Author: ನ್ಯೂಸ್ ಬ್ಯೂರೋ

ಕುಂದಾಪುರ: ಇಲ್ಲಿನ ನೂತನ ಉಪವಿಭಾಗಾಧಿಕಾರಿಯಾಗಿ ಅಶ್ವಥಿ ಎಸ್. ನಗರದ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಕುಂದಾಪುರ ದಿಂದ ಬೇರೆ ಕಡೆ ವರ್ಗಾವಣೆಗೊಂಡ ಅಸಿಸ್ಟೆಂಟ್ ಕಮೀಷನರ್ ಚಾರುಲತಾ ಸೋಮಲ್ ಅವರ ಅಶ್ವಥಿ ಅವರಿಗೆ ಅಧಿಕಾರ ಹಸ್ತಾಂತರಿಸಿರು. ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೇರಳ ಮೂಲದ ಅಶ್ವಥಿ ಎಸ್. ಅವರು ಹಿಂದೆ ಮೈಸೂರು ನಂತರ ದೆಹಲಿಯಲ್ಲಿ ಕೆಲಸ ನಿರ್ವಹಿಸಿ ಕುಂದಾಪುರ ಎಸಿಯಾಗಿ ನಿಯುಕ್ತಿಗೊಂಡಿದ್ದರೆ.

Read More

ಕುಂದಾಪುರ: ಬಸ್ರೂರು ಶ್ರೀ ಕಾಶೀ ಮಠದಲ್ಲಿ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ 129ನೇ ಪುಣ್ಯ ತಿಥಿ ಮಹೋತ್ಸವ ಕಾಶೀ ಮಠಾದೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು. ಈ ಸಂದರ್ಭ ಶತಕಲಶಾಭೀಷೇಕ, ಸಾನಿದ್ಯ ಹವನ,ಲಘು ವಿಷ್ಣು ಹವನ,ವಾಯುಸ್ತುತಿ ಪ್ರದಕ್ಷಿಣ ನಮಸ್ಕಾರ ಮುಂತಾದ ಧಾರ್ಮಿಕ ವಿದಿ ವಿಧಾನಗಳನ್ನು ವೇ.ಮೂ ದಾಮೋದರ ಆಚಾರ್ಯ,ಬಸ್ರೂರು ಇವರ ನೇತೃತ್ವದಲ್ಲಿ ನಡೆದವು. ಶ್ರೀಮತ್ ಕೇಶವೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಬೃಂದಾವನ ಮತ್ತು ಶಾಖಾ ಮಠದ ಸುಂದರೀಕರಣ ಕಾರ್ಯವನ್ನು ಶ್ರೀ ದೇವರಿಗೆ ಅರ್ಪಿಸಲಾಯಿತು. ಸಂಜೆ ನಗರೋತ್ಸವ ನಡೆಯಿತು. ರಾತ್ರಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನದಲ್ಲಿ ಗುಣ ಗಾನದ ಅಗತ್ಯತೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಶಿಷ್ಯ ಕೋಟಿಗೆ ಗುರುವಿನ ಸ್ಮರಣೆ ಆದ್ಯ ಕರ್ತವ್ಯವಾಗಿದ್ದು, ಜೀವನದಲ್ಲಿ ಸಮಸ್ತ ಅಭಿವೃದ್ದಿಗೆ ಹಾಗೂ ಜ್ಞಾನ ಸಂಪಾದನೆಗೆ ಗುರುಸ್ಮರಣೆಯೇ ದಾರಿ. ಶ್ರೀಮತ್ ಭುವನೇಂದ್ರ ತೀರ್ಥತು ಶ್ರೀ ಧನ್ವಂತರಿಯ…

Read More

ಕುಂದಾಪುರ: ಮೈಸೂರಿನ ಕರ್ನಾಟಕ ಕಲಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಪಾಡಿಯ ರೋಷನ್ ಭಾಸ್ಕರ್ ಪೂಜಾರಿಯವರು 2015-16ನೇ ಸಾಲಿನಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡುವ ಕನ್ನಡ ಮಾಧ್ಯಮ ಪ್ರಶಸ್ತಿಯನ್ನು ಸ್ವೀಕರಿಸಿದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹಿನ್ನಲೆಯಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದರು. ಈತ ಉದ್ಯಮಿ ಭಾಸ್ಕರ ಗುಲ್ವಾಡಿ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಕಲ್ಪನಾ ಭಾಸ್ಕರ್ ಅವರ ಪುತ್ರ.

Read More

ಬೈಂದೂರು: ಆಚಾರ್ಯ ಶಂಕರ ಭಗವತ್ಪಾದರು ಪ್ಲೇಟೋ, ಐನ್‌ಸ್ಟೇನ್‌ರಂತೆ ವಿಶ್ವದ ಶ್ರೇಷ್ಠ ದಾರ್ಶನಿಕರು. ಇವರ ವಿಚಾರಧಾರೆಗಳು ದೇಶ, ಕಾಲ ಪರಿಧಿಯನ್ನು ಮೀರಿ ಪರಮ ಸತ್ಯದ ಅನ್ವೇಷಣೆ ಮತ್ತು ಅನುಭವಕ್ಕೆ ತಕ್ಕುದಾದುದು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು. ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ಶೃಂಗೇರಿಯ ಶಾಂಕರ ತತ್ತ್ವ ಪ್ರಸಾರ ಅಭಿಯಾನಂ ಶೃಂಗೇರಿ ಇವರು ಆಯೋಜಿಸಿದ ಶ್ರೀಶಂಕರ ಅಷ್ಟೋತ್ತರ ಶತಮಾನ ಜಪ ಯಜ್ಞವನ್ನು ತಾಲೂಕಿನಾದ್ಯಂತ ನಡೆಸುವ ಸಂಕಲ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿಶ್ವಾದ್ಯಂತ ಭಾರತ ದೇಶವು ಹಿಂಜರಿಕೆ ಮತ್ತು ಕ್ಲ್ಯಷ್ಟಗಳಿಂದ ಮುಕ್ತವಾಗಿ ಮುನ್ನುಗುತ್ತಿರುವ ಈ ದಿನಗಳಲ್ಲಿ ಆಚಾರ್ಯರು ಪ್ರತಿಪಾದಿಸಿದ ಒಂದು ಸತ್ಯ ಒಂದು ರಾಷ್ಟ್ರ. ಆದರೆ ಅನೇಕ ರೂಪುಗಳು, ಭಾವಗಳು ಎಂಬುವುದರಿಂದ ಸ್ಪೂರ್ತಿ ಪಡೆಯಬಹುದು. ಯಾವುದೇ ವಿಚಾರ ನಿಂತ ನೀರಾಗದೆ ಕಾಲಗತಿಯಲ್ಲಿ ಪರಂಪರೆಯಿಂದ ಪುಷ್ಠಿ ಪಡೆಯುವುದು. ಇಲ್ಲಿ ವ್ಯಕ್ತಿ ಮುಖ್ಯವಾಗದೆ ತತ್ತ್ವವೂ ಪ್ರಸ್ತುತವಾಗುತ್ತದೆ ಎಂದರು. ಸಮಿತಿ ಗೌರವಾಧ್ಯಕ್ಷ ಬಿ.ರಾಮಕೃಷ್ಣ ಶೇರೆಗಾರ್ ಅಧ್ಯಕ್ಷತೆವಹಿಸಿದ್ದರು. ಯು. ಅಭಯ ಮಯ್ಯ…

Read More

ಕುಂದಾಪುರ: ಪುತ್ತೂರಿನಲ್ಲಿ ನಡೆದ ರೋಟರಿ 3180 ಇದರ ಜಿಲ್ಲಾ ಕ್ರೀಡಾಕೂಟ ರೋಟಾ ಸ್ಫೋರ್ಟ್ಸ್‌ನಲ್ಲಿ ಭಾಗವಹಿಸಿದ ರೋಟರಿ ಕ್ಲಬ್ ಕುಂದಾಪುರ ೩೦ಕ್ಕೂ ಅಧಿಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ರೋಟೇರಿಯನ್ ವಿಭಾಗದಲ್ಲಿ ಕ್ರಿಕೆಟ್‌ನಲ್ಲಿ ಪ್ರಥಮ, ಹಗ್ಗ ಜಗ್ಗಾಟದಲ್ಲಿ ದ್ವಿತೀಯ, 100 ಮೀ ಓಟದಲ್ಲಿ ಮನೋಜ್ ನಾಯರ್ ದ್ವಿತೀಯ, ಡಿಸ್ಕಸ್ ತ್ರೋನಲ್ಲಿ ಕಿಶೋರ್ ಕೋಟ್ಯಾನ್ ತೃತೀಯ, ಸ್ಲೋ ಸೈಕಲ್ ರೇಸ್‌ನಲ್ಲಿ ಬಿ.ಕಿಶೋರ್‌ಕುಮಾರ್ ಕುಂದಾಪುರ ತೃತೀಯ ಸ್ಥಾನ ಪಡೆದರು. ಆನ್ಸ್ ವಿಭಾಗದಲ್ಲಿ ತ್ರೋಬಾಲ್ ದ್ವಿತೀಯ, ರೀಲೆಯಲ್ಲಿ ಪ್ರಥಮ, ಟೆನಿಕ್ವಾಟ್‌ನಲ್ಲಿ ಪ್ರಥಮ, 50 ಮೀ., 100 ಮೀ, 200 ಮೀ ಓಟದಲ್ಲಿ ನಯನ ಕಿಶೋರ್ ಕೋಟ್ಯಾನ್ ಪ್ರಥಮ, ಸ್ಟ್ಯಾಂಡಿಂಗ್ ಜಂಪ್, ಶಾಟ್‌ಪುಟ್‌ನಲ್ಲಿ ಗೀತಾಂಜಲಿ ಆರ್. ನಾಯ್ಕ್ ಪ್ರಥಮ, ೨೦೦ಮೀ ಓಟದಲ್ಲಿ ಸುರೇಖಾ ತೃತೀಯ, ಶಾಟ್ ಫುಟ್‌ನಲ್ಲಿ ಶಶಿರೇಖಾ ದ್ವಿತೀಯ,400 ಮೀ ವಾಕಿಂಗ್‌ನಲ್ಲಿ ಭಾರತಿ ಪ್ರಕಾಶ್ ಶೆಟ್ಟಿ ಪ್ರಥಮ, 50 ಮೀ ಓಟದಲ್ಲಿ ದ್ವಿತೀಯ, 100 ಮೀ.ನಲ್ಲಿ ತೃತೀಯ ಸ್ಥಾನ ಪಡೆದರು. ಅನೆಟ್ಸ್ ವಿಭಾಗದಲ್ಲಿ ರೀಲೆಯಲ್ಲಿ ತೃತೀಯ, ಬಾಲಕಿಯರ ಶಾಟ್‌ಪುಟ್‌ನಲ್ಲಿ ಪ್ರಥಮ,…

Read More

ಕೊಲ್ಲೂರು: ಎಲ್ಲಾ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಹಾಗೂ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕು ಎಂಬ ನೆಲೆಯಲ್ಲಿ ಸರಕಾರವು ಹಲವಾರು ಯೋಜನೆಗಳು, ಹೆಚ್ಚಿನ ಅನುದಾನ, ಪ್ರೇರಕ ವಿಷಯಗಳನ್ನು ಅಳವಡಿಸಿ ಕಾರ್ಯತಂತ್ರ ರೂಪಿಸಿದೆ. ಸಮಾಜದಲ್ಲಿ ಸಾಮರಸ್ಯದ ಬದುಕು ಕಾಣಬೇಕಾದರೆ ಶಿಕ್ಷಣದ ಅಗತ್ಯತೆಯಿದೆ ಎಂದು ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ ಹೇಳಿದರು. ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಆಂಗ್ಲ ಮಾಧ್ಯಮದ ಭರಾಟೆಯಿಂದ ಆಕರ್ಷಿತರಾಗಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರಿಗೆ ಕೀಳರಿಮೆ ಸಲ್ಲದು. ಮಾತೃಭಾಷೆ ಪ್ರಧಾನವಾಗಿದ್ದು, ವಿದ್ಯಾ ಸಂಸ್ಥೆಗಳಲ್ಲಿ ರೂಪುಗೊಂಡ ವಿದ್ಯಾರ್ಥಿಗಳನ್ನು ನಮ್ಮ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಅಲ್ಲದೇ ಸತ್ಯವನ್ನು ವಿಮರ್ಶೆ ಮಾಡುವ ಮನಸ್ಥಿತಿಯ ಮೂಲಕ ಮಕ್ಕಳು ಬೆಳೆಯಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಮತ್ತು ಪ್ರತೀ ತರಗತಿಯಲ್ಲಿ ಶೇ.೧೦೦ ಹಾಜರಾತಿ ಹೊಂದಿದ ವಿದ್ಯಾರ್ಥಿಗಳಗೆ ಬಹುಮಾನ ವಿತರಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.…

Read More

ಕುಂದಾಪುರ: ಇಲ್ಲಿನ ಚಿಕ್ಕನ್‌ಸಾಲು ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ ಸಡಗರದೊಂದಿಗೆ ನೆರವೇರಿತು. ದೇವಳದ ಪ್ರಧಾನ ಅರ್ಚಕ ಗಣಪತಿ ಸುವರ್ಣ, ಉತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ಹೇರಿಕುದ್ರು ಇನ್ನಿತರರು ಉಪಸ್ಥಿತರಿದ್ದರು

Read More

ಗಂಗೊಳ್ಳಿ: ವಿದ್ಯಾರ್ಥಿ ಜೀವನದ ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯ. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಹಾಗೂ ಸಮಯಪ್ರಜ್ಞೆ ಅವಶ್ಯಕ. ವಿದ್ಯಾರ್ಥಿಗಳು ಯಾವುದನ್ನು ಕಷ್ಟ ಎಂದು ತಿಳಿಯದೆ ಮನಸ್ಸಿಟ್ಟು ಅಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ನಾವು ಒಳ್ಳೆಯವರಾಗಿದ್ದರೆ ಕೆಟ್ಟವರು ಕೂಡ ನಮ್ಮಲ್ಲಿನ ಒಳ್ಳೆಯ ಗುಣಗಳಿಂದ ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಗಂಗೊಳ್ಳಿಯ ಎಂ.ಮಾಧವ ವಿ. ಪೈ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳು ಕಳೆದ ಏಳು ದಶಕಗಳಿಂದ ಗ್ರಾಮೀಣ ಪ್ರದೇಶದ ಸಹಸ್ರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಕಾರ್ಯವೈಖರಿ ಶ್ಲಾಘನೀಯ. ಉತ್ತಮ ಇತಿಹಾಸ ಹೊಂದಿರುವ ಗಂಗೊಳ್ಳಿಯ ಎಸ್.ವಿ.ವಿದ್ಯಾಸಂಸ್ಥೆಗಳು ಈ ಭಾಗದ ವಿದ್ಯಾರ್ಥಿಗಳ ಬಾಳಿನ ಆಶಾಕಿರಣವಾಗಿದೆ ಎಂದರು.…

Read More

ಬೈಂದೂರು: ಅಶಕ್ತರಿಗೆ, ಶೋಷಿತರಿಗೆ ನೀಡುವ ಆರ್ಥಿಕ ಸಹಕಾರ ಕೇವಲ ಅರ್ಹರಿಗೆ ಮಾತ್ರವಲ್ಲದೆ ಭಗವಂತನಿಗೂ ತಲುಪಲಿದೆ, ತನ್ಮೂಲಕ ಭಗವಂತನೂ ತೃಪ್ತಿಪಟ್ಟು ದಾನಿಯ ಕುಟುಂಬಕ್ಕೆ ಒಳಿತನ್ನು ಮಾಡಲಿದ್ದಾನೆ ಎಂದು ಶ್ರೀಮದ್ ಆನೆಗುಂದಿ ಸರಸ್ವತೀ ಪೀಠ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಹೇಳಿದರು. ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನ ರಂಗಪೂಜೆ, ದೀಪೋತ್ಸವದ ವಾರ್ಷಿಕ ಮಹಾಸಭೆ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಉಪ್ರಳ್ಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಡಾಕೆರೆ ಮಂಜುನಾಥ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಸದಾನಂದ ಮಂಜಯ್ಯ ಆಚಾರ್ಯ, ಮುಂಬಯಿಯ ಉದ್ಯಮಿ ಸುರೇಶ್ ಆಚಾರ್ಯ ಗೋಳಿಅಡಿ ಕೂರ್ಸಿ, ಕಂದಾಪುರ ತಾಲೂಕ್ ವಿಶ್ವಕರ್ಮ ಕಾರ್ಪೆಂಟರ‍್ಸ್ ಯೂನಿಯನ್ ಅಧ್ಯಕ್ಷ ಕೆ. ರುದ್ರಯ್ಯ ಆಚಾರ್ಯ, ಕುಂದಾಪುರ ತಾಲೂಕ್ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಶ್ರೀಧರ ಆಚಾರ್ಯ, ದೇವಸ್ಥಾನ 2ನೇ ಮೊಕ್ತೇಸರ ಬಾಬು ಆಚಾರ್ಯ, ೩ನೇ ಮೊಕ್ತೇಸರ ಚಿತ್ತೂರು ಪ್ರಭಾಕರ ಆಚಾರ್ಯ, ಆಡಳಿತ ಸಮಿತಿ ಸಲಹೆಗಾರರಾದ ಆತ್ರಾಡಿ ರುದ್ರಯ್ಯ ಆಚಾರ್ಯ, ಸಿ.ನಾರಾಯಣ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಳಿ…

Read More

ಕುಂದಾಪುರ : ದಾನಗಳಲ್ಲಿ ಅತೀ ಶ್ರೇಷ್ಠದಾನ ರಕ್ತದಾನ. ಒಬ್ಬನ ಜೀವ ಉಳಿಸುವಲ್ಲಿ ಸಹಾಯವಾಗುವ ಈ ದಾನ ದೇವರಿಗೂ ಪ್ರಿಯ. ಕುಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಅಶೋಕ್ ಬೆಟ್ಟಿನ್ ಹೇಳಿದರು. ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇದರ ಸುವರ್ಣ ಸಂಭ್ರಮದ ಅಂಗವಾಗಿ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಕುಂದಾಪುರ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ, ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆ ಹಕ್ಲಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಹಕ್ಲಾಡಿ ಕೆ.ಎಸ್.ಎಸ್. ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಬೃಹತ್ ರಕ್ತದಾನ ಶಿಬಿg ಉದ್ಘಾಟಿಸಿ ಅವರು ಮಾತನಾಡಿದರು. ಸಂತೋಷಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಚೇಯರ್‌ಮನ್ ಎಸ್. ಜಯಕರ್ ಶೆಟ್ಟಿ, ಮುತ್ತಯ್ಯ ಶೆಟ್ಟಿ, ರವಿರಾಮ್ ಶೆಟ್ಟಿ, ವೈದ್ಯಾಧಿಕಾರಿ ಡಾ. ಸುಭೋದ್ ಮಲ್ಲಿ, ನಾಗರಾಜ್ ಶೇಟ್, ರಾಜೀವ ಮಾಸ್ತರ್, ಸ್ಥಳದಾನಿ ಗಣಪಯ್ಯ ಶೆಟ್ಟಿ, ಹಕ್ಲಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಭಾಶ್ ಶೆಟ್ಟಿ ಹೊಳ್ಮಗೆ, ಶಾಲೆಯ ಮುಖ್ಯೋಪಾಧ್ಯಾಂi ಡಾ. ಕಿಶೋರ್‌ಕುಮಾರ್ ಶೆಟ್ಟಿ, ಲಯನ್ ಕಾರ್ಯದರ್ಶಿ ಕಿರಣ್‌ಕುಮಾರ್ ಉಪಸ್ಥಿತರಿದ್ದರು.

Read More