Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಭಾಗದ ವತಿಯಿಂದ ಅಂತಿಮ ವರ್ಷದ ಬಿ.ಸಿ.ಎ. ಮತ್ತು ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಐಟಿ ಕಂಪೆನಿಗಳಲ್ಲಿ ದೊರೆಯುವ ಉದ್ಯೋಗ ಮಾಹಿತಿ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಗ್ಲೋಬಲ್ ಲಾಜಿಕ್ ಹಿಟಾಚಿ ಗ್ರೂಪ್ ಕಂಪೆನಿಯ ಮ್ಯಾನೇಜರಾದ ವಿಪಿನ್ ಕುಮಾರ್ ನಿಟ್ಟೂರು ಇವರು ಐ.ಟಿ. ಕಂಪೆನಿಗಳಲ್ಲಿ ವಿದ್ಯಾರ್ಥಿಗಳಿಗೆ ಇರುವಂತಹ ವಿಪುಲ ಅವಕಾಶಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಮಾತನಾಡಿ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಉಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮಹೇಶ್ ಕುಮಾರ್ ಸ್ವಾಗತಿಸಿ, ಉಪನ್ಯಾಸಕ ಶ್ರೀಕಾಂತ್ ವಂದಿಸಿದರು. ಉಪನ್ಯಾಸಕಿ ಪವಿತ್ರಾ ಶೆಟ್ಟಿ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ.ನ.2: ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಬುಧವಾರ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆ ದಂಪತಿಗಳನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದುಕೊಂಡರು. ಡಿ. ಹರ್ಷೆಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೆಂದ್ರ ಕುಮಾರ್ ಅವರು ಉಪಸ್ಥಿತರಿದ್ದರು. ಈ ಸಂದರ್ಭ ರಿಷಬ್ ಶೆಟ್ಟಿ ದಂಪತಿಗಳನ್ನು ಹೆಗ್ಗಡೆಯವರು ಗೌರವಿಸಿದರು. ಈ ವೇಳೆ ನಟ ಪ್ರಮೋದ್ ಶೆಟ್ಟಿ, ಸುಹಾಸ್ ಶೆಟ್ಟಿ ಮೊದಲಾದವರು ಜೊತೆಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ನ.02: ಕಾಲೇಜು ವಿದ್ಯಾರ್ಥಿಯೋರ್ವನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, 24 ಗಂಟೆಯೊಳಗೆ ಕುಂದಾಪುರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪಹರಣಕ್ಕೊಳಗಾದ ವಿದ್ಯಾರ್ಥಿಯನ್ನು ಸಿದ್ದಾಪುರ ಜನ್ಸಾಲೆಯ ಗೋವಿಂದ ಶೆಟ್ಟಿ ಎಂಬುವರ ಪುತ್ರ ಶಶಾಂಕ (21) ಎಂದು ಗುರುತಿಸಲಾಗಿದೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಶಶಾಂಕ್, ಅ.31ರ ಬೆಳಿಗ್ಗೆ ಕಾಲೇಜಿಗೆ ತೆರಳಿದ್ದು, ಬಳಿಕ 9.30ರ ಸುಮಾರಿಗೆ ತಂದೆಯ ಮೊಬೈಲಿಗೆ ಕರೆ ಮಾಡಿ, ತನ್ನನ್ನು ಕೋಟೇಶ್ವರದ ಕೋಸ್ಟೆಲ್ ಕ್ರೌನ್ ಮಾಲ್ ಬಳಿಯಿಂದ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾಗಿ ತಿಳಿಸಿದ್ದಾನೆ. ಬಳಿಕ 30 ಲಕ್ಷ ಹಣ ನೀಡಿ ಮಗನನ್ನು ಕರೆದೊಯ್ಯುವಂತೆ ಆರೋಪಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಘಟನೆ ನಡೆದು ಒಂದು ದಿನ ಕಳೆದರೂ ಮಗ ಮನೆಗೆ ಬರದೇ ಇರುವುದರಿಂದ ಗಾಬರಿಗೊಂಡ ಶಶಾಂಕ್ ತಾಯಿ ಕುಂದಾಪುರ ಠಾಣೆಯಲ್ಲಿ ಮಂಗಳವಾರ ಸಂಜೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾಗಿ 24 ಗಂಟೆಗಳೊಳಗೆ ನಾಪತ್ತೆಯಾದ ಶಶಾಂಕ್ ಹಾಗೂ ಆರೋಪಿ ಹುಬ್ಬಳ್ಳಿ ಮೂಲದ ವ್ಯಕ್ತಿಯನ್ನು ಪತ್ತೆ ಹಚ್ಚಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2022-23ನೇ ಸಾಲಿನ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಜನಪದ ನೃತ್ಯ ಮತ್ತು ಕವ್ಹಾಲಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಅಭೀಜ್ಞಾ – ಜನಪದ ಗೀತೆ, ದ್ವಿತೀಯ ಸ್ಥಾನ; ಆರ್ಯ ಅಯ್ಯಪ್ಪ ಹಾಲಂಬಿ ಮತ್ತು ಮಯೂರ್ ಜಿ – ರಸಪ್ರಶ್ನೆ, ದ್ವಿತೀಯ ಸ್ಥಾನ ಹಾಗೂ ಪ್ರಾಥಮಿಕ ಕಿರಿಯರ ವಿಭಾಗದಲ್ಲಿ ಸಿಂಧೂ ಮಧ್ಯಸ್ಥ – ಭಕ್ತಿಗೀತೆ, ದ್ವಿತೀಯ ಸ್ಥಾನ ಮತ್ತು ಆಶ್ರಿತ್ – ಇಂಗ್ಲಿಷ್ ಕಂಠಪಾಠ ಮೂರನೇ ಸ್ಥಾನ ಪಡೆದಿರುತ್ತಾರೆ. ಇವರಿಗೆ ಆಡಳಿತ ಮಂಡಳಿ, ಮುಖ್ಯೋಪಾಧ್ಯಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಎಸ್ಎಚ್ಎಲ್ ಸಂಸ್ಥೆಯಿಂದ ಕೊಡಮಾಡುವ ‘ನ್ಯಾಷನಲ್ ಎಂಪ್ಲೋಯೆಬಿಲಿಟಿ ಅವಾರ್ಡ್ಸ್ -2022’ ರಾಷ್ಟ್ರೀಯ ಪುರಸ್ಕಾರವನ್ನು ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯವು ಪಡೆದುಕೊಂಡಿದೆ. 2022ನೇ ಸಾಲಿನ ವಿದ್ಯಾರ್ಥಿಗಳ ಆಸ್ಪೈರಿಂಗ್ ಮೈಂಡ್ಸ್ ಕಂಪ್ಯೂಟರ್ ಅಡಾಪ್ಟಿವ್ ಟೆಸ್ಟ್ (ಎಎಂಸಿಎಟಿ) ಆಧಾರಿತ ಅಂಕಗಳನ್ನು ಆಧರಿಸಿ ಆಳ್ವಾಸ್ ಸಂಸ್ಥೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಂಸ್ಥೆಯ ಈ ಸಾಧನೆ ಬಗ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಪೀಟರ್ ಫೆನಾಂಡಿಸ್ ಹರ್ಷ ವ್ಯಕ್ತಪಡಿಸಿದ್ದಾರೆ. ಎಎಂಸಿಎಟಿ ಒಂದು ಯಾಂತ್ರಿಕ ಔದ್ಯೋಗಿಕ ಪರೀಕ್ಷೆಯಾಗಿದ್ದು, 700ಕ್ಕೂ ಅಧಿಕ ಕಂಪೆನಿಗಳು ಉದ್ಯೋಗಾಕಾಂಕ್ಷಿಗಳಿಗೆ ಕಡ್ಡಾಯವಾಗಿ ಇದನ್ನು ಕೈಗೊಳ್ಳುತ್ತವೆ. ವಿದ್ಯಾರ್ಥಿಗಳ ಎಎಂಸಿಎಟಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಮೆರಿಟ್ ನೀಡಲಾಗುತ್ತದೆ. ಈ ಮೂಲಕ ಕಂಪೆನಿಗಳು ಕೌಶಲ್ಯಭರಿತ ಉತ್ತಮ ಅಭ್ಯರ್ಥಿಗಳನ್ನು ಆಯ್ದುಕೊಳ್ಳುತ್ತವೆ. ದೇಶದ ಸಾವಿರಾರು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದ್ದು, ಅವುಗಳಲ್ಲಿ ಕೇವಲ 97 ಶಿಕ್ಷಣ ಸಂಸ್ಥೆಗಳಿಗೆ ಈ ಪುರಸ್ಕಾರ ಪುರಸ್ಕೃತವಾಗಿದ್ದು, ಅವುಗಳಲ್ಲಿ ಆಳ್ವಾಸ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟತಟ್ಟು ಗ್ರಾಮ ಪಂಚಾಯತ್, ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ) ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ ಸಹಯೋಗದಲ್ಲಿ ನಡೆಯುವ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಜನಪ್ರತಿನಿಧಿಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಹೊಳಪು-2022 (ಜನಾಧಿಕಾರದ ಸಂಚಲನ) ಕಾರ್ಯಕ್ರಮದ ಲಾಂಛನ ಅನಾವರಣವನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಉಪಾಧ್ಯಕ್ಷರಾದ ಕಿರಣ್ ಕೊಡ್ಗಿ ಅವರು ಅನಾವರಣಗೊಳಿಸಿದರು. ಕಾರ್ಯಕ್ರಮದ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಕಿರಣ್ ಕೊಡ್ಗಿಯವರು ಜನಪ್ರತಿನಿಧಿಗಳು ದಿನ ನಿತ್ಯ ರಾಜಕೀಯ-ಸರಕಾರಿ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಒತ್ತಾಡದಿಂದ ಇರುತ್ತಾರೆ ಅವರು ಸಂಭ್ರಮದಿಂದ ಭಾಗವಹಿಸಲು ಇದೊಂದು ವೇದಿಕೆ, ಇಂತಹ ಕ್ರೀಡಾ ಕೂಟಗಳು ಪಂಚಾಯತ್ರಾಜ್ ವ್ಯವಸ್ಥೆಯ ವಿಕೇಂದ್ರಿಕರಣಕ್ಕೆ ಒಂದು ಹೆಜ್ಜೆಯಾಗಲಿದೆ ಎಂದರು. ಕಾರಂತ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್ ಮಾತನಾಡಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇನ್ನಷ್ಟೂ ಗಟ್ಟಿಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದು ಪಕ್ಷ ಭೇದ ಮರೆತು ಉಡುಪಿ-ದಕ್ಷಿಣ ಕನ್ನಡದ 6000 ಕ್ಕೂ ಮಿಕ್ಕಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರ ಅವರು ವಹಿಸಿ ಕನ್ನಡ ಅಭಿಮಾನದ ಬಗ್ಗೆ ಮಹತ್ವ ಸಾರುವ ಸಂದೇಶವನ್ನು ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜನತಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಂದಿ ಇವರು ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ರಾಜ್ಯೋತ್ಸವದ ಶುಭ ಸಂದೇಶವನ್ನು ನೀಡಿದರು. ಕಾಲೇಜಿನ ಕನ್ನಡ ಉಪನ್ಯಾಸಕರಾದ ಉದಯ್ ನಾಯ್ಕ್ ಅವರು ಕನ್ನಡ ನಾಡು – ನುಡಿ – ಸಂಸ್ಕ್ರತಿಯ ಕುರಿತು ಮಾತನಾಡಿದರು. ವಿದ್ಯಾರ್ಥಿಗಳ ಕನ್ನಡ ಗೀತಗಾಯನ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಪ್ರಾರ್ಥಿಸಿದರು, ವಿದ್ಯಾರ್ಥಿಗಳಾದ ಶ್ರೇಯಸ್ ಎಸ್ ಸ್ವಾಗತಿಸಿ, ಪ್ರತೀಕ್ಷಾ ಹಾಗೂ ಲಾವಣ್ಯ ಕಾರ್ಯಕ್ರಮ ನಿರೂಪಿಸಿ ವಿಘ್ನೇಶ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ನ.1: ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳ ವ್ಯಾಪ್ತಿಯ ಪ್ರದೇಶಗಳು ಅಭಿವೃದ್ಧಿ ಹೊಂದಿ ಜನಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಹಾಗೂ ಜಿಲ್ಲೆಯಲ್ಲಿ ಹೊಸದಾಗಿ ಕಾಪು, ಬ್ರಹ್ಮಾವರ, ಹೆಬ್ರಿ ಮತ್ತು ಬೈಂದೂರು ತಾಲೂಕುಗಳು ರಚನೆಯಾಗಿರುವ ಹಿನ್ನೆಲೆ, ನಗರಗಳ ಜನಸಂಖ್ಯೆಗೆ ಅನುಗುಣವಾಗಿ ಆಟೋರಿಕ್ಷಾಗಳನ್ನು ಹೆಚ್ಚಿಸುವುದು, ರಿಕ್ಷಾ ನಿಲುಗಡೆಗೆ ಸ್ಥಳಾವಕಾಶದ ಕೊರತೆ, ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವುದು, ರಸ್ತೆ ಅಪಘಾತಗಳನ್ನು ತಡೆಯಲು, ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯವನ್ನು ನಿಯಂತ್ರಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಅತೀ ಅವಶ್ಯವೆಂದು ಪರಿಗಣಿಸಿ, 2012 ಏಪ್ರಿಲ್ 21 ರ ಅಧಿಸೂಚನೆಯಲ್ಲಿ ಹೊರಡಿಸಿರುವ ಆದೇಶವನ್ನು ಮಾರ್ಪಾಡು ಮಾಡಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಈ ಕೆಳಗಿನಂತೆ ಆದೇಶ ಹೊರಡಿಸಿರುತ್ತಾರೆ. 2012 ಫೆಬ್ರವರಿ 1 ರಿಂದ 2022 ಜೂನ್ 30 ರ ವರೆಗೆ ಪ್ರಸ್ತುತ ಉಡುಪಿ ತಾಲೂಕಿನ ವಿಳಾಸ ಹೊಂದಿದ್ದು, ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಇವರಿಂದ ಪರವಾನಿಗೆ ಪಡೆದು ಸಂಚರಿಸುತ್ತಿರುವ ಎಲ್ಲಾ ಆಟೋರಿಕ್ಷಾಗಳು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಈ ಹಿಂದಿನ ಅಧಿಸೂಚನೆಯಲ್ಲಿ ನಿರ್ಭಂದಿಸಿದ ಸ್ಥಳಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೀಜಾಡಿ ಸರ್ಕಾರಿ ಪ್ರೌಢಶಾಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿರುವ ಸದಾನಂದ ಬೈಂದೂರು ಅವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ವಿಭಾಗದ ಅನ್ವಯಿಕ ಜಾನಪದ ನಿಕಾಯದಡಿಯಲ್ಲಿ ಪಿಎಚ್‌ಡಿ ಪದವಿ ದೊರೆತಿದೆ. ಅವರು ಮಂಡಿಸಿದ “ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ, 2009 ಮತ್ತು ಸಾಮಾಜಿಕ ನ್ಯಾಯ: ಉಡುಪಿ ಜಿಲ್ಲೆಯನ್ನು ಅನುಲಕ್ಷಿಸಿ” ಕುರಿತ ಸಂಶೋಧನಾ ಮಹಾಪ್ರಬಂಧಕ್ಕಾಗಿ ಅವರಿಗೆ ಪಿಎಚ್‌ಡಿ ದೊರೆತಿದೆ. ಸದಾನಂದ ಅವರು ರಾಜ್ಯಶಾಸ್ತ್ರ, ಇತಿಹಾಸ, ಕನ್ನಡ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಮೈಸೂರು ಹಾಗೂ ಧಾರವಾಡ ವಿಶ್ವವಿದ್ಯಾನಿಲಯಗಳಲ್ಲಿ ಪಡೆದಿದ್ದಾರೆ. ನೀನಾಸಮ್ ರಂಗಶಿಕ್ಷಣ ಡಿಪ್ಲೊಮಾವನ್ನು ಪಡೆದಿದ್ದಾರೆ. 17 ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, 10 ವರ್ಷ ಪ್ರೌಢಶಾಲಾ ಶಿಕ್ಷಕರಾಗಿ ಹಾಗೂ 5 ವರ್ಷ ಕುಂದಾಪುರ ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರು ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಎಂ ದಿನೇಶ ಹೆಗ್ಡೆ ಇವರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.31: ತಾಲೂಕಿನ ಜಾಲಾಡಿ ಸಮೀಪದ ಎನ್.ಹೆಚ್- 66ರಲ್ಲಿ ಕಾರು ಹಾಗೂ ಬೈಕ್ ನಡುವೆ ಸೋಮವಾರ ಅಪಘಾತ ಸಂಭವಿಸಿದೆ. ಉದ್ಯಮಿ, ಸಮಾಜ ಸೇವಕ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ, ಬೈಕ್ ಸವಾರನಿಗೆ ಗಾಯಗಳಾಗಿದೆ. ಕುಂದಾಪುರ ಕಡೆಯಿಂದ ಬರುತ್ತಿದ್ದ ಕಾರಿಗೆ ಜಾಲಾಡಿ ಸಮೀಪ ವಿರುದ್ದ ದಿಕ್ಕಿನಿಂದ ಏಕಾಏಕಿ ಬಂದ ಬೈಕ್ ಢಿಕ್ಕಿ ಹೊಡೆದಿದೆ. ಬೈಕ್ ಸವಾರನ ಮುಖಭಾಗಕ್ಕೆ ಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದ ತೀವ್ರತೆಗೆ ಕಾರಿನ ಏರ್ ಬಲೂನ್ಸ್ ತೆರೆದುಕೊಂಡಿತ್ತು. ಕಾರಿನಲ್ಲಿದ್ದ ಕೃಷ್ಣಮೂರ್ತಿ ಮಂಜ, ಅವರ ಪತ್ನಿ ಮತ್ತು ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಾಸಲಾಗಿದೆ. ಕೃಷ್ಣಮೂರ್ತಿ ಮಂಜ ಅವರು ಕೋಟೇಶ್ವರ ದೇವಸ್ಥಾನಕ್ಕೆ ತೆರಳಿ ಮನೆಗೆ ವಾಪಾಸಾಗುತ್ತಿದ್ದರು. ಅವರಿಗೆ ನಿನ್ನೆಯಷ್ಟೇ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿತ್ತು.

Read More