ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಗಂಗೊಳ್ಳಿ ಪ್ರಧಾನ ಕಛೇರಿಯಲ್ಲಿ ಶತಮಾನೋತ್ಸವ ಠೇವಣಿ ಪತ್ರ ಬಿಡುಗಡೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಮಾತನಾಡಿ ಗ್ರಾಮದ ಪ್ರತಿಯೊಬ್ಬರು ಆರ್ಥಿಕವಾಗಿ ಸಬಲರಾಗಬೇಕು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಅವರ ಜೀವನದಕ್ಕೆ ಸಹಕಾರ ನೀಡಬೇಕೆಂಬ ಉದ್ದೇಶದಿಂದ ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ 1920 ರಲ್ಲಿ ಆರಂಭಗೊಂಡ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸಂಸ್ಥೆಯು ಅನೇಕ ವಿಶಿಷ್ಟ ಕಾರ್ಯಕ್ರಮ, ಯೋಜನೆಗಳನ್ನು ಸಹಕಾರಿಯ ಸದಸ್ಯರಿಗೆ ನೀಡುವ ಮೂಲಕ ರಾಜ್ಯದಲ್ಲೇ ಉತ್ತಮ ಹೆಸರು ಪಡೆದುಕೊಂಡಿದೆ ಎಂದು ಹೇಳಿದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಉತ್ತಮ ಕಾರ್ಯಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿರುವುದು ಶ್ಲಾಘನೀಯ. ಪ್ರಸ್ತುತ ಶತಮಾನದ ಹೊಸ್ತಿಲಿನಲ್ಲಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಶತಮಾನೋತ್ಸವ ಠೇವಣಿ ಯೋಜನೆಯನ್ನು ಆರಂಭಿಸಿರುವುದು ಸ್ತುತ್ಯಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಸಹಕಾರಿಯು ಇನ್ನಷ್ಟು ಜನಪ್ರಿಯಗೊಂಡು ಸದಸ್ಯರ ಅವಶ್ಯಕತೆಗಳಿಗೆ ಸ್ಪಂದಿಸುವಂತಾಗಲಿ ಎಂದು ಶುಭ ಹಾರೈಸಿದರು. ಸಹಕಾರಿಯ ಅಧ್ಯಕ್ಷ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ಆಂಗ್ಲ ಮಾಧ್ಯಮ ಶಾಲೆಯಲ್ಲಿ ’ಹದಿಹರೆಯದ ಜಾಗೃತಿ ಕಾರ್ಯಾಗಾರ’ ನೆರವೇರಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ, ಡಾ| ರವೀಂದ್ರ ತಲ್ಲೂರು, ಡಾ| ಅಮ್ಮಾಜಿ ಮತ್ತು ಡಾ| ವಿಜಯಲಕ್ಷೀ ಆಗಮಿಸಿದ್ದರು. ಕಾರ್ಯಾಗಾರದಲ್ಲಿ ಮಾತನಾಡಿದ ಡಾ| ರವೀಂದ್ರರವರು ಲೈಂಗಿಕ ಶಿಕ್ಷಣದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆ ದೂರವಾಗಬೇಕು. ಲೈಂಗಿಕ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ ಎಂದರು. ಹಾಗೆಯೇ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ನಮಗೆ ನಮ್ಮ ದೇಹದ ಪ್ರತಿಯೊಂದೂ ಅಂಗಗಳ ಬಗ್ಗೆ ಇರಬೇಕಾದ ಅರಿವು, ಗುಪ್ತಾಂಗಗಳ ರಕ್ಷಣೆ, ಹದಿಹರೆಯದವರಲ್ಲಿ ಉಂಟಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ವಿಷಯವಾಗಿ ಮಾಹಿತಿ ನೀಡಿದರು. ಉಪ ಪ್ರಾಂಶುಪಾಲರಾದ ಶುಭಾ.ಕೆ.ಎನ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಅನಿತಾ ಆಲಿಸ್ ಡಿಸೋಜಾ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಜಗದೀಶ್ ಆಚಾರ್ ಸಾಸ್ತಾನ, ಶಿಕ್ಷಕಿ ಕವಿತಾ ಭಟ್ಉಪಸ್ಥಿತರಿದ್ದರು. ಶಿಕ್ಷಕ ಲಕ್ಷ್ಮೀಗಣೇಶ್ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀನಿವಾಸ್ ಬೈಂದೂರು ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪ್ರತಿಷ್ಠಿತ ರೋಟರಿ ಕ್ಲಬ್ ಕುಂದಾಪುರ ಸನ್ರೈಸ್ ಇದರ 2018-19 ರ ಸಾಲಿನ ಅಧ್ಯಕ್ಷರಾಗಿ ರೋಟರಿ ವಲಯ 01 ರ ಮಾಜಿ ಜೋನಲ್ ಲೆಫ್ಟಿನೆಂಟ್ ಹಾಜಿ ಅಬ್ಬುಶೇಖ್ ಸಾಹೇಬ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶಿವಾನಂದ ಎಂ.ಪಿ., ಕೋಶಾಧಿಕಾರಿಯಾಗಿ ನಾಗರಾಜ್ ನಾಯ್ಕ್, ಕ್ಲಬ್ ಸರ್ವೀಸ್ ಬಿ.ಎಮ್. ಚಂದ್ರಶೇಖರ್, ವಕೇಷನಲ್ ಸರ್ವೀಸ್ ಅಜಯ್ ಹವಾಲ್ದಾರ್, ಕಮ್ಯೂನಿಟಿ ಸರ್ವೀಸ್ ಎಲ್.ಜೆ. ಫೆರ್ನಾಂಡೀಸ್, ಇಂಟರ್ನ್ಯಾಷನಲ್ ಸರ್ವೀಸ್ ದಿನಕರ್ ಆರ್. ಶೆಟ್ಟಿ, ಯೂತ್ ಸರ್ವೀಸ್ ನಾಗೇಶ್ ನಾವುಡ, ಟಿ.ಆರ್.ಎಫ್. ಚೇರ್ಮೆನ್ ಸತೀಶ್ ಎನ್. ಶೇರೆಗಾರ್, ಪೋಲೀಯೋ ಪ್ಲಸ್ ಯೂಸುಫ್ ಹಂಜ್ಞ, ಲಿಟರಸಿ ರಾಜಶೇಖರ್ ಹೆಗ್ಡೆ, ವಾಶ್ ಇನ್ ಸ್ಕೂಲ್ ಪೂರ್ಣಿಮಾ ಬಿ.ಎಸ್., ಬುಲೆಟಿನ್ ಸಂಪಾದಕರಾಗಿ ಉಲ್ಲಾಸ್ ಕ್ರಾಸ್ತಾ ಆಯ್ಕೆ ಆಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇತ್ತೀಚೆಗೆ ನಿಧನರಾದ ಡಾ.ಹೆಚ್.ವಿ ನರಸಿಂಹ ಮೂರ್ತಿಯವರು ಪ್ರಕಟಿಸಿದ ಬರಹಗಳ ಪುಸ್ತಕ ಪ್ರದರ್ಶನ ಮತ್ತು ಅವರಿಗೆ ಶೃದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಗ್ರಂಥಾಲಯದ ಗ್ರಂಥಪಾಲಕರಾದ ಆನಂದ ಅವರು ಮಾತನಾಡಿ ನರಸಿಂಹಮೂರ್ತಿಗಳು ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದರು. ಆದರೆ ಇದಕ್ಕಿಂತ ಹೆಚ್ಚಾಗಿ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಕವಾಗಿ ಕಾಲೇಜು ಗುರುತಿಸಿಕೊಳ್ಳುವಲ್ಲಿ ಅವರ ಸೇವೆ ಅಪಾರ ,ಅನನ್ಯ ಮತ್ತು ಅಜರಾಮರವಾದುದು. ಅವರು ಸಂಪಾದಕರಾಗಿದ್ದ ದರ್ಶನ ವಾರ್ಷಿಕ ಸಂಚಿಕೆ, ಆಧ್ಯಾತ್ಮಿ ಶಿಬಿರ, ಅಧ್ಯಾಪಕರ ಸಂಘ ಎನ್.ಎಸ್.ಎಸ್. ಹೀಗೆ ಹತ್ತು ಹಲವು ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಎಂದು ಹೇಳಿದರು. ಕುಂದಾಪುರದ ಕುಂದೇಶ್ವರ ದೇವಾಲಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು. ದೇವಾಲಯವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸಿದವರು. ಅವರ ಸುಮಾರು 88 ಕೃತಿಗಳನ್ನು ಪ್ರದರ್ಶಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರ ಅಭಿಮಾನಿ ಬಳಗ ಮತ್ತು ಬಿಜೆಪಿಯ ಪ್ರಮುಖ ಕಾರ್ಯಕರ್ತರು ಕೋಟ ರಾಷ್ಟ್ರೀಯ ಹೆದ್ದಾರಿ ಅಮೃತೇಶ್ವರಿ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಗೋಪಾಲ ಬಂಗೇರ ಎಂ.ಸುಬ್ರಾಯ ಆಚಾರ್ಯ,ಉಮೇಶ್ ಪೂಜಾರಿ ಕಲ್ಮಾಡಿ,ಸಂಜೀವ ಪೂಜಾರಿ ,ಶ್ರೀಧರ ಗಾಣಿಗ ಕಲ್ಮಾಡಿ,ಅನಂತ ಪ್ರಭು,ಅಭಿಮಾನಿ ಬಳಗದ ಪ್ರಸಾದ್ ಬಿಲ್ಲವ,ಸುರೇಶ್ ಗಿಳಿಯಾರು ಮಂಜುನಾಥ ಗಿಳಿಯಾರು, ರಾಘವೇಂದ್ರ ಶೆಟ್ಟಿ ಗಿಳಿಯಾರು, ಶಿವರಾಜ್ ಪೂಜಾರಿ ,ಅವಿನಾಶ್ ಶೆಟ್ಟಿ,ಭರತ್ ಶ್ರೀಯಾನ್ ಕಲ್ಮಾಡಿ,ರಘು,ಪೂಜಾರಿ,ರಾಜು ಕೆ.ಎಸ್,ಉದಯ ತಿಂಗಳಾಯ,ಪ್ರಶಾಂತ್ ಸೂರ್ಯ,ನವೀನ್ ಮಣೂರು ಮುಂತಾದವರು ಉಪಸ್ಥಿತರಿದ್ದರು. ಕೋಟ ಶ್ರೀನಿವಾಸ ಪೂಜಾರಿಯವರ ಅಭಿಮಾನಿಗಳು ಪಟಾಕಿ ಸಿಡಿಸಿದ ನಂತರ ಆ ಸ್ಥಳವನ್ನು ಸ್ವಚ್ಚಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪ್ರಾತ್ರರಾದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ರಾಧೇಯ ಎಂ. ಕಾಮತ್ ನೀಟ್ ಅರ್ಹತಾ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಮಟ್ಟದಲ್ಲಿ 76ನೇ ರ್ಯಾಂಕ್ ಪಡೆದುಕೊಂಡಿರುತ್ತಾನೆ. ಈತ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಮೋಹನ ಕಾಮತ್ ಹಾಗೂ ಗಿರೀಜಾ ಎಂ. ಕಾಮತ್ರವರ ಸುಪುತ್ರ. ಇವರ ಸಾಧನೆಗೆ ಕಾಲೇಜಿನ ಅಧ್ಯಕ್ಷರು, ಶಾಸಕರೂ ಆಗಿರುವ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ವೀರ ವಿಠಲ ಭಜನಾ ಮಂಡಳಿಯ ಸದಸ್ಯರು ಗಂಗೊಳ್ಳಿ ನಿನಾದ ಸಂಸ್ಥೆಯ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಪಂಡರಪುರದ ಶ್ರೀ ವಿಠಲ ರಕುಮಾಯಿ ದೇವಸ್ಥಾನದಲ್ಲಿ ಭಜನಾ ಸೇವೆ ಸಮರ್ಪಿಸಿದರು. ನಿನಾದ ಸಂಸ್ಥೆಯ ಅಧ್ಯಕ್ಷ ಎಂ.ಮುಕುಂದ ಪೈ ನೇತೃತ್ವದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಭಜನೆ ನಡೆಸಿದ ಭಜನಾ ಮಂಡಳಿಯ ಸದಸ್ಯರು ಕೆಲ ಕಾಲ ಭಕ್ತರು ಭಾವಪರವಶರನ್ನಾಗಿ ಮಾಡಿದರು. ದೇವಸ್ಥಾನದ ಒಳಗೆ ಭಜನೆ ಮಾಡುವ ಅವಕಾಶ ದೊರೆತಿರುವುದು ಅವಿಸ್ಮರಣೀಯ. ದೇವಸ್ಥಾನದಲ್ಲಿ ಭಜನೆ ನಡೆಸಿದ ಒಂದೊಂದು ಕ್ಷಣ ಕೂಡ ವಿಶಿಷ್ಟ ರೋಮಾಂಚನ ನೀಡಿತ್ತು ಎಂದು ಭಜನಾ ಸೇವೆ ಅರ್ಪಿಸಿದ ಸದಸ್ಯರು ಧನ್ಯತೆಯಿಂದ ನುಡಿದಿದ್ದಾರೆ. ಇಂತಹ ಅದ್ಭುತ ಅವಕಾಶ ಕಲ್ಪಿಸಿದ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯ ಕಿಂಡರ್ ಗಾರ್ಟನ್ ವಿಭಾಗದಲ್ಲಿ ಬಣ್ಣಗಳಲ್ಲಿ ರಂಗಾದ ಕೆಂಪು ಬಣ್ಣದ ದಿನವನ್ನು ಪುಟಾಣಿಗಳು ವಿಶೇಷವಾಗಿ ಆಚರಿಸಿದರು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಪುಟಾಣಿಗಳಿಗೆ ಬಣ್ಣವನ್ನು ಪರಿಚಯಿಸುವುದು. ಸಾಮಾನ್ಯವಾಗಿ ಮಕ್ಕಳು ಆಕರ್ಷಿತರಾಗುವುದು ಬಣ್ಣದಿಂದ ಹಾಗಾಗೀ ಪುಟಾಣಿಗಳಿಗೆ ಮೊದಲು ಬಣ್ಣಗಳನ್ನು ಪರಿಚಯಿಸಿ ನಂತರ ಇತರ ವಿಷಯಗಳನ್ನು ತಿಳಿಸುವುದು ಉತ್ತಮ ಕಲಿಕೆ ಎಂಬುದು ನಮ್ಮ ಅನಿಸಿಕೆ. ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪುಟಾಣಿಗಳೆಲ್ಲರೂ ಕೆಂಪು ಬಣ್ಣದ ಉಡುಗೆ ತೊಟ್ಟು ಶಾಲೆಗೆ ಹಾಜರಾದರು ಜೊತೆಗೆ ಪ್ರತಿ ತರಗತಿ ಕೋಣೆಯಲ್ಲಿ ಕೂಡ ಕೆಂಪು ಬಣ್ಣದ ವಿವಿಧ ಅಲಂಕಾರಿಕ ವಸ್ತುಗಳು ಬಲೂನ್, ಆಟಿಕೆಗಳು, ಹಣ್ಣುಗಳ ಹಾಗೂ ವಿವಿಧ ರೀತಿಯ ನಕ್ಷೆಗಳು ತರಗತಿ ಕೋಣೆಯಲ್ಲಿ ರಾರಾಜಿಸುತ್ತಿದ್ದವು ಮತ್ತು ಶಿಕ್ಷಕಿಯರು ಕೆಂಪು ಬಣ್ಣದ ಸೀರೆ ಉಟ್ಟು ಪುಟಾಣಿಗಳ ಜೊತೆ ಸೇರಿ ವೃತ್ತದ ಸಮಯದಲ್ಲಿ ಹಲವಾರು ಚಟುವಟಿಕೆಗಳನ್ನು ಮಾಡಿ ಹಾಡಿ ಕುಣಿದರು. ಪುಟಾಣಿಗಳು ವಿವಿಧ ಚಿತ್ರಗಳಿಗೆ ಕೆಂಪು ಬಣ್ಣವನ್ನು ತುಂಬಿ ಆನಂದಿಸಿದರು. ಶಿಕ್ಷಕಿಯರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಗೋಳಿಹೊಳೆ ಶ್ರೀ ಮೂಕಾಂಬಿಕಾ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳಿಗೆ ಚುನಾವಣೆಯ ಕುರಿತು ಜ್ಞಾನಾನುಭವ ನೀಡುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಯಿತು. ಶಾಲೆಯ ವಿದ್ಯಾರ್ಥಿ ನಾಯಕ ಹಾಗೂ ಉಪನಾಯಕನ ಆಯ್ಕೆಯನ್ನು ವಿಧಾನಸಭಾ ಚುನಾವಣಾ ಮಾದರಿಯಂತೆ ನಡೆಸಲಾಯಿತು. ಎಂಟು ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಎರಡು ದಿನ ಶಾಲೆಯಲ್ಲಿ ಪ್ರಚಾರವನ್ನು ಕೈಗೊಂಡರು. ಎರಡು ಮತಕೇಂದ್ರಗಳಲ್ಲಿ ಶಾಲಾ ಗುರುತಿನ ಚೀಟಿಯೊಂದಿಗೆ ಬಂದು ತಮ್ಮ ಆಯ್ಕೆಯ ನಾಯಕ, ಉಪನಾಯಕನಿಗೆ ಮತನೀಡಿದರು. ನಂತರ ನಡೆದ ಮತ ಎಣಿಕೆಯಲ್ಲಿ ನಾಯಕನಾಗಿ ಸುಚಿ ಶೆಟ್ಟಿ, ಉಪನಾಯಕನಾಗಿ ಅಭೀಷ್ ಮೊಗವೀರ ಆಯ್ಕೆಯಾದರು. ಪ್ರಾಂಶುಪಾಲ ಚೇತನ್ ಕೆ. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಶಿಕ್ಷಕರು ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ್ ಭಾರತ್ ಅಭಿಯಾನಕ್ಕೆ ಸ್ವಚ್ಛ್ ಭಾರತ್ ಸಮ್ಮರ್ ಇಂಟರ್ನ್ಶಿಪ್ ಪ್ರೋಗ್ರಾಂ ಯೋಜನೆಯಲ್ಲಿ ತಮ್ಮದೇ ಆಗಿರುವ ಕೊಡುಗೆ ನೀಡಲು ಕೊಲ್ಲೂರು ಮಹಿಳಾ ಮಂಡಲದ ಆಸಕ್ತ ಮಹಿಳಾ ಸದಸ್ಯರು ಮುಂದೆ ಬಂದಿದ್ದಾರೆ. ಪ್ರತಿದಿನ4-5 ಗಂಟೆ ಸ್ವಚ್ಛತಾ ಅಭಿಯಾನಕ್ಕಾಗಿ ಮೀಸಲಿಟ್ಟಿರುವ ಮಹಿಳೆಯರು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸುವ ಹಾಗೂ ಮೈದಾನವನ್ನು ಸ್ವಚ್ಛಗೊಳಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ನಿಗದಿತ ಸಮಯದಲ್ಲಿ ಸ್ವಚ್ಛ್ ಭಾರತ್ ಸಮ್ಮರ್ ಇಂಟರ್ನ್ಶಿಪ್ ಪ್ರೋಗ್ರಾಂನಡಿ ಕೇಂದ್ರ ಸರ್ಕಾರ ನೀಡುವ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಬೇಕೆಂಬ ನೆಲೆಯಲ್ಲಿ ನಾವೆಲ್ಲರೂ ಒಂದಾಗಿ ಪ್ರಯತ್ನಿಸಲಿದ್ದೇವೆ. ನಮ್ಮ ಮನೆಕೆಲಸಗಳನ್ನು ತ್ವರಿತವಾಗಿ ಮುಗಿಸಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಒಂದಿಷ್ಟು ಸಮಯವನ್ನು ಇದಕ್ಕಾಗಿ ಮೀಸಲಿರಿಸಿದ್ದು, ಜುಲೈ31ರ ಒಳಗೆ ನೂರು ಗಂಟೆ ಕೆಲಸ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಸಂಘದ ಅಧ್ಯಕ್ಷೆ ಪ್ರಸನ್ನಾ ಶರ್ಮ ಹಾಗೂ ಕಾರ್ಯದರ್ಶಿ ಲತಾ ಶೆಟ್ಟಿ…
