ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಡಿ.29: ಕೃಷಿ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಆತ್ಮ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಉಪ ಯೋಜನಾ ನಿರ್ದೇಶಕರು ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ತಲಾ 1 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಖಾಲಿ ಇರುವ ಉಪ ಯೋಜನಾ ನಿರ್ದೇಶಕರ ಹುದ್ದೆಗೆ ಮಾಸಿಕ 42,000 ರೂ. ವೇತನ ನಿಗಧಿಪಡಿಸಿದ್ದು, ಕೃಷಿ/ಕೃಷಿ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಕ್ಷೇತ್ರ ಮಟ್ಟದ ಅನುಭವ ಹೊಂದಿರುವವರು ಹಾಗೂ ಬೈಂದೂರು ರೈತ ಸಂಪರ್ಕ ಕೇಂದ್ರದಲ್ಲಿ ಖಾಲಿ ಇರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಮಾಸಿಕ 25,000 ರೂ. ವೇತನ ನಿಗಧಿಪಡಿಸಿದ್ದು, ಕೃಷಿ/ಕೃಷಿ ಸಂಬಂಧಿತ ವಿಷಯಗಳಲ್ಲಿ ಪದವಿ ಹೊಂದಿರುವ, ವಿಸ್ತರಣಾ ಕ್ಷೇತ್ರಗಳಲ್ಲಿ ಅನುಭವವುಳ್ಳ ಸ್ಥಳಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ./ ಕುಂದಾಪ್ರ ಡಾಟ್ ಕಾಂ ಸುದ್ದಿ/ ಅರ್ಜಿ ಸಲ್ಲಿಸಲು ಜನವರಿ 28 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಗ್ರಾಮದಲ್ಲಿ ಸುಮಾರು 285 ಮಂದಿ ಈವರೆಗೆ ಕೋವಿಡ್ ಲಸಿಕೆ ಪಡೆದುಕೊಂಡಿಲ್ಲ. ಹಲವಾರು ಬಾರಿ ಇವರ ಮನವೊಲಿಸುವ ಪ್ರಯತ್ನ ನಡೆಸಲಾಗಿದೆ. ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡಬೇಕೆಂಬ ಸರಕಾರ ಮತ್ತು ಜಿಲ್ಲಾಡಳಿತದ ಸೂಚನೆ ಹಿನ್ನಲೆಯಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳದವರ ಮನೆಗೆ ತೆರಳಿ ಮತ್ತೊಮ್ಮೆ ಅವರ ಮನವೊಲಿಸುವ ಪ್ರಯತ್ನ ಮಾಡಬೇಕು. ಮನೆ ಮನೆಗೆ ತೆರಳಿ ಅವರ ಮನವೊಲಿಸಿ ಲಸಿಕೆ ನೀಡುವ ಕಾರ್ಯ ನಡೆಸಲಾಗುತ್ತಿದೆ ಎಂದು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತಾ ಹೇಳಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬುಧವಾರ ಜರಗಿದ ಗಂಗೊಳ್ಳಿ ಗ್ರಾಮದ ಟಾಸ್ಕ್ಪೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾಹಿತಿ ನೀಡಿ ಮಾತನಾಡಿದರು. ವಂಡ್ಸೆ ಹೋಬಳಿ ರೆವಿನ್ಯೂ ಇನ್ಸ್ಪೆಕ್ಟರ್ ರಾಘವೇಂದ್ರ ದೇವಾಡಿಗ ಮಾತನಾಡಿ, ಸರಕಾರದ ಸೂಚನೆಯಂತೆ ಲಸಿಕೆ ಪಡೆಯದೆ ಇರುವ ಜನರ ಮನೆಗೆ ತೆರಳಿ ಅವರ ಮನವೊಲಿಸಿ ಲಸಿಕೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದ್ದು ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಾಗರ, ನದಿ, ಸಮುದ್ರಗಳು ಪ್ರಕೃತಿಯ ಖಜಾನೆಗಳು. ನಮ್ಮನ್ನು ಅನವರತ ರಕ್ಷಿಸುತ್ತಿರುವ ಇವುಗಳನ್ನು ಸತತವಾಗಿ ಮಲಿನಗೊಳಿಸುತ್ತಿರುವ ನಾವು ಇನ್ನಾದರೂ ಎಚ್ಚರಗೊಳ್ಳಬೇಕು. ಈ ಭೂಮಂಡಲವನ್ನೇ ಆಪೋಶನ ತೆಗೆದುಕೊಳ್ಳುತ್ತಿರುವ ಪ್ಲಾಸ್ಟಿಕ್ ಸಕಲ ಜೀವ ಜಂತುಗಳಿಗೂ ಹೇಗೆ ಮಾರಕವಾಗಿದೆ ಎಂಬುದನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ ಹೇಳಿದರು. ಎನ್.ಸಿ.ಸಿ. ನೇವಲ್ ಯುನಿಟ್ ಉಡುಪಿ, ಬೈಂದೂರು ಪದವಿ ಕಾಲೇಜಿನ ಎನ್.ಸಿ.ಸಿ. ನೇವಲ್ ಯುನಿಟ್ ಹಾಗೂ ಪಟ್ಟಣ ಪಂಚಾಯಿತಿ ಬೈಂದೂರು ಇವರ ಸಹಯೋಗದೊಂದಿಗೆ ಪುನೀತ್ ಸಾಗರ್ ಅಭಿಯಾನದಡಿ ನಡೆದ ಬೈಂದೂರು ಸೋಮೇಶ್ವರ ಬೀಚ್ನ ಸ್ವಚ್ಛತಾ ಕಾರ್ಯಕ್ರಮವನ್ನು ಆರಂಭಿಸಿ ಅವರು ಮಾತನಾಡಿದರು. ಸಾಗರದ ಸ್ವಚ್ಛತೆಯ ಕಡೆಗೆ ನಮ್ಮ ನಡಿಗೆ ಎಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಆರಂಭವಾದ ಈ ಕಾರ್ಯಕ್ರಮದಲ್ಲಿ ಎನ್.ಸಿ.ಸಿ. ನೇವಲ್ ಯುನಿಟ್ ಉಡುಪಿಯ ಪಿ.ಐ. ಸ್ಟಾಫ್ ಶ್ರೀ ಗಂಗಾಧರ್, ಕಾಲೇಜಿನ ಎನ್.ಸಿ.ಸಿ. ಯುನಿಟ್ನ 34 ಕೆಡೆಟ್ಗಳು, ಎನ್.ಸಿ.ಸಿ.ನೇವಿ ಅಧಿಕಾರಿ ಶ್ರೀಮತಿ ಮೀನಾಕ್ಷಿ, ಭಂಡಾರ್ಕರ್ಸ್ ಕಾಲೇಜಿನ ಸೀನಿಯರ್ ಕೆಡೆಟ್ಗಳು, ಪಟ್ಟಣ ಪಂಚಾಯಿತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಬುಧವಾರ ಕುವೆಂಪು ಜನ್ಮದಿನ ಆಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ, ವಿಶ್ವ ಮಾನವ ದಿನದ ಸಂದೇಶವನ್ನು ವಾಚಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭುಜಂಗ ಶೆಟ್ಟಿ ಅವರು ಮಾತನಾಡಿ ಕುವೆಂಪು ಅವರು ಮನು ಕುಲಕ್ಕೆ ನೀಡಿದ ಮಾರ್ಗದರ್ಶನ ಮತ್ತು ಆದರ್ಶಗಳು ಸಾರ್ವಕಾಲಿಕವಾದವುಗಳು. ಮನುಜ ಮಥ ವಿಶ್ವ ಪಥ ಸಂದೇಶ ಸಾರಿದ ಶ್ರೇಷ್ಠ ವಿಶ್ವ ಮಾನವ. ಮಾನವೀಯ ಮೌಲ್ಯಗಳು ಎಲ್ಲಕ್ಕಿಂತ ಮಿಗಿಲಾದುದು. ಪ್ರೀತಿಯಿಂದ ಮಾತ್ರ ದ್ವೇಷವನ್ನು ಗೆಲ್ಲಲು ಸಾಧ್ಯ ಎಂದರು. ಕನ್ನಡ ಉಪನ್ಯಾಸಕರಾದ ಜ್ಯೋತಿ ಶೆಟ್ಟಿ ಯವರು ಕುವೆಂಪು ಅವರ ಕನ್ನಡ ಪ್ರೀತಿ ಮತ್ತು ಅವರ ವೈಚಾರಿಕ ನಿಲುವುಗಳ ಕುರಿತು ಮಾತನಾಡಿದರು. ಆರ್ಕೆಸ್ಟ್ರಾ ಗಾಯಕಿಯೂ ಆಗಿರುವ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ದೀಕ್ಷಾ ಕುವೆಂಪು ಅವರ ಗೀತೆಗಳನ್ನು ಹಾಡಿದರು. ಸಂಸ್ಕ್ರತ ಉಪನ್ಯಾಸಕರಾದ ಸುಲೇಕಾ ಇಂಗ್ಲಿಷ್ ಉಪನ್ಯಾಸಕರಾದ ರಕ್ಷಾ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುವತಿಯೋರ್ವಳಿಗೆ ಚೂರಿಯಿಂದ ಇರಿದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಹೆಸ್ಕತ್ತೂರು ಆಟೋರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್ ( 35) ಯುವತಿಗೆ ಚೂರಿ ಇರಿದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮಧ್ಯಾಹ್ನ ಯುವತಿ ಕೆಲಸ ಮಾಡುತ್ತಿದ್ದ ಕಟ್ಟಡದ ಮಹಡಿಗೆ ಊಟಕ್ಕೆ ಹೋದ ಸಂದರ್ಭ ರಾಘವೇಂದ್ರ ಪ್ರವೇಶಿಸಿ ಇರಿಯಲು ಮುಂದಾಗಿದ್ದು, ಹುಡುಗಿ ಕೈ ಅಡ್ಡ ಹಿಡಿದಿದ್ದರಿಂದ ಬಚಾವಾಗಿದ್ದಾಳೆ. ನಂತರ ರಾಘವೇಂದ್ರ ಅಲ್ಲಿಂದ ಪರಾರಿಯಾಗಿ ಹೆಸ್ಕತ್ತೂರು ಹಾರ್ಯಾಡಿಯ ಹಾಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ರಾಘವೇಂದ್ರ ಕುಲಾಲ್ ಚೂರಿ ಇರಿದ ಯುವತಿಗೆ ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದು ಕೋಟ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಾಗಿತ್ತು. ಯುವಕನ ಠಾಣೆಗೆ ಕರೆಯಿಸಿ ಹಿಂಬರಹ ಪಡೆದು ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಅದೇ ದ್ವೇಷದ ಹಿನ್ನೆಲೆಯಲ್ಲಿ ಚೂರಿಯಲ್ಲಿ ಇರಿಯಲಾಗಿದೆ ಎನ್ನಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಬಗ್ಗೆ ಪ್ರಕರಣ ದಾಖಲಾಗಿದೆ. ಕೆಲ ಸಮಯದ ಹಿಂದೆ ಕಲ್ಯಾಣಪುರದಲ್ಲಿ ನಿಶ್ಚಿತಾರ್ಥ ಆದ ಯುವತಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಡಿ.29: ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರು, ಕಾಪು, ಹೆಬ್ರಿ, ಬ್ರಹ್ಮಾವರ ಹಾಗೂ ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ನಡೆಸುವ ಸಲುವಾಗಿ, ಜನವರಿ 01, 2022 ರ ಅರ್ಹತಾ ದಿನಾಂಕಕ್ಕೆ 18 ವರ್ಷ ತುಂಬಿದ ಕೃಷಿಕರು, ಕೃಷಿಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅರ್ಹರಾಗಿದ್ದು, ಕರ್ನಾಟಕ ವ್ಯವಸಾಯೋತ್ನನ್ನ ಮಾರುಕಟ್ಟೆ ಸಮಿತಿಗಳಿಗೆ ಸಂಕ್ಷಿಪ್ತವಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಸಿದ್ಧಪಡಿಸಲು ಆಯಾಯ ತಾಲೂಕು ತಹಶೀಲ್ದಾರರನ್ನು ಅಧಿಕೃತ ಅಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕೃಷಿಕ ಮತದಾರರ ಪಟ್ಟಿಗಳನ್ನು ಪಹಣಿ ಪತ್ರಿಕೆಯ ಆಧಾರದಲ್ಲಿ ತಯಾರಿಸಲು ಜನವರಿ 17 ಕೊನೆಯ ದಿನವಾಗಿದ್ದು, ಕೃಷಿಕ ಮತದಾರರ ಪಟ್ಟಿಯ ಕರಡು ಪ್ರಕಟಣೆಯನ್ನು ಜ.18 ರಂದು ಪ್ರಕಟಿಸಿ, ಜ.18 ರಿಂದ ಫೆ.2 ರ ವರೆಗೆ ಮತದಾರರ ಕರಡು ಪಟ್ಟಿಗಳಿಗೆ ಹಕ್ಕು ಮತ್ತು ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶ ಕಲ್ಪಿಸಿ, ಫೆ.3 ರಿಂದ 6ರ ವರೆಗೆ ಮತದಾರರ ಕರಡು ಪಟ್ಟಿಗೆ ಸಂಬAಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿರಿಯ ಪತ್ರಕರ್ತ, ಛಾಯಾಗ್ರಾಹಕ, ಸಾಹಿತಿ, ಸಂಘಟಕ, ಪ್ರಕಾಶಕ, ಪ್ರತಿಭಾ ಪೋಷಕ ಡಾ. ಶೇಖರ ಅಜೆಕಾರು ಅವರಿಗೆ ಮಾಧ್ಯಮ ಕ್ಷೇತ್ರದ ಸುದೀರ್ಘ ಸೇವೆಗಾಗಿ ಕರ್ನಾಟಕ ಪ್ರೆಸ್ ಕೌನ್ಸಿಲ್ನ 2021 ರ ಸಾಲಿನ ಪ್ರತಿಷ್ಠಿತ ರಾಜ್ಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರದಾನಿಸಲಾಯಿತು. 20 ಮಂದಿ ಹಿರಿಯ ಸಾಧಕರಿಗೆ ಈ ಗೌರವ ನೀಡಲಾಗುತ್ತಿದ್ದು ಕರಾವಳಿಯಿಂದ ಆಯ್ಕೆಯಾಗಿರುವ ಏಕೈಕ ಪತ್ರಕರ್ತರಾಗಿದ್ದಾರೆ. ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಡಾ. ಟಿ.ಎಸ್. ನಾಗಾಭರಣ ಸಹಿತ ಗಣ್ಯರು ಈ ಗೌರವ ಪ್ರಧಾನಿಸುವರು. ವಿದ್ಯಾರ್ಥಿ ಜೀವನದಲ್ಲಿ ಯುವಸ್ಪಂದನ ಪತ್ರಿಕೆಯ ಮೂಲಕ ಗಮನ ಸೆಳೆದಿದ್ದ ಅಜೆಕಾರು ಅವರು ಕುಂದಪ್ರಭ ವಾರಪತ್ರಿಕೆಯ ಮೂಲಕ ವೃತ್ತಿ ಪತ್ರಿಕೋದ್ಯಮಕ್ಕೆ ಕಾಲಿರಿಸಿದರು. ಮುಂಬಯಿಯ ಕರ್ನಾಟಕ ಮಲ್ಲದಲ್ಲಿ ಸುಮಾರು ದಶಕಗಳ ಕಾಲ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ ಅವರು ಸಂಕಷ್ಟ ಕಾಲದಲ್ಲಿ ಸಂಪಾದಕ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಜನವಾಹಿನಿಯ ಪ್ರಧಾನ ವರದಿಗಾರರಾಗಿದ್ದರು. ಬಳಿಕ ಕನ್ನಡಪ್ರಭ, ಉಷಾಕಿರಣ ಪತ್ರಿಕೆಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೇಂದ್ರ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ (ITAT) ಸದಸ್ಯರಾಗಿ ಉಪ್ಪುಂದದ ಯೋಗೀಶ್ ಕುಮಾರ್ ಯು.ಎಸ್ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕಳೆದ 21 ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಯೋಗೀಶ್ ಅವರನ್ನು ಕೇಂದ್ರ ಸರಕಾರದ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಿ ಆದೇಶಿಸಿರುವ ಬಗ್ಗೆ ಕೇಂದ್ರ ಕಾನೂನು ವ್ಯವಹಾರಗಳ ಇಲಾಖೆ ಅಧೀನ ಕಾರ್ಯದರ್ಶಿ ಸುನೀಲ್ ಸಚ್ಚದೇವ್ ಅವರು ಪತ್ರದಲ್ಲಿ ತಿಳಿಸಿದ್ದು, ಡಿ.31ರಂದು ನಡೆಯುವ ಪರಿಚಯ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ಯೋಗೀಶ್ ಕುಮಾರ್ ಅವರು ನಿವೃತ್ತ ಮುಖ್ಯೋಪಾಧ್ಯಾಯರಾದ ಉಪ್ಪುಂದ ಸೋಮನಮನೆ ದಿ. ಸೋಮಯ್ಯ ಅವರ ಪುತ್ರರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟತಟ್ಟು ಗ್ರಾಮದ ಕೊರಗ ಕಾಲೋನಿಯ ಮೆಹೆಂದಿ ಕಾರ್ಯಕ್ರಮಕ್ಕೆ ನುಗ್ಗಿ ಕೊರಗ ಸಮುದಾಯದವರನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆ ಪಿಎಸ್ಐ ಸಂತೋಷ್ ಬಿ.ಪಿ ಅವರನ್ನು ಅಮಾನತು ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ. ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಕೋಟದಲ್ಲಿ ನಡೆದ ಕೊರಗ ಸಮುದಾಯದವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಆಧಾರದಲ್ಲಿ ಕೋಟ ಪಿಎಸ್ಐ ಅವರನ್ನು ಪಶ್ಚಿಮ ವಲಯ ಐಜಿಪಿಯವರು ಅಮಾನತು ಮಾಡಿದ್ದಾರೆ. ಇನ್ನು ಪ್ರಕರಣದಲ್ಲಿನ ಐದು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಕೋಟ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ, ಲಯನ್ಸ್ ಕ್ಲಬ್ ಕುಂದಾಪುರ, ರೋಟರ‍್ಯಾಕ್ಟ್ ಕ್ಲಬ್ ಗಂಗೊಳ್ಳಿ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರ ನೇತೃತ್ವದಲ್ಲಿ ಬೃಹತ್ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ. ಶಿಬಿರ ಉದ್ಘಾಟಿಸಿ ಶುಭ ಹಾರೈಸಿದರು. ಕುಂದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಕೃಷ್ಣ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಪಾರ್ಥ, ಕುಂದಾಪುರ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ರಾಜೀವ ಕೋಟ್ಯಾನ್, ಡಾ.ರವೀಂದ್ರ, ಗಂಗೊಳ್ಳಿ ರೋಟರಿ ಕ್ಲಬ್ ಸದಸ್ಯರು, ಕೆಎಂಸಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ರಾಜೇಶ ಎಂ.ಜಿ. ಸ್ವಾಗತಿಸಿದರು. ಜೋನಲ್ ಲೆಫ್ಟಿನೆಂಟ್ ಕೆ.ರಾಮನಾಥ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಿ ಕಾರ್ಯದರ್ಶಿ ನಾರಾಯಣ ಇ.ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು. ರೋಟರ‍್ಯಾಕ್ಟ್ ಅಧ್ಯಕ್ಷೆ ಅಮೀಕ್ಷಾ…
