ಕುಂದಾಪ್ರ ಡಾಟ್ ಕಾಂ ಸುದ್ದಿ
ಯಕ್ಷಗಾನ ಎನ್ನುವುದೇ ಒಂದು ಹಬ್ಬ. ಅಲ್ಲಿ ಆಟ ನೋಡುವುದು ಒಂದು ವಿಶಿಷ್ಟ ರಸಾನುಭವ. ಕೆಲಸದ ಜಂಜಾಟದ ನಡುವೆ ದಣಿದ ಮನವನು ತಣಿಸುವ ಯಕ್ಷಗಾನ ನೋಡುವುದೇ ಸೊಬಗು. ಊರಿನಿಂದ ದೂರವಿರುವ ಕಲಾಭಿಮಾನಿಗಳಿಗೆ ಯಕ್ಷ ಕಲೆಯ ಸವಿಯನ್ನು ಉಣಬಡಿಸುವ ಪ್ರಯತ್ನಗಳು ಬೆಂಗಳೂರಿನಂತಹ ಮಹಾನಗರಿಗಳಲ್ಲಿ ಯಕ್ಷಸಂಘಟಕರು ಹಾಗೂ ಕಲಾವಿದರಿಂದ ಯಶಸ್ವಿಯಾಗಿ ನಡೆಯುತ್ತಿದೆ. ಯಕ್ಷಾಭಿಮಾನಿಗಳ ಕಾತರ ತಣಿಸಲು ಜೂನ್ ತಿಂಗಳಿನಿಂದಲೇ ಬೆಂಗಳೂರಿನ ಪ್ರಪ್ರಥಮ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆಗಳು ನಡೆದಿವೆ.
ಜೂನ್ 1 ರ ಶುಕ್ರವಾರ ರಾತ್ರಿ 10 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಘು ಶೆಟ್ಟಿ ನೈಕಂಬ್ಳಿ ಮತ್ತು ಪ್ರದೀಪ ಆಜ್ರಿ ಸಂಯೋಜನೆಯಲ್ಲಿ ಯಕ್ಷ ಸಿಂಧೂರ.- ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ “ಅಗ್ನಿ ವರ್ಷ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ರಾಮಕೃಷ್ಣ ಹೆಗಡೆ ಹಿಲ್ಲೂರು , ಪ್ರಸನ್ ಭಟ್ ಭಾಳ್ಕಲ್ , ರಾಘು ನಿಟ್ಟೂರು, ಗಣೇಶ್ ಗಾಂವ್ಕರ್ , ರಾಮ ಭಂಡಾರಿ , ಎನ್ ಜಿ ಹೆಗಡೆ , ಬೊಳ್ಗೇರೆ , ಕೃಷ್ಣ ಯಾಜಿ ಬಳ್ಕೂರು , ಜಲವಳ್ಳಿ ವಿಧ್ಯಾಧರ್ ರಾವ್ , ನಿಲ್ಕೋಡು ಶಂಕರ ಹೆಗಡೆ , ಸುಬ್ರಮಣ್ಯ ಚಿಟ್ಟಾಣಿ , ಕಾರ್ತಿಕ ಚಿಟ್ಟಾಣಿ , ಹಳ್ಳಾಡಿ ಜಯರಾಮ ಶೆಟ್ಟಿ , ಶ್ರೀಧರ ಕಾಸರಕೋಡ್ , ಉಪ್ಪೂರು , ಕೆರೆವಳ್ಳಿ , ಕೆಸರಕೊಪ್ಪ , ಬೆರೊಳ್ಳಿ , ಜಾಗನಳ್ಳಿ , ಕುಳಿಮನೆ , ಪೆಲತ್ತೂರು ಇನ್ನು ಅನೇಕರು ರಂಗ ವೈಭವಗೊಳಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
- ಮಾಹಿತಿಗಾಗಿ – 9686844833, 9880158466