Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಹಾತ್ಮ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಸಹಿಷ್ಣುತೆಯಂತಹ ವಿಚಾರಗಳು ಭಾರತಕ್ಕಷ್ಟೇ ಅಲ್ಲ, ಪ್ರಸಕ್ತ ಕಾಲಘಟ್ಟದಲ್ಲಿ ಇಡೀ ಜಗತ್ತಿಗೆ ಪ್ರಸ್ತುತ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು. ಬೈಂದೂರಿನ ರಂಗಸುರಭಿ ಮತ್ತು ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ ರೋಟರಿ ಸಮುದಾಯ ಭವನದಲ್ಲಿ ಧಾರವಾಡದ ರಂಗಾಯಣ ತಂಡ ’ಗಾಂಧಿ ೧೫೦-ಒಂದು ರಂಗಪಯಣ’ ಭಾಗವಾಗಿ ಭಾನುವಾರ ಪ್ರದರ್ಶಿಸಿದ ಬೊಳುವಾರು ಮಹಮದ್ ಕುಂಞಿ ಅವರ ’ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ರಂಗರೂಪಕವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಗಾಂಧೀಜಿ ವ್ಯಕ್ತಿತ್ವ, ಬದುಕು, ಸಂದೇಶ-ಸಾಧನೆಗಳು ನಾಟಕಗಳಲ್ಲಿ ಹಿಡಿದಿಡಲಾಗದಷ್ಟು ಅಗಾಧ ಮತ್ತು ಉತ್ತುಂಗವಾದವುಗಳು. ಆದರೆ ಅವುಗಳನ್ನು ಜನಮನದಲ್ಲಿ ಬಿತ್ತುವ ಕೆಲಸವನ್ನು ಕೆಲಮಟ್ಟಿಗೆ ರಂಗಪ್ರದರ್ಶನಗಳು ಮಾಡಬಹುದಾದ್ದರಿಂದ ಅಂತಹ ಕಾರ್ಯ ಸ್ತುತ್ಯರ್ಹ ಎಂದು ಅವರು ಹೇಳಿದರು. ರೋಟರಿ ಅಧ್ಯಕ್ಷ ಐ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ ಸ್ವಾಗತಿಸಿದರು. ಸುರಭಿಯ ನಿರ್ದೇಶಕ ಕೃಷ್ಣಮೂರ್ತಿ ಉಡುಪ ವಂದಿಸಿದರು. ಸುಧಾಕರ ಪಿ. ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಪುರಸಭಾ ಚುನಾವಣೆಯಲ್ಲಿ ಬಿಜೆಪಿ 14 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೇ, ಕಾಂಗ್ರೆಸ್ 8 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಪುರಸಭೆಯ 23 ವಾರ್ಡುಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ ಇಲ್ಲಿದೆ. ಫೆರಿ ರಸ್ತೆ ವಾರ್ಡ್ – ಅಬು ಮಹಮ್ಮದ್ (ಕಾಂಗ್ರೆಸ್) ಮದ್ದುಗುಡ್ಡೆ ವಾರ್ಡ್ – ರಾಘವೇಂದ್ರ ಖಾರ್ವಿ (ಬಿಜೆಪಿ) ಈಸ್ಟ್ ಬ್ಲಾಕ್ ವಾರ್ಡ್ – ಪ್ರಭಾವತಿ ಶೆಡ್ತಿ (ಕಾಂಗ್ರೆಸ್) ಖಾರ್ವಿಕೇರಿ ವಾರ್ಡ್ – ಚಂದ್ರಶೇಖರ ಖಾರ್ವಿ (ಕಾಂಗ್ರೆಸ್) ಬಹದ್ದೂರ್ ಶಾ ವಾರ್ಡ್ – ಸಂದೀಪ ಖಾರ್ವಿ (ಬಿಜೆಪಿ) ಚಿಕ್ಕನಸಾಲು ಎಡಬದಿ ವಾರ್ಡ್ – ಸಂತೋಷ್ ಶೆಟ್ಟಿ (ಬಿಜೆಪಿ) ಕುಂದಾಪ್ರ ಡಾಟ್ ಕಾಂ ಸುದ್ದಿ. ಮೀನು ಮಾರ್ಕೆಟ್ ವಾರ್ಡ್ – ಶ್ರೀಧರ ಶೇರೆಗಾರ್ (ಕಾಂಗ್ರೆಸ್) ಚಿಕ್ಕನಸಾಲು ಬಲಬದಿ ವಾರ್ಡ್ – ಕೆ.ಜಿ ನಿತ್ಯಾನಂದ (ಕಾಂಗ್ರೆಸ್) ಸರಕಾರಿ ಆಸ್ಪತ್ರೆ ವಾರ್ಡ್ – ದೇವಕಿ ಸಣ್ಣಯ್ಯ (ಕಾಂಗ್ರೆಸ್) ಚರ್ಚ್ ರೋಡ್ ವಾರ್ಡ್ – ಪ್ರಭಾಕರ್ (ಬಿಜೆಪಿ) ಸೆಂಟ್ರಲ್ ವಾರ್ಡ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕುಂದಾಪುರ ಪುರಸಭೆಯ 23 ವಾರ್ಡುಗಳ ಪೈಕಿ 14 ವಾರ್ಡುಗಳನ್ನು ಭಾರತೀಯ ಜನತಾ ಪಾರ್ಟಿ, 8 ವಾರ್ಡುಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ 1 ವಾರ್ಡ್‌ನ್ನು ಪಕ್ಷೇತರ ಅಭ್ಯರ್ಥಿ ಗೆದ್ದುಕೊಂಡು, ಬಿಜೆಪಿ ದೊಡ್ಡ ಪಕ್ಷವಾಗಿ ಬೀಗಿದೆ. ಇಂದು ಬೆಳಿಗ್ಗೆ ಕುಂದಾಪುರದಲ್ಲಿ ನಡೆದ ಮತ ಎಣಿಕೆ ಕೇಂದ್ರದ ಬಳಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಪಕ್ಷದ ಗೆಲುವಿನ ಸೂಚನೆ ದೊರೆಯುತ್ತಿದ್ದಂತೆ ಸಂಭ್ರಮಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗೆದ್ದ ಅಭ್ಯರ್ಥಿಗಳೊಂದಿಗೆ ವಿಜಯೋತ್ಸವ ಆಚರಿಸಿದರು.

Read More

6 ಭಾರಿ ರಾಷ್ಟ್ರ ಮಟ್ಟದ ಪದಕ ವಿಜೇತೆ. ಮೊದಲು ಭಾರಿಗೆ ಅಂತರಾಷ್ಟ್ರೀಯ ಸ್ವರ್ಧೆಯತ್ತ ಹೆಜ್ಜೆ ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಆರು ಭಾರಿ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಅಥೆಟಿಕ್ಸ್ನಲ್ಲಿ ಭಾಗವಹಿಸಿ ತ್ರಿಪಲ್ ಜಂಪ್, ಹೈಜಂಪ್, ಲಾಂಗ್ ಜಂಪ್ ಮೊದಲಾದ ಕ್ರೀಡೆಗಳಲ್ಲಿ ಸತತವಾಗಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಗೆಲ್ಲುತ್ತಲೇ ತಮ್ಮ ಕ್ರೀಡಾ ಪ್ರಾವೀಣ್ಯತೆಯನ್ನು ಮೆರೆಯುತ್ತಾ ಬಂದಿರುವ ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಾಕುಮಾರಿ ಜಿ. ಅವರು ಇದೀಗ ಅಂತರಾಷ್ಟ್ರೀಯ ಮಟ್ಟದ ಸ್ವರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ತಯಾರಿ ನಡೆಸುತ್ತಿದ್ದಾರೆ. 2013ರಿಂದಲೂ ಇಂಡಿಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸುತ್ತಿರುವ ಶಾಂತಾಕುಮಾರಿ ಅವರು ಪ್ರತಿ ವರ್ಷವೂ ವಿವಿಧ ವಿಭಾಗಳಲ್ಲಿ ಪದಕ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಲು ಅರ್ಹತೆ ಪಡೆಯುತ್ತಲೇ ಬಂದಿದ್ದಾರೆ. ಪ್ರಸಕ್ತ ವರ್ಷ ಮಂಗಳೂರಿನಲ್ಲಿ ನಡೆದ ನ್ಯಾಶನಲ್ ಅಥ್ಲೆಟಿಕ್ಸ್ನಲ್ಲಿ 1 ಚಿನ್ನ, 2 ಬೆಳ್ಳಿಯ ಪದಕವನ್ನು ಗೆದ್ದಿದ್ದು ಅಂತರಾಷ್ಟ್ರೀಯ ಮಟ್ಟದ ಸ್ವರ್ಧೆ ’ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಒಪನ್ ಮೀಟ್ನಲ್ಲಿ ಭಾಗವಹಿಸಲು ಅಣಿಯಾಗುತ್ತಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿಗೆ ಸಮೀಪದ ಶಿರೂರು ಕೋಣಮಕ್ಕಿ ಸೇತುವೆ ಬಳಿ ಕುಟುಂಬ ಸದಸ್ಯರ ಜೊತೆ ಪಿಕ್‌ನಿಕ್ ಬಂದ ವೇಳೆ ನದಿಯಲ್ಲಿ ಈಜಲು ತೆರಳಿದ್ದ ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಭಟ್ಕಳದ ರಾಜು(28) ಹಾಗೂ ಜಮೀರ್ (22) ಮೃತ ದುರ್ದೈವಿಗಳು. ಸೇತುವೆ ಬಳಿ ರಾಜು ನದಿಯಲ್ಲಿ ಈಜುತ್ತಿದ್ದ ವೇಳೆ ನೀರಿನ ಸುಳಿಗೆ ಸಿಲುಕಿ ಮುಳುಗಲಾರಂಭಿಸಿದ್ದಾರೆ. ಇದನ್ನು ಗಮನಿಸಿ ಅವರನ್ನು ರಕ್ಷಿಸಲು ತೆರಳಿದ ಜಮೀರ್ ಕೂಡ ಈಜಲಾಗದೆ ನೀರು ಪಾಲಾದರು. ಅಕ್ಕಪಕ್ಕದ ಮನೆಯ ಒಟ್ಟು ಎಂಟು ಮಂದಿ ಬಂದಿದ್ದರೆನ್ನಲಾಗಿದೆ. ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಹಾಗೂ ಸಿಬ್ಬಂಧಿಗಳು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರತಿಭೆ ಇದೆ. ಆದರೆ ಅದರ ವಿಕಾಸಕ್ಕೆ ವೇದಿಕೆ ಬೇಕು. ಜೇಸಿಐ ಅಂತಹ ವೇದಿಕೆ ಎಂದು ಕುಂದಾಪುರ ಜೇಸಿಐ ಸ್ಥಾಪಕಾಧ್ಯಕ್ಷ ಎ. ಎಸ್. ಎನ್. ಹೆಬ್ಬಾರ್ ಹೇಳಿದರು. ಶನಿವಾರ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ನಡೆದ ಬೈಂದೂರು ಜೇಸಿಐ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಮಾತನಾಡಿದರು. ಜೇಸಿ ಧ್ಯೇಯವಾಕ್ಯವು ದೇವರಲ್ಲಿ ನಂಬಿಕೆ ಇರಿಸಿಕೊಳ್ಳಬೇಕು ಎನ್ನುತ್ತದೆ. ಆದರೆ ವ್ಯಕ್ತಿಯ ಉದ್ದಾರಕ್ಕೆ ಅದಷ್ಟೇ ಸಾಲದು. ಅದರೊಂದಿಗೆ ಸ್ವಪ್ರಯತ್ನವೂ ಅಗತ್ಯ. ಜೇಸಿ ವ್ಯಕ್ತಿಯ ವಿಕಾಸಕ್ಕೆ ಆದ್ಯತೆ ನೀಡುತ್ತದೆ. ಆ ಮೂಲಕ ಜೇಸಿ ಸದಸ್ಯ ತನ್ನ ಸಾಮಾಜಿಕ ಹೊಣೆ ನಿಭಾಯಿಸುದರ ಜತೆಗೆ ಕೈಗೊಳ್ಳುವ ಉದ್ಯೋಗದಲ್ಲಿ ಯಶಸ್ಸು ಪಡೆಯುವುದೂ ಸಾಧ್ಯವಾಗಬೇಕು ಎನ್ನುವ ಗುರಿ ಹೊಂದಿದೆ ಎಂದು ಅವರು ಹೇಳಿದರು. ಶಿರೂರು ಜೇಸಿಐ ಪ್ರವರ್ತಿಸಿದ ಬೈಂದೂರು ಸಿಟಿ ಘಟಕವನ್ನು ಉದ್ಘಾಟಿಸಿದ ವಲಯಾಧ್ಯಕ್ಷ ರಾಕೇಶ್ ಕುಂಜೂರ್ ಮಾತನಾಡಿ ಜೇಸಿಐ ವಿಶಾಲ ಸಮುದ್ರ. ಸಮುದ್ರದಲ್ಲಿ ಇರುವ ಮುತ್ತುರತ್ನಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ, ಉಪ್ಪುಂದ ಇದರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ಆ.30ರಂದು ಸಂಘದ ಆಡಳಿತ ಕಛೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ಸಹಕಾರಿ ಧುರೀಣ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಹಾಗೂ ಟಿಎಪಿಸಿಎಮ್‌ಎಸ್ ಸಂಸ್ಥೆಯ ನಿರ್ದೇಶಕರಾದ ಮೋಹನ್ ಪೂಜಾರಿ ಉಪ್ಪುಂದ ಹಾಗೂ ಉಪಾಧ್ಯಕ್ಷರಾಗಿ ಯುವ ಉದ್ಯಮಿ ತಿಮ್ಮಪ್ಪ ಪೂಜಾರಿ ಯಡ್ತರೆ ಇವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು. ಆಯ್ಕೆ ಪ್ರಕ್ರಿಯೆ ವೇಳೆ ನೂತನ ನಿರ್ದೇಶಕರುಗಳಾದ ಸಂಘದ ಸ್ಥಾಪಕಾಧ್ಯಕ್ಷ ಹೆಚ್. ನರಸಿಂಹ ಪೂಜಾರಿ, ಬಿ. ನಾರಾಯಣ ಪೂಜಾರಿ, ಮಂಜ ಪೂಜಾರಿ, ರಾಜು ಪೂಜಾರಿ, ಸಂತೋಷ್, ಸುರೇಶ್ ಪೂಜಾರಿ, ಶೇಷು ಪೂಜಾರಿ ಹಳಗೇರಿ, ಲಕ್ಷ್ಮೀ, ಶಾರದಾ ಹಾಗೂ ಸಂಘದ ಪ್ರಧಾನ ವ್ಯವಸ್ಥಾಪಕ ಮಹೇಶ್ ಹೆಚ್. ಉಪಸ್ಥಿತರಿದ್ದರು. ಸಹಕಾರಿ ಸಂಘಗಳ ಹಿರಿಯ ನಿರೀಕ್ಷಕ ಸುನಿಲ್ ಕುಮಾರ್ ಸಿ.ಎಮ್ ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. mohan poojari uppunda as new president and Timmappa Poojari…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ನ ಪ್ರಧಾನ ಕಛೇರಿಗೆ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ ಅಧ್ಯಕ್ಷ ಬಿ. ಹೆಚ್. ಕೃಷ್ಣಾರೆಡ್ಡಿ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಸ್ಥೆಗಳು ಆರ್ಥಿಕ ವ್ಯವಹಾರವನ್ನು ಯಶಸ್ವಿಯಾಗಿ ನಡೆಸುತ್ತಿದ್ದು ಸಮಾಜದ ಆರ್ಥಿಕ ವ್ಯವಸ್ಥೆ ಬಲಗೊಳಿಸಲು ತನ್ನದೇ ಆದ ಕೊಡುಗೆ ನೀಡುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್‌ನ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಬಿ. ಹೆಚ್. ಕೃಷ್ಣಾರೆಡ್ಡಿಯವರನ್ನು ಗೌರವಿಸಿದರು. ಈ ಸಂದರ್ಭ ಸೌಹಾರ್ದ ಸಹಕಾರಿಗಳ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್, ಜಿಲ್ಲಾ ಒಕ್ಕೂಟದ ಮುಖ್ಯಾಧಿಕಾರಿ ಭುವನೇಶ್, ಸಂಘದ ನಿರ್ದೇಶಕ ಶಿವರಾಮ ಪೂಜಾರಿ ಹಾಗೂ ಸಿಬ್ಬಂಧಿ ಮಣಿಕಂಠ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗರ ಸ್ಥಳೀಯ ಸಂಸ್ಥೆ ಚುನಾವಣೆ-2018ಕ್ಕೆ ಸಂಬಂದಪಟ್ಟಂತೆ ಕುಂದಾಪುರ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಕುಂದಾಪುರ ಪುರಸಭೆಯಲ್ಲಿ 68% ಮತದಾನವಾಗಿದೆ. ಫೆರಿ ರಸ್ತೆ ವಾರ್ಡ್ 71.74, ಮದ್ದುಗುಡ್ಡೆ ವಾರ್ಡ್ 80.56, ಈಸ್ಟ್ ಬ್ಲಾಕ್ ವಾರ್ಡ್ 74.79, ಖಾರ್ವಿಕೇರಿ ವಾರ್ಡ್ 82.37, ಬಹದ್ದೂರ್ ಶಾ ವಾರ್ಡ್ 74.11, ಚಿಕ್ಕನಸಾಲು ಎಡಬದಿ ವಾರ್ಡ್ 73.09, ಮೀನು ಮಾರ್ಕೆಟ್ ವಾರ್ಡ್ 73.04, ಚಿಕ್ಕನಸಾಲು ಬಲಬದಿ ವಾರ್ಡ್ 76.33, ಸರಕಾರಿ ಆಸ್ಪತ್ರೆ ವಾರ್ಡ್ 70.81, ಚರ್ಚ್ ರೋಡ್ ವಾರ್ಡ್ 67.35, ಸೆಂಟ್ರಲ್ ವಾರ್ಡ್ 73.72, ವೆಸ್ಟ್ ಬ್ಲಾಕ್ ವಾರ್ಡ್ 71.26, ಮಂಗಳೂರು ಟೈಲ್ಸ್ ವಾರ್ಡ್ 76.03, ಕೋಡಿ ದಕ್ಷಿಣ ವಾರ್ಡ್ 73.73, ಕೋಡಿ ಮಧ್ಯ ವಾರ್ಡ್ 69.70, ಕೋಡಿ ಉತ್ತರ ವಾರ್ಡ್ 77.90, ಟಿ.ಟಿ.ರೋಡ್ ವಾರ್ಡ್ 77.85, ನಾನಾ ಸಾಹೇಬ್ ವಾರ್ಡ್ 68.73, ಜೆ.ಎಲ್.ಬಿ ವಾರ್ಡ್ 66.18, ಕುಂದೇಶ್ವರ ವಾರ್ಡ್ 71.02, ಹುಂಚಾರ ಬೆಟ್ಟು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಬೈಂದೂರು 2017-18ನೇ ಸಾಲಿನಲ್ಲಿ 141.17 ಕೋಟಿಯಷ್ಟು ವ್ಯವಹಾರ ನಡೆಸಿ 75.01 ಲಕ್ಷ ರೂ. ಲಾಭಗಳಿಸಿದ್ದು, ಸಂಸ್ಥೆಯ ಸದಸ್ಯರಿಗೆ ಶೇ.13ರಷ್ಟು ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಶುಕ್ರವಾರ ಬೈಂದೂರಿನ ಪ್ರಧಾನ ಕಛೇರಿಯಲ್ಲಿ ಜರುಗಿದ 16ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಆರ್ಥಿಕ ವರ್ಷದ ಅಂತ್ಯಕ್ಕೆ ಸಂಘವು 63.23 ಕೊಟಿ ರೂ. ಠೇವಣಿ ಸಂಗ್ರಹಿಸಿ, 25.24 ಕೋಟಿ ರೂ. ಸಾಲ ನೀಡಿ ಒಟ್ಟು 141.17 ಕೋಟಿ ರೂ. ವಹಿವಾಟು ನಡೆಸಿದೆ ಎಂದ ಅವರು ಪ್ರಧಾನ ಕಛೇರಿ ಹಾಗೂ ಐದು ಶಾಖೆಗಳನ್ನು ಹೊಂದಿ ಉತ್ತಮ ವ್ಯವಹಾರ ನಡೆಸುತ್ತಿದೆ. ಪ್ರತಿವರ್ಷ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಈ ಸಂದರ್ಭ ಸಂಸ್ಥೆಯ ನಿರ್ದೇಶಕರಾದ ಕೆ. ಶಂಕರ ಪೂಜಾರಿ, ಕೆ. ಶ್ರೀನಿವಾಸ ಪೂಜಾರಿ, ಚಿಕ್ಕು ಪೂಜಾರಿ, ಎನ್.…

Read More