ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ರುಚಿಯಿಲ್ಲದ ಭೋಜನ, ಶೃತಿ, ಲಯ, ತಾಳವಿಲ್ಲದ ಸಂಗೀತ ನಮ್ಮ ಶರೀರ ಹಾಗೂ ಮನಸ್ಸಿಗೆ ಹೇಗೆ ಅಪಥ್ಯವಾಗುವುದೋ ಹಾಗೆಯೇ ಸಂಸ್ಕಾರವಿಲ್ಲದ ಜೀವನವೂ ಕೂಡಾ. ಮುಖ್ಯವಾಗಿ ಸಂಸ್ಕಾರವೇ ಮನುಷ್ಯನ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಗುತ್ತದೆ. ಆ ನೆಲೆಯಲ್ಲಿ ಗುರು-ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ನಮಗೆ ಜೀವನದಲ್ಲಿ ಸ್ಪೂರ್ತಿದಾಯಕವಾಗಿರುತ್ತದೆ ಎಂದು ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜತೀರ್ಥ ವಡೇರ ಸ್ವಾಮೀಜಿ ಹೇಳಿದರು. ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬುಧವಾರ ನಡೆದ ಶತಕಲಾಭಿಷೇಕ ಹಾಗೂ ಲಘುವಿಷ್ಣು ಹವನದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಯಾವುದೇ ಸಮಾಜ ಉದ್ದಾರವಾಗಬೇಕಾದರೆ ಅಲ್ಲಿ ಆಚಾರ-ವಿಚಾರ, ದೇವರು, ಧರ್ಮವಿರಬೇಕು. ಅಗ ಮಾತ್ರ ಸಮಾಜದ ಸಮೃದ್ಧಿಯಾಗಿರಲು ಸಾಧ್ಯ ಎನ್ನುವುದು ತತ್ವಸಿದ್ಧಾಂತ. ಅದರಂತೆ ಲೋಕಕಲ್ಯಾಣಕ್ಕಾಗಿ ದೇವತಾರಾಧನೆ, ಯಜ್ಞ, ಯಗಾದಿಗಳನ್ನು ಮಾಡಲು ಪರಶುರಾಮ ದೇವರು ತ್ರಿಹೋತ್ರದಿಂದ ಸಾರಸ್ವತರನ್ನು ಗೋವಾಕ್ಕೆ ಕರೆತಂದರು ಎಂಬ ಉಲ್ಲೆಖವಿದೆ. ನಾಲ್ಕೂ ಕಡೆಗಳಲ್ಲಿನ ಪರ್ವತಶ್ರೇಣಿಯ ಮಧ್ಯದಲ್ಲಿ ನೆಲೆನಿಂತಂತಹ ಸಾರಸ್ವತರು ಅಷ್ಟ ಅಗ್ರಹಾರ ನಿರ್ಮಿಸಿ ಅಲ್ಲಿನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಮನಸ್ಸನ್ನು ಮುದಗೊಳಿಸುತ್ತ ಅಲೌಕಿಕ ಆನಂದವನ್ನು ಅನುಭವಿಸುವಲ್ಲಿ ಸಂಗೀತ ಕಲೆಯ ಅನುಸಂಧಾನ ಅಪೇಕ್ಷಣೀಯ. ಪರಂಪರೆಯಿಂದ ಈ ನಾದಾನುಸಂಧಾನ ವೇದ ಕಾಲದಿಂದಲೂ ನಡೆದು ಬಂದಿದೆ. ಅನೇಕ ಮಹಾಮಹಿಮರು ಜೀವ ಮಾನ ಸಾಧನೆಯಿಂದ ಅನೇಕ ಕೃತಿಗಳನ್ನು ರಚಿಸಿ ಮಾರ್ಗದರ್ಶಕರಾಗಿದ್ದಾರೆ. ಶಾಸ್ತ್ರೀಯ ನೆಲೆಗಟ್ಟಿನ ಈ ವಿದ್ಯೆಯನ್ನು ಸರಳವಾಗಿ – ಸುಲಭವಾಗಿ ಅಭ್ಯಸಿಸಿಕೊಳ್ಳಲು ಅನುವಾಗುವಂತೆ ಸಂಗೀತ ವಿದ್ವಾನ್ ಮದೂರು ಬಾಲಸುಬ್ರಹ್ಮಣ್ಯಂ ರವರು ರಚಿಸಿದ ಪುಸ್ತಕ ’ಸಂಗೀತ ಪ್ರಬೋಧೀನಿ’ ಉತ್ತಮ ಕೊಡುಗೆಯಾಗಿದೆ. ಎಂದು ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಉಡುಪಿ ಪೇಜಾವರ ಮಠದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವದಿಸುತ್ತ ನುಡಿದರು. ಪುಸ್ತಕವನ್ನು ಪ್ರಕಟಿಸಿದ ಕುಂದ ಅಧ್ಯಯನ ಕೇಂದ್ರದ ಯು.ವರಮಹಾಲಕ್ಷೀ ಹೊಳ್ಳರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ|| ಪಾದೇಕಲ್ಲು ವಿಷ್ಣು ಭಟ್ಟರು ಶುಭಾಶಂಸನೆ ಗೈದರು. ಗಣಪತಿ ಜ್ಯೋಸ, ವಿದುಷಿ ಹೆಚ್.ಉಷಾ ಜೊಯಿಸ, ಉಮಾ ಮಹೇಶ್ವರಿ, ರಮಾದೇವಿ ಆಚಾರ್ಯ, ಸುಮಾ ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಮದೂರು ಬಾಲಸುಬ್ರಹ್ಮಣ್ಯಂ ಸ್ವಾಗತಿಸಿದ್ದರು. ಯು. ಗಣೇಶ್ ಪ್ರಸನ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಜೇಸಿಐ ಕುಂದಾಪುರ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಜೇಸಿಐ ರಾಷ್ಟ್ರೀಯ ಅಧ್ಯಕ್ಷ ಅರ್ಪಿತ್ ಹಾಥಿ ಅವರ ಹುಟ್ಟುಹಬ್ಬದ ದಿನದಂದು ರೆಡ್ ಕ್ರಾಸ್ ಸಂಸ್ಥೆಯಲ್ಲಿ ಜರುಗಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರದ ಅಧ್ಯಕ್ಷರಾದ ಶ್ರೀನಾಥ್ ಗಾಣಿಗ ಇವರು ವಹಿಸಿದ್ದರು.ಜೇಸಿಐ ನ ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರ ಶ್ರೀಧರ್ ಪಿ.ಎಸ್. ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಚೇರ್ಮನ್ ಶ್ರೀ ಜಯಕರ್ ಶೆಟ್ಟಿ ಹಾಗೂ ಜೇಸಿಐನ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ರಾದ ಸದಾನಂದ ನಾವಡ ಉಪಸ್ಥಿತರಿದ್ದರು. ಸುಮಾರು17 ಯೂನಿಟ್ ಗಳಷ್ಟು ರಕ್ತವನ್ನು ಜೇಸಿಐ ಸದಸ್ಯರಿಂದ ಸಂಗ್ರಹಿಸಲಾಯಿತು. ಜೇಸಿಐ ಕುಂದಾಪುರದ ಅಧ್ಯಕ್ಷರಾದ ಶ್ರೀನಾಥ್ ಗಾಣಿಗ ಇವರು ಸ್ವಾಗತಿಸಿದರು.ಜೇಸಿಐ ಕುಂದಾಪುರದ ಕಾರ್ಯದರ್ಶಿ ಚೇತನ್ ದೇವಾಡಿಗ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಮರವಂತೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಹಾಗೂ ಕಾರು ನಡುವಿನ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಖೇದಕರ ಘಟನೆ ವರದಿಯಾಗಿದೆ. ಬೈಂದೂರು ತಗ್ಗರ್ಸೆ ಮುತ್ತಯ್ಯ ಪೂಜಾರಿ ಎಂಬುವವರ ಪುತ್ರ ಪುನಿತ್ ಪೂಜಾರಿ (22) ಮೃತ ದುರ್ದೈವಿ. ಬೈಕ್ ಹಿಂಬದಿಯ ಸವಾರ ಆಕಾಶ್ ಪೂಜಾರಿ ಗಾಯಗೊಂಡಿದ್ದಾನೆ. ಮರವಂತೆ ಬಸ್ ನಿಲ್ದಾಣ ಬಳಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಡಸ್ಕರ್ ಕಾರು ಹಾಗೂ ಬೈಂದೂರು ಕಡೆಗೆ ತೆರಳುತ್ತಿದ್ದ ಪಲ್ಸರ್ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಭ ನುಗ್ಗುಗುಜ್ಜಾಗಿದ್ದರೇ, ಬೈಕಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೈಕ್ ಸವಾರನ ಪುನಿತ್ ಪೂಜಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೇ, ಹಿಂಬದಿಯ ಸವಾರ ಆಕಾಶ್ ಪೂಜಾರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಪುನಿತ್ ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಹೊಸ ಬೈಕು ಖರೀದಿಸಿ ಮೂರು ದಿನವಷ್ಟೇ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಮುದಾಯ, ಕುಂದಾಪುರ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ರಾಜ್ಯ ಬಾಲವಿಕಾಸ ಟ್ರಸ್ಟ್ ಜೊತೆಯಾಗಿ ಸಂಘಟಿಸಿರುವ ರಂಗರಂಗು ರಜಾಮೇಳವನ್ನು ಸೂಪರ್ ಗ್ರೇಡ್ ವಿದ್ಯುತ್ ಗುತ್ತಿಗೆದಾರರೂ ಮತ್ತು ಸಾಮಾಜಿಕ ಚಿಂತಕರೂ ಆಗಿರುವ ಕೆ.ಆರ್ ನಾಯ್ಕ್ ಉದ್ಘಾಟಿಸಿದರು. ಕುಟುಂಬಗಳು ಚಿಕ್ಕದಾಗುತ್ತಾ ಹೋದಂತೆ ಒಡನಾಟದ ಒಡಮೂಡುವ ಸಮಷ್ಟಿಪ್ರಜ್ಞೆಯು ಮಕ್ಕಳಿಗೆ ದುರ್ಲಭವಾಗುತ್ತವೆ. ರಜಾಮೇಳಗಳು ಈ ಕೊರತೆಯನ್ನು ನೀಗಿಸಬೇಕು ಎಂದು ಅವರು ತಮ್ಮ ಉದ್ಘಾಟನಾ ಮಾತುಗಳಲ್ಲಿ ಆಶಿಸಿದರು. ಮೇಳದ ನಿರ್ದೇಶಕ ಶ್ರೀ ವಾಸುದೇವ ಗಂಗೇರ ಮಾತನಾಡಿ ಈ ರಜಾಮೇಳದಲ್ಲಿ ನೆಲಮೂಲದ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಲಾಗುವುದು ಮತ್ತು ಜಾತಿ-ಮತ-ಭಾಷೆಗಳ ಹೆಸರಿನಲ್ಲಿ ನಾವು ನಿರ್ಮಿಸಿಕೊಂಡಿರುವ ಗೋಡೆಗಳನ್ನು ಮೀರಿ ಮನುಷ್ಯತ್ವದ ವಿಶಾಲ ಕುಟುಂಬದೊಳಗೆ ಬದುಕುವದನ್ನು ಕಲಿಯಲು ಈ ಮೇಳದಲ್ಲಿ ಒತ್ತು ನೀಡಲಾಗುವುದು ಎಂದರು. ಮೇಳದ ಭಾಗವಾಗಿ ಮಕ್ಕಳು ಹೊರಸಂಚಾರ, ಮಕ್ಕಳ ಸಂತೆ, ಕಛೇರಿ ಭೇಟಿಗಳನ್ನು ಮಾಡುವರು. ಪ್ರತಿ ವರ್ಷದಂತೆ ಮೇಳದ ಮಕ್ಕಳು ಈ ವರ್ಷವೂ ಮೇಳದ ಸಮಾರೋಪ ಸಮಾರಂಭದಲ್ಲಿ ನಾಟಕ ಪ್ರದರ್ಶನವನ್ನು ನೀಡಲಿರುವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಬಿ. ಎಂ. ಸುಕುಮಾರ ಶೆಟ್ಟಿ ಅವರಿಗೆ ಯಡ್ತರೆಯ ಗ್ರಾಮಸ್ಥ ಪ್ರಸಾದ್ ಬೈಂದೂರು ಅವರು ಮೊದಲ ಮನವಿ ಸಲ್ಲಿಸಲಿದ್ದಾರೆ. ಬೈಂದೂರಿನಾದ್ಯಂತ ಇರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕರು ಶ್ರಮಿಸಬೇಕಿದ್ದು, ಶಾಶ್ವತ ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅವರು ಮನವಿಯಲ್ಲಿ ತಿಳಿಸಿದ್ದಾರೆ. ಮನವಿಗೆ ಪ್ರತಿಕ್ರಿಯಿಸಿದ ನೂತನ ಶಾಸಕರು, ಬೈಂದೂರು ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಎಂದು ಭರವಸೆ ನೀಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರಿನ ನೂತನ ಶಾಸಕರಾಗಿ ಆಯ್ಕೆಗೊಂಡಿರುವ ಬಿ. ಎಂ. ಸುಕುಮಾರ್ ಶೆಟ್ಟಿ ವಿಜಯೋತ್ಸವ ಯಾತ್ರೆ ಅವರ ಅಭಿಮಾನಿಗಳು ವಿವಿಧೆಡೆ ವಿಜಯೋತ್ಸವ ಆಚರಿಸಿದರು. ಬೈಂದೂರಿಗೆ ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರ ಹರ್ಷಾಚರಣೆ ಮುಗಿಲು ಮುಟ್ಟಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಭಿಮಾನಿಗಳ ಜಯಘೋಷದೊಂದಿಗೆ ಇಲ್ಲಿನ ರಥಬೀದಿಯಲ್ಲಿ ವಿಜಯೋತ್ಸವ ನಡೆಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಬಿ.ಎಂ ಸುಕುಮಾರ ಶೆಟ್ಟಿ ಅವರು 24393 ಮತಗಳ ಅಂತರದಿಂದ ಮುನ್ನಡೆ ಸಾಧಿಸಿ ಗೆಲುವಿನ ಮೆಟ್ಟಿಲೇರಿದ್ದಾರೆ. ಅವರು ತಮ್ಮ ಸಮೀಪದ ಸ್ವರ್ಧಿ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರನ್ನು ಮಣಿಸಿ ಗೆಲುವು ಕಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ವರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 56,405 ಮತಗಳ ಮುನ್ನಡೆ ಸಾಧಿಸಿ, ಜಯಭೇರಿ ಭಾರಿಸಿದ್ದಾರೆ, ಅವರು ತಮ್ಮ ಸಮೀಪದ ಸ್ವರ್ಧಿ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಅವರನ್ನು ಮಣಿಸಿ ಭರ್ಜರಿ ಜಯ ಕಂಡಿದ್ದಾರೆ. ಕುಂದಾಪುರದಲ್ಲಿ ಹಾಲಾಡಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
Please wait, while page loading… Kundapraa.com – A Leading Kannada News Portal of Kundapura & Byndoor Taluk Powered by
