ್ಧ ವಿಜ್ಞಾನಿಗಳ ನಿಯಮಗಳ ಕುರಿತಾದ ವಿವಿಧ ಮಾದರಿ ಮತ್ತು ಮಾಹಿತಿಗಳನ್ನು ಒಳಗೊಂಡ ’ಸಂಚಾರಿ ವಿಜ್ಞಾನ ಬಸ್’ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಆಕರ್ಷಿಸುತ್ತಿದೆ. ‘ಸಂಚಾರಿ ವಿಜ್ಞಾನ ಬಸ್’ನಲ್ಲಿ ವಿಜ್ಞಾನಗಳ ಕುರಿತಾದ ಸರಣಿ ಮತ್ತು ಸಮನಾಂತರ ಧಾರಕಗಳು, ಕೈ ವಿದ್ಯುತ್ ಕೋಶಗಳು, ನೇರ ವಿದ್ಯುತ್ ಮತ್ತು ಪರ್ಯಾಯ ವಿದ್ಯುತ್, ಸೇತುವೆಯ ಸಮತೋಲನಗಳು, ಆರ್ಸ್ಟೆಡ್‌ನ ಪ್ರಯೋಗ, ಅಯಸ್ಕಾಂತೀಯ ಗುಣಗಳು ಮತ್ತು ಉಷ್ಣತೆ, ಕೆಪಾಸಿಟರ್, ಸರಣಿ ಮತ್ತು ಸಮನಾಂತರ ಧಾರಕಗಳು, ಫ್ಲೆಮಿಂಗನ ಎಡಗೈ ನಿಯಮ, ಡಿ.ಸಿ. ಮೋಟಾರ್, ಸೋಮಾರಿ ಗೋಳ, ಬಲ್ಬಿನ ವಿವಿಧ ವಿಧಗಳು, ಕಿರುವಿದ್ಯುತ್ ಮಂಡಲ ತಡೆ, ವಿದ್ಯುತ್ ಜನರೇಟರ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಅಲ್ಲಿ ದ್ರೌಪದಿಗೆ ಕೃಷ್ಣ ವಸ್ತ್ರ ನೀಡಿದಂತೆ ಮುಗಿಯದಷ್ಟು ವಸ್ತ್ರವನ್ನು ಖಾಲೀ ಡಬ್ಬಿಯಿಂದ ಹೊರತೆಗೆಯುತ್ತಿದ್ದರು. ಬಿಳಿಯ ಬಣ್ಣದ ರಿಂಗ್ ಹಸಿರಾಗಿತ್ತು. ಹಸಿರು ರಿಂಗ್ ಮತ್ತೆ ಬಿಳಿಯಾಯ್ತು. ನೋಡನೋಡುತ್ತಿದ್ದಂತೆ ರಿಂಗ್ ಮಾಯವಾಗಿ ಗಾಳಿಯಲ್ಲಿ ತೇಲುವ ಮಂತ್ರದಂಡವಾಯ್ತು. ಇಂತಹದ್ದೊಂದು ಮಾಯಾಲೋಕ ಸೃಷ್ಟಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಸಾಂಸ್ಕೃತಿಕ ಮೇಳದ ?ಜಾಂಬೂರಿ ಜಾದು? ಎನ್ನುವ ವಿಶೇಷ ಕಾರ್ಯಕ್ರಮ. ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಗಣೇಶ್ ಕುದ್ರೋಳಿ ನೇತೃತ್ವದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯ ತನಕ 18 ಜಾದೂಗಾರರಿಂದ 6 ವೇದಿಕೆಗಳಲ್ಲಿ ನಡೆಯುತ್ತಿರುವ ಮ್ಯಾಜಿಕ್ ಶೋ ಜಾಂಬೂರಿಯ ಮೆರುಗನ್ನು ಹೆಚ್ಚಿಸಿದೆ. ಕಳೆದ ಎರಡು ದಿನಗಳಿಂದ ಕುದ್ರೋಳಿ ಗಣೇಶ್, ತಮಿಳುನಾಡಿನ ಮೆಜಿಷಿಯನ್ ಮಹಾ, ಪ್ರಹ್ಲಾದಾಚಾರ್ಯ, ಕೇರಳದ ಸಚಿನ್ ತಮ್ಮ ಜಾದೂ ಕೌಶಲ್ಯದಿಂದ ಜನಮನ ರಂಜಿಸಿದ್ದಾರೆ. ನವದೆಹಲಿಯ ರಾಜ್‌ಕುಮಾರ್, ಕೇರಳದ ಎಂ.ಪಿ. ಹಾಶಿಮ್, ಬೆಂಗಳೂರಿನ ವೇಣುಗೋಪಾಲ್, ಕೇಶವ್ ಸೇರಿದಂತೆ ಭಾರತದ ಮೂಲೆ ಮೂಲೆಗಳಿಂದ ಆಗಮಿಸಿರುವ ಪ್ರಖ್ಯಾತ ಜಾದುಗಾರರು ಏಕಕಾಲದಲ್ಲಿ ದಿನಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಿಕ್ಷಣ ಜ್ಞಾನ ಸಂಸ್ಥೆಯ ವತಿಯಿಂದ ಕೊಡ ಮಾಡುವ ಈ ಬಾರಿಯ ರಾಜ್ಯ ಮಟ್ಟದ ಶಿಕ್ಷಣ ಜ್ಞಾನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಉಡುಪಿ ಜಿಲ್ಲೆಯಿಂದ ಕಾಲೇಜು, ಪ್ರೌಢಶಾಲೆ, ಪ್ರಾಥಮಿಕ, ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕ್ರಮವಾಗಿ ತೆಂಕನಿಡಿಯೂರು ಕಾಲೇಜಿನ ಕನ್ನಡ ಉಪನ್ಯಾಸಕ, ಪ್ರಾಂಶುಪಾಲ ವಿಶ್ವನಾಥ ಎನ್. ಕರಬ, ಕುಂದಾಪುರ ವಲಯದ ಕೋಡಿ ಬ್ಯಾರಿಸ್ ಸಂಸ್ಥೆಯ ಮುಖ್ಯೋಪಾಧ್ಯಾಯ ಜಯಶೀಲ ಶೆಟ್ಟಿ, ಬೈಂದೂರು ವಲಯದ ಆಲೂರು-ಕಳಿಯ ಶ್ರೀಮತಿ ಜಿ. ಹೆಗಡೆ ಬ್ರಹ್ಮಾವರ ವಲಯದ ಮುಂಡಾಡಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಜ್ಯೋತಿ ಶೆಟ್ಟಿ ಆಯ್ಕೆಯಾಗಿದ್ದರು. ಹೊಸದುರ್ಗದಲ್ಲಿ ಇತ್ತಿಚಿಗೆ ನಡೆದ ರಾಜ್ಯ ಶೈಕ್ಷಣಿಕ ಸಮಾವೇಶದಲ್ಲಿ ಈ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಅಲ್ಲಿ ಹಳೆಯ ಪುಸ್ತಕಗಳಿದ್ದವು. ಹೊಸ ಕೃತಿಗಳ ಸಂಗ್ರಹವೂ ಇತ್ತು. ಕೃತಿಗಳತ್ತ ಕಣ್ಣು ಹಾಯಿಸಿ ಸಾಗುವವರು, ಹಾಗೆ ಸಾಗುತ್ತಲೇ ಇಷ್ಟವಾದ ಪುಸ್ತಕವನ್ನು ಕೈಗೆತ್ತಿಕೊಳ್ಳುವವರೂ ಇದ್ದರು. ಮಕ್ಕಳು, ಯುವಕರು, ಮಧ್ಯವಯಸ್ಕರು ಮತ್ತು ವಯೋವೃದ್ಧರು ಪುಸ್ತಕ ಪ್ರೀತಿಯೊಂದಿಗೆ ಅಲ್ಲಿದ್ದರು. ಸಾಹಿತ್ಯ, ಧರ್ಮ ಆಧ್ಯಾತ್ಮ, ಸಂಸ್ಕೃತಿ ಸೇರಿದಂತೆ ವಿವಿಧ ಬಗೆಯ ಕೃತಿಗಳ ರಾಶಿ ಎದ್ದುಕಾಣುತ್ತಿತ್ತು. ಮೂಡುಬಿದಿರೆಯ ಆಳ್ವಾಸ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022ರ ಪ್ರಯುಕ್ತ ಆಯೋಜಿತವಾದ ಪುಸ್ತಕ ಮೇಳದ ವಿಶೇಷ ಚಿತ್ರಣವಿದು. ಇಲ್ಲಿ 10ಕ್ಕೂ ಹೆಚ್ಚು ಪುಸ್ತಕದ ಸ್ಟಾಲ್‌ಗಳಿದ್ದು ಪುಸ್ತಕ ಓದುಗರನ್ನು ಸೆಳೆಯುತ್ತಿವೆ. ಹಳೆಯ ಪುಸ್ತಕಗಳನ್ನು ನೋಡುವ ಕುತೂಹಲದೊಂದಿಗೆ ಹಲವರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ತಮ್ಮಿಷ್ಟದ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಪುಸ್ತಕಗಳು ಬಂದಿದ್ದರೆ ಖರೀದಿಸುವ ಇರಾದೆಯೊಂದಿಗೆ ಭಾಗವಹಿಸುವವರೂ ಇದ್ದಾರೆ. ಧರ್ಮ-ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳ ಸ್ಟಾಲ್‌ಗಳಲ್ಲಿ ಹಿರಿಯರು ಕಾಣಿಸಿಕೊಂಡರೆ ಎಲ್ಲಾ ಬಗೆಯ ಪುಸ್ತಕಗಳು ಲಭ್ಯವಿರುವ ಸ್ಟಾಲ್‌ಗಳ ಕಡೆಗೆ ಎಲ್ಲಾ ವಯೋಮಾನದವರು ಧಾವಿಸುತ್ತಿದ್ದಾರೆ. ಸಪ್ನಾ ಬುಕ್ ಹೌಸ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ನೀವು ಬೆಣ್ಣೆ ದೋಸೆ, ಮಸಾಲ ದೋಸೆ, ಈರುಳ್ಳಿ ದೋಸೆ ಸೇರಿದಂತೆ ಮನೆಯಲ್ಲಿ ಮಾಡುವ ಎಲ್ಲಾ ದೋಸೆಯ ರುಚಿ ಸವಿದಿರುತ್ತೀರಿ. ಆದ್ರೆ ಈ ದೋಸೆಯಲ್ಲಿ 99 ಪ್ರಕಾರಗಳಿರೋದು ನಿಮಗೆ ಗೊತ್ತಾ? ಹೀಗೆ 99 ಬಗೆಯ ದೋಸೆ ತಯಾರಿಸುವ ಈ ಸ್ಟಾಲ್ ಇಡೀ ಆಹಾರಮೇಳದಲ್ಲಿ ಎಲ್ಲರನ್ನೂ ಸೆಳೆಯುತ್ತಿದೆ. ಸಾರ್ವಜನಿಕರು ಪ್ರತಿದಿನ ಈ ಸ್ಟಾಲ್‌ಗೆ ಭೇಟಿ ನೀಡಿ ತರಹೇವಾರಿ ದೋಸೆಗಳ ರುಚಿಯನ್ನು ಹಲವರು ಸವಿಯುತ್ತಿದ್ದಾರೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸ್ಕೌಟ್ಸ್ ಮತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಆಹಾರ ಮೇಳದಲ್ಲಿ ಕಾರ್ಕಳದ ಕಿರಣ್ ಶೆಟ್ಟಿ ಇಷ್ಟೊಂದು ಬಗೆಯ ದೋಸೆಗಳನ್ನು ಸಿದ್ಧಪಡಿಸಿ ಕೊಡುತ್ತಿದ್ದಾರೆ. ಜನರಿಗೆ ವಿಭಿನ್ನ ರುಚಿಯ ದೋಸೆಗಳನ್ನ ಪರಿಚಯಿಸುವ ಉದ್ದೇಶದಿಂದ ಆಹಾರ ಮೇಳದಲ್ಲಿ ಭಾಗಿಯಾಗಿದ್ದಾರೆ ಅವರು. ಅವರು ಕಣ್ಣೆದುರಿಗೇ ಸಿದ್ಧಪಡಿಸಿಕೊಡುವ ಪಿಜ್ಜಾ ದೋಸೆ, ಚೀಸ್ ದೋಸೆ, ಪನ್ನೀರ್ ಚೀಸ್ ದೋಸೆ ಎಲ್ಲರ ಫೇವರಿಟ್ ಎನ್ನಿಸಿವೆ. ಜನರಿಗೆ ಸಾಮಾನ್ಯವಾಗಿ ಹೊರಗಿನ ಆಹಾರ ತಿನ್ನಲು ರಾಸಾಯನಿಕಗಳ ಬಳಕೆಯಾಗಿರಬಹುದು ಎನ್ನುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಮೂರನೇ ದಿನ ಡಾ. ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಿ ಮನಸೆಳೆಯಿತು. ಪುತ್ತೂರಿನ ಅನೀಶ್ ವಿ. ಭಟ್ ಮತ್ತು ಬಳಗದ ಕಲಾವಿದರು ನೆರೆದಿದ್ದವರ ಮನಗೆದ್ದರು. ಆದಿ ತಾಳದಲ್ಲಿ ನಳಿನಕಂಠಿವರ್ಣ ಗೀತೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.ಬಳಿಕ ’ಮಾರಿವೆರೆ ಷಣ್ಮುಖಪ್ರಿಯ’, ಶುದ್ಧ ಧನ್ಯಾಸಿ, ಸುಬ್ರಹ್ಮಣ್ಯೇನ ಹಾಡುಗಳು ಆದಿತಾಳದಲ್ಲಿ ಹೊರಹೊಮ್ಮಿದವು. ಶ್ರೀ ಕಾಂತೀಮತಿಮ್ ಪದ್ಯವು ಹೇಮಾವತಿರಾಗ, ಆದಿತಾಳದಲ್ಲಿ ಮೂಡಿಬಂದಿತ್ತು. ಕೊನೆಗೆ ಮಿಶ್ರಪೀಲು ರಾಗ ಮತ್ತು ಮಿಶ್ರಛಾಪು ತಾಳದಲ್ಲಿ ರಾಘವಂಕರುಣಾಕರಂ ಗೀತೆಯು ಕಲಾಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಅನೀಶ್ ವಿ ಭಟ್ ಶಾಸ್ತ್ರೀಯ ಸಂಗೀತದ ಸದ್ಯದ ಸ್ಥಾನಮಾನದ ಕುರಿತು ವಿಚಾರಗಳನ್ನು ಹಂಚಿಕೊಂಡರು. ಈಗಿನ ದಿನಗಳಲ್ಲಿ ಉತ್ತರ ಭಾರತದ ಸಂಗೀತ ಪ್ರಕಾರಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಆದರೆ ದಕ್ಷಿಣ ಭಾರತದ ಸಂಗೀತ ಪ್ರಕಾರಗಳಿಗೆ ಅದೇ ಬಗೆಯ ಆದ್ಯತೆ ಇಲ್ಲ. ಕರ್ನಾಟಕದಲ್ಲಿಯೂ ಕರ್ನಾಟಕ ಶಾಸ್ತೀಯ ಸಂಗೀತಕ್ಕೆ ಅವಕಾಶಗಳು ಕಡಿಮೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೆಳಗಾವಿಯಲ್ಲಿ ಜರುಗುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಭಾಗಿಯಾಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಮೀನುಗಾರರ ನಿಯೋಗದೊಂದಿಗೆ ಭೇಟಿ ಮಾಡಿ ಕರಾವಳಿ ಜಿಲ್ಲೆಗಳ ಮೀನುಗಾರರ ಸಮಸ್ಯೆ ಪರಿಹಾರಕ್ಕೆ ನೆರವಾಗುವಂತೆ ಮನವಿ ಮಾಡಿಕೊಂಡರು. ಈ ವೇಳೆ ಗಂಗೊಳ್ಳಿ ನಾಡ ದೋಣಿ ವಲಯ ಸಂಘಟನೆಯ ಅಧ್ಯಕ್ಷರಾದ ಯಶವಂತ್ ಖಾರ್ವಿ, ಮೀನುಗಾರ ಮುಖಂಡರಾದ ಗೋಪಾಲ್ ಖಾರ್ವಿ, ಹರೀಶ್ ಖಾರ್ವಿ, ಗಣಪತಿ ಖಾರ್ವಿ, ಮೊಗವೀರ ಸಮುದಾಯದ ಪ್ರಮುಖರಾದ ಹರೀಶ್ ತೋಳಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರವಿಂದ ಪೂಜಾರಿ ಪಡುಕೋಣೆ, ಮಂಜುನಾಥ ಪೂಜಾರಿ ಮುಂತಾದವರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಕಲಿಕೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿರಬೇಕು. ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಕ್ಕಳ ಹಾಗೂ ಶಾಲೆಯ ಆಗುಹೋಗುಗಳ ಬಗ್ಗೆ ಶಾಲೆಯ ಶಿಕ್ಷಕರೊಂದಿಗೆ ಚರ್ಚೆ ನಡೆಸುವುದರ ಜೊತೆಗೆ ತಮ್ಮಿಂದಾಗುವ ಸಹಕಾರ ಶಾಲೆಗೆ ನೀಡಬೇಕು. ಕಳೆದ ಹಲವಾರು ವರ್ಷಗಳಿಂದ ವಿದ್ಯಾಭ್ಯಾಸದ ಸಾಧನೆ ಮೂಲಕ ಗುರುತಿಸಿಕೊಂಡಿರುವ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಶಾಲೆ ಅದ್ಭುತ ಪ್ರಗತಿ ಸಾಧಿಸಿದೆ ಎಂದು ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಯೋಗ ನರಸಿಂಹ ಸ್ವಾಮಿ ಕೆ.ಎಂ. ಹೇಳಿದರು. ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸ್ಟೆಲ್ಲಾ ಮಾರಿಸ್ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಭಗಿನಿ ಡಯಾನ ಎ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಖಾರ್ವಿ, ಸ್ಟೆಲ್ಲಾ ಮಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ಡೋರಿನ್, ಸ್ಟೆಲ್ಲಾ ಮಾರೀಸ್ ಪ್ರಿ-ಪ್ರಿಪರೇಟರಿ ಶಾಲೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಸಹಜ ನಟನೆ ಹಾಗೂ ಹಾಸ್ಯದ ಮೂಲಕ ಜೀವನ ಪಾಠಗಳನ್ನು ಜನರಿಗೆ ತಲುಪುವುದು ಒಂದು ಅಧ್ಬುತ ಕಲೆ. ಹೀಗೆ ವಿಭಿನ್ನ ಪಾತ್ರಗಳೊಂದಿಗೆ ಒಂದೂವರೆ ಗಂಟೆಗಳ ಕಾಲ ಪ್ರೇಕ್ಷಕರು ಒಂದಿಷ್ಟೂ ಕದಲದಂತೆ ಸೆಳೆದದ್ದು ಫ್ರೆಂಡ್ಸ್ ಮಂಗಳೂರು ಮತ್ತು ಪ್ರಶಂಸಾ ಕಾಪು ತಂಡದ ’ತುಳುಹಾಸ್ಯ’ ಕಾರ್ಯಕ್ರಮ. ಮೂಡಬಿದ್ರೆಯ ಆಳ್ವಾಸ್ ಆವರಣದ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ೨೦೨೨ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ ಮೊದಲ ದಿನದಂದು ಕೃಷಿಸಿರಿ ವೇದಿಕೆಯಲ್ಲಿ ನಡೆದ ’ತುಳುಹಾಸ’ ಕಾರ್ಯಕ್ರಮ ನೆರೆದ ಜನ ಸಮೂಹವನ್ನು ನಗುವಿನ ಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು. ಬಾಯಿ ತುಂಬ ನಗಬೇಕು ಎಂಬ ಹಾಡಿನೊಂದಿಗೆ ಉತ್ತಮ ಆರಂಭವನ್ನು ನೀಡಿದ ಪ್ರಶಂಸಾ ಕಾಪು ತಂಡದಲ್ಲಿ ಕಲಾವಿದರ ಪರದೆಯ ಹಿಂದಿನ ನಿಜವಾದ ಪರಿಶ್ರಮದ ವಿಚಾರ ಅಡಕವಾಗಿತ್ತು. ಮಕ್ಕಳಿಗೆ ಸೋಲನ್ನು ಎದುರಿಸಲು ಕಲಿಸಬೇಕು, ಅದುವೇ ಗೆಲುವಿನ ಹಾದಿಯೆಂಬ ಉತ್ತಮ ಸಂದೇಶವನ್ನು ನೀಡಿದವರು ಫ್ರೆಂಡ್ಸ್ ಮಂಗಳೂರು ತಂಡದ ಕಲಾವಿದರು. ಕಲಾ ತಂಡವನ್ನು ಮುನ್ನಡೆಸುವ ನಾಯಕನಿಗೆ ಇತರೆ…
