ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಡಾ.ಬಿ.ಆರ್.ಅಂಬೇಡ್ಕರ್‌ಯುವಕ ಮಂಡಲ ಮೇಲ್‌ಗಂಗೊಳ್ಳಿ ಇದರ 21ನೇ ವಾರ್ಷಿಕೋತ್ಸವ , ಅಮೃತಾ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ ಇವರ 25ನೇ ವಾರ್ಷಿಕೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರವರ 127ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಗಂಗೊಳ್ಳಿಯ ಮೇಲ್‌ಗಂಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲಾ ವಠಾರದಲ್ಲಿ ಜರಗಿತು. ತ್ರಾಸಿ ಯುವಕ ಮಂಡಲದ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು ಧ್ವಜಾರೋಹಣ ನೆರವೇರಿಸಿದರು. ಗಂಗೊಳ್ಳಿ ಪತ್ರಕರ್ತ ಗಣೇಶ ಪಿ. ಛದ್ಮವೇಷ ಸ್ಪರ್ಧೆಯನ್ನು ಉದ್ಘಾಟಿಸಿದರು. ಸಂಜೆ ಜರಗಿದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ ವಹಿಸಿದ್ದರು. ಕುಂದಾಪುರದ ವಕೀಲೆ ಅಂಜಲಿ ಹುಂಡೇಕರ್, ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆಯ ಸಿಇಒ ಶಿವಾನಂದ ಪೂಜಾರಿ ಶುಭ ಹಾರೈಸಿದರು. ರಾಜೇಶ ತ್ರಾಸಿ ಬಹುಮಾನ ವಿತರಿಸಿದರು. ಇದೇ ಸಂದರ್ಭ ವ್ಯಂಗ್ಯ ಚಿತ್ರಕಾರ ಜಿ.ಭಾಸ್ಕರ ಕಲೈಕಾರ್, ಸಾಹಿತ್ಯ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಾ, ಉರಗ ಸಾಧಕ ಗುರುರಾಜ್ ಗಂಗೊಳ್ಳಿ ಇವರನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಯಕ್ಷಗಾನ ಎನ್ನುವುದೇ ಒಂದು ಹಬ್ಬ. ಅಲ್ಲಿ ಆಟ ನೋಡುವುದು ಒಂದು ವಿಶಿಷ್ಟ ರಸಾನುಭವ. ಕೆಲಸದ ಜಂಜಾಟದ ನಡುವೆ ದಣಿದ ಮನವನು ತಣಿಸುವ ಯಕ್ಷಗಾನ ನೋಡುವುದೇ ಸೊಬಗು. ಊರಿನಿಂದ ದೂರವಿರುವ ಕಲಾಭಿಮಾನಿಗಳಿಗೆ ಯಕ್ಷ ಕಲೆಯ ಸವಿಯನ್ನು ಉಣಬಡಿಸುವ ಪ್ರಯತ್ನಗಳು ಬೆಂಗಳೂರಿನಂತಹ ಮಹಾನಗರಿಗಳಲ್ಲಿ ಯಕ್ಷಸಂಘಟಕರು ಹಾಗೂ ಕಲಾವಿದರಿಂದ ಯಶಸ್ವಿಯಾಗಿ ನಡೆಯುತ್ತಿದೆ. ಯಕ್ಷಾಭಿಮಾನಿಗಳ ಕಾತರ ತಣಿಸಲು ಜೂನ್ ತಿಂಗಳಿನಿಂದಲೇ ಬೆಂಗಳೂರಿನ ಪ್ರಪ್ರಥಮ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆಗಳು ನಡೆದಿವೆ. ಜೂನ್ 1 ರ ಶುಕ್ರವಾರ ರಾತ್ರಿ 10 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಘು ಶೆಟ್ಟಿ ನೈಕಂಬ್ಳಿ ಮತ್ತು ಪ್ರದೀಪ ಆಜ್ರಿ ಸಂಯೋಜನೆಯಲ್ಲಿ ಯಕ್ಷ ಸಿಂಧೂರ.- ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ “ಅಗ್ನಿ ವರ್ಷ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ರಾಮಕೃಷ್ಣ ಹೆಗಡೆ ಹಿಲ್ಲೂರು , ಪ್ರಸನ್ ಭಟ್ ಭಾಳ್ಕಲ್ , ರಾಘು ನಿಟ್ಟೂರು, ಗಣೇಶ್ ಗಾಂವ್ಕರ್ , ರಾಮ ಭಂಡಾರಿ , ಎನ್ ಜಿ ಹೆಗಡೆ , ಬೊಳ್ಗೇರೆ , ಕೃಷ್ಣ ಯಾಜಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಪುರಸಭೆ ವತಿಯಿಂದ ಹಮ್ಮಿಕೊಂಡ ಸ್ವಚ್ಚತಾ ಸಪ್ತಾಹ ಕಾರ್ಯಕ್ರಮಕ್ಕೆ ಕುಂದಾಪುರ ಪುರಸಭೆ ಅಧ್ಯಕ್ಷರಾದ ವಸಂತಿ ಮೋಹನ ಸಾರಂಗ ಸಿದ್ದಿನಾಯಕನ ರಸ್ತೆ ಬೀರಿಕೇರಿಯಲ್ಲಿ ಚಾಲನೆ ನೀಡಿದರು. ಈ ಸಂದರ್ಭ ಉಪಾಧ್ಯಕ್ಷರಾದ ರಾಜೇಶ ಕಾವೇರಿ , ಮುಖ್ಯಾಧಿಕಾರಿ ವಾಣಿ ಶೆಟ್ಟಿ , ಪುರಸಭೆ ಸದಸ್ಯರಾದ ಶಕುಂತಲಾ ಶೇರೆಗಾರ, ಪುರಸಭಾ ಪರಿಸರ ಇಂಜಿನಿಯರ್ ಮಂಜುನಾಥ ಶೆಟ್ಟಿ , ಆರೋಗ್ಯ ಅಧಿಕಾರಿ ಶರತ ಖಾರ್ವಿ ಮತ್ತು ಪುರಸಭಾ ಸಿಬ್ಬಂದಿಗಳು ಭಾಗವಹಿಸಿದರು. ಒಂದು ತಿಂಗಳ ಕಾಲ ಸ್ವಚ್ಚತಾ ಕಾರ್ಯಕ್ರಮ ಕುಂದಾಪುರದ ಎಲ್ಲಾ ವಾರ್ಡಗಳಲ್ಲಿ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಜೆಸಿಐ ಮಂಗಳೂರು ಸಾಮ್ರಾಟ ಇದರ ವತಿಯಿಂದ ಕರ್ನಾಟಕದಾದಂತ್ಯ ಸುಮಾರು ಮೂರು ಸಾವಿರ ಕಿಲೋಮಿಟರ ಪ್ರಯಾಣ ಕ್ರಮಿಸಿ, ದಾರಿಯುದ್ದಕ್ಕೂ ಆ ಮೂಲಕ ಶಾಂತಿ ಸಂದೇಶದ ಜಾಗ್ರತಿ ಮೂಡಿಸುವ ವಿನೂತನ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನಿಂದ ಹೊರಟ ಕಾರ್ ರ‍್ಯಾಲಿ ಶಿರೂರಿಗೆ ಆಗಮಿಸಿದಾಗ ಜೆಸಿಐ ಶಿರೂರು ಘಟಕವು ಆತ್ಮೀಯವಾಗಿ ಸ್ವಾಗತಿಸಿಕೊಂಡು ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಜೆಸಿಐ ರಾಘವೇಂದ್ರ ಹೊಳ್ಳರವರಿಗೆ ಹಾಗೂ ಅವರ ತಂಡದವರಿಗೆ ಫಲಪುಷ್ಪ ಹಾಗೂ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಕಾರ‍್ಯಕ್ರಮದಲ್ಲಿ ಜೆಸಿಐ ಶಿರೂರಿನ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಜೆಸಿ ಪ್ರಸಾದ ಪ್ರಭು, ಜೆಸಿ ಹರೀಶ ಶೇಟ್, ಜೆಸಿ ಕೃಷ್ಣಮೂರ್ತಿ ಶೇಟ್, ಜೆಸಿ ಗುರುನಾಥ ಶೇಟ್, ಜೆಸಿ ನಾಗೇಶ ಕೆ, ಜೆಜೆಸಿ ಆದರ್ಶ ಶೇಟ್, ವಿನೋದ ಮೇಸ್ತ, ಜೆಸಿ ಕೃಷ್ಣ ಪೂಜಾರಿ ಚಂದ್ರ ಬಿಲ್ಲವ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಉಳ್ಳೂರು ಗ್ರಾಮದ ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶ್ವಕರ್ಮ ಸಮುದಾಯ ನೀಡಿದ ಸನ್ಮಾನ ಸ್ವೀಕರಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಯವರು ವಿಶ್ವಕರ್ಮರು ನಮ್ಮ ಸಮಾಜದ ಅತ್ಯಂತ ಕ್ರಿಯಾಶೀಲ ಸಮುದಾಯ. ಎಲ್ಲ ವಿಧದ ನಿರ್ಮಾಣ ಕಾರ್ಯಗಳಲ್ಲಿ ಅದರ ಸದಸ್ಯರು ಸಿದ್ಧಹಸ್ತರು. ಈಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ನನ್ನ ಗೆಲುವಿಗೆ ಕೊಡುಗೆ ನೀಡಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸುವುದಲ್ಲದೆ ಅವರ ಬೇಡಿಕೆಯಾದ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ಗರಿಷ್ಠ ಸಾಧ್ಯ ನೆರವು ದೊರಕಿಸಿಕೊಡಲಾಗುವುದು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ದೇವಸ್ಥಾನದ ಮೊಕ್ತೇಸರರಾದ ಮಂಜುನಾಥ ಆಚಾರ್ಯ, ಬಾಬು ಆಚಾರ್ಯ, ಪ್ರಭಾಕರ ಆಚಾರ್ಯ, ಇತರರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಧರ್ಮಶ್ರೀ ಪೌಂಡೇಶನ್ ಕೆರ್ಗಾಲು ಇವರ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೈನಾಡಿ ಕಾಲ್ತೋಡು ಇಲ್ಲಿನ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಧರ್ಮಶ್ರೀ ಪೌಂಡೇಶನ್ ಉಪಾಧ್ಯಕ್ಷರಾದ ರಾಮ ಪೂಜಾರಿ, ಪೌಂಡೇಶನ್ ಕಾರ್ಯದರ್ಶಿ ಗಣೇಶ, ಸದಸ್ಯರಾದ ವಿಶ್ವನಾಥ್ ಪೂಜಾರಿ, ರಾಜೇಶ್ ಪೂಜಾರಿ, ಶಾಲಾ ಮುಖ್ಯೋಪಾಧ್ಯಾಯರಾದ ದಿನೇಶ್, ಸಹ ಶಿಕ್ಷಕರಾದ ಸಂತೋಷ, ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ನೇತ್ರ ಗೌಡ, ಶಾಲಾಭಿಮಾನಿ ರಾಘು ಬಿಲ್ಲವ ಪೈನಾಡಿ ಈ ಸಂದರ್ಭದಲ್ಲಿ ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಗುರುಕುಲ ಪಬ್ಲಿಕ್ ಶಾಲೆ ಸತತ 8ನೇ ಬಾರಿ ಸಿ.ಬಿ.ಎಸ್.ಸಿ 10ನೇ ತರಗತಿಯಲ್ಲಿ ಶೇ.100 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ 79 ವಿದ್ಯಾರ್ಥಿಗಳಲ್ಲಿ 02 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ( 92% ಕ್ಕಿಂತ ಅಧಿಕ ಅಂಕ) 10 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ( 85% ಕ್ಕಿಂತ ಅಧಿಕ ಅಂಕ) ಅಲ್ಲದೇ ೦5 ವಿದ್ಯಾರ್ಥಿಗಳು 80% ಕ್ಕಿಂತ ಹೆಚ್ಚು ಅಂಕ ಪಡೆದು ಪಾಲಕರ ಮತ್ತು ಸಂಸ್ಥೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳನ್ನು ಗುರುಕುಲ ಪಬ್ಲಿಕ್ ಶಾಲೆಯ ಜಂಟಿ ಆಡಳಿತ ನಿರ್ದೇಶಕರುಗಳಾದ ಬಾಂಡ್ಯ ಸುಬಾಶ್ಚಂದ್ರ ಶೆಟ್ಟಿ ಹಾಗೂ ಅನುಪಮ ಎಸ್. ಶೆಟ್ಟಿ, ಶಾಲೆಯ ಪ್ರಾಂಶುಪಾಲರು, ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಂಗಳವಾರ ರಾತ್ರಿ ಹೇರೂರು ಗ್ರಾಮದಲ್ಲಿ ಸಿಡಿಲಿನಿಂದ ಎರಡು ಮನೆಗಳಿಗೆ ಹಾನಿ ಸಂಭವಿಸಿದೆ. ಅಲ್ಲಿನ ಚಿಕ್ತಾಡಿಯ ಉಳ್ಳೋಳಿಮನೆ ನಾಗಿ ಅವರ ಮನೆಗೆ ನಡುರಾತ್ರಿ ವೇಳೆ ಬಡಿದ ಸಿಡಿಲಿನಿಂದ ಮನೆ ಜಖಂಗೊಮಡುದಲ್ಲದೆ, ಒಂದು ಭಾಗಕ್ಕೆ ಬೆಂಕಿ ತಗಲಿತು. ಎಚ್ಚತ್ತ ನೆರೆಮನೆಯ ಮಹೇಶ ಮತ್ತಿತರರು ತಮ್ಮ ಮನೆಯ ಪಂಪ್‌ನಿಂದ ನೀರು ಹಾಯಿಸಿ ಬೆಂಕಿ ನಂದಿಸಿದರು. ನಾಗಿ ಇದರ ಅರಿವು ಇಲ್ಲದೆ ನಿದ್ರಿಸಿದ್ದರು. ನೆರೆಹೊರೆಯವರ ಪ್ರಯತ್ನವಿಲ್ಲದೆ ಹೋಗಿದ್ದರೆ ಮನೆ ಪೂರ್ಣ ಸುಟ್ಟುಹೋಗುವುದರೊಂದಿಗೆ ಜೀವ ಹಾನಿ ಸಂಭವಿಸುತ್ತಿತ್ತು. ಮನೆ ಜಖಂಗೊಂಡಿರುವುದರಿಂದ ಅದರಲ್ಲಿ ವಾಸಿಸುವುದು ಅಸಾಧ್ಯ ಎನ್ನಲಾಗಿದೆ. ಸನಿಹದ ಸಾಟಿಮನೆ ಸಾಕು ಪೂಜಾರಿ ಅವರ ಮನೆಗೂ ಸಿಡಿಲು ಬಡಿದಿದ್ದು, ಮನೆಯ ವಿದ್ಯುತ್ ಜೋಡಣೆ, ಮೋಟರ್ ಸೇರಿದಂತೆ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿವೆ. ಅವರಿಗೆ ಇದರಿಂದ ರೂ ೧ ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಎರಡೂ ಮನೆಗಳಿಗೆ ಕಂದಾಯ ನಿರೀಕ್ಷಕ ಅಣ್ಣಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹೇಂದ್ರ ಕುಮಾರ, ಗ್ರಾಮ ಪಂಚಾಯಿತಿ ಸದಸ್ಯರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಉಪ್ಪುಂದ ಸಮೃದ್ಧ ಸಭಾಭವನದಲ್ಲಿ ಉಪ್ಪುಂದ ಗಾಣಿಗ ಸೇವಾ ಸಂಘದ ಐದನೇ ವರ್ಷದ ವಾರ್ಷಿಕೋತ್ಸವ ಜರುಗಿತು. ಸಮಾಜದವರ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಉಜಿರೆಯ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ನಿತ್ಯಾನಂದರವರು ಮಾತನಾಡಿ ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳ ಕೊರತೆಯ ನಡುವೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಕೌಟುಂಬಿಕ ವ್ಯವಸ್ಥೆಗಳ ಅರಿವು ಮೂಡಿಸುವ ಜತೆಗೆ ಸಂಘಟನೆಯನ್ನು ಬಲಪಡಿಸುವ ಅನಿವಾರ್ಯತೆಯಿದೆ. ಕ್ರೀಯಾತ್ಮಕ ಚಟುವಟಿಕೆಗಳಿಂದ ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ ಎಂದು ಹೇಳಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಕೆ. ರಮೇಶ ಗಾಣಿಗ ಕಾರ್ಯಕ್ರಮ ಉದ್ಘಾಟಿಸಿದರು. ಉಪ್ಪುಂದ ಸಂಘದ ಅಧ್ಯಕ್ಷ ರಾಘವೇಂದ್ರ ಬವಳಾಡಿ ಅಧ್ಯಕ್ಷತೆವಹಿಸಿದ್ದರು. ಕುಂದಾಪುರ ಗಾಣಿಗ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ, ಬೈಂದೂರು ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಗಣೇಶ, ಉಪಸ್ಥಿತರಿದ್ದರು. ಎಸ್‌ಎಸ್‌ಎಲ್‌ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬೈಂದೂರು ದೇವಾಡಿಗರ ಒಕ್ಕೂಟದ ವಾರ್ಷಿಕ ಮಹಾಸಭೆ ಒತ್ತಿನಕಟ್ಟೆ ಶ್ರೀ ಮಹಾಸತಿ ದೇವಸ್ಥಾನದಲ್ಲಿ ನಡೆಯಿತು. ಸಮಾರಂಭವನ್ನು ಉದ್ದೇಶಿಸಿ ಅರಣ್ಯ ಇಲಾಖಾ ನೌಕರರ ಮಹಾಮಂಡಲದ ರಾಜ್ಯಾಧ್ಯಕ್ಷ ರಘುರಾಮ ದೇವಾಡಿಗ ಮಾತನಾಡಿ ಸಮುದಾಯದ ಸಂಘಟನೆಯಿಂದ ನನಗೇನು ಸಿಕ್ಕಿದೆ ಅಥವಾ ಯಾವ ಪ್ರಯೋಜನ ದೊರಕಿದೆ ಎಂಬ ಸ್ವಾರ್ಥಕ್ಕಿಂತ ಸಮಾಜಕ್ಕಾಗಿ ನಾನೇನು ಮಾಡಿದ್ದೇನೆ, ನನ್ನ ಕರ್ತವ್ಯವೇನು ಎಂದು ಪ್ರತಿಯೊಬ್ಬರೂ ಚಿಂತಿಸಿದಾಗ ಮಾತ್ರ ಸಮಾಜದಲ್ಲಿ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆ ಅತೀ ಮುಖ್ಯವಾಗಿದ್ದು, ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆ, ಅನುಭವ, ಸಮೂಹ ಜೀವನ ಹಾಗೂ ಸಂಸ್ಕಾರ ನಮ್ಮ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿದೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ವಾತಾವರಣ ನಿರ್ಮಾಣವಾಗಬೇಕು ಎಂಬ ನೆಲೆಯಲ್ಲಿ ಪ್ರತಿಯೊಂದು ಸಮುದಾಯದವರ ಸಂಘಟನೆಗಳು ಪ್ರಯತ್ನಿಸಬೇಕು. ಸಾಧಕರನ್ನು ಗುರುತಿಸಿ ಗೌರವಿಸುದರೊಂದಿಗೆ ಶೈಕ್ಷಣಿಕವಾಗಿ ಹಿಂದುಳಿದ ಬಡ ಮಕ್ಕಳಿಗೂ ಸಂಘಟನೆ ನೆರವಾಗಬೇಕು. ಉತ್ತಮ ಸಂಸ್ಕಾರ ನೀಡಿ ಮಕ್ಕಳನ್ನು ಬೆಳೆಸುವ ಮೂಲಕ ಭವಿಷ್ಯದಲ್ಲಿ ಹುಟ್ಟೂರಿಗೂ, ಸಮುದಾಯಕ್ಕೂ, ಹೆತ್ತವರಿಗೂ ಹಾಗೂ…
