ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ದೇವಸ್ಥಾನಗಳನ್ನು ಶೀಘ್ರ ತೆರೆಯಬೇಕು ಎಂಬ ಯೋಚನೆ ಇದ್ದರೂ ‘ಎ’ ದರ್ಜೆಯ ದೇವಸ್ಥಾನಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡುವುದರಿಂದ ಸಾಮಾಜಿಕ ಅಂತರದ ತೊಂದರೆ ಎದುರಾಗುವುದರಿಂದ, ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಶನಿವಾರ ಕೊಲ್ಲೂರಿನಲ್ಲಿ ಯಕ್ಷಗಾನ ಕಲಾವಿದರಿಗೆ ಆಹಾರ ಕಿಟ್ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿ ದೇವಸ್ಥಾನಗಳಲ್ಲಿ ತ್ರಿಕಾಲ ಪೂಜೆಯೂ ಸೇರಿದಂತೆ ಎಲ್ಲಾ ಪೂಜೆಗಳು ನಡೆಯುತ್ತಿದೆ. ಆದರೆ ತೆರೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಮಸ್ಯೆ ಇದೆ ಎಂದರು. ರಾಜ್ಯದ ಎ ದರ್ಜೆ ದೇವಾಲಯಗಳಿಂದ ಈವರೆಗೆ ಕೋರೋನ ಕಾರಣದಿಂದ ಸಂತ್ರಸ್ಥರಾಗಿರುವವರಿಗೆ ಇಲ್ಲಿಯ ತನಕ 7.5 ಲಕ್ಷ ಊಟ ವಿತರಿಸಲಾಗಿದೆ. ದೇವಸ್ಥಾಗಳಲ್ಲಿ ಪೂಜೆ ಪುರಸ್ಕಾರಗಳಿದ್ದರೂ, ಅರ್ಚಕರಿಗೆ ತಟ್ಟೆಕಾಸಿಲ್ಲದಿರುವುದರಿಂದ ಅರ್ಚಕರಿಗೆ ಕಿಟ್ ವಿತರಿಸಲಾಗುತ್ತಿದೆ. ಜಿಲ್ಲಾಡಳಿತ ಮೂಲಕವೂ ಅಗತ್ಯವುಳ್ಳವರಿಗೆ ಮುಜರಾಯಿ ಇಲಾಖಾ ದೇವಸ್ಥಾಗಳ ಆಹಾರ ಕಿಟ್ ವಿತರಿಸಲಾಗಿದೆ. ಈಗ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಚಿಕ್ಕಮಂಗಳೂರು, ಶಿವಮೊಗ್ಗ ಜಿಲ್ಲೆಯ ಯಕ್ಷಗಾನ ಕಲಾವಿದರು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋವಿಡ್-19 ರೋಗವು ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್ ಮಸಾಲ, ಜರ್ದಾ, ಖೈನಿ, ಇತ್ಯಾದಿ ಬಳಕೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದು ಜೊತೆಗೆ ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ, ನ್ಯುಮೋನಿಯ ಮತ್ತು ಕೋವಿಡ್-19 ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡಲು ಕಾರಣವಾಗಬಹುದು. ಬೀಡಿ, ಸಿಗರೇಟ್ ಸೇದುವುದರಿಂದ ಕೈಯಿಂದ ಬಾಯಿಗೆ ವೈರಸ್ಗಳು ಮಾನವನ ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಹಾಗೂ ದೇಹದ ಇತರೆ ಭಾಗಗಳಿಗೆ ಸೋಂಕು ಹರಡಿ ಶ್ವಾಸಕೋಶ, ಹೃದಯ ಸಂಬಂಧಿತ ಕಾಯಿಲೆಗಳು ಬರಬಹುದು. ಕೋವಿಡ್-19 ಸೋಂಕಿತರು , ಜಗಿಯುವ ಪಾನ್ಮಸಾಲ, ತಂಬಾಕು ಹಾಗೂ ತಂಬಾಕು ಉತ್ಪನ್ನಗಳನ್ನು ಬಳಸಿ ಉಗುಳುವುದರಿಂದ ಒಬ್ಬರಿಂದ ಇನ್ನೊಬ್ಬರಿಗೆ ಕೋವಿಡ್-19 ವೈರಸ್ ಹರಡುವ ಭೀತಿ ಇರುತ್ತದೆ. ಆದ್ದರಿಂದ ಸಾರ್ವಜನಿಕರ ಆರೋಗ್ಯ ಹಿತ ದೃಷ್ಟಿಯಿಂದ ಮುಂದಿನ ಆದೇಶದವರೆಗೂ ತಂಬಾಕು ಹಾಗೂ ಪಾನ್ ಮಸಾಲ, ಜರ್ದಾ, ಖೈನಿ, ಉತ್ಪನ್ನಗಳನ್ನು, ಉಡುಪಿ ಜಿಲ್ಲೆಯಾದ್ಯಂತ ಅಂಗಡಿಗಳಲ್ಲಿ ಮಾರಾಟ ಮಾಡುವುದು ಮತ್ತು ಸಾರ್ವಜನಿಕರು ಬಳಸುವುದನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕಶ್ವಿ ಚೆಸ್ ಸ್ಕೂಲ್ ಲಾಕ್ಡೌನ್ ಸಮಯದಲ್ಲಿ ವಿನೂತನ ಪ್ರಯೋಗವಾಗಿ ಚೆಸ್ ವಿಧ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಚೆಸ್ ಪಂದ್ಯಾಟವನ್ನು ಮೇ 15ರಿಂದ ಆಯೋಜಿಸಿದೆ. ಈಗಾಗಲೇ ಕಶ್ವಿ ಚೆಸ್ ಸ್ಕೂಲ್ನ ವಿಧ್ಯಾರ್ಥಿಗಳು ಈ ಪಂದ್ಯಾಟವನ್ನು ಪ್ರತಿನಿತ್ಯ ಆಟವಾಡುತ್ತಿದ್ದು ಅತ್ಯಂತ ಯಶಸ್ವಿಯಾಗಿದೆ. ಮನೆಯಲ್ಲಿಯೇ ಕುಳಿತು ಆಟವಾಡುವುದರಿಂದ ತಮ್ಮ ಸಮಯವನ್ನು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಿದೆ ಹಾಗೂ ಮುಂದೆ ನಡೆಯುವ ಚೆಸ್ ಪಂದ್ಯಾವಳಿಗೆ ಅನುಕೂಲವಾಗಲಿದೆ. ಇದರ ಮುಂದಿನ ಹಂತವಾಗಿ ಕುಂದಾಪುರ ತಾಲೂಕು ಪರಿಸರದ ಇತರ ಚೆಸ್ ವಿಧ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಪಂದ್ಯಾವಳಿಯ ಮಾಹಿತಿ ಇಲ್ಲಿದೆ. http://kashvichessschool.in/ ವೆಬ್ಸೈಟ್ನಲ್ಲಿರುವ https://lichess.org/tournament/ ಲಿಂಕ್ನ ಮೂಲಕ ಈ ಪಂದ್ಯಾಟವನ್ನು ಆಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7899969063 ದೂರವಾಣಿಯಲ್ಲಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಪ್ರತಿನಿತ್ಯ ಸಂಜೆ 5 ರಿಂದ 6 ಗಂಟೆಯವರೆಗೆ ಈ ಪಂದ್ಯಾವಳಿ ನಡೆಯಲಿದ್ದು ಎಂದು ಕಶ್ವಿ ಚೆಸ್ ಸ್ಕೂಲ್ನ ಸ್ಥಾಪಕ ನರೇಶ್ ಬಿ. ಮಾಹಿತಿ ನೀಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ಹರಡುವಿಕೆ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ, ಆರೋಗ್ಯ & ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನಾರ್ಹ. ಅವರ ಪರಿಶ್ರಮದಿಂದಾಗಿ ಉಡುಪಿ ಜಿಲ್ಲೆ ಕೊರೋನಾ ನಿಯಂತ್ರಣದಲ್ಲಿದ್ದು, ಇದು ಹಾಗೇಯೇ ಮುಂದುವರಿಯಲು ನಾಗರಿಕರು ಸಹಕರಿಸಬೇಕಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಕಟ್ಬೆಲ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಅಧಿಕಾರಿಗಳು ಕೈಗೊಂಡ ಕಟ್ಟುನಿಟ್ಟಿನ ಕ್ರಮದಿಂದಾಗಿ ಉಡುಪಿ ಗ್ರೀನ್ಝೋನ್ನಲ್ಲಿದೆ. ಉದ್ಯೋಗ ನಿಮಿತ್ತ ಬೇರೆ ಬೇರೆ ರಾಜ್ಯ ಹಾಗೂ ದೇಶಗಳಲ್ಲಿ ನೆಲೆಸಿರುವ ಯುವಕರು ಊರಿಗೆ ಬರಲು ಅವಕಾಶ ಮಾಡಿಕೊಡುವುದು ಸರಕಾರದ ಜವಾಬ್ದಾರಿಯಾಗಿದ್ದು, ಅವರಿಗೆ ಕ್ವಾರಂಟೈನ್ ಮಾಡುವ ಪ್ರದೇಶದಲ್ಲಿಯೂ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಹೊರ ರಾಜ್ಯ ಹಾಗೂ ದೇಶಗಳಿಂದ ಬರುವವರು ಕೂಡ ಮನೆಯ ಹಿರಿಯರು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕ್ವಾರಂಟೈನ್ಗೆ ಒಳಪಟ್ಟು ಆ ಬಳಿಕವಷ್ಟೇ ಮನೆಗಳಿಗೆ ತೆರಳುವುದು ಸೂಕ್ತ ಎಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ದೇಶದಲ್ಲಿ ಉದ್ಯಮಗಳು ತೀವ್ರ ಸಂಕಷ್ಟದಲ್ಲಿದೆ. ರಾಜ್ಯದ ಹೋಟೆಲ್ ಉದ್ಯಮ ಸ್ಥಿತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೊರ ದೇಶ ಹಾಗೂ ರಾಜ್ಯಗಳಿಂದ ಬರುತ್ತಿರುವ ಜನರಿಗೆ ಕ್ವಾರಂಟೈನ್ ಒಳಪಡಿಸಲು ಮತ್ತು ಅವರಿಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನೆರವು ನೀಡುವುದಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಿಳಿಸಿದ್ದಾರೆ. ಅವರು ಶುಕ್ರವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರ ಕ್ವಾರಂಟೈನ್ ನಿರ್ವಹಣೆಯ ಬಗ್ಗೆ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿ ಕ್ವಾರಂಟೈನ್ ಮಾಡುವ ಪ್ರದೇಶದಲ್ಲಿ ಮೂಲಭೂತ ಸೌಕರ್ಯ, ಉಟೋಪಚಾರ ವ್ಯವಸ್ಥೆಯ ಹಾಗೂ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಎಂದಿದ್ದಾರೆ. ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಹೊರಗಿನಿಂದ ಬರುವವರಿಗೆ ಕ್ವಾರಂಟೈನ್ ಮಾಡಲು ಕೊಲ್ಲೂರಿನಲ್ಲಿ ಸಾಕಷ್ಟು ಸ್ಥಳಾವಕಾಶವಿದೆ. ಅವರೆಲ್ಲರಿಗೂ ಸರಿಯಾದ ಸೌಕರ್ಯ ದೊರೆಯುವಂತೆ ಮಾಡುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಿ ಎಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕ್ವಾರಂಟೈನ್ ಬಗ್ಗೆ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ ವಿವರಿಸಿ, 1500ಕ್ಕೂ ಹೆಚ್ಚು ಜನ ಹೊರರಾಜ್ಯಗಳಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಗಡಿ ಭಾಗವಾದ ಶಿರೂರು ಚೆಕ್ಪೋಸ್ಟ್ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಪ್ಯಾಸೆಂಜರ್ ಹಾಗೂ ಗೂಡ್ಸ್ ವಾಹನಗಳ ಚಾಲಕ ಹಾಗೂ ಸಹಪ್ರಯಾಣಿಕರಿಗೆ ಥರ್ಮ್ಲ್ ಸ್ಕ್ರೀನಿಂಗ್ ಮಾಡಿ, ಜಿಲ್ಲೆಯ ಗಡಿಯೊಳಕ್ಕೆ ಬಿಡಲಾಗುತ್ತಿದೆ. ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಒಳಹಾದಿಯ ಮೂಲಕ ಜನರು ಬರುತ್ತಿದ್ದ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎಲ್ಲಾ ಒಳದಾರಿಗಳನ್ನು ಬಂದ್ ಮಾಡಿಸಲಾಗಿದೆ. ಹೊರರಾಜ್ಯದಿಂದ ಜಿಲ್ಲೆಗೆ ಆಗಮಿಸುವ ಜನರಿಗೆ ಕಡ್ಡಾಯವಾಗಿ ಸರಕಾರಿ ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ. ಹೊರಜಿಲ್ಲೆಯಿಂದ ಬರುವವರಿಗೆ ಸೀಲ್ ಹಾಕಬಾರದೆಂದು ಸರಕಾರ ಆದೇಶಿಸಿರುವುದರಿಂದ ಪಾಸ್ ಪಡೆದು ಬರುವವರನ್ನು ಸ್ಕ್ರೀನಿಂಗ್ ಮಾಡಿ ಬಿಡಲಾಗುತ್ತಿದೆ. ಸದ್ಯ ಆವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿಲ್ಲ. ಉಡುಪಿ ಜಿಲ್ಲೆ ಈಗಾಗಲೇ ಗ್ರೀನ್ ಝೋನ್ನಲ್ಲಿದ್ದು, ಮುಂದೆಯೂ ಇದನ್ನು ಕಾಪಾಡಿಕೊಂಡು ಹೋಗಲು ಜನರೇ ಎಚ್ಚರಿಕೆ ವಹಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಸುರಕ್ಷತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಗೆ ವಿದೇಶಗಳಿಂದ ಮತ್ತು ಹೊರಾಜ್ಯದಿಂದ ಬರುವವರ ಕ್ವಾರಂಟೈನ್ ಗೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಕ್ವಾರಂಟೈನ್ ಗಾಗಿ ಜಿಲ್ಲೆಯ ಖಾಸಗಿ ಶಾಲಾ ಮತ್ತು ಕಾಲೇಜುಗಳ ತಮ್ಮ ವ್ಯಾಪ್ತಿಯ ಕಟ್ಟಡಗಳು ಮತ್ತು ಹಾಸ್ಟೆಲ್ ಗಳನ್ನು ಜಿಲ್ಲಾಡಳಿತ ಕೋರಿದ ಕೂಡಲೇ ಬಿಟ್ಟುಕೊಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶುಕ್ರವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ ಮುಖ್ಯೋಪಧ್ಯಾಯರುಗಳ, ವಸತಿ ಶಾಲೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದುವರೆಗೂ ಕೋವಿಡ್-19 ವಿರುದ್ದ ಹೋರಾಟದಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಮುಂದೆ ವಿದೇಶದಿಂದ ಮತ್ತು ಹೊರರಾಜ್ಯದಿಂದ ಆಗಮಿಸುವ ಜಿಲ್ಲೆಯ ಜನರಿಂದ , ಪ್ರಸ್ತುತ ಜಿಲ್ಲೆಯಲ್ಲಿನ ನಾಗರೀಕರನ್ನು ಕೋವಿಡ್ ನಿಂದ ರಕ್ಷಿಸುವುದು ಅತ್ಯಂತ ಸವಾಲಿನ ಕೆಲಸ, ಇದಕ್ಕಾಗಿ ವಿದೇಶದಿಂದ ಮತ್ತು ಹೊರರಾಜ್ಯದಿಂದ ಬರುವವರನ್ನು ಕ್ವಾರಂಟೈನ್ ಗೊಳಿಸಬೇಕಾಗಿದ್ದು, ಇದಕ್ಕಾಗಿ ಜಿಲ್ಲೆಯ ಸರಕಾರಿ ಹಾಸ್ಟೆಲ್ ಗಳು, ಖಾಸಗಿ ಹಾಸ್ಟಲ್ ಗಳು ಮತ್ತು ಶಾಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಮುಂಬಯಿಯಲ್ಲಿ ನೆಲೆಸಿರುವ ಕರಾವಳಿಗರು ತಮ್ಮ ಊರಿಗೆ ಮರಳಲು ಉಡುಪಿ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದ್ದು, ಸೇವಾಸಿಂಧುವಿನ ಮೂಲಕ ಅರ್ಜಿ ಸಲ್ಲಿಸಿ, ಪಾಸ್ ಪಡೆದು ಊರಿನಲ್ಲಿ ಕ್ವಾರಂಟೈನ್ಗೆ ಒಳಪಡುವವರಿಗೆ ಮಾತ್ರ ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಸದೆ ಶೋಭಾ ಕರಂದ್ಲಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ವಿಶೇಷ ಚರ್ಚೆ ನಡೆದು ಮುಂಬಯಿಯಿಂದ ಆಗಮಿಸುವವರಿಗೆ ಷರತ್ತುಬದ್ಧ ಅನುಮತಿ ನೀಡಲು ಸಭೆ ನಿರ್ಧರಿಸಿತು. ಇವರು ಮೊದಲು 14 ದಿನ ಶಾಲೆ, ಕಾಲೇಜು, ಹಾಸ್ಟೆಲ್ಗಳಲ್ಲಿ (ಇಸ್ಟಿಟ್ಯೂಷನಲ್ ಕ್ವಾರಂಟೈನ್) ಕ್ವಾರಂಟೈನ್ನಲ್ಲಿರಬೇಕು, ಬಳಿಕ 14 ದಿನ ಹೋಮ್ ಕ್ವಾರಂಟೈನ್ನಲ್ಲಿರಬೇಕು. ಶಾಲೆ ಕಾಲೇಜುಗಳಲ್ಲಿ ಉಳಿದುಕೊಳ್ಳಲು ಕಷ್ಟ ಎನ್ನುವವರು ಹಣ ಪಾವತಿಸಿ ಹೊಟೇಲ್ ಲಾಡ್ಜ್ ಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ. ಹೊರ ರಾಜ್ಯಗಳಲ್ಲಿರುವ ಉಡುಪಿ ಜಿಲ್ಲೆಯವರು ಸೇವಾಸಿಂಧು ವೆಬ್ ಸೈಟ್ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆದು ಖಾಸಗಿ ವಾಹನಗಳ ಮೂಲಕ ಜಿಲ್ಲೆ ಪ್ರವೇಶಿಸಬೇಕು. ಗಡಿ ಪ್ರವೇಶಿಸಿದ ನಂತರ…
ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು, ಮೇ.7: ವಾರದ ಹಿಂದೆ ಬೈಂದೂರು ಭಾಗದ ನಾಗರಿಕರಲ್ಲಿ ಭಾರಿ ಆತಂಕ ಸೃಷ್ಟಿಸಿದ್ದ ‘ಕೋರೋನಾ ಪಾಸಿಟಿವ್’ ಎಂಬ ಸುಳ್ಳುಸುದ್ದಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರೆತಿದೆ. ಮೇ.1ರ ರಾತ್ರಿ ಬೈಂದೂರು ತಾಲೂಕಿನ ಕಳವಾಡಿಗೆ ಬಂದಿದ್ದ ವ್ಯಕ್ತಿಯೋರ್ವನಿಗೆ ಬೆಳಗಾವಿಯಲ್ಲಿ ಮಾಡಲಾಗಿದ್ದ ಕೋರೋನಾ ಟೆಸ್ಟ್ ವರದಿ ನೆಗೆಟಿವ್ ಬಂದಿರುವುದು ಮೇ.2ರಂದು ಖಚಿತವಾಗಿತ್ತು. ಅಷ್ಟರಲ್ಲಾಗಲೇ ಆ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಇರುವ ವದಂತಿ ಹರಿದಾಡಿದ್ದರಿಂದ ಉಡುಪಿಯಿಂದಲೂ ಪರೀಕ್ಷೆಗೆ ಕಳುಹಿಸಲಾಗಿದ್ದ ಕೋರೋನಾ ಟೆಸ್ಟ್ ವರದಿ ನಿನ್ನೆ ದೊರಕಿದ್ದು, ಅದರಲ್ಲಿಯೂ ಆತನಿಗೆಕೊರೋನಾ ನೆಗೆಟಿವ್ ಇರುವುದು ಖಾತ್ರಿಯಾಗಿದೆ. ಬೆಳಗಾವಿಯ ಕಾನಾಪುರದಿಂದ ಬೈಂದೂರು ಕಳವಾಡಿಯ ಬಂದಿದ್ದ ವ್ಯಕ್ತಿಯೋರ್ವರಿಗೆ, ಬೆಳಗಾವಿಯ ಆಸ್ಪತ್ರೆಯಲ್ಲಿ ಕೋರೋನಾ ಟೆಸ್ಟಿಂಗ್ ವರದಿ ಅಪ್ಡೇಟ್ ಮಾಡುವ ಸಂದರ್ಭ ಆಗಿದ್ದ ಯಡವಟ್ಟಿನಿಂದಾಗಿ ಆರೋಗ್ಯ ಸೇತು ಆ್ಯಪ್ ಕೊರೋನಾ ಪಾಸಿಟಿವ್ ಇದೆ ಎಂದು ತೋರಿಸಿತ್ತು ಎನ್ನಲಾಗಿದೆ. ಅದರ ಆಧಾರದ ಮೇಲೆ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯನ್ನು ಕೂಡಲೇ ಆಂಬುಲೆನ್ಸ್ ಮೂಲಕ ಕುಂದಾಪುರದ ಐಸೋಲೇಶನ್ ವಾರ್ಡ್ ಕರೆದೊಯ್ದು ಆತನ ಗಂಟಲು ದ್ರವವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ತೆರವು ಇರುವ ೫ ವೈದ್ಯಾಧಿಕಾರಿ ಹುದ್ದೆಗೆ ಎಂ.ಬಿ.ಬಿ.ಎಸ್ ವಿದ್ಯಾರ್ಹತೆಯ ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿಯವರನ್ನು, ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಅಥವಾ ನೇರ ನೇಮಕಾತಿ ಆಗುವವರೆಗೆ/ಖಾಯಂ ವೈದ್ಯರು ವರ್ಗಾವಣೆಯಿಂದ ಹುದ್ದೆ ಭರ್ತಿಯಾದಲ್ಲಿ (ಯಾವುದು ಮೊದಲೂ ಅಲ್ಲಿಯವರೆಗೆ) ನೇಮಕಾತಿ ಮಾಡಲು ಎಂ.ಬಿ.ಬಿ.ಎಸ್ ವಿದ್ಯಾರ್ಹತೆ ಹೊಂದಿರುವ ವೈದ್ಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿ, ಅಜ್ಜರಕಾಡು, ಜಿಲ್ಲಾಸ್ಪತ್ರೆ ಆವರಣ, ಉಡುಪಿ ಇಲ್ಲಿಂದ ಪಡೆಯಬಹುದಾಗಿದೆ. ಅಜಿ ಸಲ್ಲಿಸಲು ಮೇ 21ರ ಸಂಜೆ 5 ಗಂಟೆಯ ಕೊನೆಯ ದಿನಾಂಕವಾಗಿದ್ದು, ಸಂದರ್ಶನ ದಿನಾಂಕದಂದು ಖಾಲಿ ಇರುವ ಹುದ್ದೆಗಳಿಗೆ ಮಾತ್ರ ನೇಮಕಾತಿ ಮಾಡಲಾಗುವುದು. ನೇಮಕಾತಿಗೆ ಸಂಬಂದಿಸಿದ ಮಾಹಿತಿಯನ್ನು , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಉಡುಪಿ ಜಿಲ್ಲೆ ದೂ.ಸಂ.0820-2536650ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
