Author: ನ್ಯೂಸ್ ಬ್ಯೂರೋ

ಎಲ್ಲಾ ಮೊಬೈಲ್ ಖರೀದಿಯ ಮೇಲೂ ಡಿಸ್ಕೌಂಟ್, ವಿಶೇಷ ಆಫರ್ ಕುಂದಾಪ್ರ ಡಾಟ್ ಕಾಂ ಕುಂದಾಪುರ: ಯಶಸ್ವಿಯಾಗಿ ಮುನ್ನಡೆಯುತ್ತಿರುವ ಮೊಬೈಲ್ ಉತ್ಪನ್ನಗಳ ಉತ್ಕೃಷ್ಟ ಮಳಿಗೆ ‘ಮೊಬೈಲ್ ಎಕ್ಸ್’ ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್ ಹಾಗೂ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಖರೀದಿಸುವ ಪ್ರತಿ ಉತ್ಪನ್ನಕ್ಕೂ ವಿಶೇಷ ಆಫರ್ ನೀಡುತ್ತಿರುವ ಮೊಬೈಲ್ ಎಕ್ಸ್ – ಕಂಪ್ಲೀಟ್ ಮೊಬೈಲ್ ಶಾಪ್ ಇದೀಗ ಕುಂದಾಪುರ ಬಹು ನಂಬುಗೆಯ, ಬಹು ಬೇಡಿಕೆಯ ಮೊಬೈಲ್ ಶೋರೂಮಂಗಳಲ್ಲಿ ಒಂದೆನಿಸಿದೆ. ದೀಪಾವಳಿಯ ಸಂದರ್ಭ ಮೊಬೈಲ್ ಎಕ್ಸ್ ನಲ್ಲಿ ಯಾವುದೇ ಮೊಬೈಲ್ ಖರೀದಿಸುವವರಿಗೆ ಕಾಂಬೋ ಆಫರ್ ನೀಡಲಾಗುತ್ತಿದೆ. ವಿವೋ ವಿ11 ಪ್ರೋ, ಒಪ್ಪೊ ಏಫ್9 ಹಾಗೂ ಏಫ್9 ಪ್ರೋ, ಆಸಸ್ ಮಾಕ್ಸ್ ಎಂ1 ಪ್ರೋ, ಐಪೋನ್ ಎಕ್ಸ್’ಎಸ್ ಮಾಕ್ಸ್, ನೋಟ್ 5 ಪ್ರೋ ಎಂಐ ಹಾಗೂ ಸ್ಯಾಮಸಂಗ್, ಎಚ್.ಟಿ.ಸಿ, ಸೋನಿ, ಮೈಕ್ರೋಮ್ಯಾಕ್ಸ್, ಮೈಕ್ರೋಸಾಫ್ಟ್, ಲಾವಾ, ಲೆನೋವಾ ಇಂಟೆಕ್ಸ್, ಐಪೋನ್ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಉತೃಷ್ಟ ಮೊಬೈಲ್ಗಳನ್ನು ಇಲ್ಲಿ ಲಭ್ಯವಿದೆ. ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆಯ ಯೋಗಪಟು ಕುಶ ಪೂಜಾರಿ ವಿಯೆಟ್‌ನಾಮ್‌ನ ಮಿಕೊ ಫಿಟ್‌ನೆಸ್ ಸೆಂಟರ್‌ನಲ್ಲಿ ಯೋಗ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಯೋಗ ವಿಜ್ಞಾನದಲ್ಲಿ ಎಮ್ ಎಸ್ಸಿ ಪದವಿ ಗಳಿಸಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಮಲಯೇಷ್ಯಾದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಪಡೆದಿದ್ದರು. ಮರವಂತೆಯ ರಾಮಚಂದ್ರ ಪೂಜಾರಿ-ನೀಲು ಪೂಜಾರಿಯ ಪುತ್ರರಾಗಿರುವ ಅವರು ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮರವಂತೆ ಪ್ರೌಢಶಾಲೆ, ನಾವುಂದ ಪದವಿಪೂರ್ವ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣ ಪಡೆದು, ಕುಂದಾಪುರದ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಎಂ. ಎ. ಲಮಾಣಿ, ಯಶೋದಾ ಕರನಿಂಗ, ಡಾ. ಕೆ. ಕೃಷ್ಣ ಶರ್ಮ ಅವರಿಗೆ ಯೋಗ ಕಲಿಸಿದ್ದರು,. ಬಿ.ಬಿ. ಹೆಗ್ಡೆ ಕಾಲೇಜಿನ ನಿರ್ದೇಶಕ ದೋಮ ಚಂದ್ರಶೇಖರ್ ನೀಡಿದ ಪ್ರೋತ್ಸಾಹದ ಫಲವಾಗಿ ವಿಶೇಷ ಸಾಧನೆ ಸಾಧ್ಯವಾಯಿತು ಎಂದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸೈಂಟ್ ಥೋಮಸ್ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ೬೩ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ರೆ. ಫಾ. ಡಾ. ವಿನ್ಸೆಂಟ್ ಜಾರ್ಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ, ಹೆಗ್ಗದ್ದೆ ಪ್ರಕಾಶನದ ಸಂದೀಪ್ ಶೆಟ್ಟಿ ಹೆಗ್ಗದ್ದೆ, ಮಾತನಾಡಿ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಕಾಯಕ ನಿಜಕ್ಕೂ ಶ್ಲಾಘನೀಯ, ವಿದ್ಯಾರ್ಥಿ ಪ್ರತಿಭೆಗಳು ಅರಳಲು ಇಂತಹ ವೇದಿಕೆಗಳು ಸಾಕ್ಷಿ ಎಂದ ಶುಭಹಾರೈಸಿದರು. ಈ ಸಂದರ್ಭ ವಿದ್ಯಾರ್ಥಿ ರಚನೆಯ ಐದನೇಯ ಕವನ ಸಂಕಲನ ’ನವಿರು’ ಹಾಗೂ ವಿದ್ಯಾರ್ಥಿ ಚಿಂತನ ಮಂಥನಗಳ ಧ್ವನಿ ಸುರುಳಿ ’ಅಂತರಂಗ’ವನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯ ಸಾಹಿತ್ಯ ಸಿರಿ ಪ್ರಶಸ್ತಿ ವಿಜೇತ ಕಾಲೇಜು ವಿಭಾಗದ ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿ ಪೋಷಕ ಪ್ರತಿನಿಧಿಗಳಾಗಿರುವ ಉದಯ್, ಜಯರಾಮ ಶೆಟ್ಟಿ, ಹಾಗೂ ಸಂಸ್ಥೆ ಬೋಧಕವ್ರಂದ, ವಿದ್ಯಾರ್ಥಿಗಳು, ಪೋಷಕವ್ರಂದದವರು ಉಪಸ್ಥಿತರಿದ್ದರು.…

Read More

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವು ನವಂಬರ್ ತಿಂಗಳ 16, 17, 18ರಂದು  3 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಸಮಾರಂಭವು ’ರತ್ನಾಕರವರ್ಣಿ ’ ವೇದಿಕೆಯಲ್ಲಿ ನವಂಬರ್ 16ರಂದು ಬೆಳಿಗ್ಗೆ ನೆರವೇರಲಿದೆ. ಉಳಿದಂತೆ 3 ದಿನಗಳ ಸಮ್ಮೇಳನವು ಪ್ರತಿವರ್ಷದಂತೆ ಸಮಾನಾಂತರ ವೇದಿಕೆಗಳಲ್ಲಿ ಜರುಗಲಿದೆ.    

Read More

ಕುಂದಾಪ್ರ ಡಾಟ್ ಕಾಂ ಲೇಖನ ಕುಂದಾಪುರ: ಕುಂದಗನ್ನಡ ಕಂಪನ್ನು ನಾಡಿನಾದ್ಯಂತ ಪಸರಿಸಿದ ಖ್ಯಾತ ಲೇಖಕಿ ವೈದೇಹಿ ಅವರ ಕೃತಿಯಾಧಾರಿತ “ಅಮ್ಮಚ್ಚಿಯೆಂಬ ನೆನಪು” ಕುಂದಗನ್ನಡದ ಸಿನೆಮಾ ನ.1ರಂದು ತೆರೆಗೆ ಬರುತ್ತಿದೆ. ಚಂಪಾ. ಪಿ. ಶೆಟ್ಟಿ ನಿರ್ದೇಶನದಲ್ಲಿ ಸಂಪೂರ್ಣ ಕುಂದಾಪುರ ಕನ್ನಡದಲ್ಲೇ ಸಿನೆಮಾ ಮೂಡಿಬಂದಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಸಿನೆಮಾದ ಸಂಭಾಷಣೆಯನ್ನು ವೈದೇಹಿಯವರೇ ಬರೆದಿದ್ದಾರೆ. “ಒಂದು ಮೊಟ್ಟೆಯ ಕಥೆ” ಖ್ಯಾತಿಯ ರಾಜ್. ಪಿ. ಶೆಟ್ಟಿಯವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾವು ಮಾಡಿದ ಬೇರೆ ಸಿನೆಮಾಗಳ ಪಾತ್ರಗಳಿಗಿಂತ ಹೆಚ್ಚು ಆಪ್ತವಾಗುವ, ಅಭಿನಯಕ್ಕೆ ಪುಷ್ಟಿ ಕೊಡುವ ಪಾತ್ರವಾದ ವೆಂಕಪ್ಪಯ್ಯನ ಪಾತ್ರ ಎಂದು ಹೇಳಿದ್ದಾರೆ. ಇವರಲ್ಲದೇ ವೈಜಯಂತಿ ಅಡಿಗ, ದಿಯಾ ಪಲಕ್ಕಲ್, ದೀಪಿಕಾ ಆರಾದ್ಯ, ರಾಧಾಕೃಷ್ಣ ಉರಾಳ, ಗೀತಾ ಸುರತ್ಕಲ್, ವಿಶ್ವನಾಥ ಉರಾಳ, ಬಿ.ಜಿ. ರಾಮಕೃಷ್ಣ, ಚಂದ್ರಹಾಸ ಉಲ್ಲಾಳ, ಶೃಂಗೇರಿ ರಾಮಣ್ಣ, ಕುಂದಾಪ್ರ ಡಾಟ್ ಕಾಂ ಅಂಕಣಕಾರ ದಿಲೀಪ್ ಶೆಟ್ಟಿ ಮುಂತಾದ ಖ್ಯಾತನಾಮರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬಹುತೇಕ ರಂಗಭೂಮಿಯ ಕಲಾವಿದರು ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಂತ್ರಜ್ಞಾನದ ಬೆಳವಣಿಗೆಯ ಕಾರಣದಿಂದ ಸಂಗೀತ ಕ್ಷೇತ್ರದಲ್ಲಿಯೂ ಗಣನೀಯ ಬದಲಾವಣೆಗಳಾಗಿವೆ. ಶಾಸ್ತ್ರೀಯ ಸಂಗೀತಗಾರರ ಮತ್ತು ಸಂಗೀತ ಪ್ರಿಯರ ಸಂಖ್ಯೆ ಹೆಚ್ಚಿದೆ ಎಂದು ನಿವೃತ್ತ ಪ್ರಾಧ್ಯಾಪಕಿ, ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಹೇಳಿದರು. ನೂತನವಾಗಿ ಅಸ್ತಿತ್ವಕ್ಕೆ ಬಂದ ಗುರುಪರಂಪರಾ ಸಂಗೀತ ಸಭಾವನ್ನು ಕುಂದಾಪುರದ ಶ್ರೀ ಸತ್ಯಸಾಯಿ ಮಂದಿರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು. ಕುಂದಾಪುರದಲ್ಲಿ ಶಾಸ್ತ್ರೀಯ ಸಂಗೀತದ ಪ್ರಜ್ಞೆ ತಡವಾಗಿ ಆರಂಭವಾಯಿತು. ’ಸಂಗೀತ ಭಾರತಿ’ ಸಂಸ್ಥೆಯ ಆರಂಭ ಮತ್ತು ಅದರ ಚಟುವಟಿಕೆಗಳು ಸೀಮಿತ ವರ್ಗವನ್ನು ಸೆಳೆದಿದೆ. ಸುದೀರ್ಘ ಹಿನ್ನೆಲೆಯ ಸನಾತನ ಕಲೆಯನ್ನು ನಮ್ಮ ಕಾಲದಲ್ಲಿ ಮುನ್ನಡೆಸಲು ಮತ್ತು ಮುಂದಿನ ತಲೆಮಾರಿಗೆ ದಾಟಿಸಲು ಅಷ್ಟು ಸಾಲದು. ಸಂಗೀತದ ಶಿಕ್ಷಣ, ಮತ್ತು ಕಾರ್ಯಕ್ರಮಗಳ ಆವರಣ ಇನ್ನಷ್ಟು ವಿಸ್ತಾರವಾಗಬೇಕು. ನಿರುಪಯುಕ್ತ ಮತ್ತು ಹಾನಿಕಾರಕ ಉಪಕರಣಗಳೊಂದಿಗೆ ಕಾಲಹರಣ ಮಾಡುವ ಯುವ ಪೀಳಿಗೆಯನ್ನು ಅದರಲ್ಲಿ ತೊಡಗಿಸಬೇಕು. ಕಲಿತು ವಿದ್ವಾಂಸರಾಗದಿದ್ದರೂ ಉತ್ತಮ ಶ್ರೋತೃಗಳಾಗಲು ಅಗತ್ಯವಿರುವ ಹಿನ್ನೆಲೆಯನ್ನು ಅವರು ಗಳಿಸುವಂತಾಗಬೇಕು. ಆ ನಿಟ್ಟಿನಲ್ಲಿ ಇಂದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ, ಬೈಂದೂರು: ಸಮಿಶ್ರ ಸರಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಕಾಂಗ್ರೆಸ್ ಜೆಡಿಎಸ್ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿದ್ದು ಈ ಭಾರಿ ಅಧಿಕ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಹೇಳಿದರು. ಅವರು ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಂದು ಕೋಮುವಾದ ಪಕ್ಷವನ್ನು ಓಡಿಸಲು ಎರಡು ಪಕ್ಷಗಳು ಒಟ್ಟಾಗುವುದು ಅಗತ್ಯ. ಉಭಯ ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಬೆಂಬಲಿಗರು ಸಂಪೂರ್ಣವಾಗಿ ಜೆಡಿಎಸ್ ಅಭ್ಯರ್ಥಿಯನ್ನೆ ಬೆಂಬಲಿಸಲಿದ್ದಾರೆ ಎಂದರು. ಮರಳು ಸಮಸ್ಯೆ ವಿರುದ್ಧ ಪ್ರತಿಭಟಿಸುವವರು ಯಾಕೆ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿಲ್ಲ. ಉಡುಪಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಚುನಾವಣಾ ರಾಜಕೀಯವೇ ಹೊರತು ಮತ್ತೇನಲ್ಲ. ಕೇಂದ್ರದಲ್ಲಿ ಪರಿಸರ ಸೂಕ್ಷ್ಮ ವಲಯದಲ್ಲಿ ಬದಲಾವಣೆ ತರಲು ಅವಕಾಶವಿದ್ದರೂ ಬಿಜೆಪಿಗರು ಯಾಕೆ ಸುಮ್ಮನಿದ್ದಾರೆ. ಸಿಆರ್‌ಝಡ್ ವ್ಯಾಪ್ತಿ ಯಾಕೆ ಬದಲಿಸಲು ಸಾಧ್ಯವಿಲ್ಲ. ಇಷ್ಟೊಂದು ಜನ ಎಂಪಿಗಳಿದ್ದಾರಲ್ಲ ಏನು ಮಾಡುತ್ತಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಜೆಪಿ ಸರಕಾರವಿದ್ದಾಗ ಹಾಗೂ ಸಂಸದರಾಗಿದ್ದಾಗ ಬೈಂದೂರು ಕ್ಷೇತ್ರ ಮೂಲಭೂತ ಸೌಕರ್ಯ, ಮೀನುಗಾರರ ಸಮಸ್ಯೆ, ರೈಲ್ವೇ ಯೋಜನೆ, ರಾ.ಹೆ ಕಾಮಗಾರಿಗೆ ಚುರುಕು ಮುಟ್ಟಿಸುವ ಕೆಲಸ ಹೀಗೆ ಎಲ್ಲಾ ವಿಭಾಗದಲ್ಲಿಯೂ ಬೈಂದೂರು ಕ್ಷೇತ್ರಕ್ಕೆ ಹೆಚ್ಚಿನ ಪ್ರಧಾನ್ಯತೆ ನೀಡಲಾಗಿದೆ. ಮುಂದೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ಹೇಳಿದರು. ಅವರು ಬೈಂದೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮಾಜಿ ಪ್ರಧಾನಮಂತ್ರಿಗಳು ಬಿಜೆಪಿ ಹೆಬ್ಬಾಗಿಲನ್ನು ಮುಚ್ಚಿಸುವ ಮಾತುಗಳನ್ನಾಡುತ್ತಿದ್ದಾರೆ. ರಾಷ್ಟ್ರ ಭಕ್ತ ಸಂಘಟನೆಗಳ ಒಂದೆಡೆ ರಾಷ್ಟ್ರಭಕ್ತ ಸಂಘಟನೆ ಕಾರ್ಯಕರ್ತರ ಪರಿಶ್ರಮ ಮತ್ತು ಶಕ್ತಿ, ಇನ್ನೊಂದು ಕಡೆ ಮತದಾರರನ್ನು ಕೊಂಡುಕೊಂಡು ಮತ ಪಡೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಜನರು ಸರಿಯಾದ ಉತ್ತರವನ್ನೇ ನೀಡಲಿದ್ದಾರೆ ಎಂದರು. ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ ಮೀನುಗಾರರಿಗೆ ಅಗತ್ಯವಾದ ಸೀಮೆಎಣ್ಣೆ ದೊರಕಿಸಿಕೊಡಲು ಕರಾವಳಿ ಶಾಸಕರೊಂದಿಗೆ ತೆರಳಿ ಹಲವಾರು ಭಾರಿ ಸಿ.ಎಂ ಹಾಗೂ ಮೀನುಗಾರಿಕಾ ಸಚಿವರಿಗೆ ಹಲವು ಭಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮತಗಳಿಸುವ ಒಂದೇ ಕಾರಣಕ್ಕೆ ಭಾವನಾತ್ಮಕ ವಿಚಾರವನ್ನಿಟ್ಟುಕೊಂಡು, ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡದೆ ಅಶಾಂತಿ ಎಬ್ಬಿಸುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಸಮಾಜದಲ್ಲಿ ಅಶಾಂತಿ ಉಂಟುಮಾಡುವವರ ವಿರುದ್ಧ ಧ್ವನಿ ಎತ್ತಬೇಕಾದ ಕರ್ತವ್ಯ ಸರಕಾರ ಮಾತ್ರವಲ್ಲದೇ ಜನಸಾಮಾನ್ಯರದ್ದೂ ಆಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರವಾಗಿ ತ್ರಾಸಿ ಕೊಂಕಣ ಖಾರ್ವಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕರಾವಳಿಯಲ್ಲಿ ಹಿಂದುತ್ವದ ಹೆಸರಿನಲ್ಲಿ ಸಂಘರ್ಷ ಮಾಡಿ ಜನಸಾಮಾನ್ಯರನ್ನು ಕಷ್ಟಕ್ಕೆ ಸಿಲುಕಿಸುವವರಿಗೆ ಬೆಂಬಲ ನೀಡಬೇಡಿ. ಎಲ್ಲರೂ ಧರ್ಮ ಪಾಲಿಸಬೇಕಾದ್ದೇ ಆ ವಿಚಾರದಲ್ಲಿ ನಾವೇನು ಕಡಿಮೆಯಿಲ್ಲ. ಅಭಿವೃದ್ಧಿಗಾಗಿ ಸರಕಾರ, ಪಕ್ಷದದ ವಿರುದ್ಧ ಧ್ವನಿ ಎತ್ತಿ ಆದರೆ ಧರ್ಮ ವಿಚಾರದಲ್ಲಿ ಹೊಡೆದಾಡಿಹೊಳ್ಳಬೇಡಿ ಎಂದು ಕಿವಿಮಾತು ಹೇಳಿದರು. ರಾಜ್ಯದಲ್ಲಿ ಮೈತ್ರಿ ಸರಕಾರವನ್ನು ಎರಡೂ ಪಕ್ಷಗಳ ನಾಯಕರ ಸಹಮತದೊಂದಿಗೆ ರಚಿಸಲಾಗಿದೆ. ಸರಕಾರ ಬೀಳುತ್ತೆ ಅಂತ ಬಿಜೆಪಿ ನಾಯಕರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಗವಾನ್ ಶ್ರೀಕೃಷ್ಣನ ಬದುಕು ಮತ್ತು ಉಪದೇಶ ಎರಡೂ ಒಂದಕ್ಕೊಂದು ಹೊಂದಿಕೊಂಡಿರುವುದರಿಂದ ಆತ ತನ್ನ ಬದುಕಿನಲ್ಲಿ ಮಾಡಿ ತೋರಿಸಿದ್ದನ್ನೇ ಗೀತೆಯಲ್ಲಿ ಉಪದೇಶಿಸಿದ್ದಾನೆ. ಭಗವದ್ಗೀತೆ ಶಾಸ್ತ್ರಗ್ರಂಥ ಮಾತ್ರವಲ್ಲ. ಅದು ಬದುಕಿನ ಪಠ್ಯ ಎಂಬುದನ್ನು ನೆನಪಿಟ್ಟುಕೊಟ್ಟು ಅಧ್ಯಯನ ನಡೆಸಬೇಕಿದೆ ಎಂದು ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು. ಅವರು ಗಂಗೊಳ್ಳಿ ಪೇಟೆ ಶ್ರೀ ವಿಠ್ಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಿನಾದ ರಿ. ಗಂಗೊಳ್ಳಿ ಸಂಸ್ಥೆಯು ಕಾಶಿಮಠ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿವರ ಗುರುವಂದನಾ ಕಾರ್ಯಕ್ರಮದ ಭಾಗವಾಗಿ ಆಯೋಜಿಸಿದ್ದ ಜ್ಞಾನ ಗಂಗಾ-೨ ಭಗವದ್ಗೀತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪ್ರವಚನ ನೀಡಿದರು. ಶ್ರೀಕೃಷ್ಣ ಜಗತ್ತಿನ ಮೊತ್ತಮೊದಲ ಶ್ರೇಷ್ಠ ಮನಶಾಸ್ತ್ರಜ್ಞ. ವ್ಯವಹಾರಶಾಸ್ತ್ರ, ನಿರ್ವಹಣಾಶಾಸ್ತ್ರಗಳಲ್ಲಿಯೂ ಭಗವದ್ಗೀತೆಯ ಸಾರವಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿ ಕೃಷ್ಣ ಪರಮಾತ್ಮ ಆರಾಧ್ಯ ದೈವವಾಗಿದ್ದಾನೆ. ಅಮೇರಿಕಾದ ವಿಶ್ವವಿದ್ಯಾನಿಲಯವೊಂದರಲ್ಲಿ ವ್ಯವಹಾರಶಾಸ್ತ್ರ ಹಾಗೂ ಮನಶಾಸ್ತ್ರ ಅಧ್ಯಯನಕ್ಕಾಗಿ ಭಗವದೀತೆಯನ್ನು ಕಡ್ಡಾಯ ಮಾಡಿದ್ದಾರೆ. ಕುಟುಂಬ, ಸಮಾಜ, ಉದ್ದಿಮೆ ಅಥವಾ ಸರಕಾರವನ್ನು ಸಸೂತ್ರವಾಗಿ ನಿಭಾಯಿಸಿಕೊಂಡು…

Read More