Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ:  ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದಲೇ ರಾಜ್ಯದಲ್ಲಿ ಹೆಸರು ಮಾಡಿದ್ದ ಐಪಿಎಸ್ ಅಧಿಕಾರಿ, ವಡ್ಡರ್ಸೆ ಮೂಲದ ಮಧುಕರ ಶೆಟ್ಟಿ (೪೯) ಡಿ.೨೮ರ ರಾತ್ರಿ ಹೈದರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಹೃದಯ ಸಂಬಂಧಿ ಖಾಯಿಲೆಯಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದದರು ಮೂಲಗಳ ಮಾಹಿತಿ ಪ್ರಕಾರ ಮಧುಕರ್​ ಶೆಟ್ಟಿ ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತುರ್ತು ಚಿಕಿತ್ಸೆಯಲ್ಲಿದ್ದ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳದೇ ಕೊನೆಯುಸಿರೆಳೆದಿದ್ದಾರೆ. ಮಧುಕರ ಶೆಟ್ಟಿ ಅವರ ಚಿಕಿತ್ಸೆಯ ಬಗ್ಗೆ ಖುದ್ದು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​, ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು, ಕರ್ನಾಟಕದ ಹಲವು ಐಪಿಎಸ್ ಅಧಿಕಾರಿಗಳು ಮಾಹಿತಿ ಪಡೆದುಕೊಳ್ಳುತ್ತಲೇ ಇದ್ದರು. ಕರ್ನಾಟಕ ಸರ್ಕಾರ ಸಿಐಡಿ ಎಡಿಜಿಪಿ ಪ್ರತಾಪ್​ ರೆಡ್ಡಿಯವರನ್ನು ಚಿಕಿತ್ಸೆ ಮೇಲ್ವಿಚಾರಣೆಗೆ ನೇಮಿಸಿತ್ತು.  ಕುಂದಾಪ್ರ ಡಾಟ್ ಕಾಂ ಸುದ್ದಿ. ಕರ್ನಾಟಕ ರಾಜ್ಯದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರವನ್ನು ಮತ್ತು ಭ್ರಷ್ಟರನ್ನು ಬೇಟೆ ಮಾಡುತ್ತಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ’ ಸುದ್ದಿ ರತ್ನಾಕರ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ). ಬಸ್ರೂರು ಕುಂದಾಪುರ ತಾಲೂಕಿನ ಸಾಧಕರಿಗೆ ನೀಡಲಾಗುತ್ತಿರುವ 2018-19ನೇ ಸಾಲಿನ ಕೊಳ್ಕೇರಿ ರತ್ನಾಕರ ಶೆಟ್ಟಿ ಸಾಧಕ ಪ್ರಶಸ್ತಿಗೆ ಕಂದಾವರ ಸತೀಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಂದಾವರ ಸತೀಶ ಶೆಟ್ಟಿಯವರ ವಿಭಿನ್ನವಾದ ಸಾಧನೆಗಾಗಿ ಯುಎಇ ಸರಕಾರದ 2017ರ ಎನೋಕ್ ಎನರ್ಜಿ ಅವಾರ್ಡನ್ನು ಕೊಟ್ಟು ಗೌರವಿಸಿದೆ. ಯುಎಇ ಫ್ಯುಯಲ್ ಸ್ಟೇಷನ್ನ ಡಿಸೈನ್ ಮತ್ತು ಇಂಜಿನಿಯರಿಂಗ್ ಎನರ್ಜಿ ಸ್ಟ್ಯಾಂಡರ್ಡ್ ತಯಾರಿ ಮಾಡಿದ್ದಕ್ಕಾಗಿ ದುಬೈ ರೋಟನನಲ್ಲಿ ನಡೆದ ಎಕ್ಸ್‌ಕ್ಲೂಸಿವ್ ಸಭೆಯಲ್ಲಿ ಅವರನ್ನು ಗೌರವಿಸಲಾಗಿದೆ. ಮದ್ಯಪ್ರಾಚ್ಯದ ಕೈಗಾರಿಕಾ ಕಂಪನಿಗಳಲ್ಲಿ ಪ್ರತಿಷ್ಟಿತವಾಗಿರುವ ಕ್ಲೈಮೇಟ್ ಕಂಟ್ರೋಲ್ ಅವಾರ್ಡ್ ೨೦೧೭ರ ಆಯ್ಕೆ ಸಮಿತಿಯ ಸದಸ್ಯರಾಗಿ ಯುಎಇ ಸರಕಾರದಿಂದ ನಾಮ ನಿರ್ದೇಶನ ಹೊಂದಿದ್ದಾರೆ. ಸತೀಶ್ ಶೆಟ್ಟಿ ಅವರ ಈ ಸಾಧನೆಯನ್ನು ಪರಿಗಣಿಸಿ ಕೊಳ್ಕೇರಿ ರತ್ನಾಕರ ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ರಿ.) ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಪ್ರಶಸ್ತಿ ನೀಡುತ್ತಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೀದರ್ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ ೫೩ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಉತ್ತರಪ್ರದೇಶದ ಮಥುರಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ೯ ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಬಾಲಕಿಯರ ೧೬ ವಯೋಮಿತಿಯಲ್ಲಿ ದೀಪಾಶ್ರೀ ೩ನೇ ಸ್ಥಾನ, ೧೮ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಮಾಲಾಶ್ರೀ ೪ನೇ ಸ್ಥಾನ, ಚೈತ್ರಾ ಪಿ. ೫ನೇ ಸ್ಥಾನ, ಸಂಧ್ಯಾ ೭ನೇ ಸ್ಥಾನ, ರಕ್ಷಿತಾ ೧೦ನೇ ಸ್ಥಾನ, ೧೮ ವಯೋಮಿತಿ ಬಾಲಕರ ವಿಭಾಗದಲ್ಲಿ ಅಸ್ಲಾಮ್ ಮುಲ್ತಾನಿ ೨ನೇ ಸ್ಥಾನ, ಸತೀಶ್ ೭ನೇ ಸ್ಥಾನ. ೨೦ ವಯೋಮಿತಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಚೈತ್ರಾ ಡಿ. ಪ್ರಥಮ ಸ್ಥಾನ, ಪ್ರಿಯಾ ಎಲ್.ಡಿ ೩ನೇ ಸ್ಥಾನ, ಜಯಲಕ್ಷ್ಮೀ ೯ನೇ ಸ್ಥಾನ, ರೇಷ್ಮಾ ೧೦ನೇ ಸ್ಥಾನ, ಪುರುಷರ ವಿಭಾಗದಲ್ಲಿ ರಂಜಿತ್ ಸಿಂಗ್ ಪ್ರಥಮ ಸ್ಥಾನ, ಅನಿಲ್ ೯ನೇ ಸ್ಥಾನ, ಪ್ರವೀಣ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶ್ವ ಮಾನವತೆ ಸಂದೇಶ ಸಾರಿದ ಮಹಾನ್ ದಾರ್ಶನಿಕ ಕವಿ ಕುವೆಂಪು ಅವರ ಜನ್ಮ ದಿನೋತ್ಸವದ ನೆನಪಿಗಾಗಿ ಪ್ರತಿವರ್ಷ ರಂಗಕಹಳೆ ರಿ. ಮಕ್ಕಳ ರಂಗಶಾಲೆ ಆಯೋಜಿಸುತ್ತಿರುವ ’ಕುವೆಂಪು ನಾಟಕೋತ್ಸವ’ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ಆಯೋಜನೆಗೊಂಡಿದ್ದು ಡಿ. 25ರ ಮಂಗಳವಾರದಿಂದ ಡಿ.29ರ ಶನಿವಾರದ ತನಕ ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ಡಾ. ಹೆಚ್. ಶಾಂತಾರಾಮ್ ಬಯಲು ರಂಗ ಮಂಟಪದಲ್ಲಿ ಜರುಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ಹಾಗೂ ಭಂಡಾರ್ಕಾರ್ಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗುತ್ತಿರುವ 18ನೇ ಕುವೆಂಪು ನಾಟಕೋತ್ಸವದಲ್ಲಿ ಪ್ರತಿ ದಿನ ಸಂಜೆ 6 ರಿಂದ ಎರಡು ನಾಟಕಗಳು ಪ್ರದರ್ಶನಗೊಳ್ಳಲಿದೆ. ಈ ನಡುವೆ ಕುವೆಂಪು ಜನ್ಮದಿನೋತ್ಸವ, ವಿಚಾರ ಸಂಕಿರಣ, ಸಾಧಕರಿಗೆ ಗೌರವಾರ್ಪಣೆ, ಚಲನಚಿತ್ರ ಪ್ರದರ್ಶನ, ಕುವೆಂಪು ಗೀತ ಗಾಯನ ನಡೆಯಲಿದೆ. ನಾಟಕ , ಚಲನಚಿತ್ರ ಪ್ರದರ್ಶನ: ಡಿ.25ರಂದು ಸಿ. ಲಕ್ಷ್ಮಣ ನಿರ್ದೇಶನದ ರಂಗಕಹಳೆ ತಂಡದ ಪ್ರಸ್ತುತಿಯ ಬೊಮ್ಮನಹಳ್ಳಿಯ ಕಿಂದರಿಜೋಗಿ ನಾಟಕ, ಬಳಿಕ ಓಹಿಲೇಶ್ ಎಲ್. ನಿರ್ದೇಶನದ ಬೆಂಗಳೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮನಸ್ಸಿನಲ್ಲಿ ಪ್ರೀತಿ ತುಂಬಿಕೊಂಡರೆ ದೇಹವು ರೋಗಮುಕ್ತವಾಗಿರುತ್ತೆ. ಮಧ್ಯಪಾನ, ಧೂಮಪಾನದಿಂದ ದೂರವಿದ್ದು, ಪ್ರೀತಿ ಹಂಚುವುದೇ ಆರೋಗ್ಯದ ಗುಟ್ಟು ಎಂದು ಪದ್ಮಶ್ರೀ ಡಾ. ಬಿ. ಎಂ. ಹೆಗ್ಡೆ ಹೇಳಿದರು. ಅವರು ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ೮೪ನೇ ಹುಟ್ಟು ಹಬ್ಬದ ಆಚರಣೆ ಮತ್ತು ದತ್ತಿನಿಧಿ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯರ ದೊಡ್ಡ ಆಸ್ತಿಯೆಂದರೆ ಪ್ರೀತಿ ಮಾಡುವ ಮಕ್ಕಳು. ಬದುಕಿನಲ್ಲಿ ಆಸ್ತಿ ಮಾಡುವ ಬದಲು ಅವರು ಪ್ರೀತಿಯಿಂದ ನೋಡಿಕೊಳ್ಳುವಂತೆ ಮಾಡಿ. ಆರೋಗ್ಯದಿಂದ ಇರುವುದೆಂದರೆ ಖಾಯಿಲೆಯಿಂದ ದೂರವಿರುವುದಲ್ಲ ಬದಲಿಗೆ ಕೆಲಸ ಮಾಡಲು ಹುಮ್ಮಸ್ಸನ್ನು ತುಂಬಿಕೊಳ್ಳುವ ಸ್ಥಿತಿಯದು. ದಿನದಲ್ಲಿ ಮನಸ್ಫೂರ್ತಿಯಿಂದ ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಿಂದ ಸುಖ, ನೆಮ್ಮದಿಯೂ ದೊರೆಯುತ್ತದೆ ಎಂದವರು ಸಲಹೆಯಿತ್ತ ಅವರು ಅಪ್ಪಣ್ಣ ಹೆಗ್ಡೆ ಅವರ ಆಯೋಗ್ಯದ ಗುಟ್ಟು ಅವರ ಮದಸ್ಮಿತ ಮುಖದಲ್ಲಿದೆ ಎಂದರು. ಕೋಣಿ ರಮಾನಂದ ಕಾರಂತರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ’ಭಾರತ ಸ್ವಾತಂತ್ರ್ಯ ಗಳಿಸಿ ಪ್ರಜಾತಂತ್ರ ವ್ಯವಸ್ಥೆಗೆ ಹೊರಳಿಕೊಂಡಾಗ ಜನರಿಂದ ಆದ ಜನರಿಗಾಗಿ ಇರುವ ಜನರ ಸರ್ಕಾರ ಬಂತೆಂದು ಹಿಗ್ಗಿದೆವು. ಆದರೇ ನಾವೀಗ ಇಲ್ಲಿ ಕೆಲವರಿಂದ ಆದ ಕೆಲವರಿಗಾಗಿ ಇರುವ ಕೆಲವರ ಸರ್ಕಾರವನ್ನು ಕಾಣುತ್ತಿದ್ದೇವೆ. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಯುವ ಜನತೆ ಇದನ್ನು ಬದಲಿಸಬೇಕು’ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು. ನಾಗೂರಿನ ಕುಸುಮ ಫೌಂಡೇಶನ್ ಭಾನುವಾರ ಆಯೋಜಿಸಿದ್ದ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಅವರು ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗ್ಡೆ ಅವರಿಗೆ ಈ ಸಾಲಿನ ’ಕುಸುಮಶ್ರೀ’ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ದಿಕ್ಸೂಚಿ ಭಾಷಣ ಮಾಡಿದರು. ಲೋಕಾಯುಕ್ತನಾದ ಬಳಿಕ ನನಗೆ ದೇಶದ ವಾಸ್ತವ ಸ್ಥಿತಿಯ ಅರಿವಾಯಿತು. ಜನರು ಭ್ರಷ್ಟರನ್ನು, ಅಯೋಗ್ಯರನ್ನು, ಅತ್ಯಾಚಾರಿಗಳನ್ನು ಬಹಿಷ್ಕರಿಸುವ ಬದಲಿಗೆ ಪುರಸ್ಕರಿಸುವುದನ್ನು ಕಂಡು ಆಘಾತಗೊಂಡೆ. ಇದರ ಫಲವಾಗಿ ದೇಶ ಅಭಿವೃದ್ಧಿಯಾಗುವುದರ ಬದಲಿಗೆ ಆಡಳಿತಗಾರರಿಂದ ನಡೆಯುತ್ತ ಬಂದ ಹಗರಣಗಳ ಮೊತ್ತ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ. ಈ ಪರಿಯ ಸೋರಿಕೆಯಿಂದ ನಿಜವಾದ ಅಭಿವೃದ್ಧಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾಗಿರಿ: ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಭಿನ್ನ ರೀತಿಯ ಕಲೆಗಳಿರುತ್ತವೆ. ಅದನ್ನು ಪ್ರದರ್ಶಿಸಲು ಆಸಕ್ತಿ ಮತ್ತು ಅವಕಾಶ ತುಂಬಾ ಮುಖ್ಯ. ಆಸಕ್ತಿ ಎನ್ನುವುದು ಸತತ ಪ್ರಯತ್ನದಿಂದ ಹುಟ್ಟಿಕೊಂಡರೇ, ಅವಕಾಶ ಕಲೆಗಾರನನ್ನು ಅರಸುತ್ತಾ ಬರುತ್ತದೆ ಎಂದು ಬೆಂಗಳೂರಿನ ಹಿರಿಯ ಶಿಲ್ಪಕರ್ಮಿ ಸೂರಾಲು ವೆಂಕಟರಮಣ ಭಟ್ ತಿಳಿಸಿದರು ಆಳ್ವಾಸ್ ವಿರಾಸತ್ ೨೦೧೮ರ ಅಂಗವಾಗಿ ನಡೆಯುತ್ತಿರುವ ‘ಆಳ್ವಾಸ್ ಶಿಲ್ಪ ವಿರಾಸತ್’ನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದರೆ ಶಿಲ್ಪಕಲೆಯು ಅಗತ್ಯವಾಗಿದೆ. ಆದ್ದರಿಂದ ಇದಕ್ಕೆ ಯಾವತ್ತೂ ಬೇಡಿಕೆ ಕಡಿಮೆಯಾಗುವುದಿ. ದೇವರು ದೇವಸ್ಥಾನಗಳಲ್ಲದೆ ಇನ್ನೂ ವಿಭಿನ್ನ ಶೈಲಿಯ ಶಿಲ್ಪಕಲೆಗಳಿವೆ. ಇದೆಲ್ಲವನ್ನೂ ಜನರಿಗೆ ಪರಿಚಯಿಸುವ ಪ್ರಯತ್ನವಾಗಬೇಕಿದೆ. ಶಿಲ್ಪಕಲೆ ಸಮರ್ಪಣಾ ಮನೋಭಾವ ಹಾಗೂ ನಿರಂತರ ಪರಿಶ್ರಮವನ್ನು ಬೇಡುವ ಕ್ಷೇತ್ರ. ಒಂದು ಶಿಲ್ಪವನ್ನು ಆರಂಭಿಸುವ ಮೊದಲು ಶಿಲ್ಪಿಯಲ್ಲೇ ದೃಢವಾದ ಆತ್ಮವಿಶ್ವಾಸ ಜೊತೆಗೆ ಸತತ ಪರಿಶ್ರಮವಿರಬೇಕು ಆಗ ಮಾತ್ರ ಶಿಲ್ಪಕ್ಕೆ ಒಂದು ಒಳ್ಳೆಯ ರೂಪ, ಬೆಲೆ ಬರಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಡಾ ಗ್ರಾಮದ ಪಡುಕೋಣೆ ಗ್ರೇಗರಿ ಹೈಸ್ಕೂಲು ಮೈದಾನದಲ್ಲಿ ಆಯೋಜಿಸಲಾದ ಮೂರು ದಿನಗಳ ನಾಡ ಹಬ್ಬಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಸಂಜೆ ಅದ್ದೂರಿ ಶೋಭಾಯಾತ್ರೆ, ಬಳಿಕ ಉದ್ಘಾಟನಾ ಸಮಾರಂಭ ಜರುಗಿತು. ಖ್ಯಾತ ನಿರೂಪಕಿ ಅನುಶ್ರೀ, ವಿವಿಧ ಕಿರುತೆರೆ ಕಲಾವಿದರು ಹಾಗೂ ನೃತ್ಯತಂಡಗಳು ನೆರದಿದ್ದ ಸಹಸ್ರಾರು ಮಂದಿಯನ್ನು ರಂಜಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬಂಕೇಶ್ವರ ರಸ್ತೆಯಲ್ಲಿರುವ ರೈಲ್ವೆ ಎಲ್‌ಸಿ ಗೇಟನ್ನು ಮುಚ್ಚಿ ಅಂಡರ್ ಬ್ರಿಡ್ಜ್ ನಿರ್ಮಿಸಲು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂಜಯ ಗುಪ್ತಾ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಬೈಂದೂರಿಗೆ ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಈ ಬಗ್ಗೆ ತಿಳಿಸಿದ್ದಾರೆ. ರೈಲ್ವೆ ಅಂಡರ್ ಪಾಸ್‌ಗೆ ಸುಮಾರು ಒಂದು ಕೋಟಿ ರೂ. ಅಂದಾಜು ವೆಚ್ಚದ ತಗಲಲಿದ್ದು ಭಾಗಶಃ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಸುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ ಎಂದು ರಾಪ್ಟ್ರೀಯ ರೈಲ್ವೆ ಪ್ರಯಾಣಿಕರ ಪರಾಮರ್ಶಕ ಸಮಿತಿ ಸದಸ್ಯ ಕೆ. ವೆಂಕಟೇಶ ಕಿಣಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಕೊಂಕಣ ರೈಲ್ವೆ ಇಂಜಿನೀಯರ್ ವೆಂಕಟೇಶ್ ಇದ್ದರು.

Read More

ಕುಂದಾಪ್ರ ಡಾಟ್ ಕಾಂ’ ವರದಿ ಕುಂದಾಪುರ: ಬೈಂದೂರು ತಾಲೂಕಿನಲ್ಲಿ ಪ್ರಥಮ ಬಾರಿಗೆ ವಿಭಿನ್ನ ಸಂಯೋಜನೆಯೊಂದಿಗೆ ವಿಶಿಷ್ಟ ಕಾರ್ಯಕ್ರಮವೊಂದು ಆಯೋಜನೆಗೊಂಡಿದೆ. ಕ್ರೀಡೆ, ಸಿನೆಮಾ ಮುಂತಾದ ಕ್ಷೇತ್ರದಲ್ಲಿ ವಿಶ್ವಖ್ಯಾತಿ ಗಳಿಸಿರುವ ನಾಡ ಗ್ರಾಮದ ಪಡುಕೋಣೆಯಲ್ಲಿ ಅದ್ದೂರಿ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಲಿದೆ. ನಾಡಾ ಗ್ರಾಮದ ಹೊಯ್ಸಳ ಕಲ್ಚರಲ್ ಟ್ರಸ್ಟ್ ರಿ. ಸಾರಥ್ಯದಲ್ಲಿ ನಾಡಹಬ್ಬ ೨೦೧೮ ಅದ್ದೂರಿ ಕ್ರೀಡಾ ಜಾತ್ರೆ, ಗಾನ ನೃತ್ಯ ಜಾತ್ರೆ ಹಾಗೂ ಯಕ್ಷ ಜಾತ್ರೆ ಕಾರ್ಯಕ್ರಮ ಡಿಸೆಂಬರ್ 22, 23, 24 ರಂದು ಪಡುಕೋಣೆ ಗ್ರೆಗರಿ ಪ್ರೌಢಶಾಲಾ ಮೈದಾನದಲ್ಲಿ ಜರುಗಲಿದ್ದು ಭರದ ಸಿದ್ಧತೆ ನಡೆದಿದೆ. ಡಿ. 22ರ ಬೆಳಿಗ್ಗೆ 9 ಗಂಟೆಗೆ ಹಿರಿಯ, ಕಿರಿಯ ವಿಭಾಗದಲ್ಲಿ ಪ್ರತ್ಯೇಕ ಮ್ಯಾರಾಥಾನ್ ಓಟ ನಡೆಯಲಿದೆ. ಅಂದು ಸಂಜೆ ಸಮಾಜದ ಗಣ್ಯ ವ್ಯಕ್ತಿಗಳಿಂದ ನಾಡ ದೇವತೆಯ ಅದ್ದೂರಿಯ ಪುರಮೆರವಣಿಗೆ ಉದ್ಘಾಟನೆಗೊಳ್ಳಲಿದೆ. ಸಂಜೆ 7ರಿಂದ ನಾಡ ಹಬ್ಬದ ಉದ್ಘಾಟನೆ ನಡೆಯಲಿದ್ದು ಮೆರಿಟ್ ಹಾಸ್ಪಿಟಾಲಿಟಿ ಸರ್ವಿಸಸ್ ಆಡಳಿತ ನಿರ್ದೇಶಕ ಅಶೋಕ ಎಸ್. ಶೆಟ್ಟಿ ಸಮೃದ್ಧಿ ಬೆಳ್ಳಾಡಿ ಕಾರ್ಯಕ್ರಮವನ್ನು…

Read More