Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ’ ಸುದ್ದಿ ನ್ಯೂಯಾರ್ಕ್: ಒನ್ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಗ್ಲೋಬಲ್ ಕೆ50 ಸಮಾವೇಶದಲ್ಲಿ ವಿಶ್ವದ ಅಗ್ರ 50 ನವೋದ್ಯಮದ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಬೆಂಗಳೂರು ಮೂಲದ ಹ್ಯಾಪಿ ಇಎಂಐ ಸ್ಟಾರ್ಟಪ್ ಹಣಕಾಸು ವಿಭಾಗದಲ್ಲಿ 30ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರಿನ ಸುಹಾಸ್ ಗೋಪಿನಾಥ್ ಹ್ಯಾಪಿ ಇಎಂಐ ಸ್ಟಾರ್ಟಪ್‌ನ ಸಂಸ್ಥಾಪಕರಾಗಿದ್ದಾರೆ. ಹೊಸ ತಂತ್ರಜ್ಞಾನಗಳ ಮೂಲಕ ಸದಾ ನವೀನ ಪ್ರಯೋಗಗಳಿಗೆ ಮುಂದಾಗುವ ಯುವ ಉದ್ಯಮಿ ಹಾಗೂ ವಿಆರ್‌ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಸಂಸ್ಥೆಯ ಸಹಸಂಸ್ಥಾಪಕರಾಗಿದ್ದಾರೆ. ಎಲ್ಲರಿಗೂ ಸುಲಭವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ದೊರಕಿಸಿಕೊಡುವುದು ಈ ಬಾರಿಯ ಕೈರೋಸ್ ಜಾಗತಿಕ ಸಮಾವೇಶದ ಧ್ಯೇಯವಾಗಿತ್ತು. ಹ್ಯಾಪಿಇಎಂಐ ನವೋದ್ಯಮ ಈ ಧ್ಯೇಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇವಲ ಒಂದು ನಿಮಿಷದಲ್ಲಿ ಸಾಲ ಸೌಲಭ್ಯ ಸಿಗಲು ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಹ್ಯಾಪಿ ಇಎಂಐಗೆ ಅಗ್ರ 50 ನವೋದ್ಯಮದಲ್ಲಿ ಸ್ಥಾನ ನೀಡಿ ಗೌರವಿಸಲಾಯಿತು. ಹಣಕಾಸು, ಶಿಕ್ಷಣ, ಆರೋಗ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಎಂಬ ವಿಭಾಗಗಳಲ್ಲಿ ಹೊಸದಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮಾಜದ ಏಳಿಗೆಗಾಗಿ ತೊಡಗಿಸಿಕೊಂಡ ಉತ್ಕೃಷ್ಟ ವ್ಯಕ್ತಿಗಳನ್ನು ಸನ್ಮಾನಿಸಿದರೆ ಅವರನ್ನು ಹುರಿದುಂಬಿಸಿದಂತಾಗುವುದಲ್ಲದೇ ಮತ್ತಷ್ಟು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಎಲ್ಲಾ ಆಯಾಮಗಳಲ್ಲಿಯೂ ತೊಡಗಿಸಿಕೊಂಡ ಅಸಾಧಾರಣ ವ್ಯಕ್ತಿಯಾಗಿದ್ದು, ಶ್ರೇಷ್ಠ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಬೆಳೆದಿದ್ದಾರೆ. ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿರುವ ಅವರು ಭಗವಂತ ಮೆಚ್ಚುವ ಕೆಲಸ ಮಾಡಿದ್ದಾರೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ| ಎನ್. ವಿನಯ್ ಹೆಗ್ಡೆ ಹೇಳಿದರು. ಅವರು ಡಿ.15ರಂದು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಕುಂದಾಪುರ ಎಜುಕೇಶನ್ ಸೊಸೈರಿ ರಿ. ಹಾಗೂ ಅಭಿಮಾನಿ ಬಳಗದವರಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಬಿ. ಎಮ್. ಸುಕುಮಾರ ಶೆಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಮಣಿಪಾಲ ವಿವಿ ಸಹ ಕುಲಾಧಿಪತಿ ಡಾ. ಎಚ್. ಎಸ್ ಬಲ್ಲಾಳ್ ಮಾತನಾಡಿ ಸುಕುಮಾರ ಶೆಟ್ಟರು ಬಹುಮುಖ ಪ್ರತಿಭೆ ವ್ಯಕ್ತಿ. ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡು ಯಶಸ್ವಿಯಾದವರು. ತಮ್ಮ ಶಿಕ್ಷಣ…

Read More

ಕೆರೆಮನೆ ಶಿವಾನಂದ ಹೆಗಡೆ ‘ಕುಸುಮಾಶ್ರೀ’ ಪ್ರಶಸ್ತಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಸುಮ ಫೌಂಡೇಶನ್ ನಾಗೂರು ಆಯೋಜಿಸುವ ವಾರ್ಷಿಕ ಸಾಂಸ್ಕೃತಿಕ ಉತ್ಸವ ಕುಸುಮಾಂಜಲಿಯ ಐದನೇ ಆವೃತ್ತಿ ‘ಕುಸುಮಾಂಜಲಿ-2018’ ಡಿಸೆಂಬರ್ 22 ಹಾಗೂ 23 ರಂದು ಎರಡು ದಿನಗಳ ಕಾಲ ನಾಗೂರಿನಲ್ಲಿ ಬೆಳಗ್ಗೆ 10 ರಿಂದ ರಾತ್ರಿ 10:30 ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಶೇಷ ಸಾಂಸ್ಕೃತಿಕ ನೃತ್ಯ ವೈಭವ, ದಿಕ್ಸೂಚಿ ಭಾಷಣ, ‘ಕುಸುಮಾಶ್ರೀ’ ಪ್ರಶಸ್ತಿ ಪ್ರಧಾನ, ವಿಶೇಷ ಸಂಗೀತ ಕಾರ್ಯಕ್ರಮ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ದಿಕ್ಸೂಚಿ ಭಾಷಣಕಾರರಾಗಿ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಎನ್. ಸಂತೋಷ ಹೆಗ್ಡೆ ಆಗಮಿಸಲಿದ್ದಾರೆ. ಈ ವರ್ಷ ನಿಸ್ವಾರ್ಥ ಸಾಮಾಜಿಕ ಸೇವೆಗಾಗಿ ಕೊಡಮಾಡುವ ಪ್ರತಿಷ್ಠಿತ ‘ಕುಸುಮಾಶ್ರೀ’ ಪ್ರಶಸ್ತಿಯನ್ನು ಕೆರೆಮನೆ ಶಿವಾನಂದ ಹೆಗಡೆಯವರಿಗೆ ಯಕ್ಷಗಾನ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಪರಿಗಣಿಸಿ ಪ್ರದಾನ ಮಾಡಲಾಗುವುದು. ಪ್ರಸಿದ್ದ ಕುಚಿಪುಡಿ ಪ್ರವೀಣೆ ಹಾಗೂ ನೃತ್ಯ ಕಲಾವಿದೆ ಶ್ರೀಮತಿ ವೈಜಯಂತಿ ಕಾಶಿ ಹಾಗೂ ತಂಡ ಬೆಂಗಳೂರು, ಇವರಿಂದ ವಿಶೇಷ ನೃತ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಹಿರಿಯ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ. 1983 ರಿಂದ 1999ರ ವರೆಗೆ ಸತತವಾಗಿ 4ಬಾರಿಗೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ ಅವರು 2003ರಿಂದ ಇಂದಿನ ತನಕವೂ ವಿಧಾನಪರಿಷತ್ ಸದಸ್ಯರಾಗಿ ಜನಸೇವೆಯಲ್ಲಿ ಸಕ್ರಿಯರು. ಹುಯ್ಯಾರು ಪಟೇಲ್ ಹಿರಿಯಣ್ಣ ಶೆಟ್ಟಿ ಮತ್ತು ಕೊಳ್ಕೆಬೈಲು ಗುಲಾಬಿ ಶೆಡ್ತಿಯವರ ಸುಪುತ್ರನಾಗಿ 1949 ಸೆಪ್ಟೆಂಬರ್‌ 4ರಂದು ಜನಿಸಿದ ಪ್ರತಾಪ್ ಶೆಟ್ಟರು ಬಿ.ಎ ಪದವಿದರರು. ಪದವಿ ಪಡೆದ ನಂತರ ವಿಜಯಾ ಬ್ಯಾಂಕ್ ನ ಉದ್ಯೋಗಿ ಯಾಗಿ ಪುಣೆ ಹಾಗೂ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿ ಆ ನಂತರ ತಂದೆಯವರ ಮರಣದ ತರುವಾಯ ಬ್ಯಾಂಕ್ ಉದ್ಯೋಗ ತೊರೆದು ಊರಿಗೆ ವಾಪಾಸಾಗಿ ಆ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯರಾಗಿ ತನ್ನ ರಾಜಕೀಯ ಜೀವನವನ್ನು ಜನಸೇವೆಯ ಮೂಲಕ ಆರಂಬಿಸಿದ್ದರು. ಆ ನಂತರ ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಂಗಕರ್ಮಿ, ಶಿಕ್ಷಕ ಕೂರಾಡಿ ಸೀತಾರಾಮ ಶೆಟ್ಟಿ ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ ೬೮ ವರ್ಷ ವಯಸ್ಸಾಗಿತ್ತು. ಕೂರಾಡಿ ಸೀತಾರಾಮ ಶೆಟ್ಟಿ ನಿವೃತ್ತ ಅಧ್ಯಾಪಕರಾಗಿದ್ದು ಬಿ.ಎಂ.ಎಂ. ಹೈಸ್ಕೂಲ್ ಕೂರಾಡಿ ಶಾಲೆಯಿಂದ ನಿವೃತ್ತರಾಗಿದ್ದರು. ಕೂರಾಡಿಯವರು ಹಲವು ನಾಟಕಗಳನ್ನು ನಿರ್ದೇಶಿಸಿದ್ದರು. ರಾಜ್ಯ ಉತಮ ಶಿಕ್ಷಕ ಪ್ರಶಸ್ತಿಯನ್ನು ಗಳಿಸಿದ್ದ ಅವರು ಕೆಲವು ಸಮಯದಿಂದ ಅನಾರೋಗ್ಯ ಹೊಂದಿದ್ದರು. ಅವರು ಪತ್ನಿ, ಮೂವರು ಪುತ್ರಿಯರು ಹಾಗೂ ಕುಟುಂಬ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಎನರ್ಜಿಎಂಡ್ ವೆಟ್‌ಲ್ಯಾಂಡ್ ರಿಸರ್ಚ್ ಗ್ರೂಪ್, ಸೆಂಟರ್ ಫಾರ್ ಇಕೊಲಾಜಿಕಲ್ ಸಾಯನ್ಸಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಾಯನ್ಸ್ ಬೆಂಗಳೂರು, ಇವರು ಮೂಡಬಿದ್ರೆಯ ಆಳ್ವಾಸ್‌ನಲ್ಲಿ ಏರ್ಪಡಿಸಿದ್ದ ಲೇಕ್  ಕಾನ್ಫರೆನ್ಸ್‌ನಲ್ಲಿ ಕೋಟೇಶ್ವರದ ಬೀಜದುಂಡೆ ಕೃಷಿ ಪ್ರಯೋಗಕ್ಕೆ ಮನ್ನಣೆ ದೊರೆತಿದೆ. ಕೋಟೇಶ್ವರದ ರಾಜಾರಾಮ ಪಾಲಿಮರ‍್ಸ್‌ನ ಮಾಲಕ ಕೆ. ಸುರೇಶ್ ಕಾಮತ್ ಅವರು ನಡೆಸಿದ ಬೀಜದುಂಡೆ (ಸೀಡ್ ಬಾಲ್) ಭತ್ತದ ಕೃಷಿ ಪ್ರಯೋಗವನ್ನೇ ಆಧಾರವಾಗಿಟ್ಟುಕೊಂಡು ಮಂಗಳೂರು ವಿ. ವಿಯ ಬಾಟನಿ ವಿಭಾಗದ ವಿದ್ಯಾರ್ಥಿನಿ ಕುಂಭಾಸಿಯ ಯು. ಸಂಗೀತಾ ಶೆಣೈ ಪ್ರಸ್ತುತ ಪಡಿಸಿದ ಪೋಸ್ಟರ್ ಪ್ರಸೆಂಟೇಶನ್ A Critical study on Seed ball Technic –An Innovative Agronomic Approa ch in Organic Farming in the Cultivation of OryzasativaL in kundapura Taluk of Udupi District ಎಂಬ ವಿವರಣೆಗೆ ತೀರ್ಪುಗಾರರು ತಲೆದೂಗಿದ್ದು, ಅವರಿಗೆ ಸಹ್ಯಾದ್ರಿ ಯಂಗ್ ಇಕಾಲಾಜಿಸ್ಟ್ (ದ್ವಿತೀಯ) ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನವಂಬರ್ ೨೨…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬದುಕಿನಲ್ಲಿ ಪರರ ಹಸಿವು ಹಾಗೂ ನೋವಿಗೆ ಸ್ಪಂದಿಸುವುದು ಅಗತ್ಯ. ಭ್ರಾತೃತ್ವ ಹಾಗೂ ಸಹೋದರತೆಯ ಮೂಲಕ ಸ್ವಸ್ಥ ಸಮಾಜವನ್ನು ಕಟ್ಟಲು ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಅವರು ಕಥೊಲಿಕ್ ಸಭಾ ಉಡುಪಿ ಪ್ರದೇಶ್, ಕುಂದಾಪುರ ವಲಯ ಸಮಿತಿ ಆಶ್ರಯದಲ್ಲಿ ಭಾನುವಾರ ಕುಂದಾಪುರ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡ ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಬದುಕು ಯಾಂತ್ರಿಕತೆಯತ್ತ ಸಾಗುತ್ತಿದೆ. ಮಾನವೀಯತೆ ಇಲ್ಲದ ಪ್ರಪಂಚದಲ್ಲಿ ಬದುಕಿತ್ತಿದ್ದೇವೆ ಎಂದು ಭಾಸವಾಗುತ್ತಿದೆ. ಇವನ್ನೆಲ್ಲಾ ಮೀರಿ ಏಕತೆಯ ಮಂತ್ರವನ್ನು ಪಠಿಸುವುದು ಅಗತ್ಯವಾಗಿದೆ ಎಂದರು. ಉಡುಪಿ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ಕ್ರಿಸ್ಮಸ್ ಸಂದೇಶ ನೀಡಿ, ಪ್ರೀತಿ ಮತ್ತು ಶಾಂತಿ ದೇವರು ಕಲಿಸಿದ ಭಾಷೆ. ಭಾರತದಲ್ಲಿ ಬೇರೆ ಬೇರೆ ಧರ್ಮಗಳಿದ್ದರೂ ಎಲ್ಲದರ ಗುರಿಯೂ ದೇವರೊಂದಿಗೆ ಇರುವುದೇ ಆಗಿದೆ. ಎಲ್ಲಾ ಧರ್ಮಗಳೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಬಂಟರ ಯಾನೆ ನಾಡವರ ಸಂಘದ ವತಿಯಿಂದ ನಿರ್ಮಾಣಗೊಂಡ ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಂಡಾಡಿ ಜಗನ್ನಾಥ ಶೆಟ್ಟಿ ಸಭಾಂಗಣ, ಯಡ್ತರೆ ಮಂಜಯ್ಯ ಶೆಟ್ಟಿ ಅವರ ೧೦೫ನೇ ಜನ್ಮ ಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಂಪತ್ತು ಗಳಿಕೆ ಜೀವನದ ಒಂದು ಭಾಗವೇ ಹೊರತು ಸಂಪತ್ತೇ ಜೀವನವಲ್ಲ. ಹಣದ ಹಿಂದೆ ಓಡುವುದಕ್ಕಿಂತ ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕು. ನಿಸ್ವಾರ್ಥ ಸೇವೆ ಭಗವಂತನಿಗೂ ಪ್ರಿಯವಾಗಿದ್ದು, ಸಂಘಟಿತರಾಗಿ ಸಮಾಜಕ್ಕೆ ನೀಡಿದ ಕೊಡುಗೆ ಶಾಶ್ವತವಾಗಿರುತ್ತದೆ ಎಂದು ಹೇಳಿದರು. ನಮ್ಮ ಬೆಳವಣೆಗೆಯಲ್ಲಿ ಸಮಾಜದ ಕೊಡುಗೆ ತುಂಬಾಯಿದ್ದು ಪ್ರತಿಯೊಬ್ಬರು ಅದನ್ನು ಮರೆಯಬಾರದು, ನಾವು ನಮ್ಮ ಸಮಾಜದೊಂದಿಗೆ ಬೇರೆ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋದಾಗ ಅವರ ಪ್ರೀತಿ, ವಿಶ್ವಾಸವನ್ನು ಗಳಿಸಬಹುದು. ಕರಾವಳಿ ಜಿಲ್ಲೆಯ ಬಂಟ ಸಮುದಾಯದ ಕೊಡುಗೆಯೂ ಅಪಾರವಾಗಿದ್ದು, ಸಮಾಜದಲ್ಲಿ ಇನ್ನೊಬ್ಬರ ಕಾಲೆಳೆಯುವುದಕ್ಕಿಂತ ಕೈಹಿಡಿದು ಮುನ್ನೆಡೆಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಪ್ರತಿಯೊಬ್ಬರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ದಲಿತ ಸಂಘರ್ಷ ಸಮಿತಿ ಬೈಂದೂರು ವತಿಯಿಂದ ಡಾ ಬಿ.ಆರ್.ಅಂಬೇಡ್ಕರ್ ಅವರ ೬೨ನೇ ಮಹಾ ಪರಿನಿರ್ಮಾಣ ದಿನದವನ್ನು ಬೈಂದೂರಿನ ಸರಕಾರಿ ಪರಿಶಿಷ್ಟ ವರ್ಗದ ಆಶ್ರಯ ಶಾಲೆಯಲ್ಲಿ ಆಚರಿಸಲಾಯಿತು. ಡಾ. ಬಿ. ಆರ್. ಅಂಬೇಡ್ಕರ್ ಅವರ ೬೨ನೇ ಮಹಾ ಪರಿನಿರ್ಮಾಣ ದಿನವನ್ನು ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ಉದ್ಘಾಟಿಸಿ, ಸಾಕಷ್ಟು ಅವಮಾನ ಮತ್ತು ತಾರತಮ್ಯ ಅನುಭವಿಸಿದರೂ ದೇಶದ ಬಗ್ಗೆ ತಿರಸ್ಕಾರ ಭಾವನೆ ಹೊಂದದೇ ಸಮಾಜ ತಿದ್ದುವ, ಸದೃಢ ಭಾರತ ನಿರ್ಮಾಣದತ್ತ ತಮ್ಮ ಚಿತ್ತ ಹರಿಸಿದ ಅಂಬೇಡ್ಕರ್ ಒಬ್ಬ ಮಹಾನ್ ಮಾನವತಾದಿ. ಅಸ್ಪಶ್ಯರು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಇಡೀ ಜೀವನನ್ನೇ ಮುಡುಪಾಗಿರಿಸಿದ್ದ ಅಂಬೇಡ್ಕರ್ ಅವರು ನಮ್ಮನ್ನಗಲಿ ೬೨ ವರ್ಷಗಳು ಸಂದಿದ್ದರೂ ಅವರ ವಿಚಾರಧಾರೆಗಳು ಜನಮಾನಸದಲ್ಲಿ ಇಂದಿಗೂ ಆಳವಾಗಿ ಬೇರೂರಿವೆ. ಅಸಮತೋಲನ ಮುಕ್ತ ಭಾರತ ಹಾಗೂ ಅರ್ಥಿಕ ಪ್ರಗತಿಯನ್ನು ಕಂಡಿದ್ದ ಅವರ ಕನಸಗಳನ್ನು ನನಸಾಗಿಸಲು ನಾವಿಂದು ಅವರ ಆಲೋಚನಾ ಸರಣಿಯ ಮಾರ್ಗದಲ್ಲಿ ಮುನ್ನಡೆಯಬೇಕಿದೆ ಎಂದರು. ಬೈಂದೂರು ಸರಕಾರಿ ಪರಿಶಿಷ್ಟ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ಸರಕಾರದ ಯೋಜನೆಗಳು ಸಮಪರ್ಕವಾಗಿ ಜನರಿಗೆ ತಲುಪಬೇಕಾದರೆ ಅಧಿಕಾರಿಗಳ ಸ್ಪಂದನೆ ಮುಖ್ಯವಾಗಿರುತ್ತದೆ. ಕರಾವಳಿ ಭಾಗದ ಸಮಸ್ಯೆಗಳ ಬಗ್ಗೆ ಸಾಕಷ್ಟು ಅನುಭವ ಇರುವ ಸಂಸದರು ಜನಸ್ಪಂದನೆಯ ಮೂಲಕ ಇನ್ನಷ್ಟು ಸೇವೆ ನೀಡಲು ಅವಕಾಶ ದೊರೆತಂತಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಅವರ ನೂತನ ಕಛೇರಿ ಹಾಗೂ ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಬೈಂದೂರು ವ್ಯಾಪ್ತಿಯಲ್ಲಿ ಕುಡಿಯುವ ನೀರು, ಕಡಲ್ಕೊರೆತ, ಮರಳು ಸಮಸ್ಯೆ, ಡೀಮ್ಡ್ ಪಾರೆಸ್ಟ್ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಕ್ಕುಪತ್ರ ದೊರಕದಿರುವುದು ಸೇರಿದಂತೆ ಹತ್ತಾರು ಸಮಸ್ಯೆಗಳಿದ್ದು, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂಧಿಸಿದಾಗ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಪಕ್ಷಾತೀತವಾಗಿ ಜನರ ಸಮಸ್ಯೆ ಅರಿಯಲು ಇಲ್ಲಿ ಕಛೇರಿ ತೆರೆಯಲಾಗಿದ್ದು, ಇದು…

Read More