ಬೈಂದೂರು: ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವು ಸಮಗ್ರ ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರೀಯೆ ಎಂಬುದನ್ನು ಸಾಧಿಸಿ ತೋರಿಸಬೇಕು. ಇಂತಹ ವಿಶೇಷ ಶಿಬಿರದಿಂದ ಪಡೆದ ಉತ್ತಮ ಅನುಭವಗಳು ಭವಿಷ್ಯದ ಬಾಳಿಗೆ ದಾರಿದೀಪವಾಗಬೇಕು ಎಂದು ಗೋಳಿಹೊಳೆ ಗ್ರಾಪಂ ಮಾಜಿ ಅಧ್ಯಕ್ಷ ಎಂ. ಆರ್. ಶೆಟ್ಟಿ ಹೇಳಿದರು. ಗೋಳಿಹೊಳೆ ಮಹಿಷಮರ್ಧಿನಿ ಸಭಾಂಗಣದಲ್ಲಿ ನಡೆದ ಕುಂದಾಪುರ ಬಿ. ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಬಿರದ ಮುಖ್ಯ ಸಂಯೋಜಕ ಹಾಗೂ ಬಿಳಿಶಿಲೆ ಶ್ರೀ ವಿನಾಯಕ ದೇವಸ್ಥಾನದ ಮೊಕ್ತೆಸರ ಶಿವರಾಜ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಗೋಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ, ಮಾಜಿ ಅಧ್ಯಕ್ಷ ಮಂಜಯ್ಯ ಪೂಜಾರಿ ಎಳಜಿತ, ಶ್ರೀಯಕ್ಷೇಶ್ವರಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ನಾಗರಾಜ ಪೂಜಾರಿ, ಸಸಿಹಿತ್ಲು ಮಂಜು ಪೂಜಾರಿ ಕಳವಾಡಿ, ದಿಲೀಪ್‌ರಾಜ್ ಬೆಂಗಳೂರು, ಶೇಷು ಮರಾಠಿ ಹಾಲಾಡಿ, ರಘುರಾಮ ಶೆಟ್ಟಿ ಮುಂಡ್ಸಾಲು, ರಾಜು ನಾಯ್ಕ್, ಗುರುಚರಣ್ ಗೋಳಿಹೊಳೆ, ಬೈಂದೂರು ಪ್ರಥಮ ದರ್ಜೆ ಕಾಲೇಜಿನ…
Author: ನ್ಯೂಸ್ ಬ್ಯೂರೋ
ಕುಂದಾಪುರ: ಬೈಂದೂರು ವಲಯದ ಹಕ್ಲಾಡಿ ಯಳೂರು ತೊಪ್ಲುವಿನ ಪ್ರಾಥಮಿಕ ಶಾಲೆಗೆ 50 ವರ್ಷಗಳ ಸುವರ್ಣ ಸಂಭ್ರಮ. 1961ನೇ ಇಸವಿಯಲ್ಲಿ ಆರಂಭವಾಗಿ ಸಾವಿರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಶಾಲೆ ಸಾರ್ಥಕ ೫೦ ವರ್ಷಗಳನ್ನು ಪೂರೈಸಿ ಡಿ.೧೭ ರಂದು ಸುವರ್ಣ ಸಂಭ್ರಮವನ್ನು ಆರಿಸಿಕೊಳ್ಳುತ್ತಿದೆ. ಶಾಲೆ ಹಿನ್ನಲೆ: 1961ರಲ್ಲಿ ಪ್ರಾರಂಭವಾದ ಯಳೂರು ತೊಪ್ಲುವಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಿಸರದ ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ನೀಡಿ ಅವರನ್ನು ಸುಮಾಜದ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಪ್ರೇರಣೆ ನೀಡಿದ ವಿದ್ಯಾದೇಗುಲವಾಗಿದೆ. ಇಲ್ಲಿ ಶಿಕ್ಷಣ ಪಡೆದವರು ವಕೀಲರಾಗಿ, ಇಂಜಿನಿಯರ್‌ಗಳಾಗಿ, ವೈದ್ಯರುಗಳಾಗಿ ಉದ್ದಿಮೆದಾರರಾಗಿ ಕೀರ್ತಿಗಳಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದ್ದಾರೆ. 5 ಕೊಠಡಿಗಳು, ಶೌಚಾಲಯ, ಅಕ್ಷರ ದಾಸೋಹ ಕೊಠಡಿ, ಶಾಲಾ ಕೈತೋಟ, ವಾಚನಾಲಯ, ವಿದ್ಯಾರ್ಥಿ ಸಹಕಾರ ಸಂಘ, ಬಾವಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಹೊಂದಿರುವ ಶಾಲೆಗೆ ಸಹೃದಯರ ಸಹಾಯ ಹಸ್ತವೂ ಬೇಕಿದೆ. ಇಲ್ಲಿ ಪ್ರಮುಖವಾಗಿ ಆಟದ ವೈದಾನ, ಆವರಣಗೋಡೆ, ಕಂಪ್ಯೂಟರ್, ವಿಜ್ಞಾನ ಉಪಕರಣಗಳು, ಶಾಲಾ…
ಬೈಂದೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು ಇವರಿಗೆ ಹೆಚ್ಚಿನ ಮತ ದೊರಕುವಂತೆ ಮಾಡಬೇಕು. ಈ ಸಂದರ್ಭ ಅಪಪ್ರಚಾರವನ್ನೇ ಬಂಡವಾಳವಾಗಿಟ್ಟುಕೊಂಡು ಗೊಂದಲ ಸೃಷ್ಟಿಸುವವರನ್ನು ಸಾಧ್ಯವಾದಷ್ಟು ದೂರವಿಡಿ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಹೇರೆಂಜಾಲು ವಿಜಯ ಶೆಟ್ಟಿ ಕಾಂಪ್ಲೆಕ್ಸ್‌ನಲ್ಲಿ, ಕೊಲ್ಲೂರು, ಕಾಲ್ತೋಡು, ಖಂಬದಕೋಣೆ, ಜಡ್ಕಲ್, ಗೋಳಿಹೊಳೆ ಮತ್ತು ಹೇರೂರು ಗ್ರಾಪಂ ವ್ಯಾಪ್ತಿಯ ಪಕ್ಷದ ಸ್ಥಳೀಯ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪಕ್ಷದ ಅಧಿಕೃತ ಅಭ್ಯರ್ಥಿಗೆ ಗೆಲುವಿಗೆ ಬೇಕಾದಷ್ಟು ಮತಗಳಿದೆ. ಪಕ್ಷದಲ್ಲಿ ವರಿಷ್ಟರ ಹಾಗೂ ಅಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಹಾಗೂ ಕಾಂಗ್ರೇಸ್ ಪಕ್ಷ ಯಾರನ್ನೂ ಕಡೆಗಣಿಸಿಲ್ಲ ಎಂದರು. ಪ್ರತಾಪ್ಚಂದ್ರ ಶೆಟ್ಟಿಯವರು ವಾರಾಹಿ ಯೋಜನೆ, ಸಿಆರ್‌ಝೆಡ್ ಸಮಸ್ಯೆ, ಕುಡಿಯುವ ನೀರಿಗೆ ಶಾಶ್ವತ ಪರಿಹಾರವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕಸ್ತೂರಿ ರಂಗನ್ ಹೋರಾಟಗಳಲ್ಲಿ ಮೂಂಚೂಣಿಯಲ್ಲಿದ್ದು, ರೈತರ…
ಗಂಗೊಳ್ಳಿ: ಡಿ.27ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯು ಮುಂಬರುವ ತಾಪಂ., ಜಿಪಂ., ಹಾಗೂ ವಿಧಾನಸಭಾ ಚುನಾವಣೆಗೆ ಅಡಿಗಲ್ಲಾಗಿದ್ದು, ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ನಿರೀಕ್ಷೆಗೂ ಮೀರಿದ ಮತ ದೊರೆತು ಜಯಗಳಿಸಿದರೆ ಮುಂಬರುವ ಚುನಾವಣೆಗೆ ಹೆಚ್ಚಿನ ಸ್ಫೂರ್ತಿ, ಆತ್ಮವಿಶ್ವಾಸ ದೊರೆಯಲಿದೆ. ಹೀಗಾಗಿ ಈ ಚುನಾವಣೆಯನ್ನು ಯಾರೊಬ್ಬರೂ ಹಗುರವಾಗಿ ಪರಿಗಣಿಸದೆ ಬಿಜೆಪಿಯ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ತ್ರಾಸಿಯ ಪ್ರವಾಸಿ ಮಂದಿರದ ಬಳಿ ವಿಧಾನಪರಿಷತ್ ಚುನಾವಣೆಯ ಪೂರ್ವಭಾವಿಯಾಗಿ ನಡೆದ ತ್ರಾಸಿ ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಪಂ. ಸದಸ್ಯರ ಹಾಗೂ ಪಕ್ಷದ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷವು ಒಂದು ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದ್ದು, ಎಲ್ಲಾ ಗ್ರಾಪಂ., ತಾಪಂ. ಹಾಗೂ ಜಿಪಂ ಸದಸ್ಯರು ಪಕ್ಷದ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕು. ಇನ್ನುಳಿದ ಯಾವುದೇ ಅಭ್ಯರ್ಥಿಗೆ ಪ್ರಥಮ ಅಥವಾ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು…
ಕುಂದಾಪುರ: ಸ್ವಚ್ಛತೆಯ ಬಗ್ಗೆ ನಾವು ದೊಡ್ಡ ದೊಡ್ಡ ಮಾತನಾಡುತ್ತೇವೆ. ಭಾಷಣಗಳನ್ನು ಬಿಗಿಯುತ್ತೇವೆ. ಸರಕಾರವೂ ಸ್ವಚ್ಛತೆಯ ಅರಿವು ಮೂಡಿಸಲೆಂದೇ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ ವಾಸ್ತವವಾಗಿ ಪರಿಸರ ಹಾಗೂ ಸ್ವಚ್ಚತೆಯ ಕಾಳಜಿ ಫೋಟೋಷ್ಟೇ ಸೀಮಿತವಾಗಿದೆ ಎಂಬುದನ್ನು ನಮ್ಮ ಸುತ್ತಮುತ್ತಲಿನ ಹಲವಾರು ನಿದರ್ಶನಗಳು ಸಾಕ್ಷೀಕರಿಸಿವೆ. ಆದರೆ ಕುಂದಾಪುರದ ನಗರದಲ್ಲೊಬ್ಬಳು ಮಹಿಳೆ ಸ್ವಚ್ಚ ಭಾರತ್‌ಗಾಗಿ ಸ್ವಹಿತಾಸಕ್ತಿಯಿಂದಲೇ ಪಣತೊಟ್ಟಿದ್ದಾಳೆ. ಯಾವ ಪ್ರಚಾರವೂ ಬಯಸದೆ, ತನ್ನಷ್ಟಕ್ಕೆ ತಾನು ಪೊರಕೆ ಹಿಡಿದು ಬೀದಿಗಳನ್ನು ಗುಡಿಸುತ್ತಾಳೆ. ಅಂಗಡಿ ಮುಂಗಟ್ಟುಗಳನ್ನು ಸ್ವಚ್ಚಗೊಳಿಸುತ್ತಾಳೆ ಮರು ಮಾತನಾಡದೇ, ಯಾವುದೇ ಪ್ರತಿಫಲಾಪೇಕ್ಷೆಯೂ ಇಲ್ಲದೇ ಮುಂದಕ್ಕೆ ಸಾಗುತ್ತಾಳೆ. [quote font_size=”14″ bgcolor=”#ffffff” arrow=”yes” align=”right”]ಆಕೆ ಯಾರೂ, ಏನು ಎಂಬುದು ತಿಳಿದಿಲ್ಲ. ಬೆಳಿಗ್ಗೆ ಬಂದು ಚರ್ಚ್ ರಸ್ತೆಯ ಬೀದಿಗಳನ್ನು ಗುಡಿಸುತ್ತಿದ್ದುದು ಕಂಡುಬಂತು. ಮಾತನಾಡಿಸಲೂ ಪ್ರಯತ್ನಿಸಿದೆ. ಆದರೆ ಅವಳ ಅಸ್ಪಷ್ಟವಾದ ಮಾತು ಅರ್ಥವಾಗಲಿಲ್ಲ. ಹಿಂದಿ ಮಾತನಾಡುವ ಶೈಲಿ ನೋಡಿದರೆ ಉತ್ತರ ಭಾರತದ ಕಡೆಯವಳು ಎಂದೆನ್ನಿಸುತ್ತದೆ. – ಜೋಯ್ ಜೆ. ಕರ್ವೆಲ್ಲೊ[/quote] ಹೌದು. ಅಂದು ಕುಂದಾಪುದ ಚರ್ಚ್ ರಸ್ತೆಯಲ್ಲಿ ಡಿಢೀರ್ ಪ್ರತ್ಯಕ್ಷಳಾದ ಆ…
ಕುಂದಾಪ್ರ ಡಾಟ್ ಕಾಂ. ಕುಂದಾಪುರ, ಡಿ15: ಸಪ್ತಕ್ಷೇತ್ರಗಳಲ್ಲೊಂದಾದ ತಾಲೂಕಿನ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬ್ರಹ್ಮರಥೋತ್ಸವ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಶನಿವಾರದಿಂದ ಆರಂಭಗೊಂಡ ಧಾರ್ಮಿಕ ವಿಧಿ ವಿಧಾನಗಳು ಕಳೆದ ಮೂರು ದಿನಗಳಿಂದ ವಿಧಿವತ್ತಾಗಿ ನಡೆಯುತ್ತಿದ್ದು ನಡೆಯುತ್ತಿದ್ದು, ಇಂದು ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಮತ್ತು ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ನಾಳೀಕೇರ ಮಹಾಗಣಪತಿ ಯಾಗ ನಡೆಯಿತು. ಮೊಲದ ದಿನ ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ಥಿವಾಚನ, ಗಣಪತಿ ಹೋಮ, ಅಥರ್ವ ಶೀರ್ಷ ಉಪನಿಷತ್ ಹೋಮ, ಸತ್ಯ ಗಣಪತಿ ವೃತ, ಮಹಾ ಪೂಜೆ, ರಾತ್ರಿ ರಂಗ ಪೂಜೆ, ಡೋಲಾರೋಹಣ, ಪಲ್ಲಕಿ ಉತ್ಸವ ನಡೆಯಿತು. ಎರಡನೇ ದಿನ ಉಪನಿಷತ್ ಕಲಶಾಭಿಷೇಕ, ಗಣಪತಿ ಹೋಮ, ಸತ್ಯ ಗಣಪತಿ ವೃತ ಮಹಾಪೂಜೆ ನಡೆಯಿತು. ರಾತ್ರಿ ಪುರಮೆರವಣಿಗೆ ರಂಗ ಪೂಜೆ ಹಾಗೂ ಪಲ್ಲಕಿ ಉತ್ಸವ ನಡೆಯಿತು. ಸಂಜೆ ಗಂಟೆಯಿಂದ ಲಯಾಭಿನಯ ನಾಟ್ಯಧಾಮ ಬೆಂಗಳೂರು ಇವರಿಂದ ಲಲಿತಾ ಸಹಸ್ರನಾಮ ನೃತ್ಯ ರೂಪಕ, ಮೂರನೇ ದಿನ ಮಾರ್ಗಶಿರ…
ಕುಂದಾಪುರ: ಇಲ್ಲಿನ ನೂತನ ಉಪವಿಭಾಗಾಧಿಕಾರಿಯಾಗಿ ಅಶ್ವಥಿ ಎಸ್. ನಗರದ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಕುಂದಾಪುರ ದಿಂದ ಬೇರೆ ಕಡೆ ವರ್ಗಾವಣೆಗೊಂಡ ಅಸಿಸ್ಟೆಂಟ್ ಕಮೀಷನರ್ ಚಾರುಲತಾ ಸೋಮಲ್ ಅವರ ಅಶ್ವಥಿ ಅವರಿಗೆ ಅಧಿಕಾರ ಹಸ್ತಾಂತರಿಸಿರು. ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೇರಳ ಮೂಲದ ಅಶ್ವಥಿ ಎಸ್. ಅವರು ಹಿಂದೆ ಮೈಸೂರು ನಂತರ ದೆಹಲಿಯಲ್ಲಿ ಕೆಲಸ ನಿರ್ವಹಿಸಿ ಕುಂದಾಪುರ ಎಸಿಯಾಗಿ ನಿಯುಕ್ತಿಗೊಂಡಿದ್ದರೆ.
ಕುಂದಾಪುರ: ಬಸ್ರೂರು ಶ್ರೀ ಕಾಶೀ ಮಠದಲ್ಲಿ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ 129ನೇ ಪುಣ್ಯ ತಿಥಿ ಮಹೋತ್ಸವ ಕಾಶೀ ಮಠಾದೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು. ಈ ಸಂದರ್ಭ ಶತಕಲಶಾಭೀಷೇಕ, ಸಾನಿದ್ಯ ಹವನ,ಲಘು ವಿಷ್ಣು ಹವನ,ವಾಯುಸ್ತುತಿ ಪ್ರದಕ್ಷಿಣ ನಮಸ್ಕಾರ ಮುಂತಾದ ಧಾರ್ಮಿಕ ವಿದಿ ವಿಧಾನಗಳನ್ನು ವೇ.ಮೂ ದಾಮೋದರ ಆಚಾರ್ಯ,ಬಸ್ರೂರು ಇವರ ನೇತೃತ್ವದಲ್ಲಿ ನಡೆದವು. ಶ್ರೀಮತ್ ಕೇಶವೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಬೃಂದಾವನ ಮತ್ತು ಶಾಖಾ ಮಠದ ಸುಂದರೀಕರಣ ಕಾರ್ಯವನ್ನು ಶ್ರೀ ದೇವರಿಗೆ ಅರ್ಪಿಸಲಾಯಿತು. ಸಂಜೆ ನಗರೋತ್ಸವ ನಡೆಯಿತು. ರಾತ್ರಿ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚನದಲ್ಲಿ ಗುಣ ಗಾನದ ಅಗತ್ಯತೆ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಶಿಷ್ಯ ಕೋಟಿಗೆ ಗುರುವಿನ ಸ್ಮರಣೆ ಆದ್ಯ ಕರ್ತವ್ಯವಾಗಿದ್ದು, ಜೀವನದಲ್ಲಿ ಸಮಸ್ತ ಅಭಿವೃದ್ದಿಗೆ ಹಾಗೂ ಜ್ಞಾನ ಸಂಪಾದನೆಗೆ ಗುರುಸ್ಮರಣೆಯೇ ದಾರಿ. ಶ್ರೀಮತ್ ಭುವನೇಂದ್ರ ತೀರ್ಥತು ಶ್ರೀ ಧನ್ವಂತರಿಯ…
ಕುಂದಾಪುರ: ಮೈಸೂರಿನ ಕರ್ನಾಟಕ ಕಲಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಪಾಡಿಯ ರೋಷನ್ ಭಾಸ್ಕರ್ ಪೂಜಾರಿಯವರು 2015-16ನೇ ಸಾಲಿನಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡುವ ಕನ್ನಡ ಮಾಧ್ಯಮ ಪ್ರಶಸ್ತಿಯನ್ನು ಸ್ವೀಕರಿಸಿದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹಿನ್ನಲೆಯಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದರು. ಈತ ಉದ್ಯಮಿ ಭಾಸ್ಕರ ಗುಲ್ವಾಡಿ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಕಲ್ಪನಾ ಭಾಸ್ಕರ್ ಅವರ ಪುತ್ರ.
ಬೈಂದೂರು: ಆಚಾರ್ಯ ಶಂಕರ ಭಗವತ್ಪಾದರು ಪ್ಲೇಟೋ, ಐನ್‌ಸ್ಟೇನ್‌ರಂತೆ ವಿಶ್ವದ ಶ್ರೇಷ್ಠ ದಾರ್ಶನಿಕರು. ಇವರ ವಿಚಾರಧಾರೆಗಳು ದೇಶ, ಕಾಲ ಪರಿಧಿಯನ್ನು ಮೀರಿ ಪರಮ ಸತ್ಯದ ಅನ್ವೇಷಣೆ ಮತ್ತು ಅನುಭವಕ್ಕೆ ತಕ್ಕುದಾದುದು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು. ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ಶೃಂಗೇರಿಯ ಶಾಂಕರ ತತ್ತ್ವ ಪ್ರಸಾರ ಅಭಿಯಾನಂ ಶೃಂಗೇರಿ ಇವರು ಆಯೋಜಿಸಿದ ಶ್ರೀಶಂಕರ ಅಷ್ಟೋತ್ತರ ಶತಮಾನ ಜಪ ಯಜ್ಞವನ್ನು ತಾಲೂಕಿನಾದ್ಯಂತ ನಡೆಸುವ ಸಂಕಲ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿಶ್ವಾದ್ಯಂತ ಭಾರತ ದೇಶವು ಹಿಂಜರಿಕೆ ಮತ್ತು ಕ್ಲ್ಯಷ್ಟಗಳಿಂದ ಮುಕ್ತವಾಗಿ ಮುನ್ನುಗುತ್ತಿರುವ ಈ ದಿನಗಳಲ್ಲಿ ಆಚಾರ್ಯರು ಪ್ರತಿಪಾದಿಸಿದ ಒಂದು ಸತ್ಯ ಒಂದು ರಾಷ್ಟ್ರ. ಆದರೆ ಅನೇಕ ರೂಪುಗಳು, ಭಾವಗಳು ಎಂಬುವುದರಿಂದ ಸ್ಪೂರ್ತಿ ಪಡೆಯಬಹುದು. ಯಾವುದೇ ವಿಚಾರ ನಿಂತ ನೀರಾಗದೆ ಕಾಲಗತಿಯಲ್ಲಿ ಪರಂಪರೆಯಿಂದ ಪುಷ್ಠಿ ಪಡೆಯುವುದು. ಇಲ್ಲಿ ವ್ಯಕ್ತಿ ಮುಖ್ಯವಾಗದೆ ತತ್ತ್ವವೂ ಪ್ರಸ್ತುತವಾಗುತ್ತದೆ ಎಂದರು. ಸಮಿತಿ ಗೌರವಾಧ್ಯಕ್ಷ ಬಿ.ರಾಮಕೃಷ್ಣ ಶೇರೆಗಾರ್ ಅಧ್ಯಕ್ಷತೆವಹಿಸಿದ್ದರು. ಯು. ಅಭಯ ಮಯ್ಯ…
