ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೋಡಿ ಗ್ರಾಮ ಪಂಚಾಯತ್, ಆಗೋಗ್ಯ ಇಲಾಖೆ ಕೋಡಿಬೆಂಗ್ರೆ, ಶಿಶುಅಭಿವೃದ್ದಿ ಯೋಜನೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಪೋಷಣ್ ಅಭಿಯಾನದಡಿ ಸ್ಥನ್ಯ ಪಾನ್ಯ ಸಪ್ತಾಹ ಕಾರ್ಯಕ್ರಮ ಮತ್ತು ಅನ್ನ ಪ್ರಸಾನ ಕಾರ್ಯಕ್ರಮ ಶುಕ್ರವಾರ ಹೊಸಬೆಂಗ್ರೆ ಅಂಗನವಾಡಿಯಲ್ಲಿ ಜರಗಿತು.
ಪಿಎಚ್‌ಸಿಒ ಲಾವಣ್ಯ ಅವರು ಮಾಹಿತಿ ನೀಡಿ ಎದೆ ಹಾಲಿನ ಮಹತ್ವ ಹಾಗೂ ಅನ್ನ ಪ್ರಾಸನದ ಕುರಿತು ಸವಿಸ್ತಾರವಾಗಿ ತಿಳಿಸಿದರಲ್ಲದೆ ಡೆಂಗ್ಯೂಜ್ವರ ಅದರ ತಡೆ ಗಟ್ಟುವಿಕೆ ಬಗ್ಗೆ ತಿಳಿಸಿದರು .
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಜ್ಯೋತಿ, ಬಾಲಾವಿಕಾಸ ಸಮಿತಿ ಅಧ್ಯಕ್ಷೆ ಸುಲೋಚನಾ, ಬಾಲವಿಕಾಸ ಸಮಿತಿ ಸದಸ್ಯೆ ನಿರ್ಮಲ, ಪೋಷಕರಾದ ಶಾರದಾ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಯಮುನಾ ಲಕ್ಷ್ಮಣ್ ಕುಂದರ್ ಕಾರ್ಯಕ್ರಮ ನಿರ್ವಹಿಸಿದರು.
















