ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಪ್ರೇರಣೆ ಸಾಹಿತ್ಯ ಸಂಚಾರ 72ನೇ ಸರಣಿ ಕಾರ್ಯಕ್ರಮ ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಐರೋಡಿ ಇಲ್ಲಿ ಜರಗಿತು.

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮ್ ಕುಮಾರ್ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿ, ಜೀವನವೆಂಬ ಸಂಸಾರದಲ್ಲಿ ಸಾಕ್ಷಾತ್ಕಾರ ಪಡೆಯಲು ಓದಿನ ಜೊತೆಗೆ ಯಕ್ಷಗಾನ, ನೃತ್ಯ, ಕಲೆ, ಸಾಹಿತ್ಯವು ಒಂದು ಪ್ರೇರಣಾ ಶಕ್ತಿಯಾಗಿದೆ ಎಂದು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಕಥೆ ಕವನ ರಚಿಸಿ ಮಕ್ಕಳನ್ನು ಪ್ರೇರಣೆಗೊಳಿಸಿದರು. ಕಸಾಪ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಅವರು ಕವನ, ಕಥೆಗಳ ಮೂಲಕ ಮಕ್ಕಳಿಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡಿಸಿದರು. ಸಾಹಿತ್ಯ ಪರಿಷತ್‌ನ ಸುಪ್ರೀತಾ ಪುರಾಣಿಕ್ ಅವರು ಅಭಿನಯ ಗೀತೆಯನ್ನು ಅಭಿನಯಿಸಿ ತೋರಿಸಿದರು. ನರಸಿಂಹ ತುಂಗ ಯಕ್ಷಗಾನದಲ್ಲಿ ಹಾಸ್ಯದ ಪ್ರಸಂಗವನ್ನು ಹಿಮ್ಮೇಳ ದೊಂದಿಗೆ ಅಭಿನಯಿಸಿ ತೋರಿಸಿದರು. ಅಚ್ಚುತ ಪೂಜಾರಿ ಕಾರ್ಕಡ ಕನ್ನಡ ಗೀತೆಗಳನ್ನು ಹಾಡಿದರು. ಶಾಲೆಯ ಮುಖ್ಯೋಪಾಧ್ಯಾಯನಿ ಪ್ರೆಸಿಲ್ಲಾ ಸಾಹಿತ್ಯ ಎಂದರೆ ಭಾವನೆಗಳನ್ನು ಸೃಜನಶೀಲತೆಯನ್ನು ಪಾಂಡಿತ್ಯವನ್ನು ಕೊಡುವ ಪ್ರಬಲ ಮಾಧ್ಯಮವಾಗಿದ್ದು ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದವರು ಶಾಲೆ ಶಾಲೆಗೆ ಹೋಗಿ ಕಾರ್ಯಕ್ರಮವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಶಿಕ್ಷಕಿ ವೀಣಾ ಸ್ವಾಗತಿಸಿ, ವಂದಿಸಿದರು.
















