Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾನೂನು ಸೇವಾ ಪ್ರಾಧಿಕಾರದ ಮೂಲಕ ರಾಜ್ಯದ 30 ಜಿಲ್ಲೆ ಹಾಗೂ 149 ತಾಲೂಕುಗಳ ಪ್ರತಿಯೊಂದು ಹಳ್ಳಿಗಳಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ 69 ಸಾವಿರಕ್ಕೂ ಹೆಚ್ಚು ಗ್ರಾಮದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಮತ್ತು ನೆರವು ನೀಡುವ ಉದ್ದೇಶದಿಂದ ಪ್ರಾಧಿಕಾರ ಈ ಕಾರ‍್ಯಕ್ರಮವನ್ನು ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ ಶೆಟ್ಟಿ ಹೇಳಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ ಉಡುಪಿ, ಕುಂಭಾಸಿ ಗ್ರಾಮ ಪಂಚಾಯತ್ ಮತ್ತು ಕೊರಗ ಸಂಘಟನೆಗಳ ಸಹಯೋಗದೊಂದಿಗೆ 75ನೇ ಸ್ವಾತಂತ್ರ್ಸೋವದ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಕುಂಭಾಸಿ ಮಕ್ಕಳ ಮನೆಯಲ್ಲಿ ಶನಿವಾರ ಜರುಗಿದ ಬುಡಕಟ್ಟು ಜನರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಎಸ್‌ಬಿ ಸೇವಾ ಟ್ರಸ್ಟ್ ಕುಂಭಾಸಿ ಇವರ ನೇತೃತ್ವದಲ್ಲಿ ನೂತನವಾಗಿ ನಿರ್ಮಣಗೊಳ್ಳುತ್ತಿರುವ ಭಜನಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮವು ಜರುಗಿತು. ವೇ.ಮೂ. ಕೋಟ ಕಪಿಲದಾಸ್ ಭಟ್ ಹಾಗೂ ವೇ.ಮೂ. ರಾಮಚಂದ್ರ ಭಟ್ ಸೌಡ ಅವರ ಮುಂದಳತ್ವದ ಪೌರೋಹಿತ್ಯದಲ್ಲಿ ಟ್ರಸ್ಟಿನ ಅಧ್ಯಕ್ಷ ಕೆ. ಗಣೇಶ ಪ್ರಭು ಹಾಗೂ ಸರ್ವ ವಿಶ್ವಸ್ತ ಸಮಾಜ ಭಾಂದವರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಈ ಸಂದರ್ಭ ಮಂಜೇಶ್ವರ ಶ್ರೀಮದನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ದಿನೇಶ್ ಕಾಮತ್ ಕೋಟೇಶ್ವರ, ತೆಕ್ಕಟ್ಟೆ ಜಿಎಸ್‌ಬಿ ಸೇವಾ ಸಂಘದ ಅಧ್ಯಕ್ಷ ಟಿ. ಸಂತೋಷ್ ನಾಯಕ್, ಉದ್ಯಮಿಗಳಾದ ಟಿ.ಅನಂತ್ ನಾಯಕ್ ತೆಕ್ಕಟ್ಟೆ, ಕೆ.ರಾಧಾಕೃಷ್ಣ ನಾಯಕ್ ಕೋಟ, ಸ್ಥಳ ದಾನಿಗಳ ಪರವಾಗಿ ಎಸ್.ನಾಗೇಶ್ ಶಾನುಭಾಗ್ ಸಾಲಿಗ್ರಾಮ, ಜಿಎಸ್‌ಬಿ ಸೇವಾ ಟ್ರಸ್ಟ್ ಕುಂಭಾಶಿಯ ಪದಾಧಿಕಾರಿಗಳು, ಗ್ರಾಮದ ಗೌಡ ಸಾರಸ್ವತ ಸಮಾಜದ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿ ತಿಂಗಳ 3ನೇ ಶನಿವಾರದಂದು ಡಿಸಿಯವರ ನೇತೃತ್ವದಲ್ಲಿ ಜಿಲ್ಲೆಯದ್ಯಾಂತ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತಿಯೊಂದಿಗೆ ಜಿಲ್ಲಾಧಿಕಾರಿಯವರ ನಡೆ ಹಳ್ಳಿಯ ಕಡೆ ಎಂಬ ಒಂದು ವಿಶೇಷವಾದ ಮಹತ್ವದ ಯೋಜನೆ ಸರಕಾರ ಜಾರಿಗೆ ತಂದಿದೆ. ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಈ ಕಾರ‍್ಯಕ್ರಮಕ್ಕೆ ಅ.16ರಿಂದ ಪುನರುಪಿ ಚಾಲನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಆಯಾ ಭಾಗದ ತಹಶೀಲ್ದಾರ್ ಮತ್ತು ಎಸಿಯವರ ನೇತೃತ್ವದಲ್ಲಿ ಗ್ರಾಮಗಳ ವಾಸ್ತವ್ಯ ಹೂಡಿ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ಸು ಕಾಣುತ್ತಿದೆ ಎಂದು ಕುಂದಾಪುರ ತಹಶೀಲ್ದಾರ್ ಕಿರಣ್ ಜಿ. ಗೋರಯ್ಯ ಹೇಳಿದರು. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದಡಿ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಶನಿವಾರ ವಾಸ್ತವ್ಯ ಹೂಡಿ ಸರಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು ಈ ಯೋಜನೆಯಿಂದ ಗ್ರಾಮಗಳ ಅಭಿವೃದ್ಧಿಯ ಕೆಲಸದ ಜೊತೆಗೆ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿ ಸ್ಥಳದಲ್ಲಿಯೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವತಿಯಿಂದ 100 ಮಂದಿ ಅಶಕ್ತರಿಗೆ ವೈದ್ಯಕೀಯ ನೆರವು ವಿತರಿಸುವ ಕಾರ‍್ಯಕ್ರಮ ನಡೆಯಿತು. ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಮತ್ತು ಹಿರಿಯ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾದ್ಯಾಯ ಅಶಕ್ತರಿಗೆ ವೈದ್ಯಕೀಯ ನೆರವು ವಿತರಿಸಿ ದೇವರ ಪ್ರಸಾದವನ್ನು ನೀಡಿ ಹಾರೈಸಿದರು. ಈ ಸಂದರ್ಭ ದೇವರ ದರ್ಶನಕ್ಕೆ ಆಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪರ್ಯಾಯ ಅರ್ಚಕ ವೆಂಕಟನಾರಾಯಣ ಉಪಾಧ್ಯಾಯ ಮತ್ತು ಸಹೋದರರು ಅರ್ಚಕ ಮಂಡಳಿ ಸದಸ್ಯರು, ದೇಗುಲದ ಮ್ಯಾನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಕ್ವಾಡಿ ವಿಶ್ವ ಬ್ರಾಹ್ಮಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ವಿ.ಎಸ್. ಆನಂದ ಆಚಾರ್, ಕಾರ್ಯದರ್ಶಿಯಾಗಿ ಮನೋಹರ ಆಚಾರ್ಯ ಆಯ್ಕೆಯಾಗಿದ್ದಾರೆ ಗೌರವಾಧ್ಯಕ್ಷರಾಗಿ ದಯಾನಂದ ಆಚಾರ್ಯ, ಉಪಾಧ್ಯಕ್ಷರಾಗಿ ವಕ್ವಾಡಿ ನಾಗರಾಜ್ ಆಚಾರ್, ವಿ.ಎನ್ ಶ್ರೀನಿವಾಸ ಆಚಾರ್, ಜೊತೆ ಕಾರ್ಯದರ್ಶಿಯಾಗಿ ರಾಘವೇಂದ್ರ ಆಚಾರ್ ಜಿ, ಕೋಶಾಧಿಕಾರಿಯಾಗಿ ಸಿ. ಸುರೇಶ್ ಆಚಾರ್, ಸಂಘಟನಾ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಆಚಾರ್, ಜಗದೀಶ್ ಆಚಾರ್, ವಿ.ಬಿ ನಾಗರಾಜ ಆಚಾರ್, ಅವಿನಾಶ್ ಆಚಾರ್, ಕ್ರೀಡಾ ಕಾರ್ಯದರ್ಶಿ: ಗಿರೀಶ್ ಆಚಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿ.ಜಿ. ರಾಘವೇಂದ್ರ ಆಚಾರ್ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜಾಮೀಯ ಮಸೀದಿ ಹಾಗೂ ಅಂಜುಮಾನ್ ಶಬಾಬುಲ್ ಇಸ್ಲಾಂ ವೆಲ್ಫೇರ್ ಟ್ರಸ್ಟ್ ವತಿಯಿಂದ ಈದ್ ಮಿಲಾದ್ ಆಚರಣೆ ಪ್ರಯುಕ್ತ ಸಯ್ಯದ್ ಅಲಿ ಕೋಯಾ ಅವರ ನೇತೃತ್ವದಲ್ಲಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ ಹಾಗೂ ಪೋಲಿಸ್ ಸ್ಟೇಷನ್ ಸಿಬ್ಬಂದಿಗಳಿಗೆ ಸಿಹಿ ಹಂಚಿ ಈದ್ ಮಿಲಾದ್ ಆಚರಿಸಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ಉಪ್ಪುಂದ ಗ್ರಾಮದ ಸಂಕದ ಬಾಗಿಲು ಗೋವಿಂದ ಖಾವಿ೯ ಅವರ ಮನೆಗೆ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಿತು. ಸಾಹಿತಿಗಳಾದ ಉಪ್ಪುಂದ ರಮೇಶ್ ವೈದ್ಯ ಅವರು ಉದ್ಘಾಟನೆಯೊಂದಿಗೆ ನಾಮಫಲಕ ಅನಾವರಣಗೊಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಸೈನಿಕರಾದ ಚಂದ್ರಶೇಖರ ನಾವುಡರು ‘ಭಾರತ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಮತ್ತು ಉಪ್ಪುಂದ ಗೋವಿಂದ ಖಾವಿ೯ ಅವರ ಸೇವೆ’ ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಉಪ್ಪುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀ ಖಾವಿ೯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉದ್ಯಮಿ ಶರತ್ ಶೆಟ್ಟಿ ಉಪಸ್ಥಿತರಿದ್ದರು. ಕಾಯ೯ಕ್ರಮಕ್ಕೆ ಸೇವಾ ಟ್ರಸ್ಟ್ (ರಿ) ಮೂಡುಗಿಳಿಯಾರು ಹಾಗೂ ಗೋವಿಂದ ಖಾರ್ವಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಹಕಾರ ನೀಡಿದರು. ಅಧ್ಯಾಪಕ ರವೀಂದ್ರ ಹೆಚ್ ಕಾರ್ಯಕ್ರಮ ನಿರೂಪಿಸಿದರು. ಸ್ವರಾಜ್ಯ 75 ಕಾಯ೯ಕ್ರಮ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಸನ್ನ ಖಾರ್ವಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ವತಿಯಿಂದ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ನಡೆಯುತ್ತಿರುವ 47ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭಕ್ಕೆ ಶನಿವಾರ ಭೇಟಿ ನೀಡಿದ ಕೆನರಾ ಬ್ಯಾಂಕಿನ ಉಡುಪಿ ವಿಭಾಗೀಯ ಕಛೇರಿಯ ಸಹಾಯಕ ಮಹಾಪ್ರಬಂಧಕ ಕೆ. ಕಾಳಿ ಅವರನ್ನು ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಜಿ.ನಾರಾಯಣ ಆಚಾರ್ಯ, ಅಧ್ಯಕ್ಷ ಸತೀಶ ಜಿ., ಕೆನರಾ ಬ್ಯಾಂಕಿನ ಡಿವಿಜನಲ್ ಮ್ಯಾನೇಜರ್ ರತ್ನಾಕರ ಗಾಣಿಗ, ಗಂಗೊಳ್ಳಿ ಶಾಖಾ ಪ್ರಬಂಧಕ ವಿಷ್ಣುಮೂರ್ತಿ ಯಾಜಿ, ಶ್ರೀ ಶಾರದೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಪಟೇಲ್, ಕಾರ್ಯದರ್ಶಿ ಗೋಪಾಲ ಖಾರ್ವಿ ದಾವನಮನೆ, ಮಹಿಳಾ ಮಂಡಳಿ ಅಧ್ಯಕ್ಷೆ ಅನಿತಾ ನಾಗರಾಜ ಶೇಟ್, ಕಾರ್ಯದರ್ಶಿ ಸ್ವಾತಿ ಮಡಿವಾಳ, ಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇತಿಹಾಸ ಪ್ರಸಿದ್ಧ ಬಸ್ರೂರು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ವಾಡಿಕೆಯಂತೆ ನಡೆಯುವ ಚಂಡಿಕಾಹವನವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಬೆಳಗ್ಗೆ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಯಜ್ಞ ಅನು?ನಗಳು ಪ್ರಾರಂಭಗೊಂಡಿತು. ಮಧ್ಯಾಹ್ನ ಯಜ್ಞ ಪೂರ್ಣಾಹುತಿ, ಮಹಾಮಂಗಳಾರತಿ, ಶ್ರೀ ದೇವಿಗೆ ಸಮರ್ಪಿಸಿದ ಹರಕೆ ಸೀರೆಗಳ ಏಲಂ ಹಾಗೂ ಮಹಾ ಸಮಾರಾಧನೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಪುರೋಹಿತರ ನೇತೃತ್ವದಲ್ಲಿ ನಡೆಯಿತು. ದೇವಳದ ಧರ್ಮದರ್ಶಿಗಳು, ಅರ್ಚಕರು, ಸೇವಾದಾರರು, ಕುಳಾವಿ ಭಜಕರು, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕೆನರಾ ಬ್ಯಾಂಕ್ ವತಿಯಿಂದ ಶ್ರೀ ಶಾರದಾ ಮಂಟಪಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು. ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಉಡುಪಿ ವಿಭಾಗೀಯ ಕಛೇರಿಯ ಸಹಾಯಕ ಮಹಾಪ್ರಬಂಧಕ ಕೆ.ಕಾಳಿ ಅವರು ಕೆನರಾ ಬ್ಯಾಂಕ್ ವತಿಯಿಂದ ಕೊಡಮಾಡಿದ ಶುದ್ಧ ಕುಡಿಯವ ನೀರಿನ ಘಟಕವನ್ನು ಶ್ರೀ ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಜಿ.ನಾರಾಯಣ ಆಚಾರ್ಯ ಮತ್ತು ಅಧ್ಯಕ್ಷ ಸತೀಶ ಜಿ. ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಕೆನರಾ ಬ್ಯಾಂಕಿನ ಡಿವಿಜನಲ್ ಮ್ಯಾನೇಜರ್ ರತ್ನಾಕರ ಗಾಣಿಗ, ಗಂಗೊಳ್ಳಿ ಶಾಖಾ ಪ್ರಬಂಧಕ ವಿಷ್ಣುಮೂರ್ತಿ ಯಾಜಿ, ಶ್ರೀ ಶಾರದೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಪಟೇಲ್, ಕಾರ್ಯದರ್ಶಿ ಗೋಪಾಲ ಖಾರ್ವಿ ದಾವನಮನೆ, ಮಹಿಳಾ ಮಂಡಳಿ ಅಧ್ಯಕ್ಷೆ ಅನಿತಾ ನಾಗರಾಜ ಶೇಟ್, ಕಾರ್ಯದರ್ಶಿ ಸ್ವಾತಿ ಮಡಿವಾಳ, ಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Read More