ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಬಾಲ್ಯದಲ್ಲಿ ಮಕ್ಕಳಿಗೆ ಸಂಸ್ಕಾರಯುಕ್ತ ಶಿಕ್ಷಣ ನೀಡುವುದರಿಂದ ಜೀವನದಲ್ಲಿ ಸತ್ಪ್ರಜೆಗಳಾಗಿ ಬೆಳೆಯುತ್ತಾರೆ. ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ನಮ್ಮ ಪೂರ್ವಜರ ಅನೇಕ ವಿಚಾರಗಳನ್ನು ಮಕ್ಕಳಿಗೆ ಹೇಳಿಕೊಡಬೇಕಾದ ಅವಶ್ಯಕತೆ ಇದ್ದು, ಶಿಶು ಮಂದಿರಗಳು ಈ ದಿಸೆಯಲ್ಲಿ ಮಕ್ಕಳಿಗೆ ಬಾಲ್ಯದಲ್ಲಿ ಅವಶ್ಯವಿರುವ ಶಿಕ್ಷಣ ನೀಡುತ್ತಿದೆ. ಗಂಗೊಳ್ಳಿಯಲ್ಲಿ ಕಳೆದ ೩೪ ವರ್ಷಗಳಿಂದ ನಮ್ಮ ಸಂಸೃತಿಗೆ ಪೂರಕವಾದ ಶಿಕ್ಷಣ ನೀಡುವ ಮೂಲಕ ಸಮಾಜದ ಬೆಳವಣಿಗೆಗೆ ಸಹಕರಿಸುತ್ತಿರುವುದು ಸ್ತುತ್ಯಾರ್ಹವಾದುದು ಎಂದು ಎಚ್. ಸುನೀಲ್ ನಾಯಕ್ ಹೇಳಿದರು. ಶ್ರೀ ಶಾರದಾ ಮಂಟಪದಲ್ಲಿ ಜರಗಿದ ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ 34ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೇವಾ ಸಂಗಮ ಟ್ರಸ್ಟ್ನ ವಿಶ್ವಸ್ಥ ಸುರೇಶ ಹೆಬ್ಬಾರ್ ಆಜ್ರಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಕೃಪಾ ಸುನೀಲ್ ನಾಯಕ್ ಬಹುಮಾನ ವಿತರಿಸಿದರು. ಶಿಶು ಮಂದಿರದ ಸದಸ್ಯರಾದ ಆಶಾ ಸುದನೇಶ ಶ್ಯಾನುಭಾಗ್, ಉಷಾ ಪಾಂಡುರಂಗ ಮಡಿವಾಳ, ವಿಜಯಶ್ರೀ ವಿ.ಆಚಾರ್ಯ, ಅಶ್ವಿತಾ ಜಿ.ಪೈ, ವಸಂತಿ…
Author: ನ್ಯೂಸ್ ಬ್ಯೂರೋ
ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಶಿಕ್ಷಕರು, ಹಳೆ ವಿದ್ಯಾರ್ಥಿಗಳು ನಾನಾ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಊರಿನ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ಮಹದಾಸೆಯೊಂದಿಗೆ ಸಮವಸ್ತ್ರ, ನೋಟ್ ಪುಸ್ತಕ, ಮೂಲಭೂತ ಸೌಕರ್ಯ, ವಾಹನ ವ್ಯವಸ್ಥೆ, ದತ್ತು ಸ್ವೀಕಾರದಂತಹ ಮಹತ್ವದ ಕಾರ್ಯಗಳು ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ಶಿಕ್ಷಕಿ ತಮ್ಮ ದುಡಿಮೆ ಹಣದಲ್ಲಿಯೇ ಶಾಲೆಗೆ ಸೇರುವ ಮಕ್ಕಳ ಹೆಸರಿನಲ್ಲಿ ಹಣ ರೇವಣಿ ಇಡುವ ಮೂಲಕ ಹಾಜರಾತಿ ಹೆಚ್ಚಿಸಿಕೊಂಡು ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಈ ವಿನೂತನ ‘ಬಾಂಡ್’ ಯೋಜನೆ ಅಳವಡಿಸಿಕೊಂಡವರು ಕುಂದಾಪುರ ತಾಲೂಕು ಶಂಕರನಾರಾಯಣ ರೇಖಾ ಪ್ರಭಾಕರ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ನಗರ ಹೋಬಳಿ ನೂಲಗ್ಗೇರಿ ಸರ್ಕಾರಿ ಶಾಲೆಯಲ್ಲಿ ಸಹಶಿಕ್ಷಕಿಯಾಗಿರುವ ರೇಖಾ ಪ್ರಭಾಕರ ಅವರ ಕಾರ್ಯದಿಂದಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ರೇಖಾ 2010ರಲ್ಲಿ ನೂಲಗ್ಗೇರಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಯಾಗಿ ಸೇರಿಕೊಂಡ ಸಂದರ್ಭದಲ್ಲಿ ಶಾಲೆಯಲ್ಲಿ 1 ರಿಂದ 7 ತರಗತಿ ಓದುವ ಮಕ್ಕಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆಯ ಶ್ರೀ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಅಲ್ಲಿನ ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿಯಿಂದ ಆಭಾರಿ ಸೇವೆ ಭಾನುವಾರ ಸಂಪನ್ನವಾಯಿತು. ಕಡಲು ನದಿ ಕೈ ಅಳತೆ ನಡುವಿನ ಕಿರಿದಾದ ಪ್ರದೇಶದಲ್ಲಿ ಒಂದೇ ಗರ್ಭಗುಡಿಯಲ್ಲಿ ವರಾಹ, ವಿಷ್ಣು, ನಾರಸಿಂಹ ದೇವರ ಸನ್ನಿಧಿ ಮತ್ತು ಸನಿಹದಲ್ಲಿ ಗಂಗಾಧರೇಶ್ವರ ದೇವಸ್ಥಾನ ಇರುವ ಕಾರಣದಿಂದ ಕಾರಣಿಕ ಧಾರ್ಮಿಕ ಕೇಂದ್ರವೆನಿಸಿರುವ ಇಲ್ಲಿ ಭಕ್ತರು ಸಲ್ಲಿಸುವ ವಿಶೇಷ ಸೇವೆಗಳಲ್ಲಿ ’ಆಭಾರಿ’ ಕೂಡ ಒಂದು. ಮೀನುಗಾರರು ಸುರಕ್ಷಿತ ಹಾಗೂ ಸಮೃದ್ಧ ಮೀನುಗಾರಿಕೆಗೆ ಮತ್ತು ವ್ಯವಸಾಯಗಾರರು ಅತಿವೃಷ್ಟಿ, ಅನಾವೃಷ್ಟಿ ಮುಕ್ತವಾದ ಕೃಷಿಗೆ ಪ್ರಾರ್ಥಿಸಿ ಈ ಹರಕೆ ಸಲ್ಲಿಸುತ್ತಾರೆ. ಇಂದಿನ ಆಭಾರಿ ಸೇವೆಯ ಭಾಗವಾಗಿ ಬೆಳಿಗ್ಗಿನಿಂದ ಮಧ್ಯಾಹ್ನದ ವರೆಗೆ ವರಾಹ ಸನ್ನಿಧಿಯಲ್ಲಿ ಮಹಾಗಣಪತಿ ಹವನ, ಚಂಡಿಕಾ ಹವನ, ವಿಷ್ಣುಸೂಕ್ತ ಹವನ, ಏಕಾದಶ ರುದ್ರ ಪುರಸ್ಸರ ರುದ್ರ ಹವನ, ಕಲಶಾಭಿಷೇಕ, ಮಹಾಪೂಜೆ, ಉತ್ಸವಗಳು ನಡೆದುವು. ದೇವಾಲಯಕ್ಕೆ ಹೊಂದಿಕೊಂಡಿರುವ ಸೌಪರ್ಣಿಕಾ ನದಿಯ ನೆಗಳನ ಗುಂಡಿಯಲ್ಲಿ ದೈವಸ್ವರೂಪಿ ಮೊಸಳೆ ನೆಲೆಸಿದೆ ಎಂಬ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಹಂಪಿ: ಮಲೆನಾಡಿನ ದಟ್ಟವಾದ ಕಾಡುಗಳ ಮಧ್ಯೆ ಇರುವ ಸಕಲೇಶಪುರ ತಾಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿರುವ ನುಡಿ ಪ್ರತಿಷ್ಠಾನವು ಕನ್ನಡೇತರರಿಗೆ ಆನ್ಲೈನ್ ಮೂಲಕ ಕನ್ನಡ ಕಲಿಸುವ ಮಹತ್ಕಾರ್ಯದ ಜೊತೆಗೆ ಪುಸ್ತಕ ಪ್ರಕಟಣೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡವನ್ನು ಸಾಗರದಾಚೆಗೂ ವಿಸ್ತರಿಸಲು ಹೊರಟಿರುವುದು ಶ್ಲಾಘನೀಯ ಎಂದು ವಿಜಯನಗರ ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ. ಚಿ. ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಆನ್ಲೈನ್ ಮೂಲಕ ಹಾಸನ ಜಿಲ್ಲೆಯ ಅತ್ತಿಹಳ್ಳಿ ಗ್ರಾಮದಲ್ಲಿರುವ ನುಡಿ ಪ್ರತಿಷ್ಠಾನವನ್ನು ಉದ್ಘಾಟಿಸಿ ಮಾತನಾಡಿದರು. ಅನ್ಯರಿಗೆ ನಮ್ಮ ಸಂಸ್ಕೃತಿಯನ್ನು, ಕನ್ನಡ ಪರ ಚಿಂತನೆಗಳನ್ನು ಪರಿಚಯಿಸುವ ಕಾರ್ಯ ಮುಖ್ಯವಾದುದು. ಕನ್ನಡವನ್ನು ಕಟ್ಟುವ ಕಾರ್ಯ ಇಂದು ವಿವಿಧ ನೆಲೆಗಳಲ್ಲಿ ಆಗಬೇಕಿದೆ. ಈ ಮೂಲಕ ಯುವ ಪೀಳಿಗೆಯನ್ನು ರಾಷ್ಟ್ರಕಟ್ಟುವ ಕಾರ್ಯದಲ್ಲಿ ಕೈಜೋಡಿಸಲು ಸನ್ನದ್ಧಗೊಳಿಸಬೇಕಾದ ತುರ್ತು ಇಂದು ನಮ್ಮ ಮುಂದಿದೆ. ಒಟ್ಟಿನಲ್ಲಿ ಶಿಕ್ಷಣದ ಮೂಲಕ ಪ್ರಜ್ಞಾವಂತ ನಾಗರೀಕರನ್ನು ತಯಾರು ಮಾಡಬೇಕು ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮ ಸ್ವರಾಜ್ಯ ಕೇಂದ್ರದ ಲೋಗೋವನ್ನು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಇತ್ತೀಚಿಗೆ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ., ತಹಶಿಲ್ದಾರ್ ಆನಂದಪ್ಪ, ಗ್ರಾಮ ಸ್ವರಾಜ್ಯ ಕೇಂದ್ರದ ಸಂಸ್ಥಾಪಕರಾದ ವೀರೇಂದ್ರ ಎಸ್ ಪೂಜಾರಿ, ರೂಪೇಶ್ ಬೈಂದೂರು, ಅಭಿಷೇಕ್, ನಾಗೇಶ್ ಪೂಜಾರಿ ಇತರರು ಇದ್ದರು. ಗ್ರಾಮ ಸ್ವರಾಜ್ಯ ಕೇಂದ್ರ: ಈ ಗ್ರಾಮ ಸ್ವರಾಜ್ಯ ಕೇಂದ್ರವು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯ ಮೂಲಕ ಸದೃಢ ಭಾರತವನ್ನು ಕಟ್ಟುವ ಉದ್ದೇಶ ಹೊಂದಿದೆ. ಗ್ರಾಮೀಣಾಭಿವೃದ್ಧಿ, ಕೃಷಿ ಬಲವರ್ಧನೆ,ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆಯ ಉದ್ದೇಶದಿಂದ ಉಡುಪಿ ಜಿಲ್ಲೆಯ ಪ್ರತಿ ಗ್ರಾಮಪಂಚಾಯತ್ ಗಳಲ್ಲಿ ಗ್ರಾಮ ಸ್ವರಾಜ್ ಕೇಂದ್ರ ಸ್ಥಾಪನೆಯಾಗುತ್ತಿದೆ.ಮಹಾತ್ಮ ಗಾಂಧಿ ಹಾಗೂ ಎಪಿಜೆ ಕಲಾಂ ಕಂಡ ಕನಸ್ಸನ್ನ ನನಸು ಮಾಡಲು ಯುವಕರ ತಂಡ ಹೊರಟಿದೆ. ಜನರಿಗೆ ಸ್ವಗ್ರಾಮದಲ್ಲೇ ಉದ್ಯೋಗ ನೀಡುವ ಮೂಲಕ ಸದೃಡ ಗ್ರಾಮವನ್ನು ನಿರ್ಮಿಸಬಹುದು. ಕೃಷಿಯಲ್ಲಿ ಕುಂದುಕೊರತೆಗಳನ್ನು ನಿವಾರಿಸಿ, ಬೆಳೆ ವಿವರ, ಹವಾಮಾನ ವರದಿ, ಸರ್ಕಾರಿ ಯೋಜನೆಗಳ ಕುರಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಉಳ್ಳೂರು ಕಟ್ಟಿನಬೈಲಿನ ಅಭಿಷೇಕ್ ಶೆಟ್ಟಿ 2021ರ ಗೇಟ್ (ಗ್ರ್ಯಾಜುವೇಟ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್) ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 5ನೆ ರ್ಯಾಂಕ್ ಗಳಿಸಿ ವಿಕ್ರಮ ಮೆರೆದಿದ್ದಾರೆ. ತೀರ ಗ್ರಾಮೀಣ ಪ್ರದೇಶದ ಬಡ ಕುಟುಂಬಕ್ಕೆ ಸೇರಿರುವ ಅಭಿಷೇಕ್, ಪಿಯುಸಿ ವರೆಗಿನ ಶಿಕ್ಷಣವನ್ನು ಉಳ್ಳೂರು ಮತ್ತು ಶಂಕರನಾರಾಯಣದಲ್ಲಿ ಪಡೆದರು. ಆ ಬಳಿಕ ಮೈಸೂರಿನ ಎನ್ಐಇಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಎರಡು ಚಿನ್ನದ ಪದಕಗಳೊಂದಿಗೆ ಗಳಿಸಿದರು. 2020ರ ಗೇಟ್ ಪರೀಕ್ಷೆಯಲ್ಲಿ ಅವರಿಗೆ ರಾಷ್ಟ್ರಮಟ್ಟದಲ್ಲಿ 789ನೆ ರ್ಯಾಂಕ್ ಬಂತು. ಇದರಿಂದ ತೃಪ್ತರಾಗದ ಅವರು ಛಲದೊಂದಿಗೆ ಸತತ ಅಧ್ಯಯನ ನಡೆಸಿ 2021ರಲ್ಲಿ ಎರಡನೆ ಬಾರಿ ಪರೀಕ್ಷೆ ಎದುರಿಸಿದರು. ಅದರಲ್ಲಿ ಗಳಿಸಿದ 5ನೆ ರ್ಯಾಂಕ್ ಇದೀಗ ಅವಕಾಶದ ಬಾಗಿಲುಗಳನ್ನು ತೆರೆದಿದೆ. ಅವರು ದೇಶದ ಪ್ರತಿಷ್ಠಿತ ಐಐಎಸ್ಸಿ, ಐಐಟಿ, ಎನ್ಐಟಿಗಳಲ್ಲಿ ತಮ್ಮ ಶಿಕ್ಷಣ ಮುಂದುವರಿಸಬಹುದು ಅಥವಾ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ, ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಪಡೆಯಬಹುದು. ಅವರ ತಂದೆ ಬೈಂದೂರು ತಾಲ್ಲೂಕಿನ ಹೇರೂರು ಗ್ರಾಮದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಂಗಭೂಮಿ ಬದುಕಿನ ನೋವು-ನಲಿವನ್ನು ವಾಸ್ತವದ ನೆಲೆಯಲ್ಲಿ ಧ್ವನಿಸುವ ಪ್ರಕ್ರಿಯೆ ಆಗಿರುವುದರಿಂದ ಅದು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುತ್ತದೆ ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಹೇಳಿದರು. ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಲಾವಣ್ಯ ರಿ. ಬೈಂದೂರು ಸಹಯೋಗದೊಂದಿಗೆ ಮಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ವಿಶ್ವ ರಂಗಭೂಮಿ ದಿನಾಚರಣೆ 2021ರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ರಂಗಭೂಮಿ ಕಟ್ಟುವ ಪ್ರಕ್ರಿಯೆಯಲ್ಲಿ ಸಂಘಟನೆ, ನಾಟಕದ ಎಲ್ಲಾ ವಿಭಾಗ, ನಟರು ಹಾಗೂ ಪ್ರೇಕ್ಷಕರು ಪ್ರಮುಖರಾಗುತ್ತಾರೆ. ಹಾಗಾಗಿಯೇ ರಂಗಭೂಮಿ ಇಂದಿಗೂ ಮಹತ್ವ ಪಡೆದುಕೊಂಡಿದೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಾವಣ್ಯ ಅಧ್ಯಕ್ಷ ಎಚ್. ಉದಯ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಮಾಲಿನಿ ಕೆ, ಮಯ್ಯಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಕ ಶಾಲೆಯ ಮುಖ್ಯೋಪಾಧ್ಯಾಯ ರಾಜು ಎಸ್. ಕಾರ್ಯಕ್ರಮದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕಲಿಯುಗದಲ್ಲಿ ಬಡತನ, ಸಾಮಾಜಿಕ ಅಸಮಾನತೆಗಳು ಕಡಿಮೆಯಾಗಿದೆ, ತಂತ್ರಜ್ಞಾನಗಳು ಬೆಳವಣಿಗೆಯಾಗಿದೆ. ಹಾಗಾಗಿ ಕಲಿಯುಗ ಕೆಟ್ಟದಲ್ಲ, ಆದರೆ ಕೆಟ್ಟದನ್ನೇ ಸ್ವೀಕರಿಸುವ ಮನಃಸ್ಥಿತಿ ಸರಿಯಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು. ಅವರು ಮೂಡುಗಿಳಿಯಾರು ಅಲ್ಸಕೆರೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜನಸೇವಾ ಟಸ್ಟ್ ಆಶ್ರಯದಲ್ಲಿ ಶನಿವಾರ ಜರುಗಿದ ಅಭಿಮತ ಸಂಭ್ರಮ ಹಾಗೂ ಮಹಾಮೃತ್ಯಂಜಯ ಯಾಗ ಕಾರ್ಯಕ್ರಮದಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮುಕ್ತೇಸರ ಅಪ್ಪಣ್ಣ ಹೆಗ್ಡೆಯವರಿಗೆ ಕೀರ್ತಿ ಕಲಶ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಂಘ-ಸಂಸ್ಥೆಗಳು ಬದುಕಲ್ಲಿ ಭರವಸೆ ಕಳೆದುಕೊಂಡವರ ಬಾಳಲ್ಲಿ ಭರವಸೆ ಮೂಡಿಸುವ ಕಾರ್ಯಗಳನ್ನು ಮಾಡಬೇಕಿದೆ. ಕೇವಲ ಮನೋರಂಜನೆಗಾಗಿ ಕಾರ್ಯಕ್ರಮಗಳು ಆಯೋಜನೆಗೊಳ್ಳುವ ಇಂದಿನ ಕಾಲಘಟ್ಟದಲ್ಲಿ ಮೂಡುಗಿಳಿಯಾರು ಸುತ್ತ-ಮುತ್ತಲಿನ ಒಂದಷ್ಟು ಯುವಕರು ವಸಂತ್ ಗಿಳಿಯಾರ್ ಅವರ ನೇತೃತ್ವದಲ್ಲಿ ಧಾರ್ಮಿಕ ಚಿಂತನೆಯೊಂದಿಗೆ ಕೈಗೊಂಡ ಈ ಕಾರ್ಯಕ್ರಮ ಅತ್ಯಂತ ಶ್ರೇಷ್ಠವಾದದ್ದು ಎಂದು ಹೆಗಡೆಯವರು ತಿಳಿಸಿದರು. ಕೀರ್ತಿ ಕಲಶ ಪ್ರಶಸ್ತಿಗೆ ಭಾಜನರಾದ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಮಾತನಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ವತಿಯಿಂದ ವಿಶ್ವ ರಂಗಭೂಮಿ ದಿನದ ಅಂಗವಾಗಿ “ಉಪನ್ಯಾಸ – ರಂಗ ಗೀತೆ ಗಾಯನ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತರು ಹಾಗೂ ಆಳ್ವಾಸ್ ನ್ಯೂಸಿಯಂನ ಸಂಯೋಜಕರಾದ ಶ್ರೀಕರ ಎಲ್ ಭಂಡಾರ್ಕರ್ ಮಾತನಾಡಿ, ಪ್ರತಿಯೊಬ್ಬರೂ ನಾಟಕದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ನಾಟಕದ ಮಹಿಮೆಯನ್ನು ಅರಿತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಸಂಯೋಜಕರು ಜೀವನ್ ರಾಮ್ ಸುಳ್ಯ, ಆಧುನಿಕ ಪ್ರಪಂಚದಲ್ಲಿ ನಾಟಕ ಎನ್ನುವುದು ಭರಾಟೆಯಾಗಿಬಿಟ್ಟಿದೆ. ಆದರೆ, ರಂಗಭೂಮಿಯಿಲ್ಲದೆ ಯಾರೂ ಬದುಕಲು ಸಾದ್ಯವಿಲ್ಲ. ಸಣ್ಣ ಮಗುವಿನಿಂದ ಹಿಡಿದು, ಪ್ರತಿಯೊಬ್ಬರೂ ಪ್ರತೀ ಸಂದರ್ಭದಲ್ಲೂ ನಟನೆ ಮಾಡುತ್ತಾರೆ. ಅದರಲ್ಲಿ ಕೆಲವರು ರಂಗಕ್ಷೇತ್ರದಲ್ಲಿ ಜೀವನವನ್ನು ಕಂಡುಕೊಳ್ಳುತ್ತಾರೆ. ಆದರೆ, ಯಾರೂ ಕೂಡ ತಾವು ನಡೆದುಕೊಂಡು ಬಂದ ದಾರಿಯನ್ನು ಮರೆಯಬಾರದು” ಎಂದರು. ರಂಗಭೂಮಿಯ ಮೇಲೆ ಸಾಮಾಜಿಕ ಜಾಲತಾಣದ ಪ್ರಭಾವ ಬಗ್ಗೆ ಮಾತನಾಡುತ್ತಾ, ಡಿಜಿಟಲ್ ಯುಗದಲ್ಲಿ ಯಾರು, ಯಾವಾಗ ಬೇಕಾದರೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗುಜ್ಜಾಡಿ ಬೆನ್ಗೆರೆ ಶ್ರೀ ಜೆಟ್ಟಿಗೇಶ್ವರ ಮತ್ತು ಭದ್ರ ಮಹಾಂಕಾಳಿ ಸಹಪರಿವಾರ ಗರಡಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಬಾಬು ಜೆ. ಪೂಜಾರಿ ಉಪ್ಪುಂದ ಅವರು ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪುಟ್ಟಯ್ಯ ಪೂಜಾರಿ ಹೊರ್ಕೊಡು ಮನೆ, ಕಾರ್ಯದರ್ಶಿಯಾಗಿ ನರಸಿಂಹ ಪೂಜಾರಿ ಅರೆಶಿರೂರು, ರಾಮ ಪೂಜಾರಿ ಯಡ್ತರೆ, ಸುಧಾಕರ್ ಪೂಜಾರಿ ಹೊರ್ಕೊಡು, ಸತೀಶ್ ಪೂಜಾರಿ ವಕ್ವಾಡಿ, ಜೋಗಿ ಪೂಜಾರಿ ತಾರಾಪತಿ, ರಾಮ ಪೂಜಾರಿ ಬೆಟ್ಯಾನಿ, ಗೌರವ ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಚಿತ್ತೂರು, ಉಪಾಧ್ಯಕ್ಷರಾಗಿ ಮಹಾಬಲ ದೇವಾಡಿಗ ಬೆನ್ಗೆರೆ, ಮಾಧವ ಪೂಜಾರಿ ಮಲಗದ್ದೆ ಮನೆ ಬಡಾಕೆರೆ, ಅಚ್ಚುತ ನಾಯಕವಾಡಿ, ಅನಂತ ಕಾರ್ವಿ ಮಡಿ, ಗಣಪತಿ ಪಟೇಲ್, ಗಣಪತಿ ಪೂಜಾರಿ ಉಪ್ಪುಂದ, ಗೌರವ ಸಲಹೆಗಾರಾಗಿ ರಾಮಚಂದ್ರ ಮಯ್ಯ, ಮಹೇಶ್ ಮಯ್ಯ, ಕೃಷ್ಣ ಪೂಜಾರಿ ಹುಬ್ಬಳ್ಳಿ, ಎಸ್. ಕೆ. ಪೂಜಾರಿ ಗೋವಾ, ರಾಮ ಪೂಜಾರಿ ಬೆಂಗಳೂರು, ದುಗ್ಗಪ್ಪ ಪೂಜಾರಿ ಮುಂಬೈ, ಬಾಬೇಂದ್ರ ಪೂಜಾರಿ ಮುಂಬೈ…
