ಶ್ರೀಕೃಷ್ಣ ಜಗತ್ತಿನ ಮೊತ್ತಮೊದಲ ಮನಶಾಸ್ತ್ರಜ್ಞ: ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಗವಾನ್ ಶ್ರೀಕೃಷ್ಣನ ಬದುಕು ಮತ್ತು ಉಪದೇಶ ಎರಡೂ ಒಂದಕ್ಕೊಂದು ಹೊಂದಿಕೊಂಡಿರುವುದರಿಂದ ಆತ ತನ್ನ ಬದುಕಿನಲ್ಲಿ ಮಾಡಿ ತೋರಿಸಿದ್ದನ್ನೇ ಗೀತೆಯಲ್ಲಿ ಉಪದೇಶಿಸಿದ್ದಾನೆ. ಭಗವದ್ಗೀತೆ ಶಾಸ್ತ್ರಗ್ರಂಥ ಮಾತ್ರವಲ್ಲ. ಅದು ಬದುಕಿನ ಪಠ್ಯ ಎಂಬುದನ್ನು ನೆನಪಿಟ್ಟುಕೊಟ್ಟು ಅಧ್ಯಯನ ನಡೆಸಬೇಕಿದೆ ಎಂದು ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ ಹೇಳಿದರು.

Call us

Click Here

ಅವರು ಗಂಗೊಳ್ಳಿ ಪೇಟೆ ಶ್ರೀ ವಿಠ್ಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ನಿನಾದ ರಿ. ಗಂಗೊಳ್ಳಿ ಸಂಸ್ಥೆಯು ಕಾಶಿಮಠ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿವರ ಗುರುವಂದನಾ ಕಾರ್ಯಕ್ರಮದ ಭಾಗವಾಗಿ ಆಯೋಜಿಸಿದ್ದ ಜ್ಞಾನ ಗಂಗಾ-೨ ಭಗವದ್ಗೀತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪ್ರವಚನ ನೀಡಿದರು.

ಶ್ರೀಕೃಷ್ಣ ಜಗತ್ತಿನ ಮೊತ್ತಮೊದಲ ಶ್ರೇಷ್ಠ ಮನಶಾಸ್ತ್ರಜ್ಞ. ವ್ಯವಹಾರಶಾಸ್ತ್ರ, ನಿರ್ವಹಣಾಶಾಸ್ತ್ರಗಳಲ್ಲಿಯೂ ಭಗವದ್ಗೀತೆಯ ಸಾರವಿದೆ. ಪ್ರಪಂಚದ ಮೂಲೆ ಮೂಲೆಗಳಲ್ಲಿ ಕೃಷ್ಣ ಪರಮಾತ್ಮ ಆರಾಧ್ಯ ದೈವವಾಗಿದ್ದಾನೆ. ಅಮೇರಿಕಾದ ವಿಶ್ವವಿದ್ಯಾನಿಲಯವೊಂದರಲ್ಲಿ ವ್ಯವಹಾರಶಾಸ್ತ್ರ ಹಾಗೂ ಮನಶಾಸ್ತ್ರ ಅಧ್ಯಯನಕ್ಕಾಗಿ ಭಗವದೀತೆಯನ್ನು ಕಡ್ಡಾಯ ಮಾಡಿದ್ದಾರೆ. ಕುಟುಂಬ, ಸಮಾಜ, ಉದ್ದಿಮೆ ಅಥವಾ ಸರಕಾರವನ್ನು ಸಸೂತ್ರವಾಗಿ ನಿಭಾಯಿಸಿಕೊಂಡು ಹೋಗಲು ಏನು ಮಾಡಬೇಕು, ಏನು ಮಾಡಬಾರದೆಂಬುದನ್ನು ಕೃಷ್ಣ ಗೀತೆಯಲ್ಲಿ ಚನ್ನಾಗಿ ವಿವರಿಸಿದ್ದಾನೆ ಎಂದರು.

ನಮ್ಮ ಧರ್ಮವನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿರುವ ಪಾಶ್ಚಾತ್ಯರೂ ಕೂಡ ನಮ್ಮ ಧಾರ್ಮಿಕತೆಯನ್ನು ಆರಾಧಿಸುತ್ತಾರೆಂದರೆ ಅದಕ್ಕೆ ಕಾರಣ ಭವಗದ್ಗೀತೆ. ಬದುಕಿನುದ್ದಕ್ಕೂ ನಮ್ಮಲ್ಲಿ ಮೂಡುವ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಿ ಕೃಷ್ಣನಿಂದ ಗೀತೆಯನ್ನು ಹೇಳಿಸಿದ ಕೀರ್ತಿ ಅರ್ಜುನನಿಗೆ ಸಲ್ಲಬೇಕು ಎಂದರು.

ಸ. ವಿ. ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಸುಮನಾ ಪಡಿಯಾರ್ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿಯವರಿಗೆ ಗುರುವಂದನೆ ಸಲ್ಲಿಸಲಾಯಿತು. ಎರಡು ವರ್ಷಗಳ ಕಾಲ ೨೧ ತರಗತಿಗಳಲ್ಲಿ ಭಗವದ್ಗೀತೆ ಅಭಿಯಾನ ನಡೆದಿದ್ದು, ಪ್ರತಿ ತರಗತಿಯಲ್ಲಿಯೂ ಮಕ್ಕಳು ಶ್ಲೋಕ ಕಂಠಪಾಠ ಮಾಡಿದ್ದಾರೆ.

Click here

Click here

Click here

Click Here

Call us

Call us

ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಕಾರ್ಯದರ್ಶಿ ಜಿ. ವೆಂಕಟೇಶ ನಾಯಕ್, ಜ್ಞಾನ ಗಂಗಾ ಅಧ್ಯಕ್ಷ ಕೃಷ್ಣ ಭಟ್, ಕಾರ್ಯದರ್ಶಿ ಜಿ. ಸುದರ್ಶನ ಆಚಾರ್ಯ, ನಿನಾದ ಗಂಗೊಳ್ಳಿ ಅಧ್ಯಕ್ಷ ಎಂ. ಮುಕುಂದ ಪೈ, ಕಾರ್ಯದರ್ಶಿ ಎನ್. ಗಜಾನನ ನಾಯಕ್ ಇದ್ದರು.

 

Leave a Reply